ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಕೆಲವೊಂದು ಸರಳ ವ್ಯಕ್ತಿತ್ವಗಳೇ ಹೀಗೆ ಉಳಿಯುವುದು ಸದಾ ಹಸಿರು
ಆದರಿಸುವಂತ ಹೃದಯಗಳೇ ಹೀಗೆ ಉಳಿಯುವುದು ಸದಾ ಹಸಿರು !

ಸರಿ ಹೊಂದುವವರು ಯಾರೂ ಇಲ್ಲ ಜಗದ ಈ ಜಂಜಾಟದೊಳು ತಿಳಿ
ಎಣಿಕೆಗೆ ಘಟಿಸುವ ಭಾವಗಳೇ ಹೀಗೆ ಉಳಿಯುವುದು ಸದಾ ಹಸಿರು !

ನ್ಯಾಯದ ತಕ್ಕಡಿಯಲ್ಲಿ ತೂಗಿದರೆ ಏನಂತೆ ಸಮವಾಗದು ಎಂದಿಗೂ
ಆದರೂ ಕೆಲವರ ಗುಣಗಳೇ ಹೀಗೆ ಉಳಿಯುವುದು ಸದಾ ಹಸಿರು !

ಬಚ್ಚಿಟ್ಟ ಬಯಕೆಗಳ ಅರುಹದೇ ಇದ್ದರೂ ಚಿಂತೆ ಇಲ್ಲ ಎನಗೆ ಸಮ್ಮತವು
ಅರ್ಥೈಸಿಕೊಳ್ಳುವ ಮನಸ್ಸುಗಳೇ ಹೀಗೆ ಉಳಿಯುವುದು ಸದಾ ಹಸಿರು !

ನಂಬಿದರೂ ನಂಬುಗೆಯನು ಕೈಬಿಡುವವರೇ ಅಧಿಕ ಕೇಳು ‘ನಯನ’
ವಿರಳವಾದರೂ ಸದ್ಗುಣಗಳೇ ಹೀಗೆ ಉಳಿಯುವುದು ಸದಾ ಹಸಿರು !!


ನಯನ. ಜಿ. ಎಸ್

About The Author

1 thought on “ಗಜಲ್”

  1. ಚೆನ್ನಾಗಿದೆ ನಯನ…ಹೀಗೆ ಬರೀತಾ ಇರು..ಒಳ್ಳೆಯದಾಗಲಿ

Leave a Reply

You cannot copy content of this page

Scroll to Top