Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಸಿಗಲಾರದ ಅಳತೆ ವಸುಂದರಾ ಕದಲೂರು ನೀನು, ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವುದಾದರೆ ನೀ ಅಳೆಯುವುದಾದರೂ ಏನನ್ನು! ಒಂದಷ್ಟು ಅಂದಾಜು ಸಿಗುವ ಗಾತ್ರ- ಗೋತ್ರ; ಉಬ್ಬುತಗ್ಗು ಅವಯವ- ಅವ್ವವ್ವಾ !! ಅಷ್ಟೇ. ಅಷ್ಟಕ್ಕೇ ನಿನಗೆ ದಕ್ಕಿಬಿಟ್ಟರೆ, ರೇ… ಅರೇ ಹೋಗು, ಅಳೆದುಕೋ ನಿನ್ನಾ ಅಳತೆಗೋಲು ಅಂದಾಜು ಶತಮಾನ ಹಳತು ಅದರ ಗೋಲು. ಮಾಡಿಕೊಂಡು ಬಂದದ್ದು ಬರೀ ರೋಲುಕಾಲು. ಅಳೆದೂ […]

ಕಾವ್ಯಯಾನ

ಮನದ ಮಾಮರ ಸುವರ್ಣ ವೆಂಕಟೇಶ್ ಮನದ ಮಾಮರಕ್ಕೆ ಮದ ಮತ್ಸರದ ಕಟ್ಟೆ ಕಟ್ಟಿ ಸ್ವಾರ್ಥದ ಜಲವ ಹರಿಸಿ ಬೇರು ಪಸರಿಸಿ ನೇರಳಾಗಿ ನಿಲ್ಲು ಎಂದೊಡನೆ ಎಂತಯ್ಯಾ!! ಮೋಹದ ಕಿರಣವ ತಾಡಿಸಿ ಬೆಂಕಿಯ ಮಳೆ ಸುರಿಸಿ ಮರಳುಗಾಡಿನಲ್ಲಿ ನೆಡಸಿ ಹಚ್ಚ ಹಸಿರಿನ ತರು ಲತೆ ಹೊತ್ತು ಎದ್ದು ನಿಲ್ಲಂದರೆ ಎಂತಯ್ಯಾ!! ಭಾವ ಇಲ್ಲದ ಭಕುತಿ ತೋರಿಸಿ ಅಹಂಕಾರದ ತೊಗಟೆ ಊಡಿಸಿ ಬಿಸಿಲಿನಿಂದ ಬಲೆಯ ಹೆಣೆದು ವಿಷ ಬೀಜವ ಬಿತ್ತಿ ಅಮೃತದ ಸಿಹಿ ಬಯಸಿದೋಡನೆ ಎಂತಯ್ಯಾ!! *********

ಕಾವ್ಯಯಾನ

ಟಂಕಾ ರೇಖಾ ವಿ.ಕಂಪ್ಲಿ ೧ . ಲಲಿತ ರಾಗ ಕಲಿತೆನು ಈಗ ನಿನ್ನ ಜೊತೆಗೆ ಭಾವ ತುಂಬಿ ಕೊಡುವ ಪ್ರೇಮ ಸುಧೆಯೊಳಗೆ…… ೨. ನಿನಗೆ ಬೊಜ್ಜು ಮೂರ್ನಾಲ್ಕು ಗೊಜ್ಜನು ತಿಂದೆ ಏತಕೆ ಆ್ಯಸಿಡಿಟಿ ಕಾರಣ ಹಾಳಾಯಿತು ಹೊಟ್ಟೆ……. ೩. ಯಾಕೆ ಹುಡುಗ ತಂಟೆ ಮಾಡುತಿಯಾ ಒಂಟಿತನಕೆ ಭಂಗ ಮಾಡಬೇಡ ಬಿಟ್ಟು ಹೋಗ ಬೇಡ……… ೪. ನೀ ಕೊಟ್ಟ ಪೆಟ್ಟು ಮರಿಲಿಲ್ಲ ಗುರು ಆಧಾರವಾದೆ ನನ್ನ ಜೀವನದ ಬಂಡಿ ಸಾಗಿಸಲು….. ********* ರೇಖಾ ವಿ ಕಂಪ್ಲಿ

