ಆಶಾವಾದ ಹೊತ್ತು ಹರಿವ ‘ಜೀವಧಾರೆ’!!

ಪುಸ್ತಕ ಸಂಗಾತಿ

 ಆಶಾವಾದ ಹೊತ್ತು ಹರಿವ ‘ಜೀವಧಾರೆ’!

ಡಾ. ಜಿ. ಸುಧಾ ವೃತ್ತಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರು. ‘ಬದುಕು’ ಎಂಬ ಸಾಮಾಜಿಕ-ಶೈಕ್ಷಣಿಕ-ಸಾಂಸ್ಕೃತಿಕ ವೇದಿಕೆ ಹಾಗೂ ‘ಅಭಯ’ ಮಹಿಳಾ ವೇದಿಕೆಯೊಡನೆ ನಿಕಟ ಬಾಂಧವ್ಯ ಹೊಂದಿರುವ ಸಮಾಜಮುಖಿ ವ್ಯಕ್ತಿತ್ವದವರು. ಪ್ರವೃತ್ತಿಯಾಗಿ ಬರಹವನ್ನು ಅಪ್ಪಿಕೊಂಡಿರುವ ಬಹುಮುಖಿ ಪ್ರತಿಭೆ; ಚೈತನ್ಯದ ಚಿಲುಮೆ..

  ‘ಜೀವಧಾರೆ’ ಲೇಖಕರ ಕಥಾ ಸಂಕಲನವಾಗಿದ್ದು, ಇಪ್ಪತ್ನಾಲ್ಕು ಕತೆಗಳನ್ನು ಒಳಗೊಂಡಿದೆ. ಬಹುಶಃ ಈ ಕೃತಿಯು ಲೇಖಕರ ಪ್ರಥಮ ಪ್ರಕಟಿತ ಕಥಾಗುಚ್ಛವಾಗಿರಬಹುದು. ಆತ್ಮ ವಿಶ್ವಾಸದ ಪ್ರತೀಕದಂತಿರುವ ಸುಧಾ ಅವರು ಕೃತಿಗೆ ಬೇರೆ ಲೇಖಕರ ಅಥವಾ ಖ್ಯಾತನಾಮರ ಮುನ್ನುಡಿಯ ಭಾರ ಹೇರದೆ, ತಾವೇಕೆ ಕತೆ ಬರೆದುದು? ಎಂಬ ಪ್ರಶ್ನೆಗೆ ತಮ್ಮದೇ ಮಾತುಗಳನ್ನು ಮುನ್ನುಡಿಯಾಗಿ ನೀಡಿದ್ದಾರೆ. 

   ಒಟ್ಟು ಇಪ್ಪತ್ನಾಲ್ಕು ಸಂಖ್ಯೆಯಲ್ಲಿರುವ ಕತೆಗಳಲ್ಲಿ ಎಲ್ಲವೂ ಕಥಾ ಮಾದರಿಯವು ಎಂದು ಹೇಳಲು ಬರುವುದಿಲ್ಲ. ಕೆಲವು ಕತೆಗಳು ಯಾವುದೋ ಪ್ರಸಂಗದ ನಿರೂಪಣೆಯಂತೆಯೂ, ಕೆಲವು, ಸಮಾಜದ ಮೇಲಿನ ಟೀಕೆಟಿಪ್ಪಣಿಯಂತೆಯೂ ಕಾಣುತ್ತವೆ. ಪಾತ್ರ ವೈವಿಧ್ಯ ಅಡಕಗೊಳಿಸದೆ, ನಾಕಾರು ಪಾತ್ರಗಳ ಮೂಲಕವೇ ಚುಟುಕು ಚುರುಕು ಸಂಭಾಷಣೆಗಳನ್ನು ನೀಡುತ್ತಾ ಕತೆಯನ್ನು ಮೂಡಿಸುತ್ತಾರೆ. ಎಲ್ಲವೂ ಮಹಿಳಾ ಪ್ರಧಾನವೇ ಆಗಿರುವುದು ಮತ್ತೊಂದು ವಿಶೇಷ. 

    ಕತೆಗಾರ್ತಿ ತಮ್ಮ ಕತೆಗೆ ಆರಿಸಿಕೊಂಡ ವಿಷಯವನ್ನು ಸೂತ್ರಬದ್ಧವಾಗಿ ಕಟ್ಟಿಕೊಡುತ್ತಾರೆ. ಆ ಮೂಲಕ ನಮ್ಮ ಸಮಾಜ, ಸ್ತ್ರೀಯರ ವಿಚಾರದಲ್ಲಿ ಇಟ್ಟುಕೊಂಡಿರುವ ತಥಾಗಥಿತ ನಿರೀಕ್ಷೆಗಳನ್ನು ಒಡೆದು ಹಾಕುತ್ತಾರೆ. ಎಲ್ಲಿಯೂ ಕೆಡುಕನ್ನು ವಿಜೃಂಭಿಸದೆ, ಎಚ್ಚರಿಕೆಯಿಂದಲೇ ಧನಾತ್ಮಕ ಅಂಶಗಳನ್ನು ತುಂಬುತ್ತಾರೆ. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ..’ ಎನ್ನುವ ಶರಣ ನುಡಿಯೊಳಗಣ ಸತ್ಯವನ್ನು ಒಪ್ಪುವಂತೆ ಕಂಡರೂ, ತಪ್ಪನ್ನು ತಿದ್ದುವುದೇ ಸೈ ಎಂಬ ನಿಲುವನ್ನು ಎಲ್ಲಾ ಕತೆಗಳಲ್ಲೂ ತಾಳುತ್ತಾರೆ. 

  ಇಲ್ಲಿನ ಯಾವ ಕತೆಗಳೂ ಕಲ್ಪನಾ ವಿಲಾಸದ ವಿಸ್ತಾರಗಳಲ್ಲ. ಬದಲಾಗಿ, ವಾಸ್ತವದ ಬದುಕಿನ ವಿವರಗಳಂತಿವೆ. ಕತೆಯ ಭಾಷೆಯು ಎಲ್ಲಿಯೂ ಓದಿನ ಓಘಕ್ಕೆ ತೊಡಕು ತರುವುದಿಲ್ಲ. ಆದರೆ ಅಲ್ಲಲ್ಲಿ ಸಾಕಷ್ಟು ಅಕ್ಷರದ ಅಚ್ಚಿನ ದೋಷಗಳಿವೆ. ಅವನ್ನು ಖಂಡಿತ ತಪ್ಪಿಸಬಹುದಾಗಿತ್ತು. ಕಥಾವಸ್ತು ವೈವಿಧ್ಯವಿಲ್ಲದ ಈ ಕೃತಿಯು ಏಕತಾನತೆಯಿಂದ ಓದುಗರಿಗೆ ಆಗಾಗ್ಗೆ ಬೇಸರವನ್ನೂ ತರಿಸಬಹುದು. ಹಾಗೆಯೇ, ಬೇಸರಗೊಂಡಿದ್ದಾಗ ಈ ಕೃತಿಯ ಯಾವುದೋ ಒಂದು ಕತೆಯನ್ನು ಓದಿ ಸಮಾಧಾನ ಮಾಡಿಕೊಳ್ಳಲೂಬಹುದು.

     ನೊಂದು ಅಪಮಾನಿತರಾಗಿ ಕುಗ್ಗಿದ ಹೆಣ್ಣುಮಕ್ಕಳು ಈ ಕಥಾ ಸಂಕಲನವನ್ನು ಆಪ್ತಸಂಗಾತಿಯ ಸಂತೈಕೆಯ ನುಡಿಗಳಂತೆ ಓದಿ ಸಮಾಧಾನ ಕಾಣಬಹುದು. ಡಾ. ಜಿ ಸುಧಾ ಅವರು ಸ್ವಲ್ಪವೇ ಪರಿಶ್ರಮ ಪಟ್ಟರೆ, ಅವರಿಂದ ಮತ್ತಷ್ಟು ಅನನ್ಯ ಕೃತಿಗಳನ್ನು ನಿರೀಕ್ಷಿಸಬಹುದು. 

*******

ವಸುಂಧರಾ ಕದಲೂರು

Leave a Reply

Back To Top