ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ “ಹುಬ್ಬಳಿಯಾಂವ” ಈ ಭೂಮಿಗಿ ಬಿದ್ದಾಂವಆ ಬಾನಿಗಿ ಎದ್ದಾಂವ,ಇದ್ದುದೆಲ್ಲಾನು ಗೆದ್ದಾಂವನೀ ಹುಬ್ಬಳಿಯಾಂವ ಪದ ಪದವ ಕುಣಿಸಾಂವಮುದದಿ ಉಣಿಸಾಂವ,ಎದಿಗುದಿಯ ತಣಿಸಾಂವಅಂದತ್ತನ ನೆನೆಸಾಂವ ಬ್ಯಾನಿ ಹೊತ್ತ ನಡದಾಂವಜ್ಞಾನಪೀಠ ಪಡದಾಂವ,ಮೂಗುದಾನ ಹಿಡದಾಂವಬಿಗುಮಾನ ಬಿಡದಾಂವ ನಿದ್ದಿ ನೀರಡಿಕಿ ಕೆಡಸಾಂವಗಾರುಡಿಯ ನಡಸಾಂವಹಾಳು ಹಂಗು ಬಿಡಸಾಂವಗುಂಗೊಂದ ಹಿಡಸಾಂವ ಬಾಳಿನುದ್ದಕೂ ಬೆಂದಾಂವಬೆಂದ ಬೇಂದ್ರೆಯಾದಾಂವ,ದತ್ತ ಅಂದತ್ತನೇ ಆದಾಂವಇಂದೆತ್ತ ಎದ್ದ ಹೋದಾಂವ ಎಮ್ಮಾರ್ಕೆ

“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ Read Post »

ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ”

ಕಾವ್ಯ ಸಂಗಾತಿ ಜಯಶ್ರೀ ಎಸ್ ಪಾಟೀಲ “ನಿಸ್ವಾರ್ಥ ಭಾವ” ಚಳಿ ಇರಲಿ ಮಳೆ ಇರಲಿಅಂಜದೆ ಅಳುಕದೆಗಟ್ಟಿಯಾಗಿ ನಿಲ್ಲುವೆ ಬಿಸಿಲಿರಲಿ ಬರಡಿರಲಿಆಸೆಗಳನು ಅಳಿಸದೆಕನಸು ಕಾಣುತಲಿರುವೆ ಕೊಡಲಿ ಪೆಟ್ಟು ಬಿದ್ದರೂಟೊಂಗೆಗಳುರುಳಿದರೂಎಲ್ಲ ಸಹಿಸಿಕೊಳ್ಳುವೆ ಮೌನವಾಗಿ ಸಹಿಸುತಛಲವ ಮಾತ್ರ ಬಿಡದೆಮತ್ತೆ ಮತ್ತೆ ಚಿಗುರುವೆ ಕೆಡುಕು ಬಯಸಿದಸ್ವಾರ್ಥ ಮನುಜನಿಗೆನೆರಳಾಗಿ ನಿಲ್ಲುವೆ ಗಿಡ ಮರಗಳನಿಸ್ವಾರ್ಥ ಭಾವ ಅರಿತರೆಮನುಜ ನೀ ಬಾಳುವೆ ಜಯಶ್ರೀ ಎಸ್ ಪಾಟೀಲ

ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ” Read Post »

ಇತರೆ

“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್

ಕಾವ್ಯ ಸಂಗಾತಿ ಸುಜಾತಾ ರವೀಶ್ “ಬೇಂದ್ರೆ_ ಕಾವ್ಯಾಸ್ವಾದ” ಇಂದು ಡಾ. ದಾರಾ ಬೇಂದ್ರೆ ಅವರ ೧೩೦ ನೆಯ ಜಯಂತಿ ಪ್ರಯುಕ್ತ ಅವರದೊಂದು ಪ್ರಸಿದ್ಧ ಭಾವಗೀತೆಯ ಬಗ್ಗೆ ತಿಳಿಯುವ ಪ್ರಯತ್ನ.  ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ  ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರೀಕ್ಷಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ” ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ  ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ.  ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ. (೧)ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾಇನ್ನೂ ಯಾಕ……….ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ.  ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ. (೨)ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ.  ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿಯರು ಅದಕ್ಕೂ ಮೇಲಿನದ್ದು ಜೋಗತಿಯರು.  ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ . (೩)ಇರು ಅಂದರ ಬರತೇನಂತ ಎದ್ದು ಹೊರಡಾಂವಾಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾಇನ್ನೂ ಯಾಕ………. ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ.  ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ (೪)ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾಇನ್ನೂ ಯಾಕ……….ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ.  ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ.  ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು? (೫)ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾಇನ್ನೂ ಇವನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ, ಪತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ . (೬)   ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?ಇನ್ನೂ ಯಾಕ ಬರಲಿಲ್ಲಾ ? ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ.  ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು . ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ.  ಕಣ್ಣಿಗೆಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದತೆಯನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ . ಬೇಂದ್ರೆಯವರ ಸಖೀ ಗೀತದ  ಇಪ್ಪತಾಲ್ಕನೆಯ ಕವನವಾಗಿರುವ ಇದನ್ನು ಅವರ ಸಮಗ್ರ ಕಾವ್ಯ ಔದುಂಬರ ಗಾಥೆಯ 4ನೇ ಸಂಪುಟ ವಿನ್ಯಾಸದಲ್ಲಿ ಸೇರಿಸಲಾಗಿದೆ ಸುಜಾತಾ ರವೀಶ್

“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್ Read Post »

