ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸ್ನೇಹ”

ಕಾವ್ಯ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸ್ನೇಹ” ಸ್ನೇಹ ಜೊತೆಯ ಹೆಜ್ಜೆಯಷ್ಟೇಯಲ್ಲ,ಜೊತೆಯಿಲ್ಲದ ಕ್ಷಣದಲೂ ಜೊತೆಗಿರುವ ಭಾವ;ಮೌನದ ತುಟಿಯಂಚಲಿ ಮಾತು ಅರಳಿಮನದ ಮಿಡಿತವನು ಓದುವ ಜೀವ. ಇದು ಕೈಹಿಡಿದ ನೆರಳಷ್ಟೇ ಅಲ್ಲಾ,ಕತ್ತಲ ಹಾದಿಯ ಹಣತೆಯ ಬೆಳಕು;ಬಿದ್ದ ಮೇಲೆ ಎತ್ತುವ ಕೈಯೆತ್ತದದುಜಾರುವ ಮುನ್ನವೇ ಚಾಚುವ ಅಭಯ ಹಸ್ತ. ಕಾಲದೊಳಗೆ ಬತ್ತಿದ ಹೊಳೆಯ ದಡದಂತೆ,ಮನದ ನದಿಯ ಒರತೆ ಬತ್ತದಿರೆ ನೈಜದಿಕ್ಕುಗಳೇ ಹೊರಳಿ ಸರಿದರೂ ದೂರಸದಾ ಜೀವಂತ ನೆನಪಿನ ರಹದಾರಿ ನಗುವಿನ ಹೊತ್ತಿಗೆ ನೆರಳುಗಳು ನೂರು,ಕಣ್ಣೀರ ಹೊತ್ತಿಗೆ ಕರೆವ ಎದೆಯದನಿಜಗವೇ ಬೆನ್ನು ತಿರುಗಿದ ಹೊತ್ತಲೂ“ನಾನಿದ್ದೇನೆ ಎನುವೊಂದು ಅಭಯ. ಇದು ಬಂಧನವಿಲ್ಲ, ಬೆಸೆಯುವ ನಂಟು,ಸ್ವಾರ್ಥದ ನೆರಳಿಲ್ಲ, ಹೃದಯದ ಹಂಚಿಕೆ;ಪಡೆದಷ್ಟಕ್ಕಿಂತ ಕೊಟ್ಟಾಗಲೇ ಪಾವನ—ಜೀವದ ದಾರಿಯಲಿ ಅದೊಂದು ಬೆಳಕು. ಜೀವಪರರಲಿನ ಜೀವ ಸೆಳೆತವೂಮಹಾಮೌಲ್ಯದ ಮಾಣಿಕ್ಯವೂ ಸ್ನೇಹನಿಂತರೂ ಉಸಿರು ನೆನಪಾಗಿ ಮಿಡಿಯುವ,ಜೀವದ ಪುಟದಲಿ ಅಳಿಯದ ಅಕ್ಷರ ಸ್ಹ – ವನಜಾಕ್ಷಿ ಬೆಟ್ಟದಾಲೂರು

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸ್ನೇಹ” Read Post »

ಕಾವ್ಯಯಾನ

ಅನನ್ಯ ಎಚ್ ಸುಬ್ರಹ್ಮಣ್ಯ ಅವರ ಕವಿತೆ “ಕಾಣದ ನೆರಳು”

