ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್

ಬರಿದೆದೆಬಾಗಿಲಿಗೀಗ ತೋರಣವ ಕಟ್ಟು ಬಾ
ಅನುರಾಗದ ಅಂತರಿಕ್ಷವ ಬೇಗ ಮುಟ್ಟು ಬಾ
ಮನಸು ಹೊತ್ತ ಮುನಿಸೆಲ್ಲವ ತಣಿಸುವೆನು
ಒಡಲೊಳಗಿನ ಸಿಟ್ಟು ಸೆಡವುಗಳ ಸುಟ್ಟು ಬಾ
ಮೊಗದ ನಗುವೇ ಜಗದಿ ಮಿಗಿಲಾದ ಒಡವೆ
ತುಟಿಯಂಚಲಿ ಮಗುಳುನಗೆಯ ತೊಟ್ಟು ಬಾ
ಕಣ್ಣ ಕಂಬನಿಗಳಿಗೆ ಅಣೆಕಟ್ಟೊಂದ ಕಟ್ಟುವೆ
ಇಲ್ಲಸಲ್ಲದ ಕಟ್ಟುಪಾಡುಗಳ ಕಟ್ಟಿ ಇಟ್ಟು ಬಾ
ಈ ಜನ್ಮವಷ್ಟೇ ಕುಂಬಾರನ ಒಟ್ಟಿಗಿದ್ದರೆ ಸಾಕೆ?
ಪ್ರತಿ ಜನ್ಮವು ಜೊತೆಗಿರುವ ಭಾಷೆ ಕೊಟ್ಟು ಬಾ
ಎಮ್ಮಾರ್ಕೆ
