ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಚೂರಾದ ಮನ ಗಾಜು”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ ಅ “ಚೂರಾದ ಮನ ಗಾಜು” ಹೆಣ್ಣು ಮೃದು ಮನದ ಪಯಣದಲಿಮುಗ್ಧ ಮನದ ಹೂ ತೋಟದಲ್ಲಿನಂಬಿಕೆಯ ಹೂಗಳು ಅರಳಿದಾಗ,ಸಿಹಿ ಮಾತಿನ ಮಳೆ ಸುರಿಸಿಮನ ಕದಡುವ ಕಟುಕರು ನೆರಳಾಗಿ ನಿಲ್ಲಬೇಕಾದವರುಕಟುವಾಗಿ ವರ್ತನೆ ತೋರುವರುನಂಬಿಕೆಗೆ ಅರ್ಹತೆ ಇಲ್ಲದವರುಮೋಸದ  ಮುಖವಾಡದವರು ಕಣ್ಣಿನಲ್ಲಿ ಕನಸು ಕಟ್ಟಿಸಿನಾಳೆಯ ಚಿತ್ರ ಬರೆದವರು,ಅದೇ ಕೈಯಿಂದ ಕನಸು ಕಿತ್ತುಮೌನದ ಗಾಯ ಬಿತ್ತಿದವರು. ಹೃದಯವೆಂಬ ನಾಜೂಕಿನ ಗಾಜಿಗೆಸುಳ್ಳಿನ ಕಲ್ಲು ತೂರಿದವರುಚೂರುಚೂರಾದ ಪ್ರತಿಬಿಂಬದಲ್ಲಿನಗುವೂ ಕಳೆದುಹೋಗಲು ಕಾರಣವಾದವರು ಆದರೂ  ಹೆಣ್ಣು ಮಣ್ಣಲ್ಲಮಳೆ ಬಂದರೂ ಕರಗದ ಶಿಲೆ.ಗಾಯಗಳನ್ನೇ ಗರಿಗರಿಯಾಗಿ ಮಾಡಿಹೊಸ ಬದುಕಿಗೆ ಹೆಜ್ಜೆ ಇಡುವವಳು ಆಕೆಯ ಭಾವನೆಗಳ ಜೊತೆ ಆಟವಾಡುವವರಿಗೆಒಂದು ದಿನ ಅರಿವಾಗುತ್ತದೆಹೆಣ್ಣು ಮನವೆಂಬ ಸಮುದ್ರದ ಆಳವನ್ನು ಅಳೆಯಲು  ಸಾಧ್ಯವಾಗದು ಎಂದು. ಹೆಣ್ಣು ಹೃದಯವನ್ನು ನೋಯಿಸಿದ  ಮನ ,ಕೈಗಳುಒಮ್ಮೆ ಖಾಲಿಯಾಗುವ ಅರಿವಾಗುವುದೇ!ಆದರೆ ಆಕೆಯ ಆತ್ಮಸಮ್ಮಾನಎಂದೆಂದಿಗೂ ಎತ್ತರದಲ್ಲೇ ಇರುವುದು ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಚೂರಾದ ಮನ ಗಾಜು” Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ ಅವರ ಕವಿತೆ”ಓ ನಲ್ಲೇ ..”

ಕಾವ್ಯ ಸಂಗಾತಿ ಚಂದ್ರು ಪಿ ಹಾಸನ್ “ಓ ನಲ್ಲೇ ..” ನನ್ನೆದೆ ಕೋಗಿಲೆ ಕೂಗಿದೆಹೃದಯದ ತುಡಿತವ ಕೇಳದೆಎಲ್ಲಿರುವೆ?  ನೀನೆಲ್ಲಿರುವೆ?ಗೆಳತಿ ನಿನ್ನೇ ಕಾದಿರುವೆ ವಸಂತಕ್ಕೆ ವಸುಂಧರೆಹಸನಾಗಿ ಸೂಸುತ್ತಿದೆಸರಸರನೆ ಕೋಕಿಲೆಸೊಗಸಾಗಿ ಹಾಡುತ್ತಿದೆ ಹಸನಾದ ಸಮಯವುಬೆಸುಗೆಗೆ ಸಮ್ಮತಿಸಿದೆನಲ್ಲೇ ಯಾಕೀಗೆ ಕಸರತ್ತು?ಒಲ್ಲೇ… ಸಾಕಾಗಿದೆ ಬೇಸತ್ತು ಗೆಳತಿಯ ನನ್ನೊಡತಿಯಬರುವಿಕೆ ನೋಡುತ್ತಿರೇನಿನ್ನ ಅರಿವನ್ನು ಅರಿಯದೇಎನ್ನ ಮನವಿಲ್ಲಿ ಸೊರಗಿದೆ ತಂಪಾಗಿ ಇಂಪಾಗಿಬೀಸುವ ಗಾಳಿಯೇಒಮ್ಮೆ ನನ್ನವಳ ಸ್ಪರ್ಶಿಸಿ ನನ್ನೋಲೆಯಾ ತಿಳಿಸುವೆಯಾ? ಕನಸಲ್ಲೂ ಮನಸಲ್ಲೂಇನ್ಯಾರನೂ ನಾನೊಲ್ಲೇನೆಲೆಸಿ ಹರ್ಷಿಸಿ ಪೋಷಿಸಿನಿಲ್ಲೇ ಈ ಕನ್ನಡಿಗನಲ್ಲೇ…. ಚಂದ್ರು ಪಿ ಹಾಸನ್, 

ಚಂದ್ರು ಪಿ ಹಾಸನ್ ಅವರ ಕವಿತೆ”ಓ ನಲ್ಲೇ ..” Read Post »

