ಬುದ್ಧ ಮತ್ತು ಗಾಂಧಿ

ಕಾವ್ಯ ಸಂಗಾತಿ

ಬುದ್ಧ ಮತ್ತು ಗಾಂಧಿ

ಬಿ.ಶ್ರೀನಿವಾಸ

ಒಬ್ಬ
ನಸುನಕ್ಕರೆ
ಮತ್ತೊಬ್ಬ
ಕೆಲಸದಲಿ ಸದಾ ಪ್ರಬುದ್ಧ

ಹೀಗಿದ್ದವರು ಏಕಾಏಕಿ ಶರಣು
ಅಗಾಧ ಮೌನಕೆ

ಒತ್ತಾಯಿಸಿದಿರೋ…
ಮುಸಿಮುಸಿ ಅಳುವರು

ಒಬ್ಬ
ಬೀದಿಯಲ್ಲಿ ಚೆಲ್ಲಿದ್ದನ್ನು ಕಂಡರೆ
ಗೋಡೆಗೂ ಅಂಟಿದ್ದನ್ನು ಕಂಡ
ಮತ್ತೊಬ್ಬ

ನಡೆದೇ ನಡೆದರು ಬಹುದೂರ
ಇಬ್ಬರೂ ಗಡಿಗಳಾಚೆ

ರಿಪೇರಿಗೆ ಬಂದ ಜೋಡು ಗಾಂಧಿಯ ಕೈಯ್ಯಲ್ಲಿ,
ಜೋಡುಗಳಲ್ಲೂ ಪಿಳಿಪಿಳಿ ಬಿಡುವ ಬುದ್ಧನ ಜೋಡಿ ಕಣ್ಣು!

 *

ಯಾರು ಹೇಳಿದರೋ
ಮೀಡಿಯಾ ಮೂಢರಿಗೆ
ಗಡಿಗಳಾಚೆ ಮನುಷ್ಯರೇ ಇಲ್ಲವೆಂದು
ಅರಚುತ್ತಲೇ ಇದ್ದಾರೆ
ಗೋಡೆಗಳ ಕಟ್ಟಿ.


One thought on “ಬುದ್ಧ ಮತ್ತು ಗಾಂಧಿ

Leave a Reply

Back To Top