ಕಾವ್ಯಯಾನ

ತಿಪ್ಪೆಗುಂಡಿಯಲ್ಲಿ ಮಗು ಫಾಲ್ಗುಣ ಗೌಡ ಅಚವೆ ಅಲ್ಲಿ ಮುರ್ಕಿಯಲ್ಲಿರುವತಿಪ್ಪೆಗುಂಡಿಯಲ್ಲಿ ಎಸೆದು ಹೋಗಿದ್ದಾಳೆಇದೀಗ ಎಂಬಂತೆ ಒಂದು ಮಗು. ನವೆಂಬರ್ ಬೆಳಗಿನ ಚುಮು ಚುಮುಚಳಿಯಲ್ಲಿ ಅಮ್ಮನ ಮಡಿಲಲ್ಲಿರಬೇಕಾದಂತೆಅಲ್ಲೇ ಗುಲ್ ಮೋಹರ್ ಮರಗಳಲ್ಲಿಹೊಡೆದು ಕೂಡ್ರಿಸಿದಂತೆಬೆಳ್ಳಕ್ಕಿಗಳು ಸಣ್ಣಗೆ ಮುಸುಗುತ್ತಿವೆ. ಗಸ್ತು ತಿರುಗುವ ಇರುವೆಗಳುಯಾರನ್ನೋ ಕರೆತರಲು ಹೊರಟಂತೆಎಲ್ಲಿಗೋ ಪಯಣ ಹೊರಟಿವೆ. ತುಸು ತಡವಾಗಿ ವಾಕಿಂಗ್ ಹೊರಟವರುಮಂಕಿ ಕ್ಯಾಪ್ ಬಿಟ್ಟು ಬಂದವರಂತೆತಡವರಿಸುತ್ತ ಎದೆಗೆ ಕೈ ಕಟ್ಟಿಕೊಂಡುಹೊರಡುವ ಸನ್ನಾಹದಲ್ಲಿಅವರದೇ ರಾತ್ರಿಯಹಳಸಿದ ಕನಸುಗಳ ಜೊತೆಗೆ. ಹಾಸಿಗೆ ಮಡಚಿಟ್ಟು ಆಗಸಮುಖ ತೊಳೆದು ಕೊಳ್ಳುತ್ತಿದೆಮೋಡಗಳ ಮರೆಯಲ್ಲಿಬೆಳಗಿನ ಕೆಲಸಕ್ಕೆ ತಡವಾಯಿತೆಂಬರಾತ್ರಿ ನರಳಿಕೆಯ ಮುಖ […]

ಕಾವ್ಯಯಾನ

ದೂರದ ಊರು ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ […]

ಕಾವ್ಯಯಾನ

ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಶೀಲಾ ಭಂಡಾರ್ಕರ್ ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ, ಶೂನ್ಯವಾಗಿದ್ದ, ಏಕಾಂಗಿ ಬದುಕಿನೊಳಗೆ, ಒಮ್ಮೆಲೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸಿದ ಹಾಗೆ. ಛತ್ರಿಯನ್ನು ಮನೆಯಿಂದ ತರುವುದರೊಳಗೆ ತಂದರೂ ಬಿಚ್ಚುವುದರೊಳಗೆ ಅಥವಾ ಹಾಗೇ ಸುಮ್ಮನೆ ತೋಯುವುದು ಕೂಡ ಅಪ್ಯಾಯವೆನಿಸುವ ಹಾಗೆ ಭೋರೆಂದು ಸುರಿಸುರಿದು ಬಟ್ಟೆಗಳ ಮೇಲೆ, ಮುಚ್ಚದ ಅಂಗಾಂಗಗಳ ಮೇಲೆ, ಕಣ್ಣುಗಳೊಳಗೆ, ಕಿವಿಗಳಲ್ಲಿ, ಮುಟ್ಟಲಾಗದ ದೇಹದ ಸಂಧಿಗೊಂದಿಗಳಲ್ಲಿ, ದಾರಿ ಹುಡುಕುತ್ತಾ, ನುಸುಳಿದಂತೆ ಬಂದು ಬಿಡುತ್ತಾರೆ […]