ಇತರೆ, ಲಹರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ

ಲಹರಿ ಸಂಗಾತಿ “ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ  ಮೊನ್ನೆ ಪೇಟೆಯಲ್ಲಿ ಗೆಳತಿ ಸುಮತಿ ಬಹಳ ದಿನಗಳ ನಂತರ  ತನ್ನ ಮಗಳೊಂದಿಗೆ ಭೇಟಿಯಾದಳು. ಮುಖದಲ್ಲಿ ಮೊದಲಿದ್ದ ಗೆಲುವು ಕಾಣಲಿಲ್ಲ. ನಗೆಯೂ ಮುಖದಿಂದ ದೂರವೇ ಉಳಿದಿತ್ತು. ನಾನೇ ಒತ್ತಾಯಿಸಿ ಹೊಟೆಲ್ಲಿಗೆ ಕರೆದೊಯ್ದೆ. ಸದಾ ಉತ್ಸಾಹದ ಕಾರಂಜಿಯoತೆ ಚಿಮ್ಮುತ್ತಿದ್ದ ನೀನು ಇದೇಕೆ ಇಷ್ಟು ಸಪ್ಪಗಾಗಿ ಬಿಟ್ಟಿದ್ದಿಯಾ? ಎಂದಾಗ ಕಣ್ಣಂಚಿನಲ್ಲಿ ನೀರು ತಂದು ತನ್ನ ಪ್ರವರ ಬಿಚ್ಚಿಟ್ಟಳು. ಇಬ್ಬರೂ ದುಡಿತೀವಿ ಹೀಗಾಗಿ ಮನೆಯಲ್ಲಿ ಎಲ್ಲದಕ್ಕೂ ಆಳು. ಹಣಕ್ಕಂತೂ ಕೊರತೆಯಿಲ್ಲ.ಮುದ್ದಾದ ಮಗಳು ಮನೆಯಂಗಳದಲ್ಲಿ ನಲಿದಾಡ್ತಾಳೆ. ಇವರದೇ ಸಮಸ್ಯೆ ಆಗಿದೆ.ಎಂದಳು.  ಇಷ್ಟೆಲ್ಲಾ ಇರೋವಾಗ ನಿಮ್ಮ ಪತಿದೇವರದು ಏನು ಸಮಸ್ಯೆ  ಎಂದು ಕುತೂಹಲದಿಂದ ಪ್ರಶ್ನಿಸಿದೆ. ಅದಕ್ಕೆ ಸುಮತಿ,ಮೊದಲೆಲ್ಲ ಚೆನ್ನಾಗಿಯೇ ಇದ್ದ ರಮೇಶ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು  ಪಾರ್ಟಿ ಕ್ಲಬ್ ಪಬ್‌ನ್ನು ಮನರಂಜನೆಗೆoದು  ರೂಢಿಸಿಕೊಂಡು ಇತ್ತೀಚಿಗೆ ಅತಿಯೆನಿಸುವಷ್ಟು ಕುಡಿದು ಮನೆಗೆ ತಡರಾತ್ರಿ  ಬಂದು ಸುಮ್ಮನೆ ಮಲಗಿ ಬಿಡ್ತಾರೆ. ಮೊದಲೇ ಮಾತು ಕಮ್ಮಿ ಈಗಂತೂ ಮನೆಯಲ್ಲಿ ಮಾತಿಲ್ಲ ಕತೆಯಿಲ್ಲ.ದಿನಕ್ಕೆ ಒಂದೊ ಎರಡೊ ಮಾತನಾಡಿದರೆ ಹೆಚ್ಚು  ನಾನಾಗಲೇ ಮೇಲೆ ಬಿದ್ದು ಮಾತನಾಡಿಸಿದಾಗ ಹೂಂ ಹಾಂ ಅಷ್ಟೆ, ಸಿಟ್ಟಿಗೆದ್ದು ಜೋರಾಗಿ ಕಿರುಚಿದರೆ ಏನೂ ಪ್ರಯೋಜನವಿಲ್ಲ. ನನಗೇನಾಗಿಲ್ಲ ನಾನು ಇರೋದೆ ಹೀಗೆ ಮೊದಲಿನಿಂದ ಹೀಗೆ ಇದ್ದೀನಿ ನಿನಗೆ ಹಾಗೆನಿಸ್ತಿದೆ ಅಂತ ಹೇಳುತ್ತ ಜಾಗ ಖಾಲಿ ಮಾಡ್ತಾರೆ.ಸಂಬoಧಿಕರ ಮದುವೆ ಮುಂಜವಿಗoತೂ ಜಪ್ಪಯ್ಯ ಅಂದರೂ ಬರೋದಿಲ್ಲ.  ಮಗಳ ಜೊತೆ ಮಾತು ಅಷ್ಟಕ್ಕಷ್ಟೆ. ದೈಹಿಕ ಸುಖ ಬೇಕೆಂದಾಗ ಬಳಿ ಬರುತ್ತಾರೆ. ಇಂಥ ಮದುವೆಯಿಂದ ಪಡೆಯುತ್ತಿರುವದು ಏನೂ ಇಲ್ಲ. ನನ್ನಲ್ಲಿರುವ ಪ್ರೀತಿಯ ಭಾವನೆಗಳೆಲ್ಲ ಬತ್ತಿ ಹೋಗುತ್ತಿವೆ. ದಿನ ದಿನಕ್ಕೆ ಬದುಕು ಕ್ರೂರವೆನಿಸುತ್ತಿದೆ. ಏನು ಮಾಡಲೂ  ತೋಚುತ್ತಿಲ್ಲ. ಕೋರ್ಟ್ ಕಛೇರಿ ಮೆಟ್ಟಿಲು  ಹತ್ತಿದರೆ ಮನೆ ಮರ್ಯಾದೆ ಪ್ರಶ್ನೆ.ದಿನವೂ ವಿಷ ನುಂಗತಿದಿನಿ. ಮಗಳ ಮುಖ ನೋಡಿ ಅವರೊಂದಿಗೆ ದಿನ ದೂಡತಿದಿನಿ. ಎಂದಾಗ  ಮಗಳು ಸುಮತಿಯ ಕಣ್ಣೊರೆಸುತ್ತ ಅವ್ವಾ ,ಅಪ್ಪ ಮೊದಲಿನಿಂತೆ ಆಗ್ತಾರೆ ಬಿಡವ್ವ ನೀ ಆಳಬೇಡ ಎಂದಳು. ಸುಮತಿ ಮಗಳ ಕೆನ್ನೆಗೆ ಮುತ್ತಿಕ್ಕಿ ಕಿರುನಗೆ ಬೀರಿದಳು. ತಾಯಿಯ ಖಾಸಗಿ ಜಗತ್ತು ಹೆಣ್ಣುಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ.ತಾಯಿ ಮಗಳ  ನಡುವಿರುವ ಸಲುಗೆ, ಮುಕ್ತವಾಗಿ ಹಂಚಿಕೊಳ್ಳುವ ಮನದಾಳದ ಮಾತುಗಳು ಹೆಣ್ಣು ಹೆತ್ತ ತಾಯಂದಿರಿಗೆ ಅದರ ಸೌಖ್ಯ ತಿಳಿಯೋದು. ಹೆಣ್ಣು ಅಂದರೆ ಹುಣ್ಣು ಅಂತ ತಿಳಿಯೋ ಜನರೇ ಜಾಸ್ತಿ ಆದರೆ ಹೆಣ್ಣು ಮಕ್ಕಳು ತೋರುವ ಆತ್ಮೀಯತೆ ಆಪ್ತತೆ ಮನಸ್ಸಿಗೆ ಅತಿಯಾದ ಆನಂದ ಮತ್ತು ಹಿತ ನೀಡುವದಂತೂ ಖಚಿತ. ಎಷ್ಟೊ ಬಾರಿ ಗಂಡನೊoದಿಗೆ ಹಂಚಿಕೊಳ್ಳಲಾಗದ ಮನದ ದುಗುಡಗಳನ್ನುಅವ್ವನೊಂದಿಗೆ ಹಂಚಿಕೊoಡು ನಿರಾಳವಾಗಿ ಮತ್ತೆ ಜೀವನೋತ್ಸಾಹ ತುಂಬಿಕೊಳ್ಳುತ್ತಾಳೆ.  ರಶ್ಮಿಗೆ ತಾಯಿಯೇ ಜಗತ್ತು. ಮಗಳ ಬದುಕು ಹಸನಾಗಿರಲೆಂದು ಬಯಸುವ ತಾಯಿ ಮಗಳ ಬದುಕಿನಲ್ಲಿ ಸಣ್ಣ ಬಿರುಕು ಬಿಡುತ್ತಿದೆ ಎಂದು ತಿಳಿದರೆ ಎದೆ ಒಡೆದುಕೊಳ್ಳುತ್ತಾಳೆಂದು ರಶ್ಮಿ ಅತ್ತೆಯ ಮನೆಯಲ್ಲಿ ಕೊಡುವ ಕಿರುಕುಳಗಳನ್ನು ಗಂಡನ ವರ್ತನೆಯಲ್ಲಾದ ಬದಲಾವಣೆಯನ್ನು ಬಾಯಿಮುಚ್ಚಿ ಸಹಿಸಿಕೊಳ್ಳುತ್ತಿದ್ದಾಳೆ.ಕತ್ತಲ ಕೋಣೆಯಲ್ಲಿ ಕಣ್ಣಿರು ಹರಿಸುತ್ತಿದ್ದಾಳೆ. ಇದು ರಶ್ಮಿಯ ತಾಯಿಗೆ ತಿಳಿದಾಗ ದೇವರು ಒಳ್ಳೆಯವರನ್ನೇ ಪರೀಕ್ಷಿಸುತ್ತಾನೆ ಅಂತ ನೀನೇ ಹೇಳತಿದ್ದೆಲ್ಲವ್ವಾ ಈಗ ಕಷ್ಟದ ಕಾಲ ಮುಂದೊoದು ದಿನ ಸುಖ ಬಂದೇ ಬರುತ್ತದೆ. ಎಂದು ನೊಂದ ತಾಯಿಗೆ ಸಾಂತ್ವನದ ಮಾತುಗಳನ್ನಾಡುತ್ತ ಉಕ್ಕಿ ಬರುವ ದುಃಖವನ್ನು  ತಡೆಯುತ್ತಾಳೆ. ಹೆಣ್ಣಿಗೆ ತವರೆಂದರೆ ಪಂಚ ಪ್ರಾಣ ಅದರ ನಂಟನ್ನು ಕಳೆದುಕೊಳ್ಳಲು ಅವಳಿಷ್ಟ ಪಡುವದಿಲ್ಲ. ಮಗಳನ್ನು ತಮ್ಮನಿಗೋ ಅಣ್ಣನ ಮಗನಿಗೋ ಧಾರೆಯೆರೆದು ತವರನ್ನು ಉಳಿಸಿಕೊಳ್ಳಲು ಹಂಬಲಿಸುತ್ತಾಳೆ. ಹೀಗೆ ತವರನ್ನು ಉಳಿಸಿಕೊಳ್ಳಲು ಶಾಂತಮ್ಮ ಮಗಳನ್ನು ಅಣ್ಣನ ಮಗನಿಗೆ ಕೊಟ್ಟು ತನ್ನ ತವರನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದ್ದಳು. ಅಳಿಯ ಬೇರೊಬ್ಬಳೊಂದಿಗೆ ಅನೈತಿಕ ಸಂಬoಧದಲ್ಲಿ ತೊಡಗಿ ಮಗಳಿಗೆ ಕೊಡುವ ಚಿತ್ರ ಹಿಂಸೆ ಕಂಡು ಕಂಗಾಲಾಗಿದ್ದಾಳೆ. ತನ್ನ ಮಗಳ ಬಾಳನ್ನು ತಾನೇ ಹಾಳು ಮಾಡಿದನೆಂದು ನಿಂತ ನೆಲವೇ ಬಾಯಿ ಬಿಟ್ಟರೆ ಎಲ್ಲಿ ಹೋಗೋದು? ಎಂದು ಹಾಸಿಗೆ ಹಿಡಿದು ಕೊರಗುತ್ತಿರುವ ತಾಯಿಗೆ ಮದುವೆ ಅನ್ನೋದು ಸ್ವರ್ಗದಲ್ಲಾಗಿರುತ್ತದೆ ಇದರಲ್ಲಿ ನಿನ್ನದೇನು ತಪ್ಪಿಲ್ಲವ್ವಾ ಎಂದು ಶಾಂತಮ್ಮನಿಗೆ ಮಗಳು ಸವಿತಾ ತನ್ನ ದುಃಖವನ್ನೆಲ್ಲ ಮರೆಮಾಚಿ ಸುಖ ದುಃಖಗಳನ್ನು ಸಮನಾಗಿ ನೋಡಬೇಕೆಂದು, ಇಂದು  ದುಃಖವಾದರೆ ನಾಳೆ ಸುಖ ಎಂದು ತತ್ವಜ್ಞಾನಿಯಂತೆ ಮಾತನಾಡುತ್ತ ಬೇಗನೆ ಹುಷಾರಾಗುವಂತೆ ಸೂಚಿಸುತ್ತಾಳೆ. ಒಬ್ಬಳೇ ಮಗಳೆಂದು ತುಂಬಾ ಪ್ರೀತಿಯಿಂದ ಸಾಕಿ ಸಲುಹಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆ ತಂದ ರತ್ನಮ್ಮ ಅಳಿಯನಿಗೆ ದಿನನಿತ್ಯ ಹಾಲು ತುಪ್ಪ ಸುರಿದರೂ ಆತನ ದರ್ಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಮನೆಗೆ ಸಂಬoಧಿಕರು ಆಪ್ತ ಸ್ನೇಹಿತರು ಬಂದರoತೂ ದರ್ಪ ಅತಿರೇಕಕ್ಕೇರುತ್ತೆ. ಇದು  ಮಗಳಿಗೂ ನುಂಗಲಾರದ ತುತ್ತಾಗಿದೆ. ಎಷ್ಟೋಸಾರಿ ಆತನ ವರ್ತನೆಗೆ ತಾಯಿ ಮಗಳ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಅಪ್ಪ ದುರ್ವ್ಯಸನದಲ್ಲಿ ಮುಳುಗಿರದಿದ್ದರೆ ಅಳಿಯನ ದರ್ಪಕ್ಕೆ ಕಡಿವಾಣ ಹಾಕಬಹುದಿತ್ತೆನೋ ಎಂದು ಮನದಲ್ಲೇ ಮರ ಮರ ಮರಗುತ್ತಾಳೆ. ತನ್ನ ಒಡಲಿನಲ್ಲಿ ಬೆಂಕಿ ಇಟ್ಟುಕೊಂಡು ಕತ್ತಲಾದ ಬಾಳಿಗೆ ಬೆಳಕು ಬಂದೇ ಬರುತ್ತದೆಯೆಂದು ಭರವಸೆಯ ಮಾತನಾಡಿ ಅವ್ವನಿಗೆ ಸಂತೈಸುತ್ತಾಳೆ. ಚೈನಿ ಚೆನ್ನಪ್ಪನ ಹಾಗೆ ಡ್ರೆಸ್ ಮಾಡಿಕೊಂಡು ಮೈ ತುಂಬ ಧಿಮಾಕು ತುಂಬಿಕೊoಡು ನಯಾಪೈಸೆ ದುಡಿದು ತರಲಾರದೆ ಹೆಂಡತಿ ಕೂಲಿ ಮಾಡಿ ತಂದ ಹಣವನ್ನು ಲಪಟಾಯಿಸಿ ತನ್ನ ಶೋಕಿಗೆ ಬಳಸುತ್ತಾನೆ. ಭೀಮಪ್ಪ. ಓದೋ ಮಕ್ಕಳಿಗೆ ಊರೆಲ್ಲ ಸಾಲ ಮಾಡಿ ಸಾಲ ತೀರಿಸೋ ಚಿಂತೆಗೆ ಗಂಗವ್ವನ ಕೈಯಲ್ಲಿ ಬಿರುಕು ಬಿಟ್ಟ ಗಾಯಗಳಾಗಿದ್ದರೂ ದಿನ ಬೆಳಗಾದರೆ ಕೂಲಿ ತಪ್ಪುವದಿಲ್ಲ. ಅವ್ವನ ಪಾಡು ಕಂಡು ಮಮ್ಮಲ ಮರಗುವ ಹದಿನಾಲ್ಕರ ಪೋರಿ ಗೌರಿ ನಾನು ಓದಿ ನಿನ್ನ ಕಷ್ಟವನ್ನು ನೀಗಿಸುತ್ತೇನೆಂದು ತಾಯಿಯ ಕಂಗಳಲ್ಲಿ ಆಶಾ ಕಿರಣ ಮೂಡಿಸಿ ಮುಖದಲ್ಲಿ ನಗು ತುಂಬುತ್ತಾಳೆ. ಇವು ಕೆಲವು ಉದಾಹರಣೆಗಳಷ್ಟೆ ಇಂಥ ಒಡಲಿನ ನೋವುಗಳು ಸಮಾಜದಲ್ಲಿ ಭರಪೂರ ಎನ್ನುವಂತೆ ತುಂಬಿವೆ. ತಾನುರಿದು ಇತರರಿಗೆ ಬೆಳಕು ನೀಡುವ  ದೀಪದಂತೆ ದುಃಖದ ಬೆಂಕಿಯನ್ನು ತನ್ನ ಸೆರಗಲ್ಲಿ ಕಟ್ಟಿಕೊಂಡು ಒಡಲಲ್ಲಿ ಹುಟ್ಟಿ ಮಡಿಲಲ್ಲಿ ಬೆಳೆದ ಮಗಳು ತಾಯಿಗೆ ತಾಯಿಯಾಗಿ ಸಂತೈಸುವ ಪರಿ ಮಾನವ ಕುಲದ ಮನ ಕಲುಕುವಂಥದ್ದು . ತನ್ನಲ್ಲಿ  ನೋವಿದ್ದರೂ ಒಡಲಿನ ನೋವಿಗೆ ಮಡಿಲಿನ ಸಾಂತ್ವನ ಹೇಳುತ್ತ  ನಲಿವಿನ ಸಂತಸದ ಭರವಸೆ ತುಂಬುವ ಪರಿ ಮೆಚ್ಚುವಂಥದ್ದು. ಜಯಶ್ರೀ.ಜೆ.ಅಬ್ಬಿಗೇರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ Read Post »

