ಕಾವ್ಯ ಸಂಗಾತಿ
ಮಠದ ಬೆಕ್ಕಿಗೆ ಘಂಟೆ ಇಲ್ಲ
ಹಾರೋಹಳ್ಳಿ ರವೀಂದ್ರ
ಮಧ್ಯರಾತ್ರಿ
ಹಾಸಿಗೆಯ ಮೇಲೆ ಪಕ್ಕದಲ್ಲೆ
ಬೆಕ್ಕೊಂದು ಬಂದು ಮಲಗಿತು
ಎರಡು ಕೈ ಹಿಡಿಯಿತು
ದೇಹವ ಅದುಮಿತು
ರಾತ್ರಿಯೆಲ್ಲ ಶಬುದ ಬಾರಲೇ ಇಲ್ಲ
ಹಾಸಿಗೆಯ ಮೇಲೆ ವೀರ್ಯಸ್ಕಲನದ ರುಜುವಿತ್ತು
ಮಧ್ಯರಾತ್ರಿ
ಕಣ್ಣುಮುಚ್ಚಿ, ಕಿವಿ ಹಿಡಿದು
ಹಾಲ್ಕೊಹಾಲ್ ಕುಡಿಯುತಿತ್ತು
ರಾತ್ರಿಯೆಲ್ಲಾ ಶಬುದ ಬಾರಲೇ ಇಲ್ಲ
ಗ್ಲಾಸಿನ ಮೇಲೆ ಬೆರಳುಗಳ ರುಜುವಿತ್ತು
ಮಧ್ಯರಾತ್ರಿ
ನಾಲಿಗೆಯ ಚಪಲ
ಮಾಂಸ ತಿನ್ನುತಲಿತ್ತು
ರಾತ್ರಿಯೆಲ್ಲ ಮೂಳೆ ಕಡಿದ ಶಬುದ ಬಾರಲೇ ಇಲ್ಲ
ಕಾವಿ ಬಟ್ಟೆಯ ಮೇಲೆ ತಿಂದ ಬಾಯಿ, ಕೈ, ವರೆಸಿದ ರುಜುವಿತ್ತು
ಮಧ್ಯರಾತ್ರಿ
ಹಣದ ಪೆಟ್ಟಿಗೆಗಳು
ಓಡಿ ಬಂದವು
ತೆಗೆದು ಕೋಣೆಯಲ್ಲಿಡುತ್ತಿದ್ದರು
ರಾತ್ರಿಯೆಲ್ಲಾ ಬಾಗಿಲು ತೆಗೆದ ಶಬುದ ಬಾರಲೇ ಇಲ್ಲ
ಖಜಾನೆಯ ಕೀ ಮೇಲೆ ಹಸ್ತಾಂತತರದ ರುಜುವಿತ್ತು
ಕಾವಿಯೂ ಕಾಣಲಿಲ್ಲ
ರುಜುಗಳು ನಾಪತ್ತೆಯಾಗಿದ್ದವೂ
ನಡುರಾತ್ರಿ ಎಲ್ಲವನ್ನೂ ನುಂಗಿ ಹಾಕಿತ್ತು
ಮಹಜೂರು ಮಾಡಲು ಶಬುದವು ಇರಲಿಲ್ಲ
ಯಾಕೆಂದರೆ
ಮಠದ ಬೆಕ್ಕಿಗೆ ಘಂಟೆ ಇಲ್ಲ
………….