ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

ವನಜಾ ಮಹಾಲಿಂಗಯ್ಯ “ಪ್ರೀತಿ ವಿವಾಹದ ನೆರಳು”

ಪ್ರೀತಿ ಸಂಗಾತಿ ವನಜಾ ಮಹಾಲಿಂಗಯ್ಯ “ಪ್ರೀತಿ ವಿವಾಹದ ನೆರಳು” ಪ್ರೀತಿ ಅಂದ್ರೆ ಕನಸು. ಮದುವೆ ಅಂದ್ರೆ ವಾಸ್ತವ. ಕನಸು ಕಾಣೋದು ತುಂಬಾ ಸುಂದರ. ಆದ್ರೆ ಆ ಕನಸನ್ನೇ ಮನೆ ಮಾಡ್ಕೊಂಡು ವಾಸ್ತವದ ನೆಲದ ಮೇಲೆ ಕಾಲೂರದೆ ಬದುಕೋಕೆ ಹೊರಟಾಗ, ಬದುಕು ಕಚ್ಚೋಕೆ ಶುರು ಮಾಡುತ್ತೆ. ಅದೇ ಪ್ರೀತಿ ವಿವಾಹದ ನೋವು.ಪ್ರೀತಿ ಮಾಡುವ ದಿನಗಳಲ್ಲಿ ಜಗತ್ತೇ ಬೇರೆ. ಫೋನ್ ಕರೆ, ಮೆಸೇಜ್, ಸಣ್ಣ ನಗು, ಸಣ್ಣ ಕೋಪ, ಎಲ್ಲವೂ ಸಿಹಿ. ಆಗ ನಾವು ಇಬ್ಬರೇ ಜಗತ್ತು. ಬೇರೆ ಯಾರೂ ಬೇಕಿಲ್ಲ ಅನಿಸುತ್ತೆ. ಕುಟುಂಬ, ಸಮಾಜ, ಜಾತಿ, ಹಣ, ಭವಿಷ್ಯ – ಯಾವುದೂ ಕಣ್ಣಿಗೆ ಕಾಣಲ್ಲ. ಕಾಣೋದು ಕೇವಲ ಅವನು ಅಥವಾ ಅವಳು. ಆ ಭಾವನೆಯ ಜೋಶಲ್ಲಿ ಕೈ ಹಿಡಿದು ಮದುವೆ ಮಂಟಪದ ಕಡೆ ನಡೆಯುತ್ತೇವೆ.ಆದ್ರೆ ಮಂಟಪದಿಂದ ಹೊರಗೆ ಬಂದ ಕೂಡಲೇ ಹೊಸ ಜಗತ್ತು ಶುರುವಾಗುತ್ತೆ. ಇಲ್ಲಿಯವರೆಗೆ ಇಬ್ಬರ ಜಗತ್ತಾಗಿದ್ದ ಬದುಕು, ಈಗ ಮನೆ, ಕುಟುಂಬ, ಜವಾಬ್ದಾರಿ, ಬಿಲ್, ಕೆಲಸದ ಒತ್ತಡಗಳಿಂದ ತುಂಬಿರುತ್ತೆ. ಪ್ರೀತಿ ಮಾತಾಡುವಾಗ ಟೈಮೇ ಸಿಗದಷ್ಟು ಕೆಲಸ ಇರುತ್ತೆ. ಮೊನ್ನೆ ಮೊನ್ನೆ “ನೀನೇ ನನ್ನ ಉಸಿರು” ಅಂದವನು, ಇವತ್ತು “Office ಕೆಲಸ ಇದೆ, ಮಾತಾಡೋಕೆ ಆಗಲ್ಲ” ಅಂತಾನೆ. ನಿನ್ನೆ “ನಿನ್ನ ನಗು ಸಾಕು” ಅಂದವಳು, ಇವತ್ತು “ಮನೆ ಬಾಡಿಗೆ ಕಟ್ಟಿದ್ದೀಯಾ?” ಅಂತ ಕೇಳ್ತಾಳೆ. ಆಗ ಮನಸ್ಸು ಮೊದಲೇ ಹೀಗಿರಲಿಲ್ಲವಲ್ಲ ಅಂತ ಕೊರಗುತ್ತೆ. ಪ್ರೀತಿ ಕಡಿಮೆ ಆಗಿಲ್ಲ, ಜವಾಬ್ದಾರಿ ಜಾಸ್ತಿ ಆಗಿದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋ ತಾಳ್ಮೆ ನಮ್ಮಲ್ಲಿ ಇರಲ್ಲ.