ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನುಡಿಗೆ ಬೆರಗು ಮೂಡಿಸಿ ವಚನ ಬರೆದನು ನಮ್ಮ ಬಸವಣ್ಣ
ದಯವಿಲ್ಲದ ಧರ್ಮವೆ ಇಲ್ಲವೆಂದು ಸಾರಿದನು ನಮ್ಮ ಬಸವಣ್ಣ.ll

ಆಚಾರ ಸ್ವರ್ಗ ಅನಾಚಾರವೇ ನರಕವೆಂದ ನಮ್ಮ ಭಕ್ತಿ ಭಂಡಾರಿ,
ಜಾತಿ ಮತ ಸರಿಸಿ ಸಮಾನತೆ ಬಿತ್ತಿದವನು ನಮ್ಮ ಬಸವಣ್ಣ.ll

ಕಳಬೇಡ ಕೊಲ್ಲಬೇಡ ಹುಸಿ ನುಡಿಬೇಡವೆಂಬ ಮೌಲ್ಯ ಹೇಳಿಕೊಟ್ಟ
ಮಾತಿನಲ್ಲಿಯೇ ಮುತ್ತುರತ್ನ ಜೋಡಿಸಿ ಇಟ್ಟವನು ನಮ್ಮ ಬಸವಣ್ಣ ll

ಮೌಢ್ಯತೆಯ ದೊಡ್ಡ ಗೋಡೆ ದಾಟಿಸಿ ಹೊಸ ಬಾಗಿಲನು ತೆರೆದುಬಿಟ್ಟ,
ಎಲ್ಲರನು ಇವ ನಮ್ಮವನೆಂದು ಹೇಳಿದವನು ನಮ್ಮ ಬಸವಣ್ಣ ll

ತಾಯಿ ಅಕ್ಕಮ್ಮ ನೀಲಮ್ಮ ಶರಣೆಯರೆಲ್ಲರ ವಚನ ಗೌರವಿಸಿದ.
ಶ್ರಮದಲಿ ಶಿವ ಕೈಲಾಸ ತೋರಿದ ಶರಣನು ನಮ್ಮ ಬಸವಣ್ಣ l


About The Author

Leave a Reply

You cannot copy content of this page

Scroll to Top