ಹೊಕ್ಕಳ ಬಳ್ಳಿ

ಕಾವ್ಯ ಸಂಗಾತಿ

ಹೊಕ್ಕಳ ಬಳ್ಳಿ

ಮಾಜಾನ್ ಮಸ್ಕಿ

ಉಸಿರು ನಿಂತರು ಮನ ತವಕಿಸುತ್ತಿದೆ
ಮಮತೆಯ ವಾತ್ಸಲ್ಯ ಬಳಲಿ
ನಗು -ಅಳುವಿನ ಸಂಕೋಲೆ ಬಿಡದ
ಮೌನ ಪ್ರಾರ್ಥನೆಯ ತಾಯಿ

ಹೊಟ್ಟೆ ಒದ್ದು ಕರುಳ ಕತ್ತರಿಸಿ ಬಂದ
ರಕ್ತ -ಮಾಂಸ ದಾನದ ಬಸಿರ ಉಸಿರ ಜೀವ
ನೋವ ಮರೆತು ಹಗಲಿರುಳು ಸಲುಹಿ
ಕುಡಿಯ ಶ್ರೇಯಸ್ಸಿನ ಉಸಿರು ಅರಳಿಸಿ

ಹೊಕ್ಕಳ ಬಳ್ಳಿ ಹಬ್ಬಿರಲು ಮರೆಯುತ್ತಿದೆ
ಬಾಂಧವ್ಯ ಮಮತೆಯ ಕತ್ತರಿಸಿ
ತವಕಿಸುತ್ತಿದೆ ಅಣು ಪ್ರೀತಿಗೆ ತಾಯಿಯ ಹೃದಯ
ಕುಡಿಯು ತೆರೆಯುತ್ತಿದೆ ವೃದ್ಧಾಶ್ರಮದ ಬಾಗಿಲು


Leave a Reply

Back To Top