ಪ್ರೀತಿ ವಿವಾಹದ ದೊಡ್ಡ ನೆರಳು ಕುಟುಂಬ. ಅಜ್ಜ-ಅಜ್ಜಿ ನೋಡಿ ಮಾಡೋ ಮದುವೆಯಲ್ಲಿ ಎರಡು ಮನೆ ಒಂದಾಗುತ್ತೆ. ಪ್ರೀತಿ ವಿವಾಹದಲ್ಲಿ ಕೆಲವೊಮ್ಮೆ ಎರಡು ಮನೆ ಎದುರಿಗೆ ನಿಲ್ಲುತ್ತೆ. “ನಮ್ಮ ಮನೆತನಕ್ಕೆ ತಕ್ಕವಳಲ್ಲ”, “ನಮ್ಮ ಹುಡುಗನಿಗೆ ಯೋಗ್ಯನಲ್ಲ” ಅನ್ನೋ ಮಾತುಗಳು ಚೂರಿ ತರ ಇರುತ್ತೆ. ತಾಯಿ-ತಂದೆಯ ಆಶೀರ್ವಾದ ಇಲ್ಲದ ಮದುವೆ, ಎಷ್ಟು ಸಂತೋಷವಾಗಿದ್ದರೂ ಮನಸ್ಸಿನ ಒಂದು ಮೂಲೆಯಲ್ಲಿ ಸದಾ ಕೊರೆಯುತ್ತಿರುತ್ತೆ. ಹಬ್ಬ, ಹರಿದಿನ, ಮನೆ ಕಾರ್ಯ – ಎಲ್ಲಾ ಕಡೆ “ಅವರ ಮನೆಯವರು ಬರಲಿಲ್ಲ” ಅನ್ನೋ ಕೊರತೆ ಕಾಡುತ್ತೆ. ಆ ನೋವನ್ನ ಹುಡುಗ-ಹುಡುಗಿ ಒಬ್ಬರ ಮೇಲೆ ಒಬ್ಬರು ತೀರಿಸ್ಕೊಳ್ಳೋದು ಶುರು.ಮತ್ತೊಂದು ವಿಷಯ ಹಣ. ಪ್ರೀತಿ ಮಾಡುವಾಗ “ನೀನು ಇದ್ರೆ ಸಾಕು, ಕಾಡಲ್ಲಿ ಆದ್ರೂ ಇರ್ತೀನಿ” ಅಂತೀವಿ. ಆದ್ರೆ ಮದುವೆ ಆದ ಮೇಲೆ ಕಾಡು ಬೇಡ, ಒಂದು ಚಿಕ್ಕ ಮನೆ ಬಾಡಿಗೆ ಕಟ್ಟೋಕೂ ಆಗಲ್ಲ. ಸಾಲ, EMI, ಮೆಡಿಕಲ್ ಖರ್ಚು, ಮಕ್ಕಳ ಶಾಲೆ – ಲೆಕ್ಕಗಳು ಬರೋಕೆ ಶುರುವಾಗುತ್ತವೆ. ದಾರಿದ್ರ್ಯ ಬಾಗಿಲು ತಟ್ಟಿದಾಗ ಪ್ರೀತಿ ಕಿಟಕಿಯಿಂದ ಜಾರಿ ಹೋಗುತ್ತೆ ಅಂತ ಹಿರಿಯರು ಸುಮ್ನೆ ಹೇಳಿಲ್ಲ. ಹಣಕಾಸಿನ ಜಗಳ, ಪ್ರೀತಿಯ ಬುನಾದಿಯನ್ನೇ ಅಲುಗಾಡಿಸಿಬಿಡುತ್ತೆ.