ಎಂದೂ ಮರೆಯದಾ ಗುರುತು
ರಜಿಯಾ ಕೆ.ಬಾವಿಕಟ್ಟೆ
ಕಡಲ ಮೌನದಲಿ ನೆಮ್ಮದಿಯ
ಕಾಣುವ ಭರವಸೆಯ ನಿರಾಳದಿ
ದಿಟ ದಾವಂತದಲಿ ಎಷ್ಟೋ ಕನಸುಗಳು ಆಸೆಗಳು ಮಡಿಲಿಗಂಟ್ಟಿದ್ದವು.
ಸಂತಸದ ಮನವು ಬಾನು ಭೂವಿಗಳ ಅಂತರವೇ ಲೆಕ್ಕಿಸದಷ್ಟು ಸಂತೋಷದ ದಿನಗಳು ಅಪಾರತರದಲ್ಲಿದ್ದವು. .
ದಿನದಿನವು ಕಳೆದಂತೆ ಕರಾಳತೆಯ ಕಹಳೇಗಳು ಬೆನ್ನ
ಹಿಂದೆಯೇ ಬೆನ್ನಟ್ಟಿ ಹೊರಟುನಿಂತಿದ್ದವು.
ಆಗಾಧತೆಯ ಖುಷಿಗಳೆಲ್ಲ ಕಳೆದು ಬರೀ ಸಾಲು ಸಾಲು ಸಮಾಧಿಯ ನಿಟ್ಟುಸಿರಿಗೆ
ನನ್ನ ಜೊತೆ ಜೊತೆಗಿದ್ದ ಅಣ್ಣತಮ್ಮಂದಿರನೇ ಆ ವಿಧಿ ಬಲಿ ಪಡೆದು ನನ್ನ ನನ್ನಮ್ಮನ ಒಂಟಿಯಾಗಿಸಿದ್ದವು.
ಐವರ ಒಕ್ಕೂಟದಲಿ ನಾನೋಬ್ಬಳೇ ಪ್ರೀತಿಯ ಕುಸುಮ ನನ್ನನಗಲಿ ದೂರ ದೂರ ಹೋದರೆಲ್ಲ ಒಂದೇ ಕ್ಷಣ ಕ್ಷಣದಲಿ ನಿಮಗಿದು ಸರಿನಾ?
ನನ್ನ ಹೆತ್ತ ಒಡಲಿಗೆ ಯಾರು
ಸಾಂತ್ವನ ನೀಡುವರು ಹೇ ದೈವವೇ ? ತಾಯಿಯ ನೋವಿಗೆ ನಾ ಅದೆಷ್ಟೋ ಸಹಕರಿಸಲಿ.
ಮಸಣ ಮಾಳಿಗೆಯನ್ನೇ ಸೃಷ್ಟಿಸಿದೆಯಲ್ಲಾ ಈ ಬದುಕಲಿ.
ಅಳಿದುಳಿದ ಈ ಬದುಕಿಗೆ ಇನ್ನೂ ಯಾಕೇ ಬದುಕುವ ಹಂಗು ನೀನೇ ಕೊಟ್ಟ ಖುಷಿಗೆ ನೀನೇ ಕೊಳ್ಳಿ ಇಟ್ಟ ಮೇಲೆ
ಇನ್ನೂ ಯಾಕೇ ಈ ಉಸಿರು
ಹರಸಿ ಕರೆದೊಯ್ದದರು ಸರಿಯೇ ಇನ್ನೂ ಒಲ್ಲದ ಈ ಜೀವನ.
ಆ ಕಡಲ ಮೌನದಲಿ ನಾ
ನಿತ್ಯವೂ ರೋಧಿಸುವೇ ಕಂಬನಿಯನು ಧಾರೇ ನೀಡುವೆ
ಅದು ಎಂದೂ ನನ್ನ ಕತೆಗೆ
ಉತ್ತರಿಸಲೇ ಇಲ್ಲ .
ನನ್ನಾಧಿ ಒಡಲಿಗೆ ಕಡಲು
ಭೊರ್ಗರಿಸಿ ಒಡೆಯುದಷ್ಟೇ | ವಿನಹ ನನ್ನ ಪ್ರಶ್ನೇಗೆ ಎಂದೂ
ಮೌನ ಮುರಿಯಲೇ ಇಲ್ಲ .
ಇನ್ನೂ ನಾ ಜೀವಂತ ಶಿಲೆ ಅಷ್ಟೇ
ಹೊರತು ಭಾವಗಳನು ಸಂಭ್ರಮಿಸೊ ಸಡಗರಿಸೂ ಮನವಾಗಲಾರೆನೂ ಎಂದಿಗೂ
ಎಂದೆಂದಿಗೂ ……
ಪದ್ಮರಾಗ…..
******
ಒಳ್ಳೆ ಪದ್ಯ raziya