ಕಾವ್ಯಯಾನ

ಪರವಿನಬಾನು ಯಲಿಗಾರ ಅವರ ಕವಿತೆ “ಬದುಕು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಬದುಕು” ಬದುಕುವುದೆಂದರೆ ಕೆಲವರಿಗೆನೀರಿನ ಪ್ರವಾಹದ ಜೊತೆಹುಲು ಕಡ್ಡಿ ತೇಲಿದಷ್ಟೆ ಸರಳ…. ಬದುಕುವುದೆಂದರೆ ಕೆಲವರಿಗೆಸಮರಕ್ಕೆ ಸಿದ್ಧರಾದಂತೆಪ್ರತಿ ಕ್ಷಣವು ಸವಾಲುಗಳ ಜೊತೆ ಸೆಣಸಾಟ…. ಬದುಕುವುದೆಂದರೆ ಕೆಲವರಿಗೆಕಾರ್ಕೋಟಕ ವಿಷದ ಹನಿ ಸೇವಿಸಿದ ಹಾಗೆನಿಧಾನವಾಗಿ ನೀರ್ಜಿವವಾದಂತೆ…… ಬದುಕುವುದೆಂದರೆ ಕೆಲವರಿಗೆಜೇನಿನ ಹನಿಗಳ ಸವಿದಂತೆಕಹಿಯ ಪರಿಚಯವೇ ಇಲ್ಲದಂತೆ….. ಬದುಕುವುದೆಂದರೆ ಕೆಲವರಿಗೆಕೆಲವೊಮ್ಮೆ ಬದುಕುವುದೆ ಬೇಡ ಎನಿಸುವುದುಆದರೆ ಹೊಣೆಗಾರಿಕೆಗಾಗಿ ಬದುಕು ತೆವಳುವರು…. ಪರವಿನಬಾನು ಯಲಿಗಾರ.

ಪರವಿನಬಾನು ಯಲಿಗಾರ ಅವರ ಕವಿತೆ “ಬದುಕು” Read Post »

ಅನುವಾದ

ಮಲಯಾಳಂ ಕವಿತೆ “ನೀನು ಮರಣ ಹೊಂದಿದ್ದರೇ…….!!?” ಕನ್ನಡಕ್ಕೆ-ಐಗೂರು ಮೋಹನ್ ದಾಸ್ ಜಿ

ಅನುವಾದ ಸಂಗಾತಿ ನೀನು ಮರಣ ಹೊಂದಿದ್ದರೆ! ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ ಓ ಪ್ರಾಣಸಖಿ………,ನೀನು ಮರಣಹೊಂದಿದ್ದರೇ……ಆ ವಿಚಾರ ನನಗೆತಿಳಿಯುತ್ತದೆ ಎಂಬುವುದೇಖಚಿತ ಇಲ್ಲ….! ತಿಳಿದ್ದರೂ ದೂರದಲ್ಲಿರುವನಿನ್ನ ಮನೆಗೆನಾನು ತಲುಪುವುದಿಲ್ಲ….! ತಲುಪಿದ್ದರೂ ನಿನ್ನನ್ನುಮುಟ್ಟಲು ಸಾಧ್ಯವೇ ಇಲ್ಲ….! ಮುಟ್ಟಿದ್ದರೂರೋಧಿಸಿ ಅಳಲುಸಾಧ್ಯವಾಗುವುದಿಲ್ಲ….! ಅತ್ತರೂನನ್ನನ್ನು ಯಾರಿಗೂಅಥ೯ ಮಾಡಿಕೊಳ್ಳಲುಸಾಧ್ಯವಾಗುವುದೇ ಇಲ್ಲ…! ಕೊನದಾಗಿನೀನು ಮರಣಹೊಂದಿದ್ದರೇ……ನಾನು ಬರುವುದುಏಕೆ….? ನನಗೆ ನೀನುಮರಣ ಹೊಂದುವುದೇಇಲ್ಲ….!!! ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ

ಮಲಯಾಳಂ ಕವಿತೆ “ನೀನು ಮರಣ ಹೊಂದಿದ್ದರೇ…….!!?” ಕನ್ನಡಕ್ಕೆ-ಐಗೂರು ಮೋಹನ್ ದಾಸ್ ಜಿ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಏಳು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ತಾಳಲಾರೆ ಯಾತನೆ/ಕೇಳೋಕೂಗು ನೀಲಕಂದರನೆ !! ಪಲ್ಲವಿ!!ಚಂದಿರನ ತಂಗಾಳಿ ನೊಂದ ಮನಕೆ ಬೀರಿ ಕಂದಳನು ಕಾಪಾಡ ಬಾರೋ!!ಬಾಳಿನ ತುಂಬೆಲ್ಲ ತಾಳಬಾರದು ಗೋಳುಹೇಳಲು ಬರೋದು ಎನಗಯ್ಯ !! ಅಂತ ಪಾಡುತ……ಚಂದಿರನ ಬೆಳದಿಂಗಳದ ಕೆಳಗೆ ಕುಳಿತು… ತೊರೆದು ಹೋದ ಚೊಚ್ಚಲ ಮಗುವನ್ನು ನೆಯುತ ಜಯದೇವಿ ತಾಯಿಯವರು ಖಾಲಿ ಹೃದಯ ಹೊತ್ತು, ಕಣ್ಣೀರು ಧಾರೆಯಲಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಹಳ ಹೊತ್ತು ಅತ್ತರು. ಆದರೆ ಜೀವನ ಯಾರಿಗೂ ಹೆಚ್ಚು ಕಾಲ ವಿರಾಮ ಕೊಡುವುದಿಲ್ಲವಲ್ಲಾ….!!! ಮತ್ತೆ ಗಂಡನ ಮನೆಗೆ ಹೊರಡಬೇಕು…..!!!ಗಂಡನ ಮನೆಗೆ ಹೋಗುವ ದಿನವೂ ಬಂತು…ತವರ ಬಾಗಿಲು ದಾಟಲು ಕಾಲುಗಳು ಮುಂದೆ ಸಾಗಲಿಲ್ಲ.ಪ್ರತಿ ಹೆಜ್ಜೆಯೂ ಒಂದು ನೆನಪನ್ನು ತುಳಿಯುವಂತೆ……ತವರಿನ ಗೋಡೆಗಳೆಲ್ಲಆ ಮಗು ನಗುವಿನ ಧ್ವನಿ ತುಂಬಿತ್ತು… ಕಳವಳ ಗೊಂಡ ಮನ…. ಕರಳು ಹಿಚುಕುವ ಸನ್ನಿವೇಶ… ಗಂಡನ ಮನೆಗೆ ಹೋಗುವ ದಾರಿಯಲ್ಲಿಮೌನವಾಗಿ ದೇವರನ್ನು ಕೇಳಿದಳು — ಕಳವಳಗೊಳ್ಳುತ್ತಾ ಬಳಲುತ್ತ ಬೇಡುವೆತಿಡಿಗೇಡಿಗೆ ಹೇಳೊ ಮನಶಾಂತಿಯ !! ನೊಂದ ಜೀವ ಬೆಂದ ಮನ ಸಂದುಸಂದಿನನೋವ ಅಂದಿಂದ ಮೈ ಮನಕೆಂದೇ !! ಹಂಣ್ಣಾದ ಈ ಮನಕೆ ಸಣ್ಣ ಮಾಡುವುದಕ್ಕೆ?!ಕಣ್ಣು ತೆರೆದು ಕರುಣಿಸಯ್ಯ ರೋಮರೋಮಂಗಳಿಗೆ ಸ್ವಾಮಿ ನಿನ್ನಯ ಒಲವು ಅಮರ ಧಾರೆಯ ಎರೆಯಯ್ಯಾ!! ಭವ ದೂರ ಭವನಾಶ ‘ಜಯ ಸಿದ್ದರಾಮೇಶನೆ’ ದಯದೋರೊ ಎನ್ನ ಭಯ ದೂರ ಸರಿಸೋ !! ಜಯದೇವಿ ತಾಯಿಯವರ ತಮ್ಮ ಶಿವಶಂಕರ್ ಮಡಕಿ ,ತಂಗಿಶ್ರೀದೇವಿ ಗಾಡವೆ, ,ಮಗಳು ಶಶಿಕಲಾ ಮಡಕಿ, ತಂಗಿ ಸುಮತಿ ಅಸ್ಟುರೆ ಗಂಡನ ಮನೆ ಅವರನ್ನು ಕಾಯುತ್ತಿತ್ತು…..ಆದರೆ ಕಣ್ಣುಗಳಲ್ಲಿ ಜೀವಂತವಾಗಿದ್ದಒಂದು ಚಿಕ್ಕ ಮುಖ…ಒಂದು ಅಪೂರ್ಣ ನಗುವಿನ ನೆನಹು ಮನದಲಿ ತುಂಬಿತ್ತು ………. ಅಲ್ಲಿ ಇನ್ನೂ ಏನ ಗ್ರಹಚಾರವಿದೆಯೋ..ಅತ್ತೆಯ ನೆನಪಾಗಿ ಕೈ ಕಾಲುಗಳು ನಡುಗಲಾರಂಭಿಸಿದವು. ‌‌ ಖಾಲಿ ಕೈಯಲ್ಲಿ ಹೇಗೆ ಹೋಗುವದು ಬರಿದಾದ ಒಡಲನ್ನು ತೆಗೆದುಕೊಂಡು…????ಹೆದರುತ್ತ ಹೆದರುತ್ತಲೇ ಗಂಡನ ಮನೆಯಲ್ಲಿ ಕಾಲಿಟ್ಟ ತಕ್ಷಣ ಅತ್ತೆ ಪ್ರಯಾಗಬಾಯಿ ಎದುರಾದರು …… ಎದುರಾದ ಅತ್ತೆ ಮುಖ ಕಳೆಗುಂದಿತು ಕರುಣಾ ಮಯಿಯಾಗಿ ಕಂಡರು……. ಮಡಿಲಲ್ಲಿ ಮಗು ಇಲ್ಲದ ಸೊಸೆಯ ಕಣ್ಣುಗಳೇ ಸಾವಿರ ಮಾತುಗಳ ಹೇಳುವದ ಕಂಡು……. ಬಾಗಿಲ ಬಳಿ ನಿಂತಿದ್ದ ಸೊಸೆಯನ್ನು ನೋಡಿಅತ್ತೆಯ ಹೃದಯ ಕಗ್ಗತ್ತಲಾಯಿತು…..ಸೊಸೆ ಒಂದು ಹೆಜ್ಜೆ ಒಳಗೆ ಇಟ್ಟಳು…….ಸೊಸೆಯ ಕಾಲನಡಿಗೆಯ ನಡುಗು.ಹೃದಯದಲ್ಲಿ ಹೊತ್ತಿ ಉರಿಯುವ ಶೋಕ……ಕಣ್ಣುಗಳಲ್ಲಿ ಅಳಲು ,ಒಣಗಿದ ಕಣ್ಣೀರು, ನೋವಿನ ನಿರಾಶೆ, ಜೀವ ಒಡೆದುಹೋದ ವ್ಯಥೆ ಹೇಳಿದವು… ಅತ್ತೆ ಮುಂದೆ ಬಂದು “ಇರ್ಲಿ ನಿನ್ನ ಮಗನ ಶಿವ ಕರ್ಸ್ಕೊಂಡಾನ ಇಂತಹ ಹತ್ತು ಮಕ್ಕಳನ್ನು ಮತ್ತೇ ಹೆರುವಂತಿ ಬಾ ಒಳಕ್ಕೆ ಬಾ “ಅಂದರಂತೆ ಕಣ್ಣಲ್ಲಿ ನೀರುತುಂಬಿಕೊಕಡಿದ್ದವು.. ಒಂದು ಕ್ಷಣದಲ್ಲಿ ‘ಅತ್ತೆ’ … ‘ತಾಯಿ’ ಆಗಿಬಿಟ್ಟಳು.ಸೊಸೆಯ ಖಾಲಿ ಕೈಗಳನ್ನು ಮಮತೆಯಿಂದ ಗಟ್ಟಿಯಾಗಿ ಹಿಡಿದರು.ಇದು ಮೊಟ್ಟಮೊದಲ ಬಾರಿ —ಪ್ರೀತಿಯಿಂದ ಸೊಸೆ ಎದೆಗೆ ತಲೆ ಒರಗಿಸಿಮುರಿದು ಬಿದ್ದಳು.ಇಬ್ಬರ ನೋವು ಒಂದಾಗಿ ಹರಿದ ಕ್ಷಣಗಳಿಗೆಆ ಮನೆಯ ಗೋಡೆಗಳು ಸಾಕ್ಷಿಯಾಗಿದ್ದವು —ಕಾಡುತ್ತಿದ್ದ ಅತ್ತೆ ಇವತ್ತು ಕರಗಿಬಿಟ್ಟಳು.ಸೊಸೆ ಮಾತಾಡಲಿಲ್ಲ. ಮೌನವಾಗಿ ಒಳ ನಡೆದರು. ಆ ದಿನದಿಂದ ಆ ಮನೆಯ ವಾತಾವರಣ ಬದಲಾಗಿತು.ಅತ್ತೇಯ ಕಾಡುವ ಮಾತುಗಳು ಇಲ್ಲವಾಗಿದ್ದವು….. ಕಾಲ ಕೆಲವೊಮ್ಮೆ ಶಿಕ್ಷಕ ಆಗುತ್ತೆ ಅಲ್ಲವೇ….!!! ಒಂದು ಮರಣ ಎರಡು ಹೃದಯಗಳನ್ನು ಹತ್ತಿರ ಮಾಡಿತು.ಅದಕ್ಕೆ ಜಯದೇವಿತಾಯಿಯವರು ಹೇಳ್ತಾರೆ “ಕಾಡುವವರು ಇರಬೇಕ/ ಕಡಿತನಕ ಜನುಮಕ್ಕ ನೋಡುವರ ಇರಬೇಕು ವರೆಗೆ ಹಚ್ಚಿ-ಈ ಮನೆಕ ನೀಡುವರು ಇರಬೇಕ ನಿಜದರಿವ!! ಕಾಡುವರು ನನಗ /ಕಡೆತನಕ ಇರಲವ್ವಕೇಡ ಬಯಸಿನು ನಾ ಅವರಿಗ-ಕಡೆತನಹಾಡಿ ಹರಿಸುತ ಸುಖಿಸುವೆ!! ಏಕೆಂದರೆ ಒಂದೊಂದು ಕಠಿಣ ಪರೀಕ್ಷೆಗಳು ಅವರನ್ನು ದೇವರ ಸಮೀಪ ಕರೆದು ಒಯ್ಯಯುತಿವೆ. ಅನ್ನುವುದು ಖಚಿತಗೊಳ್ಳಲಾರಂಭಿಸಿತ್ತು..ಅತ್ತೆಯ ಕಾಟಾಚಾರವು ಕೂಡಾ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದ್ದವು ಅವರಿಗೆ ಸಕಾರಾತ್ಮಕ ಬದುಕನ್ನು ಬದುಕುವ ಪಾಠ ಕಲಿಸಿತ್ತು ಅಂತ ಹೇಳುತ್ತಿದ್ದರು. “ನೋವಿನ ಪೆಟ್ಟು ಬಿದ್ದಂತೇಲ್ಲ ಸಿದ್ದರಾಮನ ಸಾಮಿಪ್ಯಕೆ ಸಮಿಸತಾ ಹೋದೆ…. ಹಾಗೆ ಕನ್ನಡ ತಾಯಿಯನ್ನು ನಾನು ಅಪ್ಪಿಕೊಳ್ತಾ ಹೋದೆ ‌…….ಮನದಲ್ಲಿ ಉಲ್ಬಣಿಸುತ್ತಿದ್ದ ವೇದನೆಗಳು… ಕಾವ್ಯದ ರೂಪದಲ್ಲಿ ಮನದ ಮೂಲೆಯಲ್ಲಿ ಹರಿದು ಬರುತ್ತಿತ್ತು ಕಷ್ಟಗಳನೆಲ್ಲ ನನ್ನ ತಾಯಿ ಭಾಷೆ ಕನ್ನಡಭಾಷೆಯಲ್ಲಿ ತೋಡಿಕೊಳ್ಳುತ್ತಿದ್ದೆ …. ಆದರೆ ಅವುಗಳನ್ನು ಶಬ್ದಾಂಕನ ಗೊಳ್ಳಿಸಲಿಕ್ಕೆ ಬೇಕಾಗುವ ಕನ್ನಡ ಶಬ್ದಗಳು ಬರೆಯುವ ಜ್ಞಾನ ಇನ್ನೂ ನನಗೆ ಇರಲಿಲ್ಲ ಏಕೆಂದರೆ ನಾಲ್ಕನೇ ಇಯತ್ತೆ ಮರಾಠಿ ಕಲಿತವಳು…ಕನ್ನಡ ಭಾಷೆಯನ್ನು ಬರೆಯಲು ನಾನು ಕಲಿತಿರಲಿಲ್ಲ .”