ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

Drawing Friendship Best Friends Forever Sketch PNG, Clipart, Abdomen, Arm,  Art, Art Museum, Becky G Free

ಕಣ್ಣಾಲಿಯಲ್ಲಿ ಹನಿ ಜಿನುಗುತ್ತಿದೆ ನೋಡಿ ಸುಮ್ಮನಿರಲಿ ಹೇಗೆ
ಮುಳ್ಳಿನಂತಹ ನುಡಿಗಳು ಚುಚ್ಚುತ್ತಿದೆ ನೋಡಿ ಸುಮ್ಮನಿರಲಿ ಹೇಗೆ

ಜ್ಞಾನವೋ ಅಜ್ಞಾನವೋ ತಿಳಿಯಲಾರೆವು ಪರಪಂಚದಲ್ಲಿ
ಅಹಂ ಪ್ರತಿಷ್ಠೆಯ ಹೊಗೆಯಾಡುತ್ತಿದೆ ನೋಡಿ ಸುಮ್ಮನಿರಲಿ ಹೇಗೆ

ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿಯಾಗಿ ಕಾಣುವುದು
ಅಸೂಯೆಯ ಬೆಂಕಿ ಹೊತ್ತಿ ಉರಿಯುತ್ತಿದೆ ನೋಡಿ ಸುಮ್ಮನಿರಲಿ ಹೇಗೆ

ಬಿರುಸು ಮಾತಿನಿಂದ ಸ್ನೇಹ ಬೆಸೆಯುವುದೇ ಗಾಲಿಬ್
ಮದ ಏರಿದ ಅಧಿಕಾರದಿ ಮಣಿಸುತ್ತಿದೆ ನೋಡಿ ಸುಮ್ಮನಿರಲಿ ಹೇಗೆ

ಅರಿತವರು ಅರಿಯದವರು ಎಲ್ಲಾರು ಇರುವರು ಇಲ್ಲಿ ಮಾಜಾ
ಮೌಲ್ಯಯುತಕ್ಕೆ ಸಂಶಯ ಪಡುತ್ತಿದೆ ನೋಡಿ ಸುಮ್ಮನಿರಲಿ ಹೇಗೆ


About The Author

1 thought on “”

Leave a Reply

You cannot copy content of this page

Scroll to Top