ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಅರುಣಾ ನರೇಂದ್ರ

ಮರಳಿ ಬಾರದ ಊರಿಗೆ ಅವ್ವ ಕೈಬೀಸಿ ಹೊರಟೆ
ಹೊರಳಿ ನೋಡದೆ ಇನಿತು ನೀ ದೌಡಾಯಿಸಿ ಹೊರಟೆ

ನಿನ್ನ ಕಣ್ಣ ಬೆಳಕಿರದೆ ಮನೆಯಲ್ಲಾ ಕತ್ತಲಾವರಿಸಿದೆ
ನಿನಗಾಗಿ ಅಳುವ ಕಂದಮ್ಮಗಳ ಮುಖ ಮರೆಸಿ ಹೊರಟೆ

ಪಕ್ಕೆಯಲ್ಲಿಟ್ಟುಕೊಂಡು ಸೆರಗ ಮುಚ್ಚಿ ಪೊರೆದವಳು
ಗಟ್ಟಿಯಾಗಿ ಹಿಡಿದ ಕೈ ಏಕಾಏಕಿ ಕೊಸರಿಸಿ ಹೊರಟೆ

ಪ್ರೀತಿಯ ಜೇನುಗೂಡಿಗೆ ವಿಧಿ ಕಲ್ಲೆಸೆದು ನಕ್ಕಿದೆ
ಬಾಳಿನರ್ಥವ ತಿಳಿದು ಬದುಕಿ ತೋರಿಸಿ ಹೊರಟೆ

ನಿತ್ಯವೂ ಇಲ್ಲಿ ಹಬ್ಬದ ಸಡಗರ ನೀ ಓಡಾಡುತ್ತಿದ್ದಾಗ
ತೊಲೆ ಕಂಬ ಹೊಸ್ತಿಲಿಗೂ ಸೂತಕ ತಂದಿರಿಸಿ ಹೊರಟೆ

ದೇವರನೂ ಪ್ರಶ್ನಿಸುವ ಛಾತಿಯವಳು ನೀನು
ಕರೆ ಬಂತೆಂದು ಕೈ ಮುಗಿದು ಅವಸರಿಸಿ ಹೊರಟೆ

ನೀನಿಟ್ಟ ನತ್ತು ಬುಗುಡಿಯ ಮುತ್ತು ಸೂರಾಡಿವೆ ಇಲ್ಲಿ
ಉಡಿಕಟ್ಟಿಕೊಂಡಿದ್ದ ಪ್ರೀತಿ ಎಲ್ಲರಿಗೂ ಉಣಿಸಿ ಹೊರಟೆ

ಊರಿಗೆ ಊರೇ ನೆರೆದಿತ್ತು ನಿನ್ನ ಮುಖ ನೋಡಲು
ಮುತ್ತೈದೆಯಾಗಿ ಮಲ್ಲಿಗೆ ಹೂವ ಮುಡಿಗೇರಿಸಿ ಹೊರಟೆ

ಬಚ್ಚಲಕ ನೀರಿಟ್ಟು ಮಾಸಿದ ಮುಡಿಗೆ ನೀರೆರೆಯುವರು ಯಾರೇ
ನೀನಿಲ್ಲದೆ ಅರುಣಾಗೆ ಇನ್ಯಾತರ ತವರು ಎರವಾಗಿಸಿ ಹೊರಟೆ


About The Author

12 thoughts on “ಗಜಲ್”

    1. Totappa Magalad

      ಆರದ ದೀಪ ಆರಿದಾಗ ಮನೆ-ಮನದಲ್ಲಿ ಆವರಿಸುವ ಕರಾಳ ಕತ್ತಲೆಯ ಭಾವವನ್ನು ಅತ್ಯಂತ ಶಕ್ತಿಶಾಲಿಯಾಗಿ ಹಿಡಿದಿಟ್ಟುಕೊಂಡ ಗಝಲ್.ಅವ್ವನ ನೆನಪಾಗಿ ಕಣ್ಣು ತೇವಗೊಂಡವು.to

      1. ಗಜಲ್ ಓದಿ ಪ್ರತಿಕ್ರಿಯಿಸಿದ ತಮ್ಮ ಸಹೃದಯತೆ ಗೆ ಧನ್ಯವಾದಗಳು ಸರ್

  1. ಹಸಿದು ಬಂದವರಿಗೆ ಅನ್ನ ನೀಡಿದ ತಾಯಿ ದಿ:ಶ್ರೀಮತಿ ಹುಲಿಗೆಮ್ಮ ತಿಪ್ಪವ್ವನವರ ಸ್ಮರಣಾರ್ಥ ನುಡಿನಮನಕ್ಕೆ ತನ್ನ ಸ್ವಂತ ಅನುಭವದ ನುಡಿಗಳನ್ನ ಗಜಲ್ ರೂಪದಲ್ಲಿ ಹಂಚಿಕೊಂಡ ಅರುಣಾ ನರೇಂದ್ರ ಅಕ್ಕನಿಗೆ ಧನ್ಯವಾದಗಳು.

  2. ಮಧುಮತಿ

    ಎಂಥ ಭಾವನಾತ್ಮಕ ಗಜಲ್ ಇದು …ಹೆತ್ತವಳ ಕೊನೆಯುಸಿರ ಕಂಡು ಮಿಡಿದ ಕಂಬನಿ ಇದು….✍️

  3. ತಾಯಿಯ ಮರಳಿ ಬಾರದ ಅಗಲಿಕೆ ಯ. ನೋವನ್ನು ಮನೋಜ್ಞ ವಾಗೀ. ಚಿತ್ರಿಸಿದ್ದೀರಿ. ಗಜಲ್ ಓದುತ್ತಿದ್ದರೆ ನನ್ನ ತಾಯಿ ಯ ನೆನಪು ಮರುಕಳಿಸಿತು .ಅಭಿನಂದನೆಗಳು

  4. ಅನಸೂಯ ಜಹಗೀರದಾರ

    ಚೆನ್ನಾಗಿದೆ ಭಾವಪೂರ್ಣ.. ಅರುಣಾ..!! ಕಣ್ಣು ಹನಿಗೂಡಿದವು..

Leave a Reply

You cannot copy content of this page

Scroll to Top