ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಕರ್ನಾಟಕವು ಹಲವು ಶರಣರ ಸಂತರ ದಾರ್ಶನಿಕರ ನೆಲೆಬೀಡು.  ಸಂಪ್ರದಾಯಸ್ಥ ವಿಶ್ವ ಕರ್ಮರ  ಕುಟುಂಬದಲ್ಲಿ ಜನಿಸಿ ಅತ್ಯಂತ ವೈಚಾರಿಕತೆಯ ವಚನಗಳನ್ನು ರಚಿಸಿ ಸಾಮಾಜಿಕ ಧಾರ್ಮಿಕ ಅಂಕು ಡೊಂಕುಗಳನ್ನು ತಿದ್ದಿ ಟೀಕಿಸುವ ವಿಡಂಬಿಸುವ ತನ್ನ ಹುಟ್ಟು ಕುಲದ ಜನರನ್ನೇ ಟೀಕಿಸಿ ಎಚ್ಚರಿಸುವ ದಿಟ್ಟ ಶರಣ ಸಂಸ್ಕೃತಿಯ ವಾರಸುದಾರ ತಿಂಥಣಿ ಮೌನೇಶ್ವರ ಅಥವಾ ಮೌನಪ್ಪ ಮೌನೋದ್ದಿನ ಎಂಬ ಬೇರೆ ಬೇರೆ ಸಮುದಾಯದ ಪ್ರೀತಿಗೆ ಭಕ್ತಿಗೆ ಪಾತ್ರರಾದವರು ಮೌನೇಶ್ವರರು. ಪೌರಾಣಿಕ ಹಿನ್ನೆಲೆ ಅಂದಿನ ಗುಲಬರ್ಗಾ ಜಿಲ್ಲೆಯ ಇವತ್ತಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ  ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ  (ಇವರಿಗೆ ಹಾವಪ್ಪ ಮತ್ತು ಹಾವಕ್ಕ ಎಂದು ಕರೆಯಲಾಗುತ್ತಿತ್ತು) ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೀಲೆ ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಗಂಡನಿಗೆ ಸಂಶಯ ಬಂದು ಅವಳನ್ನು ಹಿಂಬಾಲಿಸಿದಾಗ ಅವನಿಗೆ ದೃಗ್ಗೋಚರವೇ ಎದುರಾಯಿತು. ಏನೆಂದರೆ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು ‘ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ’ ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ “ಮಗಳೇ ಶೇಷಮ್ಮ ನೀನು ನನ್ನ ಪನ್ನಂಗಾಭರಣವಾದ್ದರಿಂದ ಆ ಬ್ರಹ್ಮನು ನಿನ್ನ ದೈವದಲ್ಲಿ ಸೃಷ್ಟಿ ಬೆಳೆಸುವ ಸಂತಾನ ಭಾಗ್ಯ ಫಲವನ್ನಿಡುವ ಸಾಹಸ ಮಾಡಲಿಲ್ಲ. ಆದಕಾರಣ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ” ಎಂದು ಹೇಳಿ ಪರಮಾತ್ಮನು ಅಂತರ್ಗತನಾಗುತ್ತಾನೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದೇಗುಲದ ಒಂದು ಕಂಬದ ಮರೆಯಲ್ಲಿ ನಿಂತು  ನೋಡುತ್ತಿದ್ದ ಶೇಷಮ್ಮಳ ಗಂಡ ಶೇಷಪ್ಪನ ಸಂಶಯವೆಲ್ಲವೂ ದೂರವಾಗಿ ಭಕ್ತಿಯ ಮಹಾಪೂರವು ಅವನ ಮನದಲ್ಲಿ ನೆಲೆಯಾಗುತ್ತದೆ ಎಂಬ ಐತಿಹ್ಯ ಪೌರಾಣಿಕ ಕಥೆಗಳಿಂದ ಮೌನೇಶ್ವರನ ಚಿತ್ರಣ ವ್ಯಕ್ತವಾಗಿದೆ. ನಂತರ ಪರಶಿವನೇ ಅಯೋನಿಜನಾಗಿ ಮೌನೇಶ್ವರರ ಅವತಾರದಿ ಚೆಲುವಿನ, ಚೆಂದದ, ಮುದ್ದಾದ ಮಗುವಿನ ರೂಪದಲ್ಲಿ ವರಪ್ರಸಾದವಾಗಿ ಧರೆಗಿಳಿದು ಬರುತ್ತಾನೆ ಎನ್ನುವ ಐತಿಹ್ಯವೂ ಇದೆ. ಜಗದ್ಗುರು ಶ್ರೀ ಮೌನೇಶ್ವರರು ಬರೀ ಮಹಿಮಾಪುರುಷರಲ್ಲದೆ ಕಾಲಜ್ಞಾನಿಗಳು, ವಚನಕಾರರು, ಸಮನ್ವತಾವಾದಿಗಳು, ಮಹಾನ್ ಮಾನವತಾವಾದಿಗಳೂ ಆಗಿದ್ದಾರೆ.  16ನೇ ಶತಮಾನದಲ್ಲಿ ಬರುವ ಶರಣರ, ವಚನಕಾರರ, ಸಂತರ ಸಾಲಿನಲ್ಲಿ ಮೌನೇಶ್ವರರು ಪ್ರಮುಖ ವಚನಕಾರರಾಗಿ ಕಂಡುಬರುತ್ತಾರೆ.  ಮೌನೇಶ್ವರರು ಒಟ್ಟು 796ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಮೌನೇಶ್ವರರು ತಮ್ಮ ಎಲ್ಲ ವಚನಗಳಲ್ಲಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಹೆಸರನ್ನು ಅಂಕಿತನಾಮವಾಗಿ ಬರೆದಿರುವುದನ್ನು ಕಾಣಬಹುದು. *ಭಾವೈಕ್ಯತೆಯ ಸಂತ* ಮೌನೇಶ್ವರರು ಹಿಂದೂ ಮುಸಲ್ಮಾನ ಧರ್ಮದ ಭಾವೈಕ್ಯತಾ ಸೂಚಕವಾಗಿ ಹೀಗೆ ಹೇಳಿದ್ದಾರೆ: “ಹಿಂದೂ ತುರುಕರಿಗೆ ಚಂದ್ರಮನೊಬ್ಬನೆ ನಿಂದಿಸಿದವನೇ ಅಧಮನು” ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಸರಳ ಸಜ್ಜನಿಕೆಯ ಆಚಾರ ವಿಚಾರಗಳಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ, ಸುರಪುರ, ದೇವದುರ್ಗ, ಲಿಂಗನಬಂಡಿ, ವರವಿ, ಛಬ್ಬಿ, ರಾಚೋಟಿ, ಶಿರಸಂಗಿ, ತಿರುಪತಿ, ಕಾಶಿ, ಮುಂತಾದೆಡೆ ತಿರುಗಾಡಿ, ಸಾಮಾಜಿಕ ಸುಧಾರಣೆಯನ್ನು  ಮೆರೆದವರೆಂಬುದು ಇತಿಹಾಸ.  ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಅವರ ಒಂದು ಪದ್ಯ ಹೀಗಿದೆ- ‘|| ಓಂ ಏಕಲಾಖ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನಾಧೀನ್ ಜಿತಾಪೀರ್ ಪೈಗಂಬರ್ ಮಾಧೀದೀ ಕಾಶೀಶೀಪತಿ ಗಂಗಾಧರ ಹರ ಹರ ಮಹಾದೇವ||’ ಮಹಮ್ಮದ್ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರರು ಇದರಲ್ಲಿ ಸಾರಿದ್ದಾರೆ. ಈ ಮಾತಿನ ಅಖಂಡಾರ್ಥ ಮೌನೇಶ್ವರರ ಪದ್ಯದಲ್ಲಿದೆ. ಓಂ ಮತ್ತು ಅಲ್ಲಾ ಒಂದೇ ಎಂಬ ಅದ್ವಯಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯ! ಜನನ ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಎಮ್ಮೆ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್​ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ! *ಜೀವನ ಮತ್ತು ಬಾಲ್ಯ ಮೌನೇಶ್ವರರ ತಂದೆ-ತಾಯಿ ಶೇಷಪ್ಪ (ಹಾವಪ್ಪ), ಶೇಷಕ್ಕ (ಹಾವಕ್ಕ) ಎಂಬ ಉಲ್ಲೇಖ ಐತಿಹ್ಯವಾಗಿ ದೊರಕುತ್ತದೆ. ಜಾನಪದದಲ್ಲೂ ಮೌನೇಶ್ವರರ ಬಾಲ್ಯದ ವಿವರಗಳು ತುಂಬಾ ಕಡಿಮೆ. ಅವರ ಬಗ್ಗೆ    ಕಥೆ ಐತಿಹ್ಯ ಏನೇ ಇದ್ದರೂ  ಮೌನೇಶ್ವರರು- ‘ಇಂದ್ರಿ ಸೂತಕದಿಂದ ಅಂದೆ ನಾನು ಜನಿಸಿದೆನು /ಇಂದು ನಾನು ಕೊಳೆಯಲೆ ಪ್ರಭುದೇವ ನಾ/ ಬಂದಂಥ ಭವಕೆ ಮಿತಿಯಿಲ್ಲ ಪ್ರಭುದೇವರ ನಾ/ ಹಿಂದಿಗಿಂತ ಕಡಿಮೆಯಯ್ಯ ಬಸವಣ್ಣ’/ -ಎಂದು ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ.  ಜಾನಪದ-ಪುರಾಣ ಮುಂತಾದುವು ಅಯೋನಿಜರೆಂದರೆ, ಮೌನೇಶ್ವರರ ವಚನವು ‘ಯೋನಿಜ’ರೆಂದು ಸಾರುತ್ತದೆ. ಎಲ್ಲ ಶರಣರು ಹೊಲೆಯೊಳಗಿಂದಲೇ ಜನ್ಮಿಸಿದರೆಂದು ಹೇಳುವ ಮೌನೇಶ್ವರರು ‘ಕುಲವನೆಲ್ಲಿ ಅರಸುವುದು?’ ಎಂಬ ಪ್ರಶ್ನೆಯನ್ನು ನಮಗೆ ಹಾಕುತ್ತಾರೆ ಶರಣರೇ ನಿಜವಾದ ತಾಯ್ತಂದೆಗಳೆಂಬುದು ಇಲ್ಲಿ ಪ್ರಸಿದ್ಧಾರ್ಥ. ಸಾಹಿತ್ಯ ಸಂಪದ ಮೌನೇಶ್ವರರು ವಚನವೊಂದರಲ್ಲಿ ತನ್ನ ಗುರುಮನೆ ಗೋಗಿನ ಎಂದೂ, ಗುಂಡಿ ಬಸವಯ್ಯ ತಮ್ಮ ಗುರುವೆಂದೂ ಹೇಳಿಕೊಂಡಿದ್ದಾರೆ. ಇಲ್ಲಿಯ ಸೂಚಿತಾರ್ಥಗಳನ್ನು ಗ್ರಹಿಸಿದರೆ ಮೌನೇಶ್ವರರು ಕೆಲವು ಗುರುಗಳ ಬಳಿ ಸಾಧನೆ ಮಾಡಿರಬೇಕು. ಗುರುವಿನ ಮಾರ್ಗದರ್ಶನ ಇಲ್ಲದೆ, ಯಾವೊಬ್ಬ ಶಿಷ್ಯನೂ ಸಾಧಕನಾಗಲಾರನಷ್ಟೆ. ಆದರೆ, ಅಲ್ಲಮಪ್ರಭುದೇವ ಮಾತ್ರ ಇದಕ್ಕೆ ಅಪವಾದ. ಮೌನೇಶ್ವರರು ಅನೇಕ ವಚನಗಳಲ್ಲಿ ಅಲ್ಲಮಪ್ರಭುವಿನ ಹೆಸರನ್ನು ಪದೇಪದೆ ಬಳಸುತ್ತಾರೆ. ಅಲ್ಲಮನು ಯಾವ ಮಾಯೆಗೂ ಸಿಗದೆ, ಎಲ್ಲರೊಳಗಿನ ಮಾಯೆಯನ್ನು ಕಿತ್ತೆಸೆದವನು. ಮೌನೇಶ್ವರರು ಇಂಥ ಅಲ್ಲಮನ ದಾರಿಯಲ್ಲಿ ನಡೆದಿದ್ದಾರೆ. ಒಂದಂತೂ ನಿಜ. ಮೌನೇಶ್ವರರು ಕಠೋರ ತಪಸ್ಸಾಧನೆ ಮಾಡಿ ಅಪೂರ್ವ ಸಿದ್ಧಿಗಳನ್ನು ಪಡೆದಿರಬೇಕು. ಅವುಗಳ ಮೂಲಕ ಪವಾಡಗಳನ್ನೂ ಮಾಡಿರಬೇಕು. ಈಗಲೂ ಜನರ ಬಾಯಲ್ಲಿ ಅವರ ಪವಾಡ, ಮಹಿಮೆಗಳು ರೂಢಿಯಲ್ಲಿವೆ. ಆ ಕಾಲದ ಜನರನ್ನೋ ಸುಲ್ತಾನರನ್ನೋ ಸುಬೇದಾರರನ್ನೋ ಪ್ರಭಾವ ಗೊಳಿಸಬೇಕಾದರೆ ಇಂಥ ಪವಾಡಗಳನ್ನು ಮಾಡಿಯೇ ಸೆಳೆಯಬೇಕಿತ್ತು. ಜನಹಿತಕಾರ್ಯಕ್ಕೆ ಇದೊಂದು ಪೂರ್ವ ಮೀಮಾಂಸೆಯೇ. ಮೌನೇಶ್ವರರಿಗೆ ಅಲೌಕಿಕ ಸಿದ್ಧಿಗಳಿದ್ದಂತೆ ಅಸಾಮಾನ್ಯ ಅನುಭಾವೀ ಜೀವನವೂ ಇತ್ತು. ಅವೆರಡು ಇವರಲ್ಲಿ ಹಾಳತವಾಗಿ ಸೇರಿದ್ದಕ್ಕೆ ಅವರ ಬರಹಗಳೇ ಸಾಕ್ಷಿ. *ಉಪನಯನ ವೈದಿಕ ಸಂಸ್ಕಾರ ಬಾಲ್ಯಾವಸ್ತೆಯಲ್ಲಿ ಜಗದ್ಗುರು ಮೌನೇಶ್ವರರಿಗೆ 8 ವರ್ಷ ತುಂಬಿದಾಗ ವಿಶ್ವಕರ್ಮ ಧರ್ಮದ ವೈದಿಕ ಪರಂಪರೆಯ ಅನುಸಾರ ಗಾಯತ್ರಿ ಮಂತ್ರೋಪದೇಶದೊಂದಿಗೆ ಉಪನಯನವಾಯಿತು. ಗಾಯತ್ರಿ ಮಂತ್ರೋಪದೇಶವಾಗಿ ಅದರ ರಹಸ್ಯಾರ್ಥಗಳು ದೃಗ್ಗೋಚರವಾದುವು. ನಂತರ ಮೌನೇಶ್ವರರು ಸುರಪುರದ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ 4 ವರ್ಷ, ಸಂಸ್ಕೃತ, ಉರ್ದು, ಕನ್ನಡ ಕಲಿತು ಹಲವಾರು ಶಾಸ್ತ್ರಗಳ ಪರಿಚಯ ಮಾಡಿಕೊಂಡರು. ಜತೆಗೆ ಸದಾನಂದ ಗುರುಗಳ ಸಂಪೂರ್ಣ ಅನುಗ್ರಹವೂ ಮೌನೇಶ್ವರರ ಮೇಲಿತ್ತು. ಈ ನಡುವೆ ಕಾಶೀಯಾತ್ರೆ ಮುಗಿಸಿಬಂದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ಹೋಗಿ ವೀರಭದ್ರದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳನ್ನು ಮಾಡಿದರೆಂದು ಪುರಾಣಗಳು ನಿರೂಪಿಸುತ್ತವೆ. ತಂದೆ-ತಾಯಿ ವೃದ್ಧರಾಗಿ ತೀರಿಕೊಂಡ ಮೇಲೆ ಮೌನೇಶ್ವರರು ದೇಶಸಂಚಾರ ಮಾಡುತ್ತ, ಎಲ್ಲ ಸಮುದಾಯದವರ ಕಷ್ಟ-ಕಾರ್ಪಣ್ಯ ನೀಗಿಸುತ್ತ ಸಮಾಜದ ಕೀಲಕಸ್ಥಾನದಲ್ಲಿ ಉಳಿದುಬಿಟ್ಟರು. *ಸಾಹಿತ್ಯ ಮೌನೇಶ್ವರರು ಶತಕಗಳನ್ನೂ ಕಾಲಜ್ಞಾನವನ್ನೂ ಬರೆದಿದ್ದಾರೆ. ದಂಡಕ, ಸುವ್ವಿಹಾಡು, ಜೋಗುಳಪದ, ಆರತಿಪದ, ಮೊಹರಂಗೀತೆ, ಕೋಲುಪದ, ಭಜನೆಹಾಡುಗಳನ್ನ್ನೂ ರಚಿಸಿದ್ದಾರೆ. ಇವರ ಪದಗಳಲ್ಲಿ ಉರ್ದು, ಪರ್ಷಿಯನ್ ಪದಗಳು ವಿಪುಲವಾಗಿವೆ. ಕನ್ನಡ, ಉರ್ದು ಕೂಡುನುಡಿಗಳಂತೂ ಬಹಳಷ್ಟಿವೆ- ಮೌನದೀನ ಪೀರ | ಸದ್ಗುರು ಜಿತಾ ಪೈಗಂಬರ ||ಪ|| ಹಿಂದೂ ಮುಸಲ್ಮೆ ಮನದ ಪ್ರಕಾರ/ ಬಲ್ಲಂಥ ಜ್ಞಾನಿಗೆ ನೀನೊಬ್ಬ ದೇವರ ಆಕಾರ ನಿರಾಕಾರ ಎರಡಕ್ಕೆ ನೀನೆ ಗಂಭೀರ/ ಶೇಕ್ ಸಯ್ಯದ ಮೊಗಲ ಪಠಾಣ ನಾಲ್ಕು ಅವತಾರ ತಾಳಿ ಮಾಡಿದಿ ಉದ್ಧಾರ ||2|| ಈ ಪದ್ಯವು ಮೌನೇಶ್ವರರ ರಚನೆಯ ಬಗೆಯನ್ನು ತಿಳಿಸುತ್ತದೆ. ಅವರು ಹಿಂದೂ-ಮುಸ್ಲಿಂ ಬಂಧುತ್ವವನ್ನು ಒಂದೆಡೆ ಸೇರಿಸಿದವರಷ್ಟೆ. ಹೀಗೆ ಭಾವೈಕ್ಯತೆ ಮತ್ತು ಮತೈಕ್ಯತೆಗಳ ಸಂಕೇತವಾಗಿ ಇವರು ಕಾಣಿಸಿಕೊಂಡರೆಂಬುದು ವಿಶೇಷ. ಮೌನೇಶ್ವರರು 17ನೇ ಶತಮಾನದ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಇವರ ಪದ್ಯಗಳಲ್ಲಿ ಉರ್ದುಭಾಷೆ, ಅಭಿವ್ಯಕ್ತಿಗೆ ಅನುಗುಣವಾಗಿ ಕಾಣಿಸಿಕೊಂಡಿದೆ. ಆಡುಮಾತಿನ ಪಲುಕು ಉದ್ದಕ್ಕೂ ಕಾಣಿಸುತ್ತದೆ. ಭಾಷೆಯ ದೃಷ್ಟಿಯಿಂದ ನೋಡಿದರೆ, ಎಷ್ಟೋ ಅಪಪ್ರಯೋಗಗಳು ಇವೆ. ಆದರೆ, ಮೌನೇಶ್ವರರು ಜನಸಾಮಾನ್ಯರಂತೆ ವಚನಗಳನ್ನು ಕಟ್ಟಿದ್ದಾರೆ. ಹಳ್ಳಿಗರು ಬಳಸುತ್ತಿದ್ದ ಹಾಡಿನ ಮಟ್ಟುಗಳ ಜಾಡುಹಿಡಿದು ಅನುಭವಗಳನ್ನು ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹುತೇಕವಾಗಿ ಕನ್ನಡದ ಅಂಶಗಣಕ್ಕೆ ಹೆಚ್ಚು ಹೊಂದುತ್ತವೆ. ಇವು ಬರಹರೂಪದ ವಚನಗಳಲ್ಲ; ಅವರು ಹಾಡುತ್ತ, ಹೇಳುತ್ತ ಹೋದಂತೆ ಶಿಷ್ಯರು ಸಂಗ್ರಹಿಸಿ ಬರೆದಿಟ್ಟದ್ದೆಂದು ತೋರುತ್ತದೆ! ಮೌನೇಶ್ವರರು ತಮ್ಮ ಬಗೆಗೆ ಹೆಚ್ಚಿಗೇನೂ ಹೇಳಿಕೊಂಡಿಲ್ಲ. ತಾನು ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನ ಅವತಾರವೆಂದು ಮಾತ್ರ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜನ್ಮ ಯಾವುದೋ ಮುಖ್ಯ ಉದ್ದೇಶಕ್ಕಾಗಿ ಆಗಿದೆಯೆಂದು ಅವರು ತಿಳಿದುಕೊಂಡಿದ್ದರು. ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ. ಅವರ ಮಾತಿದು. ಅಕ್ಕ ನಾಗಲಿಯ ಮಗ ಚಿಕ್ಕ ಚನ್ನಬಸವಣ್ಣ/ ಅಕ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು/ ರೆಕ್ಕ ಲೆಕ್ಕಕ್ಕೆ ಝುಡತಿಯ ಕೇಳಬೇಕೆಂದು/ ತಕ್ಕಡಿಯ ತ್ರಾಸು ಪಿಡಿದುಕೊಂಡು ನಿಂತಾತನ ಕೂಡ -ಈ ವಚನದಲ್ಲಿ ತಾನು ‘ಅಕ್ಕಸಾಲಿಗ’ ಎಂಬುದನ್ನು ಖಚಿತಪಡಿಸಿದ್ದಾರೆ. ‘ವಿಶ್ವಕರ್ಮ’ ಎಂದು ಪ್ರಸಿದ್ಧಿ ಪಡೆದ ಇವರು ಸಮಾಜದ ಕೀಲಕ ಸ್ಥಾನದಲ್ಲಿದ್ದವರೇ. ಮರದ ಕೆಲಸ ಮಾಡುವವರು ‘ಬಡಗಿ’ಯಾದರೆ ಕಬ್ಬಿಣದ ಕೆಲಸ ಮಾಡುವವರು ‘ಕಮ್ಮಾರ’ರು; ಕಂಚಿನ ಕೆಲಸ ಮಾಡುವವರು ‘ಕಂಚುಗಾರ’ರಾದರೆ, ಶಿಲೆಯ ಕೆಲಸ ಮಾಡುವವರು ‘ಶಿಲ್ಪಿಗರು’. ಇಷ್ಟು ಜನರನ್ನು ವಿಶ್ವಕರ್ಮರೆಂದೇ ಗ್ರಾಮ ಸಮುದಾಯ ಕರೆಯುತ್ತಿತ್ತು. ಸಮುದಾಯದಲ್ಲಿ ಇವರ ಸ್ಥಾನ ಮೇಲ್ಮಟ್ಟದ್ದಾಗಿತ್ತೆಂಬುದನ್ನು ಸಮಸ್ತರೂ ಗುರುತಿಸಿದ್ದಾರೆ. ಇವರ ವೃತ್ತಿಯು ಕೌಶಲಪ್ರಧಾನವಾದುದು. ಪಟ್ಟಣ, ಖೇಡ, ಖರ್ವಡ, ದ್ರೋಣಾಮುಖ ಎಂಬ ವಿವಿಧ ಬಗೆಯ ನಗರ ನಿರ್ವಣದಲ್ಲಿ ಇವರದು ಎತ್ತಿದ ಕೈ. ಅದಕ್ಕನುಗುಣವಾಗಿ ಬಡಿಗೇರ, ಕಮ್ಮಾರರು ಬಳಸುವ ಉಪಕರಣಗಳನ್ನು ವಚನದಲ್ಲಿ ಅಧ್ಯಾತ್ಮದ ಸಂಕೇತವಾಗಿಯೂ ಬಳಸಿ ಕೊಂಡಿದ್ದಾರೆ. ಗ್ರಾಮಜೀವನದ ಕಾಯಕವರ್ಗಕ್ಕೆ ಅನುಗುಣವಾದ ಅಡಿಗಲ್ಲು, ತ್ರಾಸು, ಮೂಸೆ, ಸುತ್ತಿಗೆಯಂಥ ಪರಿಕರಗಳನ್ನು ವಚನಗಳಲ್ಲಿ ಬಳಸಿದ್ದಾರೆ. ‘ಬಡಿಗ, ಕಮ್ಮಾರರು ಪೊಡವಿಗಕರ್ತರು’ ಎಂಬ ಮಾತು ಇದಕ್ಕೆ ಸಾಕ್ಷಿ. ಗುರು ಮೌನೇಶ್ವರ *ಬದುಕೆ ಅನುಭವ ಪಾಠ ಶಾಲೆ* ________________________ ನಮ್ಮ ಬಾಳು ಹೇಗಿರಬೇಕೆಂಬುದನ್ನು ಹಲವಾರು ವಚನಗಳಲ್ಲಿ ಮೌನೇಶ್ವರರು ಹೇಳುತ್ತಾರೆ. ಅವರ ವಚನಗಳು ಶರಣರ ಮಾರ್ಗವನ್ನು ಮುಂದುವರಿಸುತ್ತವೆ. ಅವರು ಹೆಜ್ಜೆಹೆಜ್ಜೆಗೂ ಹಿಂದಿನ ಶರಣರ ನುಡಿಗಡಣವನ್ನು ಮುಂದಿರಿಸಿಕೊಂಡು ಮಾತಾಡುತ್ತಾರೆ. ಅರಿವಿಲ್ಲದೆ ಬಾಳುವೆ ಮಾಡುವುದು ವ್ಯರ್ಥ. ಅಂಥವರಿಗೆ ಎಲ್ಲಿಯ ಗುರು, ಎಲ್ಲಿಯ ದೈವ? ಎಂದು ಒಂದೆಡೆ ಪ್ರಶ್ನಿಸುತ್ತಾರೆ. ಮೌನೇಶ್ವರರಿಗೆ ಹಳ್ಳಿಯ

ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-14 ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಲೇ: ಸವಿತಾ ದೇಶಮುಖ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು  ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ  ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ   ವಚನವನ್ನು ನೆನಪಿಸಿ ಕೊಡುತ್ತಿದ್ದರಂತೆ.“ಇವನಾರವ ಇವನಾರವ ಇವನಾರವ ಎಂದೇನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆಎನಿಸಯ್ಯ…..” ಅನ್ನುವ ವಚನ ತಾಯಿಗೆ ಮೇಲಿಂದ ಮೇಲೆ ಹೇಳಿ ಅವರ ಮನವನ್ನು ಬದಲಾಯಿಸಿದರು ಅಂತ ತಾಯಿಯವರೇ ಸ್ವಂತ ಹೇಳುತ್ತಿದ್ದರು.  ಜಾತಿ ಮೀರಿದ ವಿವಾಹಗಳಿಗೆ ಬೆಂಬಲ ನೀಡುತ್ತಿದ್ದರು.ಜಾತಿ ಭೇದವನ್ನು ಕಡಿಮೆ ಮಾಡಲು ಅವರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು.“ಪ್ರೇಮಕ್ಕೆ ಜಾತಿ ಬೇಧವಿಲ್ಲ” ಎಂಬುದನ್ನು ಅವರು ಸಮರ್ಥಿಸಿದರು. ಇಂತಹ ವಿವಾಹಗಳಿಗೆ ಸಾಮಾಜಿಕ ಒಪ್ಪಿಗೆ ಸಿಗುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. “ಮಾನವೀಯತೆ ಧರ್ಮಕ್ಕಿಂತ ದೊಡ್ಡ ಧರ್ಮ ಇನ್ನಾಆವುದು ಇರಲಾರದು” ಎಂಬುದು ಅವರ ಸಂದೇಶ.  ವೈಯಕ್ತಿಕ ಜೀವನದಲ್ಲಿಯೂ ಅನುಸರಿಸಿದ್ದರು .ತಮ್ಮ ಮನೆ ಬಾಗಿಲು ಎಲ್ಲರಿಗೂ ತೆರೆಯಲ್ಪಟ್ಟಿತ್ತು.ಯಾರೇ ಬಂದರೂ ಅವರ ಜಾತಿ-ಮತ ಕೇಳದೆ ಸಹಾಯ ಮಾಡುತ್ತಿದ್ದರು. ಆದರಾತಿಥ್ಯವನ್ನು ಕೊಟ್ಟು ಕಳಿಸುತ್ತಿದ್ದರು.  ಸಜೀವ ಘಟನೆಗಳನ್ನು ಉಲ್ಲೇಖ ಮಾಡಬೇಕೆಂದರೆಆ ಕಾಲದಲ್ಲಿ ಸಮಾಜದ ಮನಸ್ಸುಗಳಲ್ಲಿ ಇನ್ನೂ ಕೀಳರಿಮೆ ಮತ ಭೇದದ ನೆರಳಿನಲ್ಲಿ ನರಳುತ್ತಿತ್ತು… ಜಯದೇವಿ ತಾಯಿಯವರು … ನೂರಾರು ಎಕರೆ ಭೂಮಿಯ ಒಡೆಯರಾಗಿದ್ದರೂ, ಅವರ ಹೃದಯ ಮಾತ್ರ ಮಣ್ಣಿನಂತೇ ಮೃದು….ಆ ಪ್ರದೇಶದಲ್ಲಿ “ಪಾರದೇರು” ಎನ್ನುವ ಒಂದು ಜಾತಿಯ ಜನರ ಬಗ್ಗೆ ಜನರಲ್ಲಿ ಭಯ ಇತ್ತು.“ಅವರು ಕಳ್ಳರು… ಮೋಸಗಾರರು…” ಎಂದು ಸಮಾಜದಿಂದ ಅವರಿಗೆ ದೂರ ಇಡಲ್ಪಟ್ಟಿತು.ಯಾರೂ  ಕೆಲಸ ಕೊಡುತ್ತಿರಲಿಲ್ಲ. ಅವರು ತಪ್ಪು ದಾರಿಗೆ ಹೋಗುವುದೇ ಅವರ ಬದುಕಿನ ಮಾರ್ಗವಾಗಿಬಿಟ್ಟಿತ್ತು….. ಒಂದು ದಿನ, ಆ ಸಮುದಾಯದ ಒಬ್ಬ ಮುಖಂಡನು ಜಯದೇವಿ ತಾಯಿಯವರ ಸಮಾಜಮುಖಿ  ಕೆಲಸಗಳನ್ನು ನೋಡಿ ಭೇಟಿ ಮಾಡಲು ಬಂದನು.ಅವನ ಕಣ್ಣುಗಳಲ್ಲಿ ಹತಾಶೆ… ಮನಸ್ಸಿನಲ್ಲಿ ನೋವು ಹೊತ್ತು ಬಂದಿದ್ದಾ…“ತಾಯಿ… ನಾವು ತಪ್ಪು ಮಾಡಿದ್ದೇವೆ… ಆದರೆ ನಮಗೆ ಯಾರು ಕೆಲಸ ಕೊಡಲ್ಲ… ನಾವು ಸುಳ್ಳು ತನ ಕಳ್ಳತನ ಮಾಡದೆ ಇದ್ದರೆ ನಮ್ಮ ಜನಾಂಗದವರು ಬದುಕೋದು ಹೇಗೆ?” ಎಂದು ಕೇಳಿದನು.ಆ ಮಾತು ಕೇಳಿ ತಾಯಿಯವರ ಹೃದಯ ಕದಲಿತು.  ತಾಯಿಯವರ ನಂತರ ನಿಧಾನವಾಗಿ ಹೇಳಿದರು…“ನೀವು ತಪ್ಪು ಮಾಡುವುದನ್ನು ಒಪ್ಪಿಕೊಳ್ಳುತ್ತಾ ಇದ್ದೀರಿ… ತಪ್ಪುಗಳನ್ನು ಮಾಡುತ್ತಾ ಬರುತ್ತಲೇ ಇದ್ದೀರಿ..ಆದರೆ ನೀವು ಮನುಷ್ಯರು…ನಿಮಗೆ ಅವಕಾಶ ಕೊಟ್ಟರೆ ಬದಲಾಗ ಬಹುದೇನೋ…ನೋಡೋಣ ಹಾಗಿದ್ದರೆ“ನೀವು ನನ್ನ ಹೊಲಕ್ಕೆ ಬನ್ನಿ… ಕೆಲಸ ಮಾಡಿ…” ಎಂದು ಆಹ್ವಾನಿಸಿದರು.ಹೀಗೆ ಹೊಸ ಜೀವನದ ಆರಂಭ ಪಾರದೇರು ಜನಾಂಗಕ್ಕೆ ಆಯಿತು. ಅನೇಕ ಜನರಿಗೆ ಅವರು ಕೇವಲ ಕೆಲಸ ಕೊಟ್ಟರಲ್ಲದೇ… ವಾಸಿಸಲು ಹೊಲಗಳಲ್ಲಿ ಜಾಗ ಕೊಟ್ಟರು…ನಿನ್ನೆಯವರೆಗೆ ಕಳ್ಳತನ ಮಾಡುತ್ತಿದ್ದ ಕೈಗಳು,ಇಂದು ಮಣ್ಣನ್ನು ಅಗೆದು ಬೆಳೆ ಬೆಳೆಸತೊಡಗಿದವು. ಇದನ್ನು ನೋಡಿದ ಅನೇಕ ಜನರು ಆಶ್ಚರ್ಯದಿಂದ“ಇವರು ಬದಲಾಗ್ತಾರಾ?” ಎಂಬ ಸಂಶಯಪಟ್ಟರು.ಆದರೆ ತಾಯಿಯವರ ನಂಬಿಕೆ ಗೆದ್ದಿತು.ಆ ಜನರು ತಮ್ಮ ಜೀವನವನ್ನು ಸತ್ಯದ ದಾರಿಯಲ್ಲಿ ಸಾಗಿಸಲು ಆರಂಭಿಸಿದರು. ಮುಂದೆ ಭಾರತದಲ್ಲಿ ಲ್ಯಾಂಡ್ ರಿಫಾರ್ಮ್ ಕಾಯಿದೆ ಜಾರಿಯಾದಾಗ, ಹಲವಾರು ಜಮೀನುಗಳು ರೈತರ ಹೆಸರಿಗೆ ಬರೆಯ ಆರಂಭವಾಯಿತು.ಆ ಸಮಯದಲ್ಲಿ ಜಯದೇವಿ ತಾಯಿಯವರು ದೊಡ್ಡ ನಿರ್ಧಾರ ಕೈಗೊಂಡರು.“ಈ ಭೂಮಿಯನ್ನು ಯಾರು ನಿಜವಾಗಿ ಬೆಳೆದಿದ್ದಾರೆ…ಅವರಿಗೆ ಒಪ್ಪಿಸುವಂತೆ…ಪಾದರೆಯ ಜನರು ಕೆಳ ಜಾತಿಯ ಜನರ ಹೆಸರನ್ನು ನೋಂದಾಯಿಸಿದರು.ಹೀಗೆ,ಒಮ್ಮೆ ಸಮಾಜದಿಂದ ತಳ್ಳಲ್ಪಟ್ಟ “ಪಾರದೆರು” ಜನರು,ತಾಯಿಯವರ ಕೃಪೆಯಿಂದ ತಮ್ಮದೇ ಭೂಮಿಯ ಒಡೆಯರಾಗಿದರು. ಶತಶತಮಾನಗಳಿಂದ ಆಳಾಗಿ ದುಡಿಯುತ ಬಂದವರಿಗೆ ಆ ದಿನ ಕಣ್ಣುಗಳಲ್ಲಿ ಕಣ್ಣೀರು…ಹರಿದವುಆದರೆ ಅದು ನೋವಿನಲ್ಲ ಕಣ್ಣಿರಲ್ಲ… ಗೌರವದಿಂದ ಕೂಡಿತ್ತು…“ನಮಗೆ ಜೀವನ ಕೊಟ್ಟವರು ತಾಯಿ…” ಎಂದು ಇನ್ನು ಆದರೂ ನೆನೆಯುತ್ತಾರೆ.“ಜಯದೇವಿ ತಾಯಿಯವರು ಕೇವಲ ಭೂಮಿಯನ್ನು ಕೊಡಲಿಲ್ಲ ಅವರ ಜೀವನಕ್ಕೆ ದಿಕ್ಕು ತೋರಿಸಿದ ತಾಯಿಯಾದರು…” ಮುಂದೆ….ಸಮಾಜ ಏಕತೆ, ಸಮಾನತೆ ಮತ್ತು ಚೇತನ ಶಕ್ತಿಯನ್ನು ಸಜೀವವಾಗಿ ಕಟ್ಟಲು…*ಶರಣ ಸಮಾಜ* ಸಂಘವನ್ನು ಕಟ್ಟಿದರು‌. ಗಾಂಧೀಜಿಯವರು ಕೀಳ ಜಾತಿಯವರಿಗೆ ಹರಿಜನರೆಂದು ಹೆಸರು ಕೊಟ್ಟಸಮಯ .. ಗಾಂಧೀಜಿಯವರ ಧ್ಯೇಯ- ಸದುದ್ದೇಶಕ್ಕಾಗಿ ಸ್ಪೂರ್ತಿದಾಯಕವಾಗಿ *ಶರಣ ಸಮಾಜ* ನಿರ್ಮಾಣಗೊಂಡಿತ್ತು. *ದೀನ ದಲಿತರಿಗೆ | ಹೀನ ಪಾಮರರಿಗೆತನ್ನ ಬಳಿ ಸೆಳೆದುಕೊಂಡ- ಪುಣ್ಯಜೀವಿಹರಿಜನರೆಂಬ ಹೆಸರ ಕೊಟ್ಟಗಾಂಧೀಜಿ * ಎಂದು ಗಾಂಧೀಜಿಯವರ ಬಗ್ಗೆ ತಾಯಿಯವರು ಹಾಡಿ ಹೊಗಳಿದರು.ಎಲ್ಲರೂ ಒಂದೇ ಕುಟುಂಬದವರಂತೆ ಬದುಕಬೇಕು ಜಾತಿ-ಮತ ಭೇದಗಳು ಗಟ್ಟಿಗಳ ಬೇರುಸಹಿತ ಕಿತ್ತೆಸೆಯಲು.ಭೇದಗಳ ಒಡೆಯಬೇಕೆಂದು ಜಯದೇವಿ ತಾಯಿಯವರ ಒಂದು ದೊಡ್ಡ ಕನಸು  .ಈ ಆಲೋಚನೆಯಿಂದಲೇ ಅವರು “ಶರಣ ಸಮಾಜ” ಎನ್ನುವ ಸಂಘವನ್ನು ಸ್ಥಾಪಿಸಿದರು. ಈ ಸಂಘ ಕೇವಲ ಒಂದು ಸಂಸ್ಥೆಯಂತಲ್ಲ…ಇದು ಒಂದು ಚಳವಳಿ…ಸಂಘದ ಉದ್ದೇಶವೆಂದರೆಜಾತಿ, ಮತ, ವರ್ಗ ಎಂಬ ಗೋಡೆಗಳನ್ನು ಒಡೆಯುವ ಪ್ರಯತ್ನ.ಇಲ್ಲಿ ಎಲ್ಲ ಸಮಾಜದ ಜನರು‌…ಬಡವರು, ಶ್ರೀಮಂತರು, ದಲಿತರು, ಮೇಲ್ಜಾತಿಯವರುಎಲ್ಲರೂ ಒಂದೇ ವೇದಿಕೆಯಲ್ಲಿ ಕೂತುಕೊಳ್ಳುತ್ತಿದ್ದರು. ಇಂಥ  ಮಹತ್ವದ ಕಾರ್ಯಕ್ಕೆ ಗೌರವ ನೀಡಲು, ಮುಂದಿನ ದಿನಗಳಲ್ಲಿ ತಾಯಿಯವರು ದೇಶದ ಪ್ರಮುಖ ನಾಯಕನಾದ*ಬಾಬು ಜಗಜೀವನ್ ರಾಮರನ್ನು *ಮನೆಗೆ ಆಹ್ವಾನಿಸಿ ಬೆಳ್ಳಿಯ ತಟ್ಟೆಯಲ್ಲಿ ಊಟಕ್ಕೆ ಇರಿಸಿದ್ದರು.ಆ ದಿನದ ವಾತಾವರಣ ಕಂಡು ಅತ್ಯಂತ ಉತ್ಸಾಹಭರಿತರಾದ ಜನರು, ವಿವಿಧ ಸಮುದಾಯದವರೆಲ್ಲರೂ ಒಂದೇ ಸ್ಥಳದಲ್ಲಿ ಸೇರಿ ಒಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾದರು.  ಜಯದೇವಿ ತಾಯಿಯವರನ್ನು ಉದ್ದೇಶಿಸಿಬಾಬು ಜಗಜೀವನ್ ರಾಮ್ ಅವರು ಮಾತನಾಡುತ್ತಾ ಹೇಳಿದರು:“ಸಮಾನತೆ ಎನ್ನುವುದು ಕೇವಲ ಮಾತಲ್ಲ…ಅದನ್ನು ಜೀವನದಲ್ಲಿ ಅನುಸರಿಸುವವರೇ ನಿಜವಾದ ನಾಯಕರಾಗಲು ಸಾಧ್ಯ… ಜಯದೇವಿ ತಾಯಿಯವರೊಂದು  ಆಧ್ಯಾತ್ಮಿಕ ಜೀವಿಯು  ಕೂಡಾ ಇಂಥವರು ನಿಮ್ಮ ಮಧ್ಯದಲ್ಲಿ ಇದ್ದಿದ್ದು ನಿಮ್ಮಲ್ಲರ ಪುಣ್ಯವೇ ಸರಿ”ಎನ್ನುತಅವರು ತಾಯಿಯವರ ಕಾರ್ಯವನ್ನು ಹೊಗಳಿದರು.ಆ ಮಾತುಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದವು . “ಶರಣ ಸಮಾಜ”ದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು..ಎಲ್ಲ ಜಾತಿಯವರಿಗೂ ಸಹಭೋಜನಶಿಕ್ಷಣ ಮತ್ತು ಜಾಗೃತಿ ಶಿಬಿರಗಳುಮಹಿಳಾ ಸಬಲೀಕರಣ ಕಾರ್ಯಕ್ರಮಗಳುದಲಿತ ಮತ್ತು ಹಿಂದುಳಿದ ವರ್ಗಗಳಿಗೆ ನೆರವು… ಇಲ್ಲಿ “ನಾನು–ನೀನು” ಎನ್ನುವ ಭೇದವಿಲ್ಲ…“ನಾವು” ಎನ್ನುವ ಭಾವನೆ ಮಾತ್ರ ಇತ್ತು. ಇಂಥ ಸಂಘಗಳ ಸಂಘಟನೆಗಳಿಂದಾಗಿ ನಿಧಾನವಾಗಿ ಬದಲಾವಣೆ ಆರಂಭವಾಯಿತು ಅಂತ ಹೇಳಬಹುದುಜನರು ಪರಸ್ಪರ ಗೌರವದಿಂದ ನೋಡಲು ಆರಂಭಿಸಿದರು.ಒಮ್ಮೆ ದೂರ ದೂರ ಇದ್ದ ಹೃದಯಗಳು,ಸ್ವಲ್ಪಮಟ್ಟಿಗಾದರೂ ಹತ್ತಿರವಾಗತೊಡಗಿದವು.ಈ ಚಳುವಳಿಯಲ್ಲಿ ಶರಣ “ಕಂಬಳಿ ಬಾಬ” ಅವರ ಕಾರ್ಯ ಮಹತ್ವದ್ದು ಎಂದು ನೆನೆಯಬೇಕಾಗುತ್ತದೆ. ಜಯದೇವಿ ತಾಯಿಯವರು ಹೇಳ್ತಾರೆ ….*ಎಲ್ಲರೂ ತೋರಿರುವ| ಹೆದ್ದಾರಿ ಒಂದಿರಲುತಿದ್ದದಲೇ ಮನ ಬುದ್ಧಿಗಳು- ಲೋಕದಿಒದ್ದಾಡುವರು ಕೀಳು ಮೇಲೆಂದು* ಶರಣ ಸಮಾಜವು ಸಮಾನತೆಯ ಬೀಜ ಬಿತ್ತಿದ ಸಾಹಸದ ಚಳುವಳಿಯಾಗಿತ್ತು. ಹುಟ್ಟಿಗೆ ಕುಲವಿಲ್ಲ | ಬಟ್ಟೆಗೆ ಬೆಲೆ ಇಲ್ಲಮಟ್ಟ ಅರಿಬೇಕು ಆಚಾರದ- ಶಿವನಲ್ಲಿದಿಟ್ಟಿ ಇಡಬೇಕ ನಿಶ್ಚಯದಿ!! ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ವ್ಯಕ್ತಿ ಇರಲಿ ಅವನು ಹುಟ್ಟಿ ಬರುವಾಗ ಆ ಜಾತಿ ಈ ಜಾತಿ ಸೇರಿದವನಲ್ಲ …. ಹಣೆಗೆ ಪಟ್ಟಿ ಹಂಚಿಕೊಂಡು ಹುಟ್ಟಿದವನಲ್ಲ ಜನ್ಮ ತಾಳಿದ ಶಿಶುವಿಗೆ ಯಾವ ಜಾತಿ ಇದೆ ಹೇಳಿ ಯಾವ ಕುಲವಿದೆ ಗೋತ್ರವಿದೆ ?!…ಎಂದು ತಾಯಿಯವರು ಕೇಳುತ್ತಿದ್ದರು‌. ಅದೇ ರೀತಿ ಬಟ್ಟೆಗೆ ಬೆಲೆ ಇಲ್ಲ ಅಂದ್ರೆ ಬದುಕು ಮಾಡಲು ಪ್ರತಿ ಜೀವಿಯು ಕಾಯಕವನ್ನು ಮಾಡಿ ಬದುಕಬೇಕಾಗುತ್ತದೆ.ಕಾಯಕಕ್ಕೆ ಮೇಲು ಕೀಳು ಎಂಬ ತಾರತಮ್ಯ ಸಲ್ಲದು ಯಾವ ಕಾಯಕವೂ ಮಾಡಿದರೂ ಅದು ಶ್ರೇಷ್ಠವಾದದ್ದೇ ಅಂತ ಅಂದರೆ “Dignity of Labour ” ಅನ್ನು ಎತ್ತಿ ಹೇಳುತ್ತದೆ.  ಕಾಯಕ ಶ್ರೇಷ್ಠತೆಯಿಂದ  ಮನುಷ್ಯ ಶ್ರೇಷ್ಠನಾಗಲು ಸಾಧ್ಯ ಎನ್ನುತ್ತಾ ಸಾಮಾಜಿಕ ಕ್ರಾಂತಿಯಗೆ ತಿರುವು ಕೊಟ್ಟ ಕೀರ್ತಿ ನಮ್ಮ ಶರಣ ಸಮಾಜಕ್ಕೆ ಸಲ್ಲುವುದು ಅನ್ನುತ್ತಿದ್ದರು.  ವಿಶ್ವ ಇತಿಹಾಸದಲ್ಲಿ   ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣನ ಹೆಸರು ಮೊದಲಾಗುವುದು…. ಸತ್ಯ ಶುದ್ಧ ಕಾಯಕದ ಅನುಷ್ಠಾನ ಮನುಜನ ಆದ್ಯ ಕರ್ತವ್ಯ … ಕೈಗೊತ್ತಿಕೊಂಡ ಕಾಯಕದಲ್ಲಿ ಭಕ್ತಿ ಶ್ರದ್ಧೆ ಇರಬೇಕು ಅದಕ್ಕೆ ಮೇಲು ಕೀಳ ಎಂಬ ಸೂತಕ ತಟ್ಟಬಾರದು ಅನ್ನುತ್ತಿದ್ದರು ತಾಯಿಯವರು…  ವೈಚಾರಿಕ ಆಚಾರವೆಂದರೆ ದುಡಿಮೆ ದಾನ ಏನೇ ಇದ್ದರೂ ಎಷ್ಟೇ ಇದ್ದರು ಆಚಾರ ರಹಿತ ವರ್ತನೆಯಲ್ಲಿ ಅದು ಸಂಪೂರ್ಣ ನಿರರ್ಥಕ , ಆದ್ದರಿಂದ ಆಚಾರ ಸಂಪನ್ನನಾಗಿರಬೇಕು ಮನುಷ್ಯ ಅನ್ನುತ್ತಾರೆ ಇದು ಕಾಯದಿಂದ ಬಂದ ಹಣ ಯೋಗ್ಯವಾದ  ಕರ್ಮ ಕ್ರಿಯೆಗಳಾದ ಜಂಗಮ ದಾಸೋಹಕ್ಕೆ ಗುರು ಸೇವೆಗೆ ಲಿಂಗದ ಆರಾಧನೆಯೇ ಅಂತಹ ಕೆಲಸಕ್ಕೆ ಸಲ್ಲಬೇಕು. ಸದಾಚಾರ ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತದೆ ಅನ್ನುತ್ತಿದ್ದರು . * ಪರಶಿವನ ಸೇವೆಯಲ್ಲಿ ಸದಾ ತೊಡಗುವುದೇ ಶಿವಾಚಾರ ನಡೆ-ನುಡಿಗಳಲ್ಲಿ ಮಡಿಯಾದವರು ಶಿವಾಚಾರ ಸಂಪನ್ನರು ಅಂತ ಹೇಳ್ತ… ಜಾತಿ ಮತ ರಹಿತ‌ಸಮಾಜ ನಿರ್ಮಿಸಲು ತಾಯಿಯವರು ಒತ್ತುಕೊಟ್ಟವರು.( ಮುಂದುವರೆಯುವುದು) ಸವಿತಾ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು  ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ  ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ   ವಚನವನ್ನು

