ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಪ್ರಬಂಧ

ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ “ಮೆಲುಕು”

ಪ್ರಬಂಧ ಸಂಗಾತಿ ಶೈಲಜಾ ಪ್ರಸಾದ್‌ “ಮೆಲುಕು” ನನ್ನ ಪತಿಯು ಕೂಡು ಕುಟುಂಬದಲ್ಲಿ ಬೆಳೆದವರು. ನಾನು ಮದುವೆಯಾಗಿ ಅತ್ತೆ ಮನೆಗೆ ಹೋದಾಗ,ನನಗೆ ತಿಳಿದಿದ್ದು ಅವರು ಕೇವಲ ೨/೩ ವರ್ಷದ ಹಿಂದೆಯಷ್ಟೇ ಬೇರೆ ಮನೆಗೆ ಬಾಡಿಗೆಗೆ ಬಂದಿದ್ದು   ಎಂದು.ನನ್ನ ಅತ್ತೆಯವರೇ ಮನೆಗೆ ಹಿರಿಯ ಸೊಸೆ, ಹಾಗಾಗಿ ಜವಾಬ್ದಾರಿ ತುಸು ಜಾಸ್ತಿಯೇ ಅವರ ಮೇಲಿತ್ತು.ನಮ್ಮ ಮಾವನವರಿಗೆ ತಮ್ಮಂದಿರು ನಾಲ್ಕು ಮಂದಿ ಮತ್ತು ಒಬ್ಬ ಅಕ್ಕ,ಇಬ್ಬರು ತಂಗಿಯರು ಇದ್ದರು. ನಮ್ಮ ಮದುವೆಯ ವೇಳೆಗೆ ಮಾವನವರ ತಂದೆ ತೀರಿ ಹೋಗಿದ್ದರು. ಅವರ ತಾಯಿ ( ನನ್ನವರ ಅಜ್ಜಿ) ಅನಾರೋಗ್ಯದಿಂದ ಬಳಲುತ್ತಿದ್ದರು.ಇನ್ನೊಂದು ವಿಶೇಷವೆಂದರೆ ಆ ಸಮಯದಲ್ಲಿ ನನ್ನ ಅತ್ತೆಯವರ ತಾಯಿಯವರೂ ಸಹ ನಮ್ಮ ಮದುವೆಯ ಸಮಯದಲ್ಲಿ ಹಾಜರಿದ್ದು , ಇಬ್ಬರು ಬೀಗಿತ್ತಿಯರೂ ಜೊತೆ ಜೊತೆಯಲ್ಲಿ ಕುಳಿತು ಮದುವೆಯ ಕಾರ್ಯ ಕಲಾಪಗಳೆಲ್ಲವನ್ನೂ ವೀಕ್ಷಿಸಿದ್ದು.ನಮ್ಮ ಮದುವೆಯಾಗಿ ೪೪ ವರ್ಷಗಳಾಗಿದ್ದು, ಈಗಲೂ ನನ್ನವರು ಆಗಾಗ್ಗೆ ( ನಮ್ಮ ಮದುವೆ ವಾರ್ಷಿಕೋತ್ಸವದ ದಿನ/ಮೊಮ್ಮಕ್ಕಳು ಮನೆಗೆ ಬಂದಾಗ ನಮ್ಮ  ಮದುವೆ ಫೋಟೋಗಳನ್ನು ತೋರಿಸುತ್ತಾರೆ)ಆ  ಸಿಹಿ ನೆನಪುಗಳ ಪೋಟೋಗಳನ್ನು ನೋಡುತ್ತಿರುತ್ತಾರೆ. ಮನೆಗೆ ಹಬ್ಬ ಹರಿದಿನಗಳಲ್ಲಿ ಅವರ ಅಣ್ಣ,ತಮ್ಮಂದಿರು ಬಂದಾಗ ಅಂದಿನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿ.ಸುಮಾರು ೩೦-೩೫ ಜನರಿದ್ದ ಆ ದೊಡ್ಡ ಕುಟುಂಬವನ್ನು ಈಗಿನ ಪೀಳಿಗೆಯ ಮಕ್ಕಳು ಊಹಿಸಿಕೂಳ್ಳಲೂ ಸಹಾ ಕಷ್ಟ!! ಗಂಡ,ಹೆಂಡತಿ ಮಗುವೊಂದಿರುವ ಕುಟುಂಬ(ವಿಭಕ್ತ ಕುಟುಂಬ) ಪ್ರಚಲಿತವಾಗಿರುವ  ಕಾಲವಿದು.ಐದು ಜನ ಅಣ್ಣ,ತಮ್ಮಂದಿರು ಅವರವರ ಹೆಂಡತಿ, ಮಕ್ಕಳೊಡನೆ ಇದ್ದರೆ ,ಆ ಜೀವನ ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ!ಪ್ರತಿಯೊಂದು ದಂಪತಿಗೆ ಕನಿಷ್ಟ ೩/೪ ಮಕ್ಕಳು ಇರುವುದು ಅಂದಿನ ದಿನಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿತ್ತು.ಹಾಗೆ ನೋಡಿದರೆ ನಮ್ಮ ಅತ್ತೆಗೆ ಇಬ್ಬರೇ ಗಂಡು ಮಕ್ಕಳು ! ಅತ್ತೆಯವರಿಗೆ ಸುಮಾರು ೮-೧೦ ವರುಷಗಳು ಮಕ್ಕಳಾಗದೇ ನಂತರ ನನ್ನ ಪತಿ ಜನಿಸಿದ್ದು , ನಮ್ಮ ಅತ್ತೆ ಇದ್ದಾಗ ಹೇಳುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ನಂತರ ಎರಡೇ ವರುಷಕ್ಕೆ ನನ್ನ ಮೈದುನ ಹುಟ್ಟಿದ್ದು ಎಂದು ಹೇಳಿ ಅತ್ತೆ ನಗುತ್ತಿದ್ದರು.ನನ್ನ ಅತ್ತೆಯ ಓರಗಿತ್ತಿಯರು ನಾಲ್ಕು ಜನ,ಅವರಿಗೆ ತಲಾ ೨/೩ ಮಕ್ಕಳೆಂದರೂ ೨೫ ಜನರು ಜೊತೆಗೆ ಮಾವನವರ ತಂದೆ ಮತ್ತು ತಾಯಿ ಎಲ್ಲಾ ಸೇರಿ ೩೦  ಮಂದಿಯಾಗುತ್ತಿದ್ದರು.೫-೬ ಜನರು ಹೆಚ್ಚಿಗೆ ಏಕೆ ಹೇಳಿದೆನೆಂದರೆ ಬಂದು ಹೋಗುವ ನೆಂಟರಿಷ್ಟರು ಆಗಿನ ಕಾಲದಲ್ಲಿ ನಿತ್ಯವೂ ಇರುತ್ತಿದ್ದರು.(ಇಪ್ಪತ್ತನೆ ಶತಮಾನದ ೫೦-೭೦ ದಶಕಗಳಲ್ಲಿ ಬಹಳ ಸಾಮಾನ್ಯ ಸಂಗತಿಯಾಗಿತ್ತು.ಈ ಪದ್ದತಿ ಇನ್ನೂ ಕೆಲವು ದಶಕಗಳ ಕಾಲ ಮುಂದುವರಿದಿತ್ತೆಂದು ನೆನಪಿದೆ.)ನಾವು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರೂ, ನಮ್ಮ ಮನೆ ಬೆಂಗಳೂರಿನಲ್ಲಿ ಇದ್ದಾಗ ನಮ್ಮ ತಾಯ್ತಂದೆಯರ ಸಂಬಂಧಿಕರು ,ನೆಂಟರು ಮದುವೆ,ಮುಂಜಿಗಳಿಗೆ ಬಂದಾಗ ನಮ್ಮ ಮನೆಯಲ್ಲಿಯೇ ತಂಗುತ್ತಿದ್ದ ನೆನಪು ಈಗಲೂ ನನಗಿದೆ.ಆಗಿನ ಕಾಲದಲ್ಲಿ ಜನರು ಇದ್ದಿದ್ದೇ ಹಾಗೆ. ಕಾಯಿಲೆ-ಕಸಾಲೆಗಳಾದರೆ ತಮ್ಮ ಊರುಗಳಿಂದ ಬೆಂಗಳೂರು/ಹತ್ತಿರದ ಪಟ್ಟಣಗಳಿಗೆ  ವೈದ್ಯರ ತಪಾಸಣೆಗೆ ಬರುತ್ತಿದ್ದರು. ಒಬ್ಬರ ಕಷ್ಟ,ಸುಖಕ್ಕೆ ಇನ್ನೊಬ್ಬರು ಸ್ಪಂದಿಸಿ, ನೆರವಾಗುತ್ತಿದ್ದರು.ನಮ್ಮ ಬಾಡಿಗೆ ಮನೆ ಚಿಕ್ಕದಾಗಿದ್ದರೂ ,ಎಲ್ಲರ ಮನಸ್ಸು ದೊಡ್ಡದಾಗಿತ್ತು.ನಮ್ಮ ಅಜ್ಜಿಯು ನಮ್ಮೊಂದಿಗೆ ಇದ್ದುದರಿಂದ ,ಅವರನ್ನು ನೋಡಲು ನೆಂಟರಿಷ್ಟರು ಆಗಾಗ್ಗೆ ಬರುತ್ತಿದ್ದುದು ಸಾಮಾನ್ಯ ಹಾಗೂ ಸಹಜವಾಗಿತ್ತು.ಇನ್ನು ನನ್ನ ಪತಿಯ ಕೂಡುಕುಟುಂಬದ ಬಗ್ಗೆ , ಅವರ ಜೀವನಶೈಲಿಯ ಬಗ್ಗೆ ಹೇಳುತ್ತ ಹೋದರೆ ಅದೇ ಒಂದು ದೊಡ್ಡ ಪ್ರಹಸನವಾದೀತು! ಇರಲಿ …ತುಸು ಚಿಕ್ಕದಾಗಿ ಹೇಳುತ್ತೇನೆ.ಆ ಕೂಡುಕುಟುಂಬದಲ್ಲಿ ಎಷ್ಟೋ ರಸವತ್ತಾದ,ವಿನೋದಮಯವಾದ ಘಟನೆಗಳು ನಡೆದಿದ್ದವು. ಅವುಗಳಲ್ಲಿ ನಗೆಯುಕ್ಕಿಸುವಂತಹ ಕೆಲವು ಸನ್ನಿವೇಶಗಳು ಹೀಗಿವೆ.ಅವರೆಕಾಯಿಯ ಸೀಸನ್ನಿನ ರಸಮಯವಾದ ಚಿತ್ರಣವನ್ನು ನಿಮ್ಮ ಮುಂದಿಡುವೆ.ಆಗೆಲ್ಲಾ ಅವರೆಕಾಯಿಯ ಕಾಲದಲ್ಲಿ ಎಲ್ಲರಿಗೂ ಸಡಗರ, ಸಂಭ್ರಮವೋ ಸಂಭ್ರಮವು.ಹಬ್ಬದ ವಾತಾವರಣವೆಂದರೂ ತಪ್ಪಿಲ್ಲ.ಹಬ್ಬಗಳೆಲ್ಲಾ ಮುಗಿದ ನಂತರ ‘ಅವರೆಕಾಯಿ ಹಬ್ಬ” ಎಂದು ನಮ್ಮತ್ತೆ ನಗುತ್ತಿದ್ದುದು ನೆನಪಿಗೆ ಬರುತ್ತದೆ.ಆ ಸೀಸನ್ನಿನಲ್ಲಿ ಹೆಚ್ಚು ಕಡಿಮೆ ದಿನವೂ ಅವರೆಕಾಯಿಯನ್ನು ಬಳಸುತ್ತಿದ್ದರು. ಒಂದು ದಿನ ಅವರೆಕಾಳಿನ ಉಪ್ಪಿಟ್ಟು, ಇನ್ನೊಂದು ದಿನ ದೋಸೆ ಮತ್ತು ಹಿತಕವರೆ , ಈರುಳ್ಳಿ ರೊಟ್ಟಿ…ಇನ್ನೊಂದು ದಿನ ಅವರೆಕಾಳಿನ ಚಿತ್ರಾನ್ನ……ಹೀಗೆ ಪಟ್ಟಿ ಬೆಳೆಯುತ್ತ ಇರುತ್ತಿತ್ತು.ಇಲ್ಲಿ ಹಿತಕವರೆಯ ಬಗ್ಗೆ ಹೇಳದಿದ್ದರೆ ಈ ಪ್ರಸಂಗವೇ ಅಪೂರ್ಣವಾಗುತ್ತದೆ.ಹಿತಕವರೆಯನ್ನು ಮಾಡಬೇಕೆಂದರೆ ೨/೩ ದಿನಗಳ ಮುಂಚೆಯೇ ಪ್ಲಾನ್ ಮಾಡಬೇಕಿತ್ತು.ಹಿಂದಿನ ದಿನವೇ ಅವರೆಕಾಯಿಯನ್ನು ತಂದು ಕಾಳನ್ನು ಬಿಡಿಸಿಟ್ಟು ಕೊಳ್ಳಬೇಕಿತ್ತು. ನಂತರ ಅದನ್ನು ನೀರಿನಲ್ಲಿ ಅರ್ಧದಿನ ನೆನೆಸಿಡಬೇಕಾಗುತ್ತಿತ್ತು.ನಂತರ ಆ ಕಾಳುಗಳನ್ನು ಹಿಸುಕಿ, ಅದರ ಹೊಟ್ಟನ್ನು ತೆಗೆಯಬೇಕು. ಈ ಎಲ್ಲಾ ದೀರ್ಘ ಕಲಾಪದ ಬಳಿಕ ಇದಕ್ಕೆ ಮಸಾಲೆ ರುಬ್ಬುವ ಕಾರ್ಯಕ್ರಮ ಶುರುವಾಗಬೇಕಿತ್ತು.ಆ ಪ್ರೋಗ್ರಾಂ ಇನ್ನೂ ರಸವತ್ತಾಗಿ ಇರುತ್ತಿತ್ತು. ಮನೆಯ ಎಲ್ಲಾ ಸದಸ್ಯರು ಈ ಕೆಲಸಕ್ಕೆ ಕೈಗೂಡಿಸಬೇಕಾಗುತ್ತಿತ್ತು.ಹಿಂದಿನ ದಿನವೇ ಮನೆಯವರೆಲ್ಲಾ ಕಾಯಿಯನ್ನು ಬಿಡಿಸಿಟ್ಟು ಮಲಗುತ್ತಿದ್ದರು. ಮರುದಿನ ಮಕ್ಕಳ ಸಹಿತವಾಗಿ ಎಲ್ಲರೂ ಬೆಳಗ್ಗೆ ಬೇಗ ಎದ್ದು ನೆನೆಸಿದ ಕಾಳನ್ನು ಹಿಸುಕಲು ಕುಳಿತುಕೊಳ್ಳುತ್ತಿದ್ದರು. ಮಕ್ಕಳು ಪೈಪೋಟಿಗೆ ಬಿದ್ದವರಂತೆ ಎರಡೂ ಕೈಗಳಲ್ಲಿ ಕಾಳನ್ನು ಹಿಸುಕಿ ಸಿಪ್ಪೆಯನ್ನು ಬೇರ್ಪಡಿಸುತ್ತಿದ್ದರು.ಈಗ ಮಸಾಲೆ ರುಬ್ಬುವ ಕಾರ‍್ಯಕ್ರಮ ಶುರುವಾಗುತ್ತಿತ್ತು. ಮನೆಯ ಹೆಂಗಸರಿಗೆ ಕೈ ತುಂಬಾ ಕೆಲಸವೋ ಕೆಲಸ…..ಒಬ್ಬರು ಈರುಳ್ಳಿಯನ್ನು ಒಲೆಯ ಮೇಲಿಟ್ಟು ಸುಟ್ಟರೆ, ಇನ್ನೊಬ್ಬರು ತೆಂಗಿನಕಾಯಿಯನ್ನು ತುರಿಯುತ್ತಿದ್ದರು. ಇನ್ನಿಬ್ಬರು ಮಸಾಲೆ ರುಬ್ಬಲು ಕುಳಿತುಕೊಳ್ಳುತ್ತಿದ್ದರು. ಬಳಿಕ ಬೇಯಲು ಇಟ್ಟಿದ್ದ ಕಾಳಿಗೆ ಮಸಾಲೆಯನ್ನು ಸೇರಿಸುತ್ತಿದ್ದರು.ಹೀಗೆ ಸುದೀರ್ಘದ ತಯಾರಿಯ ನಂತರ ಹಿತಕವರೆ ಕೊನೆಗೆ ಅಂತೂ ಸಿದ್ದವಾಗುತ್ತಿತ್ತು.ಈಗ  ಇನ್ನೊಂದು ಪರ್ವ ಶುರುವಾಗುತ್ತಿತ್ತು. ಶೈಲಜಾ ಪ್ರಸಾದ್

ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ “ಮೆಲುಕು” Read Post »

ಇತರೆ

“ಶಿಕ್ಷಕ ದಿನಾಚರಣೆಯ ಶುಭಾಶಯಗಳು”ಕಾವ್ಯ ಸುಧೆ. (ರೇಖಾ ಶಂಕರ್ )

ಶಿಕ್ಷಕ ಸಂಗಾತಿ ಕಾವ್ಯ ಸುಧೆ. ( ರೇಖಾ ಶಂಕರ್ ) “ಶಿಕ್ಷಕ ದಿನಾಚರಣೆಯ ಶುಭಾಶಯಗಳು” ಶಿಕ್ಷಣ ಮತ್ತು ಜ್ಞಾನಕ್ಕೆ ಅತ್ಯುನ್ನತ ಗೌರವವನ್ನು ನೀಡಲಾಗುವ ಭಾರತ ದೇಶವಾಸಿಯಾಗಿರುವ  ನಮ್ಮ ಹೃದಯದಲ್ಲಿ ” ಶಿಕ್ಷಕರ ದಿನ’ವು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಅಸಂಖ್ಯಾತ ವಿದ್ಯಾರ್ಥಿಗಳ ಮನಸ್ಸು ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಆಳವಾದ ಪ್ರಭಾವ ಬೀರುವ ಶಿಕ್ಷಕರನ್ನು ಗೌರವಿಸಲು ಮೀಸಲಾದ ಈ ದಿನವನ್ನು, ಭಾರತವು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸುತ್ತದೆ. ಇದು ಕೇವಲ ಸಂಭ್ರಮಾಚರಣೆಯ ದಿನವಷ್ಟೇ ಅಲ್ಲ, ಬದಲಾಗಿ ಭಾರತದ ಅತ್ಯಂತ ಗೌರವಾನ್ವಿತ ವಿದ್ವಾಂಸರು, ಶಿಕ್ಷಣತಜ್ಞರು ಮತ್ತು ನಾಯಕರಲ್ಲೊಬ್ಬರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪರಂಪರೆಯೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಒಂದು ಮಹತ್ವದ ಸಂದರ್ಭವಾಗಿದೆ. ಶಿಕ್ಷಕರ ದಿನವು ಕೇವಲ ಮೆಚ್ಚುಗೆಯನ್ನು ವ್ಯಕ್ತಪಡಿಸುವ ದಿನವಲ್ಲ; ಬದಲಾಗಿ, ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸುವ ನಿರ್ಣಾಯಕ ಪಾತ್ರವನ್ನು ಅದು ನಮಗೆ ನೆನಪಿಸುತ್ತದೆ. ಶಿಕ್ಷಕರು ಸಮಾಜದ ಶಿಲ್ಪಿಗಳಾಗಿದ್ದು, ಯುವ ಮನಸ್ಸುಗಳನ್ನು ರೂಪಿಸುವ ಮತ್ತು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಕೇವಲ ಶೈಕ್ಷಣಿಕ ವಿಷಯಗಳನ್ನು ಬೋಧಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಹಾಗೂ ಅವರ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ, ಅವರನ್ನು ಪರಿಪೂರ್ಣ ವ್ಯಕ್ತಿಗಳಾಗಿ ಬೆಳೆಯಲು ಸಹಾಯ ಮಾಡುತ್ತಾರೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಶಿಕ್ಷಕರ ಪಾತ್ರ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಕ್ಷಿಪ್ರ ತಾಂತ್ರಿಕ ಪ್ರಗತಿ, ಜಾಗತೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯತೆಯಂತಹ 21ನೇ ಶತಮಾನದ ಸವಾಲುಗಳನ್ನು ಎದುರಿಸಲು, ಈ ಸಂಕೀರ್ಣ ಜಗತ್ತಿನಲ್ಲಿ ಮುನ್ನಡೆಯಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರುವ ಹೊಸ ತಲೆಮಾರಿನ ಚಿಂತಕರು ಹಾಗೂ ನಾಯಕರ ಅವಶ್ಯಕತೆಯಿದೆ. ವಿದ್ಯಾರ್ಥಿಗಳನ್ನು ಈ ಸವಾಲುಗಳನ್ನು ಎದುರಿಸಲು ಮತ್ತು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಸಿದ್ಧಪಡಿಸುವ ಮೂಲಕ, ಶಿಕ್ಷಕರು ಈ ಮಹತ್ವದ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ.ಶಿಕ್ಷಕರ ದಿನವು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿರುವ ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಮಗೆಲ್ಲರಿಗೂ ಸಿಗುವ ಒಂದು ಅವಕಾಶವಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ಒದಗಿಸಲು ಶಿಕ್ಷಕರು ಪಡುವ ಶ್ರಮ, ಅವರ ಬದ್ಧತೆ ಮತ್ತು ಅವರು ಮಾಡುವ ತ್ಯಾಗವನ್ನು ಗುರುತಿಸುವ ದಿನವಿದು. ಜೊತೆಗೆ, ಶಿಕ್ಷಣದ ಮಹತ್ವವನ್ನು ಅವಲೋಕಿಸಲು ಹಾಗೂ ಶಿಕ್ಷಕರ ಪ್ರಮುಖ ಪಾತ್ರಕ್ಕೆ ಬೆಂಬಲ ನೀಡುವ ಮತ್ತು ಅವರನ್ನು ಸಬಲೀಕರಣಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವೂ ಇದಾಗಿದೆ. ಕೊನೆಯದಾಗಿ, ಶಿಕ್ಷಕರ ದಿನಾಚರಣೆಯು ತಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರನ್ನು ಗೌರವಿಸುವ ದಿನವಾಗಿದೆ. ಬೋಧನೆಯು ಎಲ್ಲಾ ವೃತ್ತಿಗಳಲ್ಲೇ ಅತ್ಯಂತ ಶ್ರೇಷ್ಠವಾದುದು ಎಂದು ನಂಬಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಪರಂಪರೆಯನ್ನು ಸ್ಮರಿಸುವ ದಿನವಿದು. ಶಿಕ್ಷಕರ ದಿನವನ್ನು ಆಚರಿಸುವ ಈ ಸಂದರ್ಭದಲ್ಲಿ, ಶಿಕ್ಷಣದ ಮಹತ್ವ ಮತ್ತು ನಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರದ ಕುರಿತು ನಾವು ಒಮ್ಮೆ ಚಿಂತಿಸೋಣ. ನಮಗೆ ಸ್ಫೂರ್ತಿ ನೀಡಿದ, ನಮ್ಮನ್ನು ಸವಾಲುಗಳಿಗೆ ಒಡ್ಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸೋಣ. ಹಾಗೆಯೇ, ಮುಂದಿನ ಪೀಳಿಗೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಕಾರ್ಯವನ್ನು ಶಿಕ್ಷಕರು ಮುಂದುವರಿಸಲು ಅವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ಸಂಕಲ್ಪ ಮಾಡೋಣಅಲ್ಲವೇ…………. ಕಾವ್ಯ ಸುಧೆ. ( ರೇಖಾ ಶಂಕರ್ )

“ಶಿಕ್ಷಕ ದಿನಾಚರಣೆಯ ಶುಭಾಶಯಗಳು”ಕಾವ್ಯ ಸುಧೆ. (ರೇಖಾ ಶಂಕರ್ ) Read Post »