ಅಂತ ಹೇಳ್ತಾ ಇದ್ದರು. ಜಯದೇವಿ ತಾಯಿಯವರ ಮೈದುನ ಜಗದೇವಪ್ಪನವರು ಗಂಡ ಚೆನ್ನಮಲ್ಲಪ್ಪನಂತೆ ವ್ಯಾಪಾರದಲ್ಲಿ ಜಾಣರೇನು ಆಗಿರಲಿಲ್ಲ…….!! ಕೆಟ್ಟ ಸಂಗತಿಯ ಗೆಳೆಯರಿಂದ ಅವರು ದಾರಿ ತಪ್ಪುತ್ತಿರುವುದನ್ನು ನೋಡಿದ ಪ್ರಯಾಗಬಾಯಿಯು ಒಬ್ಬ ಸುಂದರ ಮರಾಠವಾಡಾದ ಹೆಣ್ಣನ್ನು ನೋಡಿ ಮದುವೆ ಮಾಡಿದರು.ಆದರೆ ಮದುವೆಯಾಗಿ ಬಂದ ಓರಗಿತ್ತಿಯು ತಾಯಿಯವರ ತದ್ವಿರುದ್ಧ ಅವಳು ತುಂಬಾ ಚಂಚಲೆ, ಚಟಪಟ ಅಂತ ಮಾತನಾಡುವ ಎದುರುತ್ತರ ನೀಡುವ ಸೊಸೆ ….ಅತ್ತಿಯಂದಿರು ಹೇಳಿದ ಮಾತುಗಳನ್ನು ಕೇಳುತ್ತಿರಲಿಲ್ಲ… ಹೀಗಾಗಿ ಮದುವೆಯಾದ ಹೊಸತರಲ್ಲಿ ಪ್ರಯಾಗಬಾಯಿ ಸಣ್ಣ ಸೊಸೆಗೆ ಯಾವುದಾದರೂ ಸಣ್ಣ ಕೆಲಸ ಹೇಳಿದರು ಓರಗಿತ್ತಿಯು ಮಾಡುತ್ತಿರಲಿಲ್ಲ.ಅವಳು ರಾತ್ರಿ ಸಮಯ ಒಂಬತ್ತು ಗಂಟೆ ಆಗುತ್ತಿದ್ದಂತೆ ತನ್ನ ಗಂಡನ ಕೋಣೆಗೆ ಹೋಗಿಬಿಡುತ್ತಿದ್ದಳು . ಸಿರಿಮಂತ ಮನೆಯ ಸೊಸೆ ಅಲ್ಲವೇ ಬೆಳಗ್ಗಿನ ವಿಹಾರಕೆ ಅಂತ ಇಬ್ಬರೂ ಗಂಡ ಹೆಂಡದಿರು ಹೊರಟು ಹೋಗುತ್ತಿದ್ದರು.ಅತ್ತಿಯಂದಿರ ಹೇಳುವ ಕೆಲಸಗಳನ್ನು ಎಷ್ಟು ಕೇಳಬೇಕು ಅಷ್ಟೇ ಕೇಳುವಳು…ತಾನಾಯಿತು ತನ್ನ ಗಂಡನಾಯಿತು ಅಷ್ಟೇ ಅವಳ ಪ್ರಪಂಚವಾಗಿತ್ತು. ಜಯದೇವಿ ತಾಯಿಯವರಂತೆ ಸುಶೀಲ ಸದ್ಗುಣ ಸಾಧ್ವಿ ಸೊಸೆ ಆಗಿರಲಿಲ್ಲ ಹೀಗಾಗಿ ಸಹಜವಾಗಿ ಪ್ರಯಾಗಬಾಯಿಗೆ ಜಯದೇವಿ ತಾಯಿಯವರ ಮೇಲೆ ನಂಬಿಕೆ ಪ್ರೀತಿ ಮಮತೆ ಹುಟ್ಟಲಾರಂಭಿಸಿತು. ಅತ್ತೆಯಂದಿರ ನೆಚ್ಚಿನ ಸೊಸೆಯಾದರು . ಜಯದೇವಿ ತಾಯಿಯವರ ಗಂಡನ ತಮ್ಮನ ಮದುವೆಯಾದ ನಂತರ ತಾಯಿಯವರು ಎರಡನೆಯ ಹೆರಿಗೆ ಹೋದರು ಈ ಸಲ ಮೊದಲ ಹೇರಿಗೆ ಅಂತ ಉತ್ಸಾಹ ಸಂತಸ ಯಾವುದು ಇರಲಿಲ್ಲ ಯಾವ ಸಂಭ್ರಮ ಇರಲಿಲ್ಲ ಸಹಜವಾಗಿ ಹೊರಟು ನಿಂತರು. ಈ ಸಲದ ಹೇರಿಗೆಯು ಸುರಕ್ಷಿತವಾಗಿ ಸುಗಮವಾಗಿ ಸಾಗಿತು. ಅತ್ಯಂತ ಸುಂದರ ಹೆಣ್ಣು ಮಗುವಿಗೆ ಜನ್ಮವನ್ನು ಕೊಟ್ಟರು ಚಂದಿರನಂತೆ ಸುಂದರವಾಗಿದ್ದ ಮಗುವಿಗೆ ‘ಶಶಿಕಲಾ ‘ಎಂದು ನಾಮಕರಣ ಮಾಡಿ ಸಂತೈಸಿದರು .ಇಷ್ಟರಲ್ಲಿ ಬ್ರಿಟಿಷರ ಸೊತ್ತಾಗಿದ್ದ ಲಿಗಾಡೆ ಮನೆತನದ ಆಸ್ತಿಯನ್ನೆಲ್ಲ ಚೆನ್ನಮಲ್ಲಪ್ಪನವರಿಗೆ ಬ್ರಿಟಿಷರು ಆದರದಿಂದ ಒಪ್ಪಿಸಿದ್ದರು.ನಂತರ ಅವರು ಮೂರನೇ ಹೇರಿಗೆ ಹೋರಟರು ಹೀಗೆ ಮೇಲಿಂದ ಮೇಲೆ ತವರು ಮನೆಗೆ ಹೋಗುವುದು ಗಂಡನಿಗೆ ಬೇಸರ ತರುತ್ತಿದ್ದರು ಹೇರಿಗೆಯೂ ಮನೆಯಲ್ಲಿ ಆಗಲಿ ಅಂತ ಹೇಳುವ ಧೈರ್ಯ ಅವರಿಗೆ ಇರಲಿಲ್ಲ. ಅನಿವಾರ್ಯ ಹೋಗಲೇ ಬೇಕಾಲ್ಲ…ಮೂರನೆಯ ಹೇರಿಗೆ ಸುಂದರ ಗಂಡು ಮಗವನ್ನು ಹೆತ್ತರು. ಅವನಿಗೆ ‘ಶ್ರೀಕಂಠ ‘ಅಂತ ಹೆಸರಿಡಲಾಯಿತು. ಅತ್ಯಂತ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಿದರು.ಗಂಡು ಮಗ ಅಂದರೆ ಕೇಳಬೇಕು ಆಗಿನ ಕಾಲದಲ್ಲಿ ಗಂಡು ಮಗ ಹುಟ್ಟಿದರೆ ಸ್ವರ್ಗದ ಬಾಗಿಲ ತೆರೆದಂತೆಆದರೆ ಜಯದೇವಿ ತಾಯಿಯವರು ಹೆಣ್ಣು ಗಂಡು ಎರಡನ್ನು ಸಮಾನತೆಯಲ್ಲಿ ನೋಡುವ ದೃಷ್ಟಿಕೋನವನ್ನು ಚಿಕ್ಕವರಿರುವಾಗಲೇ ಅವರು ಹೊಂದಿದವರಾಗಿದ್ದರು. ಅದಕ್ಕೆ ತಾಯಿಯವರು ಒಂದು ಕಡೆ ಬರೆಯುತ್ತಾರೆ ಹೆಣ್ಣು ಹುಟ್ಟೇದಂತ | ಕಣ್ಣೀರ ಕರಿಬ್ಯಾಡ ಸಣ್ಣಾಗಬ್ಯಾಡ ಮನದಾಗ -ತಾಯವ್ವಹೆಣ್ಣಿನ ಜಗದ ಕಣ್ಣೇನ || ಕಾನೂನು ಬದ್ಧವಾಗಿ ಹೆಣ್ಣು ಗಂಡು ಇಬ್ಬರೂ ಸಮಾನತೆ ಪಡೆಯುವಂತಹ ಕಾಲದಲ್ಲಿ ಜಯದೇವಿ ತಾಯಿಯವರು ಹುಟ್ಟಿದ್ದರೂ ಸಂಪ್ರದಾಯದಾಯಸ್ಥ ಕುಟುಂಬಕ್ಕೆ ಪುಷ್ಟಿ ಕೊಟ್ಟವರು.ಯಾವ ಕಾಲದಲ್ಲೂ ಹೆಣ್ಣು ಹುಟ್ಟಿ ಎರಡು ಮನೆಯಲ್ಲಿ ದೀಪ ಬೆಳಗುವಳಾಗಬೇಕು. ಕುಟುಂಬದ ಹೃದಯವಾಗಿ ನಿಲ್ಲಬೇಕು ನಿಜ . ಸೊಸೆಯಾಗಿ ಬಂದವಳು ಮೊದಲು ಸಹನೆ ಸೈಯ್ಯಮ ವಿನಯತೆ ಅವಳಿಗೆ ಆಭರಣ …ಹಿರಿಯರಿಗೆ ಆದರ ತೋರುತ್ತ ಕುಟುಂಬವ ನಿರ್ವಹಿಸುವುದೇ ಅವಳ ಧರ್ಮ. ಸಂಪ್ರದಾಯದ ಬಳುವಳಿಯನ್ನೇ ಬಳವಿಗೆ ಮಾಡಿದ್ದಾರೆ. ಕುಟುಂಬ ಜೀವನದ ಅನೇಕ ಏರಿಳಿತದ ಬಗ್ಗೆ ಹೇಳ್ತಾ ಹೋಗ್ತಾರೆ … ಗರತಿಯ ಬಗ್ಗೆ ಹೀಗೆ ಹೇಳ್ತಾರೆ “ದಯ ಬೇಕ ನುಡಿಯಲಿ |ಭಯ ಬೇಕ ನಡೆಯಲ್ಲಿ ದಯ ಬೇಕ ಸಕಲ ಜೀವನದಲ್ಲಿ -ತಾಯವ್ವಲಯ ಬೇಕು ಶಿವನ ನೆನಹುನಲಿ|| ಸೊಸೆಯಾದವಳು ಮೊದಲು ಮನೆ ಕೆಲಸ ಮಾಡಿ ಮನೆಯ ಮಂದಿಯ ಮನವನ್ನೇಲ್ಲ ಗೆಲ್ಲಬೇಕು ಗಂಡನ ಮನ ಗೆಲ್ಲಬೇಕು…. ವಿನಯಶೀಲರಾಗಿರಬೇಕು… ಎಲ್ಲರ ಬೇಕು ಬೇಡುಗಳನ್ನು ನೋಡುವಂಥವಳು ಆಗಿರಬೇಕು. ಮಾತಿಗೆ ಮಾತು ಬೆಳೆಸದಂಥವಳಿರಬಾರದು ಹೆಚ್ಚು ಅಗೆದರೆ ತಗ್ಗು ಬೀಳುವುದು ಹೆಚ್ಚು…. ಎಂಬಂತೆ ಮಾತಿನ ಗತಿ ಹೇಗಿರಬೇಕೆಂದರೆ ಮನಗಳನ್ನು ತಿಳಿಯಾಗಿಸಬೇಕು ಅನ್ನುತ್ತಿದ್ದರು ….ಮನೆಯ ಕಂಬವಾಗಿರಬೇಕು ಸೊಸೆ ಆದವಳು. ಸಿಟ್ಟಲಿ ಗಂಡ-ಅತ್ತೆಗ ಎದುರು ಉತ್ತರ ನುಡಿದರೆಮನೆಯವರ ಮನ ಸುಡು ಸುಡು ಸುಟ್ಟುಮರಳಿ ಸೊಸೆಯ ಕಡೆಗೆ ಚಟ್ಟಂತಹ ಸಿಡಿಯುವದಬಿರುಗಾಳಿ ಬೀಸಿದಂಗ ತೂರಿ ಬಂದ ಮಾತುಗಗನಕ್ಕಹಾರಿ ಒಯ್ದು ನೆಲಕ್ಕೆ ದೊಪ್ಪೆಂದ ಒಗೆವದ.. ಅಂತ ಹೇಳುವ ಮಾರ್ಮಿಕವಾದ ಉದಾರಣೆಯನ್ನು ಹೇಳುತ್ತಿದ್ದರು .