ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಂದು ಸೇರಿಬಿಡು ಒಲವೇ

The 12 Most Romantic Lovers Depicted In Art

ಅದೇಕೆ ಬೆನ್ನು ಮಾಡಿ ನಿಂತೆ
ನನ್ನ- ನಿನ್ನ ಒಲವಿಗೆ

ನೀ ತಿರುಗಿ ಹೋದ ಕ್ಷಣ
ನಗು ನಿಂತು ಅಳಲಾರಂಭಿಸಿತು

ಬದುಕ ಸೂರ್ಯನಿಗೆ
ಗ್ರಹಣದ ಕರಿನೆರಳು ಚಾಚಿತು

ನದಿಗಳು ಹಿಮ್ಮುಖವಾಗಿ ಓಡಿ
ಸಾಗರದಿಂದ ದೂರಾದವು

ನೆನಪುಗಳು ದುಃಖದ ಕಡಲಲ್ಲಿ
ಕಣ್ಣೀರ ಮಳೆ ಸುರಿಸಿದವು

ಅದೇಕೆ ಮರೆಯಲಿ ನಿಂತು
ಮೌನವಾಗಿ ನೋಡುತಿರುವೆ

ಒಲವಿಗೆ ವಿರಹದ ಜ್ವಾಲೆ
ಹೊತ್ತಿಕೊಳ್ಳುವ ಮುನ್ನ

ಹೃದಯ ಕತ್ತಲಾಗುವ ಮುನ್ನ
ಉಸಿರು ಮಸಣ ಸೇರುವ ಮುನ್ನ

ಬಂದು ಸೇರಿಬಿಡು ಒಲವೇ….


ಲಕ್ಷ್ಮಿ ಕೆ ಬಿ

About The Author

Leave a Reply

You cannot copy content of this page

Scroll to Top