ನೆನಪುಗಳು

ಕಾವ್ಯಯಾನ

ನೆನಪುಗಳು

ಅಕ್ಷತಾ ಜಗದೀಶ

ಮರಳಿ ಬಾರದ ಕ್ಷಣಗಳು
ನೆನಪಿನ‌ ಅಲೆಗಳಾಗಿ
ಮತ್ತೆ ಮತ್ತೆ ಮನದ ಅಂಗಳದಿ
ರಂಗವಲ್ಲಿ ಮೂಡಿಸುತಿದೆ…

ನೋವು- ನಲಿವಿನ‌ ದಿನಗಳು
ನನ್ನವರೊಡನೆ ಕಳೆದ ಕ್ಷಣಗಳು
ಹುಡುಗಾಟದ ಬಾಲ್ಯವು
ಹುಡುಕಾಟದ ಯೌವನವು…

ಅಮ್ಮನ ಬೆಚ್ಚನೆಯ ಅಪ್ಪುಗೆ
ಅಪ್ಪನ ಅಕ್ಕರೆಯ ಮಾತುಗಳು
ಮರಳಿ ನೆನಪಾಗುತಿದೆ
ಅಲೆಗಳಾಗಿ ಹೃದಯಕೆ ಅಪ್ಪಳಿಸುತಿದೆ…

ಮನದ ಪುಟ ತಿರುವಿದಾಗ
ನೆನಪಿನ ನೆನಪುಗಳೆಲ್ಲಾ
ಕಣ್ಣೀರ ಹನಿಗಳಾಗಿ‌ ಹರಿದು
ಮರಳಿ ನೆನಪಿನ ಪುಟಸೇರಿ ಅಮರವಾಗಿದೆ……..


Leave a Reply

Back To Top