ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತತಕ ಸಂಗಾತಿ

ಸೌಗಂಧಿಕಾ ಒಂದು ಅವಲೋಕನ

ಪ್ರಸ್ತುತ ಕಾಲಮಾನದಲ್ಲಿ ಕವಿತೆಗಳ ಸಂಕಲನಗಳ ಪ್ರಕಟಣೆ ಸಾಕಷ್ಟು ಹುಲುಸಾಗಿದೆ. ಕಾವ್ಯ  ಉಲ್ಲಾಸ ಉತ್ಸಾಹಗಳ ಹದಿಹರೆಯದ ರೆಕ್ಕೆಗಳ ಮೇಲೆ ಹಾರಾಡುತ್ತಿದೆಯೆಂದೇ ಹೇಳಬಹುದು.  ಅನಿಸಿಕೆಗಳು ಅನುಭವಗಳಾಗಿ ಊಹೆಗಳು ಉಪಮೇರೂಪಕಗಳಾಗಿ, ಉರುಳುವ ಮಾತುಗಳು ಅರಳದ ಮನವರಳಿಸುವ ಮೋಹಕ ಕಂಪಿನ ಅರುಗಳಾಗಿ, ಸರಳ ಆಲೋಚನೆಗಳು ಗಂಭೀರಾಕರ್ಷಕ ಚಿಂತನೆಗಳ ಹರಳುಗಳಾಗಿ ಮಾಗಿ ಪೂರ್ಣಾಂಗವಾಗಿ ಹೊಮ್ಮಿ, ಸಹೃದಯರ ಮನದೊಳಗೆ ಬುದ್ದಿಯೊಳಗೆ ಮೆಲ್ಲಮೆಲ್ಲನೆ ಹಬ್ಬಿಕೊಂಡು ಹೊಸಹೊಸ ಆರ್ಥ ಮೋಹಕಗಳನ್ನು ಕಟ್ಟಿಕೊಡುವ ನಿರಂತರ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಧ್ಯಾನಕಾಯಕ ವಿಶಿಷ್ಟಫಲಿತಗಳಾಗಿ ಕಾವ್ಯರೂಪುಗೊಳ್ಳಬೇಕು. 

     ಇದಕ್ಕೆಡೆಕೊಡುವ ಭಾವ ಸಂಯಮ ಸೃಜನಶಕ್ತಿಯನ್ನು ಕಲಾತ್ಮಕವಾಗಿ ದುಡಿಸಿಕೊಳ್ಳುವ ಸಂಯಮವನ್ನು ಕವಿಯಾದವರು ಸತತ ಲೋಕಾವಲೋಕನ , ಅಧ್ಯಯನಶೀಲತೆ, ಸ್ವೋಪಜ್ಞ ಚಿಂತಕ ಸಾಮರ್ಥ್ಯಗಳಿಂದ ರೂಢಿಸಿಕೊಳ್ಳುತ್ತಾ ಹೋಗಬೇಕು.  ಹೀಗಾಗದಿದ್ದರೆ ಹಿಂಜಿದ ಬಿಳಿಯ ಹತ್ತಿ ಗಾಳಿಗೆ ಹಾರುತ್ತಾ  ಬಯಲನ್ನು ಆವರಿಸಿಕೊಂಡಂತೆ ಕವಿತೆ ಆಕರ್ಷವಾಗಬಹುದೇ ಹೊರತು ನೀರು ತುಂಬಿದ ಮೇಘಮಾಲೆಯಲ್ಲಿ ರವಿರಶ್ಮಿ ಹಾಳತವಾಗಿ ತೂರಿ, ಅದರೊಳಗೆ ನೆಯ್ದುಕೊಂಡು ಕಾಮನಬಿಲ್ಲಾಗಿ ಭುವನ ಸುಂದರವಾದಂತೆ ಮೈದೆರೆದುಕೊಳ್ಳಲಾರದು. 