ಇದಕ್ಕೆಲ್ಲಾ ಕಾರಣ ನಾವು ಪ್ರೀತಿನೇ ದೇವರು ಅಂತ ಪೂಜೆ ಮಾಡೋದು. ಪ್ರೀತಿ ದೇವರು ಅಲ್ಲ , ಪ್ರೀತಿ ಒಂದು ಭಾವನೆ. ಮದುವೆ ಅಂದ್ರೆ ಆ ಭಾವನೆಯ ಜೊತೆಗೆ ಹೊಂದಾಣಿಕೆ, ತ್ಯಾಗ, ಕ್ಷಮೆ, ಸಂಭಾಷಣೆ ಇವೆಲ್ಲಾ ಬೆರೆಸಿ ಮಾಡೋ ಅಡುಗೆ. ಉಪ್ಪು ಕಡಿಮೆ ಆದ್ರೆ ಊಟ ರುಚಿ ಇರಲ್ಲ. ಹೊಂದಾಣಿಕೆ ಕಡಿಮೆ ಆದ್ರೆ ಸಂಸಾರ ರುಚಿ ಇರಲ್ಲ.ಪ್ರೀತಿ ವಿವಾಹದವರು ಒಂದು ತಪ್ಪು ಮಾಡ್ತಾರೆ. “ನಾನೇ ಆಯ್ಕೆ ಮಾಡಿಕೊಂಡಿದ್ದು, ನನಗೆ ಗೊತ್ತು” ಅನ್ನೋ ಗರ್ವ. ಹಾಗಾಗಿ ಸಣ್ಣ ಜಗಳ ಆದ ಕೂಡಲೇ “ಬೇಡ ಬಿಡು” ಅಂತ ಮಾತು ಬರುತ್ತೆ. ಹೊಂದಾಣಿಕೆ ಮಾಡಿಕೊಳ್ಳೋ ಬದಲು ಬೇರ್ಪಡೋದು ಸುಲಭ ಅನಿಸುತ್ತೆ. Arranged Marriage ನಲ್ಲಿ “ಮಾಡಿದ್ದೇ ಆಯ್ತು, ನಿಭಾಯಿಸೋಣ” ಅನ್ನೋ ಭಾವ ಇರುತ್ತೆ. ಇಲ್ಲಿ ಆ ಭಾವ ಇರಲ್ಲ.ಪ್ರೀತಿ ವಿವಾಹ ತಪ್ಪು ಅಲ್ಲ. ಆದ್ರೆ ಅದು ಮಕ್ಕಳಾಟ ಅಲ್ಲ. ಕಣ್ಣು ಮುಚ್ಚಿ ಆಡೋ ಜೂಜು ಅಲ್ಲ. ಕಣ್ಣು ತೆರೆದು, ಕುಟುಂಬವನ್ನ ಒಪ್ಪಿಸಿ, ಆರ್ಥಿಕವಾಗಿ ಸದೃಢರಾಗಿ, “ನಾನು ಬದಲಾಗ್ತೀನಿ, ನೀನೂ ಬದಲಾಗು” ಅಂತ ಪ್ರಾಮಿಸ್ ಮಾಡ್ಕೊಂಡು ಮಾಡೋ ಒಪ್ಪಂದ. ಇಲ್ಲ ಅಂದ್ರೆ ಆ ಪ್ರೀತಿ ಮದುವೆ ಮಂಟಪದವರೆಗೆ ಮಾತ್ರ. ಆಚೆ ಬದುಕಿನ ಬಿಸಿಲಿಗೆ ಬಾಡಿ ಹೋಗುತ್ತೆ. ಪ್ರೀತಿ ಮಾಡಿ. ಮನಸಾರೆ ಮಾಡಿ. ಆದ್ರೆ ಮದುವೆ ಅಂದ್ರೆ ಕೇವಲ ಪ್ರೀತಿ ಅಲ್ಲ, ಅದು ಬದುಕು ಅನ್ನೋದನ್ನ ಮರೆಯಬೇಡಿ. ಬದುಕನ್ನ ನಿಭಾಯಿಸೋ ಶಕ್ತಿ ಇದ್ರೆ ಮಾತ್ರ ಪ್ರೀತಿಮಾಡಿ ಮದುವೆ ಮಾಡಿಕೊಳ್ಳಿ. ಇಲ್ಲದೆ ಹೋದರೆ ಹಿರಿಯರಿಗೆ ಬಿಡಿ ಅವರು ನಿಮಗೆ ಅನ್ಯಾಯ ಮಾಡಲ್ಲ. ವನಜಾ ಮಹಾಲಿಂಗಯ್ಯ

