ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-17 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ‌ ಮಹಾನ್ ಚೇತನ ಸವಿತಾ ದೇಶಮುಖ ರಜಾಕರರ ಹಾವಳಿಯಿಂದ ಮನೆಬಿಟ್ಟು ಓಡಿಬಂದ ನಿರಾಶ್ರಿತರ ದುಃಖವ ನೋಡಿ.,.., ತಾಯಿಯವರ ಹೃದಯದಲ್ಲಿ ಮೂಡಿದ ಕರುಣೆ.. ತಾಯಿತನದ ಕರೆಯಾಗಿ ಮೂಡಿದ ತ್ರಿಪದಿ…. *ಬಡ ಮಕ್ಕಳಿಗೆ ಹಾಲು|ತಾಯಿಗೆ ಸೀರೆಒಡಲ ತುಂಬ ಅನ್ನ ನೀಡುತ-ರೋಗಗಳಓಡಿಸ  ಬೇಕಯ್ಯಾ ಸಿದ್ದೇಶ|| ಈ ಕವನದಲ್ಲಿ ಹಾಲಿಲ್ಲದೆ ಅಳುವ ಮಕ್ಕಳನ್ನು ನೋಡಿ ಅವರ ಮನಸು ಕರಗುತ್ತದೆ.ಬಟ್ಟೆಯಿಲ್ಲದೆ ನಾಚಿಕೆಪಡುವ ತಾಯಂದಿರ ನೋವ ಕಂಡು ಕಳವಳ ಗೊಂಡರು.ಹಸಿವಿನಿಂದ ಕಂಗೆಟ್ಟ ಜನರಿಗೆ ಅನ್ನ ಕೊಡಬೇಕೆಂಬ ಹಂಬಲ……“ಸೀರೆ ಒಡಲ ತುಂಬ” …. ತಾಯಂದಿರ ಗೌರವ, ಮಾನವನ್ನು ಕಾಪಾಡುವ ಕಾಳಜಿ.“ಅನ್ನ ನೀಡುತ” “ರೋಗಗಳ ಓಡಿಸಬೇಕಯ್ಯಾ”  ಆರೋಗ್ಯ ಮತ್ತು ಸುರಕ್ಷತೆ ಕೂಡ ಅಗತ್ಯವೆಂಬ ಅರಿವು.ಕೊನೆಯಲ್ಲಿ “ಸಿದ್ದೇಶ” ಎಂದು ಕರೆಯುವ ತಾಯಿಯವರು, ತಮ್ಮ ಕರ್ತವ್ಯವನ್ನು ದೈವಿಕ ಶಕ್ತಿಗೆ ಅರ್ಪಿಸುತ್ತಿದ್ದಾರೆ. ಇದು ಅವರ ಭಕ್ತಿ, ವಿಶ್ವಾಸ ಮತ್ತು ಮಾನವೀಯತೆಯ ಸಂಕಲನ. ಈ ಕವನದ ಹಿನ್ನಲೆಯಲ್ಲಿ ಇರುವ ದೃಶ್ಯ ತುಂಬ ಹೃದಯವಿದ್ರಾವಕ….!!!ರಜಾಕರರ ಹಿಂಸೆಯಿಂದ ಓಡಿಬಂದ ಜನರು… ಭಯ, ಹಸಿವು, ನಿರಾಶ್ರಿತ ಜೀವನಕ್ಕೆ ತಾಯಿಯವರಂತಹ ಮಹಾನ್ ಹೃದಯಿ ಆಶ್ರಯ, ಆಹಾರ ಮತ್ತು ಆಶೆಯನ್ನು ನೀಡಿದರು. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ತಾಯಿಯವರಲಿದ್ದ ದಯೆ, ಕರುಣೆ ಮತ್ತು ಸೇವಾಭಾವ ತುಂಬ ಸ್ಪಷ್ಟವಾಗಿ ಕಾಣಿಸುತ್ತದೆ.ನಿಜಾಮನ ದಬ್ಬಾಳಿಕೆಯಿಂದ ಸಂಕಷ್ಟಕ್ಕೊಳಗಾದ ನಿರಾಶ್ರಿತರು ತಮ್ಮ ಊರುಗಳನ್ನು ಬಿಟ್ಟು,  ಕಣ್ಣೀರನ್ನು ಹೊತ್ತುಕೊಂಡು ಸೊಲ್ಲಾಪುರಕ್ಕೆ ಬಂದಾಗ, ಅವರ ಪರಿಸ್ಥಿತಿ ತುಂಬ ದಯನೀಯವಾಗಿತ್ತು. ಮನೆ ಇಲ್ಲ, ಊರು ಇಲ್ಲ, ಬದುಕಿನ ಭರವಸೆ ಇಲ್ಲ….!! “ಬೆಂದು ಬಂದ ಮಕ್ಕಳ” ಎನ್ನುವ ಪದ ಬಹಳ ಗಂಭೀರ. ಇದು ಅವರ ನೋವನ್ನು ತಾಯಿಯವರು ಎಷ್ಟು ಆಳವಾಗಿ ಅನುಭವಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.  ತಾಯಿಗೆ ಮಕ್ಕಳಂತೆ ಅವರು…..“ಎದ್ದು ಕಣ್ಣೀರ ಒರೆಸುವ ಭಾಗ್ಯ” — ಇಲ್ಲಿ ತಾಯಿಯವರು ಸೇವೆಯನ್ನು ಕರ್ತವ್ಯವಾಗಿ ಮಾತ್ರ ನೋಡುತ್ತಿಲ್ಲ. ಅದನ್ನು “ಭಾಗ್ಯ” ಎಂದುಕೊಂಡಿದ್ದಾರೆ. “ಸಿದ್ದ ನನಗೆ ನೀಡಿ ದುಡಿಸಿದಿ” ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ, ಈ ಜನರ ಸೇವೆ ಮಾಡುವ ಅವಕಾಶ ನೀಡಿದ್ದಾನೆ ಎಂದು ತಾಯಿಯವರು ಕೃತಜ್ಞತೆಯಿಂದ ಹೇಳುತ್ತಾರ. ತಾಯಿಯವರಲ್ಲಿ ಇರುವ  ಮಾನವೀಯತೆ ಮತ್ತು ದೈವಭಕ್ತಿ ತೊರುವದು.  ಅವರ ಸೇವೆಯನ್ನು ತಮ್ಮ ಕರ್ತವ್ಯ ತಮ್ಮ ಧರ್ಮದಂತೆ ಸ್ವೀಕರಿಸಿದ್ದು ಇಲ್ಲಿ ಗೋಚರಿಸುತ್ತದೆ. ಆಗಿನ ಕಾಲದಲ್ಲಿಶ್ರೀ ಚಂಡರಕಿ (ಬೆನಕೊಪ್ಪ) ಉರ್ದು ಭಾಷೆಯ ಕವಿಯೊಬ್ಬನು  ವೀರಗಾಸೆ ಕುಣಿತದಲ್ಲಿ ಪ್ರಸಿದ್ಧರಾದವರು. ಸೊಲ್ಲಾಪುರಕ್ಕೆ ಬಂದ ನಿರಾಶ್ರಿತರಿಗೆ  ಆಶ್ರಿತರಾಗಿ ನಿಂತ ತಾಯಿಯವರ ಬಗ್ಗೆ ಉರ್ದುನಲ್ಲಿ ಕವಿತೆ ಬರ್ತಾನೆ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಡಾ. ಶಂಕರ. ಮೂಗಿ(ನನ್ನ ತಂದೆ)*ತಾಯಿ ನಿನಗೆ ಸಲಾಮು ನಿನಗೆ ಸಲಾಮು * ಅಟ್ಟಿ ಜಡಿಸಿದ ಕಾಸೀಮ ಗಜನಿಕಟ್ಟಿಕೊಂಡು ರಜಾಕಾರರ ದಂಡುಓಡಿ ಬಂದೆವು ನಾವಂದುತೋಳ ಕಂಡ ಕುರಿಯ ಹಿಂಡು ಉಟ್ಟಿದ ಸೀರೆ ತೊಟ್ಟಿದ್ದವಲ್ಲಬೆನ್ನು ಬಿರಿವ ಬಿಸಿಲಿನಲ್ಲಿಸೊನ್ನಲಿಗೆ ಭೂಮಿಗೆ ಬಂದುನಿಂದೆವು ಸಿದ್ದನ ಛತ್ರದಲ್ಲಿ….., ಅಂತ‌ ತಾಯಿಯವರ ಬಗ್ಗೆ ಬರಿತಾನೆ…… ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿ ವಾರದ  ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು. *ಹೊಲದಲ್ಲಿ ಮನೆ ಕಟ್ಟಿಕೊಟ್ಟೀರಿಕೊಯ್ದಿರಿ ನಿಂತ ಫಸಲುಆ ವರುಷ ನಿಮಗಾಗಲಿಲ್ಲಬೆಳೆಯಲ್ಲಿ ಏನು ಅಸಲು ಕೂಸು ಕಂಡಿರಲಿಲ್ಲ ನೆತ್ತಿಗೆಣ್ಣೆಹೊಟ್ಟೆಗಿರಲಿಲ್ಲ ಹಾಲು ತೊಟ್ಟುಹೊದಿಕೆ ಹಾಸಿ, ಹಾಸು ಇರಲಿಲ್ಲತಂದು ಒಗಿಸಿದಿರಿ ಚಾದರದ ಕಟ್ಟು* ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಬೆಳೆದು ನಿಂತ ಬೆಳೆಯನ್ನು ತೆಗೆಸಿ…ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ತಮ್ಮ ಮನೆಯಾದ ಜೈನಿಕೇತನದಿಂದಲೇ  ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು  ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು … ಬಡವರು ದಲಿತರು ನಿರಾಶ್ರಿತರು ಅದು ಯಾವುದೇ ಮತ ಕುಲಕ್ಕೆ ಸಂಬಂಧಿಸಿದ್ದರು ಎಲ್ಲರಿಗೂ ತಾಯಿ ಮಕ್ಕಳನ್ನು ನೋಡುವಂತೆ ನೋಡಿಕೊಂಡರು. *ಹಡೆದ ನಾರಿಯರ ಕರೆದುತಂದು ಮಾಡಿದಿರಿ ಆರೈಕೆತವರಿಗೆ ಕಡಿಮೆ ಅಲ್ಲದಂತೆಪಡೆದೆವು ಅಮ್ಮ ನಿನ್ನ ಹರಿಕೆ * ನಿರಾಶ್ರಿತ್ರಿರಗೆ ಆಶ್ರಯ ಕೊಡುವದು ಅಂಥ ಸುಲಭದ ಕೆಲಸವೇನು ಆಗಿರಲಿಲ್ಲ ಅದರಲ್ಲಿ ಬಾಣಂತಿಯರು ಗರ್ಭಿಣಿಯರಂಥ  ಸ್ತ್ರೀಯರು ಕೂಡ ಇದ್ದರು ಅವರೆಲ್ಲರಿಗೂ ಕರೆದು ಬಾಣಂತನವನ್ನು ಮಾಡಿಸಿ ನವಜಾತ ಶಿಶುಗಳ ಆರೈಕೆ ಮಾಡಿಸಿದರು. ಗರ್ಭಿಣಿಯರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಿದರು.ವಿವಿಧ ಸಂಸ್ಥಾನಗಳ ವಿಲೀನಿಕರಣ ಸಂದರ್ಭದಲ್ಲಿ ದೇಶದ ಏಕೀಕರಣಕ್ಕಾಗಿ ಶಕ್ತಿಯಾಗಿ ನಿಂತ ನಾಯಕ ಸರ್ದಾರ್ ವಲ್ಲಭಾಯಿ ಪಟೇಲರು.ಸ್ಥಿತಿ ಹಿಡಿತದಿಂದ ತಪ್ಪುತ್ತಿರುವುದು ಕಂಡಾಗ, ಪಟೇಲರು ತಕ್ಷಣವೇ ಶೀಘ್ರ ಹಾಗೂ ದೃಢ ಕ್ರಮ ಕೈಗೊಂಡರು. ಅವರ ದೃಷ್ಟಿಯಲ್ಲಿ ದೇಶದ ಏಕತೆ ಮತ್ತು ಭದ್ರತೆ ಅತ್ಯಂತ ಮುಖ್ಯವಾಗಿತ್ತು.ಶೀಘ್ರ ಕಾರ್ಯಾಚರಣೆಯಲಿ(ಕ್ವಕ ಆಕ್ಷನ್)ಪಟೇಲರ ದೃಢ ನಿಲುವು ತೆಗೆದುಕೊಂಡರು.ಈ ಸಂದರ್ಭದಲ್ಲಿ ಪಟೇಲರು ಮಾತುಕತೆ ಜೊತೆಗೆ ಅಗತ್ಯವಾದರೆ ಶಕ್ತಿಯನ್ನೂ ಬಳಸಬೇಕು ಎಂಬ ನಿಲುವನ್ನು ತಾಳಿದರು.ಹೈದರಾಬಾದ್ ಸಂಸ್ಥಾನದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಅವರು “ಪೊಲೀಸ್ ಆಕ್ಷನ್”  ಸೈನಿಕ ಕ್ರಮವನ್ನು ಜಾರಿಗೊಳಿಸಿದರು. ಇದನ್ನು *ಆಪರೇಷನ್ ಪೋಲೋ*ಎಂದು ಕರೆಯಲಾಗುತ್ತದೆ. ಈ ಕಾರ್ಯಾಚರಣೆಯ ಮೂಲಕ ಕೇವಲ ಐದು ದಿನಗಳಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತದ ಭಾಗವನ್ನಾಗಿ ಮಾಡಲಾಯಿತು.ಪಟೇಲರ ನಾಯಕತ್ವದ ವೈಶಿಷ್ಟ್ಯದೃಢ ನಿರ್ಧಾರ ಶಕ್ತಿ,ತ್ವರಿತ ಕಾರ್ಯಾಚರಣೆ,ದೇಶದ ಏಕತೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧತೆಯಲಿ ಇದ್ದರು ಪಟೇಲರು….. ಈ ಶೀಘ್ರ ಮತ್ತು ದೃಢ ಕ್ರಮಗಳ ಫಲವಾಗಿ, ಭಾರತ ಒಂದು ಏಕೀಕೃತ ರಾಷ್ಟ್ರವಾಗಿ ರೂಪುಗೊಂಡಿತು. *” ದೇಶದ ಏಕತೆಯ ಕಗ್ಗತ್ತಲಲ್ಲಿ ಬೆಳಕಾಗಿ ಕಾಣಿಸಿಕೊಂಡವರು ಸರ್ದಾರ್ ವಲ್ಲಭಾಯಿ ಪಟೇಲರು…..“ಭಾರತದ ಕಬ್ಬಿಣ ಮನುಷ್ಯನು” ಎಂದು ಜಯದೇವಿ ತಾಯಿಯವರು ಬಹಳ ಹೆಮ್ಮೆಯಿಂದ ಎಲ್ಲ ಭಾಷಣಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಕೊನೆಗೊಮ್ಮೆ… ಅನುಭವಿಸಿದ ನೋವು, ನಿರಾಶೆ, ಅಲೆಮಾರಿ ಜೀವನದ ನಂತರ, ನಿರಾಶ್ರಿತರು ಮತ್ತೆ ತಮ್ಮ ಆಶ್ರಯದ ನೆಲೆಗೆ ಹಿಂದಿರುಗುವ ಕ್ಷಣ ಬಂದಾಗ, ಅದು ಅವರ ಬದುಕಿನ ಪುನರ್ಜನ್ಮದಂತಿತ್ತು. ಆ ಸಂತಸದ ದಿನ ಬಂದು ಒದಗಿದ್ದು ೩೦-೯-೪೮ ರಂದು. ನಿರಾಶ್ರಿತರು ತಮ್ಮ ಆಶ್ರಿತ ಸ್ಥಾನಕ್ಕೆ ಹೊರಟು ನಿಂತರು….. ಸ್ವಸ್ಥಾನಕ್ಕೆ ಹಿಂದುತ್ತಿರುವಾಗ ಅವರಲ್ಲಿ ಇದ್ದ ಆನಂದ ಉತ್ಸಾಹ ಹೇಳುತೀರದಾಗಿತ್ತು ….. ಅವರಿಗೆ ನಿಜವಾದ ಸ್ವಾತಂತ್ರ ಈಗ ಬಂದಾಗಿತ್ತು ..,!!!.ಎಲ್ಲರೂ ತಾಯಿಯವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸ್ತಾ ಹಾಡಿ ಹರಿಸಿ ಹೊಗಳಿ ಅಲ್ಲಿಂದ ತೆರಳಿದರು. ತಮ್ಮ ಮನೆಗಳ ಬಾಗಿಲುಗಳನ್ನು ಮತ್ತೆ ತೆರೆಯುವ ತವಕ …ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿಕೊಂಡವು…. ಆಸರೆ ಕೊಟ್ಟ ನೆಲವನ್ನು ಬಿಟ್ಟು ಹೋಗುವಾಗ. ..ಆ ಮಣ್ಣನ್ನು  ಸ್ಪರ್ಶಿಸಿದಾಗ ಅವರ ಹೃದಯ ತುಂಬ ಒಂದು ಶಾಂತಿಯ ಅಲೆ ಹರಡಿತು.ಭೂಮಿಗೆ ನಮಿಸಿದರು.ಮಕ್ಕಳು ಸಂತೋಷದಿಂದ ಓಡಾಡುತ್ತಿದ್ದರು, .ಪ್ರತಿ ಹೆಜ್ಜೆ   ಪ್ರತಿ ಉಸಿರು  ಒಂದು ಕಥೆ ಹೇಳುವಂತೆ ಇತ್ತು…..ಆ ಕ್ಷಣದಲ್ಲಿ ಅವರು ತಮ್ಮ ಕಷ್ಟಕಾಲದಲ್ಲಿ ತಾಯಿಯಂತೆ ನೆರವಾದ ಆ ಮಹಾನ್ ವ್ಯಕ್ತಿಯ ಜಯದೇವಿ ತಾಯಿಯವರನ್ನು ನೆನೆಸಿಕೊಂಡರು“ತಾಯಿ… ನಮ್ಮ ಜೀವ ಉಳಿಸಿದವಳು ನೀವು… ನಾವು ಕಳೆದುಕೊಂಡ ವಿಶ್ವಾಸವನ್ನು ಮತ್ತೆ ನಮ್ಮೊಳಗೆ ತುಂಬಿದವಳು ನೀವು… ನಮ್ಮ ನೆರಳಿಲ್ಲದ ಬದುಕಿಗೆ ಆಶ್ರಯವಾದವಳು ನೀವು… ಇಂದು ನಾವು ಮತ್ತೆ ನಮ್ಮ ನೆಲಕ್ಕಹಿಂದಿರುಗುತ್ತಿದ್ದೇವೆಆದರೆ ಈ ಸಂತೋಷದ ಪ್ರತಿಯೊಂದು ಹನಿ ನಿಮ್ಮ ಆಶೀರ್ವಾದವೇ…ನಾವು ನಿಮ್ಮ ಋಣವನ್ನು ಯಾವತ್ತೂ ತೀರಿಸಲಾರೆವು… ನಮ್ಮ ಹೃದಯದ ತುಂಬು ಕೃತಜ್ಞತೆಗಳನ್ನು ನಿಮಗೆ ಅರ್ಪಿಸುತ್ತೇವೆ ಎನ್ನುತ ಹಾಡಿ ಹರಸಿದರು……. *ಹೇಗೆ ತೀರಿಸಬೇಕು ತಾಯಿನಿನ್ನ ಋಣವ ಒಟ್ಟುನೆನೆವೆವು ಹಡೆದ ಮಕ್ಕಳಿಗೆ*ನಿನ್ನ ಹೆಸರು ಇಟ್ಟು,*‌‌….!!! ಜಯಭೇರಿ ಕೇಳಿ ಕುಣಿದೆವುಆಯಿತು ರಜಾಕರರ ಹೋಮಮಕ್ಕಳು ಮರಿ ಹೋಗಿ ಬರುವೆವುತಾಯಿ ನಿನಗೆ ಸಲಾಂ.. ನಿನಗೆ ಸಲಾಮ* (ಚಂಡರಕಿ ಉರ್ದು ಕವಿ) ಅವರ ಮುಖದಲ್ಲಿ ಕಂಡ ಆ ಸಂತಸ ಅವರ ಹೃದಯದಲ್ಲಿ ಮೂಡಿದ ಆ ಶಾಂತಿ—ಅದು ತಾಯಿಯ ಸೇವೆಗೆ ದೊರಕಿದ ಅತ್ಯಂತ ಮಹತ್ತರ ಗೌರವ.ಈ ದೃಶ್ಯ… ನೋವಿನಿಂದ ಆರಂಭವಾಗಿ, ಕೃತಜ್ಞತೆಯಲ್ಲಿ ಮುಗಿಯುವ ಒಂದು ಬದುಕಿನ ಪಯಣ.ಮುಂದುವರಿಯುವುದು ಸವಿತಾ  ದೇಶಮುಖ 

Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ತಮ್ಮ ತಾನರಿಯದವರು ನಿಮ್ಮನ್ನೆತ್ತ ಬಲ್ಲರಯ್ಯ…. ನಾಳಿಗಿ ಬಸೋಜಂತಿ ಅದರೀ ಮನಿ ತೊಳಿಬೇಕು , ಅಂತ ಬಾಜು ಮನಿ ಅಕ್ಕೋರು ಅಂದಾಗ ನಮ್ಮ ಜಗಜ್ಯೋತಿ ಬಸವಣ್ಣನೂ ಒಬ್ಬ ದೇವರಾಗಿ ಕುಂತ ಅಂತನಸ್ತು.ಅವನೆಲ್ಲಿ ದೇವರಾದ , ನಾವು ದೇವ್ರು ಮಾಡಿಬಿಟ್ಟೆವು.ಅವನಿಗೊಂದು ಗುಡಿ ಕಟ್ಟಿ ಅದರೊಳಗ ಕೂಡ್ಸಿ ಕುಂಕುಮ ಅರಶಿಣದಿಂದ ಪೂಜಾ ಮಾಡಿ ಹೋಳಿಗಿ ನೌದಿ ತೋರಿಸಿ ಹಬ್ಬ ಮುಗಸತೀವಿ. ಬ್ಯಾಸಗಿದಾಗ ಬರೊ ಈ ಬಸೊಜಂತಿ ನಾವು ಸಣ್ಣವರಿದ್ದಾಗ ಹೋಳಗಿ ಮಾನಕಾಯಿ ರಸ ನೆನಪಿಸತಿತ್ತು.ಅವತ್ತು ಎಲ್ಲರ ಮನ್ಯಾಗ ಹೂರಣದ ಹೋಳಗಿ ಮಾನಕಾಯಿ ಸಿಕರಣಿ. ಬಸವಜಯಂತಿ ಅಂದ್ರ ಇದರ ಹೊರತಾಗಿ ಮತ್ತಾವದೂ ತಿಳಿದಿರಲಿಲ್ಲ.ವಚನ ಸಾಹಿತ್ಯ ಓದಿ ತಿಳಿದ ಮ್ಯಾಲ ಗೊತ್ತಾಗಿದ್ದು ಬಸವಣ್ಣ ನಮ್ಮಂಗ ಒಬ್ಬ ಮನುಷ್ಯ, ಆದ್ರಾ ಅವನ ವಿಚಾರಗಳಿಂದ ಅವನೊಬ್ಬ ಅಸಾಮಾನ್ಯ ಮಾನವನೆನೆಸಿಕೊಂಡ.ಅವನಂತೆ ಅವನ ಜೊತೆಗೆ ಎಳನೂರರ ಮ್ಯಾಲ ಶರಣರು ಇದ್ದರು , ಎಲ್ಲರೂ ಮನುಷ್ಯ ರೆ. ಆದ್ರ ಈಗ ಅವ್ರೆಲ್ಲರಿಗೂ ನಮ್ಮ ಸಮಾಜ ದೇವ್ರು ಮಾಡಿ ಕೂಡಿಸಿ ಬಿಟ್ಟಾರ.ಒಂದೊಂದು ಕಾಯಕಕ್ಕ ಒಂದೊಂದು ಜಾತಿ ಹೆಸರು ಕೊಟ್ಟು ಆಯಾ ಕಾಯಕದ ಒಬ್ಬೊಬ್ಬ ಶರಣರನ್ನ ತಮ್ಮ ಜಾತಿಯ ರಾಯಭಾರಿ ಮಾಡಿಕೊಂಡು ವರ್ಷಕ್ಕೊಮ್ಮೆ ಜಯಂತಿ ಮಾಡ್ತಾರ. ಜಯಂತಿ ಆಚರಣೆ ಮಾಡೋದು ತಪ್ಪಂತ ಹೇಳಲ್ಲ.ಅವರ ಜೀವನ ಚರಿತ್ರೆ , ಅವರ ಸಾಧನೆ , ಅವರು ಸಮಾಜಕ್ಕೆ ಕೊಟ್ಟ ಮಾರ್ಗದರ್ಶನ , ಇವೆಲ್ಲ ಮುಂದಿನ ಪಿಳಿಗಿಗಿ ನೆನಪಿರಬೇಕಾದ್ರ ಮಾಹಾ ನಾಯಕರ ಹುಟ್ಟು ಸಾವಿನ ಕುರಿತು ಪ್ರತಿಯೊಬ್ಬರಿಗೂ ತಿಳದಿರಬೇಕು , ಮತ್ತೊಬ್ಬರಿಗೆ ತಿಳಿಸಿ ಹೇಳಬೇಕು. ಇಂತಹ ಜಯಂತಿಗಳ ಆಚರಣೆಯಿಂದ ಮುಂದಿನ ಪೀಳಿಗೆ ಗಳಿಗೆ ನಾವು ಅವರು ಸಮಾಜದ ಉದ್ದಾರಕ್ಕಾಗಿ ಎನೇನು ಮಾಡಿದರು ಅನ್ನೊದು ತಿಳಿಸಿ ಹೆಳತಿಬೇಕು. ಆದ್ರ ಈಗೀನ ಮಹಾನಾಯಕರ ಜಯಂತಿ ಗಳೆಲ್ಲ ಆಯಾ ಜನಾಂಗಗಳ ಜನಬಲ ತೋರಿಸಿಕೊಳ್ಳಕ್ಕೆ ಸೀಮಿತ ಆಗತಿದ್ದಾವ.ಮಡಿವಾಳ ಮಾಚೀದೇವನ ಜಯಂತಿ ಕ್ಕಿಂತ ಅಂಬಿಗರ ಚೌಡಯ್ಯ ನ ಜಯಂತಿ ದೊಡ್ಡ ದಾಗಿ ಮಾಡಬೇಕು.ಬಸವಣ್ಣನ ಜಯಂತಿಗಿಂತ ಅಂಬೇಡ್ಕರ್ ಜಯಂತಿ ಭಾರಿ ಮಾಬೇಕು.ಅವ್ರು ಅಷ್ಟೇ ಜನ ಇದ್ರು.ನಾವು ಅವರಿಗಿಂತ ಹೆಚ್ಚು ಜನ ಸೇರಬೇಕು.ಅವರು ಹಾಕಿದ್ದ ಟೆಂಟ್ ಸಣ್ಣದಿತ್ತು.ನಾವು ಹಾಕೋ ಟೆಂಟ್ ನೋಡಿ ಜನ ದಂಗಾಗಬೇಕು. ಇದಕ್ಕೆಲ್ಲ ರೊಕ್ಕ ..! ಚಂದಾ ಎತ್ತಿದ್ರಾಯ್ತು.ತಮ್ಮ ತಮ್ಮ ಜಾತಿ ಬಲ ತೋರಸಿಕೊಳ್ಳಕ ಯಾರು ಹಿಂದ ಬಿಳಲ್ಲ.ಇನ್ನೂ ಸರ್ಕಾರಿ ಅಧಿಕಾರಿಗಳು ಯಾತಕ್ಕ ಇರತಾರ , ಅಂಜಿಸಿಯಾದ್ರೂ ಜಯಂತಿ ಗಳಿಗಿ ದುಡ್ಡು ವಸೂಲಿ ಮಾಡೋದೇ , ಇವೆಲ್ಲದರ ಮುಂದಾಳತ್ವ ವಹಿಸುವವರು ಎಷ್ಟು ಬಸವಣ್ಣನ ತತ್ವಗಳನ್ನು ಅರಿತಿರತಾರ…!ಎಷ್ಟು ಅಂಬೇಡ್ಕರ್ ಅವರ ಬಗ್ಗೆ ತಿಳಿದಿರತಾರ..! ಚಂದಾ ವಸೂಲಿ ಮಾಡಿ ಈ ಜಯಂತಿ ಗಳಲ್ಲಿ ಕುಣಿಯುವವರು ಹೆಚ್ಚಾಗಿ ಯುವಕರು.ಕುಡಿದು ಡಿ ಜೆ  ಸದ್ದಿಗೆ ಎರ್ರಾಬಿರ್ರಿ ಕುಣಿಯುತ್ತ ಅದರ ಅವಾಜಕ್ಕ ಉರವರೆಲ್ಲ ಹೈರಾಣ ಆಗಬೇಕು. ಅದಕ್ಕ ಜಯಂತಿ ಅಂತಾರ.ನಮ್ಮ ನಡೆ ನುಡಿ ಆಚರಣೆಗಳಲ್ಲಿ ಶರಣರ ಮಹಾನಾಯಕರ ಆದರ್ಶ ಆಳವಡಿಸಿಕೊಳ್ಳುವದಕ್ಕ ಜಯಂತಿ ಅನ್ನಲ್ಲ ಅಂತ ಇಂತವರ ವಾದ ಇರಬಹುದು. ಅಷ್ಟಕ್ಕೂ ಸಾರ್ವಜನಿಕ ವಾಗಿ ಜಯಂತಿ ಆಚರಿಸುವ ಅವಶ್ಯಕತೆ ಅಷ್ಟು ಇದೆಯಾ..! ಸ್ಕೂಲ್ ಕಾಲೇಜ್ ಗಳಲ್ಲಿ ಆಚರಿಸಿದರೆ ಮಕ್ಕಳಿಗೆ ಅವರ ಬಗ್ಗೆ ತಿಳಿತದ.ಪಠ್ಯ ಪುಸ್ತಕಗಳದಾಗ ಅವ್ರ ಜೀವನ ಚರಿತ್ರೆಗಳು ಇರಲಿ. ಶಾಲಾ ಕಾಲೇಜುಗಳು ಮಕ್ಕಳಲ್ಲಿ ವೈಚಾರಿಕ ನಡೆಗಳ ಮಹತ್ವ ತಿಳಿಸಲಿ.ಎಲ್ಲರೂ ತಮ್ಮ ತಮ್ಮ ಜಾತಿಯ ನಾಯಕರ ಜಯಂತಿ ಆಚರಿಸ್ತಾರ , ಟಿಪ್ಪು ಸುಲ್ತಾನ ನ ಜಯಂತಿಗೆ ಯಾಕ ವಿರೋಧಿಸಬೇಕು..! ಇತಿಹಾಸ ತಮ್ಮ ಮನಸ್ಸಿಗಿ ಬಂದಂಗ ತಿರುಚಿ ತಮ್ಮ ವಾದಕ್ಕೆ ಕಟ್ಟುಬಿಳುವದರಿಂದ ಸತ್ಯ ಸುಳ್ಳಾಗಲ್ಲ , ಸುಳ್ಳು ಸತ್ಯ ಆಗಲ್ಲ.ಟಿಪ್ಪು ಸುಲ್ತಾನ್ ಕೂಡ ನಮ್ಮ ದೇಶದ ಸ್ವತಂತ್ರ ಕ್ಕಾಗಿ ಬ್ರಿಟಿಷ್ ರೊಂದಿಗೆ ಹೊರಾಡಿದವನೆ , ಇಷ್ಟು ಸಾಕು ಅವನನ್ನು ನೆನಪಿಸಿಕೊಳ್ಳುವದಕ್ಕ. ಬಸವಾದಿ ಶರಣರ ಆಶಯಗಳು , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು , ಇವೆಲ್ಲ ನಾವು ಅವ್ರ ಪೋಟಕ್ಕ ಹೂವಿನ ಹಾರ ಹಾಕಿ ತೆಂಗು ಒಡೆದು ಮೆರವಣಿಗೆ ಮಾಡ್ಕೊಂತ ಕುಣ್ಣಕೊಂತ ಹೋಗಿದ್ರಿಂದ ನಮ್ಮಲ್ಲಿ ಆಳವಡಿಸಿಕೊಳ್ಳಕ್ಕ ಆಗುವದಿಲ್ಲ.ತನು ಶುಧ , ಮನ ಶುಧ್ದ ಎಂಬ ನಿಲುವು ನಮ್ಮಲ್ಲಿ ಬರಬೇಕಾದ್ರ ಮೊದಲು ಶರಣರ ನ್ನು ಅರಿಬೇಕು.ಅವರ ನಿಲುವುಗಳನ್ನು ನಮ್ಮ ಜೀವನದಾಗ ಆಳವಡಿಸಿಕೊಳ್ಳಬೇಕು. ಮೈಕ್ ನಲ್ಲಿ ಜೋರಾಗಿ ಭಾಷಣ ಮಾಡ್ತ ಅವರು ನಮ್ಮ ಜಾತಿಗಿ ಹಂಗ ಮಾಡಿದ್ರು ಹಿಂಗ್ ಮಾಡುದ್ರೂ ಅಂತ ಅರಚಾಡುವದು ಬಿಟ್ಟು ಈಗ ಅವರು ಹಾಕಿದ ಮಾರ್ಗದರ್ಶನ ದಾಗ ನಾವು ಹ್ಯಾಂಗ್ ಬದುಕಬೇಕು ಅನ್ನೊದು ತಿಳಕೋಬೇಕು.ಅದು ನಮ್ಮ ಜೀವನದಾಗ ಅಳವಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ವಚನಗಳ ಸಾರ , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು ತಿಳಿಸುವ ಪ್ರಯತ್ನಕ್ಕೆ ಶಿಕ್ಷಕರು ಹೆಚ್ಚಿನ ಮಹತ್ವ ಕೊಡಬೇಕು. ಬಸವಣ್ಣ ಲಿಂಗಾಯತರಿಗೆ ಮಾತ್ರ ಸೀಮಿತ , ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಎಂಬ ಸಿದ್ದಾಂತ ಕ್ಕೆ ಯುವಜನ ಒಳಪಡುತಿರೋದು ಶೋಚನೀಯ. ಇನ್ನೂ ಒಂದು ಮುಖ್ಯ ವಿಷಯ. ದಲಿತರು ಬಸವಣ್ಣ ನನ್ನು ಒಪ್ಪಿಕೊಂಡಷ್ಟು ದಲಿತೇತರು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿದ್ದೆವಾ..! ದಲಿತರು ಅಂಬೇಡ್ಕರ್ ಭಾವ ಚಿತ್ರದ ಜೊತೆ ಬಸವಣ್ಣ ಬುದ್ಧನ ಭಾವಚಿತ್ರ ಗಳಿಗೆ ಪೂಜಿಸೋದು ನೋಡಿದ್ದೆವೆ.ಎಷ್ಟು ಜನ ದಲಿತೇತರು ಲಿಂಗಾಯತರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜಿಸ್ತೆವೆ..!ಪೂಜೆ ಅನ್ನೊದು ಒಂದು ಆಚರಣೆ ಅಷ್ಟೆ. ಗೌರವದಿಂದ ಒಪ್ಪಿಕೊಳ್ಳುವದು ಮುಖ್ಯ. ಶರಣರ ತತ್ವ ಗಳು , ಅಂಬೇಡ್ಕರ್  ರ ಆಶಯಗಳು ಎಂದಿಗೂ ಪ್ರಸ್ತುತ. ಬಸವೇಶ್ವರ ಅಂಬೇಡ್ಕರ್ ಇನ್ನೂ ಅನೇಕ ಮಹಾನಾಯಕರು ಮನುಕುಲದ ಉದ್ದಾರಕ್ಕಾಗಿ ಜೀವ ತೇದವರು.ಅವರೂ ಮನುಷ್ಯರೆ.ಅವ್ರಲ್ಲೂ ಪರಿಪೂರ್ಣ ತೆ ಹುಡುಕುವ ಕೆಲಸ ನಾವು ಮಾಡಬಾರದು.ಆದ್ರ ಅವರ ಮಾರ್ಗದರ್ಶನ ನಮ್ಮ ಜೀವನ ಮಟ್ಟ ಎಷ್ಟು ಬದಲಾಯಿಸ್ತದ ಅನ್ನುವದು ಅವರ ದಾರಿಯಲ್ಲಿ ಸಾಗಿದಾಗ ಮಾತ್ರ ತಿಳಿತದ. ಶರಣರ ಮಹಾನಾಯಕರ ಜಯಂತಿ ಗಳು ಸರ್ಕಾರಿ ಕಚೇರಿಗಳಲ್ಲಿ ಕಾಟಾಚಾರಕ್ಕಾಗಿ ಆಚರಿಸುವದನ್ನು ನೋಡ್ತೆವೆ.ಒಂದು ಪೋಟೋ ಇಟ್ಟು ಹೂವಿನ ಸರ ಹಾಕಿ ತೆಂಗಿನ ಕಾಯಿ ಒಡೆದು ಇಟ್ರ ಜಯಂತಿ ಮುಗಿತು.ಕಚೇರಿ ಮುಚ್ಚಿ ಮನಿಗಿ ಹೋದ್ರ ಆಯ್ತು . ಇನ್ನೂ ಡಿ ಜೆ ಹಚ್ಚಿ ಕುಣಿಯುವವರು ಪಟಾಕಿ ಹಚ್ಚೊರು ,  ಉರಾಗೆಲ್ಲ ಮೆರವಣಿಗಿ ಮಾಡೊರ ಹಾವಳಿ ಶುರು ಆಗತದ. ಇದರಿಂದ ನಮ್ಮ ಮುಂದಿನ ಪೀಳಿಗೆ ಏನು ಕಲಿತಾರ..! ನಮ್ಮ ನಮ್ಮ ಜಾತಿ ಅಥವಾ ಜನ ಬೆಂಬಲ ತೊರಿಸಬೇಕಾದ್ರ ಅದ್ದೂರಿ ಜಯಂತಿಗಳು ಆಚರಿಸಬೇಕು.ಅಂತ.ಇದರಿಂದಾಗುವ ಉಪಯೋಗ ಅನುಪಯೋಗ ಯಾರಿಗೂ ಬೇಕಾಗಿಲ್ಲ.ವಚನ ಸಾಹಿತ್ಯ ವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶರಣರ ಸಮಬಾಳು ಸಮಪಾಲು ಆಶಯಗಳು , ಕಾಯಕದ ಮಹಿಮೆ , ಬಹುತ್ವ ಆಚರಣೆಗಳನ್ನು ಗೌರವಿಸುವದು , ದಯೆ ಕರುಣೆಗಳ ಸಾರ , ಎಲ್ಲರನ್ನೂ ಒಳಗೊಂಡ ಸರ್ವಜನಾಂಗಗಳ ಸಾಮರಸ್ಯ..ಇವೆಲ್ಲವೂ ಬರಿ ಬಸವಣ್ಣಗ ಅಂಬೇಡ್ಕರ್ ಅವರಿಗೆ ಮೆರೆಸಿದರಾಗಲಿ , ವಚನ ಸಾಹಿತ್ಯ ತಲೆ ಮೇಲೆ ಹೊತ್ತು ತಿರುಗಿದರಾಗಲಿ ಸಿಗಬಹುದೇ..! ಇಲ್ಲ. ಆದರೂ ಮೆರವಣಿಗೆಯಂತ ಆಚರಣೆಗಳು ಅದ್ದೂರಿಯಾಗಿ ಯಾಕ ಜರುಗತಾವ.ಉತ್ತರ ಒಂದೇ , ಬರಿ ಪ್ರತಿಷ್ಟೆಗಾಗಿ ಮಾತ್ರ.ಪ್ರತಿಷ್ಟೆ ನಮಗ ವಿಕಾಸದ ದಾರಿಗೆ ಒಯ್ಯುವದಿಲ್ಲ.ಅಧಪತನದೆಡೆ ಒಯ್ಯುತ್ತದೆ.ಜಯಂತಿಯ ಆಚರಣೆಗಳು ಬರಿ ಪ್ರತಿಷ್ಟೆಗಳಾಗದೆ ಸರ್ವಜನರ ಮಾನಸಿಕ ವಿಕಾಸಕ್ಕಾಗಿ ಆಚರಿಸಲ್ಪಡಬೇಕು. ಜ್ಯೋತಿ , ಡಿ .ಬೊಮ್ಮಾ. ಜ್ಯೋತಿ ಡಿ ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು,ಎರಡು ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರತಿ ತಿಂಗಳೂ ಸಂಗಾತಿ ಪತ್ರಿಕೆಗಾಗಿ ದೇಸಿನುಡಿಗಟ್ಟಿನಲ್ಲಿ ವಿಶೇಷವಾದ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ

Read Post »

ಇತರೆ

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ

ಮಹಿಳಾ ಸಂಗಾತಿ ಮೇಘ ರಾಮದಾಸ್ ಜಿ “ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಭಾರತ ಸಂವಿಧಾನದ 73 ನೇ ತಿದ್ದುಪಡಿ ಬಹಳ ಮಹತ್ವವಾದದ್ದು. ಅಧಿಕಾರ ವಿಕೇಂದ್ರೀಕರಣದ ಮುನ್ನುಡಿಯಾಗಿದೆ. ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಜನನ ಆಗಿದ್ದು ಇದರಿಂದಲೇ. ಅಭಿವೃದ್ಧಿ ಎಂದಿಗೂ ಒಕ್ಕೂಟ ಸರ್ಕಾರ ಅಥವಾ ರಾಜ್ಯ ಸರ್ಕಾರದ ದೃಷ್ಟಿಯಲ್ಲಿ ಕೇಂದ್ರೀಕೃತವಾಗಿರಬಾರದು, ಬದಲಿಗೆ ತಳಮಟ್ಟದಿಂದ ಅಂದರೆ ಗ್ರಾಮಗಳಿಂದ ಅಭಿವೃದ್ಧಿಯ ಪರಿಕಲ್ಪನೆ ರಚನೆಯಾಗಬೇಕು ಎನ್ನುವುದು ಈ ಅಧಿಕಾರ ವಿಕೇಂದ್ರೀಕರಣದ ಆಶಯವಾಗಿದೆ. ಕೇವಲ ಅಭಿವೃದ್ಧಿಯ ಕಾರಣಕ್ಕೆ ಅಷ್ಟೇ ಅಲ್ಲದೆ, ಗ್ರಾಮ ಮಟ್ಟದಲ್ಲಿ ರಕ್ಷಣಾ ವ್ಯವಸ್ಥೆಗಳಾಗಿಯೂ ಸಹಾ ಈ ಗ್ರಾಮ ಪಂಚಾಯತಿಗಳು ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿಯೇ ರಾಜ್ಯದ 6022 ಗ್ರಾಮ ಪಂಚಾಯತಿಗಳಲ್ಲಿಯೂ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಗಳ ರಚನೆ ಕಡ್ಡಾಯವಾಗಿದೆ. ಈ ಸಮಿತಿಯು ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಯ ಕುರಿತು ಗಮನ ಹರಿಸಬೇಕಿದೆ. ಆದರೆ ವಾಸ್ತವದಲ್ಲಿ ಈ ಸಮಿತಿಗಳು ನಿರೀಕ್ಷಿತ ಮಟ್ಟಕ್ಕೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ನಾಗರಿಕರಾಗಿ ನಮ್ಮ ಕರ್ತವ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಎಂದರೇನು?ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಮಹಿಳೆಯರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು 18 ವರ್ಷದ ಒಳಗಿನ ಮಕ್ಕಳಿಗೆ ಅರಿವು ಮೂಡಿಸುವುದು ಮತ್ತು ರಕ್ಷಣೆ ಒದಗಿಸುವುದು ಈ ಸಮಿತಿಯ ಉದ್ದೇಶವಾಗಿದೆ. ಈ ಸಮಿತಿಯ ಸದಸ್ಯರು ಯಾರ್ಯಾರು? ಅಧ್ಯಕ್ಷರು – ಗ್ರಾಮ ಪಂಚಾಯತಿ ಅಧ್ಯಕ್ಷರು (ಮಹಿಳೆ)ಉಪಾಧ್ಯಕ್ಷರು – ಗ್ರಾಮ ಪಂಚಾಯತಿ ಉಪಾಧ್ಯಕ್ಷರು (ಮಹಿಳೆ)ಸದಸ್ಯರು – ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು (ಒಬ್ಬರು ಮಹಿಳೆ ಕಡ್ಡಾಯ)ಸದಸ್ಯರು – ಗ್ರಾಮ ಪಂಚಾಯತಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖೋಪಾಧ್ಯಾಯರು (ಪುರುಷವಿದ್ದಲ್ಲಿ ಮಹಿಳಾ ಶಿಕ್ಷಕಿಯನ್ನು ಆಯ್ಕೆ ಮಾಡಬೇಕು)ಸದಸ್ಯರು – ಗ್ರಾಮಲೆಕ್ಕಿದರುಸದಸ್ಯರು – ಆಶಾ ಕಾರ್ಯಕರ್ತೆಸದಸ್ಯರು – ಬಿಟ್ ಪೊಲೀಸ್ಸದಸ್ಯರು – ICDS ಮೇಲ್ವಿಚಾರಕಿಸದಸ್ಯರು – ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಪ್ರತಿನಿಧಿಸದಸ್ಯರು – ಅಂಗನವಾಡಿ ಕಾರ್ಯಕರ್ತೆಸದಸ್ಯರು – ಸ್ತ್ರೀಶಕ್ತಿ ಸಂಘದ ಪ್ರತಿನಿಧಿಸದಸ್ಯರು – ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಸದಸ್ಯ ಕಾರ್ಯದರ್ಶಿ – ಪಿಡಿಒ/ಕಾರ್ಯದರ್ಶಿ ಸಮಿತಿಯ ಜವಾಬ್ದಾರಿಗಳು ಈ ಸಮಿತಿಗಳು ಸ್ಥಳೀಯ ಮಟ್ಟದ ಮಹಿಳೆ ಮತ್ತು ಮಕ್ಕಳ ರಕ್ಷಣಾ ಗೋಡೆಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸಮಿತಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಗ್ರಾಮದ ನಾಗರೀಕರಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಮಿತಿಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸಿದಾಗ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯಲ್ಲಿ ದೊಡ್ಡ ಬದಲಾವಣೆ ತರಬಹುದಾಗಿದೆ. ಮೇಘ ರಾಮದಾಸ್ ಜಿಮಕ್ಕಳು ಮತ್ತು ಯುವಜನ ಕಾರ್ಯಕರ್ತರುಗುಳಿಗೇನಹಳ್ಳಿ ಸಿರಾ ತುಮಕೂರು7760908097

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ Read Post »

ಕಾವ್ಯಯಾನ

ರೇಖಾಪ್ರಕಾಶ್ ಅವರ ಕವಿತೆ “ಹೆಣ್ಣಿನ ಅಂತರಂಗ”

ಕಾವ್ಯ ಸಂಗಾತಿ ರೇಖಾಪ್ರಕಾಶ್ “ಹೆಣ್ಣಿನ ಅಂತರಂಗ” ಉಮ್ಮಳಿಸಿ ಬರುವ ದುಃಖಕ್ಕೆ,ಎದೆಗಪ್ಪಿಕೊಂಡು ಸಾಂತ್ವನ ಹೇಳುವವರಿಲ್ಲ ಇಲ್ಲಿ,ಅವಕಾಶ ಸಿಕ್ಕಿತೆಂದು ಬಿಗಿದಪ್ಪಲು ಬರುವವರೆ ಎಲ್ಲ ಮನದ ನೋವಿಗೆ ಮುಲಾಮು ಸವರುವವರಿಲ್ಲ ಇಲ್ಲಿಮದ್ದರೆಯುವ ನೆಪದಲ್ಲಿಮನವ ಕಲಕಿ ರಾಡಿ ಎಬ್ಬಿಸಿದವರೇ ಹೆಚ್ಚು ಮುರಿದ ಮನಸ್ಸುಗಳಮರು ಜೋಡಿಸುವವರಿಲ್ಲ ಇಲ್ಲಿಜೋಡಿಸುವ ನೆಪದಲ್ಲಿ ಸೂಜಿಯಿಂದ ಚುಚ್ಚಿ ನೋಯಿಸಿದವರೇ ಹೆಚ್ಚು ನಿಜ! ನಿನ್ನೊಲವಲ್ಲಿ ನಾ ಬಂಧಿಯಾಗಲಿಲ್ಲಉಸಿರುಗಟ್ಟುವಂತೆ ಬಿಗಿದಪ್ಪಿದ ಆ….ಆಲಿಂಗನವ ಒಲವೆಂದೊಪ್ಪಲಿ ಹೇಗೆ? ಹೆಣ್ಣಿನ ಅಂತರಾಳವನ್ನರಿಯದವನುಆತ್ಮಸಖನೇಗಾಗುವನು? ಎದೆಯೊಳಗೆ ನಡೆಯುವತುಮುಲಗಳೊಂದಿಗೆಸ್ಪರ್ದಿಸಲಾಗದೆಒಳಗೊಳಗೇ ನೊಂದು, ಬೆಂದು, ಕುದ್ದು, ಆವಿಯಾಗಿಹಿಂಗಿದ ಕಂಬನಿಯ ಗೆರೆಗಳು ಮುಖದಲ್ಲಿ ಮೂಡಿಸಿದ್ದು ಪ್ರೇತಕಳೆಹಾ!…. ಕಣ್ಣಿಂದ ಸುರಿದದ್ದು ಬರೀ ಕಂಬನಿಯಲ್ಲನೋವಿನ, ಅಸಹಾಯಕತೆಯರಕ್ತ ಕಣ್ಣೀರು ಸ್ವಾರ್ಥವೇ ತುಂಬಿರುವ ಈ ಜಗದೊಳಗೆನಿಸ್ವಾರ್ಥ ಪ್ರೀತಿಯ ನೀರೀಕ್ಷಿಸಿದಮೂರ್ಖಳು ನಾನುಮೂರ್ಖರ ದಿನದಂದು ಶುಭಾಶಯ ಕೋರಿಬಿಡಿ ಎನಗೊಂದು. ರೇಖಾಪ್ರಕಾಶ್

ರೇಖಾಪ್ರಕಾಶ್ ಅವರ ಕವಿತೆ “ಹೆಣ್ಣಿನ ಅಂತರಂಗ” Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ”

ಕಾವ್ಯಸಂಗಾತಿ ಲಲಿತಾ ಪ್ರಭು ಅಂಗಡಿ ಮುಂಬೈ “ಎಂದೊಹಾಡಿದ ಭಾವಕೆ” ಎಂದೊ ಹಾಡಿದ ಭಾವಕೆಇಂದು ತಾಳತೀಡಿಮಧುರ ನೆನಪು ಕಾಡಿದೆ ಹೃದಯ ತಂತಿ ಮೀಟಿದೆಸ್ವರ ಭಾವನೆಗಳಿಗೆಆಲಾಪ ಹಚ್ಚಿ ಗುನುಗುತಿದೆ ಕಟ್ಟಿ ಹಾಕಿದ ಬಿಗಿಗಂಟುಸಡಿಲಿಸಿ ಸನಿಹ ಬಂದುಸರಿಗಮಪದ ಸವಿಜೇನಿಂದ  ಸನಿದಪ ಹೇಳುತಿದೆಭಾವನೆಗಳಿಗೆ ಬಣ್ಣ ಹಚ್ಚಿ ಹಾಡಬಯಸಿದೆ ರೆಕ್ಕೆ ಬಿಚ್ಚಿ ಹಾರಾಡಬಯಸಿದನೆನಪಿನ ದೋಣಿಯ ಆ ಹಾಡುಕಾಡಿ ಕಾಡಿ ಕುಣಿಯುತಿದೆಗೆಜ್ಜೆಯ ಗುಂಗಿಗೆತಾಳ ಹಾಕಿ ತಕದಿಮಿ ಹೇಳುತಿದೆಹಾಡಿ ಆಲಾಡಿತೇಲಾಡಬಯಸಿದೆ ಕೊಚ್ಚಿ ಹೋಗುವ ಆಸೆಗಳಿಗೆಆಸರೆಯಾಗಿ  ಕೈಹಿಡಿದುದಿಕ್ಸೂಚಿಯಂತೆ ಬಾಳ ಬಳ್ಳಿಬೆಳಗುವ ಉತ್ಸಾಹಕೆಮತ್ತೆ ಚಿಗುರಿ ಚೈತ್ರಗೀತೆ ಹಾಡಿದೆ ಒಣಗಿದರೂ ಕೊಸರಿ ಉಸುರಿಸುವಜೀವನೋತ್ಸಹಕೆ ಪಲ್ಲವಿ ಬರೆದುಕತೆಯ ಬದುಕಿಗೆಸುಂಗಧ ತೀಡಿಕಾವ್ಯ ಲಹರಿಯಾಗಿಹಾಡಾಗಿ ಒಡಮೂಡಿದೆ. ಲಲಿತಾ ಪ್ರಭು ಅಂಗಡಿ.

ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ನ್ಯಾಯದ ಕೂಗು”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನ್ಯಾಯದ ಕೂಗು“ ಬಡಿಯೋಣ ನ್ಯಾಯದ ಕದಮೌನದ ಗೋಡೆ ಕುಸಿಯುವ ತನಕಮುಖವಾಡ ಧರಿಸಿದ ದ್ವಂದ್ವ ನೀತಿಗಳನಿಜಮುಖ ಬೆಳಕಿಗೆ ಬರುವ ತನಕ,! ಎಚ್ಚೆದ್ದು ಕೊಳ್ಳೋಣ….ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿಕಪಟದ ನೆರಳಲ್ಲಿ ಬೆಳೆದಶಾಂತಿ ಕದಿಯುವ ನೆರಳನ್ನು ಓಡಿಸಿ,! ಹೋರಾಡೋಣ….ಸುಳ್ಳಿನ ಬೀಜ ಬಿತ್ತುವ ಕಣಿವೆಗಳಲ್ಲಿದ್ವೇಷದ ಬೆಳೆ ಬೆಳೆಸುವನೀಚ ಶಕ್ತಿಗಳ ವಿರುದ್ಧ ಸಟೆದು ನಿಂತು,! ಧ್ವನಿಯಾಗೋಣ….ನಿಶ್ಯಬ್ದದ ಕಣ್ಣೀರು ಕೇಳುವ ಧ್ವನಿನ್ಯಾಯ ನೀತಿಯ ಹಾದಿಯಲಿ ನಡೆಯುವಶೋಷಿತ ಜನರ ನಂಬಿಕೆಯ ಪರವಿದ್ದು,! ಚಿಂತಿಸಿ ಬಾಳೋಣ…ಸತ್ಯದ ದೀಪ ಹಚ್ಚಿ ಹೆಜ್ಜೆ ಹಾಕಿಮೋಸದ ಜಾಲ ಹರಡುವ ಕೈಗಳನ್ನುಜ್ಞಾನದ ಬೆಳಕಿನಲ್ಲಿ ಕರಗಿಸಿ‌ ಬಿಡಲು.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ನ್ಯಾಯದ ಕೂಗು” Read Post »

ಕಾವ್ಯಯಾನ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಅವಳ ಮಡಿಲಲಿ ಮಲಗಿ ನೋವುಗಳ ಮರೆಯುವ ಹಂಬಲಅವಳ ಕಂಗಳಲಿ ನಕ್ಷತ್ರವಾಗಿ  ಹೊಳೆಯುವ ಹಂಬಲ ಮನದಲಿ ಅಡಗಿವೆ  ಹೇಳಲಾಗದ ನೂರು ಮಾತುಗಳುಅವಳ ಭಾವನೆಗಳಿಗೆ ರಾಗವಾಗಿ ಬೆರೆಯುವ ಹಂಬಲ ತಿಳಿ ಕೊಳಕೆ ಕಲ್ಲೆಸೆಯುವ ಜನಗಳೇ ಬಹಳ ಜಗದಲಿಅವಳ ಎದೆ ಕಡಲ ಅಲೆಗಳ ತಳಮಳ ಅರಿಯುವ ಹಂಬಲ  ಮದಿರೆ ತುಂಬಿದ  ಬಣ್ಣದ ಹೂಜಿಗಳು ಕರೆಯುತಿವೆ ಇಂದುಅವಳ  ಒಲವ ಕೈಯ ಅಮೃತ ತುತ್ತು ಪಡೆಯುವ ಹಂಬಲ ಮುಖವಾಡ ಧಾರಿಗಳ ಮಧ್ಯೆ  ಬಾಳು ಸಾಗಿದೆ ನೋಡುಅವಳ ಬದುಕಲಿ ಶಾಂತ ಪ್ರಭೆಯಾಗಿ ಉಳಿಯುವ ಹಂಬಲ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಇತರೆ

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ “ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ತಮ್ಮ ತಮ್ಮ ಸಾಮ್ರಾಜ್ಯದ ಎಲ್ಲೆಯನ್ನು ವಿಸ್ತರಿಸುವ ಸಲುವಾಗಿ ಯುದ್ಧ ಸಾರುತ್ತ “ಗೆಲುವು ನನ್ನದು ಸೋಲು ಅವನದು ” ಎಂದು ಬೀಗುತ್ತಿದ್ದ ಮಾನವ ಇಂದು ಗಗನ ಸಾಗರಗಳ ಒಡೆತನಕ್ಕಾಗಿ ಸಮರಕ್ಕಿಳಿದಿದ್ದಾನೆ. ಪ್ರಕೃತಿ ಮೊಗೆ ಮೊಗೆದು ಕೊಡುತ್ತಿರುವ ಗಾಳಿ ನೀರು , ಬೆಳಕು,ಪಚ್ಚೆ-ಪೈರುಗಳನ್ನು ಬಳಸಿ, ಉಳಿಸಿ ಹೋಗಬೇಕು ಎನ್ನುವ ಪ್ರಜ್ಞೆ ಇಲ್ಲದೆ ಕಡಲು ಸಾಗರಗಳ ಒಡೆತನಕ್ಕಾಗಿ ರಾಕ್ಷಸೀಯ ಪ್ರವೃತ್ತಿ ಮೆರೆಯುತ್ತಿದ್ದಾನೆ. ಜಗವಷ್ಟೇ ಅಲ್ಲ, ದಿಗ್ದೇವತೆಗಳು ಕೂಡಾ ಬೆರಗಿನಿಂದ ನೋಡುವಂತಹ ಕಾರ್ಯಗಳು ಮನುಜರಿಂದ ನಡೆಯುತ್ತಲೇ ಇವೆ. ಮುದ್ದು ಮಕ್ಕಳ ಮಾರಣ ಹೋಮ, ಸೈನಿಕರ ಪ್ರಾಣ ಹರಣ, ಅನಾಥ ಜೀವಗಳ ಆಕ್ರಂದನ…. ಉಹುಂ…. ಗೆಲುವಿನ ಬೆನ್ನೇರುವ ಹಠದಲ್ಲಿ ಕುರುಡಾಗಿವೆ ಕಣ್ಣುಗಳು.. ಮರುಭೂಮಿಯಾಗಿದೆ ಮನಸುಗಳು…ಬಾಂಬ್ ಮಿಸ್ಯೈಲು ಗಳ ಹೊಗೆ ಬಾನಂಗಳ ತುಂಬುತ್ತಿದೆ. ಗಗನ ಮುನಿದರೆ ಭುವಿಗೆ ಉಳಿಗಾಲವುಂಟೇ? ಕಣ್ಣಿಗೆ ಕಾಣದ ಸ್ವಂತ ಅಸ್ತಿತ್ವವೇ ಇಲ್ಲದ ವೈರಸ್ ಕಳಿಸಿದ ಪಾಠವನ್ನು ನಾವು ಎಷ್ಟು ಬೇಗ ಮರೆತೆವು!! ಮೊಸಳೆಯಂತೆ ಬಾಯಿ ತೆರೆದು ಕಡಲ ದಡದಲ್ಲಿ ಆನಂದಿಸುತ್ತಿದ್ದ ಜನರನ್ನು ನುಂಗಿ ಮತ್ತೆ ಹೊರಗೆಸೆದ ಜಲ ಪ್ರಳಯಗಳ ಭೀಕರತೆ, ಬದುಕಿನ ನಶ್ವರತೆ ಎಲ್ಲವೂ ಈಗ   ಮತ್ತೆ ಅಸ್ಪಷ್ಟವಾಗುತ್ತಾ ಸಾಗಿದೆ. ಭೂಮಿಯ ಒಡಲು ಮುನಿದು ಮನುಷ್ಯನ ಅಸ್ತಿತ್ವವನ್ನೇ ನಡುಗಿಸಿದ , ನಂಬಿಕೆಯನ್ನೇ ಬುಡಮೇಲು ಮಾಡಿದ ಉದಾಹರಣೆಗಳೂ ಮನುಷ್ಯನಿಗೆ ತನ್ನಷ್ಟಕ್ಕೆ ತಾನು ಬದುಕಬೇಕು ಎನ್ನುವ ನೀತಿ ಕಲಿಸಿಲ್ಲ. ಕೇವಲ ದಾಹ!! ಭೂತಳವನ್ನು ಬಗೆದು ನಿಧಿ ಶೋಧ, ಗಣಿಗಾರಿಕೆ, ಅಭಿವೃದ್ಧಿ ಕಾರ್ಯಗಳು… ನೀರಿನ ಮೂಲಗಳನ್ನು ಬರಿದು ಮಾಡುವ, ಮಲಿನಗೊಳಿಸುವ ಕೆಲಸಗಳು,ಕಾರ್ಖಾನೆಗಳ ಮಿತಿ ಮೀರಿದ ಹೊಗೆ, ಸಿಡಿಮದ್ದು,ಬಾಂಬ್ ಇತ್ಯಾದಿಗಳಿಂದ ಆಗಸದೆತ್ತರಕ್ಕೆ ಹೊಗೆ ಚಿಮ್ಮಿಸಿ ಇಡೀ ವಾತಾವರಣ ಕೆಡಿಸುವ, ವಿಜಯ ಸಾಧಿಸುವ, ಇಂಧನ ಮೂಲಗಳಿಗೆಲ್ಲ ಬೆಂಕಿ ಹಾಕಿ ಆ ಹೊಗೆಯಲ್ಲಿಯೇ ಕೇಕೆ ಹಾಕಿ ಬೀಗುವ ಕಾರ್ಯಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪನ್ಮೂಲಗಳು ಜಗತ್ತಿನ ಸಕಲ ನಾಗರಿಕ ಚಟುವಟಿಕೆಗಳಿಗೆ ಮೂಲ ಆಧಾರ. ಅವುಗಳನ್ನು ಕಾಪಿಟ್ಟುಕೊಂಡರೆ ಕೊಡು ಕೊಳ್ಳುವಿಕೆಯ ಮೂಲಕ ಜನರು ಬಳಸಿಕೊಳ್ಳಬಹುದು. ಸುಟ್ಟು ಸಾಧಿಸುವುದೇನು?? ಭಾರೀ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸುವುದು ನಂತರ ಕೆಡಹು ವುದು   ಭೂತಾಯಿಯ ಸಹನೆಯನ್ನು ಪರೀಕ್ಷೆ ಮಾಡುವುದು. ಭೂಮಿ ಸಹನಾಮಯಿ, ಹೌದು. ಆದರೆ ಸಹನೆಗೂ ಮಿತಿ ಇದೆ. ಭೂಮಾತೆ ನಮ್ಮನ್ನೆಲ್ಲ ಕ್ಷಮಿಸುವಷ್ಟು ಕಾಲ ಭೂಮಿಯ ಮೇಲ್ಪದರ ಚೆನ್ನಾಗಿಯೇ ಕಾಣುತ್ತದೆ. “ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೊ ಕಲಾವಿದ” ಎನ್ನುವ ಚೆನ್ನವೀರ ಕಣವಿಯವರ ಹಾಡಿನ ಸಾಲಿನಂತೆ ಭೂಮಿಯ ಅಂತರಾಳದಲ್ಲಿನ ಒತ್ತಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನಾವು ಯಾರೂ ಅರಿಯೆವು. ಗಾಳಿಯಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಪದಾರ್ಥಗಳಿಂದ ಈಗಾಗಲೇ ಮನುಷ್ಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅದಕ್ಕೆ ಮತ್ತಷ್ಟು ವಿಷ ಅನಿಲಗಳು ಸೇರಿಕೊಳ್ಳುತ್ತಲೇ ಇವೆ. ವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚರಿಕೆ ಕೊಡುತ್ತಲೇ ಇದ್ದಾರೆ. ವಾಹನದ ಹೊಗೆ, ಕಾರ್ಖಾನೆ ವಿದ್ಯುತ್ ಸ್ಥಾವರಗಳ  ಹೊಗೆ, ಕಲ್ಲಿದ್ದಲು ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸುವುದರಿಂದ ಬಿಡುಗಡೆಯಾಗುವ ಧೂಳು, ( ಏರೋಸಾಲ್ ) ಪ್ಲಾಸ್ಟಿಕ್, ಕಸ, ಕೃಷಿ ತ್ಯಾಜ್ಯಗಳನ್ನು ಸುಡುವ ಸಂದರ್ಭ ಉಂಟಾಗುವ ಹೊಗೆ, ಕಾಡ್ಗಿಚ್ಚಿನ ಹೊಗೆ, ರೆಫ್ರಿಜರೇಟರ್ ಮತ್ತು ಏರ್ ಕಂಡೀಷನರ್ ಗಳಿಂದ ಹೊರಹೊಮ್ಮುವ ಕ್ಲೋರೋಫ್ಲೋರೋ  ಕಾರ್ಬನ್ ಗಳು ಇವೆಲ್ಲವುಗಳಿಂದ ಮಲಿನಗೊಂಡ ಗಾಳಿ -ಗಗನಕ್ಕೆ ಯುದ್ಧ ಎನ್ನುವ ಸ್ವಯಂಕೃತ ಅಪರಾಧಗಳಿಂದ ಮನುಷ್ಯ ಮತ್ತಷ್ಟು  ವಿಷಾನಿಲಗಳನ್ನು ಸೇರ್ಪಡೆಗೊಳಿಸುತ್ತಿದ್ದಾನೆ. ಯುದ್ಧದಿಂದ ಮನುಷ್ಯರು ಎದುರಿಸುತ್ತಿರುವ ಸಮಸ್ಯೆಗಳು, ಇಂಧನ ಸಮಸ್ಯೆಯ ಗೋಳು ದಿನ ನಿತ್ಯದ ವರದಿಯೇ ಆಗಿದೆ. ಭೂಮಿಯ ಮೇಲಿನ ಮನುಷ್ಯನ ಎಲ್ಲ ಚಟುವಟಿಕೆಗಳೂ ಇಂಧನದ ಮೇಲೆ ಅವಲಂಬಿತವಾಗಿದೆ. ಇಂಧನವಿಲ್ಲದ ನಮ್ಮ ಬದುಕಿನ ಪಥ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯುದ್ಧ ತಂದಿತ್ತ ಇಂಧನ ಸಮಸ್ಯೆ ಕಣ್ಮುಂದೆ ಕಾಣುತ್ತಿದೆ.. ನಾವು ಮನುಜರು ಇದರ ಬಗ್ಗೆ ದನಿ ಎತ್ತುತ್ತಿದ್ದೇವೆ. ಪ್ರಕೃತಿಯ ಮೇಲೆ ಎಂಥ ದುಷ್ಪರಿಣಾಮ ಬೀರುತ್ತಿದೆ ಈ ಯುದ್ಧ!! ಮೌನವಾಗಿದೆ ಗಗನ.. ಮೌನವಾಗಿದೆ ಕಡಲು!! ಮಾನವನ ಬದುಕಿಗೆ ಅನಿವಾರ್ಯವಾದ ಕೆಲಸ – ಕಾರ್ಯಗಳಿಂದ ಪರಿಸರ ಮಲಿನ ಗೊಳ್ಳುವುದನ್ನು ತಡೆಯಲು ಕಷ್ಟ ಸಾಧ್ಯ. ಪರ್ಯಾಯ ವ್ಯವಸ್ಥೆಗಳೂ ಇಲ್ಲ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯ ಅಥವಾ ಒಂದು ದೇಶದ ಪ್ರತಿಷ್ಠೆಗಾಗಿ ಇಡೀ ಮನುಕುಲ ನರಳುವ ಸ್ಥಿತಿಗೆ ಬರುವ ಪರಿಸ್ಥಿತಿಯನ್ನು ಇಂದಿನ ಯುದ್ಧ ಸನ್ನಿವೇಶಗಳು ನಿರ್ಮಾಣ ಮಾಡುತ್ತಿವೆ. ಧನದಾಹ, ಹೆಸರು, ಕೀರ್ತಿಯ ಹಂಬಲ, ಅಧಿಕಾರದ ಅಮಲು  ಇವೆಲ್ಲವುಗಳಿಂದ ಪ್ರಕೃತಿಯನ್ನು ಅಲ್ಲಗಳೆವ ಮನುಷ್ಯರನ್ನು ಪಂಚಭೂತಗಳೇ ತಮ್ಮ ತಮ್ಮ ಕ್ರಿಯೆಗಳ ಮೂಲಕ  ” ನಮ್ಮ ಒಡೆತನ ನಿಮ್ಮ ಮುಷ್ಟಿಯಲ್ಲಿಲ್ಲ  ” ಎಂದು ಹೇಳುವ ದಿನಗಳು ದೂರವಿಲ್ಲ. ಚರಾಚರಗಳಲ್ಲಿ ಜೀವ ಅರಳಿಸಿ ನಗುತ್ತಿರುವ ಭೂಮಿಯ ಸಹನಾ ಗುಣವನ್ನು, ತಂಗಾಳಿಯ ಮೂಲಕ ಮುದಗೊಳಿಸುವ ವಾತಾವರಣದ ಹೃದಯವಂತಿಕೆಯನ್ನು, ಸಕಾಲದಲ್ಲಿ ಮೋಡ ಕಟ್ಟಿ ಮಳೆ ಸುರಿಸಿ ಬೆಳೆಯನ್ನು ಹಸಿರಾಗಿಸುವ ಆಗಸದ ಹಿರಿತನವನ್ನು ನಿರ್ಲಕ್ಷಿಸುವ ನಮಗೆ ಮುಂದಿನ ಬವಣೆಯ ದಿನಗಳ ಅರಿವಿಲ್ಲ. ಪ್ರಕೃತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಅನಿವಾರ್ಯ ಸ್ಥಿತಿ ಬರುವ ಮುನ್ನ ಮನುಕುಲ ಜಾಗೃತಗೊಳ್ಳಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?? ಯುದ್ಧದಾಹಿಗಳಿಗೆ ತಿಳಿ ಹೇಳುವವರು ಯಾರು? ಜಯಲಕ್ಷ್ಮಿ ಕೆ,