Read Post »

ಮಕ್ಕಳ ವಿಭಾಗ

ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು”

ಮಕ್ಕಳ ಸಂಗಾತಿ ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು” ಅಪ್ಪ ಅಮ್ಮ ಸೇವಕರಲ್ಲ, ಅವರೆoದಿಗೂ  ದೇವರ ಪ್ರತಿರೂಪ, ಅವರೆಂದಿಗೂ ಕೇಳುವುದಿಲ್ಲ ದೇವರೇನಮಗೆ ಒಳ್ಳೆಯದು ಮಾಡೆoದು, ಅವರು ಬೇಡುವುದು ಮಕ್ಕಳಿಗಾಗಿ ಮಾತ್ರ. ಅವರು ದೇವರಲ್ಲಿ ತಮಗಾಗಿ ಕೇಳುವುದು ಒಂದು ಮಾತ್ರ ಅದೇನು ಗೊತ್ತಾ?   ನಮ್ಮ ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲುವವರೆಗೆ ನಮಗೆ ಆರೋಗ್ಯ ಕೊಟ್ಟು ಕಾಪಾಡು ಎಂದು ಮಾತ್ರಾವೆ……….ಅಪ್ಪ ಅಮ್ಮ ಸ್ವಾರ್ಥಿಗಳಲ್ಲ,ಅವರೆoದಿಗೂ  ನಿಸ್ವಾರ್ಥಿಗಳು,ಅವರಿಗಾಗಿ ಅವರು ಬದುಕುವುದಿಲ್ಲ.ಅವರೆಂದಿಗೂ ಕೇಳುವರು ದೇವರೇ ನಮ್ಮಮಕ್ಕಳಿಗೆ ಒಳ್ಳೆಯದು ಮಾಡೆಂದು. ಅಪ್ಪ ಅಮ್ಮ  ಹೊಟ್ಟೆ ಕಟ್ಟಿ ಬಟ್ಟೆ ಕಟ್ಟಿ, ಕೂಡಿಟ್ಟು ಆಸ್ತಿಯ ಮಾಡುವರು, ತಮಗಾಗಿ ಬೇಕೆಂದು ಅಲ್ಲವೇ ಅಲ್ಲ. ಅವರು ಅಂದುಕೊಳ್ಳುವರು ಮಕ್ಕಳು ಬೇರೆಯವರ  ಮುಂದೆ ಬೇಡಬಾರದೆಂದು. ನಮ್ಮ ಮಕ್ಕಳು ಎಲ್ಲರ ಮುಂದೆ ತಲೆ ಎತ್ತಿ, ಬಾಳಬೇಕು,ದುಡಿದು ತಿನ್ನಬೇಕು, ಯಾರ ಕೈಕೆಳಗೂ ಇರಬಾರದು, ಸಂಭಂಧಿಕರು ನಿಮ್ಮನ್ನು ಬೆರಳಿಟ್ಟು ತೋರಿಸಬಾರದು, ಎಂದು ಹಗಲು ರಾತ್ರಿ ಶ್ರಮಿಸುವ, ಚಿoತಿಸುವ ಜೀವಗಳು ಅಂದ್ರೆ ಅಪ್ಪ ಅಮ್ಮ ಮಾತ್ರ……….ಅಪ್ಪ ಅಮ್ಮ ಇದ್ದಾಗ ನಿಮಗೆ ಮೇಲೆ ಹೇಳಿದ ಯಾವ ಪದಗಳು, ವಾಕ್ಯಗಳು ಅರ್ಥವಾಗುವುದಿಲ್ಲ,ಅದು ನನಗೆ ಚನ್ನಾಗಿ ಗೊತ್ತು. ಆದ್ರೆ ಅವರಿಬ್ಬರೂ ಕಣ್ಮರೆ ಯಾದ ಮೇಲೆ  ಅರ್ಥ ವಾಗುತ್ತದೆ. ಆಗ ಏನೂ ಮಾಡಲು ಸಾಧ್ಯವಿಲ್ಲ.ಆಗ ನಿನಗೆ ಯಾರೂ ಬರುವುದಿಲ್ಲ. ಸ್ನೇಹಿತರು ಸಂಭಂದಿಕರು ಯಾರೂ……… ಇಲ್ಲ.ಅಪ್ಪ ಅಮ್ಮನೀವು ಚನ್ನಾಗಿ ದ್ರೆ ಖುಶಿಪಡುತ್ತಾರೆ, ಆದ್ರೆ ಬೇರೆಯವರು ನೋಟಕ್ಕೆ ಅಷ್ಟೇ. ಯಾರೂ ಎಷ್ಟೇ ಕಷ್ಟ ಬಂದ್ರು, ಎಷ್ಟೇ ಶ್ರೀಮoತಿಕೆ ಬಂದ್ರು ವೃದ್ಧಾಶ್ರಮಕ್ಕೆ ಸೇರಿಸಬೇಡಿ.   ಮಕ್ಕಳೇ ನನ್ನ ಕಳಕಳಿಯ ಮನವಿ. ವನಜ ಮಹಾಲಿಂಗಯ್ಯ

ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು” Read Post »

ಕಾವ್ಯಯಾನ

ಸುಮನಾ ರಮಾನಂದ ಅವರ ಕವಿತೆ “ಮಲ್ಲಿಗೆಯ ಸವಿನುಡಿ”

ಕಾವ್ಯ ಸಂಗಾತಿ ಸುಮನಾ ರಮಾನಂದ “ಮಲ್ಲಿಗೆಯ ಸವಿನುಡಿ” ಮಾನಿನಿಯ ಆರೈಕೆಯಲರಳುವದುಂಡುಮಲ್ಲೆ ಹೂಗಳು ನಾವು..ಚಿಗುರ ಹಸಿರೆಲೆಯ ನಡುವಲಿರಾಣಿಯಂತೆ ಮೆರೆಯುವೆವು..!! ನಾಚಿಹ ನವವಧುವರರ ಕರದಲಿಕಟ್ಟಿದ ಮಾಲೆಯಾಗಿ ನಗುವೆವು..ಪೂಜಾವೇಳೆಯಲಿ ದೈವದಪಾದಾರವಿಂದದಿ ಧನ್ಯರಾಗಿಹೆವು!! ಮುಂಜಾವಲಿ ಹೂಮಾಲೆಯಾಗಿದೇವರ ಕೊರಳಲಿ ನಲಿವೆವು..ಹೆಂಗಳೆಯರ ಮುಡಿಯಲಲಂಕರಿಸಿ..ಮುಸಂಜೆಯಲಿ ನಲುಗುವೆವು!! ನಾವಿರುವ ಹೂಬನದ ಸುತ್ತಹರಡುತಲಿದೆ ನಮ್ಮ ಕಂಪು..ನಮ್ಮನು ಜಡೆಯಲಿರಿಸಿದ ನಲ್ಲನಕಂಡು ನಲ್ಲೆಯ ಕೆನ್ನೆ ಕೆಂಪು!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ ಅವರ ಕವಿತೆ “ಮಲ್ಲಿಗೆಯ ಸವಿನುಡಿ” Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ” ಅಜ್ಞಾನಿ ಕೈಯಲ್ಲಿ ವಿಜ್ಞಾನ “ ತಾಂತ್ರಿಕ ಯುಗದಲ್ಲಿಮನುಜ ಯಾಂತ್ರಿಕನಾಗಿಯಂತ್ರ ಮಾನವ ಸೃಷ್ಟಿಸಿಕುತಂತ್ರ ಜ್ಞಾನ ಬೆಳೆಸುತ್ತಿದ್ದಾನೆ ತಾತ್ವಿಕ ತಳದಿ ತಳ್ಳಿ ಹಾಕಿಮಾನವೀಯ ಮೌಲ್ಯಗಳ ಮರೆತುಸಂಚು ಮಾಡಿ ಹೊಂಚು ಹಾಕಿವಿಕೃತಿ ಮೆರೆಯುತ್ತಿದ್ದಾನೆ ವೈಚಾರಿಕತೆ ಇಲ್ಲದ ವಿಜ್ಞಾನಿಅಜ್ಞಾನದ ಅಂಧಕಾರದಲಿಅಪಾಯಕಾರಿ ಅನ್ವಸ್ತ್ರಗಳಿಂದನಾಗರಿಕತೆ ನಾಶಗೊಳಿಸುತ್ತಿದ್ದಾನೆ ಭಾವನೆಗಳನ್ನು ಬರುಡಾಗಿಸಿಅಧರ್ಮದ ಅಡ್ಡ ದಾರಿಯಲ್ಲಿದುರಾಸೆಯ ದಾಸನಾಗಿಧರ್ಮದ್ರೋಹಿಯಾಗುತ್ತಿದ್ದಾನೆ ವಿಜ್ಞಾನ ಅಜ್ಞಾನಕ್ಕೆ ಕಾರಣವಾಗಿಮಾನವತೆ ಮೌನವಾಗಿದೆಹೇಡಿಗಳ ಹಗೆತನದಿಂದಅಶಾಂತಿಯ ಸಮರ ಸಾರುತ್ತಿದೆ ವಿಜ್ಞಾನಿಗಳು ಸುಜ್ಞಾನಿಗಳಾಗಿವಿನಾಶ ತಡೆವ ವಿವೇಕಿಗಳಾಗಬೇಕಿದೆಸ್ವಾರ್ಥ ಬಿಟ್ಟು,ಪ್ರೇಮ ಕೊಟ್ಟುಸಾಮರಸ್ಯದ ಜಗವ ಬೆಳಗಬೇಕಿದೆ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “ Read Post »

