ಕಾವ್ಯ ಸಂಗಾತಿ
ಕಿಷ್ಕಿಂದ ಪ್ರಭೆ
ಡಾ.ಶಿವಕುಮಾರ್ ಮಾಲಿಪಾಟೀಲ
ಏಳು ಬೆಟ್ಟಗಳ ಮೇಲೆ ಉದಯಿಸಲು ಕಾತರದಿ ಕಾಯುವ ನೇಸರ
ಬೆಳದಿಂಗಳು ಸಾಲು ಬೆಟ್ಟಗಳ ಮೇಲೆ
ಬೀಳದಿದ್ದರೆ ಚಂದ್ರನಿಗೂ ಬೇಸರ
ಜುಳು ಜುಳು ಎಂದು ತುಂಗಭದ್ರೆ ವೈಯಾರದಿ ಸಾಗುವಳು ಕಲ್ಲು ಬಂಡೆಗಳ ನಡುವೆ ನುಗ್ಗಿ
ಆ ವರುಣನಿಗೂ ಹೆಮ್ಮೆ ಗುಡಿ ಗೋಪುರ ಅಭಿಷೇಕಗೈದೆನೆಂದು ಹನಿಗಳ ಉಗ್ಗಿ
ಕಾಮನಬಿಲ್ಲಿಗೂ ಎಲ್ಲಿಲ್ಲದ ಖುಷಿ
ಸುಂದರ ಬೆಟ್ಟ ಹಸಿರು ವನವನ್ನು
ಚುಂಬಿಸಿವುದು ಬಗ್ಗಿ
ಆಗಾಗ ಸೂಂಯಂದು ಸೂಳಿದು
ಗೋಪುರ ಮೇಲಿನ ದೂಳು ತೆಗೆದೆಯುವುದು ವಾಯು ಖುಷಿಯಿಂದ ಹಿಗ್ಗಿ
ಪಂಚಭೂತಗಳಿಗೂ ಗೊತ್ತು
ಸ್ವರ್ಗ ಇದೇ ಎಂದು …
ನಾವು ಹಾಳು ಮಾಡುತ್ತಾ
ಹುಡುಕುತ್ತಿದ್ದೆವೆ ಸ್ವರ್ಗ ಮೇಲಿದೆ ಎಂದು. ...
ಅದ್ಭುತವಾದ ಕವಿತೆ ಸರ್. ನಮ್ಮ ಶಾಲೆಗಳ ಪಠ್ಯಪುಸ್ತಕದಲ್ಲಿ ಇದನ್ನು ಸೇರಿಸಬೇಕು.
Dr ಶಿವಕುಮಾರ್. ಅವರ ಕವಿ.ಹೃದಯ.ಮೋಡ.ಕಾಂಡ.ನವಿಲಂತೆ. ನಿಸರ್ಗ ಕಂಡು ಕವನ ಉದ್ಭವಿಸಿದೆ ಸೊಗಸಾದ ಕಾವ್ಯ
Dr. ಶಿವಕುಮಾರ್ ಮಲಿಪಾಟೀಲರ ಕವನ ತುಂಬಾ ಚನ್ನಾಗಿ ಮೂಡಿಬಂದಿದೆ.
ಎನ್ ಕವಿತೆ ಡಾಕ್ಟರ್ suuuuupppperb