ಡಾ. ಲೀಲಾ ಗುರುರಾಜ್ ಅವರ ಕವಿತೆ-ಸೈಕಲ್

ಹೈಸ್ಕೂಲ್ ಶಾಲೆ ಕಲಿವಾಗ
ಬಾಡಿಗೆಗೆ ಸೈಕಲ್ ಕೊಳ್ಳುವಾಗ
ಒಂದು ಗಂಟೆ ಓಡಿಸಿದಾಗ
ಸಿಗುವ ಮಜವೇ ಬೇರೆ ಅನುವಾಗ

ಮನೆಗೆ ಯಾರಾದರೂ ತಂದರೆ
ಮೆಲ್ಲ ಹೊತ್ತು ಹೊರಟೆವೆಂದರೆ
ಎತ್ತರವಿದ್ದರೂ ಬಿಡುತ್ತಿರಲಿಲ್ಲ
ಕತ್ರಿ ಕಾಲಲ್ಲಿ ತುಳಿಯುತ್ತಿ ವೆಂದರೆ

ಸೈಕಲ್ ತುಳಿಯಲು ಬಿದ್ದದ್ದು
ಕೈ ಕಾಲಿಗೆ ಗಾಯವಾಗಿದ್ದದ್ದು
ಅಮ್ಮನಿಂದ ಬೈಸಿಕೊಂಡದ್ದು
ಗಂಡುಬೀರಿ ಅನಿಸಿಕೊಂಡದ್ದು

ಈಗೆಲ್ಲಾ ಅದರ ಮಜವೇ ಬೇಕಿಲ್ಲ
ಸ್ಕೂಟಿ, ಆಕ್ಟಿವಾ ಗಾಡಿಗಳು ಇಟ್ಟಿದ್ದಾರಲ್ಲ
ಮಾತೆತ್ತಿದರೆ ಗಾಡಿ ಬೇಕು ಎನ್ನುತ್ತಾರಲ್ಲ
ನಾವು ಸೈಕಲ್ ತುಳಿಯೋ ಖುಷಿ ಈಗೀನವರು ಪಡೆಯಲೇ ಇಲ್ಲ


Leave a Reply

Back To Top