ಕಾವ್ಯ ಸಂಗಾತಿ
ಪ್ರೊ.ರಾಜಕುಮಾರ ಬಿ ಟಿ.
“ಮಾನವೀಯತೆ ಹರಿಕಾರರು”


ಅವಿಭಕ್ತ ಕುಟುಂಬದಲಿ ಜನಿಸಿ
ಅಸ್ಪೃಶ್ಯತಾ ಅಂಧಕಾರವನು ಅಳಿಸಿ
ಜಾತೀಯತೆ ಹೊಡೆದೊಡಿಸಲು
ಜಾತ್ಯತೀತ ಭಾವ ಮೂಡಿಸಲು ಮೂಡಿಹರು ದಲಿತ ಸೂರ್ಯ’ರು -೧-
ಅಸ್ಪೃಶ್ಯತೆಯ ಕಹಿಯನು ಉಂಡು
ಅವಮಾನದಿ
ಕುಲುಮೆಯಲಿ ಬೆಂದು
ಬದುಕಿನ ಬವಣೆಗಳಲಿ ನೊಂದು
ಅಸಹಾಯಕತೆಯ ಕಣ್ಣಿರಲಿ ಮಿಂದು
ದೀನ-ದುರ್ಬಲರ ಧ್ವನಿಯಾಗಿಹರು -೨-
ಸಮಾನತೆಯ ಲೇಖನಿ ಹಿಡಿದು
ಸಮ ಸಮಾಜಕೆ ಸಂವಿಧಾನ’ವ ಬರೆದು
ಸರ್ವರಲೂ ಸಮಭಾವ ತಂದು
ಸಾಮಾಜಿಕ ನ್ಯಾಯವೆಂದು ಸಾರಿಹರು ಮಾನವತಾವಾದಿ
ಆಗಿಹರು -೩-
ಅಕ್ಷರಗಳನು ಆಯುಧವಾಗಿರಿಸಿ
ಅಂಧಶ್ರದ್ಧೆಗಳನು ಬೇಧಿಸಿ
ಲೇಖನಿಯ ಮಸಿ
ಕೋಟಿ-ಕೋಟಿ ಜನಗಳಿಗೆ ಬಿಸಿ
ಎಂದಬ್ಬರಿಸಿ ಘರ್ಜಿಸಿದ ಭೀಮ’ರಿವರು -೪-
ಅನಿಷ್ಟಗಳ ನಡುವಿಂದ ಸಿಡಿದು
ಅಜ್ಞಾನವ ದೈರ್ಯದಿ ತುಳಿದು ದೇಶ-ಕೋಶಗಳಿಗೆ ಮಿಡಿದು
ಜ್ಞಾನಕ್ಷೀರವನು ಕುಡಿದು
ಘರ್ಜಿಸಿಹರು ಮಹಾ ನಾಯಕರಿವರು
ಅಂಬೇಡ್ಕರರು -೫-

ಪ್ರೊ.ರಾಜಕುಮಾರ ಬಿ ಟಿ.




ಅಂಬೇಡ್ಕರ್ ನಮನ