ಅನುವಾದಿತ ಅಬಾಬಿಗಳು

ಅನುವಾದಿತ ಅಬಾಬಿಗಳು

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)

ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

How I'm Working Through My Beginnings as a Creative Professional - Goalcast

೧೬)
ಮೊನ್ನೆ ರಥ ಇಂದು ವಿಗ್ರಹ
ದಿನಕ್ಕೊಂದು ಹೊಸ ಯೋಜನೆ
ದೇಶದಲ್ಲಿ ರಾಜಕೀಯ ಆಧ್ಯಾತ್ಮಮಯ
ಹಕೀಮಾ
ಪ್ರಮಾಣಗಳಿಂದ ಪ್ರಸಿದ್ಧರಾಗುವ ಯೋಚನೆ.

೧೭)
ದೇವಾಲಯವೋ? ವಿದ್ಯಾಲಯವೋ?
ಎಲ್ಲಾದರೂ ಆಣೆಗಳು ಮಾಡುವರು
ಅಸಲು ಆಣೆ ಅಂದರೇನು ಗೊತ್ತಾ?
ಹಕೀಮಾ
ದೈವವೆಂದರೆ ಇವರಿಗೆ ಆಟದ ವಸ್ತುವೇನು?

೧೮)
ಎಲ್ಲರಿಗೂ ತಿಳಿದ ರಹಸ್ಯವೇ
ಪಕ್ಷಗಳ ದೌರ್ಭಾಗ್ಯದ ವಾಗ್ದಾನಗಳು
ಇಂದಿನ ರೌಡಿಗಳು ನಾಳೆಯ ನಾಯಕರೆ?
ಹಕೀಮಾ
ದೇಶವೇ ಕಬ್ಜಾ ಆಗುತ್ತಿದೆಯೇನೋ..!

೧೯)
ಹೋರಾಟಗಳನ್ನು ಹತ್ತಿಕ್ಕುವುದೇಗೆ?
ಹಾದಿ ತಪ್ಪಿಸಿದರೆ ಸಾಕಲ್ಲವೆ?
ಹೊತ್ತಿಸು ಕೋಮುವಾದದ ಕಿಡಿ!
ಹಕೀಮಾ
ಮೀಡಿಯಾ ಅಂದರೆ ಇದೇನಾ..?

೨೦)
ಪ್ರತಿಯೊಬ್ಬನೂ ಪ್ರಮಾಣ ಮಾಡುತ್ತಿದ್ದಾನೆ
ಇದು ಏನಾದರೂ ಮಕ್ಕಳ ಆಟವೆ?
ಪ್ರಮಾಣ ಮಾಡುವುದು ಜಾರಿಕೊಳ್ಳುವುದು!
ಹಕೀಮಾ
ಜನರನ್ನು ಹುಚ್ಚರನ್ನಾಗಿಸುವುದೆಂದರೆ ಇದೇನಾ?

೨೧)
ಪುಣ್ಯಕ್ಕಾಗಿ ದೇವಾಲಯಗಳು
ಪಾಪಿಗಳಿಗಾಗಿ ರಾಜಕೀಯಗಳು
ಇಂದು ದೇವಾಲಯವೇ ರಾಜಕೀಯವೆ?
ಹಕೀಮಾ
ಮತೋನ್ಮಾದಿಗಳ ನೀಚತನವೇ ಕಾರಣವಾ?

೨೨)
ದೇಶದಲ್ಲಿ ದೌರ್ಜನ್ಯಗಳ ಪರ್ವ
ಬಲಹೀನರ ಮೇಲೆ ತೋರುತಿಹರು ಗರ್ವ
ಧನವಂತನೇ ಇಂದಿನ ನಾಯಕನಾ?
ಹಕೀಮಾ
ಭವಿಷ್ಯದಲ್ಲಿ ಬದುಕು ಗುಲಾಮಗಿರಿಯೇನಾ?

೨೩)
ಸುಳ್ಳು ಪ್ರಚಾರಗಳು ಮಾಡುವರು
ಒಡ ಹುಟ್ಟಿದವರನ್ನು ಅವಮಾನಿಸುವರು
ಅಧಿಕಾರವಿದ್ದರೆ ಅಹಂಕಾರವೆ?
ಹಕೀಮಾ
ಬೇಗನೇ ತಿಳಿದುಹೋಗುತ್ತದೆ ಸುಮ!

೨೪)
ಓ ಮತ ವಿದ್ವೇಷಿ
ಇನ್ನಾದರೂ ಬದಲಾಗು ಋಷಿ
ಮಾನವತ್ವವೇ ಅಲಂಕಾರವು
ಹಕೀಮಾ
ಒಳ್ಳೆಯತನವೆ ಒಡವೆ.

೨೫)
ನುಡಿಯುವುದು ನಿಜವಾಗಿ
ಮಾತುಗಳು ಹಿತವಾಗಿ
ಮನುಷ್ಯರನ್ನು ಬೆಸೆದಾಗ
ಹಕೀಮಾ
ಸಮಾಜದಲ್ಲಿ ಅರಳುವುದು ಅನುರಾಗ.

೨೬)
ನೈತಿಕ ಹೊಣೆ ಎಲ್ಲರದ್ದು
ಸಾಮಾಜಿಕ ರೋಗ ಕೆಲವರದ್ದು
ಮತಗಳ ಹೆಸರಿನಲ್ಲಿ ಮೋಸಗಳು!
ಹಕೀಮಾ
ಬಲಿಯಾದರು ಅಮಾಯಕರು.