ಕಾವ್ಯಯಾನ

“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ

ಕಾವ್ಯ ಸಂಗಾತಿ ಶ್ರೀನಿವಾಸ್ ಕೆ ಎಂ “ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಮೂಡಣದ ಬಾನಲಿ ಹೊನ್ನ ಕಿರಣವ ಸೂಸುವಉದಿಸಿತೊಂದು ತಾರೆ,ಅಂಬಿಕಾ ತನಯರಾಗಿ,ಅರವಿಂದರ ತತ್ವದೊಳು,ರವೀಂದ್ರರ ಕಾವ್ಯದಲಿಮಿಂದು ಪುನೀತರಾದರಂದು, ಶಬ್ಧಗಾರುಡಿಗಾನಾಗಿ,ಮಾತು ಮಾತು ಮಥಿಸಿ,ನಾದವ ಝೇಂಕರಿಸುತಅಕ್ಕರದ ಅಕ್ಕರೆಯ ಪದವ ಹೊಸೆಯುತ ,ಶಬ್ಧ ನಿಶ್ಶಬ್ಧಗಳ ಜೊತೆಆಡಿ, ಹಾಡಿ, ಕುಣಿದು, ನಲಿಸಿದಾತ,ಹೃದಯಗವ್ವರದೊಳುಒಲವ ಹಣತೆಯ ಬೆಳಗಿಸಿ,ಒಳಗಣ್ಣ ತೆರಸಿ ಅಂತಃಕರಣದಕದವ ತಟ್ಟಿ ಎಬ್ಬಿಸಿದಾತಬದುಕು ಹಿಡಿಗಾಳಿನಂತಿರಲಿಬಿಡಿಗಾಳಿನಂತೆ ಬಿಡಿಯಾಗದಿರಲಿಸರಸದೊಂದಿಗೆ ಸೇರಿವಿರಸವ ತೊರೆದುಸಮರಸದ ಬದುಕನುಜಗಕೆ ತಿಳಿಸಿದಾತ ವಿಧಾತ. ಶ್ರೀನಿವಾಸ ಕೆ.ಎಮ್.

“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಚೂರಾದ ಹೃದಯ ತೆರೆದು ತೋರಿಸಲಿ ಹೆಂಗ ಹೇಳನೋವಿನಲಿ ಒದ್ದಾಡೊ ಮನಸ ಬಚ್ಚಿಡಲಿ ಹೆಂಗ ಹೇಳ ನೂರು ಮಾತು ಎದೆಯಲ್ಲೇ ಉಳಿದು ಕೊರೆಯುತಿವೆಉಕ್ಕೊ ಬಯಕೆ ಬಾಂಧಳವ  ಬತ್ತಿಸಲಿ ಹೆಂಗ ಹೇಳ ದುಃಖದೊಡಲ ಕೊರೆದ ನೋವಿನಲೆಗಳು ಬೊಬ್ಬಿಡುತಿವೆದಿನರಾತ್ರಿ ಕಂಡ ಕನಸನೆಲ್ಲ ಕೊಂದುಬಿಡಲಿ ಹೆಂಗ ಹೇಳ ತುಂಟತನದಿ ಮಾಡಿದ ಆ ಗಾಯಕೆ ಮುಲಾಮು ಸಿಕ್ಕೀತೇಕಂಗೋಳಿಸುವ ಆಸೆಗಳ ತೋಟಕೆ ಕಿಚ್ಚಚ್ಚಲಿ ಹೆಂಗ ಹೇಳ ಕಾದು ಕಾದು ಕಂಗೆಟ್ಟು ಬೆಂಗಾಡ ಹೊಕ್ಕು ಬೆಚ್ಚಿಬಿದ್ದಿರುವೆಒತ್ತರಿಸಿ ಬರೋ ಹಂಬಲದ ಹಸಿವ ಹಿಂಗಿಸಲಿ ಹೆಂಗ ಹೇಳ ಸಂಗದಾಟ ತಂದ ಸಂಕಷ್ಟದ ಬೇನೆ ಸುಡುತಿವೆ ನನ್ನೊಡಲತಾಳದ ತುಡಿತಗಳ ತಾಪವೇರಿರಲು ತಗ್ಗಿಸಲಿ ಹೆಂಗ ಹೇಳ ಅನು ಹತ್ತು ಜನುಮಕಾಗುವಷ್ಷು ಅನುರಾಗ ಕಟ್ಟಿಟ್ಟಿದ್ದಳುತೋಡಿದ ಒಲವಿನೊರತೆ ಬತ್ತುತಿರಲು ಸಹಿಸಲಿ ಹೆಂಗ ಹೇಳ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

