ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಧರೆಯೊಳಗೆ
ಬಿಸಿಲಿನ ಅರ್ಭಟ
ಅತಿಯಾಗಿದೆ !

ಗಿಡಮರಕೂ
ನೀರಿನ ಅಭಾವವು
ಸೃಷ್ಟಿಯಾಗಿದೆ !

ಪ್ರಾಣಿ ಪಕ್ಷಿಯೂ
ಜೀವಜಲ ಅರಸಿ
ಕಾದು ನಿಂತಿವೆ!

ಶುಕ ಪಿಕವು
ಬಾಯಾರಿ ಮೇಘನಿಗೆ
ಮುಖ ಮಾಡಿವೆ !

ಭುವಿಯೊಡಲು
ಬಾಯ್ಬಿಟ್ಟು ಹನಿಗಾಗಿ
ಬಾಯಿ ತೆರ್ತಿದೆ !

ಬಿಸಿಯುಸಿರು
ಭಾರವಾಗಿ ಮೇಲೋಗಿ
ತಣ್ಣಗಾಗಿದೆ !

ನರರೆದೆಯು
ಒಣಗಿ ಹನಿನೀರು
ಹುಡುಕುತಿದೆ

———————

About The Author

2 thoughts on “ಕಾಡಜ್ಜಿ‌ ಮಂಜುನಾಥ ಕವಿತೆ-ಧರೆ ಉರಿಯುತಿದೆ…!!”

Leave a Reply

You cannot copy content of this page

Scroll to Top