ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕೆಟ್ಟವಳು

ಪ್ರೊ ರಾಜನಂದಾ ಘಾರ್ಗಿ

ಅರಳುತ್ತಿರುವ ಮೊಗ್ಗನ್ನು
ಹಿಸುಕಿ ಹೂವಾಗಿಸಿ
ಮೂಸಿ ನೊಡುವವರಿದ್ದಾಗ
ಕೆಟ್ಟವರಾರು !

ಒತ್ತಾಯದ ಮಡಿಲನ್ನು ಹೊತ್ತರೂ
ಮಾನವತೆಯ ಮಿಡಿದು ಬೆಳೆಸಿದವಳಿಗೆ
ಕಿಚ್ಚನ್ನು ಇಡುವವರಿದ್ದಾಗ
ಕೆಟ್ಟವರಾರು !

ಒಬ್ಬ ಮುಟ್ಟಿದನೆಂದು ಕಲ್ಲಾಗಿಸಿ
ಇನ್ನೊಬ್ಬ ಮುಟ್ಟಿದನೆಂದು
ಹೆಣ್ಣಾಗಿಸುವ ಪರಂಪರೆಯಲ್ಲಿ
ಕೆಟ್ಟವರಾರು !

ಕಟ್ಟಳೆಗಳ ಅಡಿಯಲ್ಲಿ ಉಸಿರುಗಟ್ಟಿ ಸಾಯದೇ
ತಲೆ ಎತ್ತಿದವರ ಮೆಟ್ಟುವ
ಸಮಾಜದ ಗುತ್ತಿಗೆದಾರರಿರುವಾಗ
ಕೆಟ್ಟವರಾರು !

ಅರಳುತ್ತಿರುವ ಮೊಗ್ಗನ್ನು
ಹಿಸುಕಿ ಹೂವಾಗಿಸಿ
ಮೂಸಿ ನೊಡುವವರಿದ್ದಾಗ
ಕೆಟ್ಟವರಾರು !

ಒತ್ತಾಯದ ಮಡಿಲನ್ನು ಹೊತ್ತರೂ
ಮಾನವತೆಯ ಮಿಡಿದು ಬೆಳೆಸಿದವಳಿಗೆ
ಕಿಚ್ಚನ್ನು ಇಡುವವರಿದ್ದಾಗ
ಕೆಟ್ಟವರಾರು !

ಒಬ್ಬ ಮುಟ್ಟಿದನೆಂದು ಕಲ್ಲಾಗಿಸಿ
ಇನ್ನೊಬ್ಬ ಮುಟ್ಟಿದನೆಂದು
ಹೆಣ್ಣಾಗಿಸುವ ಪರಂಪರೆಯಲ್ಲಿ
ಕೆಟ್ಟವರಾರು !

ಕಟ್ಟಳೆಗಳ ಅಡಿಯಲ್ಲಿ ಉಸಿರುಗಟ್ಟಿ ಸಾಯದೇ
ತಲೆ ಎತ್ತಿದವರ ಮೆಟ್ಟುವ
ಸಮಾಜದ ಗುತ್ತಿಗೆದಾರರಿರುವಾಗ
ಕೆಟ್ಟವರಾರು !


About The Author

1 thought on “”

Leave a Reply

You cannot copy content of this page

Scroll to Top