ಕಾವ್ಯ ಸಂಗಾತಿ ಅನನ್ಯ ಎಚ್ ಸುಬ್ರಹ್ಮಣ್ಯ “ಕಾಣದ ನೆರಳು” ಕಣ್ಣಿಗೆ ಕಾಣದ ಸತ್ಯದ ಹಿಂದೆ,ಬೆನ್ನೇರಿ ಬರುವ ಅಗೋಚರ ಚಂದ;ರೂಪವಿಲ್ಲದ ರೂಪಿಗೆ ನಾವಿಲ್ಲಿ ಮಣಿದಿದ್ದೇವೆ,ಇಲ್ಲದ ಅಸ್ತಿತ್ವವ ಜೀವದೊಳಗೆ ತಂದಿದ್ದೇವೆ. ಮುಟ್ಟಲಾಗದ ಆಕಾಶವ ಸ್ಪರ್ಶಿಸಲು ಕೈಚಾಚಿ,ಕತ್ತಲೆಯಲಿ ಕಣ್ಣುಗಳನ್ನು ಬಿಟ್ಟು ಪರಿತಪಿಸಿ;ನಂಬಿಕೆಯೆಂಬ ಕಗ್ಗತ್ತಲ ದಾರಿಯಲಿ ಸಾಗುತ,ಕಾಣದ ದೇವರ ನೆರಳನೆ ಮೈತುಂಬಾ ಹೊತ್ತು ಗಾಳಿಯಂತೆ ಆತ, ಇರುವುದೆಲ್ಲದರಲಿ ವ್ಯಾಪಿಸಿ,ಆದರೆ ಯಾರ ಕಣ್ಣಿಗೂ ಎಂದೂ ಕಾಣದೆ ಮುಚ್ಚಿ;ಸುಂಟರಗಾಳಿಯಲಿ ಸಿಲುಕಿದ ಒಂಟಿ ಮರ ದೇವನೆ?ಅಥವಾ ನಮ್ಮೊಳಗಿನ ಅಂಜಿಕೆಯೆ ಆತನ ನಾಮವೆ? ಸಂಕಟದ ಕಡಲು ಉಕ್ಕಿ ಬಂದಾಗ ಈ ಬದುಕಿನಲಿ,ಯಾರೂ ಇಲ್ಲದ ಏಕಾಂತದ ಆ ಕತ್ತಲು ಗೂಡಿನಲಿ;ಮನಸ್ಸು  ಕೈಮುಗಿದು ಬೇಡುವುದು ಯಾರಿಗೆ?ಕಾಣದೆಯೇ ಆ  ಸ್ಪರ್ಶವಿರುವುದೇಕೆ ಒಳಗೆ? ಕಣ್ಣಿಗೆ ಕಾಣದ್ದೇ ಇಲ್ಲಿ ದೊಡ್ಡ ಸತ್ಯವಾಗಿಹುದು,ಉಸಿರು ಕಣ್ಣಿಗೆ ಕಾಣದು, ಆದರೂ ಜೀವವಿಹುದು; ದೇವರು; ಕಾಣದಿದ್ದರೇನು, ನಂಬಿಕೆಯ ಕಣ್ಣಲಿ,ಅವನಿಲ್ಲದ ಕ್ಷಣವಿಲ್ಲ ಈ ಜಗತ್ತಿನ ಹಾದಿಯಲಿ. ಕಾಣದ ದೇವರ ನೆರಳೂ ಇಲ್ಲದ ಕತ್ತಲೆಯ ಕಡಲಲಿ,ಬೆಳಕಿಗಾಗಿ ಹಂಬಲಿಸಿ ಕರಗಿತು ಮನುಜನ ನೆರಳು;ಕೊನೆಗೆ ಉಳಿದದ್ದು ದೇವರು ನಂಬಿಕೆಯೂ ಅಲ್ಲಬ್ರಹ್ಮಾಂಡದ ಅಂತಿಮ ಶೂನ್ಯದೊಂದಿಗೆ ನಮ್ಮದೇ ಕರಗಿಹೋದ ಪ್ರಜ್ಞೆ ಮಾತ್ರ ಉಳಿಯಿತು. ಅನನ್ಯ ಎಚ್ ಸುಬ್ರಹ್ಮಣ್ಯ

