ಕಾವ್ಯ ಸಂಗಾತಿ
ನೆರಳು

ನನ್ನ ಪ್ರತೀ ಅಕ್ಷರಗಳ
ಒಲವಿಂದ ಪೊರೆವ
ಲೇಖನಿ
ನನ್ನ ಪ್ರತೀ ದಾರಿಯಲ್ಲಿ
ಜೊತೆ ನಡೆದ
ಹೆಜ್ಜೆಗುರುತು
ನಾನಿರುವಲ್ಲೇ
ನಿಂತು, ಕೂತು
ತೆವಳುವ ಕೂಸು
ಉಸಿರಿಗೆ ಉಸಿರಾಗಿ
ಮರಕ್ಕೆ ನೆರಳಾಗಿ
ಬಿಟ್ಟರೂ ಬಿಡದ ಸ್ನೇಹಿತ
ನನ್ನ ಮಾತು, ಮೌನ
ಎಲ್ಲೆಡೆಯಲ್ಲೂ
ನನ್ನ ಬೆನ್ನಿಗಂಟಿದವನು
ನನ್ನ ಸುಖ-ದುಃಖಗಳಲ್ಲಿ
ಸಾಂತ್ವನ ನೀಡುವ
ಸಹೃದಯಿ
ಬದುಕಿಗಷ್ಟೇ ಅಲ್ಲ
ಮಣ್ಣ ಒಳಗೂ
ಒಡನಾಡಿಯಾಗುವ ಬಂಧು
ಒಲವು




