ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸೇನಾನಿ ದೇಶ ಭಕ್ತ ಲಿಂಗೈಕ್ಯ ಶ್ರೀ ರತ್ನಪ್ಪಣ್ಣ ಕುಂಬಾರ ರತ್ನಪ್ಪ ಭರಮಪ್ಪ ಕುಂಬಾರ (ದೇಶಭಕ್ತ ರತ್ನಪ್ಪಣ್ಣ ಕುಂಬಾರ) ಅವರು ಮಹಾರಾಷ್ಟ್ರದ ಇಚಲಕರಂಜಿಯ ಪ್ರಸಿದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕಾರಣಿಯಾಗಿದ್ದರು. ದಕ್ಷಿಣ ಭಾರತದ ಹಲವು ಸಂಸ್ಥಾನಗಳ ವಿಲೀನಕ್ಕಾಗಿ ಶ್ರಮಿಸಿದ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದೂ ಕರೆಯಲಾಗುತ್ತದೆ.  ಡಾ. ರತ್ನಪ್ಪ ಕುಂಬಾರ ಅವರ ಜೀವನದ   ಪ್ರಮುಖ ವಿವರಗಳು .ಜನನ: 15 ಸೆಪ್ಟೆಂಬರ್ 1909, ನಿಮ್ಶಿರ್ಗಾಂವ್ (ಮಹಾರಾಷ್ಟ್ರ).ನಿಧನ: 23 ಡಿಸೆಂಬರ್ 1998 (ವಯಸ್ಸು 89). ಬಿರುದು: ದೇಶಭಕ್ತ. ರಾಜಕೀಯ ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.   ಸಾಧನೆಗಳು ಮತ್ತು ಕೊಡುಗೆಗಳು ಸಂವಿಧಾನಕ್ಕೆ ಸಹಿ: ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಭಾರತದ ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕಿದ ಮಹನೀಯರಲ್ಲಿ ಇವರೂ ಒಬ್ಬರು. ಸ್ವಾತಂತ್ರ್ಯ ಹೋರಾಟ: 1942 ರ ಆಗಸ್ಟ್ 9 ರಂದು ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಹಕಾರಿ ರಂಗ:  ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಹಕಾರಿ ರಂಗದ ನಕ್ಷತ್ರವಾಗಿ ಬೆಳಗಿದ ಇವರು, ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಹಕಾರಿ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು. ಪದ್ಮಶ್ರೀ ಪ್ರಶಸ್ತಿ: ಇವರ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1985 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ರಾಜಕೀಯ ಸೇವೆ: ಇವರು ಸಂಸತ್ ಸದಸ್ಯರಾಗಿ (MP) ಹಾಗೂ ಮಹಾರಾಷ್ಟ್ರ ಸರ್ಕಾರದ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.  ಸ್ವಾತಂತ್ರ್ಯಹೋರಾಟ ಡಾ. ರತ್ನಪ್ಪಣ್ಣ ಕುಂಬಾರ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಅತ್ಯಂತ ಸಕ್ರಿಯ ಮತ್ತು ಪ್ರಭಾವಶಾಲಿ ಪಾತ್ರ ವಹಿಸಿದ್ದರು. ಅವರ ಪ್ರಮುಖ ಸ್ವಾತಂತ್ರ್ಯ ಹೋರಾಟದ ವಿವರಗಳು : 1. ಬ್ರಿಟಿಷ್ ಮತ್ತು ರಾಜಪ್ರಭುತ್ವದ ವಿರುದ್ಧ ಹೋರಾಟ 2. ಕೊಲ್ಹಾಪುರ ಪ್ರಜಾ ಪರಿಷತ್: ರತ್ನಪ್ಪಣ್ಣನವರು ಕೊಲ್ಹಾಪುರ ಸಂಸ್ಥಾನದಲ್ಲಿ ರಾಜಪ್ರಭುತ್ವ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ‘ಕೊಲ್ಹಾಪುರ ರಾಜ್ಯ ಪ್ರಜಾ ಪರಿಷತ್’ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 3. ಪ್ರಜಾಪ್ರಭುತ್ವಕ್ಕಾಗಿ ಆಗ್ರಹ: ಸಂಸ್ಥಾನದ ಜನರಿಗೆ ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಸಿಗಬೇಕೆಂದು ಅವರು ನಿರಂತರ ಚಳವಳಿ ನಡೆಸಿದರು. 4. . ಕ್ವಿಟ್ ಇಂಡಿಯಾ ಚಳವಳಿ (1942)ಭೂಗತ ಹೋರಾಟ: 1942ರಲ್ಲಿ ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಘೋಷಿಸಿದಾಗ, ರತ್ನಪ್ಪಣ್ಣನವರು ಅದರಲ್ಲಿ ಸಕ್ರಿಯವಾಗಿ ಧುಮುಕಿದರು. ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಲು ಆದೇಶ ಹೊರಡಿಸಿದಾಗ, ಇವರು ಸುಮಾರು 6 ವರ್ಷಗಳ ಕಾಲ ಭೂಗತರಾಗಿ (Underground) ಹೋರಾಟ ಮುಂದುವರಿಸಿದರು. 5. ಸಶಸ್ತ್ರ ಮತ್ತು ಸೈದ್ಧಾಂತಿಕ ಪ್ರತಿರೋಧ: ಭೂಗತರಾಗಿದ್ದ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ಕಣ್ಣು ತಪ್ಪಿಸಿ ಯುವಕರನ್ನು ಸಂಘಟಿಸುವುದು, ಕ್ರಾಂತಿಕಾರಿ ಪತ್ರಿಕೆಗಳನ್ನು ಹಂಚುವುದು ಮತ್ತು ಸರ್ಕಾರದ ಖಜಾನೆಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟಿಸುವುದರಲ್ಲಿ ಇವರು ಮುಂಚೂಣಿಯಲ್ಲಿದ್ದರು. ಇವರನ್ನು ಹಿಡಿದುಕೊಟ್ಟವರಿಗೆ ಬ್ರಿಟಿಷ್ ಸರ್ಕಾರ ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿತ್ತು. 6. ಸಂಸ್ಥಾನಗಳ ವಿಲೀನ ಮತ್ತು “ದಕ್ಷಿಣ ಭಾರತದ ಪಟೇಲ್” ಎಂದು ಜನರಿಂದ ಅಭಿಮಾನದಿಂದ ಕರೆಯಿಸಿ ಕೊಂಡರು. 7. ಭಾರತ ಒಕ್ಕೂಟಕ್ಕೆ ಸೇರ್ಪಡೆ:  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ (1947) ಕೊಲ್ಹಾಪುರ, ಸಾಂಗ್ಲಿ ಸೇರಿದಂತೆ ದಕ್ಷಿಣದ ಹಲವು ದೇಶಿ ಸಂಸ್ಥಾನಗಳು ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ನಿರಾಕರಿಸುತ್ತಿದ್ದವು. 8 ಕಠಿಣ ನಿರ್ಧಾರ: ರತ್ನಪ್ಪಣ್ಣನವರು ಈ ಸಂಸ್ಥಾನಗಳ ರಾಜರ ವಿರುದ್ಧ ಪ್ರಬಲ ಜನಪ್ರತಿಭಟನೆಗಳನ್ನು ಸಂಘಟಿಸಿ, ಅವರು ಭಾರತದೊಂದಿಗೆ ವಿಲೀನವಾಗುವಂತೆ ಒತ್ತಡ ಹೇರಿದರು. ಈ ಅದ್ಭುತ ಚಾಕಚಕ್ಯತೆ ಮತ್ತು ಸಾಹಸಕ್ಕಾಗಿ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿನ ಕೊಡುಗೆಗಳು ಸಂವಿಧಾನ ರಚನೆಯಲ್ಲಿನ ಪಾತ್ರದ ವಿವರಗಳು ಭಾರತದ ಸಂವಿಧಾನ ರಚನೆಯಲ್ಲಿ ಡಾ. ರತ್ನಪ್ಪಣ್ಣ ಕುಂಬಾರ ಅವರು ಅತ್ಯಂತ ಗೌರವಾನ್ವಿತ ಮತ್ತು ಐತಿಹಾಸಿಕ ಪಾತ್ರವನ್ನು ವಹಿಸಿದ್ದರು.  ದೇಶಿ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸುವಲ್ಲಿ ಅವರು ತೋರಿದ ನಾಯಕತ್ವವನ್ನು ಗುರುತಿಸಿ, ಅವರನ್ನು ಸಂವಿಧಾನ ರಚನಾ ಸಭೆಯ (Constituent Assembly) ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.  ಸಂವಿಧಾನ ರಚನೆಯಲ್ಲಿ ಅವರ ಪ್ರಮುಖ ಕೊಡುಗೆಗಳು ಮತ್ತು ಪಾತ್ರದ ವಿವರಗಳು  1. ಸಂವಿಧಾನದ ಮೂಲ ಪ್ರತಿಯ ಸಹಿ ಒಕ್ಕೂಟದ ಸದಸ್ಯರುಭಾರತದ ಸಂವಿಧಾನದ ರಚನೆ ಪೂರ್ಣಗೊಂಡ ನಂತರ, 24 ಜನವರಿ 1950 ರಂದು ಸಂವಿಧಾನದ ಅಂತಿಮ ಕರಡು (Final Draft) ಮತ್ತು ಮೂಲ ಪ್ರತಿಯ ಮೇಲೆ ಸಹಿ ಹಾಕಿದ ಭಾರತದ ಪ್ರಮುಖ ನಾಯಕರಲ್ಲಿ ರತ್ನಪ್ಪಣ್ಣ ಕುಂಬಾರ ಅವರೂ ಒಬ್ಬರು. ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ದೇಶದ ಅತ್ಯುನ್ನತ ಕಾನೂನು ಗ್ರಂಥಕ್ಕೆ ಸಹಿ ಹಾಕಿದ ಹೆಮ್ಮೆ ಇವರದ್ದಾಗಿದೆ.  ದೇಶಿ ಸಂಸ್ಥಾನಗಳ ಜನರ ಧ್ವನಿಯಾಗಿ ಪ್ರಾತಿನಿಧ್ಯಸಂಸ್ಥಾನಗಳ ಜನರ ಹಕ್ಕುಗಳು:  ಸಂವಿಧಾನ ರಚನಾ ಸಭೆಯಲ್ಲಿ ಬ್ರಿಟಿಷ್ ಭಾರತದ ಪ್ರಾಂತ್ಯಗಳ ಪ್ರತಿನಿಧಿಗಳ ಜೊತೆಗೆ ದೇಶಿ ಸಂಸ್ಥಾನಗಳ (Princely States) ಪ್ರತಿನಿಧಿಗಳೂ ಇದ್ದರು.  ರತ್ನಪ್ಪಣ್ಣನವರು ಕೊಲ್ಹಾಪುರ ಮತ್ತು ದಕ್ಷಿಣದ ಇತರ ಸಂಸ್ಥಾನಗಳ ಲಕ್ಷಾಂತರ ಸಾಮಾನ್ಯ ಜನರ ಧ್ವನಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಜಾಪ್ರಭುತ್ವದ ವಿಕೇಂದ್ರೀಕರಣ:  ರಾಜಪ್ರಭುತ್ವದ ಆಡಳಿತದಲ್ಲಿದ್ದ ಜನರಿಗೆ ಸಮಾನ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಸೌಲಭ್ಯಗಳು ಸಿಗಬೇಕೆಂದು ಅವರು ಪ್ರತಿಪಾದಿಸಿದರು. .ಕರಡು ಪರಿಶೀಲನೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುವಿಕೆ ಸಂವಿಧಾನ ರಚನಾ ಸಭೆಯ ವಿವಿಧ ಸಮಿತಿಗಳ ಚರ್ಚೆಗಳಲ್ಲಿ ಭಾಗವಹಿಸಿದ ಇವರು, ಭಾರತದಂತಹ ವೈವಿಧ್ಯಮಯ ದೇಶಕ್ಕೆ ಬಲಿಷ್ಠ ಒಕ್ಕೂಟ ವ್ಯವಸ್ಥೆ (Federal Structure) ಎಷ್ಟು ಮುಖ್ಯ ಎಂಬುದರ ಕುರಿತು ತಮ್ಮ ನುಡಿಗಟ್ಟುಗಳನ್ನು ಹಂಚಿಕೊಂಡಿದ್ದರು. ಹಿಂದುಳಿದ ವರ್ಗಗಳು, ರೈತರು ಮತ್ತು ಶ್ರಮಿಕ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಸಂವಿಧಾನದಲ್ಲಿ ಸೂಕ್ತ ಅವಕಾಶಗಳಿರಬೇಕು ಎಂದು ಅವರು ಆಗ್ರಹಿಸಿದ್ದರು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಕೇವಲ ಸಂವಿಧಾನ ಬರೆಯುವುದಷ್ಟೇ ಅಲ್ಲದೆ, ಸ್ವಾತಂತ್ರ್ಯದ ನಂತರ ದೇಶದ ಮೊದಲ ಲೋಕಸಭೆಯ (1952-1957) ಸಂಸದರಾಗಿ (MP) ಆಯ್ಕೆಯಾಗಿ, ಸಂವಿಧಾನದ ಆಶಯಗಳನ್ನು ಕಾನೂನು ರೂಪದಲ್ಲಿ ಜಾರಿಗೆ ತರಲು ಶ್ರಮಿಸಿದರು.   ರತ್ನಪ್ಪಣ್ಣ ಕುಂಬಾರ ಅವರು ಸಂವಿಧಾನ ಸಭೆಯ ನಂತರ ದೇಶದ ಮೊದಲ ಲೋಕಸಭೆ ಸದಸ್ಯರಾಗಿ (MP) ಮಾಡಿದ ಅನೇಕ ಕೆಲಸಗಳ  ಲೆಕ್ಕ ಇಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಇಚಲಕರಂಜಿಯನ್ನು “ಮ್ಯಾಂಚೆಸ್ಟರ್ ಆಫ್ ಮಹಾರಾಷ್ಟ್ರ” ಆಗಿ ಬದಲಾಯಿಸಿದ ಅವರ ಸಹಕಾರಿ ಚಳವಳಿಯ  ದೂರದೃಷ್ಟಿ ರತ್ನಪ್ಪಣ್ಣನವರು ಸಹಕಾರಿ ರಂಗದಲ್ಲಿ ಕ್ರಾಂತಿ ಉಂಟು ಮಾಡಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿಯ (ಗಂಗಾನಗರ) ಕಬ್ನೂರ್‌ನಲ್ಲಿ ಈ ಬೃಹತ್ ಕಾರ್ಖಾನೆಯನ್ನು 1954 ರಲ್ಲಿ ಸ್ಥಾಪಿಸಿದರು.  ವಾಣಿಜ್ಯ ಕಾಲೇಜು ಸ್ಥಾಪನೆ. ಇಂತಹ ಅಪರೂಪದ ಅಪ್ಪಟ ಬಸವ ಭಕ್ತ ಸ್ವತಂತ್ರ ಸೇನಾನಿ ದೇಶಭಕ್ತ ಶ್ರೀ ರತ್ನಪ್ಪಣ್ಣ ಕುಂಬಾರ ಸಾವಿಲ್ಲದ ಶರಣರು  ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಇತರೆ, ಸಿನೆಮಾ

“ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಗೊರೂರು ಅನಂತರಾಜು

ಸಿನಿಮಾ ಸಂಗಾತಿ ಗೊರೂರು ಅನಂತರಾಜು “ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಅತ್ಯಂತ ಸೂಕ್ಷ್ಮ ಕಥಾನಕಗಳ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವ ಸಿದ್ದು ಪೂರ್ಣಚಂದ್ರ ಇದೀಗ ಪುಟ್ಟಣ್ಣನ ಕತ್ತೆ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರ ಈಗ ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಸಿನಿಮೋತ್ಸವದಲ್ಲಿ  ಪುಟ್ಟಣ್ಣನ ಕತ್ತೆ ಚಿತ್ರ ಪ್ರದರ್ಶನಗೊಳ್ಳಲಿದೆ. ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಜಾಗತಿಕ ಮಟ್ಟದ ಘನತೆ ಗೌರವವಿದೆ. ಈ ಸಿನಿಮೋತ್ಸವಕ್ಕೆ ಸಿನಿಮಾ ಆಯ್ಕೆಯಾಗುವುದು ಮಹತ್ವದ್ದಾಗಿದೆ.   ಜಾಗತಿಕ ಮಟ್ಟದ ತುರುಸಿನ ಸ್ಪರ್ಧೆ ದಾಟಿ ಆಯ್ಕೆಯಾಗುವಲ್ಲಿ  ಗುಣಮಟ್ಟದ ಕಂಟೆಂಟು ಹೊಂದಿರಬೇಕು. ಈ ನಿಟ್ಟಿನಲ್ಲಿ ಕನ್ನಡ ಸಿನಿಮಾ ಪುಟ್ಟಣ್ಣನ ಕತ್ತೆ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೆ  ಹೆಮ್ಮೆಯ  ಸಂಗತಿಯಾಗಿದೆ. ಕತ್ತೆಯೊಂದು ಕಥೆಯಲ್ಲಿ ಕೇಂದ್ರವಾಗಿ ಚಿತ್ರ ರೂಪುಗೊಂಡಿದೆ.   ಬೆಂಗಳೂರಿನಲ್ಲಿ  ಕತ್ತೆ ಹಾಲು ಮಾರುವವರು ಬರುತ್ತಿರುತ್ತಾರೆ. ಹೀಗೆ ಹಳ್ಳಿಯೊಂದರಿಂದ  ಕತ್ತೆಯೊಂದಿಗೆ ಪಟ್ಟಣ ಸೇರಿದವನ ಸುತ್ತ ಘಟಿಸುವ ಆಸಕ್ತಿದಾಯಕ ಸನ್ನಿವೇಶಗಳು ಈ ಸಿನಿಮಾದ ಆಂತರ್ಯದಲ್ಲಿದೆ. ಭೀಮೇಶ್ ಗೌಡ ಈ ಕಥನದ ಆತ್ಮದಂಥಾ ಪುಟ್ಟಣ್ಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೀಶ್ ಆರ್ಯನ್ ಈ ಸಿನಿಮಾದ ನಾಯಕರಾಗಿ ಸಂಕೀರ್ಣ ಪಾತ್ರದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ತನ್ಮಯ್ ಎಸ್ ಗೌಡ ನಿರ್ಮಾಣ ಮಾಡಿರುವರು. ಸಿದ್ದು ಪೂರ್ಣಚಂದ್ರ ಕಥೆ ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವರು.  ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಲಕ್ಕಿ ಶಂಕರ್, ವಾಸು, ರಾಕಿ, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮತ್ತು  ದೀಪು ಸಿ.ಎಸ್  ಅವರ ಸಂಕಲನ ಈ ಚಿತ್ರಕ್ಕಿದೆ. -ಗೊರೂರು ಅನಂತರಾಜು,ಹಾಸನ.9449462879

“ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಗೊರೂರು ಅನಂತರಾಜು Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಅವರ ಗಜಲ್ ಅನುದಿನವೂ ನಿನ್ನ ಜೊತೆ ಕಾಲ ಕಳೆಯಲು ಹಂಬಲಿಸುತಿರುವೆನಿನ್ನಯ ಮಡಿಲಲಿ ಮಗುವಾಗಿ ಮಲಗಲು ಹಂಬಲಿಸುತಿರುವೆ ದೂರವನ್ನು ದೂರಲಾಗದೆ ಮಂಡಿಯೂರಿ ಕುಳಿತಿರುವೆ ಉಸಿರೆ  ನಮ್ಮ ಮೈಮನಗಳ ಸಾನಿಧ್ಯದಿ ಪೂಜಿಸಲು ಹಂಬಲಿಸುತಿರುವೆ ಏಳೇಳು ಲೋಕ ಕೇಳುವಂತೆ ಕೂಗುವ ಆಸೆ ಲವ್ ಯು ಎಂದುಜಗದಗಲಕೂ ಆರುಮೆ ಕಂಪನು ಹರಡಲು ಹಂಬಲಿಸುತಿರುವೆ ಬೇಬಿಮಾ ನಿನ್ನ ಹೆಸರನೆ ಜಪಿಸುತಿರುವೆ ಅವನಿಯಲಿ ಜೀವಿಸಲುಹಗಲಿರುಳು ನಾನು ಉಸಿರಾಡುವ ಉಸಿರಲು ಹಂಬಲಿಸುತಿರುವೆ ಅಡಗಿದೆ ಕಾಲದ ತೆಕ್ಕೆಯಲಿ ಕಿವಿಗೊಡು ಹೃದಯದ ರಿಂಗಣಕೆತನುಮನದಿ ಮಲ್ಲಿಗೆ ಸುಮವಾಗಿ ಅರಳಲು ಹಂಬಲಿಸುತಿರುವೆ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರವಾಹಿ ಸಂಗಾತಿ–43 ಡಾ.ವಿಶ್ವನಾಥ್‌ ಎನ್.‌ ನೇರಳೆಕಟ್ಟೆ ಅರ್ಜುನ ಉವಾಚ ಸೋದರರ ಪ್ರತಾಪದಿಂದ ಪ್ರಜ್ಞಾ ಶೂನ್ಯನಾದ ರಾಮಸೋದರ ಅಮ್ಮನ ಪ್ರಲಾಪವದು ಕುಶನನ್ನು ದಂಗುಬಡಿಸಿತು. ಕಾರಣ ಕೇಳಿದ ಅವಳ ಅಳುವಿಗೆ. ಲವ ಕುದುರೆಯನ್ನು ಕಟ್ಟಿಹಾಕಿದ್ದು, ಸೈನಿಕರು ಯುದ್ಧಕ್ಕೆ ಬಂದದ್ದು, ರಥದಲ್ಲಿ ಕುಶನನ್ನು ಹೊತ್ತೊಯ್ದದ್ದು ಎಲ ್ಲವನ್ನೂ ಹೇಳಿದಳು ಸೀತೆ. ರೋಷ ಹುಟ್ಟಿತು ಕುಶನಲ್ಲಿ. ಕವಚ, ಖಡ್ಗ, ಬಿಲ್ಲು, ಬಾಣ, ಕಿರೀಟ ಎಲ್ಲವನ್ನೂ ತರಹೇಳಿದ ತಾಯಿಯಲ್ಲಿ. ತಂದುಕೊಟ್ಟಳು. ‚ಲವನನ್ನು ಹೊತ್ತೊಯ್ದವನು ಯಾರೇ ಆಗಿದ್ದರೂ ಅವನನ್ನು ಎದುರಿಸಿ, ಲವನನ್ನು ಎದುರಿಸಿಕೊಂಡು ಬರುತ್ತೇನೆ‛ ಎಂದ ಕುಶ ವೀರಭಾವದಲ್ಲಿ ಹೊರಟ. ಸುತನನ್ನು º Àರಸಿ ಕಳುಹಿಸಿಕೊಟ್ಟಳು ಸೀತೆ.ವಾಯುವೇಗದಿಂದ ಹೋದ ಕುಶ ಶತ್ರುW À್ನ ¸ ೆÃನೆಯನ್ನು ಕಾಣುತ್ತಲೇ ಮುನ್ನುಗ್ಗಿದ. ಶತುಘ್ನನ ದಳಪತಿಯ ಮೇಲೆ ಬಾಣಗಳನ್ನು ಒಂದರ ಹಿಂದೆ ಒಂದರAತೆ ಬಿಟ್ಟ. ದಳಪತಿಗೆ ನಗ ಹೆಸರಿನ ತಮ್ಮನೊಬ್ಬನಿದ್ದ. ಅವನು ಕುಶನನ್ನು ಎದುರಿಸುವ ಉತ್ಸುಕತೆ ತೋರಿದ. ಕುಶನ ಬಾಣದ ಹೊಡೆತಕ್ಕೆ ಕೈಗಳನ್ನೂ, ಕಾಲುಗಳನ್ನೂ, ಅಂತಿಮವಾಗಿ ಶಿರವನ್ನೂ ಕಳೆದುಕೊಂಡು ಪ್ರಾಣಬಿಟ್ಟ.ಕ್ರೋಧಭಾವದವನಾದ ಶತ್ರುಘ್ನ. ಒಂಭತ್ತು ಬಾಣಗಳನ್ನು ಏಕಕಾಲಕ್ಕೆ ಪ್ರಯೋಗಿಸಿದ, ಕುಶನ ಮೇಲೆ. ಬಾಣಪುಂಜಗಳು ಪುಡಿಪುಡಿಯಾದವು ಪುಟ್ಟ ಪೋರ ತೋರಿದ ಪರಾಕ್ರಮಕ್ಕೆ. ಕುಶನ ಬಲು ಬಿರುಸಿನ ಬಾಣವದು ಬೀಳಿಸಿತು ಶತ್ರುಘ್ನನನ್ನು ಭೂಮಿಯ ಮೇಲೆ. ಎಲ ್ಲರ ಭುಜಬಲವನ್ನೂ ಮೀರಿನಿಲ್ಲುವ ದಿಟ್ಟತನವನ್ನು ತೋರಿದನಾಗ ರಾಮಸುತ.ಅಷ್ಟರಲ್ಲಿ ಲವನಿಗೆ ಪ್ರಜ್ಞೆ ಬಂತು. ಅಣ್ಣ ತಮ್ಮಂದಿರು ಜೊತೆ ಸೇರಿ ª ÀÄತ್ತೆ ಕುದುರೆಯನ್ನು ಕಟ್ಟಿಹಾಕಿದರು. ಈ ಮೊದಲಿಗಿಂತಲೂ ಹುರುಪಿನಿಂದ ಯುದ್ಧಕ್ಕೆ ಸಿದ್ಧರಾಗಿ ನಿಂತರು.‚ಒಡೆಯಾ, ನಿನ್ನ ಯಜ್ಞದ ಕುದುರೆಯದು ಭೂಮಿಯನ್ನು ವಿಘ್ನವಿಲ್ಲದೆ ಸುತ್ತಾಡಿತು. ಬಳಿಕ ಅದನ್ನು ಲವನೆಂಬ ಬಾಲಕ ಕಟ್ಟಿಹಾಕಿದ. ಬಿಡಿಸುವುದಕ್ಕೆ ಹೋದ ಸೇನೆಯನ್ನು ನಾಶಮಾಡಿದ. ಆಗ ಶತ್ರುಘ್ನ ಅವ£ Àನ್ನು ಸೆರೆಹಿಡಿದು ಕರೆತರುತ್ತಿರಬೇಕಾದರೆ ಯಾರೋ ಒಬ್ಬ ಬಾಲಕ ಬಂದು, ಬಾಣವನ್ನು ಪ್ರಯೋಗಿಸಿ, ನಿನ್ನ ತಮ್ಮ ಶತ್ರುಘ್ನನನ್ನು ರಥದಿಂದ ಬೀಳಿಸಿದ‛ ಎಂಬ ಸಂದೇಶ ರಾಮನನ್ನು v Àಲುಪಿತು.ಶ್ರೀರಾಮ ಆ ಮಾತನ್ನು ನಂಬಲಿಲ್ಲ. ಶತ್ರುಘ್ನನಂತಹ ಬಲಶಾಲಿಯನ್ನು ಗೆಲ್ಲುವವರಿಲ್ಲ ಈ ಲೋಕದಲ್ಲಿ ಎಂಬ ನಂಬಿಕೆ ಅವನದ್ದು. ಹುಸಿ ಸಂದೇಶವಿದು ಎಂದುಕೊAಡ. ಆದರೆ ಅದು ನಿಜವಾದದ್ದು ಎಂದು ತಿಳಿದಾಗ ಪರಮಾಶ್ಚರ್ಯಗೊಂಡ. ಲವಣಾಸುರನೆಂಬ ರಾಕ್ಷಸನನ್ನೇ ಕೊಂದ ಶತ್ರುಘ್ನನಿಗೆ ಬಾಲಕರಿಬ್ಬರು ಸವಾಲಾಗಿ ನಿಂತಿದ್ದಾರೆAದರೆ ಅವರು ಸಾಮಾನ್ಯದವರಲ್ಲ ಎನ್ನುವುದು ಸ್ಪಷ್ಟವಾಯಿತು ಅಂi ÉÆÃಧ್ಯಾಪತಿಗೆ. ಲಕ್ಷö್ಮಣನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟ.ಕಾಲಜಿತುವೆಂಬ ಸೇನಾಧಿಪತಿಯನ್ನು ಜೊತೆಮಾಡಿಕೊಂಡು ಚತುರಂಗ ಬಲ ಸಹಿತನಾಗಿ ಕುಶ ಲವರ ವಿರುದ್ಧದ ಯುದ್ಧಕ್ಕೆ ಬಂದ ಲಕ್ಷö್ಮಣ. ಸಾವಿರ ಆನೆಗಳು. ಅದಕ್ಕೆ ನೂರು ಪಟ್ಟು ಹೆಚ್ಚು ರಥಗಳು. ರಥಗಳ ನೂರು ಪಟ್ಟಿನಷ್ಟು ಕುದುರೆಗಳು. ಕುದುರೆಗಳ ನೂರು ಪಟ್ಟಿನಷ್ಟು ಸೈನಿಕರು. ಇಂತಹ ಒಂದು ¸ ÉÃನೆಯನ್ನು ಹೊಂದಿದವರು ಭ್ರಮಿಗಳು ಎನಿಸಿಕೊಳ್ಳುತ್ತಿದ್ದರು. ಇಂತಹ ಸಾವಿರ ಭ್ರಮಿಗಳನ್ನು ಒಳಗೊಂಡಿತ್ತು ಲಕ್ಷö್ಮಣ ಸಾರಥ್ಯದ ಹಿರಿದು ಸೇನೆ.ಎದುರು ನಿಂತ ಅಗಾಧ ಸೇನೆ ಕುಶ ಲವರ ಕಣ್ಣಿಗೆ ರಾಚಿತು. ಅಮೋಘವಾದ ಅಸ್ತçವೊಂದಿಲ್ಲದೆ ಜಯಿಸುವುದು ಅಸಾಧ್ಯ ಎಂದು ತೋರಿತು ಲವನಿಗೆ. ಸಹೋದರನಲ್ಲಿ ಗುಟ್ಟಾಗಿ ತಾನು ಸೂಂi ÀÄðದೇವನ ಪ್ರಾರ್ಥನೆ ಮಾಡಿ ಕೋದಂಡವನ್ನು ಪಡೆದುಕೊಳ್ಳುವುದಾಗಿ ಹೇಳಿದ. ಪ್ರಾರ್ಥಿಸಿದ. ಲವನ ಮುಗ್ಧಭಕ್ತಿಗೆ ಒಲಿದ ಸೂಂi ÀÄðದೇವ. ದಿವ್ಯಾಸ್ತçವನ್ನು ಲವನಿಗೆ ಕೊಟ್ಟ.ಅದನ್ನು ಸಂತಸದಲ್ಲಿ ಕುಶನಿಗೆ ತೋರಿದ ಲವ. ಅಣ್ಣ ತಮ್ಮಂದಿರಿಬ್ಬರೂ ಬಲು ಹುರುಪಿನಲ್ಲಿ ಶತ್ರು ಸೈನ್ಯದೆಡೆಗೆ ದೃಷ್ಟಿ ಹರಿಸಿದರು. ನಿಮಿಷದಲ್ಲಿಯೇ ನಾಶಹೊಂದಿತು ಲಕ್ಷö್ಮಣ ಸೇನೆ.ಲಕ್ಷö್ಮಣ ಕುಶನೆದುರು ಹೋರಾಟಕ್ಕೆ ನಿಂತ. ಲವನನ್ನು ಎದುರಿಸುವ ಮನಸ್ಸು ಮಾಡಿದ ಸೇನಾಧಿಪತಿ ಕಾಲಜಿತು. ಸಂಪೂರ್ಣ ಸೇನೆಯೇ ಅತಿ ರೋಷದಿಂದ ಇಬ್ಬರು ಬಾಲಕರ ಮೇಲೆರಗಿತು. ಮೇಲೆ ಬಿದ್ದವರನ್ನೆಲ್ಲಾ ಕೊಂದುಹಾಕಿದ ಲವ. ಎಲ್ಲೆಲ್ಲೂ ಬಾಣಗಳ ಹಾರಾಟ. ಸೇನಾಗಡಲಿನಲ್ಲಿ ಕುಶ ಲವರ ಸಾಹಸದ ಈಜಾಟ. ಆನೆ ಕುದುರೆಗಳು ಧರೆಗುರುಳಿದವು. ಸೈನಿಕರ ಶಿರಗಳು ಅಳಿದುಹೋದವು.ಹೀಗೆ ಲವ ಕುಶರ ಸಾಹಸ ಸಾಗುತ್ತಿದ್ದಾಗಲೇ ಎದುರಾದವನು ರುಧಿರನೆಂಬ ಮಹಾ ರಾಕ್ಷಸ. ಶತ್ರುಘ್ನನಿಂದ ಮಡಿದಿದ್ದ ಲವಣಾಸುರನ ಸೋದರ ಮಾವನಾಗಿದ್ದ ಆತನ ಕಣ್ಣುಬಿದ್ದದ್ದು ಲವನ ಕೈಯ್ಯಲ್ಲಿದ್ದ ಕೋದಂಡದ ಮೇಲೆ. ಅದನ್ನು ಬಿರುಸಾಗಿ ಹಿಡಿದೆಳೆದವನು ಅಪಹರಿಸಿಕೊಂಡು ಗಗನ ಮಾರ್ಗವಾಗಿ ಹೊರಟ. ಲವ ಅಳುಕಲಿಲ್ಲ. ವಾಲ್ಮೀಕಿ ಮಹರ್ಷಿಗಳು ಬೋಧಿಸಿದ್ದ ಅಗ್ನಿಮಂತ್ರಧ್ಯಾನ ಮಾಡಿದ. ಸೇನೆಯನ್ನು ಎದುರಿಸುತ್ತಲೇ ರುಧಿರನನ್ನು ಕೊಂದು ತನ್ನ ದಿವ್ಯಾಸ್ತçವನ್ನು ಮರಳಿ ಪಡೆದುಕೊಂಡ.ಇತ್ತ ಲಕ್ಷö್ಮಣನ ಜೊತೆಗೆ ಯುದ್ಧ ಮಾಡುತ್ತಿದ್ದ ಕುಶ. ಸೀತಾಸುತನ ಬಾಣದ ಏಟಿಗೆ ಊರ್ಮಿಳಾ ರಮಣನ ರಥವದು ಎರಡು U Àಳಿಗೆ ಸತತವಾಗಿ ತಿರುಗಿತು. ‘ಬಾಲಕನಿವನು ಪರಾಕ್ರಮಿ’ ಎಂದು ಮೆಚ್ಚಿತು ಕುಶನನ್ನು, ಲಕ್ಷö್ಮಣನ ಮನಸ್ಸು. ತನ್ನ ಶೌರ್ಯವಷ್ಟೂ ಬೇಕು ಇವನನ್ನು ಸೋಲಿಸಲು ಎಂದು ತೋರಿತು ಸುಮಿತ್ರಾಸುತನಿಗೆ. ಬಲವಾಗಿಯೇ ಬಾಣ ಪ್ರಯೋಗಿಸಿದ. ಕುಶನ ಕಿರೀಟ ಕವಚಗಳು ಕೆಳಗೆ ಬಿದ್ದವು. ಎದುರಾದ ಆಘಾತವನ್ನು ಸರಳವಾಗಿಸಿಕೊಂಡ ಸೀತಾಸುತ. ‚ಕಿರೀಟ ಕವಚಗಳ ಕಾಟವಿಲ್ಲದೆ ನಿರಾಳನಾಗಿ ಯುದ್ಧ ಮಾಡಬಹುದಿನ್ನು‛ ಎಂದು ನಗುತ್ತಾ ನುಡಿದವನು ಲಕ್ಷö್ಮಣನ ಮೇಲೆ ಅಮೋಘಾಸ್ತçವನ್ನು ಪ್ರಯೋಗಿಸಿದ. ಪ್ರಜ್ಞೆ ಕಳೆದುಕೊಂಡು ಭೂಮಿಯನ್ನಪ್ಪಿದ ಶ್ರೀರಾಮ ಸಹೋದರ.ಕುಶ ಲವರ ಆರ್ಭಟಕ್ಕೆ ಲಕ್ಷö್ಮಣ ಸೇನೆಯದು ದಿಕ್ಕುದಿಕ್ಕಿಗೆ ಚೆಲ್ಲಾಪಿಲ್ಲಿಯಾಯಿತು. ಕುದುರೆಯನ್ನು ಕಟ್ಟಿಹಾಕಿದ್ದ ಬನದೆಡೆಗೆ ರಥವನ್ನು ಓಡಿಸಿದರು ಸೀತಾಸುತರು… ಡಾ.ವಿಶ್ವನಾಥ್‌ ಎನ್.ನೇರಳೆಕಟ್ಟೆ

