ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಪ್ರಿಪೇಟೈ

ಶ್ರೀನಿವಾಸ ಜಾಲವಾದಿ

ಇದೊಂದು ಸಾಮಾಜಿಕ ಪಿಡುಗು
ಭಯಂಕರ ವೈರಸ್ ಓಮಿಕ್ರಾನ್
ತನ್ನ ತಮಟೆ ಬಾಜಾ ಭಜಂತ್ರಿ
ಬಾರಿಸಿದ್ದೇ ಬಾರಿಸಿದ್ದು!

ಯಾರೆನೆಂದರೂ ಹಲ್ಕಿಸಿವ
ಉಗುಳಿದರೂ ಮೊಗದ
ಪೌಡರ್ ಅಳಿಸಿ ಹೋಗದಂತೆ
ಒರೆಸಿಕೊಳ್ಳುವ ಊಸರವಳ್ಳಿ !

ತನ್ನದೇ ಹೊಗಳಿಕೆಯ ಸದಾ
ಬಯಸಿ ಬಯಸಿ ಉಸಿರುವ
ಅರವಳಿಕೆಯ ಸದಾ ಮೆದುಳಿಗೆ
ಅಳವಡಿಸಿರುವ ಪಿಂಡಾಂಡಣು!

ಏನು ಹೇಳಲಿ ನಿನ್ನ ಬಳಿ ನಾ ಬಂದು
ಕೇಳು ಜನಮೇ ಜಯ ನೋಡು ನೀ
ಇದು ಸತ್ತವರ ನೆರಳಿನ ಛಾಯೆ
ಸಂಬಂಜಾ ದೊಡ್ಡದು ಕಣೋ!

ಆ ಊರು ಈ ಊರಿನ ಜಡಭರತ
ಅಮಾಸೆಯ ಒಡಲಾಳದ ಸಾಕವ್ವ
ಪರ್ವವೆಂಬೋ ಮಹಾಭಾರತದ
ಭೈರಪ್ಪ ಅನಂತನ ಸಂಸ್ಕಾರ!

ಎಲ್ಲ ಎಲ್ಲ ಸೇರಿ ಮಿಸ್ಸಳ ಭಾಜಿ
ಬಂತು ಬಂತದೋ ಬಂತು ಅದೆಲ್ಲಿ
ಬಂತು ಅದು ಇದ್ದಲ್ಲೇ ಇತ್ತು
ಬಕಬಾರಲೇ ಬಿತ್ತು ಕಲಬೆರಕೆ ಕಸ !

ಎಲ್ಲರಿಗೂ ಸಲಾಮು ಹೇಳುವೆ ನಾ
ತಲೆ ಬಾಗಿ ಕ್ರಿಸ್ತನ ಮುಂದೆ ಕೃಷ್ಣನ
ಮೊಂಬತ್ತಿ ಹಚ್ಚಿ ಧೂಪಾರತಿ ಬೆಳಗಿ
ನಿಲಾಂಜನದ ಕಾಂತಿಯ ಸೊಬಗೇ !


About The Author

1 thought on “ಪ್ರಪ್ರಿಪೇಟೈ”

  1. ತುಂಬಾ ಚೆನ್ನಾಗಿದೆ. ಶೀರ್ಷಿಕೆಯ ಅರ್ಥ ಹೊಳೆಯಲಿಲ್ಲ?

Leave a Reply

You cannot copy content of this page

Scroll to Top