ಅವನಲ್ಲ ಅವಳು! ಸುರೇಶ ತಂಗೋಡ
ಕಾವ್ಯ ಸಂಗಾತಿ ಸುರೇಶ ತಂಗೋಡ ಅವನಲ್ಲ ಅವಳು! ನಡುವಿನ ಉಡುದಾರಕಿತ್ತೊಗೆದುಕಾಲಿಗೆ ಗೆಜ್ಜೆ ಕಟ್ಟಿರುವೆಕೈಗೆ ಬಳೆ ಹಾಕುವಹೊತ್ತಿಗೆದೂರದಲೆಲ್ಲೊ ಅಪಸ್ವರ.// ಹಣೆಗೆ ವಿಭೂತಿಯಬದಲು ಕುಂಕುಮದ ಬೊಟ್ಟಿಟ್ಟೆತುಂಡು ಕೂದಲು ಉದ್ದ ಬಿಟ್ಟೆಗಂಡಸರುಡುವ ಬಟ್ಟೆಯನ್ನು ಬದಲಿಸಿದೆಸೀರೆಯ ಸೆರಗೂ ಇಷ್ಟವಾಯಿತು.ನಾಚಿಕೆ ಮೂಡಿತುಶ್! ನನ್ನ ಮೇಲಲ್ಲ ಸಮಾಜದ ಮೇಲೆ.// ನನ್ನೊಳಗಿನ ಹೆಣ್ತನವ ಕಾಪಿಡಲುನಾನು ಅದೇಷ್ಟು ಸತ್ತು ಬದುಕಿದ್ದೇನೆ.ಕುಂತು ಮೂತ್ರ ಮಾಡುವಾಗಬೆರಳುಗಳಿಗೆ ನೆಲ್ ಪಾಲಿಸ್ ಹಾಕಿಕೊಳ್ಳುವಾಗಕೊರಳಿಗೆ ಸರ ತೊಡುವಾಗವಿಚಿತ್ರವಾದ ಹಿಂಸೆ ನನಗೆ.// ಸೃಷ್ಟಿಯೊಳಗಿನ ಅದ್ಭುತ ನಾನೆಂದುಹೇಳಲು ಅವಕಾಶ ನೀಡಲಿಲ್ಲಸೌಂದರ್ಯ ನನ್ನಾಸ್ತಿಎಂದು ತೋರಿಸಲುಸಮಯ ನೀಡಲಿಲ್ಲಮಂಗಳಮುಖಿ ಎಂದುಅವಮಾನಿಸಿದರುಅಪಮಾನಿಸಿದರುಆದರೆನನಗೆ ನನ್ನ ಮೇಲೆ ಹೆಮ್ಮೆನಾನು ಅರ್ಧನಾರೀಸ್ವರನಪ್ರತಿರೂಪನನಗೂ ಸುಂದರ ಬದುಕಿದೆಬದುಕಿ ತೋರಿಸುವ ಛಲವಿದೆ. ಸುರೇಶ ತಂಗೋಡ
ಅವನಲ್ಲ ಅವಳು! ಸುರೇಶ ತಂಗೋಡ Read Post »