ಅನನ್ಯ ಎಚ್ ಸುಬ್ರಹ್ಮಣ್ಯ ಅವರ ಕವಿತೆ “ಕಾಣದ ನೆರಳು” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ “ಸ್ವರಚಿತ ವಚನಗಳು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಸ್ವರಚಿತ ವಚನಗಳು”             1ಇದ್ದಾಗ ಮೆರಿಬ್ಯಾಡಬಿದ್ದಾಗ ಅಳಬ್ಯಾಡಸದ್ದು ಗದ್ದಲದೊಳಗಇರಬ್ಯಾಡ ಮರುಳೆಬುದ್ಧ ಬಸವರ ನೆನೆ ನೀನುಗೆದ್ದಲಕೆ ಮುದ್ದಿಯಾಗ ಬ್ಯಾಡಎದ್ದು ಹೋಗಾಗಶರಣರ ಸಂಗದಲ್ಲಿರು ಎಂದಬಸವ ಪ್ರಿಯ ಶಶಿಕಾಂತ                2ಹಾಸಿ ದುಡಿಯಲು ಬೇಕುಹಂಚಿ ತಿನ್ನಲು ಬೇಕುಬಡವ ಬಲ್ಲಿದರಿಗೆ ನೀನುಬೆಲ್ಲವಾಗಲು ಬೇಕುಇದ್ದಾಗ ಕರೆದು ದಾಸೋಹ ಮಾಡಿಅಪ್ಪ ಬಸವನ ನಿತ್ಯನೆನೆಯ ಬೇಕೆಂದ ನಮ್ಮಬಸವ ಪ್ರಿಯ ಶಶಿಕಾಂತ               3ಬಸವ ಬಸವಾ ಎಂದೆನ್ನುತ್ತಾದೊಡ್ಡವರಾದರಯ್ಯ ಸ್ವಾಮಿಗಳುಬಸವ ಬಸವಾ ಎಂದೆನ್ನುತ್ತಾಅಧಿಕಾರ ಹಿಡಿದು ಕೊಂಡರಯ್ಯ ರಾಜಕಾರಣಿಗಳುಬಸವ ಬಸವಾ ಎಂದೆನ್ನುತ್ತಾಪ್ರಶಸ್ತಿ ಪಡೆದರಯ್ಯಾ ಸಾಹಿತಿ ಸಂಶೋಧಕರು.ಬಸವ ಬಸವಾ ಎಂದೆನ್ನುತ್ತಾಬಸವಣ್ಣನವರನ್ನು ಸಾಂಸ್ಕೃತಿಕ ನಾಯಕಎಂದು ಘೋಷಿಸಿದರಯ್ಯ ಮಂತ್ರಿಗಳುಬಸವನ ನಾಡಿನಲ್ಲಿ ಬಸವ ಧರ್ಮಕ್ಕೆ ಅಸ್ಮಿತೆ ಇಲ್ಲದಿರುವುದು ಕಂಡುಮಮ್ಮಲ ಮರುಗಿದೇನಯ್ಯಾ ಬಸವ ಪ್ರಿಯ ಶಶಿಕಾಂತ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ “ಸ್ವರಚಿತ ವಚನಗಳು” Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ ಅವರ ಕವಿತೆ “ಖಾಲಿಯಾಗುವ ಭಯ..”

 ಕಾವ್ಯ ಸಂಗಾತಿ  ಗಂಗಾ ಚಕ್ರಸಾಲಿ     ಖಾಲಿಯಾಗುವ ಭಯ… ನಿನ್ನ ಮಾತಿನ ಓಲಗದಲಿಅದೆಷ್ಟು ಬಾರಿ ಬಾರಿಸಿದ್ದೆಅವು ಕಿವಿತಮಟೆ ಬಡಿದವೆ ಹೊರತುಎದೆಗಾನಿಸಿಕೊಳ್ಳಲಿಲ್ಲ ನಾನುರೊಚ್ಚಿಗೆದ್ದು ದಿನವೂ ಸುರಿವಮಳೆಯನ್ನು,ಆನಂದಿಸಲಾದೀತೆ…   ಜ್ವಾಲಾಮುಖಿಯ ಜ್ವಾಲೆನಿನ್ನ ಬಿಗಿದ ಮೊಗವ ತಬ್ಬಿರಲುನಗೆಮಲ್ಲಿಗೆಯಾಗಿ ನಾ ನಿಂತರೆ..ಸುಡದೇ ಹೋದೇನೇ…ಅದಕ್ಕೆಒಗ್ಗರಣೆಯ ಚಟಪಟ ಸದ್ದಲ್ಲಿನನ್ನ ನಾನೇ ಕಳೆದುಹೋಗುವೆ…   ರೊಚ್ಚಿ ಸುರಿವ ಮಳೆಜ್ವಾಲಾಮುಖಿಯ ಜ್ವಾಲೆಪ್ರಕೃತಿಯಲ್ಲಿ ಒಮ್ಮೊಮ್ಮೆ ಮಾತ್ರ..ಆದರೆ  ಅನುದಿನ  ಕಿಡಿಗಳನ್ನುತೂರಿಬಿಡುವ ನಿನ್ನಂತೆ…ನಾನಾಗಬೇಕೆಂದರೆ..ಎನ್ನೊಳಗಿನ ಸಿಹಿತನ ಖಾಲಿಯಾಗುವಭಯವಿದೆ ಅಷ್ಟೇ…. ಗಂಗಾ ಚಕ್ರಸಾಲಿ, ಬೆಳಗಾವಿ    