೨೭)
ಪ್ರಶ್ನಿಸಿದರೆ ನಿಂದನೆಗಳು ಮಾಡುವರು
ಹಕ್ಕುಗಳನ್ನು ಕೇಳಿದರೆ ದೂಡುವರು
ಹೋರಾಟಕ್ಕಿಳಿದರೆ ಜೈಲಿಗೆ ನೂಕುವರು
ಹಕೀಮಾ
ಸ್ವಾತಂತ್ರ್ಯ ಅಂದರೆ ಇದೇನಾ?

೨೮)
ದೇಶವೆಂದರೆ ಮನುಷ್ಯರೇ ಅಲ್ಲವೆ?
ಅಂದರೆ ಎಲ್ಲರೂ ಸಮಾನರೇ ಅಲ್ಲವೆ?
ಇವನ್ಯಾರು ಬೇರೆ ಮಾಡುತ್ತಿದ್ದಾನಲ್ಲಾ!
ಹಕೀಮಾ
ಬಿಳಿ ಬೂಟು ನೆಕ್ಕಿದ ನಾಲಿಗೆ ಅನಿಸುತ್ತಿದೆ!

೨೯)
ವ್ಯವಸಾಯಾಧಾರಿತ ದೇಶದಲ್ಲಿ
ರೈತರಿಗೆ ಗೌರವ ಇದೇನಾ?
ಹೊಟ್ಟೆ ತುಂಬಿಸುವವರ ಹೊಟ್ಟೆ ಹೊಡೆಯುವುದೆ?
ಹಕೀಮಾ
ಈಗಲಾದರೂ ದೇಶ ಆಲೋಚಿಸಬೇಕು.

೩೦)
ರೈತರು ಹಕ್ಕುಗಳಿಗಾಗಿ ಧರಣಿ ಮಾಡುತಿಹರು
ಕಾರ್ಮಿಕರ ಕೈಗಳಲ್ಲಿ ಹೋರಾಟದ ಬಾವುಟ
ಸಣ್ಣ ಉದ್ಯೋಗಿಗಳು ಬೀದಿಪಾಲಾದರು
ಹಕೀಮಾ
ದೇಶ ಪ್ರಗತಿ ಪಥದಲ್ಲಿ ಸಾಗುತ್ತಿದೆಯೆ?

೩೧)
ಮಣ್ಣು ಹಿಚುಕುವ ಕೈಗಳಲ್ಲಿ ಬಂಡಾಯದ ಬಾವುಟ
ದೇಶದ ಭವಿಷ್ಯತ್ತಿನ ಪೀಳಿಗೆಗಿದು ಅನಿವಾರ್ಯವೇ
ನೀನಿಂದಿಗೂ ಹೋರಾಡುತ್ತಿರುವುದು ದೇಶಕ್ಕೆಂದೇ
ಹಕೀಮಾ
ನಿಸ್ವಾರ್ಥ ರೈತರಿಗೆ ಗೆಲುವು ನಿಶ್ಚಿತ.

೩೨)
ನೀನು ನಂಬಿದ ನಾಯಕರು ಮೋಸ ಮಾಡಿದರು
ನೀನು ಬೆಳೆಸಿದ ಬೆಳೆಯನ್ನು ಮಾರಿಬಿಟ್ಟರು
ರೈತನೇ ರಾಜನೆಂದು ಬೆನ್ನಿಗೆ ಚೂರಿ ಹಾಕಿದರು
ಹಕೀಮಾ
ಕಾರ್ಪೋರೇಟ್ ಕೈಗಳಲ್ಲಿ ದೇಶವನ್ನು ಬಂಧಿಸುವರಾ?

೩೩)
ರೈತರ ಪರವಾಗಿ ದೇಶವೇ ಇರುವಾಗ
ಪ್ರತಿ ಪ್ರಜೆಯೂ ಯೋಧನಾಗಬೇಕು
ಅನ್ನದಾತನ ಬೆನ್ನಲುಬು ಆಗಬೇಕು
ಹಕೀಮಾ
ದೇಶದ ಸಂಸ್ಕೃತಿ ಕೃಷಿಕರ ಕೈಯಲ್ಲಿದೆ

೩೪)
ಹೋರಾಡುತಿಹುದು ರೈತ ಕೂಟ
ನಡುಗುತಿಹುದು ಕಾರ್ಪೊರೇಟ್ ಪೀಠ
ರಾಜಕೀಯ ಪಕ್ಷಗಳ ಚದುರಂಗ
ಹಕೀಮಾ
ರೈತರ ಮೇಲಿನ ದೌರ್ಜನ್ಯಗಳ ಪರ್ವವ ನೋಡು.

೩೫)
ಹೋರಾಟದ ಹಾದಿ ಹಿಡಿದಿಹರು ರೈತರು
ಊರು-ಕೇರಿಗಳಲ್ಲಿ ಮೊಳಗುತಿಹುದು ಕಹಳೆ
ಇಳಿದು ಬರುವುದೆ ಇನ್ನಾದರೂ ಸರಕಾರ?
ಹಕೀಮಾ
ಆಗಬೇಕಾದ ವ್ಯವಹಾರ ಆಗಿಹೋಯಿತೆ?


One thought on “ಅನುವಾದಿತ ಅಬಾಬಿಗಳು

Leave a Reply

Back To Top