ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೇತು ಬಿದ್ದ ಹಾರ

ಬಿ.ಶ್ರೀನಿವಾಸ

Cardamom Garland Marriage » Elakai

ಬೆಳೆದ ಸೀಮೆಯಿಂದ ಅಸೀಮ ಊರುಗಳವರೆಗೂ ಸುಗಂಧ ಪರಿಮಳ

ಗುಹೆಯ ಕತ್ತಲ ನೀರಬಾವಿ ನಿಶ್ಯಬ್ದ ಶಬ್ದಗಳ ಹೆಕ್ಕಿ
ಒಂದರ ಹಿಂದೊಂದು ಪೋಣಿಸಿ ನೆನಪುಗಳ
ತಯಾರಿಸುತ್ತಾಳೆ ಮುದುಕಿ

ಕೈಯ್ಯ ಸುಕ್ಕುಗಳೊಂದೂ ಸೋಕದೆ ಅರಳುತ್ತದೆ
ಬಣ್ಣ ಬಣ್ಣದ ಗೊಂಡೇವು ಕಟ್ಟುವನು ಮಗ
ಘಮಘಮಿಸುವ ಅತ್ತರನು ತುಸು ಹೆಚ್ಚೇ ಹೊಡೆಯುತ್ತಾನೆ
ತೊಡುವವನ ಸಂಭ್ರಮದಲಿ

ಮದುವೆ ಮುಗಿದ ಹಂದರದ ಮೌನ
ಹೊಸ ಆರ್ಡರು ಬರುವ ತನಕ

ಮಂತ್ರಿ ಮಹೋದಯರ ಮನೆಗಳಲ್ಲಿ
ನೇತು ಬಿದ್ದಿದೆ ಹಾರ

ಬೆಚ್ಚುವನು
ಆರ್ಡರು ಕೊಳ್ಳಲು ಹೋದ ಮಗ

ಥೇಟ್!
ತನ್ನವ್ವನ ಕೈಗಳೇ ನೇತು ಬಿದ್ದುದು ನೆನೆದು!


ಹಾವೇರಿಯ ಯಾಲಕ್ಕಿ ಹಾರವನ್ನು ತಯಾರಿಸುವ ಮುಸಲ್ಮಾನರ ಮುದುಕಿ,ಯಾಲಕ್ಕಿಯನ್ನು ತನ್ನ ಹಳೆ ಮನೆಯ ಬಾವಿಯ ನೀರಲ್ಲಿ ನೆನೆಸಿ,ನಂತರ ಪೋಣಿಸುತ್ತಾಳೆ.ಮಗ ಇಮಾಮ್ ಸಾಬು ಅಲಂಕಾರಿಕವಾಗಿ ಗೊಂಡೆ,ಮಿಂಚಿನ ದಾರ ಕಟ್ಟುವನು.ಈ ಭಾಗದಲ್ಲಿ ಯಾಲಕ್ಕಿ ಬೆಳೆಯದಿದ್ದರೂ “ಯಾಲಕ್ಕಿ ಕಂಪಿನ ನಗರಕ್ಕೆ ಸ್ವಾಗತ”ಬೋರ್ಡನ್ನು ನಗರದ ಕಮಾನಿಗೆ ತೂಗುಬಿಡಲಾಗಿದೆ.


About The Author

6 thoughts on “ನೇತು ಬಿದ್ದ ಹಾರ”

Leave a Reply

You cannot copy content of this page

Scroll to Top