ಇತರೆ, ಪ್ರಬಂದ

“ಊರ ಮುಂದಿನ ಅರಳಿ ಮರ”ಗೊರೂರು ಅನಂತರಾಜು ಅವರ ಪ್ರಬಂಧ

ಪ್ರಬಂಧ ಸಂಗಾತಿ “ಊರ ಮುಂದಿನ ಅರಳಿ ಮರ” ಗೊರೂರು ಅನಂತರಾಜು ‘ಬನ್ನಿ ಕವಿಗಳೇ, ಬಹಳ ದಿನಗಳ ಮೇಲೆ ಊರಿಗೆ ಬಂದಿದ್ದೀರಿ. ಚೆನ್ನಾಗಿದ್ದೀರಿ ತಾನೇ? ಯಾರೋ ಮಾತನಾಡಿದಂತಾಗಿ ಹಿಂತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಸುತ್ತಾ ಕಣ್ಣಾಯಿಸಿದೆ ಉಹೂಂ ಯಾರೂ ಇಲ್ಲ..!‘ಅಲ್ಲಿ ಇಲ್ಲಿ ಯಾಕೆ ನೋಡುವಿರಿ ಕವಿಗಳೇ, ನಾನು ಅರಳಿಮರ ಮಾತನಾಡುತ್ತಿರುವೆ. ಎಷ್ಟೋ ವರ್ಷಗಳಿಂದ ಎತ್ತರಕ್ಕೆ ಬೆಳೆದು ನಿಂತಿರುವೆ. ಇನ್ನೂ ಬಿದ್ದಿಲ್ಲ. ಯಾರೋ ಮಹನೀಯರು ನನ್ನ ಸುತ್ತಲೂ ಕಟ್ಟೆ ಕಟ್ಟಿದ್ದಾರೆ. ಬನ್ನಿ ಇಲ್ಲಿ  ಕುಳಿತು  ವಿಶ್ರಮಿಸಿ. ಕೊಂಚ ನಿಮ್ಮೊಂದಿಗೆ ಮಾತನಾಡುವ ಬಯಕೆ ಇದೆ.‘ಆಯ್ತು ಅರಳಿಮರವೇ ಕುಳಿತುಕೊಂಡೆ. ಹೇಳಿ ನಿಮಗೀಗ ವಯಸ್ಸು ಎಂತಾ?  ‘ನನಗೆ ತಿಳಿಯದು ಮಾರೆಯರೇ. ಯಾರಿಗಾದರೂ ತಿಳಿದಿದ್ದರೇ ತಿಳಿದು ನನಗೂ ತಿಳಿಸಿ.   ಈಗ ನಿಮ್ಮ ಕಥೆ ಹೇಳಿ. ಈಗಲೂ ಕಥೆ ಕವನ ಬರೆಯುತ್ತಿದ್ದೀರಾ. ಎಷ್ಟು ಪುಸ್ತಕ ಬರೆದಿರುವಿರಿ. ನಮ್ಮೂರು ಹಿಂತಿರುಗಿ ನೋಡಿದಾಗ ಎಂಬ ನಿಮ್ಮ ಪುಸ್ತಕದಲ್ಲೂ ನನ್ನ ಪ್ರಸ್ತಾಪವಿಲ್ಲ. ನನ್ನನ್ನು ನೀವು ಏಕೆ ಮರೆತಿರಿ..?  ‘ಇಲ್ಲ ಅರಳಿಮರವೇ, ನಾನು ಅರಳಿಕಟ್ಟೆ ಎಂಬ ನಾಟಕ ಬರೆದಿದ್ದು ನಿನ್ನ ನೆನಪಿನಲ್ಲೇ.  ‘ಹೌದೇ, ತುಂಬಾ ಸಂತೋಷ. ಆ ನಾಟಕ ಇಲ್ಲಿ ಪ್ರದರ್ಶಿಸಬಹುದಿತ್ತಲ್ಲ..‘ನಾನು ನಾಟಕ ಬರೆಯಬಹುದು ಅಷ್ಟೇ. ಅದನ್ನು ಕಲಿತು ಪ್ರದರ್ಶಿಸುವರು ಸಿಗಬೇಕಷ್ಟೇ.  ‘ನಿಂತುಹೋದ ಕನ್ನಡ ರಂಗವೈಭವ ಎಂಬ ನಾಟಕ ಪುಸ್ತಕದ ಮುಖಪುಟದಲ್ಲಿ ಚಿತ್ರನಟ ನರಸಿಂಹರಾಜು ಪೋಟೋ ಹಾಕಿದ್ದೀರಿ. ಅವರು ಇಲ್ಲಿ ಬಂದು ನಾಟಕ ನಟಿಸಿದ್ದರು..‘ನರಸಿಂಹರಾಜು ಕುರಿತಾಗಿಯೇ ಪುಸ್ತಕದಲ್ಲಿ ಬರೆದಿದ್ದೇನೆ. ಅವರು ಇಲ್ಲಿ ಬಂದಾಗ್ಗೆ ನಾನು ಹೈಸ್ಕೂಲು ವಿದ್ಯಾರ್ಥಿ. ಅಗ ಊರಿನ ರಥೋತ್ಸವ ಜಾತ್ರೆಗೆ ಅಪಾರ ರಾಸುಗಳು ಕಟ್ಟುತ್ತಿದ್ದವು. ಅಂದು ನಾಟಕ ಕಂಪನಿಯೊAದು ಇಲ್ಲಿ ಮೊಕ್ಕಾಂ ಮಾಡಿ  ನರಸಿಂಹರಾಜು, ಸುದರ್ಶನ್, ಶಕ್ತಿಪ್ರಸಾದ್ ನಾಟಕದಲ್ಲಿ ನಟಿಸಲು ಬಂದಿದ್ದರು.‘ಅಲ್ಲಿ ಒಂದು ಟೆಂಟ್ ಸಿನಿಮಾ ಇತ್ತು..