     ದಿನ , ವಾರ, ಮಾಸಪತ್ರಿಕೆಗಳಲ್ಲಿ ಕವಿಗಳು ಸ್ವತ: ಪ್ರಕಟಿಸುವ ಸಂಕಲನಗಳಲ್ಲಿನ ಬಹುಪಾಲು ಕವಿತೆಗಳು ಮೊದಲವರ್ಗಕ್ಕೆ ಸೇರುತ್ತವೆ. ಭಾಷೆ, ಭಾವ ಅಂತರ್ಲಯಗಳ ರಕ್ತಹೀನತೆಯಿಂದ ಬಳಲುತ್ತವೆ.  ಎರಡನೆಯ ವರ್ಗಕ್ಕೆ ಸೇರುವ ಕವಿತೆಗಳ ಸಂಖ್ಯೆ ತುಂಬಾ ಕಡಿಮೆ ಎಂಬುದು ಕಣ್ಣಿಗೆ ಹೊಡೆಯುವಂತಿದ್ದರೂ ಅವು ಸ್ವಯಂ ನಿಯಂತ್ರಣ ಪ್ರಜ್ಞೆಯಿಂದ ಭಾಷೆಯ ಮೇಲಿನ ಹಿಡಿತವನ್ನು ಸಾಧಿಸುವ ಪ್ರಯತ್ನದಿಂದ ಹೊಸತೇನಾದರೂ ಹೇಳಬೇಕೆಂಬ ತವಕ, ತಲ್ಲಣ, ಅಭೀಷ್ಟೆಗಳಿಂದ ಹೊಸ ರೀತಿಯಲ್ಲಾದರೂ ಅಭಿವ್ಯಕ್ತಿಸಬೇಕೆಂಬ ತಹತಹದಿಂದ ಕುಡಿಕೊಂಡು ಆವಿಯಾಗದೇ ರೂಪು ತಳೆದು ಆಕೃತಿಗಳಾಗಿವೆ ಎಂಬುದನ್ನು ಮೆಚ್ಚೆಇರುವುದು ಕಪಟತನವಾಗುತ್ತದೆ.  ಇಂತಹ ಸಂದರ್ಭದಲ್ಲಿ ಪ್ರಕಟವಾಗಿರುವ ವಿಶಾಲಾ ಆರಾಧ್ಯ ಅವರ `ಸೌಗಂಧಿಕಾ’ ಕವನ ಸಂಕಲನ ಹಲವು ಅಪೇಕ್ಷಣೀಯ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ ಎಂಬುದು ಸಂತೋಷದ ಸಂಗತಿ.  ವಚನಗಳೂ ಸೇರಿದಂತೆ `ಸೌಗಂಧಿಕಾ’ ಕನವ ಸಂಕಲನವನ್ನು ಹೊರ ತಂದಿರುವ ಈ ಕವಿಯತ್ರಿ ಮತ್ತಷ್ಟು ಬೆಳೆಯುವ, ಪಕ್ವವಾಗುವ ವಿಶಿಷ್ಟ ಭಾವ ಚಿಂತನೆ ಕಲ್ಪನೆಗಳ ಆಳ ಎತ್ತರಗಳನ್ನು ಹಿಡಿಯುವ ಗಂಭೀರ ಪ್ರಯತ್ನವನ್ನು ಈ ಸಂಕಲನದ ಮೂಲಕ ಮಾಡಿದ್ದಾರೆ. 

     ಇಲ್ಲಿನ ರಚನೆಗಳೆಲ್ಲವೂ ಸಕಲ ಸದ್ಯೋಜಾತವಾದವುಗಳೇನೂ ಅಲ್ಲ.  ಹಿಂದೆಯೇ ಹೇಳಿದಂತೆ ಆಧುನಿಕ ಕಾವ್ಯ ಪರಂಪರೆಯನ್ನೊಳಗೊಂಡ ಮಿಸಳಬಾಜಿ ! ವಿಚಾರ ಸಾಹಿತ್ಯ, ಪ್ರಚರ ಸಹಿತ್ಯದ ಸರಿಬೆರಕೆಯೂ ಇದೆ.  ಜೊತೆಗೆ ಕಾಲ, ಕತ್ತಲು, ಮೌನ, ಬದುಕು, ಮನಸ್ಸು ಮೊದಲಾದ ಅವ್ಯಕ್ತಗಳ ಔಪಾಸನೆ, ಅಮೂರ್ತ ಶಕ್ತಿಗಳ ಆರಾಧನೆ, ಮಿಗಿಲಾದ ಕಲ್ಪನೆ ಸಹೃದಯ ಚೇತನವನ್ನು ಚೇತೋಹಾರಿಯನ್ನಾಗಿಸುವ ಸುಮ ಸೌರಭದ ಅಮೃತ ಬಿಂದುಗಳೂ ಆಗಿವೆ.

