ಬರೆದ ಸಾಲುಗಳು

ಕವಿತೆ

ಬರೆದ ಸಾಲುಗಳು

ಬೆಂಶ್ರೀ ರವೀಂದ್ರ

Assorted-color Pens

ಬರೆದ ಸಾಲುಗಳಲಿ ರಕ್ತ ಚಿಮ್ಮಲಿಲ್ಲ
ಯಾಕೆಂದರೆ ಲೇಖನಿ ಭರ್ಚಿಯಾಗಿರಲಿಲ್ಲ

ಬರೆದ ಸಾಲುಗಳಲಿ ಜೇನು‌ಜಿನುಗಲಿಲ್ಲ
ಯಾಕೆಂದರೆ ಲೇಖನಿ ಜೇನುಗೂಡಾಗಿರಲಿಲ್ಲ

ಬರೆದ ಸಾಲುಗಳಲಿ ಕ್ಷಾರ ಕದಡಲಿಲ್ಲ
ಯಾಕೆಂದರೆ ಲೇಖನಿ ಕಡಲಾಗಿರಲಿಲ್ಲ

ಬರೆದ ಸಾಲುಗಳಲಿ ಕಾವು ಸುಡಲಿಲ್ಲ
ಯಾಕೆಂದರೆ ಲೇಖನಿ ಬೆಂಕಿಯಾಗಿರಲಿಲ್ಲ

ಬರೆದ ಸಾಲುಗಳಲಿ ತಂಪು ಹೆಪ್ಪುಗಟ್ಟಲಿಲ್ಲ
ಯಾಕೆಂದರೆ ಲೇಖನಿ ಶಶಿಯಾಗಿರಲಿಲ್ಲ

ಬರೆದ ಸಾಲುಗಳಲಿ ಕತ್ತಲು ಕವಿಯಲಿಲ್ಲ
ಯಾಕೆಂದರೆ ಲೇಖನಿ ಅಮಾವಾಸ್ಯೆಯಾಗಿರಲಿಲ್ಲ

ಬರೆದ ಸಾಲುಗಳಲಿ ಬೆಳಕು ಕುಕ್ಕಲಿಲ್ಲ
ಯಾಕೆಂದರೆ ಲೇಖನಿ ಭಾನುವಾಗಿರಲಿಲ್ಲ

ಬರೆದ ಸಾಲುಗಳಲಿ ಕರುಳು ಮಿಡಿಯಲಿಲ್ಲ
ಯಾಕೆಂದರೆ ಲೇಖನಿ ಹೆಣ್ಣಾಗಿರಲಿಲ್ಲ

ಬರೆದ ಸಾಲುಗಳಲಿ ಬಯಕೆ ಸೆಳೆಯಲಿಲ್ಲ
ಯಾಕೆಂದರೆ ಲೇಖನಿ ಗಂಡಾಗಿರಲಿಲ್ಲ

ಬರೆದ ಸಾಲುಗಳಲಿ ಚಿಗುರು ಒಡೆಯಲಿಲ್ಲ
ಯಾಕೆಂದರೆ ಲೇಖನಿ ಇಳೆಯಾಗಿರಲಿಲ್ಲ

ಬರೆದ ಸಾಲುಗಳಲಿ ಅಕ್ಷರವಿತ್ತು
ಯಾಕೆಂದರೆ ಲೇಖನಿ ಲೇಖನಿಯಾಗಿತ್ತು.

***************************************

2 thoughts on “ಬರೆದ ಸಾಲುಗಳು

  1. ಸರಳ ಸಾಲುಗಳ ಅರ್ಥಗರ್ಭಿತ ಕವನ

Leave a Reply

Back To Top