ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್ ಮೈಸೂರು
“ನಾನು ಎನ್ನದಿರು”

ನಾನು – ನನ್ನಿಂದ
ಎಂದೇಳದಿರು
ನೀ ಮನುಜ
ಸಾಧನೆಯ ಹಾದಿಯಲಿ
ಬಹಳಷ್ಟು ಮಂದಿ
ಇರುವುದನ್ನು ನೀ
ಎಂದಿಗೂ ಮರೆಯದಿರು
ಹಿಗ್ಗುವ ಭಾವನೆ ಬೇಕಿಲ್ಲ
ಕುಗ್ಗುವುದು ಸರಿಯಲ್ಲ
ಮಾಗಿದವರ ಮುಂದೆ
ಬಾಗಿ – ಬಾಗಿ ನಡೆಯುವುದನ್ನು
ನೀ ಕಲಿಯಬೇಕಿದೆ ಮನುಜ
ಆ ಸೂರ್ಯ ನನ್ನಿಂದಲೇ ಬೆಳಕೆಂದು
ಚಂದಿರ ನಾನೇ ಅತಿ ಸುಂದರನೆಂದು
ಗಾಳಿ ಎಲ್ಲರಿಗೂ ನಾನೇ ಉಸಿರೆಂದು
ಎಂದಾದರೂ ನುಡಿದಿಹರೆ ಈ ಜಗತ್ತಿಗೆ?
ಮಿತಿಯಿಲ್ಲದ ಹಣಗಳಿಕೆಯಲಿ
ಹೊಂದಾಣಿಕೆಯಿಲ್ಲದ ಬದುಕಿನಲಿ
ಪ್ರೀತಿ ಅರಳೀತು ಹೇಗೆ?
ಜಂಬ ಬೇಡವೇ ಬೇಡ ನಿನಗೆ
ಮರೆಯದಿರು ಸಾವೆಂಬುದು
ನಿನಗೂ ಕೂಡ ನಿಶ್ಚಿತವಾಗಿದೆ
ಹುಟ್ಟು – ಸಾವು ವಿಧಿ ಬರಹ
ಕಷ್ಟ – ಸುಖ ಹಣೆಬರಹ
ಬದುಕು ಅನಿವಾರ್ಯ
ಅರಿತು ನಡೆದರೆ ಈ ನೀತಿ
ಜಗದಿ ಬಾಳುವೆ ನೀ
ಬಯಸಿದ ರೀತಿ
ಎಂ. ಬಿ. ಸಂತೋಷ್

ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಅಭಿನಂದನೆಗಳು