ಕಥಾ ಸಂಗಾತಿ ಬಿ.ಟಿ.ನಾಯಕ್ “ಚಲುವ” ಚೆಲುವಣ್ಣ, ಮಾದಣ್ಣ ಒಳ್ಳೆಯ ಸ್ನೇಹಿತರು.. ಆಗೊಮ್ಮೆ ಈಗೊಮ್ಮೆ ಅವರಿಬ್ಬರೂ ಭೇಟಿ ಮಾಡಿ ಯಾವುದೋ ಸಾಂಧರ್ಭಿಕ ವಿಷಯದ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುತ್ತಿದ್ದರು. ಅವರಿಬ್ಬರ ಸ್ನೇಹ ಅಚಲವಾಗಿತ್ತು. ಒಮ್ಮೆ ಮಾದಣ್ಣ ಯಾವುದೋ ಕೆಲಸದ ಮೇಲೆ ಪರ ಊರಿಗೆ ಹೋದಾಗ, ಅಲ್ಲಿ ಅನಿವಾರ್ಯವಾಗಿ ತಿಂಗಳುಗಟ್ಟಲೆ ಅಲ್ಲಿದ್ದಾಗ ಮರಳಲು ಸಮಯವೇ ಹಿಡಿಯಿತು. ಇನ್ನೇನು ಚಡಪಡಿಸುತ್ತಿದ್ದ ಮಾದಣ್ಣನಿಗೆ ಹೇಗೋ ಒಂದು ದಿನ ಮರಳಿದ. ಆಗ ತಕ್ಷಣಕ್ಕೆ ಚೆಲುವನನ್ನು ಭೇಟಿ ಮಾಡುವುದೇ ಆತನ ಪ್ರಥಮ ಆದ್ಯತೆಯಾಗಿ, ಆ ಪ್ರಕಾರ ಚೆಲುವನನ್ನು ಭೇಟಿ ಮಾಡಿ ಆತನನ್ನು ಆಲಂಗಿಸಿಕೊಂಡ ಮತ್ತು ಮಾತಿನಲ್ಲಿ ಚೆಲುವನೇ ಮುಂದಾದ;‘ಪ್ರಯಾಣದಲ್ಲಿ ತೊಂದ್ರೆ ಆಯ್ತಾ ಮಾದಣ್ಣ? ಅಲ್ಲಿಯ ಕೆಲಸ ಪೂರ್ತಿ ಆಯ್ತಾಹೇಗೆ ?’ ಎಂದಾಗ;‘ಅಂಥಹ ಘನ ಕೆಲಸ ಅಲ್ಲೇನಿಲ್ಲವಾದರೂ, ನಮ್ಮ ಬೀಗರಿಗೆ ಕೃಷಿ ಕೆಲಸದಲ್ಲಿ ಆಸರೆಯಾಗಿ ಬಂದಿದ್ದೇನೆ ಅಷ್ಟೇ. ಅಲ್ಲಿಗೆ ಹೋಗಿ ಬಂದದ್ದು ನೆಮ್ಮದಿ ತಂದಿದೆ. ಇನ್ನೇನು ಒಂದೇ ಕೊರತೆ ಎಂದ್ರೆ, ಸ್ವಂತ ಊರು ಬಿಟ್ಟು ಅಷ್ಟು ದಿನಗಳು ಹೊರಗೆ ಇರೋದು ಶಾನೆ ಕಷ್ಟ ಕಣಣ್ಣ. ಸರಿ, ನೀನ್ಹೇಗೆ ಇದ್ದೀಯಾ ?’‘ಏನು ಹೇಳ್ಲಿ ಮಾದಣ್ಣ ನನ್ನ ಮಂಡಿಗಳು ಪ್ರಾಣ ಹಿಂಡ್ತಿವೆ. ಅವು ಯಾಕಾದರೂ ನಂಜೊತೆಗೆ ಇವೆ ಎನ್ನಿಸುತ್ತಿದೆ . ಈ ಮಂಡಿಗಳ ನೋವು ತಾಳೋದು ಶಾನೇ ಕಷ್ಟ.ನಂಗೆ ನಿಂತ್ರೂ, ಕುಂತ್ರೂ ಸಮಾಧಾನಾನೇ ಇಲ್ಲ. ಏನ್ ಮಾಡೋದು ಕಣ್ಲಾ, ಇದು ನನ್ನ ಕರ್ಮ ಅಂತ ಅಂದ್ಕೊತೀನಿ. ಏಕೆಂದರೆ, ಅದ್ರಿಂದ ನಂಗೆ ಅಳೋದು ತಪ್ತಿಲ್ಲ ‘.‘ಅದೇನ್ಲಾ ಮಂಡಿ ನೋವಿಗೀ ಇಷ್ಟು ಹೆದ್ರಿದ್ರೆ ಹೇಗೆ ? ನೀನು ಗಂಡ್ಸು ಕಣ್ಲಾ, ತಡ್ಕೋಬೇಕು. ನೀನೇನಾದರೂ ಡಾಕ್ಟರ್ ಹತ್ರ ಹೋದ್ರೇ ಮಂಡಿಗಳನ್ನು ಕುಯ್ದೇ ಬಿಡ್ತಾರೆ ಆಟೇಯಾ’.‘ಏನೋ ಅಪ್ರೂಪಕ್ಕೆ ಸಿಕ್ಕ ಸ್ನೇಹಿತಾಂತ ನಿನ್ನತ್ರ ಹೇಳ್ಕೊಂಡ್ರೆ, ಅದೇನ್ಲಾ ಹೆದರಿಸ್ತೀಯಾ. ನಾನು ನಿನ್ನ ಕುಚುಕು ಕಣ್ಲಾ’‘ಕಂಡೀವ್ನಿ ಬಿಡು, ಸ್ವಲ್ಪ ನೋವು ತಡ್ಕೋ ಅಂತ ಹೇಳಿದೆ ಆಟೇಯಾ ‘‘ಅಷ್ಟು ಹೇಳಿದ್ರೆ ಆಯ್ತಾ ನಿನ್ ಕೆಲ್ಸಾ ? ನೋವು ಕಡಿಮೆ ಮಾಡೋವ್ರು ಯಾರಾದ್ರೂ ಇದ್ರೆ ಹೇಳ್ಬೇಕು ಅಂತ ನನ್ ಬಗ್ಗೆ ಕಾಳಜಿ ಬೇಡ್ವಾ ? ‘‘ಇದ್ಕೊಂದು ಬೆಳ್ಕು ಕಂಡೀವ್ನಿ ಕಣ್ಲಾ. ಅದು ನಿಂಗೆ ಒಗ್ತದೋ ಇಲ್ವೋ ತಿಳ್ದಿಲ್ಲ.’ ‘ಅದೇನ್ಲಾ ಆಂಥೋದು, ವಸಿ ಹೇಳ್ಬಿಡು, ನಾನಾದ್ರೋ ಶಾನೇ ಒದ್ದಾಡ್ತಿದ್ದೀನಿ’‘ಸರಿ, ನಾವಿಬ್ರೂ ಎಣ್ಣೆ ಬಾರಿಗೆ ಹೋಗೋಣ, ಅಲ್ಲಿ ಕಂಠ ಪೂರ್ತಿ ಕುಡ್ಕಂಡಾಗ ನೋವೆಲ್ಲಾ ಮಾಯವಾಗಿ ಹೊಂಟೋಯ್ತದೆ..’‘ಥೂ..ನಿನ್ನ ಜನ್ಮಕ್ಕೆ ಬೆಂಕಿ ಹಾಕ. ಅದೇನೋ ಒಳ್ಳೆಯ ದಾರಿ ತೋರಿಸ್ತೀ ಅಂತ ಅನ್ಕೊಂಡ್ರೆ, ಬಾರಿನ ಕಡೆಗೆ ತೋರಿಸ್ತೀಯಾ. ಸ್ವಲ್ಪ ಇರು ನಿನ್ನೆಂಡ್ರಿಗೆ ಹೀಂಗೆ ಹೇಳಿ ಬಿಡ್ತೀನಿ,ಆಗ ಆಕೆನಿಂಗೆ ಚೆನ್ನಾಗಿ ಬಜಾಯಿಸ್ತಾಳೆ. ಆಗ ತಿಳೀತದೆ.’‘ಬುಡು ಕಣಣ್ಣ. ಹಂಗ್ಯೇನಾದ್ರೂ ಆ ಪಾಟಿ ಮಾಡೀಯಾ. ಇರಲಿ ಇಸ್ಯಕ್ಕೆ ಬರ್ತೀನಿ. ಏನೋ ಒಬ್ರು ಸಾಬ್ರು ಎಸ್ರು ಕೇಳಿವ್ನೀ..ತಡ್ಕೋ ಗ್ಯಪ್ತಿ ಮಾಡ್ಕೊಂಡು ಹೇಳ್ತೀನಿ’ ಎಂದು ಕೊಂಚ ಹಾಗೆ ಇರಲು ಸನ್ನೆ ಮಾಡಿದ. ‘ಸರಿ..ಸರಿ ಅದೇನೋ ಅಂತ ಯೋಚಿಸಿ ಹೇಳು’ ಎಂದು ಅವನನ್ನು ಅಲ್ಲಾಡಿಸಿ ಕೇಳಿದ.‘ಸುಮ್ನಿರು ಕಣ್ಲಾ….ನಂಗೆ ಯೋಚಿಸ್ಲಿಕ್ಕೆ ಬಿಡು’‘ಅಯಿತಾಯಿತು..’ ಎಂದು ಚೆಲುವ ಕೊಂಚ ಹೊತ್ತು ಸುಮ್ಮನಾದ.ಆನಂತರ ಮಾದಣ್ಣ ದೊಡ್ಡ ವಿಜ್ಞಾನಿಯ ಹಾಗೆ ಏನೋ ಕಂಡು ಹಿಡಿದವನಂತೆ ಜೋರಾಗಿ ಕೂಗಿಕೊಂಡ;‘ಚೆಲುವಾss ಅವನು ಸಿಕ್ಕಾ ! ‘‘ಯಾರದೂ ss ? ‘‘ಅದೇ ನೀನು ಕೇಳಿದೆಯಲ್ಲ ಮಂಡಿ ನೋವಿನ ಡಾಕ್ಟರ್’ !‘ಹೌದಾ.. ಅತ್ನ ಎಸ್ರು ಏನು ಕಂಡ್ಲಾ ? ಆತ ಎಲ್ಲಿರ್ತಾನೆ ?’‘ಆತ್ನ ಏಸ್ರು ಅಸಗರ್ ಸಾಬ ?’‘ಅದೆಂಥಹ ಹೆಸ್ರು ಕಣ್ಲಾ ಆ ಸಾಬಿಯಪ್ಪಂದು ?’‘ಹಾಗ್ಹೇಳ್ಬಾಡ ಕಣ್ಲಾ, ಮಂಡಿ ನೋವಿಗೆ ಆತ ದ್ಯಾವ್ರು ಕಣ್ಲಾ. ಶಾನೆೇ ದೂರದಿಂದ ಆ ವಯ್ಯನ ಹತ್ರ ಜನ ಸಾಲ್ಸಾಲಾಗಿ ಬರ್ತಾರೆ ‘‘ಆಯ್ತಾಯ್ತು..ಆತ್ನಲ್ಲಿಗೆ ನನ್ನ ಕರ್ಕೊಂಡು ಹೋಗು, ನಿಂಗೆ ಶಾನೆೇ ಪುಣ್ಯ ಬರತೈತಿ’‘ಅಷ್ಟು ಪುರಸತ್ತು ನಂಗಿಲ್ಲ ಕಣಣ್ಣ. ಆತನ ಇಳಾಸ ಏಳ್ತಿನೀ , ನೀನೆ ವಸಿ ಹೋಗಿ ಬಾ’‘ಸರಿ.. ಅಷ್ಟಾದ್ರೂ ಮಾಡು. ಆ ವಯ್ಯನ ಇಳಾಸ ಏಳ್ಬಿಡು ‘‘ಚೆಲುವ..ಆ ಯಪ್ಪನ ಮನೆ ‘ಸಾಲಾರ ಮಸೀದಿ’ ಪಕ್ಕಕ್ಕಿದೆಯಂತಾ ಒಮ್ಮೆ ಯಾರೋ ಹೇಳಿದ್ರು ಕಣ್ಲಾ.’ ಎಂದ.‘ಅಯ್ಯss ..ಇಳಾಸ ಆಟೆನಾ ?’‘ಆ ವಯ್ಯನ ಹತ್ರ ಶಾನೆೇ ಜನ ಕೇಳ್ಕೊಂಡು ಬರ್ತಾರೆ. ನೀನು ಅಲ್ಲಿಗೆ ಹೋದ್ರೆ ತಿಳಿತೈತೆ ಕಣ್ಲಾ. ಆತ ಸಕತ್ತಾಗಿ ಔಷ್ದಿಕೊಡ್ತಾನಂತೆ. ಹೀಗೆ ಅಂತಾ ಭಾಳೇ ಜನ ಹೇಳ್ತಾರೆ ಕಣ್ಲಾ’ ‘ಆಯಿತು ಬಿಡು..ಅದರ ಎಳೆ ಸಿಕ್ತಲ್ಲಾ. ನಾನೇ ಕೇಳ್ಕೊಂತಾ ಓಗ್ತೀನಿ. ಥ್ಯಾಂಕ್ಸ್ ಮಾದಣ್ಣ’ ಎಂದ.‘ಥ್ಯಾಂಕ್ಸ್ ಬ್ಯಾಡ ಬುಡು,.ಬರ್ತೀನಿ ಕಣ್ಲಾ’ ಎಂದು ಹೇಳಿ ಮಾದಣ್ಣ ಹೊರಟು ಹೋದ. ಮಾರನೇ ದಿನ ಚೆಲುವ, ಸಾಲಾರ ಓಣಿ ಕಡೆಗೆ ತನ್ನ ಹೆಜ್ಜೆಗಳನ್ನು ಹಾಕಿದ. ಹಾಗೋ ಹೀಗೋ ಹೆಜ್ಜೆ ಹೆಜ್ಜೆಗೂ ವಿಚಾರಿಸಿ ಅಲ್ಲಿ ಸಾಗುತ್ತಿದ್ದ. ಆದರೇ, ಆತನ ಕುರುಹು ಕೂಡಾ ಸಿಗಲಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಚೆಲುವ ಅರ್ಧ ದಿನ ಕಳೆದಿಲ್ಲ ಅದಾಗಲೇ ಡಾಕ್ಟರನ ಹೆಸರನ್ನು ಮರೆತು ಬಿಟ್ಟಿದ್ದ ಮತ್ತು ಅದೀಗ ನೆನಪಿಗೆ ಬರುತ್ತಿರಲಿಲ್ಲ. ಆಗ ಏನೋ ಅಲ್ಪ ಸ್ವಲ್ಪ ಬುದ್ಧಿ ಉಪಯೋಗಿಸಿ ಅಲ್ಲಿ ‘ಎಣ್ಣೆ ಡಾಕ್ಟರ್’ ಎಂದು ವಿಚಾರಿಸಿದಾಗ,ಆ ಹೆಸರಿನವರು ‘ಯಾರಿಲ್ಲ’ ಎಂತಲೇ ಹೇಳುತ್ತಿದ್ದರು. ಚೆಲುವ ಹಾಗೆಯೇ ತೆವಳುತ್ತಾ ಸಾಗುತ್ತಲೇ ಇದ್ದಾಗ, ಅಲ್ಲೊಂದು ‘ಏಣ್ಣೆ ಬಾರ್‘ ತಲುಪಿದಾಗ, ಅದರ ಮುಂದೆ ಗಕ್ಕನೆ ನಿಂತ !. ಆತನ ಮನಸ್ಸೀಗ ಹೊಯ್ದಾಡುತ್ತಲೇ ಇತ್ತು ಮತ್ತು ಆತನಿಗೆ ಹೆಜ್ಜೆ ಸಾಗದಾದವು. ಅದಕ್ಕೆ ಕಾರಣ, ಮನಸ್ಸು ವಿಚಲಿತವಾಗಿ ಕೊಂಚ ಏಣ್ಣೆ ಹಾಕುವ ಆಸೆಯು ಆತನಲ್ಲಿ ಜನಿತವಾಯಿತು. ಏನೋ ಅಲ್ಪ ಸ್ವಲ್ಪ ಹಾಕಿದರೆ ನಡೀತದೆ ಎಂಬ ಮೊಂಡು ಧೈರ್ಯ ಕೂಡಾ ಮೂಡಿತು. ಆದರೆ, ಮರು ಕ್ಷಣವೇ, ತಾನು ಡಾಕ್ಟರ್ ಬಳಿ ಹೋಗ್ತಿದ್ದೇನೆ, ನನ್ನ ಪರಿಸ್ಥಿತಿ ನೋಡಿ, ನನ್ನ ಮಂಡಿಗಳನ್ನು ನೋಡದೆ ಆತ ಎರಡು ಬಾರಿಸಿ ಕಳಿಸಿದರೆ ಕಷ್ಟ’ ಎಂದು ತನ್ನಷ್ಟಕ್ಕೆ ತಾನೇ ಎಚ್ಚರಗೊಂಡು ನಿರ್ಧಾರ ಬದಲಿಸಿಕೊಂಡ. ಅದೇ ಸಮಯದಲ್ಲಿ, ಆತನಿಗೆ ತೀರಾ ಪರಿಚಯವಿದ್ದ ಧರ್ಮಣ್ಣ ಬಾರಿನೊಳಕ್ಕೆ ನುಗ್ಗುತ್ತಿರುವುದು ಕಂಡುಕೊಂಡ. ಬಹುಶಃ ಆತನಿಗೆ ‘ಎಣ್ಣೆ ಡಾಕ್ಟರ್’ ಬಗ್ಗೆ ತಿಳಿದಿರಬಹುದು ಎಂದುಕೊಂಡು ಅವಸರವಸರದಿಂದ ಆತನನ್ನು ತಡೆಯಲೆತ್ನಿಸಿ ಸಫಲನಾದ;‘ಅಣ್ಣಾ..ಏನಿಲ್ಲೀ ?’ ಎಂದು ಆತನನ್ನು ಕೇಳಿದಾಗ;‘ಅರೆ ! ಚೆಲುವಣ್ಣ..ಅದೇನು ನೀನಿಲ್ಲಿ ?’ಹಾಗೆ ಪರಸ್ಪರ ಒಬ್ಬರಿಗೊಬ್ಬರು ಕೇಳಿಕೊಂಡಾದ ಮೇಲೆ, ಇಬ್ಬರೂ ತಲೆ ಕೆಳಗೆ ಮಾಡಿ, ನಾಚಿಕೆ ಗೊಂಡವರಂತೆ ತಲೆ ಕೆರೆದುಕೊಂಡರು. ಆಗ ಚೆಲುವನೇ ಕೇಳಿದ;‘ಏನ್ ಬೆಳ ಬೆಳಗ್ಗೆ ಬಂದೀಯ.. ಎಣ್ಣೆ ನೆನ್ಪು ಕಾಡಿತಾ ಹೇಗೆ ?’‘ಇಲ್ಲ ಚೆಲುವಣ್ಣ, ಮನೇಲಿ ಯಾವುದೋ ಕಿರಿ ಕಿರಿ..ಅಲ್ಲಿ ಕಾಲ್ಗಳು ನಿಲ್ಲಿಲ್ಲ . ಹಾಗಾಗಿ, ಇಲ್ಲಿಗೆ ದೌಡಾಯಿಸಿ ಬಂದೆ. ಇಲ್ಲಿ ನೆಮ್ಮದಿ ಸಿಗ್ತದೆ ಕಣಣ್ಣ’ ಎಂದು ಧರ್ಮಣ್ಣ ಸಮಜಾಯಿಷಿ ನೀಡಿದ. ‘ಆಯ್ತು ಬುಡು.. ಈಗ ಇಸ್ಯಕ್ಕೆ ಬರ್ತೀನಿ, ನೀನು ನಂಗೆ ಸಹಾಯ ಮಾಡ್ಬೇಕು ಕಣಣ್ಣ’ ಎಂದು ಚೆಲುವ ಪೀಠಿಕೆ ಹಾಕಿದ.‘ಅದೇನ್ಲಾ ?’‘ಈ ಏರಿಯಾನಾಗೆ ಎಣ್ಣೆ ಡಾಕ್ಟ್ರು ಇದ್ದಾರಂತೆ. ನಿಂಗೇನಾದ್ರೂ ಗೊತ್ತಾ ?’‘ಅದ್ಯಾವ ಎಣ್ಣೆ ಕಣ್ಲಾ ?’ ಎಣ್ಣೆ ಅಂಗಡಿ ಮುಂದೆ ನಿಂತು ಅದೇನ್ಲಾ ಎಣ್ಣೆ ಬಗ್ಗೆಕೇಳ್ತೀಯಾ ?‘ಏಯ್..ಬುಡು..ಹಾಸ್ಯ ಮಾಡ್ಬೇಡ. ನನಗೆ ಮಂಡಿ ನೋವು ಶಾನೆ ಇದೆ. ಹಾಗಂತಾ, ಆತನ್ನ ಹುಡ್ಕೊಂಡು ಬಂದಿವ್ನಿ’‘ಅದ್ಯಾಕೆ ತಿರುಗಾಡಿ ಮತ್ತೇ ಮಂಡಿ ನೋವು ಹೆಚ್ಚಿಗೆ ಮಾಡ್ಕೊಳ್ತೀಯಾ. ಇಲ್ಲೇ ಬಾರಿನಲ್ಲಿ ಎಣ್ಣೆ ಹೊಡೆದು, ರೆಸ್ಟ್ ಮಾಡಿಬಿಡು, ಎಲ್ಲಾ ಹೊಂಟೋಯ್ತದೆ.’ ಎಂದು ಸಲಹೆ ಮಾಡಿದ.‘ಅದೇನು ಹೇಳ್ತೀ ಧರ್ಮಣ್ಣ, ನಾನೀಗ ಎಣ್ಣೆ ಹಾಕ್ತಿಲ್ಲ. ಯಾಕೆಂದ್ರೆ ಡಾಕ್ಟರ್ ತಾವ ಹೋಗ್ತೇನೆ. ನಾನು ಎಣ್ಣೆ ಹಾಕ್ಕೊಂಡು ಅಲ್ಲಿಗ ಹೋದ್ರೆ, ಆತ ಬಾರಿಸಿಬಿಡ್ತಾನೆ.’‘ನಿನಗೆ ಎಣ್ಣೆ ಬೇಡಾಂದ್ರೆ ಬೇಡ. ನನಗಾದರೂ ಸ್ವಲ್ಪ ಅನುಕೂಲ ಮಾಡಿ ಕೊಡು. ಆಮೇಲೆ ನಿಂಗೆ ಡಾಕ್ಟರ್ ವಿವರ ತಿಳಿಸ್ತೇನೆ’ ಎಂದ ಧರ್ಮಣ್ಣ.ಸ್ನೇಹಿತ ಹೀಗೆ ಹೇಳಿದ ಕೂಡಲೇ, ಚೆಲುವ ಸಂತೋಷಗೊಂಡು ಒಂದು ಕ್ವಾರ್ಟರ್ ಬಾಟಲಿ ಆತಂಗೆ ಕೊಡಿಸಿಯೇ ಬಿಟ್ಟ. ಅದು ಧರ್ಮಣ್ಣನ ಕೈ ಸೇರುತ್ತಲೇ, ಗಟ ಗಟಾಂತ ಕುಡಿದು ಬರಗೆಟ್ಟವನಂತೆ ಖಾಲಿ ಮಾಡಿ ಬಿಟ್ಟ. ! ಚೆಲುವನಿಗೆ ದಿಗಿಲಾಯಿತು. ಇವನು ಬರೀ ಎಣ್ಣೆ ಹಾಕಿದ, ಆದ್ರೆ ಆ ಡಾಕ್ಟರ್ ಬಗ್ಗೆ ಏನೂ ಹೇಳುತ್ತಿಲ್ಲವಲ್ಲ ? ಚೆಲುವ ಆತನನ್ನು ವಿವರ ನೀಡಲು ಪೀಡಿಸಿದಾಗ;‘ಚೆಲುವಣ್ಣ ನೀನು ತುಂಬಾ ಒಳ್ಳೆಯವನು ಕಣ್ಲಾ, ಇನ್ನೊಂದು ಕ್ವಾರ್ಟರ್ ಕೊಡಿಸು, ನಾನು ಆಣೆ ಮಾಡಿ ಹೇಳ್ತೇನೆ, ನಿನ್ನನ್ನು ಆ ಎಣ್ಣೆ ಡಾಕ್ಟರ್ ಬಳಿಗೆ ನಾನೇ ಕರ್ಕೊಂಡು ಹೋಗ್ತೇನೆ’ ಎಂದ.‘ಬೇಡ..ಇಷ್ಟೇ ಸಾಕು’‘ಅದೇನು, ನಿಂಗೆ ವಿವರಗಳು ಬೇಕೋ ಬೇಡ್ವೊ ?’‘ಅದ್ಕೆ ಅಂತ್ಲೆ ನಿಂಗೆ ಒಂದು ಕ್ವಾರ್ಟರ್ ಕೊಡಿಸಿದೆ. ನೀನಲ್ಲಿಗೆ ಹೋಗೋದೆನ್ಬೇಡ, ನಂಗೆ ವಿವರ ಕೊಟ್ಬಿಡು. ನಾನೇ ಅವರನ್ನು ಹುಡ್ಕೊಂಡು ಹೋಗ್ತೇನೆ. ?’‘ಅದ್ಹೇಗೆ ಸಾಧ್ಯ ? ನೀನು ನಂಗೆ ಎಣ್ಣೆ ಕೊಡಿಸಲೇ ಬೇಕು ಅಷ್ಟೇ’ ಎಂದ.ಥೂ.!. ಇವನನ್ನು ನಾನೇ ಮೈ ಮೇಲೆ ಎಳೆದುಕೊಂಡ ಹಾಗಾಯ್ತಲ್ಲಾ ಎಂದು ಚೆಲುವ ಪರಿತಪಿಸಿದ. ಈಗ ಚೆಲುವನಿಗೆ ಹೋಗಲೂ ಬಿಡುತ್ತಿಲ್ಲ, ವಿಳಾಸಾನೂ ಕೊಡ್ತಿಲ್ಲ. ಈಗ ಅನಿವಾರ್ಯತೆ ಮೂಡಿ, ಆತನಿಗೆ ಮತ್ತೊಂದು ಬಾಟಲಿ ಕೊಡಿಸಿದ. ಅದನ್ನೂ ಕೂಡಾ ತಡ ಮಾಡದೆ ಖಾಲಿ ಮಾಡಿದ ಭೂಪ !. ಅದೇನೋ ಒಮ್ಮೆಲೇ ಅಷ್ಟೆಲ್ಲಾ ಗುಟುಕು ಹಾಕಿದ್ದರಿಂದ ಆತನಿಗೆ ಮಂಪರು ಮೂಡಿದ ಹಾಗೆ ಆಗಿ, ನಿಂತಲ್ಲಿಯೇ ಕುಸಿದು ಬಿದ್ದು ಅರೆ ಪ್ರಜ್ಞೆಯವನಾದ. ಚೆಲುವ ಗಾಭರಿಗೊಂಡು, ಆತನನ್ನು ಎತ್ತಿ ಒಂದು ಮೂಲೆಯಲ್ಲಿ ಕುಕ್ಕರಿಸಿ, ತಾನು ಅಲ್ಲಿಂದ ಹೊರಡಲು ಸಿದ್ಧನಾದ. ಆದರೆ, ತತ್ ಕ್ಷಣಕ್ಕೆ ಬಹುಶಃ ಕೃತಜ್ಞತೆಯ ಫಲವೋ ಏನೋ ಧರ್ಮಣ್ಣಅಲ್ಪ ಸ್ವಲ್ಪ ಎಚ್ಚರಗೊಂಡು ಚೆಲುವನನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಉಸುರಿದ;‘ಚೆಲುವ ಥ್ಯಾಂಕ್ಸ್ ಕಣ್ಲಾ. ನನ್ನಲ್ಲಿ ದುಡ್ಡೇ ಇರಲಿಲ್ಲ. ನಿನ್ನಿಂದ ಹೇಗೋ ಎಣ್ಣೆ ಪಡೆಯುವುದಕ್ಕೆ ಸುಳ್ಳು ಹೇಳಿದೆ. ನನಗೆ ನಿಜವಾಗಿಯೂ ಯಾವ ಡಾಕ್ಟರ್ ತಿಳಿದಿಲ್ಲ. ನೀನೆ ಪ್ರಯತ್ನ ಮಾಡಿ ತಿಳಿದುಕೋ. ದೇವ್ರು ನಿಂಗೆ ಒಳ್ಳೇದು ಮಾಡ್ಲಿ’ ಎಂದು ಹೇಳಿ ಧರ್ಮಣ್ಣ ಕೈತೊಳೆದುಕೊಂಡ ! ಚೆಲುವ ಆ ಕ್ಷಣದಲ್ಲಿ ಕೋಪಗೊಂಡರೂ, ತನ್ನ ಖೊಟ್ಟಿ ನಸೀಬಕ್ಕೆ ಶಪಿಸಿದ. ಅಲ್ಲಿಂದ ಹೊರಟು ಬೀದಿಗೆ ಇಳಿದು, ಅತ್ತ ಇತ್ತ ರಸ್ತೆಯಲ್ಲಿ ಗಂಭೀರವಾಗಿ ನೋಡಿದ. ತನಗೆ ಪರಿಚಯದವರ್ಯಾರೂ ಅಲ್ಲಿ ಕಾಣಲಿಲ್ಲ. ಹಾಗೆಯೇ, ತನ್ನ ಹೆಜ್ಜೆಗಳನ್ನು ಮುಂದುವರೆಸಿ, ಯಾರಲ್ಲಿ ವಿಚಾರಿಸಿದರೆ ತಿಳಿಯಬಹುದು ಎಂದು ಲೆಖ್ಖಚಾರ ಹಾಕಿದ. ಆಗ ಆತನಿಗೊಂದು ವಿಚಾರ ಹೊಳೆಯಿತು. ಆ ಡಾಕ್ಟರ್ ವಿವರ ಸಾಬ್ರುಗೇನೇ ತಿಳಿದಿರುತ್ತದೆ. ಅವರಲ್ಲಿಯೇ ವಿಚಾರ ಮಾಡಬೇಕು ಎಂದು ಸಿದ್ಧನಾದ. ಆ ನಿಟ್ಟಿನಲ್ಲಿ ಮುಂದಕ್ಕೆ ಸಾಗಿದಾಗ, ಅದೃಷ್ಠವಾತ್ ಒಬ್ರು ಸಾಹೇಬರು ರಸ್ತೆಯಲ್ಲಿ ಸಿಕ್ಕಾಗ ಸಂತೋಷಗೊಂಡ. ಅದೇ ಸಮಯದಲ್ಲಿ ಡಾಕ್ಟರ್ ಹೆಸರು ಅರ್ಧಂಬರ್ಧ ನೆನಪಿಗೆ ಬಂತು. ಅದನ್ನು ನೆನಪಿನಲ್ಲಿ ಇಟ್ಟುಕೊಂಡ. ಅಷ್ಟರಲ್ಲಿ ಸಾಬ್ರು ಎದೆಯ ಮೇಲೆಯೇ ಬಂದಂತಾದಾಗ; ‘ಅಣ್ಣಾ..ಸಾಹೇಬಣ್ಣ ನಂಗೆ ಸ್ವಲ್ಪ ಸಹಾಯ ಮಾಡು ?’‘ಏನ್ ಭೈ..ಏನ್