‘ಹೌದು. ಆಗ ವಾರಕ್ಕೆರಡು ಸಿನಿಮಾ ತೋರಿಸುತ್ತಿದ್ದರು. ಭಾನುವಾರದಿಂದ ಮೂರು ದಿನ ತಮಿಳು, ನಾಲ್ಕು ದಿನ ಕನ್ನಡ ಸಿನಿಮಾ. ಆ ಸಿನಿಮಾ ಪೋಸ್ಟರ್ ನೋಡೇ ಆನಂದಿಸುತ್ತಿದ್ದವು. ಕದ್ದು ಸಿನಿಮಾ ನೋಡಿ ಅಪ್ಪನಿಂದ ಹೊಡೆಸಿಕೊಂಡ ಮಂಡಿಚಿಪ್ಪಿನ ಗಾಯದ ಗುರುತು ಇನ್ನು  ಇದೆ.  ‘ ಆ ಟೆಂಟ್ ಸಿನಿಮಾ ಜಾಗದಲ್ಲೇ ಗ್ರಾಮ ಪಂಚಾಯ್ತಿ ಕಛೇರಿ ಕಟ್ಟಡ ಇತ್ತಲ್ಲ.. ಅಲ್ಲಿ ಗಣೇಶೋತ್ಸವಕ್ಕೆ  ಹರಿಕಥೆ, ಚೌಡಿಕೆ ಕಥೆ, ನಾಟಕ, ಆರ್ಕೆಸ್ಟಾç..‘ನಿಜ, ನಮಗೆ ಟೆಂಟ್ ಸಿನಿಮಾ ಹೋದಮೇಲೆ ನಮಗೆ ಹತ್ತು ದಿನ ಇದೇ ಮನರಂಜನೆ. ಭಾನುವಾರ ಗಣೇಶನ ವಿಸರ್ಜನೆ. ಹಾಸನ ಬಂಗಾರಿ ತಂಡದ ಕೀಲುಕುದುರೆ ಮನರಂಜನೆ..‘ಇಲ್ಲೇ, ನೀವು ಜಿ.ಎಸ್.ಪ್ರಕಾಶ್ ಬರೆದ ಸರಿದ ತೆರೆ ನಾಟಕದಲ್ಲಿ ಮಾತು ಮರೆತು..‘ಅದೆಂತು ಮರೆಯಲಿ. ಮೊದಲ ರಂಗ ಪ್ರವೇಶ ಗಾಬರಿ..  ‘ಮತ್ತೇ ಅಲ್ಲಿ ನೀವು ಜಿಲ್ಲಾ ನಾಟಕೋತ್ಸವ..‘ಹೌದು, ಬೇಲೂರು ಸಿ.ಎಸ್.ಆಚಾರ್ ಅವರ ಹೆಣದ ನಾಟಕ ನೋಡಿ ಮೊದಲ ಬಾರಿ ವಿಮರ್ಶೆ ಬರೆದಿದ್ದೇ.‘ನೀವು ವೀರಪ್ಪನ್ ಭೂತ  ನಾಟಕ ಬರೆದಾಡಿಸಿದ್ದು..!‘ಹೌದು ೧೯೯೧ರಲ್ಲಿ. ಹೇಮಾವತಿ ತೀರಿದ ಗಾಂಧಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಿಧನರಾದ ಆ ವರ್ಷ ನಾವು ಹುಡುಗರು ಡಾ. ಗೊರೂರು ಸ್ಮರಣ ಸಮಿತಿ ರಚಿಸಿಕೊಂಡು, ನಾನು ಡಾ.ಗೊರೂರು ಬದುಕು ಬರಹ ಪ್ರಬಂಧ ಮಂಡಿಸಿ ಅವರು ಹುಟ್ಟಿದ ಮನೆ ಸ್ಮಾರಕವಾಗಬೇಕೆಂದು  ಪ್ರಯತ್ನ ನಡೆಸಿದೆವು.  ‘ಅವರ ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿರುವೆಯಾ.?‘ನೋಡಿದ್ದೇನೆ. ಅದು ಬಿಡುಗಡೆ ಆಗಿ ೫೦ ವರ್ಷ ಕಳೆದಿದೆ.‘ಅದರಲ್ಲಿ ತೋರಿಸಿದ್ದಾರಲ್ಲಾ ಮಾರಿ ಹಬ್ಬ. ಅದು ಹಿಂದೆ ಇಲ್ಲೇ ನಡೆಯುತ್ತಿತ್ತು ಗೊತ್ತೇ.?‘ ಗೊತ್ತಿಲ್ಲ.  ಆದರೆ ಆ ಸಿನಿಮಾದಲ್ಲಿ ಊರಿಗೆ ಪ್ರವಾಹ ಬಂದ ಸೀನ್ ಇದೆಯೆಲ್ಲಾ. ಅಂತಹ ಸೀನ್ ೧೯೯೧ರಲ್ಲಿ ನೋಡಿದ್ದೆ.  ‘ ಇರಲಿ ಈಗ ಊರಿನ ಶ್ರೀ ಯೋಗನರಸಿಂಹಸ್ವಾಮಿ ತೇರು ಜಾತ್ರೆ ನೋಡಲು ಬಂದಿರುವೆ.  ಊರಿನ ಕಲಾವಿದರು ಪೌರಾಣಿಕ ನಾಟಕೋತ್ಸವ ಏರ್ಪಡಿಸಿದ್ದಾರೆ. ನೋಡಿ ಹೋಗು. ನಾನು ಇನ್ನು ಕೆಲವು ವರ್ಷ ಬದುಕಿರುವೆ. ಮತ್ತೇ ಎಂದಾದರೂ ಒಂದು ದಿನ ಬಾ..— ಗೊರೂರು ಅನಂತರಾಜು,

