ಬೆಳಕ ನುಂಗಿದ ಮೋಡ

ಕಾವ್ಯ ಸಂಗಾತಿ

ಬೆಳಕ ನುಂಗಿದ ಮೋಡ

ಲಕ್ಷ್ಮೀ ಕೆ.ಬಿ.

ಚೆಲುವ ಹೂವು
ಛಲದಿ ಬದುಕಲಾರದೆ
ನೆಲಕ್ಕುರುಳಿದೆ

ಮೋಡವಿಂದು
ಸೂರ್ಯನಿಗೆ ಮರೆ ನಿಂತು
ಬೆಳಕ ನುಂಗಿದೆ

ನಗುವ ಚಂದ್ರ
ನಕ್ಷತ್ರಗಳ ಮುಂದೆ
ಮಂಕಾಗಿ ನಿಂತಿದ್ದಾನೆ

ಬರಡು ನೆಲದಲ್ಲಿ
ನೆನಪುಗಳ
ಬಿತ್ತನೆಯಾಗಿದೆ

ನೀನಿಲ್ಲದ ನೋವು
ಮುಗಿಲೆತ್ತರಕ್ಕೆ ಹಾರಿ
ಚೀರಾಡುತ್ತಿದೆ

ಜೀವ ಸೋತು
ಪಾತಾಳಕ್ಕೊರಗಿ
ಮೌನವಾಗಿ ಅಳುತ್ತಿದೆ
ಒಲವೇ…


3 thoughts on “ಬೆಳಕ ನುಂಗಿದ ಮೋಡ

Leave a Reply

Back To Top