ರೇವತಿ ಶ್ರೀಕಾಂತ್‌ ಅವರ ಬರಹ”ಭಾವಗಳ ರಾಜ ಪ್ರೀತಿ”

ಮನಸು ಎನ್ನುವುದು ಸಾಗರವಿದ್ದಂತೆ. ಅದರೊಳಗೆ ಅಸಂಖ್ಯ ಭಾವಗಳಿದೆ. ಸಂಧರ್ಭ, ಸಂಬಂಧ ಎಲ್ಲಾದಕ್ಕೆ   ಅನುಸಾರ ಅಭಿವ್ಯಕ್ತವಾಗುತ್ತದೆ. ಎಲ್ಲಕ್ಕೂ ಮೂಲ ಪ್ರೀತಿ. ಪ್ರೀತಿಯೊಂದರಿಂದ  ಎಲ್ಲ ಭಾವಗಳ ಆರಂಭ.

ಮೊದಲಿಗೆ  ಪ್ರೀತಿಯ  ಮುಖ್ಯವಾದ ರೂಪ ಪ್ರೇಮ. ಇದರಲ್ಲಿ ದೈಹಿಕ ಆಕರ್ಷಣೆ ಒಂದು ಭಾಗ. ಅದರ ಮುಂದುವರಿದ ಭಾಗ ಜವಾಬ್ದಾರಿ. ಕಾಳಜಿ, ಸಾಂತ್ವನ  ಇವೆಲ್ಲ ಪ್ರೇಮದ ರೂಪಾಗಳೇ. ಕೊಡುವುದು, ಮತ್ತು ಬಿಟ್ಟುಕೊಡುವುದು ಮುಖ್ಯವಾದ ಅಂಶ . ತನ್ನ ಆಸ್ತಿತ್ವದಲ್ಲಿ ತನ್ನವರನ್ನು ಸೇರಿಸುವುದು ಪ್ರೀತಿಯ  ಮುಖ್ಯ ಲಕ್ಷಣ. ಇದು ಒಂದು ಸುಂದರ ದಾಂಪತ್ಯದ  ಮೂಲ.. ಇದು ಸಂಗಾತಿ ಪ್ರೀತಿ.

ಇದರ ಸುತ್ತ  ಹಲವು ಸಂಬಂಧ ಹೆಣಿದುಕೊಳ್ಳುತ್ತದೆ.ಮುಖ್ಯವಾದದ್ದು
ಗಂಡ,ಅತ್ತೆ, ಮಾವ, ನಾದಿನಿ, ಮೈದುನ ಇಂತಹ ಸಂಬಂಧ. ಹೊಸ ವಾತಾವರಣ ಅದಕ್ಕೆ ಹೊಂದಿಕೊಳ್ಳುವುದು ಹೆಣ್ಣಿಗೆ ಒಂದು ಸವಾಲೇ. ತನ್ನ ಅಭ್ಯಾಸಗಳು ಬೇಕು ಬೇಡಗಳು ಎಲ್ಲವನ್ನು ತನ್ನವರ ಬೇಕು ಬೇಡಗಳೊಂದಿಗೆ ಸಮೀಕರಿಸಿ ತನ್ನ ಅಸ್ತಿತ್ವವನ್ನು ಕಳ್ಳೆದುಕೊಳ್ಳದೆ ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಹೆಣ್ಣಿನ ವಿಶೇಷತೆ.  ಅವಳ ಈ ಪ್ರಕ್ರಿಯೆಗೆ ಸಮಯಾವಕಾಶ  ಸಿಕ್ಕರೆ  ಸಮಸ್ಯೆ ಇಲ್ಲ. ಅವಳನ್ನು ಸ್ವೀಕರಿಸಲು  ಮನೆಯವರು ಅಸಮರ್ಥಾರಾದರೆ ಅಲ್ಲಿಂದ ಸಮಸ್ಯೆಯ ಹುಟ್ಟು. ಅಹಂಕಾರ ಅಧಿಕಾರಗಳ  ಘರ್ಷಣೆಗಳು ಮನಸ್ಸನ್ನು  ಅಲುಗಾಡಿಸುತ್ತದೆ. ಈ ಸಂಘರ್ಷದಲ್ಲಿ ಹೆಣ್ಣು ತನ್ನನೇ ಕಳೆದುಕೊಂದುಬಿಡುತ್ತಾಳೆ. ಇದು ಸಮಸ್ಯೆಯ ಮುಲರೂಪ ಇದರಬಗ್ಗೆ ಮುಂದೆ ವಿವರವಾಗಿ ಬರೆಯುತ್ತೇನೆ.

