ಹೀಗೇಕೆ…?

ಹೀಗೇಕೆ…?

ನನಗೆ ಅನುಮಾನ
ಬಂದ ದಿನದಿಂದ…

ನೋಡದೇ ಇರಲಾಗದು
ದಿನಕ್ಕೊಮ್ಮೆಯಾದರೂ
ಎನ್ನುತ್ತಿದ್ದವಳು
ಎದುರು ಸಿಕ್ಕರೂ ನೀನು
ನಗುವುದನ್ನೇ ಬಿಟ್ಟೆ

ಬಸ್ಸಲಿ ಸೀಟು ಖಾಲಿ
ಇರದಿದ್ದರೂ ಖಾಲಿ ಇದೆಯೆ?
ಕೇಳುತ್ತಿದ್ದವಳು
ಪಕ್ಕದಲಿ
ಈಗ ಸೀಟು ಖಾಲಿ
ಇದ್ದರೂ ಕೇಳುವುದನ್ನೇ ಬಿಟ್ಟೆ

ಹೊಟ್ಟೆ ಹಸಿವಿರದಿದ್ದರೂ
ಟಿಫಿನ್ ಡಬ್ಬಕ್ಕೆ
ಕೈ ಹಾಕಿ ತಿಂದು
ರುಚಿ ಬಗ್ಗೆ ಕಾಮೆಂಟ್
ಹೇಳುತ್ತಿದ್ದವಳು
ಹಸಿವಾದರೂ
ಮಿನರಲ್ ವಾಟರ್ ಕುಡಿದು
ಸುಮ್ಮನಾಗಿ ಬಿಟ್ಟೆ

ಇಷ್ಟು ದಿನ ನೀ
ಮಾಡಿದ್ದು ನಟನೆಯೋ?
ಉತ್ತರ ಹೇಳು
ಎಂದಿದ್ದಕ್ಕೆ
ಮೌನವಾಗಿ ಬಿಟ್ಟೆ


ಬಾಲಕೃಷ್ಣ ದೇವನಮನೆ,

Leave a Reply

Back To Top