“ಊರ ಮುಂದಿನ ಅರಳಿ ಮರ”ಗೊರೂರು ಅನಂತರಾಜು ಅವರ ಪ್ರಬಂಧ Read Post »

ಕಾವ್ಯಯಾನ

“ಮಹಾತ್ಮ” ಕವಿತೆ ಇಮಾಮ್ ‌ಮದ್ಗಾರ

ಕಾವ್ಯ ಸಂಗಾತಿ “ಮಹಾತ್ಮ” ಕವಿತೆ ಇಮಾಮ್ ‌ಮದ್ಗಾರ ನೀಲಗಗನದಲಿ ಲೀನನಾದೆನೀ ಬೆಳಗಿದಾ ಬೆಳಕು ಜಗವೆಲ್ಲ ಹರಡಿತ್ತು ಮತ್ತೆಲ್ಲಿಹುದು ?ಸತ್ಯದಾ ಕಿರಣ !ಮಿಥ್ಯೆಯ ಗಾಳಿಗೆ ಸತ್ಯದ ಹಣತೆ ನಂದಿಹೋಯಿತು ಸಂಧ್ಯಾಸಮಯ ರಾಘವನ ಪೂಜೆಗೆ ಅಣಿಯಾದದೇಹನಡೆಯುತ್ತಿತ್ತು ಎಂದಿನಂತೆದೇವರ ದಾರಿಯಲಿ…ಹಂತಕನ ಕಾಡುತೂಸು ಕಾಯುತ್ತಿತ್ತು ಸತ್ಯದಾ ಜ್ಯೋತಿ ನಂದಿಸಲೆಂದೇ ಬರಸಿಡಿಲಿನಂತೆ ಬಂದೆರಗಿದ ಗುಂಡು ನಾಟಿತೆದೆಗೆ.ಜಗವನ್ನೆ ನಡುಗಿಸಿದ್ದ ಗುಬ್ಬಿಯಷ್ಟಿದ್ದ ದೇಹ ಸಾವ ಸುಖವನಪ್ಪುತ್ತಾ ಸತ್ಯದಾ..ರಕುತ ಭಾರತಂಬೆಯ ನೆಲವ ತೋಯಿಸಿತ್ತು ತಾನೇ ಬಿಡುಗಡೆ ಗೊಳಿಸಿದ ನೆಲವಂದು ಬಿಕ್ಕಳಿಸುತ್ತಿತ್ತು ನಗುವ ಮುಖದಲಿ ಕ್ಷಮೆಯ ಕಳೆಯಿತ್ತು ತ್ಯಾಗವೇ ಜೀವನ ತಿಳಿಭಾವವಿತ್ತುಅವಸರ ವೇನಿತ್ತೊ ಬಲ್ಲವರಾರು ?ನಾಕಕ್ಕೂ ಸ್ವಾತಂತ್ರ್ಯ ಕೊಡಿಸಲು ಅವಸರಸಿ ಪಯಣಿಸಿದ ಮಹಾತ್ಮನೇನಿಮಗಿಂದು ಗೌರವ ಪೂರ್ಣನಮನಗಳು ಇಮಾಮ್ ‌ಮದ್ಗಾರ

“ಮಹಾತ್ಮ” ಕವಿತೆ ಇಮಾಮ್ ‌ಮದ್ಗಾರ Read Post »

ಕಾವ್ಯಯಾನ

“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ

ಕಾವ್ಯ ಸಂಗಾತಿ “ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ ನಿಜ ಸತ್ಯ ಶಾಂತಿ ಮೂರ್ತಿಅಹಿಂಸೆ ಯಿಂದ ನಡೆದ ಜೀವಿನ್ಯಾಯ ನೀತಿ ನಿನ್ನ ಉಸಿರುದೇಶಕ್ಕಾಗಿ ದುಡಿದ ತ್ಯಾಗಮಯಿ ಮಹಾತ್ಮ ಗಾಂಧಿ ನೀನು… ದೇಶದ ಸ್ವತಂತ್ರಕ್ಕಾಗಿ ಹೋರಾಡಿಶ್ರಮ ಜೀವಿ ಗಾಂಧಿತುಂಡು ಪಂಚೆ ತೊಟ್ಟುಬಡವರ ಏಳಿಗೆಗೆ ಬಯಸಿದೆಮಹಾತ್ಮ ಗಾಂಧಿ ನೀನು… ಅನ್ನ ನೀರು ಬಿಟ್ಟುಉಪವಾಸದಿ ಜೀವನ ಸವಸಿನಿನ್ನ ನಿಜ ಸ್ವರೂಪಅರಿಯದ ಭಂಡರಗುಂಡಿಗೆ ಬಲಿಯಾದೆ ನೀನು … ದೇಶ ವಿಭಜನೆಯಾಗದಂತೆದೇಶದ ಒಗ್ಗಟ್ಟಿಗಾಗಿಮಿಡಿದ ಜೀವಿ ನೀನುನಿನ್ನ ಆಶಯ ಅದೇಮಾರಕವಾಗಿ ಹುತಾತ್ಮವಾದಿ … ಇಂಥ ಗಾಂಧಿಯನ್ನುಮೌಢ್ಯ ಜನರ ಗುಂಡೇಟಿಗೆದೇಹ ತ್ಯಜಿಸಿದ ಮಹಾತ್ಮಇಂದಿಗೂ ನಿನ್ನ ಆದರ್ಶ ಜೀವನಪ್ರೇರಕ ಶಕ್ತಿಯಾಗಿ ಹೊರಹೊಮ್ಮುತಿದೆ ಇಂದು ನಿನ್ನ ಸ್ಮರಣೆ ಮಾಡುವೆವುಆದರೂ ಒಂದು ಪ್ರಶ್ನೆ ಕಾಡಿದೆದೇಶದ ಜನತೆಗೆ, ಮುಗ್ಧ ಮಕ್ಕಳಿಗೆಉತ್ತರಿಸಲಾರದ ಪ್ರಶ್ನೆಗಾಂಧಿಯನೇಕೆ ಕೊಂದರು? ವಿಜಯಲಕ್ಷ್ಮಿ ಹಂಗರಗಿ