ಕಾವ್ಯಯಾನ, ಗಝಲ್

ರತ್ನರಾಯ ಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯ ಮಲ್ಲ ಅವರ ಗಜಲ್ ನನ್ನೆದೆಯಲಿ ಅರಳಿದ ಚಿತ್ರವ ವರ್ಣಿಸಲು ಪದಗಳು ಸೋಲುತಿವೆಭಾವದ ಕುಲುಮೆಯಲಿ ಗಜಲ್ ರಚಿಸಲು ಪದಗಳು ಸೋಲುತಿವೆ ದಿನವೂ ನಿನ್ನ ಕಾಣುತಿರುವೆ ಅವನಿಗೆ ಬೆಳಕಾಗಿರುವ ನೇಸರನಲಿಹೃದಯದಲಿ ನಿನ್ನ ಇರುವಿಕೆ ತೋರಿಸಲು ಪದಗಳು ಸೋಲುತಿವೆ ಪ್ರೇಮದ ಹಸಿವು ನೀಗಿಸಲು ನಿನ್ನ ಅಂತರಂಗದ ಕದ ತಟ್ಟುತಿರುವೆನಿನ್ನಧರಗಳ ಸವಿ ಪುಟದಲಿ ಜೋಡಿಸಲು ಪದಗಳು ಸೋಲುತಿವೆ ಪ್ರೀತಿಸುತಿಲ್ಲ ಅಕ್ಷರಗಳಲಿ ನಿನ್ನನು ಉಸಿರಾಡುತಿರುವೆ ಬೇಬಿಮಾನನ್ನಾರುಮೆಯ ಆಳದ ಅಳತೆ ತಿಳಿಸಲು ಪದಗಳು ಸೋಲುತಿವೆ ಮಲ್ಲಿಗೆ ಸುಮದಂತೆ ನೆನಪು ದೂರವಿದ್ದರೂ ಕನಸಲಿ ಅರಳುವುದುಅಂತರದಲಿ ಜಿನುಗುವ ಕಂಬನಿ ರಮಿಸಲು ಪದಗಳು ಸೋಲುತಿವೆ ರತ್ನರಾಯಮಲ್ಲ

ರತ್ನರಾಯ ಮಲ್ಲ ಅವರ ಗಜಲ್ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-35 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಕರ್ನಾಟಕ ಏಕೀಕರಣ ಭಾಗ-35*ಕರ್ನಾಟಕ ಏಕೀಕರಣ* ಡಾ. ಜಯದೇವಿತಾಯಿಯವರು ಭಾರತದ ಅಖಂಡತೆಯನ್ನು ಸದಾ ಒಪ್ಪಿಕೊಂಡವರು.ಭಾರತವು ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವ ವೈವಿಧ್ಯಮಯ ರಾಷ್ಟ್ರ. ಭಾಷೆಗಳು ಬೇರೆಬೇರೆಯಾಗಿದ್ದರೂ, ಅವೆಲ್ಲವೂ ಸೇರಿ ಭಾರತದ ಏಕತೆಯನ್ನು ರೂಪಿಸುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಹಾಗೇನೆ ಅವರು ಭಾಷಾವಾರು ಪ್ರಾಂತ ರಚನೆಯನ್ನೂ ಬೆಂಬಲಿಸಿದರು. ಭಾಷಾವಾರು ಪ್ರಾಂತ ಎಂದರೆ ದೇಶವನ್ನು ವಿಭಜಿಸುವುದು ಎಂಬ ಅರ್ಥ ಅವರದ್ದಾಗಿರಲಿಲ್ಲ. ಬದಲಾಗಿ, ಒಂದೇ ಭಾಷೆಯನ್ನು ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಬಂದರೆ, ಆ ಭಾಷೆಯ ಅಭಿವೃದ್ಧಿ, ಸಂರಕ್ಷಣೆ ಮತ್ತು ಬೆಳವಣಿಗೆಗೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆ ಕಾಲದಲ್ಲಿ ಕನ್ನಡ ಮಾತನಾಡುವ ಜನರು ವಿವಿಧ ಆಡಳಿತ ಪ್ರದೇಶಗಳಲ್ಲಿ ಚದುರಿಹೋಗಿದ್ದರು. ಇದರಿಂದ ಕನ್ನಡ ಭಾಷೆಯ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಆಡಳಿತದಲ್ಲಿ ಕನ್ನಡದ ಬಳಕೆಗೆ ಹಲವು ಅಡಚಣೆಗಳಿದ್ದವು. ಕನ್ನಡಿಗರ ಪ್ರದೇಶಗಳು ಒಂದಾದರೆ ಕನ್ನಡ ಶಾಲೆಗಳು ಬೆಳೆಯಲು, ಕನ್ನಡದಲ್ಲಿ ಶಿಕ್ಷಣ ದೊರೆಯಲು, ಕನ್ನಡ ಸಾಹಿತ್ಯ ಅಭಿವೃದ್ಧಿಯಾಗಲು ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ ಎಂದು ಅವರು ನಂಬಿದ್ದರು.ಭಾಷೆಯನ್ನು ಉಳಿಸುವ ಉದ್ದೇಶದಿಂದಜಯದೇವಿತಾಯಿಯವರ ಭಾಷಾವಾರು ಪ್ರಾಂತದ ಬೆಂಬಲಿಸಿದರು..ಅಂತೆಯೇ ಅದರ ಹಿಂದೆ ಭಾಷಾಭಿಮಾನವಿತ್ತು…… ಭಾಷೆಯು  ಒಂದು ಜನಾಂಗದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ಜೀವನಶೈಲಿ ಮತ್ತು ಭಾವನೆಗಳ ವಾಹಕ. ಆದ್ದರಿಂದ ಒಂದು ಭಾಷೆಯನ್ನು ಉಳಿಸುವುದು ಎಂದರೆ ಅದರೊಂದಿಗೆ ಬೆಸೆದುಕೊಂಡಿರುವ ಸಂಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಾಗಿದೆ.ಕನ್ನಡ ಭಾಷಿಕ ಪ್ರದೇಶಗಳು ಒಂದಾಗುವುದರಿಂದ ಕನ್ನಡಿಗರಲ್ಲಿ “ನಾವೆಲ್ಲರೂ ಒಂದೇ” ಎಂಬ ಭಾವನೆ ಬಲವಾಗುತ್ತದೆ. ಕನ್ನಡ ಶಾಲೆಗಳು, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಕನ್ನಡ ಭಾಷೆ ಮುಂದಿನ ಪೀಳಿಗೆಗೂ ಸುರಕ್ಷಿತವಾಗಿ ಸಾಗುತ್ತ ಬಂದಿತು ಜಯದೇವಿತಾಯಿಯವರ ವಿಚಾರದಲ್ಲಿ ಕರ್ನಾಟಕದ ಏಕೀಕರಣ ಮತ್ತು ಭಾರತದ ಅಖಂಡತೆ ಪರಸ್ಪರ ವಿರೋಧಿಗಳಲ್ಲ. ಕರ್ನಾಟಕ ಒಂದಾಗುವುದು ಭಾರತದೊಳಗೇ ಒಂದು ರಾಜ್ಯದ ಏಕೀಕರಣವೆಂದರೆ“ನಾಡು ಒಂದಾಗಲಿ, ಭಾಷೆ ಬೆಳೆಯಲಿ.. ಎಂಬ ಭಾವನೆ ಅವರ ಚಿಂತನೆಯಲ್ಲಿತ್ತು. ಅಖಂಡ ಕರ್ನಾಟಕ ಏಕೀಕರಣ ಆಗಷ್ಟೇ ಹುಟ್ಟಿಕೊಂಡಿದ್ದಾಗಿರಲಿಲ್ಲ …ಕೆಲವು ದಶಕಳ ನಿರಂತರ  ಹೋರಾಟ ನಡೆದೇಯಿತ್ತು…. ೧೯೧೬,ರಲ್ಲಿ ಮೌಂಟೇಗ್ಯೂ ಚೆಮ್ಸ್‌ಫರ್ಡ್ ಭಾರತಕ್ಕೆ ಬಂದ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಪ್ರಮುಖ ವಿದ್ಯಾಸಂಸ್ಥೆಯಾಗಿದ್ದ *ವಿದ್ಯಾವರ್ಧಕ ಸಂಘವು* ಅವರಿಗೆ ಒಂದು ಬಿನ್ನಹ ಪತ್ರವನ್ನು ಸಲ್ಲಿಸಿತು.ಆ ಬಿನ್ನಹ ಪತ್ರದಲ್ಲಿ ಕನ್ನಡಿಗರ ಪ್ರಮುಖ ಸಮಸ್ಯೆಯನ್ನು ವಿವರಿಸಲಾಗಿತ್ತು. ಆಗ ಕನ್ನಡ ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಕರ್ನಾಟಕದ ಕನ್ನಡ ಭಾಷಿಕ ಪ್ರದೇಶಗಳು ವಿವಿಧ ಪ್ರಾಂತಗಳು ಮತ್ತು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದವು. ಇದರಿಂದ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಕನ್ನಡಿಗರ ಅಭಿವೃದ್ಧಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸಬೇಕು ಮತ್ತು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ಸೇರಿಸಬೇಕು ಎಂದು  ವಿದ್ಯಾವರ್ಧಕ ಸಂಘವು ಮನವಿ ಮಾಡಿತು. ಇದುವೇ ಮುಂದೆ ಕರ್ನಾಟಕ ಏಕೀಕರಣದ ಬೇಡಿಕೆಗೆ ಪ್ರಮುಖ ಬಲ ನೀಡಿತು.ಈ ಸಂದರ್ಭದಲ್ಲಿ ಭಾಷಾವಾರು ಪ್ರಾಂತ ರಚನೆಯ ವಿಚಾರದ ಬಗ್ಗೆ ಚರ್ಚೆ ನಡೆಯಿತು. ೧೯೧೭ರಲಿ ಮಹಾತ್ಮ ಗಾಂಧೀಜಿಯವರಿಗೆ ಮನವಿ ಸಲ್ಲಿಸಲಾಗಿತ್ತು.ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿತು. ಇದರಿಂದ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ತರಬೇಕು ಎಂಬ ಆಶಯಕ್ಕೆ ಮತ್ತಷ್ಟು ಬಲ ದೊರೆಯಿತು. ನಂತರ ಕರ್ನಾಟಕ ಏಕೀಕರಣಕ್ಕಾಗಿ ನಡೆದ ವಿವಿಧ ಸಭೆ, ಸಮ್ಮೇಳನ ಮತ್ತು ಮನವಿಗಳ ಮೂಲಕ “ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಬೇಕು” ಎಂಬ ಬೇಡಿಕೆ ನಿರಂತರವಾಗಿ ಮುಂದುವರಿಯಿತು.ಈ ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ *ಕರ್ನಾಟಕ ಏಕೀಕರಣ ಪರಿಷತ್ತು* ಸ್ಥಾಪಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳ ಕನ್ನಡಿಗರನ್ನು ಒಂದುಗೂಡಿಸಿ, ಏಕೀಕರಣದ ಉದ್ದೇಶವನ್ನು ಜನರಲ್ಲಿ ಬಿತ್ತುವುದು ಮತ್ತು ಸರ್ಕಾರದ ಗಮನವನ್ನು ಸೆಳೆಯುವುದು ಈ ಪರಿಷತ್ತಿನ ಪ್ರಮುಖ ಉದ್ದೇಶವಾಗಿತ್ತು. ಕರ್ನಾಟಕ ಏಕೀಕರಣ ಪರಿಷತ್ತಿನ ಅಧಿವೇಶನಗಳು ಕೈಕೊಳ್ಳಲಾರಂಭಿಸಿದರು. ೧೯೨೪ ಡಿಸೆಂಬರ್ ೨೫ ರಂದು ಬೆಳಗಾವಿಯಲ್ಲಿ ಮೊದಲ ಅಧಿವೇಶನ ನಡೆಯಿತು.ಅಧಿವೇಶನದ ಅಧ್ಯಕ್ಷರು  ಸಿದ್ಧಪ್ಪ ಕಂಬಳಿ ಅವರು‌ವಹಿಸಿದ್ದರು….ಈ ಅಧಿವೇಶನದಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವ ಅಗತ್ಯದ ಬಗ್ಗೆ ಚರ್ಚಿಸಲಾಯಿತು. ಕನ್ನಡಿಗರಲ್ಲಿ ಏಕತೆಯ ಭಾವನೆ ಮೂಡಿಸುವುದು ಮತ್ತು ಏಕೀಕರಣದ ಹೋರಾಟವನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಯಿತು.೧೯೨೬ರಲಿ ಜರುಗಿದ ಎರಡನೇ ಅಧಿವೇಶನಕ್ಕೆ ಪಟ್ಟಾಭಿ ಸೀತಾರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಅಧಿವೇಶನದ ಮೂಲಕವೂ ಕನ್ನಡ ಪ್ರದೇಶಗಳ ಏಕೀಕರಣದ ಬೇಡಿಕೆಯನ್ನು ಮತ್ತಷ್ಟು ಬಲವಾಗಿ ಮುಂದಿಡಲಾಯಿತು. ಕರ್ನಾಟಕದ ವಿವಿಧ ಭಾಗಗಳ ನಾಯಕರು ಹಾಗೂ ಹೋರಾಟಗಾರರು ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾದರು. ೧೯೨೮ರ ಮೂರನೇ ಅಧಿವೇಶನವು ಧಾರವಾಡದಲ್ಲಿ ನಡೆಯಿತು.ಇದಕ್ಕೆ ಫ. ಗು. ಹಳಕಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಧಾರವಾಡವು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಕೇಂದ್ರವಾಗಿ ಬೆಳೆಯಲು ಈ ರೀತಿಯ ಸಭೆಗಳು ಸಹಾಯ ಮಾಡಿದವು.ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಅದರ ಶಾಖೆಗಳು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸ್ಥಾಪನೆಯಾದವು. ಇದರ ಮೂಲಕ ಏಕೀಕರಣದ ಸಂದೇಶವು ಗ್ರಾಮ, ಪಟ್ಟಣ ಮತ್ತು ವಿವಿಧ ಕನ್ನಡ ಪ್ರದೇಶಗಳಿಗೆ ತಲುಪಿತು. ಜನರಲ್ಲಿ “ನಾವೆಲ್ಲರೂ ಕನ್ನಡಿಗರು, ನಮ್ಮ ನಾಡು ಒಂದಾಗಬೇಕು” ಎಂಬ ಭಾವನೆ ಗಟ್ಟಿಯಾಯಿತು.ಈ ಚಳವಳಿಯ ಪ್ರಮುಖ ನಾಯಕರಲ್ಲಿ ಆಲೂರು ವೆಂಕಟರಾಯರು, ಕಡಪ ರಾಘವೇಂದ್ರರಾಯರು, ಮುದವೀಡು ಕೃಷ್ಣರಾಯರು, ನರಗುಂದಾರಾಯಣ ದೇಶಪಾಂಡೆ ಮುಂತಾದವರು ಪ್ರಮುಖರಾಗಿದ್ದರು. ಇವರು ಕನ್ನಡಿಗರನ್ನು ಸಂಘಟಿಸಿ, ಕರ್ನಾಟಕದ ಏಕೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದರು.  ವಿದ್ಯಾವರ್ಧಕ ಸಂಘದಂತಹ ಸಂಸ್ಥೆಗಳು, ಕಾಂಗ್ರೆಸ್‌ನ ಭಾಷಾವಾರು ಪ್ರಾಂತದ ಪರವಾದ ನಿಲುವು, ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಕನ್ನಡ ಮಾತೆಯ ಮಕ್ಕಳ ನಿರಂತರ ಪ್ರಯತ್ನಗಳು ಮುಂದೆ ಕರ್ನಾಟಕ ಏಕೀಕರಣಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದವು. ಸವಿತಾ ದೇಶಮುಖ

