ಕಾವ್ಯ ಸಂಗಾತಿ

ಅಪಸ್ವರ

What Is Abstraction in Art - Definition and Examples | Ideelart

ಅತಿಯಾದರೆ ಅಮೃತವೂ ವಿಷವಾಗುತ್ತದೆ
ಸಕ್ಕರೆಯು ಕಹಿಯಾಗುತ್ತದೆ
ಕೋಗಿಲೆಯು ಕರ್ಕಶ ವಾಗುತ್ತದೆ
ಮಲ್ಲಿಗೆಯು ಗಡಸಾಗುತ್ತದೆ
ಸಂಪಿಗೆ ದುರ್ಗಂಧ ಬೀರುತ್ತದೆ
ಮಮತೆ ಮಂದವಾಗುತ್ತದೆ
ಮಾಧುರ್ಯ ಹೇಸಿಗೆಯಾಗುತ್ತದೆ
ಪ್ರೀತಿ ಅಸಹ್ಯವಾಗುತ್ತದೆ
ಅಲ್ಪನಿಗೆ ಐಶ್ವರ್ಯ ಬಂದರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ
ಬಡವನಿಗೆ ಹಳಸನ್ನ ಮೃಷ್ಟಾನ್ನ ವಾಗುತ್ತದೆ
ಮಿತವಾದರೆ ಎಲ್ಲವೂ ಹಿತ
ಅತಿಯಾದರೆ ಅಪಸ್ವರ


ಶಾಲಿನಿ ಕೆಮ್ಮಣ್ಣು

Leave a Reply

Back To Top