ಹೆಣ್ಣಾದವಳು ನಗುನಗುತ ಮಾತಾಡಬೇಕುಹಗೆ ಎದುರಾದರೂ ಹೊಗೆ ನುಡಿ ಸಲ್ಲಕಾಣಲಾರದ ಕಣ್ಣು ಕಂಡ್ನಗ ಕಂಡಹಂಗ ಆಡಿ ಬಾಣಧಾಂಗ ಮಾತು ಮರಳಿ ಬಡೆಯದ ಮುನ್ನ ಜೋಕೆಯಿಂದಿದ್ದುತಾನು ಸುಟ್ಟುಕೊಂಡು ಇತರರ ಮನ ತಂಪಾಗಿರಬೇಕು….. ತುಪ್ಪ ಸಕ್ಕರೆ ಉಪ್ಪ-ಖಾರ ಉಣಿಸಿ ಒಪ್ಪುಳ್ಳ ಮಾತು ಕಲಿಸಿದರೆ ನಾಲಿಗೆ ಹಾಲಿನ ಹೆಪ್ಪುಗೆಡಿಸಿತ್ತು ಆಗಸಿರಿ ಇದ್ದು ಸುತರಿದ್ದು ಸುಖವಿಲ್ಲ ಹಿತವಿಲ್ಲದಿದ್ದರೆ ಫಲವೇನು….. ಎನ್ನುತ್ತಾರೆ ಕಡಿಮೆ ಎಂದರೆ ಮೂರು ತಲೆಮಾರಿನವರು ಜನರು ಕೂಡಿ ಇರುವ ಪದ್ಧತಿಯೇ ನಮ್ಮ ಸಂಸ್ಕೃತಿ ನಮ್ಮ ದೇಶದ ಪರಂಪರೆಯ ಬಳುವಳಿಯನ್ನು ನಾವು ಮೀರಬಾರದು ಅನ್ನುವುದು ಜಯದೇವಿ ತಾಯಿಯವರ ವಾದವಾಗಿತ್ತು. ಐದು ಜನ ಅತೇರ ಕೈಯಲ್ಲಿ ನಡೆದು ನಾಲ್ಕು ಜನ ಸೊಸೆಯೊಂದನ್ನು ನಡೆಸಿಕೊಂಡ ಗೊತ್ತು 23 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಕಂಡತುಂಬಾ ಜೀವನದ ಅನುಭವದ ವಿಚಾರ. ಹರೆಯದ ಹೆಣ್ಣು ನೂರಾರು ಆಸೆ ಹೊತ್ತು ಅತ್ತೆಯ ಮನೆಗೆ ಬಂದಾಗ ತನ್ನ ಸುಖಕ್ಕಿಂತ ಮನೆಯಲ್ಲಿಯೇ ಹಿತ ರಕ್ಷಿಸುವುದೇ ಮೇಲು ತನ್ನ ಮನ ನೊಂದರು ಉಳಿದವರ ಮನನೊಯದಂತೆ ನೋಡಿಕೊಳ್ಳಬೇಕು ಅನ್ನುತ್ತಿದ್ದ . ಅವಿಭಕ್ತ ಕುಟುಂಬದಲ್ಲಿ ಬೆಳೆದ ತಾಯಿಯವರು ಸ್ವಾಭಿಮಾನದಿಂದಲೇ ಈ ಮಾತುಗಳ ಹೇಳಿದ್ದಾರೆ ನಮ್ಮ ಸಂಸ್ಕೃತಿಯಿಂದ ದೂರ ಸರಿಯದೇ ವ್ಯಕ್ತಿ ವಿಕಸನವನ್ನು ಮಾಡಿಕೊಳ್ಳಬಹುದು….. ಬೆಳೆಯಬಹುದು ಅನ್ನುವುದು ತೋರಿಸಿಕೊಟ್ಟ ಸಾಕ್ಷಾತ್ ನಿದರ್ಶನ ಅವರ ಜೀವನ. ಹಾಗೆ ಹೆಣ್ಣಾಗಿ ಸತ್ಯಕ್ಕಾಗಿ ಹೋರಾಡಬೇಕು, ಕೆಟ್ಟದ್ದನ್ನು ಪ್ರತಿಭಟಿಸಬೇಕು ,ಗಂಡನಿಗೆ ಸರಿ ಸಮಾನವಾಗಿ ನಿಲ್ಲಬೇಕು ಜೀವನದಲ್ಲಿ ಸಾಧನೆ ಮುಖ್ಯ ಗುರಿ ಆಗಿರಬೇಕು ಜ್ಞಾನಧ ಎತ್ತರಕ್ಕೆ ಇರಬೇಕು ಅನ್ನೋ ಧೋರಣೆಯನ್ನು ಕೂಡ ಹೊಂದಿದ್ದರು. ಮೊದಲು ಹೆಣ್ಣಾದವಳು ಸೋತು ಸೋತು ಗೆಲ್ಲಬೇಕು ಅನ್ನುವ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ವೈಶಿಷ್ಟ ಪೂರ್ಣವಾದ ವ್ಯಕ್ತಿ ವಿಶೇಷತೆ ತೋರುತ್ತದೆ. ವ್ಯಾಪಾರದಲ್ಲಿ ನೈಪುಣ್ಯತೆ ಹೊಂದಿರುವ ತಂದೆ ಚನ್ನಬಸಪ್ಪನವರ ಜೊತೆ ಕೂಡಿ ವ್ಯಾಪಾರವನ್ನು ಮಾಡುತ್ತಿದ್ದರು…ಗಂಡ ಚೆನ್ನಮಲ್ಲಪ್ಪನವರು. ಹಾಗೆ ಜಯದೇವಿ ತಾಯಿಯವರ ಅಕ್ಕ ತಂಗಿಯರು ಅಣ್ಣ ತಮ್ಮಂದಿರನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು.ಜಯದೇವಿ ತಾಯಿಯವರ ತಂಗಿಯಂದಿರು ಮಕ್ಕಳ ವಯಸ್ಸಿನವರಷ್ಟೇ ಇದ್ದರು .ಆಗಿನ ಕಾಲದಲ್ಲಿ ತಾಯಿ ಮಗಳ ಹೆರಿಗೆ ಜೊತೆ ಜೊತೆಗೆ ಆಗುವುದು ಸಹಜವಾಗಿತ್ತು…..ಹೀಗಾಗಿ ಜಯದೇವಿ ತಾಯಿಯವರ ತಂಗಿಯಂದಿರು ಹಾಗೂ ಮಕ್ಕಳು ಎಲ್ಲರೂ ಸೇರಿ ಶಾಲೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ತಾಯಿಯವರಿಗೆ ವಚನವನ್ನು ಓದುವ ಮಹದಾಸೆ ಹೆಚ್ಚಾಗಿ ತೊಡಗಿತ್ತು.ಶರಣರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಆಳವಾದ ಅಮೂಲ್ಯವಾದ ವಚನ ಸಾಹಿತ್ಯವನ್ನು ಅಭ್ಯೆಸಿಸಬೇಕು ತನ್ನಲ್ಲಿ …ಹುಟ್ಟುವ ಭಾವನೆಗಳನ್ನು ತಾಯಿ ಭಾಷೆಯಲ್ಲಿ ವ್ಯಕ್ತಪಡಿಸಬೇಕು ಅನ್ನುವ ತಳಮಳ ಅವರಲ್ಲಿ ಉಲ್ಬಣಗೊಳ್ಳಲಾರಂಭಿಸಿತು ….ಕನ್ನಡ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ, ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-111 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ವ್ಯವಸ್ಥೆಯಾದ ಮಕ್ಕಳ ಶಿಕ್ಷಣ ಎರಡನೇ ಮಗಳು ಪ್ರಥಮ ವರ್ಷದ ಪದವಿ ತರಗತಿಗೆ ಸೇರ್ಪಡೆಯಾದಳು. ಮೂರನೇ ಮಗಳು ತಾನು ಸ್ವಲ್ಪ ತಡವಾಗಿಯೇ ಪಿಯುಸಿಗೆ ಸೇರಿಕೊಳ್ಳುತ್ತೇನೆ. ಅಮ್ಮನ ಜೊತೆ ಸಹಾಯಕ್ಕೆ ಇರುತ್ತೇನೆ ಎಂದಳು. ಸುಮತಿಯ ಆರೋಗ್ಯ ಮೊದಲಿಗಿಂತ ಕ್ಷೀಣಿಸುತ್ತಿರುವುದು ಇಬ್ಬರ ಗಮನಕ್ಕೂ ಬಂದಿತ್ತು. ಹಾಗಾಗಿ ತಂಗಿ ಹೇಳಿದಾಗ ಅಕ್ಕ ಸರಿ ಅಂದಳು. ಸುಮತಿಯ ಕುಟುಂಬಕ್ಕೆ ಆಪ್ತರಾದ ಡ್ರೈವರ್, ಸಾಹುಕಾರರು ಹಾಗೂ ಅಮ್ಮ ಸಕಲೇಶಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡುವಾಗ ಜೊತೆಯಲ್ಲಿ ಇರುತ್ತಿದ್ದರು. ಹಾಗಾಗಿ ಅನಾಥಾಶ್ರಮದಲ್ಲಿ ಮಕ್ಕಳ ಮೇಲ್ವಿಚಾರಣೆ ಹಾಗೂ ಅವರಿಗೆ ಶಿಕ್ಷಕಿಯಾಗಿ ಕಲಿಕೆಗೆ ಸಹಾಯ ಮಾಡಲು ಯಾರೂ ಇಲ್ಲದಿರುವುದು ಡ್ರೈವರ್ ಗೆ ತಿಳಿದಿತ್ತು. ಅವರು ಅಮ್ಮನೊಂದಿಗೆ ಸುಮತಿಯ ಎರಡನೇ ಮಗಳ ವಿಚಾರವನ್ನು ಪ್ರಸ್ತಾಪಿಸಿದರು. ಸುಮತಿಯ ಎರಡನೇ ಮಗಳು ದ್ವಿತೀಯ ಪಿಯುಸಿಯನ್ನು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಳು ಹಾಗೂ ಈಗ ಪ್ರಥಮ ವರ್ಷದ ಪದವಿಗೆ ಅಡ್ಮಿಶನ್ ಪಡೆದುಕೊಂಡಿದ್ದಳು. ಈ ವಿಚಾರ ಅಮ್ಮನಿಗೂ ತಿಳಿದಿತ್ತು. ಆ ಹುಡುಗಿಗೆ ಅನಾಥಾಶ್ರಮದಲ್ಲಿ ಕೆಲಸ ದೊರೆತರೆ ಸುಮತಿಯ ಕುಟುಂಬಕ್ಕೆ ಸಹಾಯವಾಗಬಹುದು ಹಾಗೂ ಆ ಹುಡುಗಿಯು ತನ್ನ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಬಹುದು ಎಂಬುದು ಸುಮತಿಯ ಕುಟುಂಬದ ಆಪ್ತರಾದ ಡ್ರೈವರ್ ಹಾಗೂ ಅವರ ಪತ್ನಿಯ ಆಲೋಚನೆಯಾಗಿತ್ತು. ಡ್ರೈವರ್ ಹೇಳಿದ ವಿಚಾರವನ್ನು ಕೇಳಿ…. “ಸರಿ ನಾನು ಒಮ್ಮೆ ಡಾಕ್ಟರ್ ರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ನೋಡುತ್ತೇನೆ”…. ಎಂದರು.  “ಹಾಗೆಯೇ ಆಗಲಿ ಅಮ್ಮ…. ನೀವು ಮತ್ತು ಸಾಹುಕಾರರು ಮೊದಲಿನಿಂದಲೂ ಟೀಚರ್ ಹಾಗೂ ಮಕ್ಕಳ ಕಾಳಜಿಯನ್ನು ವಹಿಸುತಿದ್ದೀರಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದೀರಿ….. ನಿಮ್ಮಿಂದ ಅವರು ನೆಮ್ಮದಿಯಿಂದ ಬದುಕುವಂತಾಗಿದೆ”…. ಎಂದರು. ಸುಮತಿಯ ಎರಡನೇ ಮಗಳು ಟೈಪಿಂಗ್ ಕಲಿಯುವಾಗ ಪ್ರತಿ ತಿಂಗಳೂ ಫೀಸ್ ಕಟ್ಟಲು ಅಮ್ಮನಿಂದ ಹಣವನ್ನು ಪಡೆಯಲು ಬರುತ್ತಿದ್ದಳು ಹಾಗೂ ಹೊಸದಾಗಿ ಇಲ್ಲಿಗೆ ವಾಸ್ತವ್ಯ ಹೂಡಿದ ನಂತರ ಅವಳಿಗೆ ರಜೆ ಇರುವಾಗ ತನ್ನ ಸಹಾಯಕ್ಕಾಗಿ ಅಮ್ಮ ಅವಳನ್ನು ಬಂಗಲೆಗೆ ಕರೆಸಿಕೊಳ್ಳುತ್ತಿದ್ದರು ಹಾಗಾಗಿ ಅವಳ ಪರಿಚಯ ಅಮ್ಮನಿಗಿತ್ತು. ಒಂದು ದಿನ ಸಂಜೆ ಸುಮತಿ ಮತ್ತು ಅವಳ ಎರಡನೇ ಮಗಳನ್ನು ಬಂಗಲೆಗೆ ಬರುವಂತೆ ಅಮ್ಮ ಕೆಲಸಗಾರರೊಂದಿಗೆ ಹೇಳಿ ಕಳಿಸಿದರು. ಅಮ್ಮ ತಮ್ಮನ್ನು ಏಕೆ ಕರೆದಿರಬಹುದು? ಎನ್ನುವ ಜಿಜ್ಞಾಸೆಯೊಂದಿಗೆ ಇಬ್ಬರೂ ಅಮ್ಮನನ್ನು ಭೇಟಿ ಮಾಡಲು ಬಂದರು. ಅಮ್ಮನನ್ನು ಕಂಡೊಡನೆ ಇಬ್ಬರೂ ವಂದಿಸಿದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅಮ್ಮ ತಾಯಿ-ಮಗಳನ್ನು ಕಂಡ ಕೂಡಲೇ….”ಹೇಗಿದ್ದೀರಿ ಸುಮತಿ…. ಇವಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ಎಂದು ಕೇಳಿದರು….. “ಎಲ್ಲವೂ ನಿಮಗೆ ಗೊತ್ತಿರುವ ವಿಚಾರ ಅಲ್ಲವೇ ಅಮ್ಮಾ…. ಇನ್ನು ನಾನೇನು ಹೇಳಲಿ?… ನಿಮ್ಮ ಕೃಪೆಯಿಂದ ನಾವು ಚೆನ್ನಾಗಿದ್ದೇವೆ”…. ಎಂದಳು ಸುಮತಿ. ಮಗಳನ್ನು ನೋಡುತ್ತಾ….. “ನೀನು ಏನು ಹೇಳುತ್ತೀಯ ಹುಡುಗಿ?…. ಎಂದು ಅಮ್ಮ ಕೇಳಿದಾಗ… “ನನ್ನ ಅಮ್ಮ ಹೇಳಿದ್ದೇ ನನ್ನ ಉತ್ತರ ಅಮ್ಮ”…. ಎಂದಳು ಹುಡುಗಿ ವಿನಯದಿಂದ. “….ನಿಮ್ಮಿಬ್ಬರನ್ನು ನಾನು ಇಲ್ಲಿಗೆ ಕರೆಸಿರುವುದು ಏಕೆಂದರೆ, ನಾವು ನಡೆಸುತ್ತಿರುವ ಅನಾಥಾಶ್ರಮದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?…. ಅಲ್ಲಿ ಈಗ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಇಲ್ಲ…. ಹಾಗಾಗಿ ನಿಮ್ಮ ಈ ಮಗಳನ್ನು ಅಲ್ಲಿಗೆ ನೇಮಿಸಬೇಕು ಎಂದು ಡಾಕ್ಟರ್ ಮತ್ತು ನಾನು ತೀರ್ಮಾನಿಸಿದ್ದೇವೆ…. ನೀವೇನು ಹೇಳುತ್ತೀರಿ? ಎಂದು ಸುಮತಿಯನ್ನು ಅಮ್ಮ ಕೇಳಲು, ….. “ಅಮ್ಮಾ…. ಇವಳಿನ್ನೂ ಚಿಕ್ಕ ಹುಡುಗಿ…. ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವಳು ನಿಭಾಯಿಸಲು ಸಾಧ್ಯವೇ?…. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಇವಳು ಅಲ್ಲಿಯೇ ಓದಿ ಬೆಳೆದವಳು…. ಆದರೂ….. ಇವಳ ವಯಸ್ಸಿಗೆ ಇದು ಬಹಳ ದೊಡ್ಡ ಜವಾಬ್ದಾರಿ ಎಂದು ನನಗೆ ಅನಿಸುತ್ತಿದೆ”…. ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ….. “ಸಂಪೂರ್ಣ ಜವಾಬ್ದಾರಿಯನ್ನು ಇವಳ ಮೇಲೆ ನಾವು ಹೊರಿಸುತ್ತಿಲ್ಲ…. ಅವಳಿಗೆ ಸಹಾಯ ಮಾಡಲು ನಮ್ಮ ಇನ್ನೊಂದು ಅಂಗವಿಕಲ ಶಾಲೆಯ ಮೇಲ್ವಿಚಾರಕರು ಇರುತ್ತಾರೆ…. ಇವಳು ಅಲ್ಲಿಯೇ ಮಕ್ಕಳ ಜೊತೆಗೆ ವಾಸವಿದ್ದು, ಅವರ ಕಲಿಕೆಗೆ ಸಹಾಯ ಮಾಡಬೇಕು ಅವರನ್ನು ನೋಡಿಕೊಳ್ಳಬೇಕು….ಜೊತೆಗೆ ಇವಳೂ ಅಲ್ಲಿಂದ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು…. ಹೇಗೂ ಅಲ್ಲಿನ ನಿಯಮಗಳೇನೆಂದು ಇವಳಿಗೆ ತಿಳಿದಿದೆ…. ಒಂದರಿಂದ ಹತ್ತನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳು ಅಲ್ಲಿದ್ದಾರೆ…. ಇವಳು ಬಹಳ ಬುದ್ಧಿವಂತಳಿದ್ದಾಳೆ… ಹಾಗಾಗಿ ಅಲ್ಲಿನ ಮಕ್ಕಳಿಗೆ ಪಠ್ಯದ ವಿಷಯಗಳಲ್ಲಿ ಇವಳು ಸಹಾಯ ಮಾಡಬಹುದು…. ನಿಮ್ಮ ಮಗಳಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ನಾವು ಕೊಡುತ್ತೇವೆ…. ಇದರಿಂದ ನಿಮಗೆ ಸಹಾಯವಾಗುತ್ತದೆ…. ಇನ್ನೊಬ್ಬಳು ಮಗಳು ಕೂಡಾ ನಿಮ್ಮ ಜೊತೆ ಇದ್ದು ಕಾಲೇಜಿಗೆ ಸೇರಬಹುದು…. ನಿಮ್ಮ ಕೊನೆಯ ಮಗಳು ಹೇಗೂ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ಪಿಯುಸಿಯವರೆಗೂ ಅವಳ ಚಿಂತೆ ನಿಮಗಿರುವುದಿಲ್ಲ… ಎಲ್ಲವೂ ಸರ್ಕಾರವೇ ನೋಡಿಕೊಳ್ಳುತ್ತದೆ…. ಈಗ ಇವಳೂ ಅಲ್ಪ ಸ್ವಲ್ಪ ಸಂಪಾದನೆ ಮಾಡುವುದರಿಂದ ನಿಮಗೂ ಸಹಾಯವಾಗುತ್ತದೆ…. ಇವಳು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನಮ್ಮ ಬೇರೆ ಶಾಲೆಗಳಲ್ಲಿಯೂ ಕೆಲಸ ಮಾಡಬಹುದು…. ಇವಳಿಗೆ ವಾಸಕ್ಕೆ ಅನಾಥಾಶ್ರಮದಲ್ಲಿ ಬೇಕಾದ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ….ಇವಳಿಗೆ ಸಹಾಯಕ್ಕಾಗಿ ಅಲ್ಲಿ ಒಬ್ಬ ಅಡುಗೆಯವರು ಇರುತ್ತಾರೆ…. ವಾರಕ್ಕೊಮ್ಮೆ ನಿಮ್ಮನ್ನು ಬಂದು ಭೇಟಿ ಮಾಡುತ್ತಾಳೆ…. ಇಲ್ಲಿ ನಿಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಇನ್ನೊಬ್ಬ ಮಗಳು ಇರುತ್ತಾಳೆ ಅಲ್ಲವೇ?…. ಆಲೋಚಿಸಿ ಆದಷ್ಟು ಬೇಗ ನಿಮ್ಮ ತೀರ್ಮಾನವನ್ನು ತಿಳಿಸಿ. ನಾವು ಕೂಡ ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತೇವೆ…. ಇವಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುತ್ತೇವೆ…. ನಮ್ಮ ನೆರಳಿನಲ್ಲಿ ಅವಳು ಇರುತ್ತಾಳೆ….ಹೇಗೂ ನೀವು ಶಿಕ್ಷಕಿ…. ನಿಮ್ಮ ಜೊತೆ ರಜೆಯಲ್ಲಿ ಆಗಾಗ ಇವಳು ಕೂಡ ಶಾಲೆಗೆ ಬರುತ್ತಿದ್ದಳಲ್ಲವೇ? …. ಹಾಗಾಗಿ ಮಕ್ಕಳಿಗೆ ಕಲಿಸಲು ಕಷ್ಟವಾಗದು ಎಂಬುದು ನನ್ನ ಅನಿಸಿಕೆ… ಇನ್ನು ತೀರ್ಮಾನ ನಿಮ್ಮಿಬ್ಬರದು…. ಎಂದರು ಅಮ್ಮ ನಸುನಗುತ್ತಾ.