ವನಜಾ ಮಹಾಲಿಂಗಯ್ಯ “ಪ್ರೀತಿ ವಿವಾಹದ ನೆರಳು” Read Post »

ಕಾವ್ಯಯಾನ

ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ”

ಕಾವ್ಯ ಸಂಗಾತಿ ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ” ಬಾನ ಅಂಗಳದಿ ಮೋಡಗಳ ನರ್ತನ,ಧರೆಗೆ ಇಳಿಯಲು ಸಜ್ಜಾದ ವರುಣಒಣಗಿದ ಭೂಮಿಗೆ ಜೀವ ತುಂಬುವ ಕ್ಷಣ,ಬರಡಾದ ಬದುಕಿಗೆ ತಂದ ಹೊಸ ಕಿರಣ. ಹನಿ ಹನಿಯು ಮುತ್ತಾಗಿ ಮಣ್ಣ ಸೇರಲಿ,ಸಸ್ಯ ಸಂಕುಲವು ಹಸಿರು ಸೀರೆಯ ಉಡಲಿ.ರೈತನ ಕಣ್ಣಲಿ ಕನಸಿನ ಬೆಳೆ ಅರಳಲಿ, ಹಸಿವು ನೀಗಿ ಸಮೃದ್ಧಿ ಬೆಳಗಲಿ. ಗುಡುಗು ಸಿಡಿಲ ಅಬ್ಬರವಲ್ಲದ ಮಳೆ,ನೊಂದ ಜೀವಗಳ ಕಣ್ಣೀರು ಒರೆಸುವ ಮಳೆ.ಸೋತ ಮನಗಳಿಗೆ ಸಾಂತ್ವನದ ಧಾರೆ,ಜೀವಜಗತ್ತಿಗೆ ಹೊಸ ಚೈತನ್ಯದ ಸಾರೇ. ಸುರಿಸು ಮಳೆಯೇ ಕರುಣೆಯ ಹನಿ,ತೊಳೆಯು ಜಗದಕಲ್ಮಶದ ಮನೆ.ಪ್ರೀತಿ ವಿಶ್ವಾಸದ ಹೊಳೆ ಹರಿಯಲಿ ಎಲ್ಲೆಡೆ,ಭರವಸೆಯ ಬೆಳಕಿರಲಿ ಸಾಗುವ  ಹೆಜ್ಜೆಯಲಿ. ಭಾಗ್ಯಶ್ರೀ ಕೋಟಿ ಜಮಖಂಡಿ

ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು” ಕಣ್ಣ ರೆಪ್ಪೆಯ ಮರೆಯಲ್ಲಿ,ಬಚ್ಚಿಟ್ಟ ಆಸೆಗಳ ಮೆರವಣಿಗೆ;ಜಗದ ಕಣ್ಣಿಗೆ ಕಾಣದಂತೆ,ಮೌನವಾಗಿಹ ಪಯಣ. ಸೂರ್ಯ ಸುಟ್ಟರೂ ಸರಿಯೇ,ಚಳಿ ಗಾಳಿ ಬೀಸಲಿ ಬಿಡು;ಮನದ ಮೂಲೆಯ ಗೂಡಿನಲ್ಲಿ,ಬೆಚ್ಚಗಿನ ನನ್ನ ಲೋಕವೊಂದು. ಕಾಲನ ಚಕ್ರ ಉರುಳಿದರೂ,ವಿಧಿಯ ಆಟ ಮುಂದುವರಿದರೂ;ಸಾವಿರ ಜನ ಬಂದು ಹೋದರೂ,ಕದಿಯಲಾರದ ಕನಸುಗಳು. ಬೆಳಕಿನ ಕಿರಣ ಮೂಡುವವರೆಗೆ,ಹಾದಿಯ ಗುರಿ ಮುಟ್ಟುವವರೆಗೆ;ನನ್ನ ಅಂತರಾತ್ಮದ ನಂಬಿಕೆ,ಯಾರು ಅಳಿಸಲು ಸಾಧ್ಯ? ಕನಸುಗಳು ಬಿಕರಿಗಲ್ಲಮಾರುಕಟ್ಟೆಯ ಮೂಟೆಯಲ್ಲಹೊತ್ತು ಹೊತ್ತಿಗೆ ಉಣ್ಣುವ ತುತ್ತಲ್ಲಕನಸುಗಳು ನನ್ನ ಭಾವ ಅಸ್ಮಿತೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು” Read Post »

