ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅವಳ ಮಡಿಲಲಿ ಮಲಗಿ ನೋವುಗಳ ಮರೆಯುವ ಹಂಬಲ
ಅವಳ ಕಂಗಳಲಿ ನಕ್ಷತ್ರವಾಗಿ  ಹೊಳೆಯುವ ಹಂಬಲ

ಮನದಲಿ ಅಡಗಿವೆ  ಹೇಳಲಾಗದ ನೂರು ಮಾತುಗಳು
ಅವಳ ಭಾವನೆಗಳಿಗೆ ರಾಗವಾಗಿ ಬೆರೆಯುವ ಹಂಬಲ

ತಿಳಿ ಕೊಳಕೆ ಕಲ್ಲೆಸೆಯುವ ಜನಗಳೇ ಬಹಳ ಜಗದಲಿ
ಅವಳ ಎದೆ ಕಡಲ ಅಲೆಗಳ ತಳಮಳ ಅರಿಯುವ ಹಂಬಲ

 ಮದಿರೆ ತುಂಬಿದ  ಬಣ್ಣದ ಹೂಜಿಗಳು ಕರೆಯುತಿವೆ ಇಂದು
ಅವಳ  ಒಲವ ಕೈಯ ಅಮೃತ ತುತ್ತು ಪಡೆಯುವ ಹಂಬಲ

ಮುಖವಾಡ ಧಾರಿಗಳ ಮಧ್ಯೆ  ಬಾಳು ಸಾಗಿದೆ ನೋಡು
ಅವಳ ಬದುಕಲಿ ಶಾಂತ ಪ್ರಭೆಯಾಗಿ ಉಳಿಯುವ ಹಂಬಲ


About The Author

Leave a Reply

You cannot copy content of this page

Scroll to Top