Read Post »

ಇತರೆ, ಜೀವನ

ಜಯಶ್ರೀ ಜೆ ಅಬ್ಬಿಗೇರಿ ಅವರ ಲೇಖನ “ಕಷ್ಟದ ಹಾದಿಯೇ ಸುಖದ ಭವಿಷ್ಯ”

ಬದುಕಿನ ಸಂಗಾತಿ ಜಯಶ್ರೀ ಜೆ ಅಬ್ಬಿಗೇರಿ “ಕಷ್ಟದ ಹಾದಿಯೇ ಸುಖದ ಭವಿಷ್ಯ” ನಾವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಸುಲಭವಾದ ಹಾದಿಗಳನ್ನೇ ಹುಡುಕುತ್ತೇವೆ. ಬೆಳಿಗ್ಗೆ ಬೇಗ ಏಳುವುದಕ್ಕಿಂತ ಮತ್ತೊಂದು ಚೂರು ಹೊತ್ತು ಮಲಗುವುದು ಸುಖ ನೀಡುತ್ತದೆ. ದೈಹಿಕ ಕಸರತ್ತು ಮಾಡುವುದಕ್ಕಿಂತ ಸೋಫಾದ ಮೇಲೆ ಕುಳಿತು ಮೊಬೈಲ್ ನೋಡುವುದು ಆರಾಮ ಎನಿಸುತ್ತದೆ. ಓದುವುದಕ್ಕಿಂತ ಟಿವಿ ನೋಡುವುದು ಸಲೀಸು. ಆದರೆ ನೆನಪಿಡಿ, ಇಂದು ನಾವು ಪಡುವ ಆ ತಾತ್ಕಾಲಿಕ ಸುಖವೇ ನಮ್ಮ ನಾಳಿನ ಭವಿಷ್ಯವನ್ನು ಕಷ್ಟಕ್ಕೆ ತಳ್ಳುತ್ತದೆ. ತದ್ವಿರುದ್ಧವಾಗಿ, ಇಂದು ಯಾರು ಬೆಳಿಗ್ಗೆ ಬೇಗ ಎದ್ದು ಕಷ್ಟಪಟ್ಟು ಓದುತ್ತಾರೋ, ಶ್ರಮಿಸುತ್ತಾರೋ ಅವರ ಭವಿಷ್ಯ ಸುಲಭ ಮತ್ತು ಸುಂದರವಾಗುತ್ತದೆ.“If you want easy future life, choose hard one now” (ನಿಮಗೆ ಸುಲಭವಾದ ಭವಿಷ್ಯ ಬೇಕಿದ್ದರೆ, ಇಂದೇ ಕಷ್ಟದ ಹಾದಿಯನ್ನು ಆರಿಸಿ) ಎಂಬ ಮಾತು ನಮ್ಮ ಇಡೀ ಜೀವನದ ಯಶಸ್ಸಿನ ಗುಟ್ಟನ್ನು ಸಾರುತ್ತದೆ. ನಿಸರ್ಗದ ನಿಯಮವೂ ಇದೇ ಆಗಿದೆ; ಕಲ್ಲೊಂದು ಕಷ್ಟಪಟ್ಟು ಉಳಿಪೆಟ್ಟುಗಳನ್ನು ತಿಂದರೆ ಮಾತ್ರ ಅದು ಸುಂದರ ಮೂರ್ತಿಯಾಗಿ ಪೂಜಿಸಲ್ಪಡುತ್ತದೆ, ಇಲ್ಲದಿದ್ದರೆ ಅದು ಬರೀ ಕಾಲಡಿ ಸಿಗುವ ಕಲ್ಲಾಗಿಯೇ ಉಳಿಯುತ್ತದೆ. ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕಷ್ಟದ ಹಾದಿಯ ಬಗ್ಗೆ ಒಂದು ಅದ್ಭುತವಾದ ಮಾತು ಹೇಳಿದ್ದಾರೆ: “ಚಿನ್ನವನ್ನು ಬೆಂಕಿಯಲ್ಲಿ ಸುಟ್ಟರೆ ಮಾತ್ರ ಅದು ಶುದ್ಧವಾಗುತ್ತದೆ. ಹಾಗೆಯೇ ಮನುಷ್ಯನು ಕಷ್ಟದ ಹಾದಿಯಲ್ಲಿ ಸಾಗಿದಾಗ ಮಾತ್ರ ಅವನೊಳಗಿನ ನಿಜವಾದ ಸಾಮರ್ಥ್ಯ ಹೊರಬರುತ್ತದೆ. “ಕನ್ನಡದ ಹೆಮ್ಮೆಯ ಕವಿ ಡಿ.ವಿ.ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬದುಕಿನ ಹೋರಾಟವನ್ನು ಹೀಗೆ ವರ್ಣಿಸಿದ್ದಾರೆ: “ಹಾಸಿಗೆಯ ನೀನು ಹಾಸಿದಂತೆ ಮಲಗು ಮಗನೆ|ಕಷ್ಟಗಳ ಕಂಡು ನೀ ಬೆದರಿ ಓಡದಿರು||ಹೋರಾಟವೇ ಬದುಕು, ಗೆಲುವಿಗೆ ದಾರಿಯದು…|| “ಜಗತ್ತಿನ ಅತ್ಯಂತ ಶ್ರೇಷ್ಠ ಸಾಧಕರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಸಹ ಇದನ್ನೇ ಪ್ರತಿಪಾದಿಸುತ್ತಾರೆ, “ನೀವು ಬಡವರಾಗಿ ಹುಟ್ಟಿದರೆ ಅದು ನಿಮ್ಮ ತಪ್ಪಲ್ಲ, ಆದರೆ ನೀವು ಬಡವರಾಗಿಯೇ ಸತ್ತರೆ ಅದು ಖಂಡಿತ ನಿಮ್ಮದೇ ತಪ್ಪು”.ಅವರು ತಮ್ಮ ಯೌವನದಲ್ಲಿ ಸುಖ-ಭೋಗಗಳನ್ನು ತ್ಯಜಿಸಿ, ಹಗಲಿರುಳು ಕಷ್ಟಪಟ್ಟು ಕೋಡಿಂಗ್ ಮಾಡಿದ್ದರಿಂದಲೇ ಇಂದು ಜಗತ್ತನ್ನು ಆಳುತ್ತಿದ್ದಾರೆ. ನಿಮ್ಮ ಭವಿಷ್ಯವನ್ನು ಸುಂದರವಾಗಿಸಲು ಪ್ರಮುಖ ಸಲಹೆಗಳನ್ನು  ಇಲ್ಲಿ ನೀಡಲಾಗಿದೆ: ಕಂಫರ್ಟ್ ಝೋನ್‌ನಿಂದ (Comfort Zone) ಹೊರಬನ್ನಿ: ನಮಗೆ ಅಭ್ಯಾಸವಾಗಿರುವ ಸುಲಭದ, ಆರಾಮದಾಯಕ ಮತ್ತು ಸುರಕ್ಷಿತ ವಲಯದಿಂದ ಹೊರಬರುವುದು ಬದುಕಿನ ಮೊದಲ ಮೆಟ್ಟಿಲು. ಪ್ರತಿದಿನ ನಮಗೆ ಸುಲಭ ಎನಿಸುವ ಕೆಲಸಗಳನ್ನೇ ಮಾಡುತ್ತಾ ಕೂತರೆ ನಮ್ಮಲ್ಲಿ ಯಾವುದೇ ಬೆಳವಣಿಗೆ ಸಾಧ್ಯವಿಲ್ಲ. ನದಿಯ ನೀರು ಹರಿಯುವುದನ್ನು ನಿಲ್ಲಿಸಿದರೆ ಹೇಗೆ ಕಶ್ಮಲಗೊಳ್ಳುತ್ತದೆಯೋ, ಹಾಗೆಯೇ ಮನುಷ್ಯ ಹೊಸ ಸವಾಲುಗಳನ್ನು ಸ್ವೀಕರಿಸದಿದ್ದರೆ ಅವನ ಬುದ್ಧಿ ಮಂದವಾಗುತ್ತದೆ. ಬೆಳಿಗ್ಗೆ ಬೆಚ್ಚಗೆ ಹೊದ್ದುಕೊಂಡ ರಗ್ಗು ಬಿಟ್ಟು ಏಳುವುದು, ಎಲ್ಲರ ಮುಂದೆ ನಿಂತು ಮಾತನಾಡುವ ಧೈರ್ಯ ಮಾಡುವುದು, ಕಷ್ಟದ ಜವಾಬ್ದಾರಿಗಳನ್ನು ಹೆಗಲಿಗೆ ಹಾಕಿಕೊಳ್ಳುವುದು ಆರಂಭದಲ್ಲಿ ತುಂಬ ಕಠಿಣ ಎನಿಸುತ್ತದೆ. ಆದರೆ, ಜಗತ್ತಿನ ಮಹಾನ್ ಸಾಧಕರು ತಮ್ಮ ಆರಾಮದಾಯಕ ಜೀವನವನ್ನು ತ್ಯಜಿಸಿದ್ದರಿಂದಲೇ ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು. ನಮ್ಮ ಭಯವನ್ನು ಎದುರಿಸಿ, ನಮಗೆ ಕಷ್ಟವೆನಿಸುವ ಕೆಲಸಗಳನ್ನು ಮಾಡುತ್ತಾ ಹೋದಂತೆಲ್ಲ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕಷ್ಟದ ಹಾದಿಯ ಮೊದಲ ಹೆಜ್ಜೆಯೇ ಈ ಸೋಮಾರಿತನದ ಆವರಣವನ್ನು ಒಡೆದು ಹೊರಬರುವುದಾಗಿದೆ. ದಿನದ ಆರಂಭ ಕಠಿಣ ಕೆಲಸದಿಂದಾಗಲಿ: ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಮನಸ್ಸು ಮತ್ತು ಮೆದುಳು ಅತ್ಯಂತ ಚುರುಕಾಗಿರುತ್ತವೆ. ಈ ಅಮೂಲ್ಯವಾದ ಸಮಯದಲ್ಲಿ ನಾವು ದಿನದ ಅತ್ಯಂತ ಕಷ್ಟದ ಅಥವಾ ನಮಗೆ ಬೇಸರ ತರಿಸುವ ದೊಡ್ಡ ಕೆಲಸವನ್ನು ಮೊದಲು ಕೈಗೆತ್ತಿಕೊಳ್ಳಬೇಕು. ಅನೇಕರು ಸುಲಭವಾದ ಕೆಲಸಗಳನ್ನು ಮೊದಲು ಮಾಡಿ, ಕಷ್ಟದ ಕೆಲಸಗಳನ್ನು ದಿನದ ಕೊನೆಗೆ ದೂಡುತ್ತಾರೆ. ಇದರಿಂದ ದಿನಪೂರ್ತಿ ಮನಸ್ಸಿನಲ್ಲಿ ಆ ಕಷ್ಟದ ಕೆಲಸದ ಬಗ್ಗೆ ಒಂದು ರೀತಿಯ ಆತಂಕ ಮತ್ತು ಒತ್ತಡ ಉಳಿದುಕೊಳ್ಳುತ್ತದೆ. ಅದೇ ನೀವು ಬೆಳಿಗ್ಗೆಯೇ ಆ ಬೆಟ್ಟದಂತಹ ಕಠಿಣ ಸವಾಲನ್ನು ಮುಗಿಸಿಬಿಟ್ಟರೆ, ಇಡೀ ದಿನ ಮನಸ್ಸು ಹಗುರವಾಗುತ್ತದೆ. ಉಳಿದ ಸುಲಭದ ಕೆಲಸಗಳು ನೀರಿನಂತೆ ಸಾಗಿಬಿಡುತ್ತವೆ. ಈ ಅಭ್ಯಾಸವು ನಿಮ್ಮಲ್ಲಿ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಇಂದಿನ ಕಠಿಣ ಪರಿಶ್ರಮ ನಾಳಿನ ಸುಲಭ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆಯಿಂದ ಕಠಿಣ ಸವಾಲನ್ನು ನಗುನಗುತ್ತಾ ಎದುರಿಸಿ. ಶಿಸ್ತನ್ನು ಜೀವನದ ಉಸಿರಾಗಿಸಿಕೊಳ್ಳಿ (Self-Discipline): ಯಶಸ್ಸಿನ ಮಹಾಗೋಡೆಗೆ ಶಿಸ್ತು ಎಂಬುದು ಗಟ್ಟಿಯಾದ ಇಟ್ಟಿಗೆಯಿದ್ದಂತೆ. ಮೂಡ್ ಇದ್ದಾಗ ಮಾತ್ರ ಕೆಲಸ ಮಾಡುವುದು, ಇಲ್ಲದಿದ್ದರೆ ಸೋಮಾರಿಗಳಂತೆ ಕಾಲ ಕಳೆಯುವುದು ಯಶಸ್ವಿ ವ್ಯಕ್ತಿಯ ಲಕ್ಷಣವಲ್ಲ. ಮನಸ್ಸಿಗೆ ಇಷ್ಟ ಇರಲಿ, ಇಲ್ಲದಿರಲಿ, ಮಾಡಬೇಕಾದ ಕೆಲಸವನ್ನು ನಿಖರ ಸಮಯದಲ್ಲಿ ಮಾಡುವುದೇ ನಿಜವಾದ ಶಿಸ್ತು. ಜಗತ್ತಿನ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ದಿನಾಲೂ ನೂರಾರು ಗಂಟೆಗಳ ಕಾಲ ಮೈಮುರಿದು ಕಷ್ಟಪಟ್ಟು ಓಡಿದ್ದರಿಂದಲೇ ಕೇವಲ ಒಂಬತ್ತು ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು. ಶಿಸ್ತಿನ ಹಾದಿ ಆರಂಭದಲ್ಲಿ ಮುಳ್ಳಿನ ಬೇಲಿಯಂತೆ ಕಂಡರೂ, ಕೊನೆಯಲ್ಲಿ ಅದು ಹೂವಿನ ತೋಟಕ್ಕೆ ಕರೆದೊಯ್ಯುತ್ತದೆ. ಇಂದಿನ ಕಠಿಣ ಶಿಸ್ತು ನಿಮ್ಮ ನಾಳಿನ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕುತ್ತದೆ. ನಿಮ್ಮ ದಿನಚರಿಯನ್ನು ನೀವೇ ನಿಯಂತ್ರಿಸದಿದ್ದರೆ, ಕಾಲ ನಿಮ್ಮನ್ನು ನಿಯಂತ್ರಿಸಿ ಕಷ್ಟಕ್ಕೆ ದೂಡುತ್ತದೆ. ತಕ್ಷಣದ ಸುಖಕ್ಕೆ ಮಾರುಹೋಗದಿರು (Delayed Gratification): ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ರೀಲ್ಸ್ ನೋಡುವುದು, ವಿಡಿಯೋ ಗೇಮ್ ಆಡುವುದು ಅಥವಾ ಜಂಕ್ ಫುಡ್ ತಿನ್ನುವುದು ನಮ್ಮ ಮನಸ್ಸಿಗೆ ತಕ್ಷಣದ ಸುಖ ನೀಡುತ್ತದೆ. ಆದರೆ, ಈ ತಾತ್ಕಾಲಿಕ ಸುಖಗಳು ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯ ಮತ್ತು ಭವಿಷ್ಯವನ್ನು ಹಾಳುಮಾಡುತ್ತವೆ. ಇದನ್ನು ‘ಇನ್‌ಸ್ಟೆಂಟ್ ಗ್ರಾಟಿಫಿಕೇಶನ್’ ಎನ್ನುತ್ತಾರೆ. ಸಾಧಕರು ಎಂದಿಗೂ ಇಂತಹ ಕ್ಷಣಿಕ ಸುಖಗಳಿಗೆ ಬಲಿಯಾಗುವುದಿಲ್ಲ. ಅವರು ಇಂದಿನ ಸಣ್ಣ ಸುಖವನ್ನು ತ್ಯಜಿಸಿ, ಭವಿಷ್ಯದ ದೊಡ್ಡ ಯಶಸ್ಸಿನ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಓದುವಾಗ ಮೊಬೈಲ್ ಪಕ್ಕಕ್ಕಿಡುವುದು, ನಾಲಿಗೆಯ ರುಚಿಯನ್ನು ಹತೋಟಿಯಲ್ಲಿಡುವುದು ಕಷ್ಟದ ಕೆಲಸವೇ. ಆದರೆ, ಈ ಕಷ್ಟವನ್ನು ಯಾರು ಇಷ್ಟಪಟ್ಟು ಸಹಿಸಿಕೊಳ್ಳುತ್ತಾರೋ, ಅವರ ಜೀವನದ ಮುಂದಿನ ದಿನಗಳು ಅತ್ಯಂತ ಸುಖಮಯವಾಗಿರುತ್ತವೆ. ಬದುಕಿನ ಕ್ಯಾನ್ವಾಸ್‌ನಲ್ಲಿ ಸುಂದರ ಚಿತ್ರ ಮೂಡಬೇಕಾದರೆ ತಾಳ್ಮೆಯಿಂದ ಶ್ರಮಿಸಬೇಕು.ಸೋಲನ್ನು ಕಲಿಕೆಯ ಮೆಟ್ಟಿಲಾಗಿಸಿ:ಕಷ್ಟದ ಹಾದಿಯಲ್ಲಿ ಸಾಗುವಾಗ ಹೆಜ್ಜೆ ಹೆಜ್ಜೆಗೂ ಸೋಲುಗಳು, ಅಪಮಾನಗಳು ಎದುರಾಗುವುದು ಸಹಜ. ಸೋತ ತಕ್ಷಣ ಕೈಚೆಲ್ಲಿ ಕುಳಿತುಕೊಳ್ಳುವುದು ದುರ್ಬಲ ಮನಸ್ಸಿನ ಸಂಕೇತ. ಜಗತ್ತಿಗೆ ಬೆಳಕು ನೀಡಿದ ಮಹಾನ್ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ದೀಪ ಕಂಡುಹಿಡಿಯುವ ಮುನ್ನ ಸಾವಿರಾರು ಬಾರಿ ಸೋತಿದ್ದರು. ಆದರೆ ಅವರು ಅದನ್ನು ಸೋಲೆನ್ನದೆ, ಬಲ್ಬ್ ಮಾಡಲು ಬಾರದ ಸಾವಿರ ದಾರಿಗಳನ್ನು ಕಲಿತೆ ಎಂದು ಧನಾತ್ಮಕವಾಗಿ ಯೋಚಿಸಿದರು. ಸೋಲು ಎಂಬುದು ನಿಮ್ಮ ಜೀವನದ ಅಂತ್ಯವಲ್ಲ, ಅದು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಕೃತಿ ನೀಡುವ ಮತ್ತೊಂದು ಅದ್ಭುತ ಅವಕಾಶ. ಸೋತಾಗ ಕುಗ್ಗದೆ, ಅದರಿಂದ ಪಾಠ ಕಲಿತು ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯಬೇಕು. ಕಷ್ಟಗಳನ್ನು ಎದುರಿಸಿ ನಿಂತಾಗ ಮಾತ್ರ ಮನುಷ್ಯನ ವ್ಯಕ್ತಿತ್ವ ಪರಿಪೂರ್ಣವಾಗಿ ವಿಕಸನಗೊಳ್ಳುತ್ತದೆ. ಪ್ರತಿದಿನ ೧% ಸುಧಾರಣೆ ಮಾಡಿಕೊಳ್ಳಿ: ಒಂದೇ ದಿನದಲ್ಲಿ ಜಗತ್ತನ್ನು ಬದಲಾಯಿಸಲು ಅಥವಾ ದೊಡ್ಡ ಸಾಧನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಪ್ರತಿದಿನ ನಿಮ್ಮ ಜ್ಞಾನ, ಕೌಶಲ್ಯ, ಆಲೋಚನೆ ಅಥವಾ ಆರೋಗ್ಯದಲ್ಲಿ ಕೇವಲ ಶೇಕಡಾ ಒಂದರಷ್ಟು ಕಷ್ಟಪಟ್ಟು ಸುಧಾರಣೆ ಮಾಡಿಕೊಳ್ಳುವುದು ಖಂಡಿತ ಸಾಧ್ಯ. ದಿನಕ್ಕೆ ಒಂದು ಪುಟ ಓದುವುದು, ದಿನಕ್ಕೆ ಹತ್ತು ನಿಮಿಷ ಹೊಸ ವಿಷಯ ಕಲಿಯುವುದು ಆರಂಭದಲ್ಲಿ ಸಣ್ಣದಾಗಿ ಕಂಡರೂ, ವರ್ಷದ ಕೊನೆಗೆ ಅದು ಮುನ್ನೂರ ಅರವತ್ತೈದು ಶೇಕಡಾದಷ್ಟು ದೊಡ್ಡ ಬದಲಾವಣೆಯನ್ನು ತರುತ್ತದೆ. ಈ ನಿರಂತರ ಪರಿಶ್ರಮವೇ ನಿಮ್ಮನ್ನು ಸಮಾಜದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಮತ್ತು ಉನ್ನತವಾಗಿ ನಿಲ್ಲಿಸುತ್ತದೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ, ಇಂದಿನ ನಿಮ್ಮ ಸಣ್ಣ ಸಣ್ಣ ಕಠಿಣ ಪ್ರಯತ್ನಗಳು ನಾಳೆಯ ನಿಮ್ಮ ಬದುಕನ್ನು ಅತ್ಯಂತ ಸುಲಭ ಮತ್ತು ಸುಂದರ ರಾಜಮಾರ್ಗವನ್ನಾಗಿ ಬದಲಾಯಿಸುತ್ತವೆ.”ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಹಳೆಯ ಗಾದೆಗಿಂತ, “ಹಾಸಿಗೆಯನ್ನು ದೊಡ್ಡದಾಗಿಸುವ ಕಷ್ಟದ ಹಾದಿಯನ್ನು ಇಂದೇ ಹಿಡಿಯಿರಿ” ಎಂಬ ಹೊಸ ಚಿಂತನೆ ನಮಗಿರಬೇಕು. ಇಂದು ಪಡುವ ಕಷ್ಟ, ನಾಳೆ ನಮಗೆ ರಾಜಮಾರ್ಗವನ್ನು ನಿರ್ಮಿಸಿಕೊಡುತ್ತದೆ. ಆದ್ದರಿಂದ ಇಂದಿನ ಕಠಿಣ ಪರಿಶ್ರಮವನ್ನು ಪ್ರೀತಿಯಿಂದ ಸ್ವೀಕರಿಸೋಣ, ಉಜ್ವಲ ಭವಿಷ್ಯವನ್ನು ನಮ್ಮದಾಗಿಸಿಕೊಳ್ಳೋಣ.

ಜಯಶ್ರೀ ಜೆ ಅಬ್ಬಿಗೇರಿ ಅವರ ಲೇಖನ “ಕಷ್ಟದ ಹಾದಿಯೇ ಸುಖದ ಭವಿಷ್ಯ” Read Post »

ಕಾವ್ಯಯಾನ, ಗಝಲ್

ಜಯಂತಿ. ಕೆ.ವೈ. ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ. ಕೆ.ವೈ. ಗಜಲ್ ಯಾರು ಯಾವಾಗ ಈ ನೆಲಕೆ ವಿದಾಯ ಹೇಳುವರೋ ಗೊತ್ತಿಲ್ಲಯಾವ್ಯಾವ ಕ್ಷಣಗಳನು ಹೇಗೆ ಕಳೆವರೋ ಗೊತ್ತಿಲ್ಲ ಬಾಲ್ಯದಾ  ಚಣಗಳ ಮರೆವರೋ ಗೊತ್ತಿಲ್ಲಅಮ್ಮನಾ ಮಡಿಲು ಮೀರಿ ಬೆಳೆವರೋ ಗೊತ್ತಿಲ್ಲ ಯೌವನದ ಉತ್ಸಾಹದಲಿ    ಎಲ್ಲವನೂ ಸಾಧಿಸುವರೋ ಗೊತ್ತಿಲ್ಲಉಲ್ಲಾಸದ ಚಣಗಳೊಂದಿಗೇಮಾಗುವರೋ  ಗೊತ್ತಿಲ್ಲ ಮಾಗಿದಾ ಹಾಗೆಲ್ಲ  ದಿನವಿಡೀ  ದುಡಿವರೋ ಗೊತ್ತಿಲ್ಲಮರೆಯಾದ ಸಂತೋಷವ ಅರಸುವರೋ ಗೊತ್ತಿಲ್ಲ ದುಡಿತದಲೆ ದಿನ  ಕಳೆದು ಬಿಡುವರೋ  ಗೊತ್ತಿಲ್ಲಸಂತಸವ ಮರೆತು ಬದುಕುವರೋ ಗೊತ್ತಿಲ್ಲ ಕಾಣೆಯಾದ ಆಪ್ತೇಷ್ಟರ ನಲ್ಮೆ ಹುಡುಕುವರೋ  ಗೊತ್ತಿಲ್ಲಹಮ್ಮು ಬಿಮ್ಮುಗಳಲ್ಲಿ ಅವಿತ ಅಕ್ಕರೆಯ ತಡಕಾಡುವರೋ ಗೊತ್ತಿಲ್ಲ ಬದುಕ ಪ್ರೀತಿಯು ಬತ್ತದಂತೆ ಕಾಯ್ದು ಉಳಿಸುವರೋ ಗೊತ್ತಿಲ್ಲ‘ಜಯೂ’ನ ಒಲವ ಒರತೆಯನು ಹೇಗೆ ಚಿಮ್ಮಿಸುವರೋ ಗೊತ್ತಿಲ್ಲ! ಜಯಂತಿ ಕೆ ವೈ

ಜಯಂತಿ. ಕೆ.ವೈ. ಅವರ ಗಜಲ್ Read Post »

ಕಥಾಗುಚ್ಛ

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಉತ್ತಮ.ಎ.ದೊಡ್ಮನಿ “ಸುಧಾ” ಕಾಂಪೌಂಡ್‌ನ ಮೂಲೆಯಲ್ಲಿ ಒಂದು ಪುಟ್ಟ ಕೋಣೆ. ಅದರಲ್ಲಿ ಒಂದು ಸ್ಟೌವ್, ಎರಡು ಪಾತ್ರೆಗಳು, ಎರಡು ತಟ್ಟೆಗಳು, ಒಂದು ಕೊಡ, ಅದರ ಮೇಲೆ ಒಂದು ಗ್ಲಾಸ್. ಗೋಡೆಗೆ ನೇತು ಹಾಕಿದ್ದ ಎರಡು ಜೋಡಿ ಬಟ್ಟೆಗಳು. ಟೇಬಲ್ ಫ್ಯಾನ್.ಓ…ಅದು ಓಡಿದಾಗ ಮನೆಯ ಯಜಮಾನನಂತೆ ಸದಾ ತಲೆ ಅಲ್ಲಾಡಿಸುತ್ತಾ ತನ್ನ ಕೆಲಸದಲ್ಲಿ ಮಗ್ನವಾಗಿರುತ್ತಿತ್ತು. ಕೋಣೆಗೆ ಯಾರಾದರೂ ಬಂದರೆ ಹಾಸಲು ಒಂದು ಸಿಂದಿ ಗಿಡದ ಹಳೆಯ ಚಾಪೆ. ಅದೇ ಚಾಪೆ ರಾತ್ರಿ ರವಿಯ ಹಾಸಿಗೆಯಾಗುತ್ತಿತ್ತು.     ರವಿ ಕಲಬುರಗಿಯಲ್ಲಿರುವ ಸಾವಿತ್ರಿಬಾಯಿ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕಲಬುರಗಿಯಿಂದ ಹತ್ತೊಂಬತ್ತು ಕಿಲೋಮೀಟರ್ ದೂರದ “ಕುಂಟ” ಎಂಬ ಹಳ್ಳಿಯಿಂದ ಬಂದು ತನ್ನ ಬದುಕಿನ ದಾರಿ ಹುಡುಕಿಕೊಂಡಿದ್ದ.ರವಿಯ ತಂದೆ ದ್ಯಾವಪ್ಪನಿಗೆ ಪಾರ್ಶ್ವವಾಯುಯಿಂದ ಹೊರಸಿಗೆ ಸಿಪ್ಟ್ ಆಗಿ ಈಗ ಮೂರು ವರ್ಷಗಳಾಗಿತ್ತು. ಆ ದಿನದಿಂದ ಮನೆಯ ಎಲ್ಲ ಜವಾಬ್ದಾರಿಗಳೂ ರವಿಯ ಹೆಗಲ ಮೇಲೆ ಬಿದ್ದವು. ಮನೆಯ ಹಿರಿಯ ಮಗನಾದ ಕಾರಣ ಯಾವುದಕ್ಕೂ ಇಲ್ಲವೆಂದು ಹೇಳುವ ಅವಕಾಶ ಅವನಿಗಿರಲಿಲ್ಲ. ತಂದೆಯ ಸ್ಥಾನವನ್ನು ತುಂಬುವುದು ಹಿರಿಯ ಮಗನ ಕರ್ತವ್ಯ ಎನ್ನುವ ನಂಬಿಕೆಯಲ್ಲಿ ಬೆಳೆದ ಸಮಾಜ ಇದು.      ತಾಯಿ ನಾಗಮ್ಮ ಕೂಡ ಮಗನ ಜೊತೆಯಾಗಿ ನಿಂತಳು. ಊರಲ್ಲಿ ಸಿಕ್ಕ ಕೂಲಿ ಕೆಲಸ ಮಾಡಿ ಮನೆಯ ಖರ್ಚಿಗೆ ಕೈಜೋಡಿಸುತ್ತಿದ್ದಳು. ಆದರೆ ಮನೆಯ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿತ್ತು. ತಂದೆಯ ಔಷಧಿ, ತಮ್ಮ-ತಂಗಿಯ ಓದು, ದಿನನಿತ್ಯದ ಜೀವನ—ಇವೆಲ್ಲವನ್ನೂ ಸಾಗಿಸುವುದು ದಿನದಿಂದ ದಿನಕ್ಕೆ ಕಷ್ಟವಾಗತೊಡಗಿತು.ರವಿಗೆ ಆಗ ಇನ್ನೂ ಶಾಲೆಗೆ ಹೋಗಿ ಓದಬೇಕಾದ ವಯಸ್ಸು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನು ಹೇಗಾದರೂ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂದು ಹಗಲು-ರಾತ್ರಿ ಶ್ರಮಿಸುತ್ತಿದ್ದ. ಗಣಿತ ಮತ್ತು ಇಂಗ್ಲಿಷ್ ಅವನಿಗೆ ಕಬ್ಬಿಣದ ಕಡಲೆಯಾಗಿದ್ದವು. ಆದರೂ ಶಿಕ್ಷಕರನ್ನು, ಟ್ಯೂಷನ್‌ಗೆ ಹೋಗುವ ಸ್ನೇಹಿತರನ್ನು ಕೇಳಿ ತನ್ನ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಿದ್ದ.                 “ಒಮ್ಮೆ ಓದಿ ಕೆಲಸಕ್ಕೆ ಸೇರಿದರೆ ಸಾಕು… ಅಪ್ಪ-ಅಮ್ಮನನ್ನು ಕೆಲಸದಿಂದ ಬಿಡಿಸಬೇಕು,” ಎಂಬ ಕನಸು ಅವನ ಮನಸ್ಸಿನಲ್ಲಿ ಸದಾ ಜೀವಂತವಾಗಿತ್ತು.ಆದರೆ ವಿಧಿಯ ಲೆಕ್ಕ ಬೇರೆ ಆಗಿತ್ತು. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ತಂದೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಕೆಲಸಕ್ಕೆ ಹೋಗುವುದೇ ನಿಂತುಹೋಯಿತು. ಮನೆಯ ಸಂಪೂರ್ಣ ಹೊರೆ ನಾಗಮ್ಮನ ಹೆಗಲ ಮೇಲೆ ವರ್ಗಾವಣೆ ಆಗಿತ್ತು. ತಾಯಿಯ ಕಷ್ಟವನ್ನು ಕಣ್ಣಾರೆ ನೋಡುತ್ತಿದ್ದ ರವಿ, ಓದನ್ನು ಅರ್ಧದಲ್ಲೇ ಬಿಟ್ಟು ಕಲಬುರಗಿಗೆ ಬಂದು ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಕೆಲಸಕ್ಕೆ ಸೇರಿಕೊಂಡ.         ಹಗಲು-ರಾತ್ರಿ ದುಡಿದು ಮನೆಯ ಖರ್ಚಿಗೆ ಕಳುಹಿಸುತ್ತಿದ್ದರೂ ಅವನ ಮನಸ್ಸಿನಿಂದ ಓದಿನ ಕನಸು ಎಂದೂ ಮಾಯವಾಗಲಿಲ್ಲ. ಪ್ರತಿ ಬೆಳಗ್ಗೆ ವಿದ್ಯಾರ್ಥಿನಿಲಯದ ಹುಡುಗಿಯರು ಸಮವಸ್ತ್ರ, ಬ್ಯಾಗ್, ಬೂಟು ಧರಿಸಿ ಶಾಲೆಗೆ ಹೋಗುವುದನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ನೋವು ಮಿಂಚುತ್ತಿತ್ತು.“ನಮ್ಮ ಅಪ್ಪನಿಗೆ ಈ ಕಾಯಿಲೆ ಬರದೇ ಇದ್ದಿದ್ದರೆ… ನಾನೂ ಇವರಂತೆ ಶಾಲೆಗೆ ಹೋಗುತ್ತಿದ್ದೆ…” ಎಂದು ಮನದಲ್ಲೇ ಹೇಳಿಕೊಂಡು ಮೌನವಾಗಿ ನಿಂತುಕೊಳ್ಳುತ್ತಿದ್ದ.        ಸಂಜೆ ಶಾಲೆಯಿಂದ ಮರಳಿದ ಹುಡುಗಿಯರು ಅಂಗಳದಲ್ಲಿ ಕುಳಿತು ಪಾಠ ಓದುವುದನ್ನು ನೋಡುತ್ತಾ ಅವರ ಬಳಿಗೆ ಹೋಗಿ, “ಇವತ್ತು ಶಾಲೆಯಲ್ಲಿ ಏನು ಹೇಳಿದ್ರು? ಯಾವ ಪಾಠ ಮಾಡಿದರು?” ಎಂದು ಕುತೂಹಲದಿಂದ ಕೇಳುತ್ತಿದ್ದ.ಕೆಲವರು ಅವನ ಮಾತಿಗೆ ಉತ್ತರಿಸುತ್ತಿದ್ದರು. ಇನ್ನೂ ಕೆಲವರು, “ನಿನಗೆ ಅದೇಲ್ಲ ಏಕೆ? ನಿನ್ನ ಕೆಲಸ ನೋಡಿಕೋ,” ಎಂದು ತಿರಸ್ಕಾರದಿಂದ ಹೇಳುತ್ತಿದ್ದರು.ಆದರೆ ರವಿ ಯಾರ ಮೇಲೂ ಬೇಸರ ಮಾಡಿಕೊಳ್ಳಲ್ಲ. ನನ್ನ ಪಾಲಿಗೆ ಇದೆ ಬಂದಿದೆ ಎಂದು ಮಗುಳ ನಕ್ಕು ಅಲ್ಲಿಂದ ಹೋಗುತಿದ್ದ. ಅಕ್ಷರಗಳ ಮೇಲೆ ಇದ್ದ ಅವನ ಹಸಿವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು.      ವಿದ್ಯಾರ್ಥಿನಿಲಯದ ಹುಡುಗಿಯರು ಎಲ್ಲರೂ ಒಂದೇ ತರ ಇರಲಿಲ್ಲ. ಕೆಲವರು ರವಿಯನ್ನು ಕೇವಲ ವಾಚ್‌ಮ್ಯಾನ್ ಎಂದು ನೋಡುತ್ತಿದ್ದರು. ಎದುರಾದರೂ ಮಾತಾಡದೆ ಹೋಗುತ್ತಿದ್ದರು. ಇನ್ನು ಕೆಲವರು ಕೆಲಸ ಹೇಳಿ ಮುಗಿಸುತ್ತಿದ್ದರು. ಆದರೆ ಅವರಲ್ಲೊಬ್ಬಳು ಮಾತ್ರ ವಿಭಿನ್ನಳಾಗಿದ್ದಳು—ಸುಧಾ.         ಸುಧಾ ಬಿ.ಎ. ಓದುತ್ತಿದ್ದ ವಿದ್ಯಾರ್ಥಿನಿ. ಹಲವು ದಿನಗಳಿಂದ ರವಿಯನ್ನು ಗಮನಿಸುತ್ತಿದ್ದಳು. ಹುಡುಗಿಯರು ಓದುತ್ತಿರುವಾಗ ಅವನು ಅವರ ಹತ್ತಿರ ನಿಂತು ಪಾಠದ ಬಗ್ಗೆ ಕೇಳುವುದು, ಪುಸ್ತಕಗಳನ್ನು ಕುತೂಹಲದಿಂದ ನೋಡುವುದು, ಸಮಯ ಸಿಕ್ಕಾಗ ಹಳೆಯ ನೋಟ್ಸ್ ತಿರುವಿ ನೋಡುವುದು—ಇವೆಲ್ಲ ಅವಳ ಕಣ್ಣಿಗೆ ತಪ್ಪಿರಲಿಲ್ಲ.ಒಂದು ಸಂಜೆ ಅವಳು ರವಿಯನ್ನು ಕರೆದು ಕೇಳಿದಳು.“ರವಿ, ನೀನು ದಿನವೂ ಹುಡುಗಿಯರ ಹತ್ತಿರ ಹೋಗಿ ಪಾಠದ ಬಗ್ಗೆ ಕೇಳ್ತೀಯ. ಯಾಕೆ?”  ಮೊದಲು ರವಿ ಮುಜುಗರಪಟ್ಟ. “ಹಾಗೇ ಅಕ್ಕ…” ಎಂದು ತಪ್ಪಿಸಿಕೊಳ್ಳಲು ನೋಡಿದ.“ಇಲ್ಲ, ನಿಜ ಹೇಳು,” ಎಂದು ಸುಧಾ ಮತ್ತೊಮ್ಮೆ ಕೇಳಿದಳು.ಆ ಮಾತಿನಲ್ಲಿ ಪ್ರೀತಿಯಿತ್ತು, ಕಾಳಜಿಯಿತ್ತು. ರವಿ ತನ್ನ ಮನಸ್ಸಿನ ಬಾಗಿಲನ್ನೇ ತೆರೆದ.      ತಂದೆಯ ಕಾಯಿಲೆ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓದು ನಿಂತದ್ದು, ಮನೆಯ ಹೊರೆ, ತಾಯಿಯ ಕಷ್ಟ, ತನ್ನ ಕನಸು—ಒಂದನ್ನೂ ಬಿಡದೆ ಎಲ್ಲವನ್ನೂ ಶಾಲಾ ಒಪ್ಪಿಸಿಬಿಟ್ಟ,ಮಕ್ಕಳು ಶಿಕ್ಷಕರಿಗೆ ಬಾಯಿಪಾಠ ಒಪ್ಪಿಸಿದಂತೆ.“ಅಕ್ಕಾ… ಓದಬೇಕು ಅನ್ನೋ ಆಸೆ ಇನ್ನೂ ಸತ್ತಿಲ್ಲ. ಆದರೆ ಮನೆಯ ಪರಿಸ್ಥಿತಿ ನನ್ನನ್ನು ಕೆಲಸಕ್ಕೆ ನಿಲ್ಲಿಸಿತು.”ಅವನ ಮಾತು ಮುಗಿಯುವಷ್ಟರಲ್ಲಿ ಸುಧಾಳ ಕಣ್ಣಲ್ಲಿ ನೀರು ಅವಳಿಗೆ ಅರಿವಿಲ್ಲದಂತೆ ಪಾದದಡಿ ಬಿದಿತ್ತು. ಒಂದು ಮಾತೂ ಆಡದೆ ಅವಳು ತನ್ನ ಕೋಣೆಗೆ ಹೋದಳು. ಆ ದಿನ ಸರಿಯಾಗಿ ಊಟವೂ ಮಾಡಲಿಲ್ಲ. ರವಿಯ ಬದುಕಿನ ನೋವು ಅವಳ ಮನಸ್ಸನ್ನು ಕದಡಿತ್ತು.      ಆದರೆ ಆ ದಿನದಿಂದ ಅವರಿಬ್ಬರ ನಡುವೆ ಒಂದು ಹೊಸ ಸಂಬಂಧ ಹುಟ್ಟಿತು. ಪ್ರತಿದಿನ ಬೆಳಿಗ್ಗೆ ಎದುರಾದರೆ ರವಿ,“ಅಕ್ಕಾ, ಊಟ ಆಯ್ತಾ?”“ಕಾಲೇಜಿಗೆ ಲೇಟಾಗೋದಿಲ್ಲವಾ?”“ಏನಾದರೂ ತರಬೇಕಿದ್ದರೆ ಹೇಳಿ. ನಾನೇ ಹೋಗಿ ತರುತ್ತೀನಿ.”ಸುಧಾ ಅವನ ಮಾತುಗಳಲ್ಲಿ ತಮ್ಮನ ಮಮತೆಯನ್ನು ಕಂಡಳು.ರವಿಗೆ ಸುಧಾಳಲ್ಲಿ ಅಕ್ಕನ ನೆರಳು ಕಾಣತೊಡಗಿತು. ದಿನಗಳು ಕಳೆಯುತ್ತಾ ಹೋದವು.     ಒಂದು ದಿನ ಕಾಲೇಜಿಗೆ ಹೊರಡುವ ಮುನ್ನ ಸುಧಾ ರವಿಯ ಬಳಿ ಬಂದು ಹೇಳಿದಳು.“ರವಿ, ನೀನು ಮತ್ತೆ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕು.”ರವಿ ಬೆಚ್ಚಿಬಿದ್ದ.“ಅಕ್ಕಾ… ಅದು ಈಗ ಹೇಗೆ ಸಾಧ್ಯ? ನಾನು ಕೆಲಸ ಬಿಟ್ಟರೆ ನಮ್ಮ ಮನೆಯವರು ಏನು ಹಾಲತ್!ಸುಧಾ ನಗುತ ಹೇಳಿದಳು.“ಯಾರು ಕೆಲಸ ಬಿಡು ಅಂತ ಹೇಳಿದರು? ಈಗ ನೇರ ದಾಖಲಾತಿ ಮೂಲಕ ಪರೀಕ್ಷೆ ಬರೆಯಬಹುದು. ಕೆಲಸ ಮಾಡುತ್ತಲೇ ಓದಬಹುದು.”ಆ ಮಾತು ಕೇಳಿದ ಕ್ಷಣ ರವಿಯ ಮುಖದಲ್ಲಿ ವರ್ಷಗಳ ನಂತರ ಮೊದಲ ಬಾರಿಗೆ ನಗು ಅರಳಿತು.ಅವನ ಕಣ್ಣುಗಳಲ್ಲಿ ಮತ್ತೆ ಕನಸುಗಳು ಚಿಗುರೊಡೆಯತೊಡಗಿದವು.        ಮರುದಿನವೇ ಸುಧಾ ತನ್ನ ಮಾತಿನಂತೆ  ದಾಖಲಾತಿ ಮೂಲಕ ರವಿಗೆ ಹತ್ತನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದಳು. ಬೇಕಾದ ಪುಸ್ತಕಗಳನ್ನು ತಂದುಕೊಟ್ಟಳು. ಅಷ್ಟೇ ಅಲ್ಲ, ತನ್ನ ಖರ್ಚಿನ ಹಣದಲ್ಲೇ ಪರೀಕ್ಷಾ ಶುಲ್ಕವನ್ನೂ ಪಾವತಿಸಿದಳು.”ಇನ್ನು ನೆಪ ಹೇಳಬಾರದು. ಪ್ರತಿದಿನ ಸ್ವಲ್ಪ ಹೊತ್ತಾದರೂ ಓದಬೇಕು,” ಎಂದು ನಗುತ್ತಾ ಹೇಳಿದಳು.      ಆ ದಿನದಿಂದ ರವಿಯ ದಿನಚರಿಯೇ ಬದಲಾಯಿತು.ಹಗಲು ವಾಚ್‌ಮ್ಯಾನ್ ಕೆಲಸ. ರಾತ್ರಿ ಪುಸ್ತಕ.ಸಂಜೆ ಕಾಲೇಜಿನಿಂದ ಬಂದ ನಂತರ ಸುಧಾ ಅವನಿಗೆ ಪಾಠ ಹೇಳಿಕೊಡುತ್ತಿದ್ದಳು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಂದ ನೋಟ್ಸ್ ತಂದುಕೊಡುತ್ತಿದ್ದಳು. ಯಾರಿಗೆ ಯಾವ ವಿಷಯ ಚೆನ್ನಾಗಿತ್ತೋ, ಅವರಿಂದ ಅದನ್ನೇ ರವಿಗೆ ಹೇಳಿಸುತ್ತಿದ್ದಳು.        ಗಣಿತದಲ್ಲಿ ತೊಂದರೆ ಬಂದರೆ ಒಬ್ಬಳು ನೆರವಾಗುತ್ತಿದ್ದಳು.ಇಂಗ್ಲಿಷ್ ಅರ್ಥವಾಗದಿದ್ದರೆ ಇನ್ನೊಬ್ಬಳು ಹೇಳಿಕೊಡುತ್ತಿದ್ದಳು.ವಿದ್ಯಾರ್ಥಿನಿಲಯವೇ ನಿಧಾನವಾಗಿ ರವಿಯ ಶಾಲೆಯಾಗಿ ಮಾರ್ಪಟ್ಟಿತು.ವಾರ್ಡನ್ ಕೂಡ ಅವನ ಆಸಕ್ತಿಯನ್ನು ನೋಡಿ ಪ್ರೋತ್ಸಾಹಿಸಿದರು.   “ರವಿ, ನೀನು ಪಾಸ್ ಆಗಲೇಬೇಕು. ನಿನ್ನಂಥವರೇ ಓದಿದರೆ ಅಕ್ಷರದ ಮೌಲ್ಯ ಗೊತ್ತಾಗುತ್ತದೆ,” ಎಂದು ಧೈರ್ಯ ತುಂಬಿದರು.ಆ ಮಾತುಗಳು ರವಿಗೆ ಹೊಸ ಶಕ್ತಿಯಾಯಿತು. ದಿನವಿಡಿ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ಬೇಕಾಗುತ್ತಿತ್ತು. ಆದರೆ ಮನಸ್ಸು ಮಾತ್ರ ಪುಸ್ತಕದ ಕಡೆ ಓಡುತ್ತಿತ್ತು.ಕೆಲವೊಮ್ಮೆ ಕಣ್ಣುಗಳು ನಿದ್ದೆಗೆಜಾರುತ್ತಿದ್ದವು.ಅಷ್ಟರಲ್ಲಿ ಸುಧಾಳ ಮಾತು ನೆನಪಾಗುತ್ತಿತ್ತು.“ಬದುಕು ಬದಲಾಗಬೇಕಾದರೆ ಅಕ್ಷರ ಒಂದೇ ದಾರಿ.”ಆ ಮಾತು ನೆನಪಾದ ಕೂಡಲೇ ಮತ್ತೆ ಪುಸ್ತಕ ತೆರೆದು ಓದಲು ಕುಳಿತುಕೊಳ್ಳುತ್ತಿದ್ದ.ಹೀಗೆ ತಿಂಗಳುಗಳು ಕಳೆದುಹೋದವು.     ಕೊನೆಗೂ ಪರೀಕ್ಷೆಯ ದಿನ ಬಂತು.ಪರೀಕ್ಷಾ ಕೊಠಡಿಗೆ ಕಾಲಿಡುವಾಗ ರವಿಯ ಕೈಗಳು ನಡುಗುತ್ತಿದ್ದವು.ಸುಧಾ ಅವನ ಭುಜದ ಮೇಲೆ ಕೈ ಇಟ್ಟು ಹೇಳಿದಳು.”ಭಯಪಡಬೇಡ ನಿನಗೆ ಗೊತ್ತಿರುವುದನ್ನೇ ಬರೆ, ನಿನ್ನ ಪರಿಶ್ರಮ ನಿನ್ನನ್ನು ಕೈಬಿಡುವುದಿಲ್ಲ.”ಆ ಮಾತು ರವಿಗೆ ಆತ್ಮವಿಶ್ವಾಸ ತುಂಬಿತು.         ಎಲ್ಲಾ ಪರೀಕ್ಷೆಗಳನ್ನೂ ಮುಗಿಸಿ ಫಲಿತಾಂಶಕ್ಕಾಗಿ ಕಾಯಲು ಆರಂಭಿಸಿದ.ಫಲಿತಾಂಶ ಪ್ರಕಟವಾದ ದಿನ ವಿದ್ಯಾರ್ಥಿನಿಲಯವೇ ಹಬ್ಬದ ಸಂಭ್ರಮದಲ್ಲಿತ್ತು.ರವಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.ತನ್ನ ಫಲಿತಾಂಶವನ್ನು ನೋಡಿದ ಕ್ಷಣ ಅವನ ಕಣ್ಣಲ್ಲಿ ನೀರು ತುಂಬಿತು.ಅವನು ನೇರವಾಗಿ ಸುಧಾಳ ಬಳಿ ಹೋಗಿ ಅವಳ ಕಾಲಿಗೆ ಬಿದ್ದ.”ಅಕ್ಕಾ… ಇದು ನನ್ನ ಗೆಲುವಲ್ಲ. ನಿಮ್ಮದು.”ಸುಧಾ ತಕ್ಷಣ ಅವನನ್ನು ಎಬ್ಬಿಸಿದಳು.“ಇಲ್ಲ ರವಿ… ನಾನು ದಾರಿ ತೋರಿಸಿದ್ದೇನೆ ಅಷ್ಟೇ. ನಡೆದದ್ದು ನೀನು.”       ಆ ದಿನ ವಿದ್ಯಾರ್ಥಿನಿಲಯದಲ್ಲಿದ್ದ ಪ್ರತಿಯೊಬ್ಬರ ಮುಖದಲ್ಲೂ ಸಂತೋಷವಿತ್ತು.ಆದರೆ ರವಿಯ ಮನಸ್ಸಿನಲ್ಲಿ ಒಂದೇ ಸಂಕಲ್ಪ ಗಟ್ಟಿಯಾಯಿತು.“ನನಗೆ ಯಾರೋ ಒಬ್ಬರು ಅಕ್ಷರ ಕೊಟ್ಟರು. ನಾನು ಕೂಡ ಮುಂದೆ ಯಾರಿಗಾದರೂ ಅಕ್ಷರದ ಬೆಳಕು ಕೊಡಬೇಕು.”ಅದೇ ಸಂಕಲ್ಪ ಮುಂದೆ ಅವನ ಬದುಕಿನ ಗುರಿಯಾಯಿತು.      ಹತ್ತನೇ ತರಗತಿಯ ಯಶಸ್ಸು ರವಿಯ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.ಅಲ್ಲೇ ನಿಲ್ಲದೆ ಮುಂದೆ ಪಿಯುಸಿ, ನಂತರ ಟಿ.ಸಿ.ಎಚ್. ಪೂರ್ಣಗೊಳಿಸಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡ. ಮೊದಲ ನೇಮಕಾತಿ ಆದೇಶ ಕೈಗೆ ಬಂದ ದಿನ ಅವನಿಗೆ ಮೊದಲು ನೆನಪಾದದ್ದು ತನ್ನ ತಾಯಿ ನಾಗಮ್ಮ ಅಲ್ಲ, ಸುಧಾ.“ಅಕ್ಕಾ… ನಿನ್ನ ನಂಬಿಕೆ ಇಂದು ಗೆದ್ದಿದೆ,” ಎಂದು ಮನಸ್ಸಿನಲ್ಲೇ ಹೇಳಿಕೊಂಡ.        ಕೆಲ ದಿನಗಳ ಬಳಿಕ ರವಿ ಸುಧಾಳನ್ನು ಭೇಟಿಯಾಗಲು ಹೋದ. ತನ್ನ ಯಶಸ್ಸನ್ನು ಅವಳೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು.ಆದರೆ ಅವಳ ಮನೆಯ ಮುಂದೆ ಜನಸಮೂಹ ಕಂಡು ಅವನ ಹೆಜ್ಜೆಗಳು ನಿಂತವು.ಮನೆಯೊಳಗೆ ಬಿಳಿ ಬಟ್ಟೆಯಲ್ಲಿ ಮುಚ್ಚಿದ ಎರಡು ದೇಹಗಳು.ಗೋಡೆಯ ಮೇಲೆ ಹೂಹಾರ ಹಾಕಿದ ಎರಡು ಭಾವಚಿತ್ರಗಳು. ರವಿಯ ಹೃದಯ ಒಮ್ಮೆಲೆ ನಿಂತಂತಾಯಿತು. ಒಮ್ಮೆಲೇ ಕತ್ತು ಹಿಸಿಕಿ ಭೂಮಿ ಒಳಗೆ ತಳ್ಳಿದಂತೆ. ತಮ್ಮ ಮಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಸುಧಾ ಮತ್ತು ಅವಳ ಗಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.ಆ ಸುದ್ದಿ ಕೇಳಿದ ರವಿ ಅಲ್ಲೇ ಕುಸಿದು ಕುಳಿತ.“ಅಕ್ಕಾ… ನೀನು ಹೀಗೆ ಹೋಗಬಾರದಿತ್ತು…” ಎಂದು ಮಗುವಿನಂತೆ ಬಿಕ್ಕಿ ಬಿಕ್ಕಿ  ಅತ್ತ.       ಅವನ ಕಣ್ಣ ಮುಂದೆ ಒಂದೊಂದೇ ನೆನಪುಗಳು ಮಿಂಚಿದವು—ಪುಸ್ತಕ ಕೊಟ್ಟ ದಿನ, ಮೊದಲ ಪಾಠ, ಪರೀಕ್ಷಾ ಶುಲ್ಕ ಕಟ್ಟಿದ ಕ್ಷಣ, “ನೀನು ಓದಬೇಕು” ಎಂದು ಹೇಳಿದ ಧ್ವನಿ…ಎಲ್ಲವೂ ಕಣ್ಣೀರಾಗಿ ಹರಿಯಿತು.ಒಂದು ಮೂಲೆಯಲ್ಲಿ ಏನೂ ಅರಿಯದ ಪುಟ್ಟ ಮಗಳು ಕುಳಿತಿದ್ದಳು.ಅವಳೆ ಸುಧಾಳ ಮಗಳು.ಆ ಮಗುವನ್ನು ನೋಡಿದಾಗ ರವಿಯ ಮನಸ್ಸು ಮತ್ತೊಮ್ಮೆ ಒಡೆದುಹೋಯಿತು.        ಮನೆಗೆ ಹಿಂದಿರುಗಿದ ನಂತರವೂ ಅವನು ಸಹಜ ಸ್ಥಿತಿಗೆ ಬರಲಿಲ್ಲ.ಹೆಂಡತಿ ಎಷ್ಟೇ ಸಮಾಧಾನ ಮಾಡಿದರೂ ಅವನ ನೋವು ಕಡಿಮೆಯಾಗಲಿಲ್ಲ.ಒಂದು ರಾತ್ರಿ ಅವನು ಹೆಂಡತಿಯ ಮಡಿಲಲ್ಲಿ ತಲೆ ಇಟ್ಟು ಮಗುವಿನಂತೆ ಅತ್ತ.“ಈ ಬದುಕು ನನ್ನದಲ್ಲ…

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ Read Post »

ಕಾವ್ಯಯಾನ

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು”

ಕಾವ್ಯ ಸಂಗಾತಿ ಶ್ಯಾಮಿಲಿ ಪ್ರವೀಣ್ “ಭಾವಚಿತ್ರಗಳು” ಕೈಲೆರಡು ಭಾವಚಿತ್ರಗಳು|ಒಂದು ಬಣ್ಣದ್ದು; ಮತ್ತೊಂದು ಕಪ್ಪು-ಬಿಳುಪು;ಎರಡರಲ್ಲೂ ಒಂದೊಂದು ಭಾವಗಳು|ನಗು-ಅಳು; ಸುಖ-ದುಃಖ ಮಸುಕು-ಹೊಳಪು||ಕೆದಕಲು ಸಮಯವೂ ಬೇಕು;ನೋಡುತ್ತಾ-ನೋಡುತ್ತಾ ತಾಳೆಹಾಕುತ್ತಾ ಕೂರಲು!! ಕಪ್ಪು-ಬಿಳುಪಿನಂತಲ್ಲ ಬಣ್ಣದ್ದು;ನೋಡಿದರೆ ನೇರ-ಹಸಿರು; ದೂರ ದೃಷ್ಠಿಯ ಹಂಗಿಲ್ಲದ್ದು!ಇದ್ದವರು ಇದ್ದಾರೆ; ಇಲ್ಲದವರು ಇಲ್ಲ!ಮಾಸಿದವಲ್ಲ; ಪಕ್ಕನೆ ಗುರುತು ನೆನಪು ಎಲ್ಲಾ!! ಆದರೆ…ಬಣ್ಣದಂತಲ್ಲ ಕಪ್ಪು-ಬಿಳುಪಿನವು;ಅವು ನಿನ್ನೆಗಳು ಆಳ ಕಾಣದ ತಳದವು|ನೆನಪಾಗಲು ಗುರುತಿರಬೇಕು;ಗುರುತಾಗಲು ನೆನಪಿರಬೇಕು| ಬಣ್ಣದವು ಬದಲಾದರೂ-ಸುಣ್ಣದವು ಬದಲಾಗದು|ನಾಳೆಗಳು ಬರುತ್ತಾದರೂ; ನಿನ್ನೆಗಳು ಬರಲಾಗದು|ಹೊಸತರ ಬೇರಿನ್ನೂ ಹಳತರಲ್ಲೇ ಇದೆ|ಬಣ್ಣಕ್ಕೆ ಕಪ್ಪು-ಬಿಳುಪೇ ಮೂಲವೆಂಬಂತೆ!! ಶ್ಯಾಮಿಲಿ ಪ್ರವೀಣ್

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು” Read Post »

ಇತರೆ, ಜೀವನ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ

ವಿಶೇಷ ಸಂಗಾತಿ “ಆತ್ಮದ ಪಯಣ” ಭೂಮಿಕಾ ಮಾದಾಪುರ ಒಂದು ಕಾಲದಲ್ಲಿ, ಎಲ್ಲೋ ಒಂದು ಕಡೆ, ಒಂದು ಆತ್ಮ ತನ್ನ ಮುಂದಿನ ಪಯಣಕ್ಕೆ ಸಿದ್ಧವಾಗುತ್ತಿತ್ತು.ಅದು ತನ್ನನ್ನೇ ಕೇಳಿಕೊಂಡಿತು—“ನಾನು ಎಲ್ಲಿಂದ ಬಂದೆ? ನಾನು ಎಲ್ಲಿಗೆ ಹೋಗುತ್ತಿದ್ದೇನೆ? ಈ ಜೀವನದ ಉದ್ದೇಶವೇನು?”ಆದರೆ ಆ ಪ್ರಶ್ನೆಗೆ ಉತ್ತರ ಸಿಗುವ ಮೊದಲೇ, ಆ ಆತ್ಮವು ಒಂದು ಹೊಸ ದೇಹವನ್ನು ಪಡೆದುಕೊಂಡಿತು. ಅದು ಮಗುವಾಗಿ ಭೂಮಿಗೆ ಬಂದಿತು.ಹುಟ್ಟಿದ ಕ್ಷಣದಲ್ಲಿ ಅದು ತನ್ನ ಹಿಂದಿನ ಪಯಣವನ್ನೆಲ್ಲ ಮರೆತುಬಿಟ್ಟಿತು.ಅಮ್ಮನ ಪ್ರೀತಿ ಸಿಕ್ಕಿತು.ಅಪ್ಪನ ಮಮತೆ ಸಿಕ್ಕಿತು.ಹೊಸ ಸಂಬಂಧಗಳು ಸಿಕ್ಕವು.ಹೊಸ ಹೆಸರು ಸಿಕ್ಕಿತು. ಮಗು ಬೆಳೆದಂತೆ ಅದರ ಸುತ್ತಲಿನ ಪ್ರಪಂಚವೂ ದೊಡ್ಡದಾಯಿತು.ಶಾಲೆ, ಸ್ನೇಹಿತರು, ಆಟ, ವಿದ್ಯಾಭ್ಯಾಸ…ನಂತರ ದೊಡ್ಡವನಾದಾಗ ಅವನ ಮುಂದೆ ಮತ್ತೊಂದು ಪ್ರಪಂಚ ತೆರೆದುಕೊಂಡಿತು.ಹಣ. ಹೆಸರು. ಅಧಿಕಾರ. ಯಶಸ್ಸು. ಅವನು ಓಡಲು ಆರಂಭಿಸಿದ.“ಇನ್ನಷ್ಟು ಹಣ ಬೇಕು…”“ಇನ್ನಷ್ಟು ಹೆಸರು ಬೇಕು…”“ಇತರರಿಗಿಂತ ನಾನು ದೊಡ್ಡವನಾಗಬೇಕು…” ಅವನಿಗೆ ಸಿಕ್ಕ ಪ್ರತಿಯೊಂದು ಯಶಸ್ಸಿನ ನಂತರವೂ ಮತ್ತೊಂದು ಆಸೆ ಹುಟ್ಟುತ್ತಿತ್ತು. ಒಂದು ದಿನ ಅವನಿಗೆ ಬಹಳ ಹಣ ಸಿಕ್ಕಿತು.ಆದರೆ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ.ಅವನು ದೊಡ್ಡ ಮನೆ ಕಟ್ಟಿದ.ಆದರೆ ಮನಸ್ಸಿನೊಳಗಿನ ಖಾಲಿತನ ತುಂಬಲಿಲ್ಲ.ಅವನು ಅನೇಕ ಜನರ ಸ್ನೇಹ ಗಳಿಸಿದ.ಆದರೆ ತನ್ನನ್ನೇ ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಹುಡುಕಲಾಗಲಿಲ್ಲ. ಒಂದು ರಾತ್ರಿ ಅವನು ಒಬ್ಬನೇ ಕುಳಿತಿದ್ದ.ಅವನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು—“ನಾನು ಇಷ್ಟೆಲ್ಲಾ ಗಳಿಸಿದ್ದೇನೆ… ಆದರೆ ನನಗೆ ಇನ್ನೂ ಸಂತೋಷ ಯಾಕಿಲ್ಲ?” ಆಗ ಅವನೊಳಗಿಂದ ಒಂದು ಮೃದುವಾದ ಧ್ವನಿ ಕೇಳಿಸಿತು.“ಏಕೆಂದರೆ ನೀನು ಹೊರಗೆ ಹುಡುಕುತ್ತಿರುವುದು ಒಳಗಿದೆ.”ಅವನು ಬೆಚ್ಚಿಬಿದ್ದ.“ಯಾರು ಮಾತನಾಡುತ್ತಿರುವುದು?”ಧ್ವನಿ ಮತ್ತೆ ಕೇಳಿಸಿತು.“ನಾನೇ… ನಿನ್ನೊಳಗಿನ ನೀನು.” ಅವನು ತನ್ನ ಜೀವನವನ್ನು ಹಿಂದಿರುಗಿ ನೋಡಿದ.ಚಿಕ್ಕವನಾಗಿದ್ದಾಗ ಅವನು ಎಷ್ಟು ಸರಳನಾಗಿದ್ದ!ಅವನಿಗೆ ದೊಡ್ಡ ಮನೆ ಬೇಕಿರಲಿಲ್ಲ.ದೊಡ್ಡ ಹೆಸರು ಬೇಕಿರಲಿಲ್ಲ.ಹೆಚ್ಚು ಹಣ ಬೇಕಿರಲಿಲ್ಲ.ಸಣ್ಣ ವಿಷಯಗಳಲ್ಲೇ ಸಂತೋಷ ಕಂಡುಕೊಳ್ಳುತ್ತಿದ್ದ.ಆದರೆ ದೊಡ್ಡವನಾದಂತೆ ಅವನು ತನ್ನ ನಿಜವಾದ ಸ್ವಭಾವವನ್ನು ಮರೆತಿದ್ದ. ಅವನು ತನ್ನ ದೇಹವನ್ನೇ “ನಾನು” ಎಂದುಕೊಂಡಿದ್ದ.ತನ್ನ ಹೆಸರನ್ನೇ “ನಾನು” ಎಂದುಕೊಂಡಿದ್ದ.ತನ್ನ ಸಂಪತ್ತು, ಸಂಬಂಧಗಳು ಮತ್ತು ಸ್ಥಾನಮಾನವನ್ನೇ ತನ್ನ ಅಸ್ತಿತ್ವ ಎಂದು ಭಾವಿಸಿದ್ದ. ಆದರೆ ಅವನೊಳಗಿನ ಧ್ವನಿ ಹೇಳಿತು— “ದೇಹ ಬದಲಾಗುತ್ತದೆ.ಹೆಸರು ಬದಲಾಗುತ್ತದೆ.ಸಂಬಂಧಗಳು ಬದಲಾಗುತ್ತವೆ.ಸಂಪತ್ತು ಬರುತ್ತದೆ, ಹೋಗುತ್ತದೆ.ಆದರೆ ಇವೆಲ್ಲವನ್ನೂ ಗಮನಿಸುವ ನಿನ್ನೊಳಗಿನ ಚೈತನ್ಯ ಮಾತ್ರ ನಿನ್ನ ನಿಜವಾದ ಪಯಣದ ಸಂಗಾತಿ.” ಆ ದಿನದಿಂದ ಅವನು ತನ್ನ ಜೀವನವನ್ನು ಬೇರೆ ರೀತಿಯಲ್ಲಿ ನೋಡಲು ಆರಂಭಿಸಿದ. ಅವನು ತನ್ನ ಆಸೆಗಳನ್ನು ಪ್ರಶ್ನಿಸಲು ಶುರುಮಾಡಿದ.“ನನಗೆ ಇದು ನಿಜವಾಗಿಯೂ ಬೇಕೇ?”“ನಾನು ಇದನ್ನು ಪಡೆಯುವುದರಿಂದ ಶಾಂತಿ ಸಿಗುತ್ತದೆಯೇ?”“ನನ್ನ ಜೀವನದ ನಿಜವಾದ ಉದ್ದೇಶವೇನು?” ಅವನಿಗೆ ನಿಧಾನವಾಗಿ ಒಂದು ಸತ್ಯ ಅರ್ಥವಾಗತೊಡಗಿತು.ಜೀವನವೆಂದರೆ ಕೇವಲ ಹುಟ್ಟಿ, ಓದಿ, ಕೆಲಸ ಮಾಡಿ, ಹಣ ಗಳಿಸಿ, ಸಂಬಂಧಗಳನ್ನು ಬೆಳೆಸಿ, ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗುವುದಲ್ಲ.ಜೀವನವೆಂದರೆ ತನ್ನನ್ನೇ ಅರಿಯುವ ಒಂದು ಅವಕಾಶ.ಆತ್ಮದ ಪಯಣ ಹೊರಗಿನ ಜಗತ್ತಿನಲ್ಲಿ ನಡೆಯುವುದಿಲ್ಲ.ಅದು ನಮ್ಮೊಳಗೆ ನಡೆಯುತ್ತದೆ. ಮನುಷ್ಯನು ತನ್ನ ಜೀವನದ ಕೊನೆಯ ಹಂತಕ್ಕೆ ಬಂದಾಗ, ಅವನು ಗಳಿಸಿದ ಹಣ ಅವನ ಜೊತೆ ಬರುವುದಿಲ್ಲ.ಅವನ ಮನೆ ಬರುವುದಿಲ್ಲ.ಅವನ ಸ್ಥಾನಮಾನ ಬರುವುದಿಲ್ಲ.ಅವನ ಜೊತೆ ಬರುವುದು ಅವನ ಜೀವನದ ಅನುಭವಗಳು ಮತ್ತು ಅವನು ಅರಿತ ಸತ್ಯ ಮಾತ್ರ. ಅವನು ಕಣ್ಣು ಮುಚ್ಚಿ ನಿಧಾನವಾಗಿ ಹೇಳಿದ— “ನಾನು ಈ ದೇಹವಲ್ಲ…ನಾನು ಈ ಹೆಸರಲ್ಲ…ನಾನು ಈ ಸಂಪತ್ತಲ್ಲ…ನಾನು ಈ ಸಂಬಂಧಗಳಲ್ಲ…ನಾನು ಈ ಎಲ್ಲದರ ಸಾಕ್ಷಿ.” ಅವನ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಶಾಂತಿ ಮೂಡಿತು.ಅವನಿಗೆ ತನ್ನ ಪಯಣದ ಅರ್ಥ ನಿಧಾನವಾಗಿ ತಿಳಿಯಿತು. ನಾವು ಈ ಲೋಕಕ್ಕೆ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಬರಲಿಲ್ಲ.ಹಾಗೆಯೇ ಇಲ್ಲಿಂದ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಹೋಗಲಾರೆವು. ಆದರೆ ಈ ಜೀವನ ನಮಗೆ ಒಂದು ಅಮೂಲ್ಯ ಅವಕಾಶವನ್ನು ಕೊಡುತ್ತದೆ—ನಾವು ಯಾರು ಎಂಬುದನ್ನು ಅರಿಯುವ ಅವಕಾಶ.ಅದೇ ಆತ್ಮದ ನಿಜವಾದ ಪಯಣ. ಮನುಷ್ಯನು ಹೊರಗಿನ ಜಗತ್ತನ್ನು ಗೆಲ್ಲಲು ಎಷ್ಟು ಪ್ರಯತ್ನಿಸಿದರೂ, ತನ್ನ ಮನಸ್ಸನ್ನು ಗೆಲ್ಲದೆ ನಿಜವಾದ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವನು ತನ್ನ ಜೀವನದ ಕೊನೆಯಲ್ಲಿ ಒಂದು ಮಾತನ್ನು ಮಾತ್ರ ಹೇಳಿದ— «“ನಾನು ಇಡೀ ಜೀವನ ನನ್ನ ಗಮ್ಯವನ್ನು ಹೊರಗೆ ಹುಡುಕಿದೆ.ಆದರೆ ಕೊನೆಗೆ ಅರಿತದ್ದು ಏನೆಂದರೆ…ನಾನು ಹುಡುಕುತ್ತಿದ್ದ ಗಮ್ಯ ನನ್ನೊಳಗೇ ಇತ್ತು.”» ಅವನ ಪಯಣ ಮುಗಿದಿರಲಿಲ್ಲ.ಅದು ನಿಜವಾಗಿ ಆಗಲೇ ಆರಂಭವಾಗಿತ್ತು.ಆತ್ಮದ ಪಯಣ — ಹೊರಗಿನಿಂದ ಒಳಗಿನತ್ತ. ಭೂಮಿಕಾ ಮಾದಾಪುರ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ Read Post »

ಪುಸ್ತಕ ಸಂಗಾತಿ

ಶೋಭಾ ಶಂಕರಾನಂದ ಅವರ ಕೃತಿ “ಕಣ್ಣಳತೆಗೆ ಕಂಡದ್ದು” ಒಂದು ಅವಲೋಕನ ಡಾ. ರೇಖಾ ಉದಯ

ಪುಸ್ತಕ ಸಂಗಾತಿ ಡಾ.ರೇಖಾ ಉದಯ ಶೋಭಾ ಶಂಕರಾನಂದ ಕಣ್ಣಳತೆಗೆ ಕಂಡದ್ದು ನಾವು ಏನನ್ನಾದರೂ ಪರಿಶೀಲಿಸಬೇಕೆಂದಾಗ ಮೊದಲು ನಮ್ಮ ಸುತ್ತಮುತ್ತಲನ್ನು ಗಮನಿಸುತ್ತೇವೆ. ನಮ್ಮ ದೃಷ್ಟಿಯ ವ್ಯಾಪ್ತಿಗೆ ಸಿಕ್ಕಷ್ಟು ವಿಚಾರಗಳನ್ನು ಗ್ರಹಿಸುತ್ತೇವೆ. ಆದರೆ ಕಂಡದ್ದರಾಚೆಗೂ ಅನೇಕ ಅರ್ಥಗಳು, ಅನುಭವಗಳು ಮತ್ತು ಒಳನೋಟಗಳು ಅಡಗಿರುತ್ತವೆ. ಅಂತಹ ಒಳನೋಟಗಳನ್ನು ತಮ್ಮ ಕಣ್ಣಳತೆಗೆ ಕಂಡ ವಿಚಾರಗಳ ಮೂಲಕ ಓದುಗರ ಮುಂದೆ ತೆರೆದಿಡುವ ಕೃತಿ ‘ಕಣ್ಣಳತೆಗೆ ಕಂಡದ್ದು’. ಶೋಭಾ ಶಂಕರಾನಂದ ಅವರ ಮೊದಲ ಕೃತಿಯಾದ ಈ ಲೇಖನಮಾಲೆಯಲ್ಲಿ ಸಾಮಾಜಿಕ ಕಳಕಳಿ, ಸ್ತ್ರೀ ಸಂವೇದನೆ, ಮಕ್ಕಳ ಭವಿಷ್ಯದ ಕುರಿತ ಕಾಳಜಿ, ವ್ಯಕ್ತಿತ್ವ ವಿಕಸನ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳು, ಹಲವು ಗಣ್ಯ ವ್ಯಕ್ತಿಗಳ ಪರಿಚಯ ಹಾಗೂ ಅವರ ಬದುಕಿನ ಮೌಲ್ಯಗಳು ಹೀಗೆ ವೈವಿಧ್ಯಮಯ ವಿಚಾರಧಾರೆಗಳು ಹರಿದುಬಂದಿವೆ. ಒಂದೊಂದು ಲೇಖನವೂ ಒಂದೊಂದು ಚಿಂತನೆಯ ಕಿಟಕಿಯನ್ನು ತೆರೆದು, ಓದುಗರನ್ನು ಹೊಸ ದೃಷ್ಟಿಕೋನದತ್ತ ಕರೆದೊಯ್ಯುತ್ತದೆ. ಈ ಕೃತಿಯ ಮೊದಲ ಲೇಖನ ‘ಕುಂಭಮೇಳ ಮತ್ತು ನಾಗ ಸಾಧುಗಳು’. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಹಿನ್ನೆಲೆಯಲ್ಲಿನ ಧಾರ್ಮಿಕ ವೈಭವ, ಸನಾತನ ಪರಂಪರೆಯ ಮಹತ್ವ ಹಾಗೂ ನಾಗ ಸಾಧುಗಳ ಜೀವನದ ಕುರಿತಾಗಿ ಲೇಖಕಿ ಮನಮುಟ್ಟುವಂತೆ ವಿವರಿಸಿದ್ದಾರೆ. ನಾಗ ಸಾಧುಗಳ ಜೀವನಶೈಲಿ, ಅವರ ವೈರಾಗ್ಯ ಮತ್ತು ಧರ್ಮದ ಮೇಲಿನ ನಿಷ್ಠೆಯನ್ನು ಓದುತ್ತಿದ್ದಂತೆ ಅವರ ಬದುಕಿನ ಬಗ್ಗೆ ಕುತೂಹಲವೂ ಗೌರವವೂ ಮೂಡುತ್ತದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಧರ್ಮಪರಂಪರೆಯನ್ನು ಕಾಪಾಡುವ ಅವರ ತ್ಯಾಗದ ಬದುಕಿನ ಪರಿಚಯ ಈ ಲೇಖನದ ವಿಶೇಷತೆ. ‘ಕೃಷ್ಣಶಿಲೆ ಮಂದಸ್ಮಿತ ರಾಮಲೀಲಾ’ ಲೇಖಕಿಯ ವೈಯಕ್ತಿಕ ಅನುಭವದ ಸ್ಪರ್ಶ ಹೊಂದಿರುವ ಮತ್ತೊಂದು ಮನೋಜ್ಞ ಲೇಖನ. ರಾಮಲಲ್ಲಾನ ದರ್ಶನದ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಾ, ಅಲ್ಲಿನ ಭಕ್ತಿ, ಸಂಭ್ರಮ ಮತ್ತು ಸಕಾರಾತ್ಮಕ ವಾತಾವರಣವನ್ನು ಓದುಗರಿಗೂ ಅನುಭವಿಸುವಂತೆ ಮಾಡಿದ್ದಾರೆ. 51 ಇಂಚು ಎತ್ತರದ ಕಪ್ಪು ಶಿಲೆಯಲ್ಲಿ ಮೂಡಿಬಂದ ಬಾಲರಾಮನ ವಿಗ್ರಹದ ಸೌಂದರ್ಯವನ್ನು ವರ್ಣಿಸುವಾಗ ಲೇಖಕಿಯ ಭಾವತೀವ್ರತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಗ್ರಹದ ನಿರ್ಮಾತೃ ಶಿಲ್ಪಿ ಅರುಣ್ ಯೋಗಿರಾಜ್ ಅವರ ಪರಿಚಯದ ಜೊತೆಗೆ, ಅವರ ಕೈಚಳಕದಲ್ಲಿ ಅರಳಿದ ಇನ್ನಿತರ ಶಿಲ್ಪಗಳ ಕುರಿತೂ ಲೇಖಕಿ ಪರಿಚಯಿಸಿದ್ದಾರೆ. ‘ವೈರಾಗ್ಯ ನಿಧಿ ಅಕ್ಕ ಮಹಾದೇವಿ’ ಲೇಖನದಲ್ಲಿ ಹನ್ನೆರಡನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿಯ ವ್ಯಕ್ತಿತ್ವ ಮತ್ತು ವೈಚಾರಿಕತೆಯನ್ನು ಪರಿಚಯಿಸಲಾಗಿದೆ. ರಾಜಪ್ರಭುತ್ವದ ಬಂಧನಗಳನ್ನು ಧಿಕ್ಕರಿಸಿ, ತನ್ನದೇ ಆದ ಸ್ವತಂತ್ರ ಚಿಂತನೆ ಹಾಗೂ ವಚನಗಳ ಮೂಲಕ ಬದುಕಿನ ಸತ್ಯಗಳನ್ನು ಅನಾವರಣಗೊಳಿಸಿದ ಅಕ್ಕಮಹಾದೇವಿಯ ಜೀವನದ ಒಳನೋಟಗಳನ್ನು ಲೇಖಕಿ ವಿಶ್ಲೇಷಿಸಿದ್ದಾರೆ. ಸ್ತ್ರೀ ಅಸ್ತಿತ್ವ, ಆತ್ಮಗೌರವ ಮತ್ತು ಸ್ವತಂತ್ರ ಚಿಂತನೆಯ ನೆಲೆಯಲ್ಲಿ ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ನೋಡುವ ಪ್ರಯತ್ನ ಇಲ್ಲಿ ಗಮನಾರ್ಹವಾಗಿದೆ. ‘ವೀಕ್ಷಕರ ಸಮಯವೂ ಸಹ ಅತ್ಯಮೂಲ್ಯ’ ಎಂಬ ಲೇಖನದಲ್ಲಿ ಬಿಗ್‌ಬಾಸ್‌ನಂತಹ ಜನಪ್ರಿಯ ಕಾರ್ಯಕ್ರಮವನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡದೆ, ನಮ್ಮ ಅಮೂಲ್ಯ ಸಮಯವನ್ನು ನಾವು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಲೇಖಕಿ ಮುಂದಿಡುತ್ತಾರೆ. ಪ್ರತಿಯೊಂದು ವಿಚಾರಕ್ಕೂ ತನ್ನದೇ ಆದ ದೃಷ್ಟಿಕೋನವನ್ನು ಹೊಂದಿರುವ ಲೇಖಕಿ, ಕಾರ್ಯಕ್ರಮದ ಒಳಿತು-ಕೆಡುಕುಗಳನ್ನು ಚರ್ಚಿಸುವುದರ ಜೊತೆಗೆ, ಸಮಯದ ಮೌಲ್ಯ ಮತ್ತು ಅದರ ಸದುಪಯೋಗದ ಕುರಿತು ಓದುಗರನ್ನು ಚಿಂತನೆಗೆ ಹಚ್ಚುತ್ತಾರೆ. ಇಂದಿನ ಮಕ್ಕಳ ಬದುಕಿನ ಮತ್ತೊಂದು ಸೂಕ್ಷ್ಮ ಆಯಾಮವನ್ನು ತೆರೆದಿಡುವ ಲೇಖನ ‘ಮುಗ್ಧ ಮಕ್ಕಳ ಬಾಲ್ಯ ಕಸಿಯದಿರಿ’. ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ರಿಯಾಲಿಟಿ ಶೋಗಳ ಹಿಂದಿರುವ ಒತ್ತಡ, ಸ್ಪರ್ಧೆಯ ಮನೋಭಾವ, ಗೆಲುವು-ಸೋಲಿನ ಪರಿಣಾಮ ಮತ್ತು ಜನಪ್ರಿಯತೆಯ ಬೆನ್ನಟ್ಟುವಿಕೆಯ ಕುರಿತು ಲೇಖಕಿ ಗಂಭೀರವಾಗಿ ಚಿಂತಿಸಿದ್ದಾರೆ. ಬಾಲ್ಯವೆಂದರೆ ಸಹಜತೆ, ಆಟ, ನಗು ಮತ್ತು ಮುಗ್ಧತೆಯ ಕಾಲ. ಆದರೆ ವೇದಿಕೆಯ ಮೇಲಿನ ಅತಿಯಾದ ಸ್ಪರ್ಧೆ ಮತ್ತು ನಿರೀಕ್ಷೆಗಳು ಮಕ್ಕಳ ಸಹಜ ಬಾಲ್ಯವನ್ನು ಕಸಿದುಕೊಳ್ಳಬಹುದೆಂಬ ಆತಂಕವನ್ನು ಇಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರವೂ ಮಕ್ಕಳ ಮನಸ್ಸಿನ ಮೇಲೆ ಉಳಿಯಬಹುದಾದ ಪರಿಣಾಮಗಳತ್ತ ಲೇಖಕಿ ಓದುಗರ ಗಮನ ಸೆಳೆಯುತ್ತಾರೆ. ‘ಸಾವಿನ ಮನೆ ಸಾಕೋ೯ ಪಾಡ್’ ಎಂಬ ಲೇಖನ ತಂತ್ರಜ್ಞಾನದ ಮತ್ತೊಂದು ಸಂಕೀರ್ಣ ಮುಖವನ್ನು ಪರಿಚಯಿಸುತ್ತದೆ. ಸಾವಿನ ಕುರಿತು ಮಾನವನ ಚಿಂತನೆ, ಜೀವನದ ನೋವು, ಅಸಹಾಯಕತೆ ಮತ್ತು ತಂತ್ರಜ್ಞಾನ ಇವುಗಳ ನಡುವಿನ ಸಂಬಂಧವನ್ನು ಲೇಖಕಿ ಪ್ರಶ್ನಿಸುತ್ತಾರೆ. ಬದುಕಿನ ಅಂತ್ಯವನ್ನು ತಂತ್ರಜ್ಞಾನದ ಮೂಲಕ ನಿರ್ಧರಿಸುವ ಸಾಧ್ಯತೆಗಳ ಕುರಿತು ಓದುಗರಲ್ಲಿ ಹಲವು ನೈತಿಕ ಹಾಗೂ ಮಾನವೀಯ ಪ್ರಶ್ನೆಗಳನ್ನು ಹುಟ್ಟಿಸುವ ಈ ಲೇಖನ, ವಿಜ್ಞಾನದ ಪ್ರಗತಿಯ ಜೊತೆಗೆ ಮಾನವೀಯ ಮೌಲ್ಯಗಳ ಅಗತ್ಯವನ್ನೂ ನೆನಪಿಸುತ್ತದೆ. ಹೀಗೆ ‘ಕಣ್ಣಳತೆಗೆ ಕಂಡದ್ದು’ ಕೇವಲ ಲೇಖನಗಳ ಸಂಕಲನವಲ್ಲ; ಲೇಖಕಿಯ ಸೂಕ್ಷ್ಮ ಅವಲೋಕನ, ಸಾಮಾಜಿಕ ಕಳಕಳಿ ಮತ್ತು ಚಿಂತನಶೀಲ ಮನಸ್ಸಿನ ಪ್ರತಿಬಿಂಬವಾಗಿದೆ. ಧರ್ಮದಿಂದ ತಂತ್ರಜ್ಞಾನದವರೆಗೆ, ಅಕ್ಕಮಹಾದೇವಿಯಿಂದ ಇಂದಿನ ಮಕ್ಕಳವರೆಗೆ, ಮನರಂಜನೆಯಿಂದ ಸಮಯದ ಮೌಲ್ಯದವರೆಗೆ — ಹಲವು ವಿಭಿನ್ನ ವಿಚಾರಗಳನ್ನು ಒಂದೇ ಕೃತಿಯೊಳಗೆ ಲೇಖಕಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಕಣ್ಣಿಗೆ ಕಂಡ ಸಂಗತಿಯನ್ನು ಹಾಗೆಯೇ ದಾಖಲಿಸುವುದಕ್ಕಿಂತ, ಅದರ ಹಿಂದಿರುವ ಅರ್ಥವನ್ನು ಅರಿಯುವ ಪ್ರಯತ್ನವೇ ಈ ಕೃತಿಯ ಜೀವಾಳ. ಪ್ರತಿಯೊಂದು ಲೇಖನವೂ ಓದುಗರ ಮನದಲ್ಲಿ ಒಂದಲ್ಲ ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಕೆಲವೊಮ್ಮೆ ಚಿಂತನೆಗೆ ಹಚ್ಚುತ್ತದೆ, ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ, ಮತ್ತೊಮ್ಮೆ ನಮ್ಮದೇ ಬದುಕಿನತ್ತ ತಿರುಗಿ ನೋಡುವಂತೆ ಮಾಡುತ್ತದೆ. ‘ಕಣ್ಣಳತೆಗೆ ಕಂಡದ್ದು’ ಓದಿದಾಗ ಕಣ್ಣಳತೆಗೆ ಕಂಡ ವಿಚಾರಗಳಾಚೆಗೂ ಬದುಕಿನ ಅನೇಕ ಆಯಾಮಗಳು ತೆರೆದುಕೊಳ್ಳುತ್ತವೆ. ಕೃತಿಯ ಹೊರಮೈಯನ್ನು ನೋಡಿದಷ್ಟೇ ಸಾಲದು; ಅದರೊಳಗಿನ ವಿಚಾರಧಾರೆಯ ಹೂರಣವನ್ನು ಸವಿಯಲು ಕೃತಿಯ ಪುಟಗಳನ್ನು ತಿರುವುದೇಬೇಕು. ಓದಿದಂತೆ ಅದರ ವೈಚಾರಿಕ ಸೊಗಡು ಮತ್ತು ಅನುಭವದ ಆಳ ಅರಿವಾಗುತ್ತದೆ. ಕೃತಿ ಹೆಸರು. ಕಣ್ಣಳತೆಗೆ ಕಂಡದ್ದುಕೃತಿಕರ್ತೃ. ಶೋಭಾ ಶಂಕರಾನಂದಪುಸ್ತಕದ ಬೆಲೆ. 250ಪ್ರಕಾಶದ ಹೆಸರು.ಯದು ನಂದನಪುಟಗಳ ಸಂಖ್ಯೆ.204ಕೃತಿ ಬೇಕಾದಲ್ಲಿ ಸಂಪರ್ಕ.94804 09091 ಡಾ. ರೇಖಾ ಉದಯ್

ಶೋಭಾ ಶಂಕರಾನಂದ ಅವರ ಕೃತಿ “ಕಣ್ಣಳತೆಗೆ ಕಂಡದ್ದು” ಒಂದು ಅವಲೋಕನ ಡಾ. ರೇಖಾ ಉದಯ Read Post »

You cannot copy content of this page

Scroll to Top