ಕಾವ್ಯಯಾನ

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” ನಿತ್ಯ ನಿರಂತರ ಕಾಯಕಯೋಗಿ ಅಂಬರದ ನೇಸರ ಪೂರ್ವದ ದಾರಿಯಲಿ ಬೆಳ್ಳಿಯ ಬೆಳಕಚಲ್ಲುತಾ ಮೆಲ್ಲನೆ ಮೆಘಗಳಮಧ್ಯ ನುಸುಳುತಾ ಬರುತಿಹಏಳಿರಯ್ಯ ಎನ್ನ ಬಾಂಧವರೆ ಬರಿಬೆಳಕಲ್ಲವಿದು ಸತ್ಯದರ್ಶನಲೋಕಬೆಳಗುವ ನಿತ್ಯನಿಯಾಮಕಜಗದಕರೆಗೆ ಸದ್ದಿಲ್ಲದ ಬರುವವನಿತ್ಯನಿರಂತರ ಕಾಯಕಯೋಗಿಸಮಯದ ಪರಿಪಾಲಕ ಪರಂಜ್ಯೊತಿ… ಬೆಳಕಬೆಳಗಿಗೆ ಜಗವೇತೂಗುವದುಏರುಪೇರಿಲ್ಲದ ರಾಯಭಾರಿ ತೇಜಸೃಷ್ಟಿಗೆ ಜೀವದಾತ ಮನುಕುಲದ ಮನ್ವಂತರನೀತ ಮೈಮರೆಯದವಕ್ಷಣ ಕ್ಷಣ ಅನುಕ್ಷಣ ಆದರನೀಯ ಚರಾಚರ ಜೀವರಾಶೀಗಳ ಜೀವದಣಿವರಿಯದ ಭೂಮ್ಯಾಕಾಶ ಬೆಳಗುವ ಭಾಸ್ಕರ ಬಾನಲೀಲೆತರುಲತೆಗಳ ಹಸಿರ ಸಿಂಚನಭೂಮಾತೆಯ ಮಡಿಲತುಂಬುವ ಚೇತನ… ನಿಸ್ವಾರ್ಥ ಸೇವೆಯ ನಿತ್ಯನೂತನೀತಸ್ವಾರ್ಥಿ ಮನುಜ ಕಲಿಯಬೇಕಿದೆತಮಸೋಮಾ ಜ್ಯೊತಿರ್ಮಯ…ಸತ್ ಚಿಂತನ ಸತ್ ದರ್ಶನ ಅಡಗಿಹುದು ಬೆಳಕೆಂಬ ದೇವಲೀಲೆಯಲಿ….ಸತ್ಯವೇ ದೇವರು ಸತ್ಯವೇ ಬೆಳಕುಹೇ! ಮನುಜಾ ಬೆಳಕ ದಾರಿಯಲಿನಡೆ,ಬೆಳಕಿನಲಿ ಬೆರೆತು ಬೆಳಕಾಗು…. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” Read Post »

