ಕಾವ್ಯ ಸಂಗಾತಿ
ಇನಿಯನ ಕನಸು
ಹೇಮಲತಾ. ಹಡಪದ
ನೀ ನನ್ನೆದೆಯಂಗಳಕೆ ಕಾಲಿಟ್ಟಾಗ
ವಸಂತ ಋತುವಿನ ಕೋಗಿಲೆಯ ಸವಿಗಾನದ
ಇಂಪಿನ ಕಂಪು ನನ್ನೆದೆ ತುಂಬಾ ಹರಡಿತ್ತು
ಬಾಗಿಲಿನ ಆಚೆಗಿನ ಕನಸಿನ ರಂಗೋಲಿಯೊಂದು
ನಿನ್ನ ಆಧರದಿ ಸ್ವಾಗತಿಸುತಿತ್ತು
ಮುಂಜಾನೆಯ ಮುಸುಕಿನ
ಇಬ್ಬನಿಯ ಹನಿಯೊಂದು
ನಿನ್ನ ಕೆನ್ನೆಗೆ ಮುತ್ತಿಕ್ಕಿದಾಗ
ನಂಗೆ ಒಂಚೂರು ಕಸಿವಿಸಿಯಾಗಿತ್ತು
ಮಂಜಿನ ಹನಿಯ ಮೇಲೊಂದಿಷ್ಟು
ತುಸು ಕೋಪ ಬಂದಿತ್ತು
ಅರಳಿ ನಿಂತ ಗುಲಾಬಿ ಹೂವೊಂದು
ನಿನ್ನ ಮೊಗವ ನೋಡಲು ಕಾತರದಿ ಕಾಯುತಿತ್ತು
ಅದರಲ್ಲಿದ್ದ ಸಣ್ಣ ಮುಳ್ಳೂoದು
ನಿನ್ನ ಕೈ ತಾಕಿದಾಗ
ನನ್ನೆದೆಗೆ ಚೂರಿ ಹಾಕಿದಂತಾಗಿತ್ತು
ಗುಲಾಬಿಯ ಮೇಲೊಂದಿಷ್ಟು
ಬೇಸರವು ಹೆಚ್ಚಾಗಿತ್ತು
ಕತ್ತಲೆಯ ರಾತ್ರಿಗೆ ತುಸು ತಂಗಾಳಿಯೊಂದಿಗೆ
ಬೆಳದಿಂಗಳ ಬೆಳಕಿನ ಜೊತೆ
ನಗು ಮೊಗವ ಹೊತ್ತು ತಂದ
ಚಂದ್ರನ ಮೇಲ್ಲೊಂದಿಷ್ಟು ಪ್ರೀತಿಯಾಗಿತ್ತು
ಪ್ರೀತಿಯ ಗುಂಗಲ್ಲಿ ಚಂದ್ರನ ನಗೆಯ ಹೋನಲಿನಲಿ
ರಾತ್ರಿ ಕಳೆದು ಬೆಳಗಾಗಿದ್ದು ನನಗೆ ಅರಿವಾಗದಾಗಿತ್ತು
ಸೂರ್ಯನ ಬಿಸಿ ಕಿರಣ ಒಂದು
ಮೈಗೆ ತಾಕಿ ಕನಸಿನ ಲೋಕದಿಂದ
ಸ್ಥಿರ ರೋಪಕ್ಕೆ ತಂದಿತ್ತು
ಆಗ ನನ್ನ ಮೊಗದಲ್ಲಿ ಒಂಚೂರು
ನಗೆಯ ಸಂಚಿನ ಮಿಂಚು ಕಂಡಿತ್ತು