ಕಥಾಗುಚ್ಛ

“ಮನೆಯೊಳಗಿಲ್ಲ ಮನದೊಡೆಯ” ಸಣ್ಣ ಕಥೆ,ಶ್ರೀದೇವಿ. ಮ.ಗುಮ್ಮಗೋಳ ಅವರಿಂದ

ಕಥಾ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಮನೆಯೊಳಗಿಲ್ಲ ಮನದೊಡೆಯ” ದಿನ ಬೆಳಗ್ಗೆ ವಾಕಿಂಗಿಗೆ ಹೋಗುವಾಗ ಆ ಮನೆ ಅದೇಕೊ ನನ್ನನ್ನು ಸೂಜಿ ಗಲ್ಲಿನಂತೆ ಸೆಳೆಯುತ್ತಿತ್ತು.  ಹಳೆಯದಾದ ದೊಡ್ಡ ಹಂಚಿನಮನೆ. ಸುತ್ತಲು ವಿಶಾಲವಾದ ಜಾಗದಲ್ಲಿ ಹುಲ್ಲು ಕಡ್ಡಿ ಬೆಳೆದಿತ್ತು. ಒಂದೆರಡು ಮಾವಿನ ಗಿಡಗಳು ಬೊಳಾಗಿದ್ದವು. ಚಿಕ್ಕುಗಿಡದಲ್ಲಿ ಹಣ್ಣುಗಳಾಗಿದ್ದರೂ ಅದನ್ನಾರೂ ಹರಿದಂತೆ ಕಾಣಿಸುತ್ತಿರಲಿಲ್ಲ. ಸುತ್ತಲು ಹುಲ್ಲಿನ ಪೊದೆ. ಗಿಡಗಳ ಮದ್ಯೆ ಒಂದು ಹುತ್ತು ಬೆಳೆದಿತ್ತು. ಕಂಪೌಂಡಿಗೆ ಸುಣ್ಣಬಣ್ಣವಿಲ್ಲದೇ ಹಾಳಾಗಿತ್ತು. ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಮನೆಗೆ ಬೀಗ ಹಾಕಲಾಗಿತ್ತು. ಬಹುಶಃ ಆ ಮನೆಯಲ್ಲಿ ಯಾರು ಇರುತ್ತಿರಲಿಲ್ಲವೆಂದು ಕಾಣುತ್ತದೆ. ಹೋಗುವಾಗ ಬರುವಾಗೊಮ್ಮೆ ಆ ಮನೆಯನ್ನೆ ಸ್ವಲ್ಪ ಹೊತ್ತ ನೋಡುತ್ತ ನಿಲ್ಲುತ್ತಿದ್ದೆ‌. ಅಂದು ಆ ಮನೆಯ ಮುಂದೆ ನೋಡುತ ನಿಂತಾಗ ನನ್ನದೇ ಯೊಚನಾಲಹರಿಯಲ್ಲಿ ಮುಳಗಿಹೋಗಿದ್ದೆ. ಒಂದಾನೊಂದು ಕಾಲದಲ್ಲಿ ಈ ಮನೆ ಅಜ್ಜ ಅಜ್ಜಿ ಮಗ ಹೆಂಡತಿ ಮೊಮ್ಮಕ್ಕಳಿಂದ ಮನೆ ತುಂಬಿರಬಹುದು. ಮನೆಯ ಅಂಗಳ ನಂದನವನವಾಗಿದಿತ್ತು. ತರಹ ತರಹದ ಹಣ್ಣುಗಳ ಗಿಡಗಳು. ತರತರಹದ ಹೂಗಳ ಗಿಡಗಳು ಅಂಗಳದಲ್ಲಿ ಬೆಳದಿದ್ದವೇನೊ, ಬೆಳಗಿನ ಜಾವ ಹಕ್ಕಿಗಳ ಕಲರವದ ನೀನಾದ, ಮದ್ಯಾಹ್ನದಲ್ಲಿ ದುಂಬಿಗಳ ಜೇಂಕಾರ, ತರತರಹದ ಪಾತರಗಿತ್ತಿಗಳ ಹಾರಾಟವಿತ್ತೇನೊ. ಹೌದು ಒಂದಾನೊಂದು ಕಾಲದಲ್ಲಿ ಸಜ್ಜನರ ಗೂಡಿಂದ ಸುಂದರವಾದ ಹೂದೋಟದಿಂದ ಎಲ್ಲರ ಮನಗೆದ್ದಿತೇನೊ ಎಂದು ಯೋಚಿಸುತ ಕನಸಿನ ನನ್ನ ಲೋಕದಿಂದ ಹೊರಬಂದಾಗ ಮನೆ ನೋಡಿ ಬಸವಣ್ಣನವರ ವಚನವೊಂದು ಕಣ್ಮುಂದೆ ಹಾದು ಹೋಯಿತು. ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿಮನೆಯೊಳಗೆ ರಜ ತುಂಬಿ…..  ಎನ್ನುವ ವಚನ ಮನದಲ್ಲೆ ಗುಣಗುಣಿಸುತ್ತಾ ನಡೆದೆ. ಹೀಗೇಯೆ ಒಂದು ವಾರದ ನಂತರ ಆ ಮನೆಯ ಮುಂದೆ ಹಾದು ಹೋಗುವಾಗ ಮನೆಯ ಬಾಗಿಲು ತೆಗೆದಂತೆ ಮನೆಯಲ್ಲಿ ಯಾರೊ ಇದ್ದಂತನಿಸಿತು. ಮನೆಯ ಗೇಟಿನ ಸಮೀಪ ನಿಂತು ನೋಡತೊಡಗಿದೆ. ಒಳಗಿಂದ ಒಬ್ಬ ಎಪ್ಪತ್ತರ ಆಸು ಪಾಸಿನ ಒಬ್ಬ ವ್ಯಕ್ತಿ ಹೊರಗಡೆ ಬಂದು ಮನೆಯ ವಿಶಾಲವಾದ ಹುಲ್ಲು ಕಸ ಕಡ್ಡಿ ಬೆಳೆದ ವರಾಂಡವನ್ನು ದಾಟುತ್ತ ಗೇಟ ಕಡೆಗೆ ಬಂದರು. ನಾನು ನೋಡುತ್ತ ನಿಂತಿದ್ದನ್ನು ನೋಡಿದ ಆ ವ್ಯಕ್ತಿ “ಬನ್ನಿ ಸರ್ ಒಳಗೆ ಯಾರ‌ಬೇಕಾಗಿತ್ತು” ಎಂದು ಕೇಳಿದರು. ನಾನು “ಏನೂ ಬೇಕಿಲ್ಲ ಸರ್. ದಿನಾ ನಾನು ಇದೆ ಮಾರ್ಗದಲ್ಲಿ ವಾಕಿಂಗಿಗೆ ಹೋಗುತ್ತೇನೆ. ನಿಮ್ಮ ಮನೆ ಯಾವಾಗಲೂ ಬೀಗ ಹಾಕಿರುತ್ತತ್ತು. ಇವತ್ತು ಯಾರೊ ಇದ್ದ ಹಾಗೆ ಅನಿಸಿತು ಅದಕೆ ನೋಡಿದೆ. ನನ್ನ ಹೆಸರು ಮಹಾಲಿಂಗ ಪಾಟೀಲ ಅಂತ. ಇಲ್ಲಿಯೇ ಕೆನರಾ ಬ್ಯಾಂಕನಲ್ಲಿ ಕ್ಲರ್ಕ ಆಗಿ ಕೆಲಸ ಮಾಡುತ್ತಿದ್ದೇನೆ…..ಅಂದ್ಹಾಗೆ ನಿಮ್ಮ ಹೆಸರೇನು ಸರ್…. ನೀವು ಏನ್ ಮಾಡಿಕೊಂಡಿದಿರಾ” ಎಂದು ಕೇಳಿದೆ. ಆ ವ್ಯಕ್ತಿ “ಪಾಟೀಲರೆ… ನನ್ನ ಹೆಸರು… ವೆಂಕಟೇಶ ದೇಸಾಯಿ ಅಂತ. ನಾನು ಸ್ಕೂಲ ಮಾಸ್ತರು. ಹೆಡಮಾಸ್ಟರಾಗಿ ರಿಟೈರ್ಡಾಗಿ ಈಗ ಹತ್ತು ವರ್ಷವಾಯಿತು. ನಡಿರಿ ನಾನು ವಾಕಿಂಗಗೆ ಹೋಗುತ್ತಿದ್ದೇನೆ. ನನಗೂ ಕಂಪನಿ ಸಿಕ್ಕಂಗಾಯಿತು” ಎಂದು ನನ್ನ ಜೊತೆಗೆ ಬಂದರು. ಒಂದು ವಾರದ ಹತ್ತಿರವಾಗಿತ್ತು ನಾನು ಅವರ ಮನೆಯ ಬಳಿಗೆ ಹೋಗುತ್ತಲೇ ದೇಸಾಯಿ ಮಾಸ್ತರರು ನನ್ನ ಜೊತೆಯಾಗುತ್ತಿದ್ದರು. ಹಲವು ಸಲ ನಿವೂ ಇದುವರೆಗೆ ಎಲ್ಲಿದ್ದಿರಿ. ಇಷ್ಟು ದೊಡ್ಡ ಮನೆ ಸುತ್ತಲು ವಿಶಾಲವಾದ ಜಾಗ ಬಿಟ್ಟು ಹೋಗುವಂತ ಪರಿಸ್ಥಿತಿ ಏನು? ಮನೆಯ ವರಾಂಡದಲೆಲ್ಲಾ ಹುಲ್ಲು ಕಡ್ಡಿ ಬೆಳೆದಿದೆ. ಬಹುಶಃ ನಿಮಗೆ ಮಕ್ಕಳಾರು ಇಲ್ಲವೇ? ಅಥವಾ ನಿಮ್ಮ ಮದುವೆಯೇ ಆಗಿಲ್ಲವೇ? ಎಂದು ಅನೇಕ ಪ್ರಶ್ನೆಗಳನ್ನು ಕೇಳಬೇಕೆಂದರೂ ಸಮಯ ಬಂದಾಗ ಅವರೆ ಹೇಳುತ್ತಾರೆ ಎಂದು ಸುಮ್ಮನಾದೆ. ಒಂದು ದಿನ ಹಾಗೆ ನನ್ನ ಕೆಲಸದ ಬಗ್ಗೆ, ಮತ್ತು ಹೆಂಡತಿ ನನಗಿಬ್ಬರೂ ಆರತಿಗೊಬ್ಬಳು ಕೀರ್ತಿಗೊಬ್ಬ ಇಬ್ಬರು ಮಕ್ಕಳು. ನಮ್ಮ ಮನೆ ಸಣ್ಣದಾದರೂ ನಂದನವನದಂತಿದೆ ಎಂದು ಹೇಳಿದೆ. ಇದೆ ಅವಕಾಶವೆಂದು ನಿಮಗೆ ಎಷ್ಟು ಮಕ್ಕಳು ಅಥವಾ ನೀವು ಬ್ರಹ್ಮಚಾರಿಯಾ? ಮನೆ ಅಷ್ಟೂ ದೊಡ್ಡದಿದ್ದರೂ ಸುತ್ತ ಮುತ್ತಲು ಕಸ ಬೆಳೆದು ನೋಡುವರಾರು ಇಲ್ಲ ಅಥವಾ ನಿಮಗೆ ಮಕ್ಕಳೆ ಇಲ್ಲವೇ? ಎಂದಾಗ ದೇಸಾಯಿ ಮಾಸ್ತರು  “ಅಯ್ಯೊ ಬ್ರಹ್ಮಚಾರಿ ಏನಿಲ್ಲ ನನಗೆ ಮದುವೆಯಾಗಿ ಎರಡು ಗಂಡು‌ಮಕ್ಕಳು ಇದ್ದಾರೆ. ಆದರೆ ಏನೂ ಮಾಡುವದು ಮಕ್ಕಳ ಮನಸ್ಸಿನೊಳಗೆ ಆಸೆ, ದುರಾಸೆ, ಅಸಹನೆ, ತಾತ್ಸಾರದ ಕಸ ಬೆಳೆದಾಗ , ನನ್ನವರು, ನನ್ನದು ಎನ್ನುವ ಭಾವನೆಯೇ ಇಲ್ಲದಾದಾಗ ಮನೆ ಏನು ಹಸನಾಗಿದ್ದಿತು. ಇನ್ಮೂ ಮನೆ ಹೊರಗೆ ಕೇಳಬೇಕೆ ಯಾರೂ ನೋಡದಂತಾಗಿ ಕಸ ಕಡ್ಡಿ ಬೆಳೆಯುವದು ಸಹಜವೇ ತಾನೆ…..  ಸಣ್ಣವರಿದ್ದಾಗ ಮಕ್ಕಳು ಮರಿ ಅಂತ ಅವರಿಗೋಸ್ಕರ ಅವರ ಭವಿಷ್ಯಕ್ಕೊಸ್ಕರ ಎನೆಲ್ಲಾ ಜವಾಬ್ದಾರಿಗಳನ್ನ, ಕಷ್ಟಗಳನ್ನ ಅನುಭವಿಸುತ್ತೇವೆ. ಆದರೆ ಅದೇ ಕಷ್ಟ ಕಾರ್ಪಣ್ಯಗಳು ನಾವು ವಯಸ್ಸಾದಾಗ ಮಕ್ಕಳು ನಮಗಾಗಿ ಹೊರವರು ಎನ್ನುವದು ಭ್ರಮೆ, ಸುಳ್ಳು ನಿರೀಕ್ಷೆ” ಎಂದರು. ಅವರು ತಮ್ಮ ಕಥೆ ಹೇಳ ತೊಡಗಿದರು. ******** ನಾನು ಸ್ಕೂಲ ಮಾಸ್ತರರಾಗಿ ಸೇರಿಕೊಂಡೆ. ಅಪ್ಪನಿಂದ ಬಳುವಳಿಯಾಗಿ ಬಂದ ಊರಲ್ಲಿಯ ಎರಡು ಎಕರೆ ಹೊಲ. ಈ ವಿಶಾಲ ಮನೆಗೆ ವಿಶಾಲಮ್ಮ ನನ್ನ ಮಡದಿಯಾಗಿ ಬಂದಳು. ನನ್ನ ಕಷ್ಟ ಸುಖಗಳಲ್ಲಿ ಜೊತೆಯಾದಳು. ನನಗೆ ಇಬ್ಬರು ಮುದ್ದಾದಗಂಡು ಮಕ್ಕಳಾದರು. ರಘುರಾಮ ಮತ್ತು ಶ್ರೀರಾಮ ಎಂದು ಹೆಸರಿಟ್ಟೆ. ಇಬ್ಬರಿಗೂ ಎರಡು ವರ್ಷಗಳ ಅಂತರ. ಇಬ್ಬರನ್ನು ಊರಲ್ಲಿಯ ಎರಡು ಎಕರೆ ಹೊಲ‌ಮಾರಿ ಚೆನ್ನಾಗಿ ಓದಿಸಿದೆ. ಮೊದಲನೇಯ ಮಗ ತಾಲೂಕ‌ ಛೇರಿಯಲ್ಲಿಗುಮಾಸ್ತನಾದ. ಎರಡನೇಯವ ಇಂಜನೀಯರಿಂಗ ಓದಿ ಮುಂಬೈಯಲ್ಲಿ ಉದ್ಯೊಗ ಅರಸಿ ಹೊರಟ. ಮೊದಲನೇಯ ಮಗ ನನ್ನ ಜೊತೆಯೇ ಇದೆ ಮನೆಯಲ್ಲಿ ಇರತೊಡಗಿದ. ಇಬ್ಬರಿಗೂ ಶ್ರೀಮಂತ ಕುಟುಂಬದ ಸುಂದರ ಹುಡಗಿಯರನ್ನು ನೋಡಿ ಮದುವೆ ಮಾಡಿದೆ. ಮೊದಲನೆಯ ರಘುರಾಮನ ಹೆಂಡತಿ ಬಹಳ ದುರಾಶೆಯ, ತಳಕು ಬಳುಕಿನ ಬದುಕಿಗೆ ಮಾರು ಹೋದ ಹುಡಗಿಯಾಗಿದ್ದಳು. ಅವಳು ಗಂಡನಿಗೆ ಫ್ರಿಜ್, ವಾಸಿಂಗ ಮಶಿನ್, ಬೆಲೆ ಬಾಳುವ ರೇಷ್ಮೆ ಬಟ್ಟೆ, ಒಡವೆಗಾಗಿ ಗಂಡನನ್ನ ಪೀಡಿಸ ತೊಡಗಿದಳು. ಹೆಂಡತಿಯ ಆಶೆಗೆ ಮಗ ರಘುರಾಮ ಲಂಚ ಪಡೆಯತೊಡಗಿದ. ಒಮ್ಮೆ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ. ಹೆಂಡತಿ ತವರು ಮನೆ ಸೇರಿದಳು.  ಹಾಗೊ ಹೀಗೊ ಮಾಡಿ ಮಗನನ್ನು ಬಿಡಿಸಿಕೊಂಡು ಬಂದೆ. ತೀವ್ರ ಆಘಾತಕ್ಕೆ ಒಳಗಾದ ಮಗ ಆತ್ಮ ಹತ್ಯೆ ಮಾಡಿಕೊಂಡ. ಎರಡನೇಯ ಮಗ ಇದ್ದು ಇಲ್ಲದಂತವ. ಎಷ್ಟೊಂದು ಓದಿಸಿ ದೊಡ್ಡ ಸಂಪಾದನೆ ತರುವಂತ ಇಂಜನೀಯರನ್ನಾಗಿ ಮಾಡಿದೆ. ಆದರೆ ಆ ಮಗನ ಮನೆಗೆ ಹೋದರೆ ಅಲ್ಲಿ ನಮ್ಮನ್ನು ಅಸಹನೆಯಿಂದ, ತಾತ್ಸಾರದಿಂದ ನೋಡುತ್ತಿದ್ದರು. ಬೇಡವೆಂದು ಇಲ್ಲಿಯೇ ಉಳಿದೇವು. ಹೆಂಡತಿ ನಾನು ಚೆನ್ನಾಗಿ ಇರುವವರೆಗೆ ಮನೆ ಮನೆಂಗಳ ಎಲ್ಲವೂ ಚೆನ್ನಾಗಿ ನೋಡಿಕೊಂಡು ಹೋಗುತ್ತಿದ್ದೇವು. ಆದರೆ ನನ್ನ ಹೆಂಡತಿಗೆ ಅಸ್ತಮಾ ಸೇರಿತು. ಆಗ ನನ್ನ ಮಗನಾಗಲಿ ಸೊಸೆಯಾಗಲಿ ನಮ್ಮ ಕಡೆ ಬನ್ನಿ ನೋಡುತ್ತೇವೆ ಅನ್ನಲೇ ಇಲ್ಲ. ನನಗೆ ಕೈಲಾದಷ್ಟು ಹೆಂಡತಿಯನ್ನು ಗುಣಪಡಿಸಲು ಆಸ್ಪತ್ರೆಗೆ ತೊರಿಸಿದೆ. ಆದರೆ ಅವಳು ಉಳಿಯಲಿಲ್ಲ.  ನನ್ನ ಹೆಂಡತಿ ತೀರಿ ಹೋಗಿ ಈಗ ನಾಲ್ಕೈದು ವರ್ಷಗಳಾಗಿವೆ. ನನಗೂ ವಯಸ್ಸಾಗಿದ್ದರಿಂದ ಇಲ್ಲಿ ಒಬ್ಬನೇ ಇರಲಾಗದೆ ಅನಿವಾರ್ಯವಾಗಿ ಮಗನ ಮನೆಯಲ್ಲಿದ್ದೇನೆ. ಸೊಸೆಯ ತಾತ್ಸಾರ, ಅಸಹನೆಯ ನಡೆಯನ್ನು ಸಹಿಸಿಕೊಂಡು ಇನ್ನೂ ಬದುಕಿದ್ದೇನೆ. ಮಗ ಮನೆಯನ್ನು ಮಾರಿ ಬಿಡು ಅಪ್ಪಾ ಅನ್ನುತ್ತಿದ್ದಾನೆ. ನಾಡು ಬಾ ಅನ್ನುತ್ತೆ ಕಾಡು ಹೋಗು ಅನ್ನುತ್ತೆ.  ಅದೇಕೊ ಮನಸ್ಸಿಗೆ ನನ್ನ ವಿಶಾಲಳು ನನ್ನನ್ನು ಕರೆದಂತೆ ಬಾಸವಾಯಿತು. ಅವಳ ಪೊಟೊ ಇದೆ ಮನೆಯಲ್ಲಿದೆ. ಅದನ್ನು ತೆಗೆದುಕೊಳ್ಳಲು ಹಾಗೆಯೆ ಮನೆ ಮಾರುವದಕ್ಕೆ ಎಜಂಟರನ್ನು ವಿಚಾರಿಸಲು ಒಂದುವಾರ ಇದ್ದು ಹೋದರಾಯಿತು ಎಂದು ಬಂದೆ. ಇಲ್ಲಿಗೆ ಬಂದ ಮೇಲೆ ಅದೇಕೊ ಮಗನ ಆತ್ಮ ಹತ್ಯೆ, ಹೆಂಡತಿಯ ಸಾವಿನ ಹಳೆಯ ನೆನಪುಗಳು ಕಾಡಿದವು. ನಿನ್ನೆ ಒಬ್ಬ ಎಜೆಂಟನಿಗೆ ಮನೆಯನ್ನು ಮಾರುವ ಬಗ್ಗೆ ತಿಳಿಸಿದ್ದೇನೆ.  ನಾಳೆ ಮಗನ ಹತ್ತಿರ ಹೊರಟಿದ್ದೇನೆ. ಎಂದು ತಮ್ಮ ಕಥೆ ಹೇಳಿದರು. ನಾನು “ಮನೆಗೆ ಒಮ್ಮೆ ಬಂದು ಹೋಗಿ ಸರ್” ಎಂದು ಅಹ್ವಾನಿಸಿದೆ. “ಇಲ್ಲ ನಾಳೆ ಬೆಳಿಗ್ಗೆಯೇ ಹೊರಡುತ್ತಿದ್ದೇನೆ. ನೋಡೊಣ ದೇವರು ನಿಮ್ಮನ್ನು ಮತ್ತೊಮ್ಮೆ ಕಾಣುವ ಭಾಗ್ಯ ಬರೆದಿದ್ದಿರೆ ಖಂಡಿತಾ ಭೇಟಿ ಆಗೋಣ” ಎನ್ನುತಿರಲು ಅವರ ಮನೆ ಗೇಟು ಬಂತು. ದೇಸಾಯರು ಕೈಯಲ್ಲಿ ಕೋಲು ಹಿಡಿದು ಗೇಟ ಬಾಗಿಲು ತೆಗೆದು ಒಳ ಹೊರಟರು ಹಿಂದೆಯೇ ಅವರನ್ನು ನೋಡುತ ಸ್ವಲ್ಪ ಹೊತ್ತು ನಿಂತೆ.   *******  ಅದೇಕೊ ಅವರ ಕಥೆ ಕೇಳಿ ಮನಕೆ ಬೇಸರವಾಗಿ ಒಂದೆರಡು ದಿನ ವಾಕಿಂಗಗೆ ಹೋಗಲು ಮೂಡೆ ಬರಲಿಲ್ಲ. ಹೆಂಡತಿ “ಏಕೆ ವಾಕಿಂಗೆ ಹೋಗುವದಿಲ್ಲವೇ? ಏನಾದರೂ ತೊಂದರೆಯಾ” ಎಂದಾಗ. “ಏನಿಲ್ಲ ಆಮೇಲೆ ಹೇಳುತ್ತೇನೆ” ಎಂದು ವಾಕಿಂಗೆ ಹೊರಟೆ. ನನ್ನ ಕಾಲಗಳದೇಕೊ ದೇಸಾಯರ ಮನೆ ಹತ್ತಿರ ಬಂದಾಗ ತಾವಾಗಿಯೇ ನಿಂತು ಕೊಂಡವು.  ಮನದೊಡೆಯ ಮನೆಯೊಳಗೆ ಇರಲಿಲ್ಲ. ಮನವೇಕೊ ಬಾರವಾದಂತೆನಿಸಿತು. ಬಾಗಿಲ ಬಳಿ ಬಂದಾಗ ಬಾಗಿಲಿಗೆ ಕೀಲಿ ಹಾಕಿತ್ತು. ಮೊದಲ ಅನೇಕ ಬಾರಿ ನೋಡಿದಾಗ ಮನದಲ್ಲಿ ಗುಣಗಣಿಸುತ್ತಿದ್ದ ಬಸವಣ್ಣನವರ ವಚನ  ದೂರದ ಗಾಳಿಯಲ್ಲಿ ತೇಲಿ ಬಂದು ಕಿವಿಯಲ್ಲಿ ಗುನುಗುನಿಸಿದಂತೆ ಭಾಸವಾಯಿತು.  *ಮನೆಯೊಳಗೆ* *ಮನೆಯೊಡೆಯನಿದ್ದಾನೊ* *ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ* *ಮನೆಯೊಳಗೆ ರಜ ತುಂಬಿ* *ಮನೆಯೊಳಗೆ* *ಮನೆಯೊಡೆಯನಿದ್ದಾನೊ* *ಇಲ್ಲವೊ ತನುವಿನಲ್ಲಿ ಹುಸಿ ತುಂಬಿ* *ಮನದೊಳಗೆ ವಿಷಯ ತುಂಬಿ* *ಮನದೊಳಗೆ* [ *ಮನದೊ]ಡೆಯನಿದ್ದಾನೊ* *ಇಲ್ಲವೊ ಇಲ್ಲ* *ಕೂಡಲಸಂಗಮದೇವಾ* . ಶ್ರೀದೇವಿ. ಮ.ಗುಮ್ಮಗೋಳ