Read Post »

ಕಾವ್ಯಯಾನ

“ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು”ವನಜ ಮಹಾಲಿಂಗಯ್ಯ

ಕುಟುಂಬ ಸಂಗಾತಿ ವನಜ ಮಹಾಲಿಂಗಯ್ಯ “ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು” ಹಿಂದಿನ ಕಾಲದಲ್ಲಿ ಮನೆಯಲ್ಲಿ ಅಪ್ಪ-ಅಮ್ಮ ಎಂದರೆ ದೇವರು. ಅವರ ಮಾತು ಕಟ್ಟಳೆ. ಅವರ ಆಶೀರ್ವಾದವೇ ಜೀವನದ ದೊಡ್ಡ ಆಸ್ತಿ ಎಂದು ನಂಬಲಾಗಿತ್ತು. ಆದರೆ ಇಂದು? ಮೊಬೈಲ್‌ನ ಸ್ಕ್ರೀನ್‌ಗಿಂತ ಹೆಚ್ಚು ಗೌರವ ಸಿಗುವುದಿಲ್ಲ ಅಪ್ಪ-ಅಮ್ಮನಿಗೆ. “ಏನು ಹಳೇ ಕಾಲದ ಟಾಕ್” ಎಂದು ಒಂದು ಮಾತಿಗೆ ತಿರಸ್ಕರಿಸುವ ಮಕ್ಕಳು ಹೆಚ್ಚಾಗುತ್ತಿದ್ದಾರೆ. ಈ ಬದಲಾವಣೆ ಏಕೆ? ಇದರ ಹಿಂದಿನ ಕಾರಣಗಳೇನು? ಇದು ಕೇವಲ ತಪ್ಪೋ, ಅಥವಾ ಕಾಲದ ಬದಲಾವಣೆಯ ಸಹಜ ಪರಿಣಾಮವೋ?ಮೊದಲನೆಯದಾಗಿ – ಡಿಜಿಟಲ್ ಜಗತ್ತಿನ ಒಡಂಬಡಿಕೆಇಂದಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸ್ಮಾರ್ಟ್‌ಫೋನ್, ಇಂಟರ್ನೆಟ್, ಸೋಶಿಯಲ್ ಮೀಡಿಯಾ ಜೊತೆ ಬೆಳೆಯುತ್ತಾರೆ. ಈ ಜಗತ್ತಿನಲ್ಲಿ ಎಲ್ಲವೂ ತ್ವರಿತ. ಲೈಕ್, ಕಾಮೆಂಟ್, ಫಾಲೋವರ್‌ಗಳೇ ಮೌಲ್ಯ. ಅಪ್ಪ-ಅಮ್ಮನ ದೀರ್ಘಕಾಲದ ತ್ಯಾಗ, ರಾತ್ರಿ ಕಣ್ಣು ಮುಚ್ಚದೆ ದುಡಿದದ್ದು, ಮಕ್ಕಳಿಗಾಗಿ ಸ್ವಂತ ಆಸೆಗಳನ್ನು ಬಿಟ್ಟದ್ದು – ಇವೆಲ್ಲವೂ “ಸ್ಲೋ ಕಂಟೆಂಟ್”. ಇದನ್ನು ಸ್ಕ್ರೋಲ್ ಮಾಡಿ ಸ್ಕಿಪ್ ಮಾಡುವಷ್ಟು ಸುಲಭವಾಗಿದೆ. ಆದ್ದರಿಂದಲೇ “ನೀನು ಏನೂ ಅರ್ಥ ಮಾಡಿಕೊಳ್ಳದೆ ಇದ್ದೀಯಾ” ಎಂಬ ಮಾತುಗಳು ಮನೆಯಲ್ಲಿ ಸಾಮಾನ್ಯವಾಗಿವೆ.ಎರಡನೆಯದು – ಜನರೇಷನ್ ಗ್ಯಾಪ್ ದೊಡ್ಡದಾಗಿದೆಹಿಂದೆ ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ತಾವು ಬೆಳೆದ ರೀತಿಯಲ್ಲೇ ಬೆಳೆಸುತ್ತಿದ್ದರು. ಆದರೆ ಇಂದು ಒಂದು ದಶಕದಲ್ಲಿ ತಂತ್ರಜ್ಞಾನ, ಜೀವನಶೈಲಿ, ಆಲೋಚನೆಗಳು ತೀವ್ರ ಬದಲಾಗಿವೆ. ಅಪ್ಪನಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಅರ್ಥವಾಗುವುದಿಲ್ಲ. ಮಗನಿಗೆ ಅಪ್ಪನ “ಹಳೇಯ ಕಾಲದ ಯೋಚನೆ” ಅರ್ಥವಾಗುವುದಿಲ್ಲ. ಈ ಅಂತರವೇ ಗೌರವ ಕೊರೆಯುವ ಮೂಲ. ಮಾತಿನಲ್ಲಿ ತಿರಸ್ಕಾರ ಬರುತ್ತದೆ. “ನೀನು ಏನೂ ಗೊತ್ತಿಲ್ಲ” ಎಂಬ ಭಾವನೆಯಿಂದ ಮಾತುಗಳು ಕಠಿಣವಾಗುತ್ತವೆ.ಮೂರನೆಯದು – ಮೌಲ್ಯಗಳ ಬದಲಾವಣೆಇಂದು ಯಶಸ್ಸು = ಹಣ + ಫೇಮ್ + ಸ್ವಾತಂತ್ರ್ಯ ಎಂಬ ಸಮೀಕರಣ ಮಕ್ಕಳ ಮನಸ್ಸಿನಲ್ಲಿ ಬಲವಾಗಿ ಕೂತಿದೆ. ಅಪ್ಪ-ಅಮ್ಮನ ತ್ಯಾಗವನ್ನು “ಡ್ಯೂಟಿ” ಎಂದು ತೆಗೆದುಕೊಂಡು, ಅದಕ್ಕೆ ಬೆಲೆ ಕಟ್ಟದೆ ಇರುವುದು ಸಹಜವೆನಿಸುತ್ತದೆ. “ನಾನು ಏನೂ ಕೇಳಿಲ್ಲ, ನೀನೇ ಮಾಡಬೇಕಿತ್ತು” ಎಂಬ ಧೋರಣೆ ಬರುತ್ತದೆ. ಆದರೆ ಒಂದು ಸತ್ಯ – ಯಾರ ಮೇಲೂ “ಬೇಕಾಬಿಟ್ಟಿ” ಪ್ರೀತಿ ಬರುವುದಿಲ್ಲ. ಅದು ಗಳಿಸಬೇಕಾದ ಭಾವನೆ.ಆದರೂ ಒಂದು ಆಶಾಕಿರಣಎಲ್ಲಾ ಮಕ್ಕಳೂ ಹೀಗಲ್ಲ. ಇನ್ನೂ ಸಾವಿರಾರು ಮನೆಗಳಲ್ಲಿ ಅಪ್ಪ-ಅಮ್ಮನ ಕೈ ಹಿಡಿದುಕೊಂಡು ನಡೆಯುವ ಮಕ್ಕಳಿದ್ದಾರೆ. ಅವರು ತಮ್ಮ ತಂದೆತಾಯಿಯವರನ್ನು ಗೌರವಿಸುತ್ತಾರೆ, ಕಾಳಜಿ ವಹಿಸುತ್ತಾರೆ. ಆದರೆ ಬಹುತೇಕ ಮನೆಗಳಲ್ಲಿ ಈ ಸಂವಾದದ ಕೊರತೆ ಇದೆ. ಮಕ್ಕಳು ಒಂದು ಬಾರಿ ಕೇಳಬೇಕು – “ನಾನು ದೊಡ್ಡವನಾದ ಮೇಲೆ ನನ್ನ ಮಗ ನನ್ನನ್ನು ಹೀಗೆಯೇ ನೋಡಿದರೆ ಎಷ್ಟು ನೋವಾಗುತ್ತದೆ?” ಎಂದು.ಅಪ್ಪ-ಅಮ್ಮನಿಗೆ ಬೆಲೆ ಕೊಡುವುದು ದೊಡ್ಡ ಉಡುಗೊರೆಯಲ್ಲ. ಅದು ಸಣ್ಣ ಸಣ್ಣ ಮಾತುಗಳು, ಒಂದು ಫೋನ್ ಕರೆ, ಒಂದು ಭೇಟಿ, ಒಂದು “ಥ್ಯಾಂಕ್ ಯು” – ಇಷ್ಟೇ ಸಾಕು. ಏಕೆಂದರೆ ಅವರು ನಿಮಗಾಗಿ ಕೊಟ್ಟದ್ದು ಜೀವನವೇ. ನೀವು ಕೊಡುವುದು ಕೇವಲ ಸ್ವಲ್ಪ ಗೌರವ.ಇಂದಿನ ಮಕ್ಕಳೇ, ಒಮ್ಮೆ ನಿಮ್ಮ ಅಪ್ಪ-ಅಮ್ಮನ ಕಣ್ಣುಗಳನ್ನು ನೋಡಿ. ಅಲ್ಲಿ ನಿಮಗಾಗಿ ಕಾದಿರುವ ಪ್ರೀತಿಯನ್ನು ಕಾಣಬಹುದು. ಆ ಪ್ರೀತಿಗೆ ಬೆಲೆ ಕಟ್ಟಲು ಆಗದು – ಆದರೆ ಅದನ್ನು ಗೌರವಿಸಲು ಸಾಧ್ಯ. ಅದನ್ನು ಮಾಡಿ. ಏಕೆಂದರೆ ನಾಳೆ ನೀವೂ ಅಪ್ಪ-ಅಮ್ಮ ಆಗುತ್ತೀರಿ. ಆಗ ನಿಮಗೆ ಈ ಗೌರವ ಬೇಕಾಗುತ್ತದೆ.ನಿಮ್ಮ ಅಭಿಪ್ರಾಯ ಏನು? ಈ ಬಗ್ಗೆ ನಿಮ್ಮ ಅನುಭವ ಹಂಚಿಕೊಳ್ಳಿ. ವನಜ ಮಹಾಲಿಂಗಯ್ಯ

“ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು”ವನಜ ಮಹಾಲಿಂಗಯ್ಯ Read Post »

ನಿಮ್ಮೊಂದಿಗೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಕನಸುಗಳಿರಬೇಕು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಕನಸುಗಳಿರಬೇಕು” ಕನಸುಗಳಿರಬೇಕು ಸುತ್ತಲೂಕವಿದ ಕತ್ತಲು ಕಳೆವಬೆಳಗುವ ದೀಪದಂತೆ ಕನಸುಗಳಿರಬೇಕು ಕಣ್ಣಲ್ಲಿತುಂತುರು ಮಳೆ ಕಾಮನಬಿಲ್ಲಕಾತುರದಿಂದ ನೋಡುವಂತೆ ಕನಸುಗಳಿರಬೇಕು ಹೆಜ್ಜೆಜ್ಜೆಗೂಸಾಧನೆ ಗರಿಗೆದರಿ ಸುರಿಮಳೆಯಲ್ಲಿ ಸಂಭ್ರಮಿಸುವಂತೆ ಕನಸುಗಳಿರಬೇಕು ಮನದಲ್ಲಿಸೋಲಿನಲ್ಲೂ ಸ್ಥೈರ್ಯದಿಭರವಸೆ ಪುಟ್ಟಿದೇಳುವಂತೆ ಕನಸುಗಳಿರಬೇಕು ನೋಂದಾಗಸವಾಲುಗಳನ್ನು ಸ್ವೀಕರಿಸಿಬದುಕಿನ ದಿಕ್ಕು ಬದಲಿಸುವ ದಿಕ್ಸೂಚಿಯಂತೆ ಕನಸುಗಳಿರಬೇಕು ಬದುಕಿಗೆಸದಾ ಉತ್ಸಾಹದ ಬುಗ್ಗೆಯಾಗಿಎಂದಿಗೂ ಬತ್ತದ ವರತೆಯಂತೆ ಕನಸುಗಳಿರಬೇಕು ನನಸಾಗಿಸಲುಬರಡು ಭೂವಿಯಲ್ಲಿಹಸಿರು ಹರಡಿನೆಮ್ಮದಿ ನೀಡುವ ತಂಗಾಳಿಯಂತೆ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಕನಸುಗಳಿರಬೇಕು” Read Post »

ಇತರೆ

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು

ಪ್ರವಾಸಿ ಸಂಗಾತಿ “ಗೊರೂರು ಅನಂತರಾಜು “ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ನುಗ್ಗಿ ಬಸ್ ಹತ್ತಿ  ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ  ಮಧುಕೇಶ್ವರ ದೇವಸ್ಥಾನಕ್ಕೆ ಹೋದವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು.   ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು.  ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ.  ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆ¯ ಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆAದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ  ಬೌದ್ಧ ಭಿಕ್ಷÄ ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆAದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.  ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ  ಸಿಂಹಳದ ಭೌದ್ಧ ಭಿಕ್ಷÄಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರAತೆ.  ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ.  ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು.  ಮಧುಕೇಶ್ವರ ದೇವಾಲಯದ ಕಂಬದಮೇಲೆ ರಾಷ್ಟçಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ.  ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು.  ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ಛಾçಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡA ನೆನೆವುದೆನ್ನ ಮನಂ ಬನವಾಸಿ ದೇಶಮಂ  ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ.  ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ.  ಕನ್ನಡದ  ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ  ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತಾçಭ್ಯಾಸ ಪ್ರಾರಂಭಿಸುತ್ತಾನೆ.  ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟçಕೂಟರ  ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು.     ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತುಶೈಲಿ  ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ.  ಕದಂಬರು ಶಾತವಾಹನರ ಶಿಲ್ಪಕಲಾಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊAಡAತೆ ಇರುವ  ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿAದ ರಚಿತವಾದ  ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು. ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪಶೈಲಿಯ ಲಕ್ಷಣಗಳಿರುವ  ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ  ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ.  ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾ ಮಂಟಪದAತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡAತೆ ಇರುವ ೫ ಹೆಡಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾಕಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯAತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯ ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ.  ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷö್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆAದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ  ಮತ್ತು ಜಾಮಿತಿಯ ಅಲಂಕರಣಿಗಳಿAದ ಕೂಡಿದ ಸೂಕ್ಷö್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ.   ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ.  ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ  ಆದಿಕದಂಬರೇಶ್ವರ, ಆದಿಮಧುಕೇಶ್ವರ, ಅಲ್ಲಮಪ್ರಭು  ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು  ಸುತ್ತು ಹಾಕಿ ನಡೆದುಕೊಂಡೆ ಬಸ್‌ಸ್ಟಾö್ಯಂಡ್‌ಗೆ  ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ   ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು. ಗೊರೂರು ಅನಂತರಾಜು, ಹಾಸನ.

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು Read Post »

You cannot copy content of this page

Scroll to Top