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ Read Post »

ಪುಸ್ತಕ ಸಂಗಾತಿ

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ

ಪುಸ್ತಕ ಸಂಗಾತಿ ಡಾ. ಸಂಗಮೇಶ ಎಸ್. ಗಣಿ ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಮೌನ ಧ್ಯಾನಗಳ ಫಲ ಮೌನೇಶ್ ರ ‘ಬಿಸಿಲೇ ಬೆಳದಿಂಗಳು’        ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ ‘ಬಿಸಿಲೇ ಬೆಳದಿಂಗಳು’ ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ ಬಾಳಿನಲ್ಲಿ ಬೆಳದಿಂಗಳಾಗುವ ಹಂಬಲವನ್ನು ಪ್ರಕಟಿಸುತ್ತದೆ.       ಬಿಸಿಲೇ ಬೆಳದಿಂಗಳಲ್ಲಿ ಒಟ್ಟು 36 ಕವಿತೆಗಳಿವೆ. ಇಲ್ಲಿ ಪ್ರೀತಿ, ಪ್ರೇಮ, ವಿರಹ, ಸ್ನೇಹ, ಅಪ್ಪ-ಅಮ್ಮ ಮಗಳು,ಮನುಷ್ಯ ಸಂಬಂಧಗಳು, ಮನುಷ್ಯನ ಮುಖವಾಡ, ಮನಸ್ಸಿನ ಸಂಕಟ, ತಲ್ಲಣ, ತಳಮಳ, ಕನಸು ಕನವರಿಕೆ, ಪರಿಸರ,  ನಾಡು ನುಡಿ ಅಭಿಮಾನ, ಯುದ್ಧ, ಬುದ್ಧ,  ಅಂಬೇಡ್ಕರ್, ಸ್ತ್ರೀ ಸಂವೇದನೆ, ಮನಸ್ಸಿನ ವೇದನೆ, ಸಂಕಟ, ಸಂಭ್ರಮ, ಸಂಘರ್ಷ, ಬದುಕು, ಬೆಳಕು ಎಲ್ಲವೂ ಇವರ ಕಾವ್ಯಕ್ಕೆ ವಸ್ತುಗಳಾಗಿ ಒದಗಿ ಬಂದಿವೆ.         ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮುಖ್ಯ ಅವಸ್ಥೆಗಳಲ್ಲಿ ತಾರುಣ್ಯವೂ ಒಂದು ಹೊಸ ಹುರುಪು ಮತ್ತು ಕನಸು, ಕನವರಿಕೆ, ಉನ್ಮಾದ ಉದ್ವೇಗಗಳೆಲ್ಲವೂ ಇರುವ ಈ ಹಂತದಲ್ಲಿ ಜಾಗರೂಕತೆ ಅಗತ್ಯ ಎಂಬುದನ್ನು ಅರಿತ ಕವಿತಾರುಣ್ಯಸಪ್ತಸಾಗರಗಳ ದಾಟಿಮುಗಿಲ ನಕ್ಷತ್ರಗಳ ತರುವವ್ಯರ್ಥ ಕನಸಲ್ಲಅವಕಾಶ ಸಿಕ್ಕರೆಆಕಾಶಕ್ಕೆ ಏಣಿ ಹಾಕುವಸಾರ್ಥಕ ಹೊಂಗನಸು  (ತಾರುಣ್ಯ) ಎಂದು ಹೇಳುತ್ತಲೇ ‘ಅದು ದೇಹ ಸಂಬಂಧಿಯಲ್ಲ ಆತ್ಮ ಮನಸುಗಳ ಬಂಧಿ, ಅಸಾಧ್ಯವ ಸಾಧ್ಯವಾಗಿಸುವ ಭಾವಾಂಬುಧಿ’ ಎನ್ನುತ್ತಾನೆ. ಅವಳಿಲ್ಲದೆ ಅವನಿಲ್ಲ. ಅವನಿಗೆ ಅವಳೇ ಎಲ್ಲ. ಅವಳೆಂದರೆ ಅವನ ಪಾಲಿಗೆ ಕವಿತೆ. ಕವಿತೆ ವ್ಯಾಖ್ಯಾನಕ್ಕೆ ಒಗ್ಗದ್ದು, ಹಾಗೆಯೇ ಅವಳೂ ಸಹ ಅರಿತಷ್ಟು ಆಳ, ಅರಿವಿಗೆ ನಿಲುಕದ ಅವಳು ನಿಗೂಢ. ಮೊದಲಲ್ಲಿ;   ಅವಳೆಂದರೆಎಂದೋ ಬರೆದು ಮುಚ್ಚಿಟ್ಟ ಅನಂತ ನೆನಪುಗಳು ತುಂಬಿದ್ದ ಆತ್ಮಕಥೆಯಂತೆಸನಿಹವಿದ್ದರೂ ಕೈಗೆಟುಕದ ಕೊನೆಯಾಗದ ಖುಷಿಯಂತೆ (ಅವಳೆಂದರೆ)     ಎನ್ನುವ ಕವಿಗೆ ಸನಿಹವಿದ್ದದ್ದೆಲ್ಲ ಸವಿಯಾದುದು, ಸಹ್ಯವಾದುದು. ಆತ್ಮಕಥೆಯಲ್ಲಿ ಎಲ್ಲ ವಿವರಗಳು ಆಪ್ತ, ನಿಚ್ಚಳ. ಅದೇ ರೀತಿಯಲ್ಲಿ ಆರಂಭದಲ್ಲಿ ಅವಳ ಸಾಮೀಪ್ಯ, ಸಖ್ಯ ಹಿತವಾದುದು. ಕ್ರಮೇಣ ಅವಳೆಂದರೆ ಬದುಕಿನ ಮರುಭೂಮಿಯ ಮರೀಚಿಕೆ, ಹಿಂಬಾಲಿಸುವ ನೆರಳು ಎಂಬಂತಾಗುತ್ತದೆ. ಕೊನೆಗೆ; ಅವಳೆಂದರೆಎಷ್ಟು ಬಾರಿ ಓದಿದರೂಅರಿವಿಗೆ ನಿಲುಕದಅರ್ಥವಾಗದ ಕವಿತೆಯಂತೆ (ಅದೇ)   ಎಂಬುದಾಗಿ ಶರಾ ಬರೆಯುವನು. ಆತ್ಮಕಥೆ ಮತ್ತು ಕಾವ್ಯ  ಪರಿಭಾಷೆಗಳಲ್ಲಿ ಪ್ರೇಮದ ಸ್ವರೂಪವನ್ನು ನಿರೂಪಿಸುವುದು ಇಲ್ಲಿ ವಿಶೇಷ. ಬದುಕಿನಲ್ಲಿ ಅವಳ ಇರುವಿಕೆ ಶ್ರಾವಣ ಮಾಸದಂತೆ ಸಂತಸ ಸಂಭ್ರಮವನ್ನು ಹೊತ್ತು ತರುತ್ತದೆ.   ಧನ್ಯನಾದೆ ಮಾನ್ಯನಾದೆ   ಗೆಳತಿ ನಿನ್ನ ಸನಿಹಕೆ    ಇಷ್ಟು ದಿನದ ವಿರಹ ಬೇಗೆ    ಎಲ್ಲ ಮರೆತೆ ಇಂದಿಗೆ (ಮತ್ತೆ ಬಂತು ಶ್ರಾವಣ) ಎನ್ನುವ ಕವಿಗೆ ಅವಳ ಸಾಮೀಪ್ಯದ ಸುಖದೊಳಗೆ ವಿರಹದ ಬೇಗೆಯಲ್ಲ ಆರಿ ತಣ್ಣಗಾಗುತ್ತದೆ. ಅವಳಿಗಾಗಿ ಪಟ್ಟ ಪಾಡು, ವೇದನೆಗಳೆಲ್ಲ ಈಗ ಮಾಯವಾಗಿದೆ. ಹಿಂದಿನದನ್ನೆಲ್ಲ ಮತ್ತೆ ಮರು ನೆನಪಿಸಿಕೊಳ್ಳುವುದು ಬೇಡ ಎಂದು ತಿಳಿದು ;ಕಳೆದ ಕಾಲದ ಮಾತದೇಕೆ ಲೆಕ್ಕವಿಲ್ಲದ ವೇದನಎಲ್ಲ ಮರೆಸಿ ಚಿಗುರಿ ನಿಂತುಮತ್ತೆ ಬಂತು ಶ್ರಾವಣ (ಅದೇ) ಎಂಬುದಾಗಿ ಹೇಳುತ್ತಾ, ಕಳೆದ ಕಾಲದ ನೆನಪುಗಳ ಗೊಡವೆಗೆ ಹೋಗದೆ ನೋವು ನಲಿವುಗಳನ್ನು ಸಮವಾಗಿ ಸ್ವೀಕರಿಸುವ ಸಮತೋಲನ ಭಾವ ಮುಖ್ಯ ಎಂಬುದನ್ನು ಅರುಹುತ್ತಾನೆ.  ನೀನು ಒಲವಿನೂರಿನ ಸಿರಿಯ ತೋರಲುಕೈಹಿಡಿದು ಹೊರಟೆನಾನು ಹಿಂಬಾಲಿಸಿದೆ (ಒಲವಿನ ಹಾದಿ) ಎನ್ನುವ ಕವಿಗೆ ‘ನನ್ನ ಮೌನಕ್ಕೆ ಮಾತಾಗಿ, ಮಾತುಗಳಿಗೆ ದನಿಯಾಗಿ ಸುಂದರ ಹಾಡಾದ ಪರಿ’ ಅನನ್ಯ. ಪ್ರೇಮದ ದಾರಿಯಲ್ಲಿ ನಡೆಯುವುದೇ ಸಿಹಿಯಾದ ಅನುಭೂತಿ. ‘ಒಲವು ನಡೆಸಿದ ಈ ಹಾದಿ ಖಂಡಿತ ಕಹಿಯಲ್ಲ ಹಿತವಾಗಿ ಕಾಡುವ ಇಂಪಾದ ಹಾಡು’ ಎನಿಸುತ್ತದೆ. ಹೀಗೆ ಪ್ರೇಮದ ಪರಿಯನ್ನು ಪರಿಚಯಿಸುವ ಕವಿಗೆ ಅದೊಂದು ಸುಂದರ ಅನುಭೂತಿ. ಕಾವ್ಯದ ಸಾಮಾಜಿಕ ಪ್ರಜ್ಞೆ   ಸಾಮಾಜಿಕ ಸನ್ನಿವೇಶಗಳೊಂದಿಗೆ ಸಂವಹಿಸದ ಸಾಹಿತ್ಯ ಸಾಯುತ್ತದೆ. ಈ ಹಿನ್ನೆಲೆಯಲ್ಲಿ ಕವಿ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾನೆ. ದೇಶಕ್ಕಾಗಿ ದುಡಿಯುವ ಪ್ರಾಮಾಣಿಕ ಸೈನಿಕರ ಅಗತ್ಯತೆಯನ್ನು  ಪ್ರತಿಪಾದಿಸುವುದರ ಜೊತೆಗೆ ‘ಕದನ ಬಯಸುವ ಕೇಡಿಗಳಲ್ಲ ನಾವು ದೇಶದ ಏಳ್ಗೆಗೆ ನಿಷ್ಠೆಯಿಂದ ದುಡಿವ ಶ್ರಮ ಜೀವಿಗಳು’ (ನಾವು) ಎನ್ನುವುದು ವಿಶೇಷ. ಶಾಂತಿ ಕದಡುವ ಕಿಡಿಗೇಡಿಗಳೆಲ್ಲ ನಾವುಬಂಜರೆದೆಗಳ ಮೇಲೆಶಾಂತಿಯ ಹೂ ಗಿಡಗಳ ಬೆಳೆಸುವ ಕುಶಾಗ್ರಮತಿಗಳುಜಗಕೆ ಶಾಂತಿ ಸಾರುವ ಭಾರತೀಯರು ನಾವು (ಅದೇ)     ದೇಶಭಕ್ತಿ,  ಅಭಿಮಾನ, ರಾಷ್ಟ್ರಪ್ರೇಮ ಎನ್ನುವುದು ಬರೀ ಮಾತು ಭಾಷಣಗಳಿಗೆ ಸೀಮಿತವಾಗದೆ ಅದು ಬದುಕಿನ ಭಾಗವಾಗಬೇಕೆಂಬ ಅದಮ್ಯ ಬಯಕೆ ಕವಿಯದು. ಸೈನಿಕರ ತ್ಯಾಗ, ಬಲಿದಾನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಬದಲಾಗಿ ಸಾರ್ಥಕ ಭಾವವಾಗಿ ಜೀವ ಚೈತನ್ಯವಾಗಿ ಮನಸ್ಸಿನಾಳದಲ್ಲಿ ಜೀವಂತವಾಗಿರುತ್ತವೆ . ಹೀಗಾಗಿ ಕವಿವ್ಯರ್ಥವಾಗದು ಬಲಿದಾನ ಸಾರ್ಥಕವು ಪ್ರಾಣಾರ್ಪಣ (ಅಮರ ನಿಮ್ಮ ಜೀವನ)  ಎಂದು ಹೆಮ್ಮೆ,  ಅಭಿಮಾನದಿಂದ ಹೇಳುತ್ತಾನೆ. ಬಂಜರಾದ ಎದೆಗಳಲ್ಲಿ ಶಾಂತಿಯ ಹೂಗಳನ್ನು ಅರಳಿಸುವ ಮಹತ್ವಾಕಾಂಕ್ಷೆ ಪ್ರಕಟಿಸುವ ಕವಿತೆ ಹೃದಯದಲ್ಲಿ ವಿಕೃತಿ ವಿಕಾರ ವಿಲಕ್ಷಣಗಳಿಗೆ ಜಾಗವಿಲ್ಲ. ಯುದ್ಧದ ಭೀತಿಯಲ್ಲಿ ಕರಾಳ ಕತ್ತಲೆಯಲ್ಲಿ ಅಮಾಯಕರ ನೋವು, ನರಳಾಟಕ್ಕೆ ಕೊನೆ ಇರುವುದಿಲ್ಲ. ಇಂತಹ ವಿಷಮ ಗಳಿಗೆಯಲ್ಲಿಯೇ ಕವಿ ಮಾನವೀಯತೆಗಾಗಿ ಹಂಬಲಿಸುವುದು;  ಅಮಾನುಷ ಹಿಂಸೆಗೆ ಸಿಕ್ಕ ಅಮಾಯಕ ಗಾಯಾಳುಗಳ ಕಂಡು ಮರುಗಿದ ಮಮತಾಮಯಿ….ಜೀವ ಕಾರುಣ್ಯದ ಮಡುವು.. (ಆರದ ದೀಪ) ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ನೆನಪಿಸುವ ಕವಿ ಈ ಕರಾಳ ಕತ್ತಲಮಯ ಜಗತ್ತಿಗೆ ಆರದ ದೀಪವಾಗಿ ಒದಗಿ ಬರಬೇಕು ಎಂದು ಆಶಿಸುತ್ತಾನೆ.    ಜಾತಿ ಮತ ಪಂಗಡ ಇವೆಲ್ಲವೂ ಈ ಸಮಾಜಕ್ಕೆ ಅಂಟಿದ ರೋಗಗಳು. ಇವು ಎಂದಿಗೂ ಮನುಷ್ಯ ಬದುಕನ್ನು ನುಂಗಿ ನೀರು ಕುಡಿಯುತ್ತಿವೆ.   