“ಮನೆಯೊಳಗಿಲ್ಲ ಮನದೊಡೆಯ” ಸಣ್ಣ ಕಥೆ,ಶ್ರೀದೇವಿ. ಮ.ಗುಮ್ಮಗೋಳ ಅವರಿಂದ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-20 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ರಣರಂಗ ಪ್ರವೇಶಿಸದಂತೆ ರಾಜಕುವರನನ್ನು ತಡೆದಿತ್ತು ರತಿಕಾಮನೆ    ಹಂಸಧ್ವಜ ಕಾಯುತ್ತಿದ್ದದ್ದು ಪ್ರೀತಿಯ ಮಗ ಸುಧನ್ವನ ಬರುವಿಕೆಗಾಗಿ. ಅವನು ವಿಳಂಬ ಮಾಡಿದ್ದಾನೆ ಎಂಬ ಕೋಪ ಹಂಸಧ್ವಜನಲ್ಲೀಗ ಮೂಡತೊಡಗಿತ್ತು. ರಣವೀರ ಸುಧನ್ವ ರಣರಂಗದೆಡೆಗೆ ಬರಲು ವಿಳಂಬವಾದುದಕ್ಕೆ ಸಕಾರಣವಿತ್ತು. ಸೈನಿಕರು ಯುದ್ಧಕ್ಕೆ ಸಿದ್ಧರಾಗಿ ಹೋಗುತ್ತಿದ್ದುದನ್ನು ಕಂಡ ಸುಧನ್ವ ತಾನೂ ತಯಾರಾದ. ವೇಷಭೂಷಣಗಳನ್ನು ಧರಿಸಿಕೊಂಡ. ಮನವನ್ನು ರಣಶೌರ್ಯಕ್ಕೆ ಸಿದ್ಧವಾಗಿಸಿಕೊಂಡ. ಹೋಗಿ ಸಾಷ್ಟಾಂಗ ವಂದಿಸಿದ್ದು ತಾಯಿಯ ಚರಣಕಮಲಗಳಿಗೆ. “ಕುದುರೆಯನ್ನು ಕಟ್ಟಿ ಕದನವನ್ನು ಮಾಡಹೊರಟಿರುವ ನನ್ನ ಮೇಲೆ ನಿನ್ನ ಪೂರ್ಣ ಆಶೀರ್ವಾದವಿರಲಿ ತಾಯೇ” ಎಂದು ಬೇಡಿದ.      ಮಗನ ಮನವನ್ನು ವೀರತ್ವದಿಂದ ಹರಿದಾಸತ್ವದೆಡೆಗೆ ಸೆಳೆವ ಪರಮವಾಣಿ ಮೊಳಗಿತು ಆ ಕ್ಷಣದಲ್ಲಿ ಮಾತೆಯ ಮನದಾಳದಿಂದ. “ಅರ್ಜುನನ ಯಾಗದ ಕುದುರೆಯದು ನಾಲ್ಕಡಿಯ ದೇಹವನ್ನು ಹೊಂದಿದೆಯಷ್ಟೇ. ಅದರ ಗೊಡವೆಗಿಂತಲೂ ಆ ಪೊಡವೀಪತಿ ಶ್ರೀಕೃಷ್ಣನನ್ನು ಒಲಿಸುವ ಬುದ್ಧಿಯದು ನಿನಗೆ ಒಲಿಯಬೇಕಿದೆ. ನಿನ್ನ ಸಾಹಸವನ್ನು ಮೆಚ್ಚಿ ಆ ಅಸುರಾರಿ ಇಂದು ಪ್ರತ್ಯಕ್ಷನಾದರೆ ನಾವೆಲ್ಲರೂ ಸಾಕ್ಷಾತ್ ಕಾಣಬಹುದು ಅವನ” ಎಂದಳು ಸುಧನ್ವ ಮಾತೆ.      ಮಾತೆ ಮಾತದು ಪ್ರೇರೇಪಿಸಿತು ಸುಧನ್ವನನು ಪ್ರತಿಜ್ಞಾಬದ್ಧತೆಯೊಂದರ ಕಡೆಗೆ. “ಅರ್ಜುನನಿಗೆ ನೋವಾದರೆ ಆ ಶ್ರೀಕೃಷ್ಣ ಬಾರದೇ ಇರುವನೇ! ಆಪ್ತರ ಆರ್ತನಾದವನ್ನು ಆ ಆಪದ್ಬಾಂಧವ ಸಹಿಸಿಯಾನೇ! ಇಂದ್ರಸುತನೊಡನೆ ಹೋರಾಡುವೆ ಶೌರ್ಯದಿಂದ. ತನ್ಮೂಲಕ ಆ ಹರಿಯನ್ನು ನಮ್ಮೀ ಧರಣಿಗೆ ಬರಗೊಡುವೆ. ನಂತರ ಆ ಕೃಷ್ಣನ ಮುಂದೆ ನನ್ನ ಪೌರುಷವನ್ನು ತೋರಿಸುವೆ” ಎಂದು ದಿಟ್ಟತನದಿಂದ ನುಡಿದನು ಸುಧನ್ವ.      ಶ್ರೀಕೃಷ್ಣ ಬಂದಾಗ ಮಗನೆಲ್ಲಿ ಯುದ್ಧಕ್ಕೆ ವಿಮುಖನಾಗುವನೋ ಎಂಬ ಭಾವ ಆ ತಾಯಿಯನ್ನು ಕಾಡಿತು. ಅದನ್ನೇ ಹೇಳಿದಳು ಮಗನಲ್ಲಿ. “ಕೃಷ್ಣಾಗಮನದ ಗಳಿಗೆಯಲ್ಲಿ ನೀನು ಯುದ್ಧಕ್ಕೆ ವಿಮುಖನಾದರೆ ಜನರ ಮುಂದೆ ಮರ್ಯಾದೆ ನಾಶವದು ಖಚಿತ” ಎಂಬ ಎಚ್ಚರಿಕೆ ನೀಡಿದಳು.     “ಕೃಷ್ಣನಿಗೆ ವಿಮುಖನಾಗಿ ಬಂದರೆ ನಿನ್ನ ಗರ್ಭದಲ್ಲಿ ಜನಿಸಿದವನೇ ನಾನಲ್ಲ” ಎಂಬ ಧೀರನುಡಿಯನಾಡಿದ ಸುಧನ್ವ, ಕದನದಲ್ಲಿ ಭರಪೂರ ಶೌರ್ಯವನ್ನು ತೋರಿಸುವ ಆಶ್ವಾಸನೆಯನ್ನು ಅವಳಿಗಿತ್ತನು.      ಅಷ್ಟರಲ್ಲಿ ಬಳಿಗೆ ಬಂದ ಅವನ ಸಹೋದರಿ ಕುವಲೆಯೆನ್ನುವವಳು “ಕೃಷ್ಣನಿಗೆ ವಿಮುಖನಾಗಿ ನೀನು ಬಂದರೆ ನನ್ನ ಗಂಡನ ಮನೆಯಲ್ಲಿ ನಾನು ತಲೆಯೆತ್ತಿ ನಡೆಯಲಾರೆ” ಎಂದು ಹೇಳಿ, ಅಣ್ಣ ಅಸಹಾಯ ಶೌರ್ಯ ತೋರಲಿ ಎಂದು ಹಾರೈಸಿ, ಆರತಿಯನೆತ್ತಿ, ಚಂದನದ ತಿಲಕವನ್ನಿಟ್ಟು, ಕರ್ಪೂರ ವೀಳ್ಯವನ್ನು ಕೊಟ್ಟು, ಅಕ್ಷತೆಯನ್ನು ಎರಚಿ ಕಳುಹಿಸಿಕೊಟ್ಟಳು ಸುಧನ್ವನನ್ನು.     ಹೀಗೆ ಯುದ್ಧಮುಖನಾಗಿ ಅರಮನೆಯಿಂದ ಹೊರಟುನಿಂತ ಸುಧನ್ವನಿಗೀಗ ಎದುರಾದವಳು ಪ್ರಭಾವತಿ. ಅವನ ಪ್ರಿಯ ರಾಣಿ. ಚಂದ್ರಮಂಡಲದಂತಿತ್ತು ಅವಳ ವದನ. ಹೊಸತು ಬೆಳದಿಂಗಳಂತೆ ಶೋಭಿಸುವ ಅವಳ ನಗು. ರೇಷ್ಮೆಯುಡುಗೆಯನ್ನು ತೊಟ್ಟು ಮೆರೆಯುತ್ತಿದ್ದಾಳೆ. ಅವಳ ಹಣೆಯ ಮೇಲಿನ ಕೆಂಬಣ್ಣದ ಸಿಂಧೂರ ತಿಲಕವದು ಅವಳ ಚಿತ್ತದ ಅನುರಾಗವನ್ನು ಸೂಚಿಸುವಂತಿದೆ. ಸೌಂದರ್ಯವನ್ನೇ ಹೊತ್ತುನಿಂತಿದ್ದಳು ಪ್ರಭಾವತಿ.      ಮಡದಿಯ ಬೆಡಗು ಬಿನ್ನಾಣಗಳನ್ನು ನೋಡಿ ಮುಗುಳುನಗುತ ಸುಧನ್ವ “ಇಂದು ಯುದ್ಧದಲ್ಲಿ ಅರ್ಜುನನ ಬಿಂಕವನ್ನು ಕೊನೆಗಾಣಿಸುತ್ತೇನೆ. ಕೃಷ್ಣ ಪ್ರತ್ಯಕ್ಷನಾದಾಗ ಅವನ ಮುಂದೆಯೂ ನನ್ನ ಪರಾಕ್ರಮದ ಪ್ರದರ್ಶನಗೈಯ್ಯುತ್ತೇನೆ. ಗೆಲುವನ್ನು ಪಡೆಯುತ್ತೇನೆ. ಅದಾಗದಿದ್ದರೆ ವೀರಮರಣವನ್ನು ಪಡೆದು ಮುಕ್ತಿಯನ್ನು ಗಳಿಸುತ್ತೇನೆ. ನನ್ನನ್ನು ಒಲವಿನಿಂದ ಕಳಿಸಿಕೊಡು ನೀನು” ಎಂದನು.      ರಾಣಿ ಪ್ರಭಾವತಿಯ ಆಕಾಂಕ್ಷೆಯದು ಬೇರೆಯದೇ ತೆರದಲ್ಲಿತ್ತು. ಕೃಷ್ಣನಿಗೆ ಯುದ್ಧದಲ್ಲಿ ಎದುರಾದ ಬಳಿಕ ಮೋಕ್ಷವಲ್ಲದೆ ಜಯ ದೊರೆಯಲು ಸಾಧ್ಯವಿಲ್ಲ ಎಂಬ ಅರಿವಿತ್ತು ಅವಳಿಗೆ. ಗಂಡ ಯುದ್ಧಕ್ಕೆ ಹೋಗುವುದಕ್ಕೂ ಮೊದಲು ತನ್ನನ್ನು ಕೂಡಿದರೆ ಆ ಬಳಿಕ ತಾನು ಸಂತಾನರಹಿತೆ ಎನಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವಳ ಯೋಚನೆ. ಕಾಮಾಸಕ್ತಿ ಅವಳಲ್ಲಿ ಗರಿಗೆದರಿತ್ತು. ತಾಯ್ತನದ ಹಂಬಲ ಅವಳನ್ನು ಕಾಡತೊಡಗಿತ್ತು. ತನ್ನನ್ನು ತೃಪ್ತಿಗೊಳಿಸಿ ಯುದ್ಧಕ್ಕೆ ತೆರಳು ಎಂದು ಕೇಳಿಕೊಂಡಳು ಸುಧನ್ವನನ್ನು.     ಯುದ್ಧರಂಗದೆಡೆಗೆ ಮುಖಮಾಡಿದ್ದ ಹಂಸಧ್ವಜಸುತನಿಗೆ ಮಡದಿಯ ಮಾತು ಸರಿದೋರಲಿಲ್ಲ. “ಕಾಮದಾಟಕ್ಕೆ ಇದು ಸಮಯವಲ್ಲ. ಕದನಭೇರಿ ನನ್ನನ್ನು ಕರೆಯುತ್ತಿದೆ. ನನ್ನ ತಂದೆ ಈಗಾಗಲೇ ರಣಭೂಮಿಯನ್ನು ಸೇರಿಯಾಗಿದೆ. ಸರಿಯಾದ ಸಮಯದಲ್ಲಿ ನಾನಲ್ಲಿ ಇರದಿದ್ದರೆ ಕ್ರಮವನ್ನು ಮೀರಿದಂತಾಗುತ್ತದೆ. ನೀನು ನನ್ನನ್ನೀಗ ತಡೆಯುವುದು ಸರಿಯಲ್ಲ. ನನ್ನನ್ನು ಹೋಗಲು ಬಿಡು” ಎಂದು ಹೇಳುತ್ತಾ ಅವನು ಮುಂದುವರಿಯುವ ಮನಸ್ಸು ಮಾಡಿದ.     ಆಗಲೇ ಅವಳು ಅವನ ಗಲ್ಲವನ್ನು ಹಿಡಿದು, ಮುದ್ದುಮಾಡಿ, ಅವನೆಡೆಗೆ ತನ್ನ ತನುವನ್ನು ನೂಕಿದಳು. ಮನ್ಮಥನ ರಣರಂಗವನ್ನು ಪ್ರವೇಶಿಸಬೇಕಾದ ನೀನು ಕುದುರೆಯನ್ನು ಗೆಲ್ಲಬೇಕಾದ ಯುದ್ಧರಂಗಕ್ಕೆ ಹೇಗೆ ಹೋಗುವೆಯೋ ನೋಡುತ್ತೇನೆ ಎಂಬಂತೆ ಅವಳು ತನ್ನೆರಡೂ ಮೊಲೆಗಳನ್ನು ಅವನ ದೇಹಕ್ಕೆ ಒತ್ತುತ್ತಾ, ಗಾಢವಾಗಿ ಆಲಿಂಗನಗೈದು ಶೃಂಗಾರ ಚೇಷ್ಟೆಗಳನ್ನು ತೋರಿದಳು. ಹಂಸಗಳ ತುಪ್ಪಳದಿಂದ ನಿರ್ಮಿಸಲಾದ ಹಾಸಿಗೆಯೆಡೆಗೆ ಅವನನ್ನು ಸೆಳೆದೊಯ್ದಳು.     ಮಡದಿಯ ಮೋಹದಾಟಗಳು ಯುದ್ಧರಂಗದೆಡೆಗೆ ಮುಖಮಾಡಿದ್ದ ಸುಧನ್ವನ ಅಂತರಂಗವನ್ನು ಇನ್ನೊಂದು ದಿಕ್ಕಿಗೆ ಹಾಯಿಸಿದವು. ಮನದನ್ನೆಯ ಮನದ ಕಾಮನೆಯನ್ನು ತಣಿಸಿ, ರಮಿಸುವುದರಲ್ಲೇನೂ ತಪ್ಪಿಲ್ಲ ಎಂದು ತೋರಿತು ಅವನಿಗೆ. ಸರಸದ ಮಾತುಗಳನ್ನಾಡಿದ. ಚುಂಬಿಸಿದ. ಪ್ರೀತಿಯಿಂದ ಅವಳೆದೆಯಲ್ಲಿ ಒರಗಿದ. ಕಾಮಿನಿಯ ಕಾಮದ ಕಡಲಲ್ಲಿ ಮುಳುಗಿಹೋದ ಸುಧನ್ವ.                                       ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಕಾವ್ಯಯಾನ, ನಿಮ್ಮೊಂದಿಗೆ