Read Post »

ಅನುವಾದ, ಕಾವ್ಯಯಾನ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ

ಅನುವಾದ ಸಂಗಾತಿ “ನಿನ್ನೆಯೊಳಗೆ” ತೆಲುಗು ಮೂಲ:ರಾಜಾಬಾಬು ಕಂಚರ್ಲಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ ಜೀವನವನ್ನು ದಾಟಿಕೊಂಡು ಹೊರಟಿದ್ದೇನೆಎಲ್ಲೋ, ಎಂದೋ…ನನ್ನ ಭವಿಷ್ಯವನ್ನೇಕಳೆದುಹೋಗುವಂತೆ ಬಿಟ್ಟು ಬಂದವನಂತೆ ಎದುರಾದವರುನಗುತ್ತಾ ಮಾತಾಡಿಸುವರುಕಾಲವು ಮಾತ್ರನನ್ನ ಕೈ ಹಿಡಿದುಮುಂದಕ್ಕೆ ಎಳೆದೊಯ್ಯುತ್ತಿದೆ ಆದರೂ…ನನ್ನೊಳಗಿನ ಒಂದು ಸಣ್ಣ ತುಣುಕುಇಂದಿಗೂ ಅಲ್ಲೇ ನಿಂತಿದೆನೀನು ಕೊನೆಯ ಸಲಕಂಡ ಆ ಹೊಸ್ತಿಲ ಬಳಿ ನೀನು…ಮೌನದೊಳಗೆ ಮುಳುಗಿಹೋದೆನಾನು ಮಾತ್ರನನಗಿಷ್ಟವಾದ ನಿನ್ನೆಯೊಳಗೆನಡೆಯುತ್ತಾ ಹೊರಟುಹೋದೆ ದಿನಗಳು ಕಳೆದವುಋತುಗಳು ಬದಲಾದವುಮನುಷ್ಯರು ಬದಲಾಗಿಬಿಟ್ಟರು ಆದರೆ… ನನ್ನೊಳಗೆಇನ್ನೂ ಒಂದು ಬಾಗಿಲು ಮಾತ್ರಇಂದಿಗೂ ತೆರೆದೇ ಇದೆನೀನು ಮರಳಿ ಬರಬಹುದೆಂಬ ನಿರೀಕ್ಷೆಯಿಂದಲ್ಲನಾನು ಕಳೆದುಕೊಂಡನನ್ನ ನಿನ್ನೆಯನ್ನುಎಂದಾದರೂ ಮತ್ತೆಪಡೆಯುವೆನೇನೋ ಎಂಬ ನಿರೀಕ್ಷೆಯಿಂದ!! ತೆಲುಗು ಮೂಲ : ರಾಜಾಬಾಬು ಕಂಚರ್ಲಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ವಿಶ್ವ ಮಾನವ ಕವಿ ಪಂಪ ಪಂಪ (ಕ್ರಿ.ಶ. (902-955 CE) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. ಕನ್ನಡ ಸಾಹಿತ್ಯ ಸಾರಸ್ವತ ಲೋಕದ ಮಹಾಮಾನವತಾವಾದಿ ಶ್ರೇಷ್ಠ ಜೀವ ಪರ ಕವಿ ಪಂಪ. ಕನ್ನಡ ಸಾಹಿತ್ಯ ಲೋಕದಲ್ಲಿ ಪಂಪನ ಯುಗವೆಂದೇ ಗುರುತಿಸಲ್ಪಟ್ಟ ಅಪರೂಪದ  ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಕವಿ ಶ್ರೀಮಂತ.  ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಇವೆರಡೂ, ಪಂಪನ ಎರಡು ಮೇರು ಕೃತಿಗಳು. ಹಿನ್ನೆಲೆ ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು. ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ. ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು. ಜೀವನ ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು,  “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ”  ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. ಪಂಪನು ಪುಲಿಗೆರೆಯ ‘ತಿರುಳ್ ಗನ್ನಡ’ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ. ಪಂಪನ ಇನ್ನೊಂದು ಕೃತಿ ‘ವಿಕ್ರಮಾರ್ಜುನ ವಿಜಯ’ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ. ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ. ಪಂಪನನ್ನು “ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ” ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ. ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. ‘ಹಿತಮಿತ ಮೃದುವಚನ’ ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ. ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು. ಕೃತಿಗಳು ಆದಿಪುರಾಣ ವಿಕ್ರಮಾರ್ಜುನ ವಿಜಯ  ಪಂಪ ಭಾರತ ಅರಿಕೇಸರಿಯ ಆಸ್ಥಾನ ಬನವಾಸಿ ವರ್ಣನೆಯ ಪದ್ಯ ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ- ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ| ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ- ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ (ಚಂಪಕಮಾಲೆ) ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ- ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-| ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್||   (ಉತ್ಪಲಮಾಲೆ) ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ- ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-| ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ- ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ||  (ಉತ್ಪಲಮಾಲೆ) ಗದ್ಯಭಾಗ – ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ.  ಪಂಪ ಭಾರತದಲ್ಲಿ ಕರ್ಣನಿಗೆ ನಾಯಕತ್ವವನ್ನು ಪಟ್ಟವನ್ನು ಕಟ್ಟುವ ಪಂಪ ಮಹಾಭಾರತದಲ್ಲಿ ನೆನೆದೊಡೆ ನೆನೆ ಕರ್ಣಂ ನೆನೆ ಎಂದಿದ್ದಾನೆ.  ಆಕರಗಳು “ಆರ್ಕೈವ್ ನಕಲು”. Archived from the original on 2022-10-09. Retrieved 2020-03-26. ಪಂಪ, ಮೈಸೂರು ವಿಶ್ವವಿದ್ಯಾಲಯ, ೧೯೫೭ ಈ-ಭೋಗದ-ಜಗತ್ತೇ-ಬೇರೆ-ಆದಿಪುರ/ ಪಂಪಭಾರತ : ಗದ್ಯಾನುವಾದ – ಚತುರ್ದಶಾಶ್ವಾಸಂ ಪದ್ಯ ೪೩-೫೨ ______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಇತರೆ

ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ”

