ಶಾರದಜೈರಾಂ.ಬಿ ಅವರ ಲೇಖನ-ಪ್ರೀತಿ ಮತ್ತು ಸಮಾಜದ ಕಟ್ಟುಪಾಡುಗಳು


ಪ್ರೀತಿ ಎಂದರೆ ಒಂದು ವ್ಯಕ್ತಿತ್ವ ಇನ್ನೋಂದು ವ್ಯಕ್ತಿತ್ವವನ್ನು ತನ್ನಂತೆಯೇ ಎಂದು ಗೌರವಿಸುವುದಾಗಿದೆ.
ಪ್ರೀತಿ ಪರಿಶುದ್ಧ ಭಾವ, ಪ್ರಾಮಾಣಿಕತೆ ಬೇಡುತ್ತದೆ ಹಾಗೇಯೇ ನಂಬಿಕೆಯೇ ಮೂಲಾಧಾರ ವಾಗಿದೆ.
ಈ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರ “ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ,ಮೋಡ ಕಟ್ಟಿತು ಹೇಗೆ,ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡಿತು ಹೇಗೆ ಎಂದು ಪ್ರಶ್ನಿಸುತ್ತಾರೆ.ಪ್ರೀತಿಯೇ ಎಲ್ಲದಕ್ಕೂ ಮೂಲ ತಳಹದಿ.ನಿರ್ವಾಜ್ಯ ಪ್ರೀತಿ ಮತ್ತು ನಿಸ್ವಾರ್ಥ ಪ್ರೀತಿ ಬದುಕಿನ ಬಲ.
ಪ್ರೀತಿ ಹೃದಯದ ಭಾಷೆ,ಆ ಭಾಷೆಯನ್ನು ಎಲ್ಲರೂ ಕೇಳಿಸಿಕೊಳ್ಳಬಲ್ಲರು ಆದರೆ ಅಥ೯ಮಾಡಿಕೊಳ್ಳಲು ಒಂದು ಸಂವೇದನಾಶೀಲ ಹೃದಯದಿಂದ ಮಾತ್ರ ಸಾಧ್ಯ.ಪ್ರೀತಿಯು ಅರ್ಥವಾದೆಡೆ ಮಾತುಗಳೇ ಬೇಕಿಲ್ಲ ಕಣ್ಣಭಾವವೇ ಮಾತುಗಳ ರವಾನಿಸಿ ಬಿಡುತ್ತವೆ.
ಪ್ರೀತಿ ಎನ್ನುವುದು ಆರಾಧನೆ, ಶೃಂಗಾರ ರಸಿಕತೆಯು ಹೌದು ನಿಷ್ಕಲ್ಮಶ ಮನಸ್ಸುಗಳಸಮಾಗಮ.ದೇಹವೆರೆಡಾದರೂ ಭಾವ ಒಂದೇ ನೀನೇ ನಾನಾಗುವ ಭಾವವದು.ಪ್ರೀತಿ ಒಂದಿದ್ದರೆ ಎಂಥ ಕಷ್ಟಗಳೇ ಬರಲಿ ಎದುರಿಸುವೆ ಎಂಬ ಭರವಸೆಯನ್ನು ಮೂಡಿಸುತ್ತದೆ.
ಇಂತಹ ಪ್ರೀತಿಗೆ ಈ ಸಮಾಜದ ಸಾವಿರಾರೂ ಕಟ್ಟುಪಾಡುಗಳು ಮೀರಿ ಹೋದಲ್ಲಿ ಬಹಿಷ್ಕೃತ ಬದುಕು ನಡೆಸಬೇಕು.
ನಾವು ಒಳಗೊಂಡಂತೆ, ನಮ್ಮ ಸುತ್ತ ಮುತ್ತ ಇರುವ ಪರಿಸರವೇ ಸಮಾಜ.ಮಾನವ ಸಂಘಜೀವಿ,ಸಮಾಜದ ಒಂದು ಭಾಗವಾಗಿದ್ದಾರೆ,ಧಿಕ್ಕರಿಸಿ ಬದುಕಲು ಗಟ್ಟಿ ಎದೆಗಾರಿಕೆ ಸಂಕಷ್ಟಗಳ ಸರಮಾಲೆ ಎದುರಿಸಲು ಸಿದ್ಧವಾಗಿರಬೇಕು,ಇಲ್ಲ ಆತ್ಮಹತ್ಯೆ, ಕೊಲೆ, ಮರ್ಯಾದೆ ಹತ್ಯೆ ಈ ತೆರನಾದುದರಲ್ಲಿ ಕೊನೆಗಾಣುವುದೇ ಹೆಚ್ಚು.
ಕೆಲವೊಂದು ಕಟ್ಟಳೆಗಳು ಜೀವನದ ಭದ್ರತೆಗೆಂದೆ ರೂಪಿತವಾಗಿವೇ ಆದರೆ ಇನ್ನು ಕೆಲವು ಸಾಮಾಜಿಕ ಸ್ಥಾನಮಾನ, ಅಂತಸ್ತು,ಮಾತು,ಜಾತಿ, ವಯಸ್ಸು,ವಣ೯ಗಳೆಂಬ ಬೇಲಿಗಳಿವೆ.ಆಧುನಿಕರಣವಾದಂತೆ ನಾಗರೀಕತೆಯ ಓಟದಲ್ಲಿ ಸಂಬಂಧಗಳ ಸಂಕೀರ್ಣತೆ ಸರಳವಾಗಿವೆ, ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳದೇ ಗೊಡ್ಡು ಸಂಪ್ರದಾಯಗಳಿಗೆ ಜೋತುಬಿದ್ದು ಜೋಡಿಯ ಅಭಿಪ್ರಾಯ ಪರಿಗಣಿಸದೇ ಸ್ವಪ್ರತಿಷ್ಠೆ ಮುಖ್ಯ ಎಂದು ವತಿ೯ಸಿದಾಗ ಹಿರಿಮೆಯ ಗರಿಮೆಗಳು ಬೆಲೆ ಕಳೆದುಕೊಳ್ಳುತ್ತಿವೆ.