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಹೃದಯ ಒಡೆದಾಗ” ಹೃದಯ ಒಡೆದಾಗ ಪ್ರತಿಯೊಂದು ನೋವು ಒಲವಿನ ಕಥೆಗಳಾಗಿ ಮೂಡಿ ಬರುತ್ತವೆ;ಬಿಸಿ ಕಣ್ಣೀರಿನ ಹನಿಹನಿಯಲ್ಲು ಕುದಿಮೌನದ ಮಾತುಗಳೆ ಹರಿದು ನಿಲ್ಲುತ್ತವೆ! ಈ ಅಶಾಂತಿ, ಈ ಕಾತರ, ಈ ಅಸಹಾಯತೆಯ ನೆರಳಲ್ಲಿ ನೀನಿರುವೆ ನನ್ನೊಲವೆ;ಪ್ರೇಮದ ಪ್ರತಿಯೊಂದು ಸಾಕ್ಷಿ ಜೀವಂತ ಬೆದರು ಬೊಂಬೆಯಾಗಿ ಕುಣಿಯುತ್ತವೆ ಜೀವವೆ! ಪ್ರೇಮ ಮೌನ ಹೊದ್ದ ತುಟಿಗಳ ಮೇಲೆ ನಿಂತಿರುವ ಅಪೂರ್ಣ ಕನಸುಗಳ ದಾರಿಯದು;ಪ್ರೇಮಿಯ ಹೃದಯದ ಪ್ರತಿ ಬಡಿತವು ಮಳೆಯಿರದ ನದಿಯ ಹರಿವಿನಂತೆ ಸಾಗುವುದು! ಹೃದಯದ ಪುಸ್ತಕದ ಪ್ರತಿಯೊಂದು ನೆನಪಿನ ಪುಟಗಳ ನವಿರಾಗಿ ತಿರುಗಿಸುವುದು!ಪ್ರೀತಿ ಏಕಾಂಗಿಯಾಗಿ ಖಾಲಿ ಪ್ರತಿಧ್ವನಿಯಲ್ಲಿ ದುಃಸ್ವಪ್ನಗಳ ಕಂಡಂತೆ ಊಳಿಡುವುದು! ಭಗ್ನ ಪ್ರೇಮಿಯಷ್ಟೇ ಏಕಾಂತದ ನಿಶ್ಶಬ್ದದಲ್ಲಿ ತನ್ನೊಂದಿಗೇ ಮಾತಾಡುವುದು!ಭ್ರಮೆಯ ಮಾತುಗಳ ಪ್ರತಿ ಪದದಲ್ಲೂ ನಿನ್ನದೇ ನೆನಪು ಮಧುರವಾಗಿ ತುಳುಕುವುದು! ನಿನ್ನ ನೆನಪು ಹುಟ್ಟು ಮಚ್ಚೆಯಂತೆ ಬರಡು ಹೃದಯವನ್ನು ಸುದೀರ್ಘವಾಗಿ ಆಳುವುದು!ಕಣ್ಣೀರೇ ಒಲವಿನ ಭಾಷೆಯಾಗಿ ಪ್ರೇಮದ ಸಿಹಿಕಹಿಯ ಮುಚ್ಚುಮರೆಯಿಲ್ಲದೆ ಹಾಡುವುದು! ಪ್ರೀತಿಸಿದ ಹೃದಯ ವಿಚಿತ್ರ ಯಾತನೆಯ ಘಮಲು ಅದರ ಸ್ವಭಾವವೇ ಅರ್ಥವಾಗದು;ವಿರಹದ ಗಾಯದ ಉರಿಯನ್ನೆಲ್ಲ ನಿನ್ನ ಪ್ರೀತಿಯ ಗುರುತಿನ ಸ್ಮಾರಕವಾಗಿ ಸ್ಮರಿಸುವುದು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ತಂತಿ ಹರಿದ ವೀಣೆ” ತಂತಿ ಹರಿದ ವೀಣೆ ನಾನು,ಮೌನದೊಳಗೇ ನಾದ ನಾನು;ಮುರಿದ ಕನಸ ದಾರಿ ನಾನು,ನಡೆಯುತಿರುವ ಜೀವ ನಾನು. ಕತ್ತಲ ರಾತ್ರಿ ಜೊತೆಯಾದರೂ,ನಕ್ಷತ್ರದಂತೆ ಬೆಳಕು ನಾನು;ಕಣ್ಣೀರ ಹನಿಯ ಮಣ್ಣಿನೊಳಗೆ,ಮೊಳೆಯುತಿರುವ ಬೀಜ ನಾನು. ಗಾಳಿ ತಾಕಿದ ಕ್ಷಣದಲ್ಲೇ,ಮೌನವೇ ಮಧುರ ರಾಗ;ನೋವು ತಾಕಿದ ಹೃದಯದಲ್ಲೇ,ಹುಟ್ಟುತ್ತದೆ ಹೊಸ ನಾದ. ಮುರಿದ ತಂತಿ ಎಂದರೇನು,ನಾದ ಮಡಿಯುವುದಿಲ್ಲ;ಮುರಿದ ಮನಸು ಎಂದರೇನು,ಆಸೆ ಸಾಯುವುದಿಲ್ಲ. ಒಂದು ಹೂವಿನಿಂದ ವಸಂತವಿಲ್ಲ,ಒಂದು ನೆರಳಿಂದ ದಾರಿಯಿಲ್ಲ;ನೂರ ಕನಸು ಸೇರಿದಾಗಲೇ,ಜೀವನಕ್ಕೆ ಸೋಲಿಲ್ಲ. ಮಣ್ಣು ಕಲಿಸಿದ ಸಹನೆ ನಾನು,ಆಕಾಶ ಕೊಟ್ಟ ಕನಸು ನಾನು;ಹೊಳೆ ಹೇಳಿದ ಹರಿವು ನಾನು,ಗಾಳಿಯ ಮಧುರ ಸ್ಪರ್ಶ ನಾನು. ಹಳೆಯ ನೋವು ದೂರವಾದರೂ,ನೆನಪು ಆಗಿ ಉಳಿಯುತ್ತದೆ;ಹೊಸ ಬೆಳಕು ಬಂದಾಗಲೇ,ಬದುಕು ಮತ್ತೆ ನಗುತ್ತದೆ. ನೀ ನಡೆದ ದಾರಿ ನೆರಳಾದರೂ,ನನ್ನ ದಾರಿ ಬೆಳಕು ಆಗಲಿ;ತಂತಿ ಹರಿದ ವೀಣೆ ಆದರೂ,ನನ್ನ ನಾದ ಉಳಿದು ಹೋಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ” Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ನೋವಿನಲೂ ಸಹನೆಯ ವಹಿಸು ದಾಂಪತ್ಯಬಂಧವು ಮುರಿಯದಂತೆಜೀವನವ ಎದುರಿಸು ಕಷ್ಟ ಕಾರ್ಪಣ್ಯದಮಳೆಯು ಸುರಿಯದಂತೆ ಕವಿದಿಹ ಮೋಡಗಳು ಚದುರಿ ಓಡಲುಬಾನು ತಿಳಿಯಾಗದೇವಿವಾಹದ ಅರ್ಥವು ಪರಿಪಕ್ವವಾಗಿ ಬೆಸೆಯಲಿದೂರಕೆ ಸರಿಯದಂತೆ ಸವಿಯಲು ಬದುಕಿನ ಸಾರವ ಒಲುಮೆಉಕ್ಕಿ ಬರುವುದುಕೀವು ತುಂಬಿದ ಮನದ ಕೊಳೆಯನಿವಾರಿಸು ಉರಿಯದಂತೆ ಭಾವನೆಯ ಸಾಗರದಿ ಬೋರ್ಗರೆವ ಝರಿಯ  ಹತ್ತಿಕ್ಕುವ ಪ್ರಯತ್ನಜೀವನ್ಮುಖಿ ಮೌಲ್ಯದ ಬಗೆಗೆ ವಿವೇಚನೆವಾಸ್ತವ ಹರಿಯದಂತೆ ಅವಿನಾಭಾವ ಸಂಬಂಧ ಕಾಪಿಟ್ಟು ಕಾಯುವಜವಾಬ್ದಾರಿ ರಾಧೆಗೆಭವಿಷ್ಯದ ಚಿಂತನೆ ಮೂಡಲು ಮುನ್ನೆಚ್ಚರಿಕೆಸಂಘರ್ಷ ಬಿರಿಯದಂತೆ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

You cannot copy content of this page

Scroll to Top