ಗಂಡನ ನಂತರದ ಅತ್ಯಂತ ಮಧುರವಾದ ಸಂಬಂಧ ತಾಯಿ ಮಗುವಿನ ಸಂಬಂಧ. ಹೆಣ್ಣು ತಾಯಿಯದಾಗ, ತನ್ನ ಹಾಗು ಮನೆಯವರ ಸಂಬಂಧವನ್ನು ಬೆಸೆಯುವ ಸೇತುವೆ ಮಗು. ತಾಯಿ ಮಗುವಿನದ್ದು ಸ್ವಾರ್ಥವನ್ನು ಮೀರಿದ ಪರಮ ಪವಿತ್ರ ಬಾಂಧವ್ಯ. ಅಲ್ಲೂ ಸಮಸ್ಯೆ ತಪ್ಪಿದ್ದಲ್ಲ.  ಅದನ್ನು ಪ್ರತ್ಯೇಕವಾಗಿ ಬರೆಯಬೇಕಾಗುತ್ತದೆ. ಇದು ಪ್ರೀತಿಯ ವಿಸ್ತಾರ ರೂಪ. ಮುಂದೆ ಪ್ರೀತಿಯ ವಿಕೃತ ರೂಪದಲ್ಲಿ ಬಗ್ಗೆ ಮಾತನಾಡೋಣ.

ಪ್ರೀತಿಯ ವಿಕೃತ ರೂಪ ಎನ್ನಬಹುದಾದ ಭಾವ  ಅಥವಾ ಪ್ರೀತಿ ಅತಿಯದಾಗ  ಮೂಡುವುದೇ ಮೋಹ. ಪ್ರೀತಿ ಮತ್ತು ಮೋಹ  ಅಕ್ಕ ತಂಗಿಯರಂತೆ. ನೋಡಲು  ಒಂದೇ ತರ ಕಾಣುತ್ತದೆ. ಸಾಕಷ್ಟು ವ್ಯತ್ಯಾಸ  ಇದೆ.
ಪ್ರೀತಿಯಲ್ಲಿ ತನ್ನವರ ಒಳಿತು ಇದೆ. ತನ್ನವರು ಏನಾದರೂ ತಪ್ಪು ಮಾಡಿದರೆ ತಿದ್ದುವುದರಿಂದ ಅವರೇನಾದರೂ ಬೇಸರ ಪಟ್ಟು ದೂರಾದರೆ ಎಂಬ ಚಿಂತೆ ಇರುವುದಿಲ್ಲ. ಅವರಿಗೆ ಒಳ್ಳೆಯದಾಗುವುದು ಮಾತ್ರ ಮುಖ್ಯ ಎನ್ನುವುದು ಪ್ರೀತಿ.ತನ್ನವರು ಏನು ಮಾಡಿದರೂ ಅದೇ ಸರಿ ಎನ್ನುವುದು ಮೋಹ. ಏನೇ ಆದರೂ ಅವರನ್ನು ಬಿಟ್ಟುಕೊಡಬಾರದು ಎನ್ನುವುದು ಮೋಹ.ಎಲ್ಲಾದರೂ ಹೇಗಾದರೂ ಚೆನ್ನಾಗಿರಲಿ ಎನ್ನುವುದು ಪ್ರೀತಿಹೀಗೆ ಈ ರೀತಿಯ ಮನಸ್ಥಿತಿ ಯಿಂದ ಸಮಸ್ಯೆಗಳು ಉಂಟಾಗುತ್ತದೆ.


ಅದಕ್ಕಾಗಿಯೇ ಹೇಳುವುದು ಕೊಡುವುದು ಬಿಟ್ಟುಕೊಡುವುದು ಪ್ರೀತಿಯ ಲಕ್ಷಣ ಎಂದು. ಅದಕ್ಕೆ ಪ್ರೀತಿಯನ್ನು ಭಾವಗಳ ರಾಜ ಎನ್ನುವುದು. ಆಧ್ಯಾತ್ಮಿಕತೆಯ ವರೆಗೂ ಕರೆದುಕೊಂಡು ಹೋಗುವ ಸಾಮರ್ಥ್ಯ ಇರುವ ಭಾವ ಪ್ರೀತಿ.


Leave a Reply

Back To Top