ಕಾವ್ಯಯಾನ

ನಿನ್ನ ಹುಡುಕಾಟದಲ್ಲಿ

Four Rock Formation

ನಾಗರಾಜ ಹರಪನಹಳ್ಳಿ

ಉರಿ ಉರಿ ಬಿಸಿಲು
ಎಲ್ಲಿ ಹುಡುಕಲಿ ಪ್ರೇಮವ
ತಕ್ಷಣ ಕಂಡದ್ದು
ನಿನ್ನ ಮೊಗದ ಮುಗುಳ್ನೆಗೆ


ಆಸೆಯ ಬೆನ್ನು ಹತ್ತಿದೆ
ಓಡಿದೆ ಓಡಿದೆ
ದಣಿವರಿಯದೆ ಓಡಿದೆ
ಕೊನೆಗೆ ಸಿಕ್ಕದ್ದು ದುಃಖ
ಇನ್ನೆನು‌ ಮುಗಿಯಿತು ಅನ್ನುವಾಗ
ಕಂಡದ್ದು ನಿನ್ನ ಮುಖದ
ಮಂದಹಾಸ


ಮೋಕ್ಷವನ್ನೇನು ಹುಡುಕಿ
ಹೊರಡಲಿಲ್ಲ ನಾನು
ಪ್ರೀತಿಯ ಹುಡುಕಿ ಹೊರಟಿದ್ದು
ನಿಜ , ಆದರೆ
ನೀ ಹೇಳಿದ ಬಯಲಿನಂತಹ
ಪ್ರೀತಿ‌ ಈ ಹುಲುಮಾನವರಿಗೆ
ಅರ್ಥವಾದೀತು ಹೇಗೆ ಗೌತಮ


ಸಾವಿಲ್ಲದ ಮನೆಯ ಸಾಸಿವೆ
ತರಲು ಸೋತದ್ದು ನಿಜ
ನನ್ನ ತಾಯಿ
ಆದರೆ ; ನಿನ್ನ ಒಗಟಿನ ಮಾತು
ನಿಶಬ್ದ ಮೌನ ಅರ್ಥವಾದೀತು ಹೇಗೆ ಬುದ್ಧದೇವ


ಮುಪ್ಪು , ಯೌವ್ವವ ; ಹಸಿವು
ನಿನಗೆ ಅರ್ಥವಾದಂತೆ
ಈ ಜಗದ ಕೇವಲ ಮನುಷ್ಯರಿಗೆ ಅರ್ಥವಾಗದವು
ಕಾರಣ ಅವರು
ಬದುಕಿನ ಅಶ್ವಾಶತೆಯ ಅರಿಯದ ಮರೆವಿನ ಮಹಾಪುರುಷರು


ಬುದ್ಧ ನಾನಿನ್ನು ಬರುತ್ತೇನೆ
ಸಾಕಾಗಿದೆ ಈ‌ ಜಗದ ಜಂಜಡ
ನನಗೆ ಏಕಾಂತದ ಅರ್ಥ ಹುಡುಕಬೇಕಿದೆ
ಜನರ ಗೊಂದಲಗಳ ಅರಿಯುತ್ತಲೇ…
*********

3 thoughts on “ಕಾವ್ಯಯಾನ

    1. ಬುದ್ದನ ಅಗಮ್ಯ ಪ್ರೇಮವ ಅರಿತವರಾರು?? ಸುಂದರವಾಗಿದೆ

  1. ಆಸೆ , ಬದುಕು, ವೈರಾಗ್ಯ , ನಶ್ವರತೆ
    ಮನುಷ್ಯರ ಕಾಡುತ್ತಲೇ ಇರುತ್ತವೆ. ಆದರೆ ಅವುಗಳ ನಿಭಾಯಿಸುವ ರೀತಿ ಮಾತ್ರ ಭಿನ್ನ. ಏಕಾಂತದಲ್ಲೇ ಬದುಕು ಇದೆ.
    ಇಷ್ಟವಾಯ್ತು ಕವನ

Leave a Reply

Back To Top