ಆಪೋಷಣೆ ಮಾಡುತ್ತಿವೆ. ಇಡೀ ವಿಶ್ವವೇಒಂದು ಗೂಡಾದರೆ ಎಷ್ಟು ಚೆಂದ! ಕೂಡಿ ಬದುಕಿದರೆ ಅದರೊಳಗೆ ಜಗದ ಜನರಲ್ಲ ಭೇದ ವಿರದ ಹಕ್ಕಿಗಳ ಹಾಗೆ ಎಷ್ಟು ಚಂದ! (ಎಷ್ಟು ಚಂದ!) ಎಂಬುದಾಗಿ ಸೌಹಾರ್ದ, ಸಹಬಾಳ್ವೆಗೆ ಹಂಬಲಿಸುವ ಕವಿ ಸಮಾಜ, ದೇಶ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುವುದು ಹೀಗೆ;  ಶೋಷಣೆ ವರ್ಣದ್ವೇಷಗಳ ಪೊರೆ ಕಳಚಿಯುದ್ಧ, ಭಯೋತ್ಪಾದನೆಗಳ ಭಯ ಬಿಡಿಸಿಧರ್ಮಾoಧತೆ, ಕೋಮುದಳ್ಳುರಿಯ ದಹಿಸಿ ಅಸಮಾನತೆಯ ತೆರೆಸರಿಸಿ ಸಮಾನತೆಯ ರೆಕ್ಕೆಗಳ ಚಾಚಿ ಸ್ವೇಚ್ಛೆಯಲಿ ಹಾರಿದರೆ ಸ್ವಚ್ಛoದ ಮುಗಿಲೆತ್ತರ ನಾವೆಲ್ಲ (ಅದೇ)   ಎನ್ನುವುದು ವಿವೇಚನಾರ್ಹ. ಸಮಾಜದ ಅನೇಕ ಸಮಸ್ಯೆಗಳಿಗೆ ಬುದ್ಧ, ಬಸವ, ಪಂಪ, ಗಾಂಧೀಜಿ, ಅಂಬೇಡ್ಕರ್, ಮದ್ದಾಗಿ ಒದಗುತ್ತಾರೆ. ಈ ಬಗ್ಗೆ ಕವಿ ದಮನಿತರಿಗೆ, ದಲಿತರಿಗೆ ದನಿಯ ನೀಡಿದ ದ್ರಷ್ಟಾರಜಾತಿ ಗೋಡೆಯ ಕುಟ್ಟಿ ಕೆಡವಲು ಕರೆಯಕೊಟ್ಟ ದಿಟ್ಟ ಧೀರ  ‘ತುಳಿಯುವವರ ನೆತ್ತಿಯ ಮೇಲೆ ಕಾಲಿಟ್ಟು ಬೆಳೆದೆ ಬಲು ಎತ್ತರ’ (ದಮನಿತರ ನೇಸರ) ಎಂಬುದಾಗಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವನು. ಅಲ್ಲದೆ ಅವರನ್ನು ‘ನೊಂದು ಬೆಂದವರೆದೆಗೆ ಭರವಸೆಯ ಬಿತ್ತಿದ ಮಾನವತೆಯ ಆಗರ..’ ಎಂಬುದಾಗಿ ಬಣ್ಣಿಸುವನು. ದೇವರನ್ನೇ ದೂರುವ ಧೈರ್ಯದಿಂದ ಪ್ರಶ್ನೆ ಮಾಡುವ ಕವಿ ಅವತರಿಸಿ ಬರುವುದಾದರೆ, ಚಳಿಗಾಳಿಗೆ ಮೈಯೊಡ್ಡಿ ದುಡಿಯುವ ಬಡವರ ಗೋಳು ನೋಡಲು ಬಾ ಎಂದು (ಅವತರಿಸಿ ಬಾ) ಕರೆಯುವುದು ಕವಿಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ. ಗಾಂಧೀಜಿ ಅಪಮೌಲ್ಯಕ್ಕೆ ಒಳಗಾಗುತ್ತಿರುವ ಈ ಹೊತ್ತಿನಲ್ಲಿ ಕವಿ ಪ್ರಿಯ ಗಾಂಧಿ!ನೀನು ಹುಟ್ಟಿದ ದಿನ ಮಾತ್ರ ನೆನೆಯುತ್ತೇವೆ ನಿನ್ನ, ತತ್ವಸಾರವನನುಪತ್ರಿಕೆಯ ಲೇಖನಗಳಲಿ ವೇದಿಕೆಯ ಭಾಷಣಗಳಲಿ.. (ಪ್ರಿಯ ಗಾಂಧಿ) ತತ್ವಾನುಷ್ಠಾನದ ಅಗತ್ಯತೆಯನ್ನು ಮನಗಾಣಿಸುತ್ತಾರೆ. ಧರ್ಮ ಒಂದು ಬಗೆಯ ಅಫೀಮು. ಅದು ಎಲ್ಲರನ್ನೂ ಮಂಪರು ಮಾಡುತ್ತಿದೆ. ಧರ್ಮ ಮಾನವ ಒಳಿತಿಗಿರಬೇಕೆ ಹೊರತು ಕೇಡಿಗಲ್ಲ. ನಮಗೆ ಎಂಥ ಮನುಷ್ಯರ ಅಗತ್ಯವಿದೆ ಎಂಬುದನ್ನುಧರ್ಮದ ಅಫೀಮನ್ನು ತಲೆಗೇರಿಸಿಕೊಡುದ್ವೇಷದ ಕಿಡಿ ಉಗುಳುವವ್ಯಗ್ರ ಮನುಷ್ಯರಲ್ಲ ನಮಗೆ ಬೇಕಿರುವುದು…. (ನಮಗೆ ಬೇಕಿರುವುದು) ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನುಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬುದ್ಧನಂಥ ಕರುಣಾಮಯಿಗಳ ಅವಶ್ಯಕತೆ ಇದೆ. ಎಂಬುದನ್ನು ಸಾರಿದ್ದಾನೆ. ಸಾಮರಸ್ಯದ ಬಾಳಿಗೆ ಸಹನೆ, ಸೌಹಾರ್ದತೆ ಅತ್ಯಗತ್ಯ.  ಸಹನೆ, ಸೌಹಾರ್ದತೆಗಳಿಲ್ಲದ ಬರಡು ಹೃದಯದೊಳಗೆ ಹರಿದಾಡಿಹಸಿರು ಚಿಗುರಿ ಜೀವ ತುಂಬಿ ಸಮೃದ್ಧವಾಗಿ ತೊನೆಯಲು ಮನಸ್ಸು ನದಿಯಾಗಬೇಕು (ಮನಸ್ಸು ನದಿಯಾಗಬೇಕು) ತನ್ನೆಲ್ಲಾ ಮಿತಿಗಳನ್ನು ಮೀರಿಕೊಳ್ಳಲು ಮನುಷ್ಯ ನದಿಯಾಗಬೇಕು ಎಂದು ಆಶಿಸುವುದು ಬಹಳ ದೊಡ್ಡ ಮೌಲ್ಯ.  ಕಾವ್ಯದಲ್ಲಿ ಜೀವನ ಜಿಜ್ಞಾಸೆ      ಈ ಜೀವನವೇ ಸೋಜಿಗ ಅರ್ಥಮಾಡಿಕೊಳ್ಳಲು ಹೋದಷ್ಟು ನಿಗೂಢ. ಆದ್ದರಿಂದ ಕವಿಗೂ ಈ ಜಿಜ್ಞಾಸೆ ತೀವ್ರವಾಗಿ ಕಾಡಿದೆ.ಓ ಬದುಕೇ!ಎಷ್ಟೊಂದು ವಿಸ್ಮಯ ನಿನ್ನೊಡಲು ಆಳ ವಿಸ್ತಾರಗಳರಿಯದ ಕಡಲು! (ಓ ಬದುಕೇ! ) ಅನೇಕ ದಾರ್ಶನಿಕರು, ಸಾಧು ಸಂತರು, ಶರಣರು ಎಲ್ಲರೂ ಈ ಬದುಕಿನ ಬಗೆಯನ್ನು ಬೆದಕಿದವರೇ. ಆದರೆ ಅರ್ಥ ಮಾತ್ರ ಸಿಕ್ಕಿಲ್ಲ. ಈ ಬದುಕೇ ಅಚ್ಚರಿಯ ಆಗರ. ಮನುಷ್ಯ ಮುಖವಾಡಗಳನ್ನೇ ಹಾಕಿಕೊಂಡಿರುವುದರ  ಕುರಿತು ಕಳವಳಿಸುವ ಕವಿ, ಅದನ್ನು ಕಾಳಜಿ, ಪ್ರಾಮಾಣಿಕ, ಪರಿಶುದ್ಧ ಹೃದಯದಿಂದ,  ಮಾನವೀಯ ಅಂತಃಕರಣದಿಂದ ಬಾಳಬೇಕೆಂಬ ನಿಲುವನ್ನು ತಾಳುತ್ತಾನೆ. ಕರುಣೆಗಳೆಲ್ಲ ಕಕ್ಕುಲತೆಗಳೆಲ್ಲ ಮುಖವಾಡಗಳ ಗೋಸಂಬಿ ತನಕೆ ಮೋಸ ಹೋಗಿವೆನಿಷ್ಠೆ, ಪ್ರಾಮಾಣಿಕತೆಗಳು ದೆಸೆಗಟ್ಟು ಓಡುತಿವೆ ನಿಜ ಬದುಕಿಗೆಲ್ಲಿ ಬೆಲೆ (ಮುಖವಾಡದ ಬದುಕು) , ನ್ಯಾಯ, ನಿಷ್ಠೆ,  ಪ್ರಾಮಾಣಿಕತೆಗಳಿಂದಲೇ ಈ ಬದುಕಿಗೆ ಬೆಲೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ ಎಂಬುದನ್ನು ಕವಿ ಸ್ಪಷ್ಟಪಡಿಸಿದ್ದಾನೆ. ಈ ಜೀವನ ಅನಿಶ್ಚಿತತೆ,  ಅಸ್ಥಿರತೆಗಳಿಂದ ಕೂಡಿದ್ದು, ಮನುಷ್ಯನನ್ನು ಕಂಗೆಡಿಸುತ್ತದೆ. ಆದರೆ ಧೃತಿಗೆಡದಂತೆ ಬಾಳಲು ಎಚ್ಚರಿಸುವ ಕವಿ ‘ಸೋತಷ್ಟು ಸತಾಯಿಸುವ ಬದುಕಿದು ಅತ್ತಷ್ಟು ಅಳಿಸುವ ಜಗವಿದು ಬೆದರದೆ ಬೆಚ್ಚಗೆ ಕಲ್ಲಾಗಿಸು ಎದೆಯ ತಿಳಿ ಈ ಸಮಯ ಸ್ಥಿರವಲ್ಲವೆಂಬ ನೀತಿಯ’ (ನೀರ ಮೇಲಣ ಗುಳ್ಳೆ) ಸಾರ್ವಕಾಲಿಕ ಸತ್ಯವನ್ನು ನುಡಿಯುತ್ತಾನೆ. ಬದುಕುವ ಛಲ ತುಂಬುತ್ತಾನೆ. ಅಲ್ಲದೆ ಈ ಜಗತ್ತಿನಲ್ಲಿ ವಿಚಿತ್ರ ಜನರು ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ.  ಕಾವ್ಯದಲ್ಲಿ ಸ್ತ್ರೀ ಚೇತನ      ಈ ಸಮಾಜದಲ್ಲಿ ವೇಶ್ಯೆಯರನ್ನು ಕಾಣುವ ದೃಷ್ಟಿಯೇ ಕೀಳಾದುದು. ಮೈಮಾರಿಕೊಂಡು ಬದುಕುವ ಹೆಣ್ಣಿನ ಬಗ್ಗೆ ಮರುಕ ಪಡುವ ಕವಿ ‘ಅವಳು ಬೀದಿಯಲ್ಲರಳಿ ಮಸಣಕೆ ಶೃಂಗಾರವಾದ ಮಸಣದ ಹೂ’ ಎಂಬುದಾಗಿ ಅವಳ ದಯನೀಯ ಸ್ಥಿತಿಯನ್ನು ಅನಾವರಣ ಮಾಡಿದ್ದಾನೆ.     ತಾಯಿಯು ತನ್ನ ಮಗುವನ್ನೇ ಬೆಳದಿಂಗಳು ಎಂದು ಭಾವಿಸುವ ಸಂಕಲನದ ಶೀರ್ಷಿಕೆಯುಳ್ಳ ಕವನ ‘ಬಿಸಿಲೇ ಬೆಳದಿಂಗಳು’ ಕವಿಯ ಸಂವೇದನಾಶೀಲತೆಗೆ ಸಾಕ್ಷಿ. ದುಡಿಮೆ ಮಾಡಿ ಮಗುವನ್ನು ಸಾಕುವ ಸಮಸ್ತ ತಾಯಂದಿರ ಕಷ್ಟ ಪರಂಪರೆಯನ್ನು ಕಣ್ಮುಂದೆ ತಂದು ನಿಲ್ಲಿಸುವ ಕವಿ ;ಸಿಕ್ಕತಂಗಳೆ ಮೃಷ್ಟಾನ್ನಬೀಸೋ ಗಾಳಿಯೇ ಸುವ್ವಾಲಿ ಹಕ್ಕಿಗಳುಲಿಯೇ ಗಿಲಗಿಂಚಿನಾದಬಿಸಿಲೇ ಬೆಳದಿಂಗಳವಗೆ… ( ಬಿಸಿಲೇ ಬೆಳದಿಂಗಳು ) ಪ್ರಕೃತಿಯ ಎಲ್ಲ ವ್ಯವಹಾರಗಳೂ  ಮನುಷ್ಯ ಬದುಕಿನ ಭರವಸೆಯಾಗಿ ಹಾಗೂ ಪ್ರಕೃತಿ ಮಾತೆಯೇ ಪುರುಷನ ಪೋಷಣೆಗೆ ನಿಂತಿರುವುದನ್ನು ತಿಳಿಸುವ ಕವಿ ಪುರುಷ ಮತ್ತು ಪ್ರಕೃತಿ ನಡುವಿನ ನಂಟನ್ನು ತಾಯಿ ಮಗುವಿನ ಸಂಬಂಧದೊಂದಿಗೆ ಸಮೀಕರಿಸಿ ಒಂದು ರೂಪಕದ ಮೂಲಕ ಕಟ್ಟಿಕೊಟ್ಟಿರುವುದು ಗಮನಾರ್ಹ.     ಮೌನ ಮತ್ತು ಧ್ಯಾನಗಳ ಮೂಲಕ ಕವಿತ್ವವನ್ನು ದಕ್ಕಿಸಿಕೊಳ್ಳುತ್ತಿರುವ ಮೌನೇಶ್ ಅವರು ಬಾಳಿನಲ್ಲಿರುವ ಬಿಸಿಲನ್ನೇ ಬೆಳದಿಂಗಳಾಗಿ ಭಾವಿಸುವ ಧನಾತ್ಮಕ ನಿಲುವು ಮತ್ತು ಆಶಯವನ್ನು ಪ್ರಕಟಿಸಿರುವುದು ವಿಶೇಷ. ಅವರಿಗೆ ಶುಭವಾಗಲಿ. ಡಾ. ಸಂಗಮೇಶ ಎಸ್. ಗಣಿಕನ್ನಡ ಪ್ರಾಧ್ಯಾಪಕರು, ಬೆಂಗಳೂರು.ಮೊಬೈಲ್ :9743171324

