ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಕಹಿ ಹಾಡು

ಆಕರ : ಮಹಾ ಪ್ರಸ್ಥಾನಂ (ಕವನ ಸಂಕಲನ)


ತೆಲುಗು ಮೂಲ : ಶ್ರೀ ಶ್ರೀ


ಕನ್ನಡಕ್ಕೆ : ಧನಪಾಲ ನಾಗರಾಜಪ್ಪ

Abstract Art Definition & Examples 101

ಹೌದು ನಿಜ ಹೌದು ನಿಜ
ಹೌದು ನೀ ಹೇಳಿದ್ದು
ನೀ ಹೇಳಿದ್ದು ನೀ ಹೇಳಿದ್ದು
ನೀ ಹೇಳಿದ್ದು ನಿಜ ನಿಜ!

ಇಲ್ಲ ಸುಖ ಇಲ್ಲ ಸುಖ
ಇಲ್ಲ ಸುಖ ಜಗದಲ್ಲಿ
ಬದುಕು ವೃಥಾ ವಿದ್ಯೆ ವೃಥಾ
ಕವಿತೆ ವೃಥಾ! ವೃಥಾ ವೃಥಾ!

ನಾವೆಲ್ಲಾ ತೊತ್ತುಗಳು
ಗಾಣದ ಎತ್ತುಗಳು, ಹೆಣಗಳು
ಹಿಂದೆ ಮೋಸ ಮುಂದೆ ಮೋಸ
ಎಡ ಬಲಗಳಲ್ಲಿ ಮೋಸ!

ನಮ್ಮದೂ ಒಂದು ಬದುಕೇನಾ?
ನಾಯಿಗಳಂತೆ ನರಿಗಳಂತೆ!
ನಮ್ಮದೂ ಒಂದು ಬದುಕೇನಾ?
ಸಂದಿಗಳಲ್ಲಿ ಹಂದಿಗಳಂತೆ!

ನಗ್ನ ಸತ್ಯ‌ ನಗ್ನ ಸತ್ಯ
ನಗ್ನ ಸತ್ಯ ನಗ್ನ ಸತ್ಯ
ಬದುಕು ಛಾಯೆ, ವಿದ್ಯೆ ಮಾಯೆ
ಕವಿತೆ ಒಂದು ಔಷಧ ನಗ್ನ ಸತ್ಯ!

ಇಲ್ಲ ಸುಖ ಇಲ್ಲ ರಸ
ಕಹಿ ವಿಷ ಜೀವಫಲ!
ಜೀವಫಲ ಕಹಿ ವಿಷ
ಕಹಿ ವಿಷ ಕಹಿ ವಿಷ!

ಹೌದು ನಿಜ, ಹೌದು ನಗ್ಯ ಸತ್ಯ
ಹೌದು ಕರೆ ನೀ ಹೇಳಿದ್ದು!
ನೀ ಹೇಳಿದ್ದು, ನೀ ಹೇಳಿದ್ದು
ನೀ ಹೇಳಿದ್ದು ನಿಜ ನಿಜ!


About The Author

1 thought on “ಕಹಿ ಹಾಡು”

Leave a Reply

You cannot copy content of this page

Scroll to Top