ಕಾವ್ಯಯಾನ

ನಿನ್ನ ಹುಡುಕಾಟದಲ್ಲಿ ನಾಗರಾಜ ಹರಪನಹಳ್ಳಿ ಉರಿ ಉರಿ ಬಿಸಿಲು ಎಲ್ಲಿ ಹುಡುಕಲಿ ಪ್ರೇಮವ ತಕ್ಷಣ ಕಂಡದ್ದು ನಿನ್ನ ಮೊಗದ ಮುಗುಳ್ನೆಗೆ ಆಸೆಯ ಬೆನ್ನು ಹತ್ತಿದೆ ಓಡಿದೆ ಓಡಿದೆ ದಣಿವರಿಯದೆ ಓಡಿದೆ ಕೊನೆಗೆ ಸಿಕ್ಕದ್ದು ದುಃಖ ಇನ್ನೆನು‌ ಮುಗಿಯಿತು ಅನ್ನುವಾಗ ಕಂಡದ್ದು ನಿನ್ನ ಮುಖದ ಮಂದಹಾಸ ಮೋಕ್ಷವನ್ನೇನು ಹುಡುಕಿ ಹೊರಡಲಿಲ್ಲ ನಾನು ಪ್ರೀತಿಯ ಹುಡುಕಿ ಹೊರಟಿದ್ದು ನಿಜ , ಆದರೆ ನೀ ಹೇಳಿದ ಬಯಲಿನಂತಹ ಪ್ರೀತಿ‌ ಈ ಹುಲುಮಾನವರಿಗೆ ಅರ್ಥವಾದೀತು ಹೇಗೆ ಗೌತಮ ಸಾವಿಲ್ಲದ ಮನೆಯ ಸಾಸಿವೆ ತರಲು […]

ಕಾವ್ಯಯಾನ

ಎಂದೂ ಮರೆಯದಾ ಗುರುತು ರಜಿಯಾ ಕೆ.ಬಾವಿಕಟ್ಟೆ ಕಡಲ ಮೌನದಲಿ ನೆಮ್ಮದಿಯ ಕಾಣುವ ಭರವಸೆಯ ನಿರಾಳದಿ ದಿಟ ದಾವಂತದಲಿ ಎಷ್ಟೋ ಕನಸುಗಳು ಆಸೆಗಳು ಮಡಿಲಿಗಂಟ್ಟಿದ್ದವು. ಸಂತಸದ ಮನವು ಬಾನು ಭೂವಿಗಳ ಅಂತರವೇ ಲೆಕ್ಕಿಸದಷ್ಟು ಸಂತೋಷದ ದಿನಗಳು ಅಪಾರತರದಲ್ಲಿದ್ದವು. . ದಿನದಿನವು ಕಳೆದಂತೆ ಕರಾಳತೆಯ ಕಹಳೇಗಳು ಬೆನ್ನ ಹಿಂದೆಯೇ ಬೆನ್ನಟ್ಟಿ ಹೊರಟುನಿಂತಿದ್ದವು. ಆಗಾಧತೆಯ ಖುಷಿಗಳೆಲ್ಲ ಕಳೆದು ಬರೀ ಸಾಲು ಸಾಲು ಸಮಾಧಿಯ ನಿಟ್ಟುಸಿರಿಗೆ ನನ್ನ ಜೊತೆ ಜೊತೆಗಿದ್ದ ಅಣ್ಣತಮ್ಮಂದಿರನೇ ಆ ವಿಧಿ ಬಲಿ ಪಡೆದು ನನ್ನ ನನ್ನಮ್ಮನ ಒಂಟಿಯಾಗಿಸಿದ್ದವು. ಐವರ […]

ಕಾವ್ಯಯಾನ

ಕರೆಯದೆ ಬರುವ ಅತಿಥಿ ಚೇತನಾ ಕುಂಬ್ಳೆ ಕರೆಯದೆ ಬರುವ ಅತಿಥಿ ನೀನು ಕರೆದರೂ ಕಿವಿ ಕೇಳಿಸದವನು ಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ ಯಾವಾಗ ಹೇಗೆ ಯಾಕೆ ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ ನೀನು ಬರುವೆಯೆಂದು ಗೊತ್ತಿಲ್ಲ ನನಗೆ ಮುನ್ಸೂಚನೆ ನೀಡದೆ ಬರುವೆ ನೀನು ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ ಒಡೆದು ನುಚ್ಚುನೂರು ಮಾಡುವೆ ಸಣ್ಣಪುಟ್ಟ ಸಂತೋಷಗಳನ್ನು ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಮನದ ತುಂಬ ವೇದನೆ ನೀಡಿ ಹಿರಿಯರೆಂದೋ ಕಿರಿಯರೆಂದೋ […]

ಕಾವ್ಯಯಾನ

ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******

Back To Top