ಹೋಗಲು ಬಿಡಲೇ.

ಕಾವ್ಯ ಸಂಗಾತಿ

ಹೋಗಲು ಬಿಡಲೇ.

ವಿಜಯಲಕ್ಷ್ಮಿ ಪುಟ್ಟಿ

ನಮ್ಮಿಬ್ಬರ ನಡುವೆ ಒಂದು ಚಿಕ್ಕ ಕನಸು ಸುಂದರ ಕನಸು ನಮ್ಮಿಬ್ಬರನ್ನು ಬೆಸೆದ ಕನಸು
ಹೋಗಲು ಬಿಡಲೇ ಅದನ್ನು

ಜೊತೆಯಾಗಿ ಕಂಡ ಕನಸು ಇಬ್ಬರು ಕೂಡಿ ಹೆಣೆದ ಕನಸು ಜತನದಿಂದ ಕಾಪಿಟ್ಟುಕೊಂಡ ಕನಸು ಮನಸ್ಸು-ಮನಸ್ಸುಗಳ ಬೆಸೆದ ಕನಸ ಹೋಗಲು ಬಿಡಲೇ ಅದನ್ನ..

ಬಹಳ ದಿನಗಳ ಕನಸು ತುಂಬಾ ದುಬಾರಿ ಕನಸು ಮನಸ್ಸನ್ನು ಸೂರೆಗೊಂಡ ಕನಸು ಮನಸ್ಸಿನಾಳಕ್ಕೆ ಇಳಿದು ಬೇರುಬಿಟ್ಟ ಕನಸು ಹೋಗಲು ಬಿಡಲೆ ಅದನ್ನು..

ಸಾವಿರಾರು ಪ್ರಶ್ನೆಗಳ ಹೊತ್ತ ಕನಸು ನಿನ್ನದು ನೂರಾರು ಉತ್ತರಗಳ ಕೊಡದ ಮನಸು ನನದು
ಕೆಲವೊಮ್ಮೆ ನಾನು ನೂರು ಪ್ರಶ್ನೆ ಅದಕ್ಕೆ ಉತ್ತರ ನೀನೊಂದೇ…


Leave a Reply

Back To Top