ಕಾವ್ಯಯಾನ

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ನಂಜಿನ ಉಸಿರು” ಕಣ್ಣು ಬಿಟ್ಟ ಕ್ಷಣಗಳೆಲ್ಲಾಮಂಜಿನ ಹನಿಗಳೆಂದುಕೊಂಡಿದ್ದೆ;ನಂಜಿನ ನೂಲುಗಳಾಗಿ ಗೋಚರಿಸುತ್ತಿವೆ.. *** ಅಸಮಾನೆತೆಯ ನೆತ್ತರುಕುಡಿದ ನೆಲ ಕುದಿಯುತ್ತಿದೆ;ತೂಗುವ ತೊಟ್ಟಿಲು ಮಸಣವಾಗುತ್ತಿದೆ. *** ವೈಷಮ್ಯ ಚಿಗುರೊಡೆದುನೆಲ ಕೆಂಪಾಗಿದೆಈಗ ನಂಜೇರಿ ಕಪ್ಪಾಯಿತು *** ನಮ್ಮೊಳಗೆ ಧರ್ಮದ ಅಮಲು ಏರಿದೆಅಸಮಾನತೆಯ ಕಸದಿಂದಒಡಲು ತುಕ್ಕು ಹಿಡಿದಿದೆ *** ನಯವಂಚಕರ ದುನಿಯಾಬದುಕ ಪಾತ್ರೆಯಲ್ಲಿಜಗದ ಐಕ್ಯತೆ ತಳ ಹತ್ತಿದೆ. *** ಎದೆಗೆ ಎದೆ ನೇಯ್ದ ಮಗ್ಗ ನಂಜಾಗಿದೆ;ಇನ್ನೂ, ಜಾತಿ ಜಾತಿಯದೋಂಬಿ ನಡೆಯದೇ ಇರುತ್ತದೆಯೇ *** ಬಿದ್ದ ಬೀಜವೂಮೊಳಕೆಯೊಡೆಯಲುನೆಲ ಉರಿವ ಕೆಂಡವಾಗಿದೆ *** ಕಿಚ್ಚು ಹಚ್ಚಿಕೊಂಡ ಎದೆಗಣ್ಣಿಗೆಬೆಂಕಿ ಮತ್ತು ದೀಪದ ವ್ಯತ್ಯಾಸ ಗೊತ್ತಾಗುವುದೇ ನಾಮದೇವ ಕಾಗದಗಾರ Recipients

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು” Read Post »

ಕಾವ್ಯಯಾನ

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ”

ಕಾವ್ಯ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್‌ “ಬರಹದ ಗುಂಗಿನಲ್ಲಿ” ​ಬರಹದ ಗುಂಗಿನಲ್ಲಿ…​ದಾರಿ ದೀರ್ಘವಾಗಿತ್ತು, ಮೌನ ಜೊತೆಯಾಗಿತ್ತುಮನದ ಅಂಗಳದಲ್ಲಿ ಕವಿತೆಯೊಂದು ಮೊಳೆಯುತ್ತಿತ್ತು;ಅಂದು ಕೈಲಿ ಲೇಖನಿಯಿತ್ತು, ಕಾಗದದ ಒಡನಾಟವಿತ್ತುಇಂದು ಅಕ್ಷರಗಳ ಗೀಚಲು ಚರವಾಣಿಯ ತಲಾಶೆ ಶುರುವಾಗಿದೆ!​ಲೇಖನಿ ಹೋದ ಜಾಗಕ್ಕೆ ಬೆರಳಚ್ಚು ಬಂದು ಕುಳಿತಿದೆಹಳೆಯ ಕಾಲದ ಆ ಸೊಗಡು ಇಂದು ಡಿಜಿಟಲ್ ಆಗಿದೆ;ಕವನದ ಗುಂಗಿನಲ್ಲಿ ನಾನು ಎಲ್ಲಿದ್ದೆ ಎಂಬ ಅರಿವೇ ಇಲ್ಲಅಂಗಡಿಯವನು ಮಾತಾಡಿಸಿದಾಗಲೇ ವಾಸ್ತವದ ಅರಿವಾಗಿದ್ದು!​ಕವಿತೆ ಇನ್ನು ಮನದ ತುಂಬೆಲ್ಲಾ ಹರಿಯುತ್ತಲೇ ಇತ್ತುದೇಹ ಮಾತ್ರ ನಿಧಾನವಾಗಿ ಮನೆಯ ದಾರಿ ಹಿಡಿದಿತ್ತು;ಶಬ್ದಗಳ ಲೋಕದಲಿ ನಾನು, ಮೌನದಲಿ ನನ್ನ ಬರಹ..ದಾರಿ ಮುಗಿದಿತ್ತು, ಮನೆಯು ಬಂದಿತ್ತು.. ಮನಸು ಮಾತ್ರ ಕವನ ಬರೆಯುತ್ತಿತ್ತು. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ” Read Post »