ವಿಶೇಷ ಸಂಗಾತಿ ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ” {ಪಾಶ್ಚಾತ್ಯ ದೇಶಗಳಲ್ಲಿ ಒಂದು ದಂತ ಕಥೆ ಜನಪ್ರಿಯವಾಗಿದೆ.  ಮಕ್ಕಳ ಹಾಲು ಹಲ್ಲುಗಳು ಬಿದ್ದಾಗ ಆ ಹಲ್ಲನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ದಂತ ದೇವತೆ ಎಂಬ ಕಾಲ್ಪನಿಕ ಯಕ್ಷಿಣಿ (tooth fairy) ಬಂದು ಅದನ್ನು ತೆಗೆದುಕೊಂಡು ಅದರ ಜಾಗದಲ್ಲಿ ಹಣ ಇಟ್ಟು ಹೋಗುತ್ತಾಳೆ.  ಈ ಲೇಖನ ಆ ದಂತಕಥೆಯ ಮೇಲೆ ಆಧಾರಿತವಾಗಿದೆ.} ಮಗು ಹುಟ್ಟುವಾಗ ಅದರ ಬಾಯಲ್ಲಿ ಒಂದು ಹಲ್ಲೂ ಇರುವುದಿಲ್ಲ.  ಇದು ಮಾನವನಿಗೆ ಮಾತ್ರ ಅನ್ವಯಿಸುವ ಒಂದು ವೈಶಿಷ್ಟ್ಯ. ಮಿಕ್ಕ ಪ್ರಾಣಿಗಳಿಗೆಲ್ಲಾ ಅವು ಹುಟ್ಟುವಾಗಲೇ ಬಾಯಿನಲ್ಲಿ ಹಲ್ಲು ತಯಾರಿಮಾಡಿಕೊಂಡೇ ಬರುತ್ತವೆ.  ದೇವರು ಈ ರೀತಿ ತಾರತಮ್ಯವನ್ನು ಏಕೆ ಮಾಡಿದ್ದಾನೆ ಎಂದು ನೀವು ಕೇಳಬಹುದು.  ಅದಕ್ಕೆ ಅನೇಕ ಕಾರಣಗಳು ಇವೆ. ಅದಿರಲಿ, ಪುಟ್ಟ ಮಗುವಿನ ಬಾಯಲ್ಲಿ ಹಲ್ಲು ಕಾಣುವುದಕ್ಕೆ ಹೆಚ್ಚು ಕಡಿಮೆ ಒಂದು ವರ್ಷವೇ ಬೇಕಾಗುತ್ತದೆ.  ಹಿಂದಿನಕಾಲದಲ್ಲಿ ಮಗುವಿಗೆ ಹಲ್ಲು ಬರುವವರೆಗೆ ಅದಕ್ಕೆ ಸಿಕ್ಕುತ್ತಿದ್ದುದು ಬರಿಯ ತಾಯಿಯಹಾಲು ಅಥವಾ ಹಸುವಿನ ಹಾಲು; ದ್ರವ್ಯ ಪದಾರ್ಥಗಳು ಮಾತ್ರ. ಈಚೆಗೆ ಚಿಕ್ಕ ಮಗುವಿಗೆ ತಿನ್ನಿಸಬಹುದಾದ ಖಾದ್ಯ ಪದಾರ್ಥಗಳು ಮಾರಾಟಕ್ಕೆ ಬಂದಿವೆ.  ಮಗುವಿಗಾಗಿಯೇ ತಯಾರಿಸಿದ ಬಿಸ್ಕೆಟ್ಗಳು, ಹಣ್ಣು, ತರಕಾರಿಗಳನ್ನು ಅರೆದು ಸಣ್ಣ ಚಮಚದಲ್ಲಿ ಮಗುವಿಗೆ ತಿನ್ನಿಸುವ ತಿನಿಸುಗಳು, ಇವೆಲ್ಲ ರೂಢಿಗೆ ಬಂದಿವೆ.  ಅಲ್ಲದೇ ಮಗುವನ್ನು ಪುಷ್ಟಿಯಾಗಿ ಬೆಳೆಸಬೇಕೆಂಬ ಉದ್ದೇಶದಿಂದ ಪೋಷಕರು ಮನೆಯಲ್ಲಿಯೇ ಹಣ್ಣು ಮತ್ತು ತರಕಾರಿಗಳನ್ನು ಬೇಯಿಸಿ ಅರೆಯುವ ಮೆಶೀನ್ (ಬ್ಲೆಂಡರ್)ನಲ್ಲಿ ಹಾಕಿ ಮಗುವಿಗೆ ತಿನ್ನಿಸುವ ಅಭ್ಯಾಸ ಕೂಡ ಬಳಕೆಗೆ ಬಂದಿದೆ.  ಇದರಿಂದ ಮಗುವಿಗೆ ಹೆಚ್ಚು ಪುಷ್ಟಿಯಾದ ಆಹಾರ ದೊರೆತು ಅದರ ಬೆಳವಣಿಗೆಗೆ ಉತ್ತೇಜನವನ್ನು ಕೊಡುತ್ತದೆ.  ಅಲ್ಲದೇ ಬರಿಯ ಹಾಲನ್ನೇ ಕುಡಿಯುತ್ತಿದ್ದಾಗ ಮಗುವಿಗೆ ಊಟದಲ್ಲಿ ಅಭಿರುಚಿ ಬೆಳೆಯುತ್ತಿರಲಿಲ್ಲ.  ಊಟದ ಸಮಯ ಬಂದಾಗ ಮಗು ಉತ್ಸಾಹ ತೋರಿಸುತ್ತಿರಲಿಲ್ಲ.  ತಾಯಂದಿರಿಗೆ ಇದೊಂದು ತಲೆನೋವು.  ಮಗುವನ್ನು ರಮಿಸಿ, ಪುಸಲಾಯಿಸಿ, ಅಲ್ಲಿ ಇಲ್ಲಿ ಓಡಿಯಾಡಿಸುತ್ತಾ ಹಕ್ಕಿ, ಹೂವು, ಸೂರ್ಯ, ಚಂದ್ರರನ್ನು ತೋರಿಸುತ್ತಾ ಕಥೆ ಹೇಳಿ ಊಟವನ್ನು ಮಗುವಿನ ಹೊಟ್ಟೆಗೆ ಸೇರಿಸುವವೇಳೆಗೆ ತಾಯಿ ಕುಸ್ತಿಮಾಕುಸ್ತಿಮಾಡಿದವಳಂತೆ ಸುಸ್ತಾಗಿ ಬಿಡುತ್ತಾಳೆ.  ಊಟದ ಸಮಯ ಬೇಸರದ ಸಮಯವಾಗುತ್ತದೆ.  ಆದರೆ ಮಗುವಿಗೆ ಹಲ್ಲು ಬರುವ ಮೊದಲೇ ಅದು ಚೂರು ಉಪ್ಪು, ಹುಳಿ, ಸಕ್ಕರೆಗಳ ಸ್ವಾದವನ್ನು ಅನುಭವಿಸಿ ಚಪ್ಪರಿಸಿದ್ದರೆ ಅದಕ್ಕೆ ಊಟದಲ್ಲಿ ಖುಷಿ ಇರುತ್ತದೆ.  ಆಹಾರವನ್ನು ಕಂಡಕೂಡಲೆ ಕೈಹಾಕಿ ಬಾಯಿಗೆ ಹಾಕಿಕೊಳ್ಳುತ್ತದೆ.  ಹೀಗೆ ಆಹಾರದಲ್ಲಿ ಅಭಿರುಚಿಯನ್ನು ಪಡೆದ ಮಗು ಬೆಳೆಯುತ್ತಾ ಬೆಳೆಯುತ್ತಾ ತಿಂಡಿಪೋತನಾಗುತ್ತದೆ.  ಕೈಕಾಲು ಪುಷ್ಟವಾಗಿ ಬೆಳೆದು ಆರು ತಿಂಗಳ ಮಗು ಮಕ್ಕಳ ಕುರ್ಚಿಯಲ್ಲಿ ಭರ್ತಿಯಾಗಿ ಕುಳಿತು ಪುಟ್ಟ ಗಣೇಶನಂತೆ ಮುದ್ದಾಗಿ ಕಾಣಿಸುತ್ತದೆ. ಮುಖ್ಯವಾಗಿ ಮೊದಲ ಎರಡು ವರ್ಷದಲ್ಲಿ ಮಗು ಸಿಕ್ಕಿದ್ದನ್ನೆಲ್ಲ ರುಚಿನೋಡಿ ಆನಂದಿಸುತ್ತದೆ.  ಇದರ ಆನಂದಕ್ಕೆ ಉಂಟಾಗುವ ತಡೆ ಎಂದರೆ ಮಗುವಿಗೆ ಆರೋಗ್ಯ ಕೆಡಬಹುದೆಂಬ ಭಯದಿಂದ ಪೋಷಕರು ಸಾಕು ಎಂದಾಗ.  ಮಗುವಿಗೆ ಎರಡು ವರ್ಷವಾಗುತ್ತಾ ಬಂದಾಗ ಅದಕ್ಕೆ ಊಟದ ದಾಹ ಸ್ವಲ್ಪ ಕಡಿಮೆಯಾಗುತ್ತದೆ.  ಆಗಲೇಬೇಕು.  ಇಲ್ಲದಿದ್ದರೆ ಅದು ಅಡ್ಡಾದಿಡ್ಡಿಯಾಗಿ ಬೆಳೆದು ಒಂದು ದೈತ್ಯಾಕಾರದ ವ್ಯಕ್ತಿ ಆಗುವ ಸಂಭವವಿದೆ. ಕೆನಡದಲ್ಲಿ ನನ್ನ ಪಾಶ್ಚಾತ್ಯ ಸ್ನೇಹಿತ ದಂಪತಿಗಳು ಮೇರಿ ಮತ್ತು ಪಾಲ್ ಎಂಬುವವರಿದ್ದಾರೆ. ಅವರಿಗೆ ಐದು ವರ್ಷದ ಒಬ್ಬ ಮುದ್ದಾದ ಮಗ ಇದ್ದಾನೆ.  ಅವನನ್ನು Junior Paul ಅಥವಾ JP ಯೆಂದು ಕರೆಯುತ್ತಾರೆ.  JP ಬಹಳ ಬುದ್ಧಿವಂತನಾದ ಹುಡುಗ.  ಖುಷಿಗಾರ. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಾನೆ. ನನ್ನನ್ನು “ಮಿಸೆಸ್ ಮುರಟಿ” ಎಂದು ಸಂಬೋಧಿಸುತ್ತಾನೆ.  JPಗೆ ಐದು ವರ್ಷವಾದಾಗ kindergarten ಗೆ ಸೇರಿಸಿದರು.  JP ಖುಷಿಯಾಗಿ ಸ್ಕೂಲ್ ಗೆ ಹೋಗಿಬರುತ್ತಿದ್ದ.  ಮನೆಗೆ ಬಂದಕೂಡಲೇ ಅಮ್ಮನ ಪಕ್ಕದಲ್ಲಿ ಕುಳಿತು ತಡೆಬಡೆ ಇಲ್ಲದೆ ಮಾತನಾಡಿ ಶಾಲೆಯಲ್ಲಿ ನಡೆದಿದ್ದನ್ನೆಲ್ಲ ಅಮ್ಮನಿಗೆ ವರದಿ ಒಪ್ಪಿಸುತ್ತಿದ್ದ.  ಅವನು ಮನೆಗೆ ಬರುವವೇಳೆಗೆ ಸರಿಯಾಗಿ ಮೇರಿ ತನ್ನ ಮನೆಕೆಲಸಗಳನ್ನು ಮುಗಿಸಿ ಸ್ವಲ್ಪ ವಿರಾಮಕ್ಕಾಗಿ ಕುಳಿತುಕೊಳ್ಳುವ ಸಮಯ.  ಅವಳು ಕುಳಿತು ಮುಗುಳುನಗುತ್ತಾ ಎಲ್ಲವನ್ನೂ ಕೇಳಿಸಿಕೊಳ್ಳುವಳು. ಮಧ್ಯೆ ಮಧ್ಯೆ ಸ್ವಲ್ಪ ಕಣ್ಣನ್ನೂ ಮುಚ್ಚುವಳು.  JP ಒಂದೊಂದು ದಿನ ತಾಯಿಗೆ ಸುಸ್ತಾಗಿದೆ ಎಂದು ಯೋಚಿಸಿ, “ನೀನು ಕಣ್ಣು ಮುಚ್ಚಿ ಮಲಗು. ನಾನು ಮಾತನಾಡುವುದಿಲ್ಲ.” ಎಂದು ತನ್ನ ತುಟಿಗಳನ್ನು ಬಿಗಿಯಾಗಿ ಮುಚ್ಚಿ ತೋರಿಸುತ್ತಾನೆ.  ತಾನೇ ಅವಳ ಕಣ್ಣಿನ ರೆಪ್ಪೆಯಮೇಲೆ ತನ್ನ ಪುಟ್ಟ ಕೈಇಟ್ಟು ಅವಳ ಕಣ್ಣು ಮುಚ್ಚುತ್ತಾನೆ.  ಮೇರಿ ತನ್ನ ಕಣ್ಣನ್ನು ಮುಚ್ಚಿ ನಿದ್ದೆಮಾಡುವವಳಂತೆ ನಟಿಸುತ್ತಾಳೆ.  ತಕ್ಷಣವೇ ಪುಟ್ಟ JP ಕೊಟ್ಟ ಭಾಷೆಯನ್ನು ಮರೆತು ಹರಟೆ ಹೊಡೆಯಲು ಶುರುಮಾಡುತ್ತಾನೆ. ಸ್ಕೂಲ್ ನಲ್ಲಿ JPಗೆ ಒಬ್ಬ ಸ್ನೇಹಿತನಿದ್ದಾನೆ.  ಅವನ ಹೆಸರು ಜಾನ್ (John) ಎಂದು. ಜಾನ್ JP ಗಿಂತ ಆರು ತಿಂಗಳು ದೊಡ್ಡವನು.  JP ಗೆ ಜಾನ್ ಒಬ್ಬ ಹೀರೋ.  ಜಾನ್ಗೆ ಗೊತ್ತಿಲ್ಲದ ವಿಚಾರವೇ ಇಲ್ಲ ಎಂದು ಅವನ ಭಾವನೆ. ಜಾನ್ ಹೇಳಿದ್ದೇ ವೇದವಾಕ್ಯ.  ಪ್ರತಿದಿನವೂ ಸ್ಕೂಲ್ ನಿಂದ ಬಂದಮೇಲೆ ಜಾನ್ ಹೀಗೆ ಹೇಳಿದ ಜಾನ್ ಹಾಗೆ ಹೇಳಿದ ಎಂದು ಮೇರಿಗೆ ವರದಿ ಒಪ್ಪಿಸುತ್ತಾನೆ. ಒಂದು ದಿನ JP ಮನೆಗೆ ಬಂದಕೂಡಲೇ ಅಮ್ಮನ ಪಕ್ಕದಲ್ಲಿ ಕುಳಿತು ತುಂಬಾ ಉತ್ಸಾಹದಿಂದ ನನ್ನ ಸ್ನೇಹಿತ ಜಾನ್ಗೆ ಬಾಯಲ್ಲಿ ಒಂದು ಹಲ್ಲು ಅಲ್ಲಾಡುತ್ತಿದೆ.  ಜಾನ್ ತಾಯಿ ಅವನ ಬಾಯಲ್ಲಿರುವ ಎಲ್ಲ ಹಲ್ಲುಗಳೂ ಒಂದೊಂದಾಗಿ ಬಿದ್ದುಹೋಗುತ್ತವೆ ಎಂದು ಹೇಳಿದಳಂತೆ.  JP ಅಮ್ಮನ ಮುಖವನ್ನು ನೇರವಾಗಿ ನೋಡುತ್ತಾ “ಅದು ಸುಳ್ಳು ರೈಟ್?” ಎಂದು ತಲೆ ಅಲ್ಲಾಡಿಸುತ್ತಾ ಕೇಳಿದ.  ಮೇರಿ ಮಗನ ಮುಖವನ್ನು ದಿಟ್ಟಿಸಿ ನೋಡಿದಳು.  JPಯ ಮುಖ ಮತ್ತು ಕಣ್ಣುಗಳಲ್ಲಿ ಸ್ವಲ್ಪ ಭಯ ಕಾಣಿಸುತ್ತಿತ್ತು.  ಧ್ವನಿಯೂ ಅದನ್ನೇ ಸೂಚಿಸಿತು.  ಮೇರಿ ತಕ್ಷಣವೇ ಅವನನ್ನು ತಬ್ಬಿ ಮುತ್ಟುಕೊಟ್ಟು ದೊಡ್ಡದಾಗಿ ನಗುತ್ತಾ, “ಅದು ಹಾಗಲ್ಲ.  ಮಗು ಚಿಕ್ಕದಾಗಿದ್ದಾಗ ಅದು ಬರೀ ಮೃದುವಾಗಿರುವ ಪದಾರ್ಥಗಳನ್ನು ತಿನ್ನುತ್ತದೆ.  ಹಾಲನ್ನು ಕುಡಿಯುತ್ತದೆ.  ಆಗ ಅದಕ್ಕೆ ಬರೀ  ಮೆದುಪದಾರ್ಥಗಳನ್ನು ತಿನ್ನುವ ಹಲ್ಲು ಬಾಯಿನಲ್ಲಿರುತ್ತದೆ.  ಆ ಹಲ್ಲಿಗೆ ಮಿಲ್ಕ್ ಟೀತ್  (ಹಾಲು ಕುಡಿಯುವ ಹಲ್ಲು ) ಎಂದು ಹೆಸರು.   ಆದರೆ ನೀನು ಈಗ ದೊಡ್ಡವರು ತಿನ್ನುವ ಎಲ್ಲ ಆಹಾರವನ್ನೂ ತಿಂದು ಕಟ್ಟುಮಸ್ತಾಗಿ ಶಕ್ತಿಶಾಲಿಯಾಗಿ ಬೆಳೆಯಬೇಕು. ನೀನು ನಿನ್ನ ಡ್ಯಾಡಿಗಿಂತ ಎತ್ತರವಾಗಿ ಬೆಳೆಯಬೇಕು.  ಬಾಸ್ಕೆಟ್ ಬಾಲ್, ವಾಲಿಬಾಲ್ ಎಲ್ಲ ಆಡಬೇಕಲ್ಲವೇ?  ಅದರಿಂದಲೇ ಈ ಬೇಬಿ ಹಲ್ಲುಗಳು ಬಿದ್ದಕೂಡಲೇ ದಂತದೇವತೆಯು ನಿನಗಾಗಿಯೇ ಮಾಡಿರುವ ಮುತ್ತಿನಂತೆ ಅಂದವಾಗಿರುವ ಹಲ್ಲುಗಳನ್ನು ಕೊಡುತ್ತಾಳೆ. ಎಂದು ತುಂಬಾ ಪ್ರೀತಿಯಿಂದ ವಿವರಿಸಿದಳು.  ಕೂಡಲೇ JP ಕುಳಿತಲ್ಲಿಂದ ಎದ್ದು ನಿಂತು ಕುಪ್ಪಳಿಸಿ ಕೈಯನ್ನು ಆಕಾಶದೆಡೆಗೆ ಎತ್ತಿ ನಾನು ಇಷ್ಟು ಎತ್ತರ ಬೆಳೆಯುತ್ತೇನೆ, ಹೀಗೆ ಬಾಸ್ಕೆಟ್ ಬಾಲ್ ಆಡುತ್ತೇನೆ ಎಂದು ಕೈ ಬೀಸಿ ಎದೆ ತಟ್ಟಿಕೊಂಡ.  ಮೇರಿಗೆ  ಹಿಡಿಸಲಾರದಷ್ಟು ಸಂತೋಷವಾಯಿತು.  ಅವಳು ಮಗನನ್ನು ಎತ್ತಿ ಮುದ್ದಾಡಿದಳು. ಆಮೇಲೆ JP ಸ್ಕೂಲ್ನಿಂದ ಮನೆಗೆ ಬಂದಮೇಲೆ ಪ್ರತಿದಿನವೂ ಜಾನ್ ನ ಹಲ್ಲಿನ ಕಥೆಯೇ.  ಈ ದಿನ ಜಾನ್ ಹಲ್ಲಿನಲ್ಲಿ ಸ್ವಲ್ಪ ರಕ್ತ ಬಂತು.  ಇನ್ನೊಂದು ದಿನ ಜಾನ್ ಕೈ ಬೆರಳನ್ನು ಬಾಯಲ್ಲಿ ಹಾಕಿ ಹಲ್ಲನ್ನು ಬೀಳಿಸುವುದಕ್ಕೆ ಪ್ರಯತ್ನಿಸಿದ.  ಆದರೆ ಟೀಚರ್ “ಹಾಗೆ ಮಾಡಬಾರದು.  ಅದಾಗಿಯೇ ಬೀಳುವವರೆಗೆ ಕಾಯಬೇಕು” ಎಂದರು. ಹೀಗೆ ಎರಡುವಾರ ಕಳೆದಮೇಲೆ ಜಾನ್ ನ ಹಲ್ಲು ಬಿದ್ದಿತು.  ಅವನು ಅದನ್ನು ತನ್ನ ಕೈನಲ್ಲಿ ಹಿಡಿದುಕೊಂಡು ಟೀಚರ್ ಬಳಿಗೆ ಬಂದು ತೋರಿಸಿದ.  ಆಕೆ ಅದನ್ನು ಒಂದು ಪೇಪರ್ ಕವರಿನಲ್ಲಿ ಹಾಕಿ “ನೀನು ಇದನ್ನು ನಿನ್ನ ತಾಯಿಯ ಕೈನಲ್ಲಿ ಜೋಪಾನವಾಗಿ ಕೊಡು.  ಈ ಕವರನ್ನು ನಿನ್ನ ದಿಂಬಿನ ಕೆಳಗೆ ಇಟ್ಟು ಮಲಗಬೇಕು.  ನೀನು ನಿದ್ದೆ ಮಾಡುತ್ತಿರುವಾಗ ದಂತದೇವತೆ ಬಂದು ಅದನ್ನು ತೆಗೆದುಕೊಂಡು ಹೋಗುತ್ತಾಳೆ.  ನಿನ್ನ ತಲೆದಿಂಬಿನ ಕೆಳಗೆ ದುಡ್ಡು ಇಡುತ್ತಾಳೆ.  ನೀನು ನಿನ್ನ ಬೇಬೀ ಹಲ್ಲನ್ನು ಚೆನ್ನಾಗಿ ನೋಡಿಕೊಂಡು ಅವಳಿಗೆ ವಾಪಸ್ಸು ತಲಪಿಸಿದ್ದಕ್ಕೆ ಅವಳಿಗೆ ಸಂತೋಷವಾಗಿದೆ ಎಂದು ಅರ್ಥ” ಎಂದು ಹೇಳಿದಳು.  ಇದನ್ನೆಲ್ಲಾ ಕಣ್ಣಾರೆ ನೋಡಿದ JP ಗೆ ಆಶ್ಚರ್ಯಯವೋ ಆಶ್ಚರ್ಯ.  ದಂತದೇವಿ ದುಡ್ಡು ಕೊಡುತ್ತಾಳೆಯೇ?  ಹಾಗಾದರೆ ನನ್ನ ಹಲ್ಲೂ ಬೇಗ ಬಿದ್ದರೆ ನನಗೂ ದುಡ್ಡು ಸಿಗುತ್ತದೆ ಎಂದು ಖುಷಿಪಟ್ಟ.  ಸ್ಕೂಲ್ನಿಂದ ಮನೆಗೆ ಓಡಿಬಂದು “ನನ್ನ ಹಲ್ಲು ಬಿದ್ದಾಗ ನನಗೂ ದುಡ್ಡು ಸಿಗುತ್ತದೆಯೇ ಎಂದು ಮೇರಿಯ ಮುಖವನ್ನು ಕಾತರದಿಂದ ನೋಡಿದ.  ಅವಳು “ಖಂಡಿತ ದಂತದೇವಿ ಎಲ್ಲರಿಗೂ ದುಡ್ಡು ಕೊಡುತ್ತಾಳೆ.  ನೀನು ಅವಳು ಕೊಟ್ಟ ಹಲ್ಲನ್ನು ಅವಳಿಗೆ ಹಿಂತಿರುಗಿಸುತ್ತಿರುವುದು ಅವಳಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ.  ಅದಕ್ಕೇ ಎಲ್ಲ ಮಕ್ಕಳಿಗೂ ದುಡ್ಡು ಸಿಕ್ಕುತ್ತದೆ.” ಎಂದು ಪೂರ್ಣ ವಿಶ್ವಾಸದಿಂದ ಹೇಳಿದಳು.  ಈಗ  JP ಗೆ ಹಲ್ಲು ಬೀಳುವ ಭಯ ಹೊರಟುಹೋಯಿತು.  ಎಷ್ಟುಬೇಗ ಹಲ್ಲು ಬಿದ್ದರೆ ಅಷ್ಟು ಒಳ್ಳೆಯದು.  ನನಗೆ ದಂತದೇವಿಯಿಂದ ದುಡ್ಡು ಸಿಗುತ್ತದೆ ಮತ್ತು ಅವಳಿಗೆ ನನ್ನ ವಿಚಾರದಲ್ಲಿ  ಸಂತೋಷವಾಗುತ್ತದೆ ಎಂದು ನಿರೀಕ್ಷಿಸತೊಡಗಿದ. ಹೀಗೆ ಒಂದೆರಡು ವಾರ ಕಳೆದಮೇಲೆ JP ಒಂದು ದಿನ ಸ್ಕೂಲ್ನಿಂದ ವಾಪಸ್ಸು ಬರುವಾಗ ಬಿರುಗಾಳಿಯಂತೆ ಓಡಿಬಂದು ಅಮ್ಮನ ಮೇಲೆ ಬಿದ್ದು   ತಬ್ಬಿಕೊಂಡ.  ಅವನು ಬಿದ್ದ ರಭಸಕ್ಕೆ ಮೇರಿ ಹಿಂದಕ್ಕೆ ವಾಲಿದಳು.  ಕಾರಣ ಇಷ್ಟೇ. JPಯ ಹಲ್ಲು ಅಲ್ಲಾಡುತ್ತಿದೆ.  ಆದಿನ JP ಎಲ್ಲರಿಗೂ ತನ್ನ ಅಲ್ಲಾಡುತ್ತಿರುವ ಹಲ್ಲನ್ನು ಮತ್ತೆ ಮತ್ತೆ ಅಲ್ಲಾಡಿಸಿ ತೋರಿಸಿದ.  ಸಂಜೆಎಲ್ಲಾ ಹಲ್ಲಿನ ವಿಚಾರವೇ.  ಅದು ಬಿದ್ದುಹೋಗಿ ಹೊಸಹಲ್ಲು ಬರುವ ವಿಚಾರವಾಗಿ JP, ಮೇರಿ ಮತ್ತು ಪಾಲ್ ಯಥೇಚ್ಚವಾಗಿ ಚರ್ಚೆ ಮಾಡಿದರು.  ಮೇರಿ ಗೂಗಲ್ನಲ್ಲಿ ಸಂಶೋಧನೆ ಮಾಡಿ JP ಮತ್ತು ಪಾಲ್ ಮುಂದೆ ಮಾಹಿತಿಯನ್ನು  ಓದಿದಳು.  ಎಲ್ಲರಿಗೂ ಖುಷಿ ಆಯಿತು.  ಆಮೇಲೆ JP ದಿನವೂ ಹಲ್ಲನ್ನು ಮುಟ್ಟುವುದು, ಅಲ್ಲಾಡಿಸುವುದು ಶುರು ಮಾಡಿದ.  ಮೇರಿ ಸ್ವಲ್ಪ ಧ್ವನಿ ಎತ್ತರಿಸಿ “JP!! ನೀನು ಸದಾ ಹಲ್ಲನ್ನು ಮುಟ್ಟುತ್ತಿರುವುದು ಸರಿಯಲ್ಲ.  ಅದನ್ನು ನಿಲ್ಲಿಸು” ಎಂದು ಖಚಿತವಾದ ಧ್ವನಿಯಲ್ಲಿ ಹೇಳಿದಳು.  ಅದೂ ಸಫಲವಾಗದಿದ್ದಾಗ, “ನೀನು ಅಲ್ಲಾಡಿಸಿ ಹಲ್ಲನ್ನು ಬೀಳಿಸಿದರೆ ದಂತ ದೇವತೆಗೆ ಇಷ್ಟವಾಗುವುದಿಲ್ಲ.  ಆ ಹಲ್ಲು ಬಿದ್ದಾಗ ಅವಳು ನಿನಗೆ ದುಡ್ಡು ಕೊಡುವುದಿಲ್ಲ.” ಎಂದು ಬೆದರಿಸಿದಳು.  ಅಂತೂ ಇಂತೂ JPಯ ಹಲ್ಲು ಸಡಿಲವಾಗಿ ಒಂದೇ ಒಂದು ಎಳೆಯಲ್ಲಿ ಅವನ ಒಸಡಿಗೆ ಅಂಟಿಕೊಂಡಿತ್ತು.  JP ಸ್ಕೂಲ್ಗೆ ಹೋಗುವಾಗ “ಅಮ್ಮ ಈದಿನ ನನ್ನ ಹಲ್ಲು ಬೀಳುತ್ತದೆ.  ನೋಡು ಅದು ಒಂದು ಚೂರು ಮಾತ್ರ ಅಂಟಿಕೊಂಡಿದೆ ಎಂದು ಬಾಯಿಬಿಟ್ಟು ತನ್ನ ಹಲ್ಲನ್ನು ಮೇರಿಗೆ ತೋರಿಸಿದ.  ಅವಳು ಮುಗುಳು ನಕ್ಕು, “ಅದನ್ನ ಮುಟ್ಟಬೇಡ” ಎಂದು ಎಚ್ಚರಿಸಿದಳು. JPಯ ಸ್ಕೂಲ್ನಲ್ಲಿ ಬೆಳಿಗ್ಗೆ 10:30ಕ್ಕೆ ಆಟಕ್ಕೆ ಬಿಡುವು.  ಬೆಲ್ ಆದಕೂಡಲೇ ಎಲ್ಲ ಮಕ್ಕಳೂ ಹೊರಗೆ ಓಡಿಹೋಗಿ ಆಟದ ಮೈದಾನದಲ್ಲಿ ಜೂಟಾಟ, ಮೆಟ್ಟಲು ಹತ್ತುವುದು, ಜಾರೋಬಂಡೆ, sandbox (ಮರಳು ಪೆಟ್ಟಿಗೆ), ಇವುಗಳಲ್ಲಿ ಆಟವಾಡಿ ಮತ್ತೆ ಬೆಲ್ ಆದಕೂಡಲೇ ಒಳಕ್ಕೆ ಹೋಗಬೇಕು.  ಬೆಲ್ ಶಬ್ದ ಕೇಳಿದಕೂಡಲೇ ಎಲ್ಲ ಮಕ್ಕಳೂ ಹಿಂದಿನಬಾಗಿಲಿಗೆ ಹೋಗಿ ಅಲ್ಲಿ ಟೀಚರ್ ಅಟ್ಟೆಂಡನ್ಸ್ ತೆಗೆದುಕೊಂಡು ಮಕ್ಕಳನ್ನು ಒಳಕ್ಕೆ ಬಿಡುತ್ತಾಳೆ.  ಈದಿನ ಮಾತ್ರ JP ಬಾಗಿಲಿನ ಕಡೆ ಓಡಲಿಲ್ಲ.  ಟೀಚರ್ “ಯಾಕೆ JP ಬಂದಿಲ್ಲ” ಎಂದು ವಿಚಾರಿಸಿದಾಗ JPಯ ಸ್ನೇಹಿತ

ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಒಡವೆ ತೊಡುವ ಆಸೆಯಲಿ  ಕಿವಿ ಚುಚ್ಚಿಸಿಕೊಳ್ಳುತಿರುವೆನುಮರೆಯಾಗಲೆಂದು ಮಣ್ಣಿನಲಿ ಮುಖ ಮುಚ್ಚಿಸಿಕೊಳ್ಳುತಿರುವೆನು ಇರುವ ಗಾಯಗಳ ಲೆಕ್ಕ ಸಾಲದಾಯಿತು ಈ ಜೀವನಕೆನಯವಂಚಕರ  ನಾಲಿಗೆಯಲಿ ಬಾಳ ಕೊಚ್ಚಿಸಿಕೊಳ್ಳುತಿರುವೆನು ಪುಟ ತಿರುವಿದಷ್ಟು ಪೂರ್ಣ ವಿರಾಮವಿರದ ಸಾಲುಗಳಿವೆಬೇಡವಾಗಿರುವ ಬದುಕಿನಲಿ ವಿಧಿ ಮೆಚ್ಚಿಸಿಕೊಳ್ಳುತಿರುವೆನು ಬೆವರು ಬಸಿದರೆ ಸಾಲದೇನು ಈ  ಹಾಳು ಜನುಮಕೆರಕುತ ಸುರಿಸಿ  ಭಕುತಿಯಲಿ ದೈವ ನೆಚ್ಚಿಸಿಕೊಳ್ಳುತಿರುವೆನು ನಡೆದ ದಾರಿಯಲಿ ನರಳುತಿವೆ  ಜ್ಯೋತಿ  ಹೆಜ್ಜೆ ಗುರುತುಗಳುಸುಮ್ಮನಿರದೆ  ಗದ್ದಲದಲಿ ಹಾವು ಕಚ್ಚಿಸಿಕೊಳ್ಳುತಿರುವೆನುಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಮತ್ತೆ ಹಾರಿತು ಹಕ್ಕಿ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಮತ್ತೆ ಹಾರಿತು ಹಕ್ಕಿ” ಮುರಿದ ರೆಕ್ಕೆಗಳ ನೋವನುಮರೆತಂತೆ ಕಂಡ ಆ ಹಕ್ಕಿ,ಗಾಳಿಯ ಕ್ರೂರ ಕೈಗಳಲ್ಲಿ ಸಿಲುಕಿನೆಲಕ್ಕೊಮ್ಮೆ ಬಿದ್ದಿತ್ತು. ಆಕಾಶವೆಂದರೆ ಕನಸು,ಹಾರಾಟವೆಂದರೆ ಬದುಕು,ಎಂದು ತಿಳಿದ ಅದರ ಕಣ್ಣಲ್ಲಿಅಂದು ಕತ್ತಲೆ ತುಂಬಿತ್ತು. ಗೂಡಿನ ಮೂಲೆಗೊಮ್ಮೆ ಕುಳಿತುಗಾಯಗಳನ್ನೇ ಎಣಿಸುತ್ತ,“ಇನ್ನು ಹಾರಲಾರೆನೋ?” ಎಂಬಮೌನದ ಪ್ರಶ್ನೆಯೊಂದಿತ್ತು. ಬೆಳಗಿನ ಮೊದಲ ಕಿರಣಅದರ ರೆಕ್ಕೆಗೆ ಮುತ್ತಿಟ್ಟಾಗ,ಒಣಗಿದ್ದ ಕನಸಿನೊಳಗೊಂದುಹೊಸ ವಸಂತ ಮೂಡಿತು. ಗಾಳಿಯೇ ಮತ್ತೆ ಕರೆದಿತು“ಬಾ, ಹೆದರಬೇಡ!” ಎಂದಿತು,ಬಿದ್ದ ನೆಲವನ್ನೇ ಮೆಟ್ಟಿಲಾಗಿಸಿಆ ಹಕ್ಕಿ ಮೇಲೇರಿತು. ಒಮ್ಮೆ… ಎರಡು ಬಾರಿ…ರೆಕ್ಕೆಗಳು ನಡುಗಿದವು,ಆದರೂ ಸೋಲಿನ ನೆನಪುಗಳ ಮೇಲೆಧೈರ್ಯದ ಗೀತೆ ಬರೆದವು. ಈ ಬಾರಿ ಕೇವಲ ಆಕಾಶಕ್ಕಲ್ಲ,ತನ್ನೊಳಗಿನ ಭಯದಾಚೆಗೆ;ಈ ಬಾರಿ ಕೇವಲ ಬದುಕಿಗಲ್ಲ,ಬದುಕಿನ ಅರ್ಥದಾಚೆಗೆ. ಬಿರುಗಾಳಿಗಳು ಬಂದರೂಇನ್ನು ಅದು ನಿಲ್ಲುವುದಿಲ್ಲ,ಮುರಿದ ರೆಕ್ಕೆಗಳ ಇತಿಹಾಸವನ್ನೇಸೋಲಿನ ಕಥೆ ಎನ್ನುವುದಿಲ್ಲ. ಬೀಳುವುದು ಅಂತ್ಯವಲ್ಲ,ಕಣ್ಣೀರು ದೌರ್ಬಲ್ಯವಲ್ಲ;ಮತ್ತೆ ಎದ್ದು ಹಾರುವ ಕ್ಷಣವೇಜೀವನದ ನಿಜವಾದ ಜಯಗಾಥೆ! ಆಕಾಶ ವಿಶಾಲವಾಗಿತ್ತು,ದಿಕ್ಕುಗಳು ಕೈಬೀಸಿ ಕರೆದವು,ಬಂಧನಗಳೆಲ್ಲ ಕೆಳಗಿಳಿದಾಗಸ್ವಾತಂತ್ರ್ಯ ಹಾಡಾಗಿ ಮೊಳಗಿತು. ಮತ್ತೆ ಹಾರಿತು ಹಕ್ಕಿ…ಮುರಿದ ರೆಕ್ಕೆಗಳನ್ನೇ ಬಲವಾಗಿಸಿಕೊಂಡು,ಸತ್ತ ಕನಸುಗಳನ್ನೇ ಜೀವವಾಗಿಸಿಕೊಂಡು,ತನ್ನ ಸೋಲನ್ನೇ ಮೆಟ್ಟಿಲಾಗಿಸಿಕೊಂಡು— ಮತ್ತೆ ಹಾರಿತು ಹಕ್ಕಿ…ಈ ಬಾರಿಆಕಾಶವನ್ನೇ ತನ್ನದಾಗಿಸಿಕೊಂಡುಕೇವಲ ಹಕ್ಕಿಯಾಗಿ ಅಲ್ಲ,ಸೋಲಿನ ಸಮಾಧಿಯ ಮೇಲೆಗೆಲುವಿನ ಗೀತೆ ಹಾಡುವಸ್ವಾತಂತ್ರ್ಯದ ಪ್ರತೀಕವಾಗಿ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಮತ್ತೆ ಹಾರಿತು ಹಕ್ಕಿ” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-41 ಡಾ.ವಿಶ್ವನಾಥ್‌ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮಕ್ಕಳಿಗೆ ಜನುಮವಿತ್ತು ಮಾತೆ ಎನಿಸಿಕೊಂಡಳು ಸೀತೆ ಲಕ್ಷ್ಮಣನ ಶಿರವದು ಕಣ್ಣಿಂದ ಮರೆಯಾದ ಒಡನೆಯೇ ಬಾಯಾರಿಕೆಯಿಂದ ಕಂಗೆಟ್ಟು ಬಳಲಿದಳು ಸೀತೆ. ಭಯ ಶೋಕಗಳು ಅವಳನ್ನು ಆವರಿಸಿದವು. ಬುಡದಿಂದಲೇ ಕೊಲ್ಲಲ್ಪಟ್ಟ ಬಳ್ಳಿಯಂತೆ ಭೂಮಿಯ ಮೇಲೊರಗಿದಳು ಭೂಮಿಯ ಮಗಳು.ರಾಮಕರುಣೆಗೆ ಈಡಾಗದ ಅವಳ ಮೇಲೆ ಕಾರುಣ್ಯ ಕಣ್ಣೋಟ ಹರಿಸಿದ್ದು ಅಲ್ಲಿದ್ದ ಪಕ್ಷಿ ಪ್ರಾಣಿಗಳು. ಸೀತಾಮಾತೆಯ ಸೋತ ಪರಿಯನ್ನು ಕಂಡ ಮೃಗ- ಖಗಗಳು ಅವಳ ಬಳಿಬಂದವು. ತಮ್ಮ ತಮ್ಮ ವೈರತ್ವವನ್ನೇ ಮರೆತವು. ಆಹಾರ ಬೇಕೆನಿಸಲಿಲ್ಲ ಅವುಗಳಿಗೆ ಆ ಸಮಯಕ್ಕೆ. ಅಲ್ಲಿದ್ದ ಗಿಡ- ಮರ- ಬಳ್ಳಿ- ಕಲ್ಲುಗಳಲ್ಲಿಯೂ ಶೋಕಭಾವ ಮೂಡಿತು. ಒಳ್ಳೆಯ ಗುಣದವಳ ಅಳಿವನ್ನು, ಅಳುವನ್ನು ಸಹಿಸದಾಯಿತು ಅಲ್ಲಿಯ ಪರಿಸರ.ದುಂಬಿಗಳ ನಾದವದು ನಿಂತೇಹೋಯಿತು. ನವಿಲುಗಳ ಕುಣಿತದ ಉತ್ಸಾಹ ಇನ್ನಿಲ್ಲವಾಯಿತು. ಚಕ್ರವಾಕ ಪಕ್ಷಿಗಳಿಗೆ ಬೆರೆಯುವ ಮನಸ್ಸಿಲ್ಲ. ಹಂಸಗಳಿಗೆ ನಡೆಯುವುದರೆಡೆಗೆ ಗಮನವಿಲ್ಲ. ಮೌನವಾದವು ಗಿಳಿಗಳು. ಮೌನಿಗಳಾದವು ಕೋಗಿಲೆಗಳು. ಜಿಂಕೆ. ಆನೆ, ಸಿಂಹ ಇವೆಲ್ಲವೂ ಸೀತೆಯ ಶೋಕಕ್ಕೆ ಸ್ಪಂದಿಸಿದವು, ತಂತಮ್ಮ ರೀತಿಯಲ್ಲಿ.ಪರಿತಾಪದಲ್ಲಿದ್ದ ಸೀತೆಯ ಹೃದಯತಾಪವದು ಅಳಿದುಹೋಗುವಂತೆ ಚಾಮರವ ಬೀಸಿದವು ಚಮರೀ ಮೃಗಗಳು. ಸೀತೆಯ ಕಣ್ಣೀರು ಇನ್ನಿಲ್ಲವಾಗುವಂತೆ ನೀರ ಹನಿಗಳನ್ನು ಚಿಮುಕಿಸಿದವು ನೀರ ಹಕ್ಕಿಗಳು.