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ಕೂಡಿಟ್ಟ ದುಃಖವ ಹೊರ ಹಾಕಿದ್ದೇನೆ ನೀ ಕಂಡ ಕ್ಷಣದಲ್ಲಿಹಿಡಿದಿಟ್ಟ ನೋವಿನಿಂದ ಅತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕು ಶೂನ್ಯತೆಯ ಭಾವ ಮರೆಸಿ ಹೊಸತನ ಮೂಡಿಸಿದೆ ಈಗನೀ ಬಿಟ್ಟ ಸವಿ ನೆನಪುಗಳಿಂದ ನಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಎಷ್ಟೋ ಮಾತುಗಳು ಹೇಳದೆ ಮೌನದಲ್ಲಿ ಮರೆಯಾಗಿವೆನೋಡಬಾರದೆಂದಾಗಲೇ ಸಿಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಆಗಸದ ನಕ್ಷತ್ರಕ್ಕೂ ಒಮ್ಮೊಮ್ಮೆ ಕರಿಛಾಯೆ ಬಿಳಬಹುದು ಉಸಿರು ಬಿಗಿ ಹಿಡಿದು ಬದುಕಿ ಸತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕಿನ ರಂಗಮಂದಿರದಲ್ಲಿ ಅವನೇ ಖಳನಾಯಕನಂತಾಗಿಹರೇಖೂ ಬಾಳ ನೌಕೆಯಲಿ ಗೆದ್ದು ಸೋತಿದ್ದೇನೆ ನೀ ಕಂಡ ಕ್ಷಣದಲ್ಲಿ ಡಾ.ರೇಖಾಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

You cannot copy content of this page

Scroll to Top