ಕಾವ್ಯಯಾನ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ”

ಕಾವ್ಯ ಸಂಗಾತಿ ದಾನಮ್ಮ ಝಳಕಿ “ಕನಸಿನ ಅರಮನೆ” ರಾತ್ರಿಯ ಮೌನದ ಮಡಿಲಿನಲ್ಲಿಒಂದು ಕನಸು ಕಣ್ಣು ತೆರೆದಿತು,ಬಡ ಹೃದಯದ ಚಿಕ್ಕ ಗುಡಿಸಲಲ್ಲಿಅರಮನೆಯೊಂದು ಅರಳಿತು. ಕಲ್ಪನೆಯ ಕಲ್ಲು ಕಲ್ಲಿನಿಂದಕಟ್ಟಿದ ಮನದ ಮಂದಿರವು,ಆಶೆಗಳ ಹೊನ್ನಿನ ಕಿಟಕಿಯಿಂದಬೆಳಗಿತು ಬದುಕಿನ ಅಂತರವು. ಕಣ್ಣೀರ ಹನಿಯ ನೀರಿನಿಂದಲೇಬೇರು ಬಿಟ್ಟಿತು ಬಯಕೆಯ ಗಿಡ,ನೋವಿನ ಬೆಂಕಿ ದಾಟಿಬಂದಾಗಹೂವಾಯಿತು ಬದುಕಿನ ಹಾದಿ ಬಿಡ. ಬೆವರ ಹನಿಗಳ ಮುತ್ತುಗಳಿಂದಗೋಡೆಯ ಮೇಲೆ ಚಿತ್ರ ಬರೆದೆ,ಸಹನೆಯ ದೀಪ ಹಚ್ಚಿಕೊಂಡುಸಾವಿರ ಕತ್ತಲ ದಾರಿ ನಡೆದೆ. ಬಿರುಗಾಳಿಗಳು ಬಂದಾಗಲೂಮನದ ಬಾಗಿಲು ಮುಚ್ಚಲಿಲ್ಲ,ಸೋಲಿನ ನೆರಳು ಸುತ್ತಿದಾಗನಂಬಿಕೆಯ ಸೂರ್ಯ ಅಸ್ತವಾಗಲಿಲ್ಲ. ಅರಮನೆ ಎಂದರೆ ಚಿನ್ನವಲ್ಲ,ಅದು ಮನದ ಮಹತ್ವದ ಗೃಹ,ಪ್ರೀತಿಯೇ ಅದರ ಸಿಂಹಾಸನ,ಮನುಜತ್ವವೇ ಅದರ ಸುಗಂಧ ಸುಭ್ರ. ಕನಸು ಎಂದರೆ ಕೇವಲ ನಿದ್ರೆ ಅಲ್ಲ,ಕನಸು ಎಂದರೆ ಜೀವದ ಜ್ಯೋತಿ,ಬಿದ್ದರೂ ಮತ್ತೆ ಎದ್ದು ನಿಲ್ಲುವಧೈರ್ಯದ ಅಮರ ಪ್ರೀತಿ. ಇಂದು ನಿಂತಿದೆ ಆ ಅರಮನೆಕಾಲದ ಮುಂದೆ ಗರ್ವವಾಗಿ,ನಿನ್ನೆ ಕಣ್ಣೀರಲಿ ತೇಲಿದ ಮನಸುಇಂದು ನಗುತ್ತಿದೆ ಹೂವಾಗಿ. ಜೀವನವೆಂಬ ವಿಶಾಲ ಭುವಿಯಲ್ಲಿಕನಸೇ ಮಾನವನ ರೆಕ್ಕೆ,ಕನಸಿನ ಅರಮನೆ ಕಟ್ಟಿದವನಿಗೆಆಕಾಶವೂ ಚಿಕ್ಕದಾದ ತೆಕ್ಕೆ. ಡಾ ದಾನಮ್ಮ ಝಳಕಿ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ” Read Post »