“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ Read Post »

ಇತರೆ

“ಒಂದು ತಪ್ಪು” ಪೃಥ್ವಿರಾಜ್ ಟಿ ಬಿ

ವಿಶೇಷ ಸಂಗಾತಿ “ಒಂದು ತಪ್ಪು” ಪೃಥ್ವಿರಾಜ್ ಟಿ ಬಿ ಜೀವನದಲ್ಲಿ ನಾವು ಮಾಡುವ ಒಂದು ತಪ್ಪು ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.ನಾವು ಹಾಗಲ್ಲ ಎಂದು ತಿಳಿದಿದ್ದರೂ ಪರಿಸ್ಥಿತಿ ಅವರಿಗೆ ನಮ್ಮ ಆ ಒಂದು ತಪ್ಪು ದೊಡ್ಡದಾಗಿ ಕಾಣುತ್ತದೆ.ನಾವು ಮಾಡಿದ ಆ ಒಂದು ತಪ್ಪು ನಮ್ಮನ್ನು ಒಳಗೊಳಗೆ ಕೊಲ್ಲುತ್ತದೆ.ಕೆಲವೊಮ್ಮೆ ಅದನ್ನು ನೆನಪು ಮಾಡಿಕೊಂಡಾಗ ಅದರಿಂದ ನಮ್ಮ ವ್ಯಕ್ತಿತ್ವದ ದೃಷ್ಟಿಕೋನ ನಾವೇನೆಂದು ತಿಳಿದವರೇ ಬದಲಿಸಿ ನೋಡುವಾಗ ಬದುಕಿನ ಮೇಲೆ ಜಿಗುಪ್ಸೆ ಬರುತ್ತದೆ. ಏನೇನೋ ಯೋಚನೆಗಳು ಬರುತ್ತವೆ. ಜೀವನವೆಂಬುದು ನಿರಂತರ ಕಲಿಕೆಯ ಪಯಣ. ಪ್ರತಿದಿನ ನಾವು ಹೊಸ ಅನುಭವಗಳನ್ನು ಸಂಗ್ರಹಿಸುತ್ತೇವೆ, ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ, ಹೊಸ ಸಂಬಂಧಗಳನ್ನು ಕಟ್ಟುತ್ತೇವೆ. ಈ ಪಯಣದಲ್ಲಿ ನಾವು ಸಾಧಿಸುವ ಯಶಸ್ಸಿನಷ್ಟೇ, ಮಾಡುವ ತಪ್ಪುಗಳೂ ನಮ್ಮನ್ನು ರೂಪಿಸುತ್ತವೆ. ಆದರೆ ಕೆಲವೊಮ್ಮೆ ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಸಂಪೂರ್ಣ ವ್ಯಕ್ತಿತ್ವದ ಮೇಲೆ ಆಳವಾದ ಛಾಯೆಯನ್ನು ಬೀರುತ್ತದೆ. ಆ ತಪ್ಪು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲ ಶಕ್ತಿಯನ್ನು ಹೊಂದಿರುತ್ತದೆ.ಮಾನವನ ಸ್ವಭಾವವೇ ತಪ್ಪುಮಾಡುವದು. ಯಾರೂ ಸಂಪೂರ್ಣರಾಗಿಲ್ಲ. ಆದರೂ ಸಮಾಜ ನಮ್ಮ ತಪ್ಪನ್ನು ಕ್ಷಮಿಸಲು ಯಾವಾಗಲೂ ಸಿದ್ಧವಿರುವುದಿಲ್ಲ. ನಾವು “ನಾವು ಹಾಗಲ್ಲ” ಎಂದು ಒಳಗೊಳಗೆ ತಿಳಿದಿದ್ದರೂ, ಹೊರಗಿನ ಜಗತ್ತಿಗೆ ನಮ್ಮ ಆ ಒಂದು ತಪ್ಪೇ ನಮ್ಮ ಗುರುತಾಗಿ ಕಾಣುತ್ತದೆ. ನಮ್ಮ ಶುದ್ಧ ಉದ್ದೇಶಗಳು, ಒಳ್ಳೆಯ ಕಾರ್ಯಗಳು, ಮೌಲ್ಯಗಳು ಎಲ್ಲವೂ ಆ ಒಂದು ತಪ್ಪಿನ ನೆರಳಲ್ಲಿ ಮಸುಕಾಗಿಬಿಡುತ್ತವೆ. ಇದೇ ನಮ್ಮ ಮನಸ್ಸಿಗೆ ಅತಿದೊಡ್ಡ ನೋವನ್ನು ಉಂಟುಮಾಡುತ್ತದೆ.ಒಂದು ತಪ್ಪು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸುತ್ತೇವೆ – “ನಾನು ನಿಜವಾಗಿಯೂ ಇಷ್ಟು ಕೆಟ್ಟವನಾಗಿದ್ದೇನಾ?”, “ನನ್ನಿಂದಲೇ ಇದು ನಡೆಯಿತೇ?” ಎಂದು. ಈ ಪ್ರಶ್ನೆಗಳು ನಿಧಾನವಾಗಿ ನಮ್ಮ ಮನಸ್ಸನ್ನು ಕಿತ್ತುಕೊಳ್ಳುತ್ತವೆ. ಕೆಲವೊಮ್ಮೆ ನಾವು ಹೊರಗೆ ನಗುತ್ತಾ ಬದುಕುತ್ತೇವೆ, ಆದರೆ ಒಳಗೊಳಗೆ ಅದೇ ತಪ್ಪು ನಮ್ಮನ್ನು ಮೌನವಾಗಿ ಕೊಲ್ಲುತ್ತಿರುತ್ತದೆ. ಇದು ಕಾಣದ ನೋವು, ಆದರೆ ಅತ್ಯಂತ ತೀವ್ರವಾದ ನೋವು.