ಕಾವ್ಯ ಸಂಗಾತಿ

ಮುಚ್ಚಿಡಲಾರೆ

ಮುಚ್ಚಿಡಲಾರೆ ಗೆಳತಿ
ಶಶಿಯನು ನಿನ್ನ
ಮೋಹದ ಸೆರಗಿನಲಿ
ಅವನು ಸೂರ್ಯನ
ನಿಗಿ ನಿಗಿ ಕೆಂಡವ ನುಂಗಿ
ತಂಪು ಬೆಳಕು ಚೆಲ್ಲಿದವನು
ಇಲ್ಲ ಅವನಲ್ಲಿ ಕಪ್ಪು
ಬಿದ್ದಿರಬಹುದು ನಿನ್ನ ಕಣ್ಣಲಿ
ಸಂಶಯದ ಧೂಳು
ನಗೆಯನು ಬುಟ್ಟಿಯಲಿ
ಮುಚ್ಚಿಡುವ ಗೋಳು
ಮೂಡಿ ಬರಲಿ
ಸ್ನೇಹ ಪ್ರೀತಿ ಸಂತಸ
ನೆಮ್ಮದಿ ಬಾಳು
ತಣಿಸು ನಿನ್ನ ಮನ
ಅವನ ಹಾಲು ಬೆಳದಿಂಗಳು
ತುಂಬಿರಲಿ ಬಯಕೆ ಕನಸು
ಹುಣ್ಣಿಮೆ ಕಂಗಳು
ಮಾಡಬೇಡ ವ್ಯರ್ಥ ಪ್ರಯತ್ನ
ಮುಚ್ಚಿಡಲಾರೆ ಬಚ್ಚಿಡಲಾರೆ
ಶಶಿಯನು ನಿನ್ನ

ಮೋಹದ ಸೆರಗಿನಲಿ


ಡಾ ಶಶಿಕಾಂತ ಪಟ್ಟಣ

2 thoughts on “

Leave a Reply

Back To Top