ಗಂಗಾನದಿಯ ಅಲೆಯ ಮಧ್ಯೆ ಸಿಲುಕಿ ಹೊರಬರದಂತಾಗಿದ್ದರೂ, ಗಂಗೆಯೊಡಲಲ್ಲಿದ್ದ ಕಮಲ ಸುವಾಸನೆಯನ್ನು ಪೂರ್ಣ ಹೊತ್ತು ತರಲಾಗದಿದ್ದರೂ ಸೀತೆಗೆ ಸುಖವನ್ನು ನೀಡಲೇಬೇಕೆಂದು ಬಯಸಿದ ತಂಗಾಳಿಯದು ಗಂಗೆಯ ನೀರಿನ ತಂಪನ್ನು ಹೊಂದಿದ, ಗಂಗೆಯ ಪದುಮ ಗಂಧದಿAದ ಕೂಡಿದ ಗಂಗಾಳಿಯಾಗಿ ಬಂದು ತಲುಪಿತು ಸೀತಾಮಾತೆಯ ಮುಖವನ್ನು, ಮೃದು ಮಧುರ ಭಾವದಲ್ಲಿ ಸ್ಪರುಷಿಸಿ.ಚೇತರಿಸಿಕೊಂಡಳು ಸೀತೆ. ತನಗಿನ್ನು ದಾರಿಯೇನಿದೆ ಎಂದು ಅತ್ತಿತ್ತ ನೋಡಿದಳು. ಶಿಥಿಲವಾಗಿತ್ತು ಅವಳ ಅಂಗಾAಗಗಳು. ಶರೀರವೆಲ್ಲಾ ಧೂಳು ಹಿಡಿದಿತ್ತು. ಮುಡಿ ಬಿಚ್ಚಿಹೋಗಿತ್ತು. ಅದಾವುದೂ ಗಣನೆಗೆ ಬರಲಿಲ್ಲ ಅವಳಿಗೆ ಆ ಕ್ಷಣದಲ್ಲಿ. ಮಿಥಿಲೇಂದ್ರ ವಂಶದಲ್ಲಿ ಜನಿಸಿದ ತಾನು ದಶರಥನ ಸೊಸೆ ಎನಿಸಿಕೊಂಡಿದ್ದರೂ ಈ ಬಗೆಯಲ್ಲಿ ಕಾಡಿನಲ್ಲಿ ದಿಕ್ಕೆಟ್ಟು ಅಲೆಯುವಂತಾಯಿತಲ್ಲಾ! ಎಂದು ರೋಧಿಸಿದಳು, ಕಲ್ಲಿನ ಎದೆಯದು ಕರಗುವಂತೆ.ಈ ಕ್ಷಣವೇ ತೊರೆದುಬಿಡುತ್ತೇನೆ ಈ ಪ್ರಾಣವನ್ನು ಎಂಬ ಯೋಚನೆ ಬಂತು ಅವಳಲ್ಲಿ. ಮರುಕ್ಷಣವೇ, ಭ್ರೂಣಹತ್ಯಾದೋಷಕ್ಕೆ ಗುರಿಯಾಗುವ ಅಳುಕು ಅವಳನ್ನು ಕಾಡಿತು. ಹೀಗೆ ಬಗೆಬಗೆಯಲ್ಲಿ ಪ್ರಲಾಪಿಸುತ್ತಾ ಕಾಡಿನಲ್ಲಿ ಅಲೆದಾಡುತ್ತಿದ್ದಳು ಪೃಥ್ವಿತನುಜೆ.ಆ ಸಮಯದಲ್ಲಿಯೇ ಯಜ್ಞಕ್ಕೆ ಬೇಕಾದ ಸ್ತಂಭವನ್ನು ಅರಸುತ್ತಾ ಆ ವನಕ್ಕೆ ಬಂದವರು ರಾಮಧ್ಯಾನದಲ್ಲಿ ಚಿತ್ತವನ್ನು ಹುತ್ತಗಟ್ಟಿಸಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳು. ಸೀತೆಯ ರೋಧನವದು ಅವರ ಕರ್ಣವನ್ನು ಕೆಣಕಿತು. ಹೆಂಗಳೆಯ ಅಳು ಕೇಳಿ ತಲ್ಲಣಿಸಿದರು ಮುನಿವರ್ಯ. ಮೊರೆತದ ಸ್ವರವನ್ನನುಕರಿಸಿ ಚಲಿಸಿದ ಅವರಿಗೆ ಕಾಣಿಸಿದಳು ಸೀತೆ. ‘ಯಾರಿವಳು? ಏಕಿದ್ದಾಳೆ ಈ ಅರಣ್ಯದಲ್ಲಿ ಒಂಟಿಯಾಗಿ?’ ಎಂಬ ಕೌತುಕ ಮೂಡಿತು ಅವರಲ್ಲಿ.ಮಾತನಾಡಿಸಿದರು. ತಾನು ವಾಲ್ಮೀಕಿ ಎನ್ನುವುದನ್ನು ಹೇಳಿಕೊಂಡರು. ಶೋಕಭಾವವನ್ನು ಮೀರಿದ ಹರುಷ ಭಾವ ಮೂಡಿತು ಸೀತೆಯಲ್ಲಿ. ನಡೆದದ್ದೆಲ್ಲವನ್ನೂ ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಳು ಬುವಿಸುತೆ. ಒಳಗಣ್ಣು ತೆರೆದು ಸೀತೆಯ ಗರ್ಭಸ್ಥಳವನ್ನು ವೀಕ್ಷಿಸಿದ ಮುನಿಗಳಿಗೆ ಅವಳು ಅವಳಿ ಮಕ್ಕಳ ಮಾತೆಯಾಗುವಳೆನ್ನುವುದು ತಿಳಿದುಬಂತು. ಅದನ್ನೇ ಹೇಳಿದರು ಅವಳಲ್ಲಿ. ತನ್ನ ಆಶ್ರಮಕ್ಕೆ ಬರುವಂತೆ ಸೂಚಿಸಿದರು. ಗರ್ಭಿಣಿಯ ಬಯಕೆಗಳೆಲ್ಲವನ್ನೂ ಪೂರೈಸುವ ಹೊಣೆ ತನ್ನದೆಂದರು. ಅವರ ದೃಢವಾದ ನುಡಿಗಡಲು ಸೀತೆಯ ಶೋಕವನ್ನು ಮುಳುಗಿಸಿತು. ಧೈರ್ಯಸ್ಥೆಯಾದಳು ಸೀತೆ. ಅವರೊಡನೆ ನಡೆದಳು ಆಶ್ರಮದೆಡೆಗೆ, ಶ್ರಮವಿಲ್ಲದೆ.ಎಲೆಗಳಿಂದ ಮಾಡಲಾದ ಕುಟೀರ. ಋಷಿಪತ್ನಿಯರ ಉಪಚಾರ. ಋತುಗಳ ಭೇದವೆಣಿಸದೆಯೇ ಬೆಳೆಯುವ ಗಿಡ ಮರಗಳು. ವೈರತ್ವ ಭಾವವನ್ನು ಮರೆತು ಬೆರೆಯುವ ಖಗ- ಮೃಗಗಳು. ಸೊಗಸೆನಿಸಿತು ಸೀತೆಗೆ ಆಶ್ರಮದ ಅ-ಶ್ರಮ ಬದುಕು.ಮುನಿಸತಿಯರ ಸಹವಾಸದಲ್ಲಿಯೇ ಸೀತೆಯ ಬಸುರಿಗೆ ನವಮಾಸ ತುಂಬಿತು. ಗರ್ಭದಲ್ಲಿರುವ ಶಿಶುಗಳನ್ನು ಭೂಮಿಗೆ ಇಳಿತರುವ ಕ್ಷಣವನ್ನು ನಿರುಕಿಸುತ್ತಿದ್ದಳು ಸೀತೆ.ಒಂದಿರುಳು ಅವಳ ತವಕವದು ಸಾಕಾರವಾಯಿತು. ಅವಳಿ ಶಿಶುಗಳು ಬಂದರು ಭೂಮಿಗೆ, ಭೂಸುತೆಯ ಗರ್ಭದಿಂದೀಚೆಗೆ. ಆಶ್ರಮದ ಪ್ರೌಢ ಸ್ತಿçÃಯರು ಅವಳ ಆರೈಕೆ ಮಾಡಿದರು. ಮುನಿವಟುಗಳು ತವಕದಿಂದ ಸುದ್ದಿಯನ್ನು ತಲುಪಿಸಿದರು ವಾಲ್ಮೀಕಿ ಮಹರ್ಷಿಗಳಿಗೆ.ಸಾನಂದದಿAದ ಬಂದು ಕಂದAಗಳ ಮೊಗಗಳನ್ನು ಕಂಡ ಮುನಿಗಳು ದರ್ಭೆಯ ಚೂರಿನಿಂದ ನೀರನ್ನು ಪ್ರೋಕ್ಷಿಸಿ, ದರ್ಭೆಯ ಚೂರನ್ನೇ ಸೂಚಿಸುವ ಕುಶ ಲವ ಎಂಬ ಹೆಸರುಗಳನಿಟ್ಟರು ಅವಳಿ ಮಕ್ಕಳಿಗೆ.ಚೆಲುವು ಎರಡು ರೂಪವನ್ನು ಪಡೆಯಿತೋ! ಶುಭ್ರತೆ ಎರಡು ಕವಲಾಗಿ ಒಡೆಯಿತೋ! ಗೆಲುವು ಗೆಳೆತನವನ್ನು ಗಳಿಸಿತೋ! ಕೀರ್ತಿ ಅಮೃತ ಧಾರೆಯಲ್ಲಿ ಹರಡಿ ಎರಡಾಯ್ತೋ! ಎಂಬAತೆ ಆ ಎಳೆಯ ಶಿಶುಗಳು ತೋರಿದರು ಆಶ್ರಮವಾಸಿಗಳ ಕಣ್ಣಿಗೆ.ಬೆಳೆಯತೊಡಗಿದರು ಕುಶಲವ ಇಬ್ಬರೂ, ಋಷಿಮುನಿಗಳ ಪ್ರೀತಿಯೊಲವನ್ನು ಪಡೆಪಡೆದು. ಕಾಲಕಾಲಕ್ಕೆ ಆಗಬೇಕಾದ ಸಂಸ್ಕಾರಗಳನ್ನೆಲ್ಲವನ್ನೂ ಕೊಡಿಸಿದರು ವಾಲ್ಮೀಕಿ ಮುನಿ ಅವರಿಗೆ. ಹನ್ನೆರಡು ವರುಷಗಳಾದಾಗ ಉಪನಯನ ಶಾಸ್ತç ಮಾಡಿಸಿದರು. ಶಸ್ತಾçಭ್ಯಾಸ ಮತ್ತು ಶಾಸ್ತಾçಭ್ಯಾಸ ಎರಡೂ ನಡೆದವು ಏಕಕಾಲಕ್ಕೆ. ರಾಮನೇ ತಮ್ಮ ತಂದೆಯೆAದು ಅರಿಯದ ಆ ಮಕ್ಕಳು ರಾಮಾಯಣವನ್ನು ಅನುದಿನವೂ ಹಾಡುತ್ತಿದ್ದರು ಭಕ್ತಿಭಾವದಿಂದ. ಡಾ.ವಿಶ್ವನಾಥ್‌ ಎನ್ ನೇರಳೆಕಟ್ಟೆ

Read Post »

You cannot copy content of this page

Scroll to Top