ಅತ್ಯಂತ ನೋವುಂಟುಮಾಡುವ ಸಂಗತಿ ಎಂದರೆ ನಮ್ಮನ್ನು ಚೆನ್ನಾಗಿ ಅರಿತವರು ಕೂಡ ಆ ತಪ್ಪಿನ ಆಧಾರದ ಮೇಲೆ ನಮ್ಮನ್ನು ಅಳೆಯಲು ಪ್ರಾರಂಭಿಸುವುದು. ಒಮ್ಮೆ ನಮ್ಮನ್ನು ಗೌರವದಿಂದ ನೋಡಿದ ಕಣ್ಣುಗಳು, ಈಗ ಸಂಶಯದಿಂದ ನೋಡುವಾಗ ಮನಸ್ಸು ಕುಗ್ಗುತ್ತದೆ. ಅವರ ದೃಷ್ಟಿಕೋನದ ಬದಲಾವಣೆ ನಮ್ಮ ಆತ್ಮಗೌರವಕ್ಕೆ ದೊಡ್ಡ ಆಘಾತವನ್ನು ಉಂಟುಮಾಡುತ್ತದೆ. ಇದರಿಂದ ಜೀವನದ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಬದುಕು ಅರ್ಥವಿಲ್ಲದಂತೆ ಕಾಣಲು ಶುರುವಾಗುತ್ತದೆ. ಮನಸ್ಸಿನಲ್ಲಿ ಅಶಾಂತ ಯೋಚನೆಗಳು, ನಿರಾಶೆ, ಭಯ, ಅಪರಾಧಬೋಧ ಮೇಳೈಸುತ್ತವೆ.ಕೆಲವರಿಗೆ ಆ ತಪ್ಪು ಒಂದು ಪಾಠವಾಗುತ್ತದೆ; ಇನ್ನೂ ಕೆಲವರಿಗೆ ಅದು ಶಾಪವಾಗಿಬಿಡುತ್ತದೆ. ವ್ಯತ್ಯಾಸ ಇರುವುದು ನಮ್ಮ ಅದನ್ನು ನೋಡುವ ದೃಷ್ಟಿಕೋನದಲ್ಲಿ. ತಪ್ಪನ್ನು ನಾವು ಒಪ್ಪಿಕೊಂಡು, ಅದರಿಂದ ಪಾಠ ಕಲಿದು ಮುಂದೆ ಸಾಗಿದರೆ ಅದು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಆದರೆ ಅದನ್ನೇ ನಮ್ಮ ಅಸ್ತಿತ್ವದ ಗುರುತಾಗಿ ಮಾಡಿಕೊಂಡರೆ, ಅದು ನಮ್ಮನ್ನು ನಿಧಾನವಾಗಿ ಕುಗ್ಗಿಸುತ್ತದೆ.ಸಮಾಜದ ಪಾತ್ರವೂ ಇಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸಮಾಜ ಸಾಮಾನ್ಯವಾಗಿ ತಪ್ಪನ್ನು ತೀರ್ಪಿನ ಕಣ್ಣಿನಿಂದ ನೋಡುತ್ತದೆ; ಸಹಾನುಭೂತಿಯ ಕಣ್ಣಿನಿಂದ ಅಲ್ಲ. ಒಬ್ಬ ವ್ಯಕ್ತಿಯ ಒಂದು ತಪ್ಪನ್ನು ಸಂಪೂರ್ಣ ಜೀವನದ ತೂಕಕ್ಕೆ ಹಾಕಿ ತೀರ್ಮಾನಿಸುವುದು ಸುಲಭ. ಆದರೆ ಆ ವ್ಯಕ್ತಿಯ ಒಳಗಿನ ನೋವು, ಪಶ್ಚಾತ್ತಾಪ, ಬದಲಾವಣೆಯ ಪ್ರಯತ್ನಗಳು ಬಹುತೇಕ ಯಾರಿಗೂ ಕಾಣುವುದಿಲ್ಲ. ನಾವು ಸಹ ಇತರರ ತಪ್ಪನ್ನು ಕ್ಷಮಿಸುವ ಮನಸ್ಸು ಬೆಳೆಸಬೇಕು. ಏಕೆಂದರೆ ಇಂದು ಅವರ ಸ್ಥಾನದಲ್ಲಿ ನಾವಿರಬಹುದು; ನಾಳೆ ನಮ್ಮ ಸ್ಥಾನದಲ್ಲಿ ಅವರು ಇರಬಹುದು.ತಪ್ಪುಗಳು ನಮ್ಮನ್ನು ಮಾನವೀಯರನ್ನಾಗಿಸುತ್ತವೆ. ತಪ್ಪಿಲ್ಲದ ಬದುಕು ಕಲ್ಪನೆಯಲ್ಲಷ್ಟೇ ಸಾಧ್ಯ. ಪ್ರತಿಯೊಂದು ತಪ್ಪು ನಮ್ಮೊಳಗೆ ಒಂದು ಪಾಠವನ್ನು ಅಡಗಿಸಿಕೊಂಡಿರುತ್ತದೆ. ಅದು ನಮ್ಮನ್ನು ಜಾಗರೂಕರನ್ನಾಗಿಸುತ್ತದೆ, ವಿನಮ್ರತೆಯನ್ನು ಕಲಿಸುತ್ತದೆ, ಇತರರ ನೋವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಅವುಗಳಿಂದ ಕಲಿಯುವ ಧೈರ್ಯವನ್ನು ಹೊಂದಿದಾಗ ಮಾತ್ರ ನಿಜವಾದ ವ್ಯಕ್ತಿತ್ವ ಬೆಳೆಯುತ್ತದೆ.