ಸಮಾನ ಆಸಕ್ತಿಗಳು,ವಿಚಾರ ವಿನಿಮಯ, ಲೋಕಜ್ಞಾನ, ಆರ್ಥಿಕವಾಗಿ ಸಬಲರಾಗಿದ್ದಾಗ ಕಟ್ಟಳೆಗಳ ಬಂಧನಗಳೇಕೆ, ಕೆಲವೊಂದು ಮೌಢ್ಯತೆಯಿಂದ ಕೂಡಿರುತ್ತವೆ,ಅಂಥವನ್ನು ಹೇರಿಕೆ ಮಾಡುವುದರಿಂದ ಘರ್ಷಣೆಗೆ ಕಾರಣವಾಗಿ ಮನಸ್ತಾಪ ಉಂಟಾಗಿ ಸಂಬಂಧದ ತಂತು ದೂರಾಗುವ ಸಾಧ್ಯತೆಯೇ ಹೆಚ್ಚು ಕೆಲವೊಮ್ಮೆ ಪ್ರಾಣಹಾನಿ ಆಗುತ್ತವೆ.
ಸಂಸ್ಕೃತಿ, ಸಂಪ್ರದಾಯಗಳ ಹೆಸರಲ್ಲಿ ವ್ಯಕ್ತಿಯ ಬದುಕು ಹತ್ತಿಕ್ಕಬಾರದು.ವಿವೇಚಿಸಿ ನಿಧ೯ರಿಸುವುದು ಒಳಿತು.
ಪ್ರೀತಿ ನಿಜವೇ ಆಗಿದ್ದಲ್ಲಿ ಕಳೆದುಕೊಳ್ಳುವ ಭಯವಿರುವುದಿಲ್ಲ, ಮನುಷ್ಯ ನಿರ್ಮಿತ ಗೋಡೆಗಳಲ್ಲಿ ಬಂಧಿಸಿ ಉಸಿರುಗಟ್ಟಿಸುವುದೇಕೆ.ಜೋಡಿಗೆ ಹರಸುವ ಬದಲು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಮನೋಧರ್ಮ ಏಕೆ.ಪ್ರಬುದ್ದತೆಯಿಂದ ಯೋಚಿಸಿ ಉತ್ತಮ ಜೋಡಿಯ ಆಯ್ಕೆ ಮಾಡಿಕೊಳ್ಳುವ ಹೊಣೆಗಾರಿಕೆ ಇರುತ್ತದೆ.
ಕೊನೆಯದಾಗಿ ಹೇಳುವುದಾದರೆ ನಾನು ನಿನಗೆ ನೀನು ನನಗೆ ಎಂಬಂತೆ ಇದ್ದರೂ,ಇಬ್ಬರ ನಡುವೆ ನಂಬಿಕೆಯ ತಂತು ಮೀಟಬೇಕು.ಪರಸ್ಪರ ಭಾವನೆಗಳ ಗೌರವಿಸಬೇಕು, ಪ್ರೀತಿ ಸರಳವಾಗಿದ್ದಷ್ಟು ತೆರೆದ ಪುಸ್ತಕದಂತಿದ್ದರೆ ಅದೇ ಬದುಕಿಗೆ ರಕ್ಷಾಕವಚ.ವಿಶ್ವಾಸ,ಪ್ರೇಮವಿದ್ದಾಗ ಜೀವನದಲ್ಲಿ ಎದುರಾಗುವ ಹಲವು ಸವಾಲುಗಳ ಮೀರಿಯೂ ಬದುಕು ಸಹ್ಯವಾಗುವುದಷ್ಟೇ ಅಲ್ಲ ಹಸನಾಗುತ್ತದೆ.ನಾನು ಎಂಬ ಅಹಂ ಇರದೇ ನಾವು ಎಂಬ ಭಾವದಿ ನಡೆದಾಗ ಬದುಕು ಸಾರ್ಥಕ ಪಯಣ,ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ನಡೆದರೆ ದ್ವೇಷ ಅಳಿದು ಪ್ರೀತಿ ಜಗವ ಗೆಲ್ಲಲಿ ಎಂಬ ಅದಮ್ಯ ಆಶಯದೊಂದಿಗೆ ಮುಗಿಸುವೆ.

