ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೀಗೆ ರಸ್ತೆಯಲ್ಲಿ

Rose Petals Pictures [HQ] | Download Free Images on Unsplash

ಭಾವಗಳು
ಮನವ ತುಂಬುವ
ಪರಿಮಳದ
ಮಧುರ ಮಲ್ಲಿಗೆ
ಅಲ್ಲ ಖಂಡಿತ
ಅವು ಮಾರಾಟಕ್ಕೆ
ಹಾಗಂತ
ಹೀಗೆ ರಸ್ತೆಯಲ್ಲಿ
ಬಿದ್ದಿಲ್ಲ
ಅಲ್ಲ ಕವನ ಸಂಕಲನಗಳು
ತಿಪ್ಪೆಗುಂಡಿ ಕಸದ ತೊಟ್ಟೆ
ಬಿಡು ನಿನ್ನ ದ್ವೇಷ ಅಸೂಹೆ
ಕೋಪ ತಾಪ ಸಣ್ಣತನ
ನಿನ್ನ ಮನದ ಮನೆಯ
ಕಸವ ಕಿತ್ತೆಸೆ
ಸ್ವಚ್ಛಗೊಳಿಸು
ಅಂದದ ಚೆಂದದ
ಸುಂದರ ಹೃದಯ
ಆಗ ನಿನ್ನ ಕಾವ್ಯ ಕವನ
ಹವಳು ಪೋಣಿಸಿದ ಮುತ್ತಿನ ಹಾರವು.


ಡಾ ಶಶಿಕಾಂತ ಪಟ್ಟಣ ಪುಣೆ

About The Author

7 thoughts on “ಹೀಗೆ ರಸ್ತೆಯಲ್ಲಿ”

  1. ಡಾ.ನಿರ್ಮಲಾ ಬಟ್ಟಲ

    ನಿಜ… ಭಾವಗಳು ಮಧುರ ಮಲ್ಲಿಗೆ ಪರಿಮಳ
    ಸುಂದರ ಕವನ

  2. ಎಂತಹ ಸುಂದರ ಕವನ ನೈಜ ಭಾವಗಳ ಅನಾವರಣ

    ವಿದ್ಯಾ ಮಗದುಂ ಗೋಕಾಕ

  3. ನವ್ಯ ರಸ ಭಾವ ಸ್ನೇಹ ಸಂಬಂಧ ವೃದ್ಧಿಗಾಗಿ ಹಪ ಹಪಿಸುವ ಕ್ರಿಯಾಶೀಲ ಭಾವ ಕವಿ

    ಬಸವರಾಜ್ ವಾಲಿ ಮುಳಗುಂದ

Leave a Reply

You cannot copy content of this page

Scroll to Top