    ಸ್ನೇಹಿತೆಯೂ ಮತ್ತು ವೃತ್ತಿಯಲ್ಲಿ ಶಿಕ್ಷಕಿಯೂ ಆಗಿರುವ ವಿಶಾಲಾ ಆರಾಧ್ಯ ಗುಣಾಕಾರ ಭಾಗಾಕಾರದಂತಹ ಬೌದ್ದಿಕ ಕಸರತ್ತಿನ ಜೊತೆಗೆ ಕಾವ್ಯಕ್ರಿಯೆಯಂತಹ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಅವರ ಆದಮ್ಯ ಜೀವನ ಪ್ರೀತಿಗೆ ಸಂಕೇತವಾಗಿದೆ.  ಈಗಾಗಲೇ ಮಕ್ಕಳ ಸಂಕಲನವನ್ನು ಹೊರತಂದಿರುವ ವಿಶಾಲಾ ಆರಾಧ್ಯ ಅವರು ಬದುಕಿದ್ದನ್ನು ಬರೆಯುವ ಗುಣವನ್ನು ರೂಢಿಸಿಕೊಂಡಿದ್ದಾರೆ. 

     ಪ್ರಸ್ತುತ ಕವನ ಸಂಕಲನದಲ್ಲಿ ನಾಡು-ನುಡಿ, ನೆಲ-ಜಲ, ಸಾಮಾಜಿಕ ಸಂಘರ್ಷ, ಭ್ರಷ್ಟಾಚಾರ, ಪರಿಸರ ನಾಶ, ರೈತನ ಸಮಸ್ಯೆ, ಜೀವ ಸಂಕುಲದಂತಹ ಸಮಕಾಲೀನ ಸಮಸ್ಯೆಗಳಿಗೆ  ಪ್ರಾಮಾಣಿಕತೆಯನ್ನು ಶೋಧಿಸುವ ಯತ್ನ ನಡೆದಿದ್ದಾರೆ.  ನವಿರಾದ ವಿಡಂಬನೆ, ಕಟಕಿಯ ಮುಖಾಂತರ ಸಾಮಾಜಿಕ ಪರಿಸ್ಥಿತಿಯನ್ನು ಅನಾವರಣಗೊಳಿಸುವ ಪ್ರಯತ್ನ ನಡೆಸಿದ್ದಾರೆ.  ಸೃಜನಶೀಲತೆಯ ಜಾಣ್ಮೆ, ಪ್ರತಿಭೆಯ ಹೊರಪು, ಪ್ರಜ್ಞಾವಂತಿಕೆ, ಸಾತ್ವಿಕ ಸಿಟ್ಟು ಮತ್ತು ಸಾಮಾಜಿಕ ಎಚ್ಚರ ಇವರ ಬರವಣಿಗೆಯಲ್ಲಿ ಒಡೆದು ಕಾಣುವ ಅಂಶಗಳು.  ಇವೆಲ್ಲವುಗಳೊಂದಿಗೆ ಭಾವುಕತೆ ಮತ್ತು ಅತೀವವಾದ ಉತ್ಸಾಹವಿದೆ.  ಇದನ್ನು ಮೀರಿ ಕವಿತೆಯನ್ನು ಕಲಾತ್ಮಕಗೊಳಿಸುವ ಕುಸುರಿತನವನ್ನು ವಿಶಾಲಾ ಅವರು ಕುದುರಿಸಿಕೊಂಡಲ್ಲಿ ಕನ್ನಡ ಕಾವ್ಯಕ್ಷೇತ್ರಕ್ಕೊಂದು ಗಟ್ಟಿತನ ದೊರೆತಂತಾಗುತ್ತದೆ.