ಕಾವ್ಯಯಾನ

ಗೊರೂರು ಅನಂತ ರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತ ರಾಜು ಹನಿಗವನಗಳು ಗೊತ್ತೇ..? ಮಡದಿಯ ಹೆಸರಿನ ಮುಂದೆಗಂಡನ ಹೆಸರು ಏಕಿರುತ್ತದೆಯೋಚಿಸಿ ತುಸು ಹೊತ್ತುಮುಂದೆ ಮುಂದೆ ನಡೆಯುತ್ತಾನಲ್ಲಲಗೇಜ್ ಹೊತ್ತು ಗೊತ್ತಿಲ್ಲ.. ವರಾನ್ವೇಷಣೆಯಲ್ಲಿ ಜೋಡಿ ಚಪ್ಪಲಿ ಸವೆಸಿದ ಅಪ್ಪನಿಗೆತನ್ನ ಮಗಳ ಹಿಂದೆ ಹುಡುಗರುಹನ್ನೆರೆಡು ಚಪ್ಪಲಿ ಸವೆಸಿದ್ದುಗೊತ್ತಿಲ್ಲ.. ಗೊತ್ತೇ..? ದುರಂತ ಕಥೆ ಕಾದಂಬರಿಬರೆದು ಪ್ರಸಿದ್ಧನಾದಕತೆಗಾರನಿಗೆ ಸ್ಫೂರ್ತಿಅವನ ಹೆಂಡತಿ ಎಂಬುದುಗೊತ್ತೇ..? ಗೊತ್ತಿಲ್ಲ.. ಹುಡುಗರು ಚುಡಾಯಿಸ್ತಾರೆ ಅಂತಬಿಡ್ತಾರಾ ಹುಡುಗಿಯರುಧರಿಸೋದು ಮಿಡಿಹುಡುಗಿಯರಿಗಾಗಿಯೇ ತಲೆ ಕೆಡಿಸಿಕೊಳ್ಳುವ ಹುಡುಗರು ಬಿಡ್ತಾರ ಸೇದೋದು ಸಿಗರೇಟು ಬೀಡಿ ಗೊತ್ತಿಲ್ಲ..! ಗೊರೂರು ಅನಂತರಾಜು 

ಗೊರೂರು ಅನಂತ ರಾಜು ಅವರ ಹನಿಗವನಗಳು Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅಳುವವರನು ನೋಡಿಯೂ ನಗುವವರಿದ್ದಾರಿಲ್ಲಿ ಅದ್ಯಾಕೆ ಹೀಗೆನೋಯುವರೆಂದು ತಿಳಿದೂ ಸತಾಯಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವರುಅನ್ಯರ ಅಳಲು ಕೇಳಲು ಒಲ್ಲೆನ್ನುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ನೀ ಬಯಸುವ ಪ್ರೀತಿ, ಗೌರವ ಬೇರೆಯವರಿಗೂ ನೀಡಬೇಕಲ್ಲವೇಕೊಡದದ್ದನ್ನು ಪಡೆಯುವ ಮನಸು ಹೊಂದಿರುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಎಲ್ಲರಿಗೂ ಅವರವರ ಅಭಿಮಾನ ಎಲ್ಲದಕ್ಕಿಂತಲೂ ಮಿಗಿಲು ನಿಜನಾ ಸ್ವಾಭಿಮಾನದ ಮಾತಾಡಿದರೇ ಮುನಿಯುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಜಗದ ರೀತಿ, ರಿವಾಜುಗಳು ಅದೇಕೋ ವಾಣಿಗೆ ತಿಳಿಯಲಾಗಲೇ ಇಲ್ಲನನ್ನೀ ಮನಸ್ಥಿತಿ ನೋಡಿ ನಿಂದಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ… ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಪುಸ್ತಕ ಸಂಗಾತಿ

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ

ಪುರಸ್ಕಾರ ಸಂಗಾತಿ “ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ” ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ . ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ. 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು. ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎ.ಎಸ್.ಮಕಾನದಾರ್

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ Read Post »

You cannot copy content of this page

Scroll to Top