ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ನ್ಯಾಯದ ಕೂಗು“


ಬಡಿಯೋಣ ನ್ಯಾಯದ ಕದ
ಮೌನದ ಗೋಡೆ ಕುಸಿಯುವ ತನಕ
ಮುಖವಾಡ ಧರಿಸಿದ ದ್ವಂದ್ವ ನೀತಿಗಳ
ನಿಜಮುಖ ಬೆಳಕಿಗೆ ಬರುವ ತನಕ,!
ಎಚ್ಚೆದ್ದು ಕೊಳ್ಳೋಣ….
ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿ
ಕಪಟದ ನೆರಳಲ್ಲಿ ಬೆಳೆದ
ಶಾಂತಿ ಕದಿಯುವ ನೆರಳನ್ನು ಓಡಿಸಿ,!
ಹೋರಾಡೋಣ….
ಸುಳ್ಳಿನ ಬೀಜ ಬಿತ್ತುವ ಕಣಿವೆಗಳಲ್ಲಿ
ದ್ವೇಷದ ಬೆಳೆ ಬೆಳೆಸುವ
ನೀಚ ಶಕ್ತಿಗಳ ವಿರುದ್ಧ ಸಟೆದು ನಿಂತು,!
ಧ್ವನಿಯಾಗೋಣ….
ನಿಶ್ಯಬ್ದದ ಕಣ್ಣೀರು ಕೇಳುವ ಧ್ವನಿ
ನ್ಯಾಯ ನೀತಿಯ ಹಾದಿಯಲಿ ನಡೆಯುವ
ಶೋಷಿತ ಜನರ ನಂಬಿಕೆಯ ಪರವಿದ್ದು,!
ಚಿಂತಿಸಿ ಬಾಳೋಣ…
ಸತ್ಯದ ದೀಪ ಹಚ್ಚಿ ಹೆಜ್ಜೆ ಹಾಕಿ
ಮೋಸದ ಜಾಲ ಹರಡುವ ಕೈಗಳನ್ನು
ಜ್ಞಾನದ ಬೆಳಕಿನಲ್ಲಿ ಕರಗಿಸಿ ಬಿಡಲು.!
ಹಮೀದ್ ಹಸನ್ ಮಾಡೂರು.



