ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಲಭದ ಮಾತಲ್ಲ

Wind-of-Love by areemus on deviantART | Digital art fantasy, Fantasy  pictures, Backdrops backgrounds

ನಿನ್ನ ಮರೆಯುವುದು
ಕಷ್ಟವೆಂದು ಗೊತ್ತಿತ್ತು
ಆದರೆ ನೀನಿಲ್ಲದ ಕ್ಷಣಗಳಲ್ಲಿ
ಬದುಕಿ ಗೊತ್ತಿರಲಿಲ್ಲ

ಪ್ರತೀ ಹೆಜ್ಜೆಗಳಿಗೆ
ನೆರಳಾಗಿದ್ದ ನೀನು
ಮರೆಯಾದೆ ಹೇಗೆ
ಮರೆತು ನನ್ನ

ನನ್ನ ಕಾಲುಗಳಿಗಿಂದು
ಕೆಸರಿನಲ್ಲಿ ಹೂತುಹೋದ ಅನುಭವ
ಉಸಿರಿದ್ದೂ ಬಡಿಯದೆ ನಿಂತ
ಹೃದಯದ ಭಾವ

ಬಡಿವ ನನ್ನ ಕಣ್ರೆಪ್ಪೆಯನ್ನೂ
ಮಾತನಾಡಿಸುತ್ತಿದ್ದ ನಿನ್ನ ಕಣ್ಸನ್ನೆಗಳು
ಬದುಕಿನ ದಾರಿಯುದ್ದಕ್ಕೂ
ಬೆಂಗಾವಲಿಗಿದ್ದ ನಿನ್ನುಸಿರು

ಇಂದಿಗೂ ಅಂದಿನಂತೆಯೇ ಇವೆ
ನೀನಿಲ್ಲವೆಂಬ ನೋವ ಮರೆತು
ನಿನ್ನ ನೆನಪುಗಳ ಗುಂಗಲ್ಲಿ
ನಗುವಾಗು ಎನ್ನುತ್ತಿವೆ

ನಿನ್ನ ಮರೆಯುವುದು
ಸುಲಭದ ಮಾತಲ್ಲ
ನೀ ಬಿಟ್ಟು ಹೋದ
ನೆನಪುಗಳೊಡನೆ ಬದುಕಿದಷ್ಟು


ಒಲವು

About The Author

1 thought on “ಸುಲಭದ ಮಾತಲ್ಲ”

Leave a Reply

You cannot copy content of this page

Scroll to Top