ಈ ಬಗೆಯ ಹಲವು ಉತ್ತಮ ಕವಿತೆಗಳ ಮುತ್ತಿನ ಮಾಲೆ “ಸೌಗಂಧಿಕಾ”.  ಇಲ್ಲಿ ವೈವಿಧ್ಯಮಯ ವರ್ಣನೆಗಳಿಲ್ಲ, ವಯ್ಯಾರವಿಲ್ಲ.  ಸರಳ ಸುಂದರ ಸುಭಗ, ಬಂಧುರವಿದು.  ಇಲ್ಲಿನವು ಓದಿದಂತೆಲ್ಲಾ ಒಲವು ಮೂಡಿಸುವಂತಹ ಕವನಗಳು.

     ಕವಿಯತ್ರಿ ವಿಶಾಲಾ ಆರಾಧ್ಯ ಭಾಷೆಯಲ್ಲಿ ಕಸುವಿದೆ, ಕಾಂತಿಯಿದೆ.  ಈಕೆ ಗುಡಾರದ ಕವಿಯಲ್ಲ. ಬಿಚ್ಚು ಮನಸ್ಸಿನ ಕೆಚ್ಚಿನ ಕವಯತ್ರಿ. ಇವಳಲ್ಲಿ ಎಲ್ಲವೂ ನೇರ, ನೈಜ, ಸಹಜ, ನಿಷ್ಠುರ.  ಯಾರ ದಾಕ್ಷಿಣ್ಯಕ್ಕೂ ಮಣಿಯದ ಧ್ಯೇಯವಾದಿ.  ಛಂದಸ್ಸಿನ ಚೌಕಟ್ಟಿನಲ್ಲಿದ್ದರೂ ಸಂಪ್ರದಾಯದ ಸಂಕೋಲೆಯಲ್ಲಿ ಭಾವ ಬಂಧಿತವಾಗಿಲ್ಲ.  ಗೀತಗತಿಯ ಓಘ ಓಜಸ್ ಇದೆ.  ಭಾವದೀಪ್ತಿಯ ತೇಜಸ್ ಇದೆ.  ನಿಜಕ್ಕೂ ಇದು ಸಹೃದಯ ವೃಂದಕ್ಕೆ ಹರ್ಷದ ವರ್ಷವಾಗಿದೆ.

     ಇಂತಹ ಕವಿತಾರತ್ನವಿತ್ತ ಕವಿ ಸ್ನೇಹಿತೆ ವಿಶಾಲಾ ಆರಾಧ್ಯ ಗೆ ಸಕಲ ಶುಭವನ್ನು ಕೋರಿ ಅಭಿನಂದಿಸುತ್ತೇನೆ.

-ದೇ. ನಾರಾಯಣಸ್ವಾಮಿ ಮತ್ತಿಕೆರೆ

.

***************************************************************

ದೇ. ನಾರಾಯಣಸ್ವಾಮಿ ಮತ್ತಿಕೆರೆ

About The Author

4 thoughts on “ಸೌಗಂಧಿಕಾ ಒಂದು ಅವಲೋಕನ”

  1. ವಿಶಾಲಾ ಆರಾಧ್ಯ

    ಚೆನ್ನಾಗಿ ಬರೆದಿದ್ದೀರಿ. ಉತ್ತಮ ವಿಮರ್ಶೆ

  2. ಎಂಥ ಮನಮುಟ್ಟುವಂಥಾ ಬರವಣೆಗೆ ವಿಶಾಲ ರವರೆ ಧನ್ಯವಾದಗಳು, ಹೃತ್ಪೂರ್ವಕ ಧನ್ಯವಾದಗಳು’

  3. ಡಾ. ಕಮಲಾ ದೇಶಿಕ

    ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು ಗೆಳತಿ ವಿಶಾಲಾ

Leave a Reply

You cannot copy content of this page

Scroll to Top