————————————————————————————-

9 thoughts on “ಶಾರದಜೈರಾಂ.ಬಿ ಅವರ ಲೇಖನ-ಪ್ರೀತಿ ಮತ್ತು ಸಮಾಜದ ಕಟ್ಟುಪಾಡುಗಳು

  1. ಪ್ರೀತಿ…..ಲೇಖನ ಚೆನ್ನಾಗಿದೆ.ನಂಬಿಕೆ ವಿಶ್ವಾಸಗಳೇ ಪ್ರೀತಿಯ ತಳಹದಿ …ನಾನು ಎಂಬ ಅಹಂ ಬಿಟ್ಟರೆ ಜೀವನ ಸುಂದರ……ಲೇಖನದಲ್ಲಿ ಬಂದಿರುವ ಅನೇಕ ಸಾಲುಗಳನ್ನು ಮರೆಯಲಾರದ್ದು…….,,,

  2. ಪಡೆದುಕೊಳ್ಳಲು ಅಥವಾ ಕಳೆದುಕೊಳ್ಳಲು ಏನೂ ಇಲ್ಲದಿರುವುದು ಪ್ರೀತಿ.

  3. “ಪ್ರೀತಿ ಜಗವ ಗೆಲ್ಲಲಿ” ವ್ಹಾವ್ ಎಂತಹ ಜೀವಪರದ ಸಾಲುಗಳು…ಮೇಡಂ, ಲೇಖನದ ಸ್ಪಷ್ಟತೆ ಮತ್ತು ಉದ್ದೇಶ ನಿಮ್ಮ ಕಾಳಜಿ ಕೊನೆಯ ಸಾಲಿನಲ್ಲಿ ಸ್ಪಷ್ಟವಾಗಿ ತಿಳಿದಿದೆ. ನಿಮ್ಮ ಬರಹದಲ್ಲೊಂದು ಭರವಸೆಯಿದೆ.. ಹೀಗೆಯೇ ಮುಂದುವರೆಯಲಿ ನಿಮ್ಮ ಸಾಹಿತ್ಯ ಯಾನ… ಶುಭವಾಗಲಿ

  4. ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ ಮೆಡಮ್

  5. ಅದ್ಬುತ ಪದ ಬಳಕೆಯಿಂದ ಕೂಡಿದ ವಿವೇಚನಾತ್ಮಕ ಲೇಖನ ಸೂಪರ್

Leave a Reply

Back To Top