ಚಂದ್ರು ಪಿ ಹಾಸನ್ ಕವಿತೆ-ಹಸಿರಿನ ಮಾತೆ

ನರನಾಡಿಯಲ್ಲಿ ತಂಪು
 ಸೊಂಪಾಗಿ ಹೊರ ಸೂಸಿದೆ
ಹಸಿರೆಲ್ಲಡೆ ಪಸರಿಸಿ
ಆಕಾರ ಸಾಕಾರವಾಗಿದೆ
ಸ್ಪರ್ಶಿಸಿದೊಡನೆ ವಾತ್ಸಲ್ಯ
ಮುಖ ಕಮಲದಿ ಹರ್ಷಿಸಿದೆ
ಓ ಹಸಿರಿನ ಮಾತೆ
 ನೀ ಸದಾ ಪೂಜಿತೆ

ಸ್ವಚ್ಛತೆಯ ನಿನ್ನ ಮಡಿಲು
ಪಚ್ಚೆ ಕೊನರಿನ ಕಡಲು
ಸ್ವಚ್ಛಂದದಿ ಅಚ್ಚಳಿಯದೆ
ಅರಳಲಿದೆ ಜನಿಸಲಿವೆ
ಸಹಸ್ರಾರು ಜೀವ ಜಂತುಗಳು
 ಅವಳೆದೆಯ ರಾಜ್ಯದಲ್ಲಿ
 ಎಲ್ಲರೂ ಸರಿಸಮಾನರು

ಧನಾತ್ಮಕತೆಯ ಬಸಿರ
ತನ್ನೊಡಲಲ್ಲಿ ಇರಿಸಿ
ದುಷ್ಟತೆಯ ದೂರವಿರಿಸಿ
ಅನಿಷ್ಟತೆಯ ತನ್ನಲ್ಲಿ ಕರಗಿಸಿ
ಹಸಿರ ಪಸರಿಸಿಹಳು
ಉಸಿರ ಬೆಸೆಯುತಿಹಳು
ಓ ಹಸಿರಿನ ಮಾತೆ
 ನೀ ಸದಾ ಪೂಜಿತೆ


Leave a Reply

Back To Top