ಒಂದು ತಪ್ಪಿನಿಂದ ಹೊರಬರುವುದು ಸುಲಭವಲ್ಲ. ಕೆಲವೊಮ್ಮೆ ಸಮಯ ಬೇಕಾಗುತ್ತದೆ, ಕೆಲವೊಮ್ಮೆ ಕ್ಷಮೆ ಕೇಳಬೇಕಾಗುತ್ತದೆ, ಇನ್ನೊಮ್ಮೆ ಸ್ವತಃ ನಮ್ಮನ್ನೇ ಕ್ಷಮಿಸಿಕೊಳ್ಳಬೇಕಾಗುತ್ತದೆ. ನಮ್ಮನ್ನು ನಾವು ಕ್ಷಮಿಸಿಕೊಳ್ಳುವ ಕಲಿಕೆ ಅತ್ಯಂತ ಕಠಿಣವಾದರೂ ಅತ್ಯಂತ ಅಗತ್ಯವಾದದ್ದು. ಏಕೆಂದರೆ ನಾವು ನಮ್ಮನ್ನೇ ಕ್ಷಮಿಸದಿದ್ದರೆ, ಮುಂದೆ ಸಾಗಲು ಸಾಧ್ಯವಿಲ್ಲ.ನಮ್ಮ ಮನಸ್ಸಿನಲ್ಲಿ ಮರುಮರು ಅದೇ ತಪ್ಪಿನ ನೆನಪುಗಳು ಬಂದಾಗ, ನಾವು ನಮ್ಮನ್ನು ತಡೆದುಕೊಳ್ಳಬೇಕು. “ನಾನು ಆ ತಪ್ಪಿಗಿಂತ ದೊಡ್ಡವನು”, “ನನ್ನ ಬದುಕು ಒಂದು ತಪ್ಪಿನಿಂದ ಸೀಮಿತವಾಗುವುದಿಲ್ಲ” ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ಉತ್ತಮ ಸಂಗಾತಿ, ಸೃಜನಶೀಲತೆ, ಸೇವಾಭಾವ – ಇವುಗಳು ನಮ್ಮ ಮನಸ್ಸನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ.ವಿಶೇಷವಾಗಿ ಯುವಜನರಲ್ಲಿ ಒಂದು ತಪ್ಪು ದೊಡ್ಡ ನಿರಾಶೆಗೆ ಕಾರಣವಾಗುತ್ತದೆ. ಜೀವನವೇ ಮುಗಿದಂತೆ ಭಾಸವಾಗಬಹುದು. ಆದರೆ ಅದೇ ತಪ್ಪು ಭವಿಷ್ಯದ ಬಲಿಷ್ಠ ವ್ಯಕ್ತಿತ್ವಕ್ಕೆ ಬೀಜವಾಗಬಹುದು ಎಂಬುದನ್ನು ಅವರು ಅರಿಯಬೇಕು. ಇತಿಹಾಸದಲ್ಲಿನ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಜೀವನದಲ್ಲಿ ದೊಡ್ಡ ತಪ್ಪುಗಳನ್ನು ಮಾಡಿದ್ದಾರೆ; ಆದರೆ ಅದನ್ನೇ ತಮ್ಮ ಶಕ್ತಿಯಾಗಿ ಪರಿವರ್ತಿಸಿಕೊಂಡಿದ್ದಾರೆ.ಕೊನೆಗೆ ಹೇಳಬೇಕೆಂದರೆ, ಒಂದು ತಪ್ಪು ನಮ್ಮನ್ನು ಮುರಿಯಬಹುದು, ಅಥವಾ ನಮ್ಮನ್ನು ಕಟ್ಟಬಹುದು — ಅದು ನಮ್ಮ ಆಯ್ಕೆ. ತಪ್ಪು ನಮ್ಮ ಗುರುತು ಅಲ್ಲ; ನಾವು ಅದರಿಂದ ಏನು ಕಲಿತೆವು ಎಂಬುದೇ ನಮ್ಮ ನಿಜವಾದ ಗುರುತು. ಬದುಕು ಎಂದರೆ ಪರಿಪೂರ್ಣತೆ ಅಲ್ಲ, ನಿರಂತರ ಸುಧಾರಣೆ. ತಪ್ಪುಗಳನ್ನು ಒಪ್ಪಿಕೊಂಡು, ಆತ್ಮವಿಶ್ವಾಸದಿಂದ ಮುಂದೆ ಸಾಗುವವನೇ ನಿಜವಾದ ಗೆದ್ದವನು. ಪೃಥ್ವಿರಾಜ್ ಟಿ ಬಿ

“ಒಂದು ತಪ್ಪು” ಪೃಥ್ವಿರಾಜ್ ಟಿ ಬಿ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ
ಜಯದೇವಿ ತಾಯಿ ಲಿಗಾಡೆ ಅವರ ಜೀವನಗಾಥೆ
ಸವಿತಾ ದೇಶಮುಖ

Read Post »

You cannot copy content of this page

Scroll to Top