ಗಂಗಾ ಚಕ್ರಸಾಲಿ ಅವರ ಕವಿತೆ “ಖಾಲಿಯಾಗುವ ಭಯ..” Read Post »

ಕಾವ್ಯಯಾನ

ಟಿ.ಪಿ.ಉಮೇಶ್ “ಲೋಕಕ್ಕೆ ಯಾವ ಸಂಕಟವಿಲ್ಲ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಲೋಕಕ್ಕೆ ಯಾವ ಸಂಕಟವಿಲ್ಲ” ಮಾತು ಭಾಷೆಯದ್ದಿರಲಿ ಮೌನದ್ದಿರಲಿಅಕ್ಷರ ಕಲಿಕೆಯದ್ದಿರಲಿಅನ್ನದ ದುಡಿಮೆಯದ್ದಿರಲಿನಾವು ಮೊದಲು ಹುಡುಕುವುದುಬದುಕಿನ ಅರ್ಥವನ್ನಲ್ಲ ಧರ್ಮ ಜಾತಿ ಕುಲ ಗೋತ್ರಗಳನ್ನು! ಮಗುವಿನ ಕೈಯಲ್ಲಿ ಪುಸ್ತಕಗಳಿದ್ದರೂಅದರ ಪುಟಗಳಲ್ಲಿಪಾಠಗಳು ಕಾಣುವುದಿಲ್ಲ ನಮಗೆ!ಯಾವ ಧರ್ಮದ ನೆರಳುಬಿದ್ದಿದೆ ಎಂದು ಹುಡುಕುತ್ತೇವೆ! ಮನೆಯ ಗೋಡೆ ಬಾಗಿಲಿಗೆ ಬಣ್ಣ ಬಳಿದರುಅದು ಸೌಂದರ್ಯವಲ್ಲ!ಯಾವ ಜಾತಿ ಧರ್ಮದ ಗುರುತಿನ ಬಣ್ಣವೆಂದುಕಣ್ಣಲ್ಲಿ ಅಳೆಯುತ್ತೇವೆ! ಒಬ್ಬನಲ್ಲಿ ಒಳ್ಳೆಯ ಕೆಲಸ ಮಾಡಿದರೆಮಾನವೀಯತೆ ಎಂದು ಹೇಳದೆಅವನು ಯಾರವನು? ಯಾರ ಕಡೆಯವನು?ಎಂದು ಮೊದಲು ಕೇಳುತ್ತೇವೆ!ಒಬ್ಬಳಿಲ್ಲಿ ತಪ್ಪು ಮಾಡಿದರೆತಪ್ಪು ಎಂದೆನ್ನದೆಅವಳು ಯಾವ ಊರಿನ ಸಮುದಾಯದವಳು?ಎಂದು ವಿಚಾರಣೆ ಆರಂಭಿಸುತ್ತೇವೆ! ಮರವನ್ನು ನೋಡಿದಾಗ ನೆರಳು ಕಾಣುವುದಿಲ್ಲ!ಅದು ಯಾವ ಯಾರ ದೇವರ ಮರಎಂದು ಹುಡುಕುತ್ತೇವೆ!ನದಿಯನ್ನು ನೋಡಿದಾಗ ನೀರು ಕಾಣುವುದಿಲ್ಲ!ಯಾವ ನಂಬಿಕೆಯ ಗಡಿಯೊಳಗೆಹರಿಯುತ್ತಿದೆ ಎಂದು ಇಣುಕುತ್ತೇವೆ!ಶಾಲೆ ನೋಡಿದಾಗ ಮಕ್ಕಳ ಭವಿಷ್ಯ ಕಾಣುವುದಿಲ್ಲ!ಯಾರ ಯಾರ ಮಕ್ಕಳಿದ್ದಾರೆಎಂದು ತಲೆನೋಡಿ ಎಣಿಸುತ್ತೇವೆ!ಸಂವಿಧಾನ ಓದಿದಾಗ ಸಮಾನತೆ ಕಾಣುವುದಿಲ್ಲ!ತನ್ನ ಪರವಾದ ಸಾಲುಎಲ್ಲಿದೆ ಎಷ್ಟಿದೆ  ಎಂದು ಹುಡುಕುತ್ತೇವೆ! ಧರ್ಮಗಳ ಜಾತಿಗಳ ಬಣ್ಣದ ಕನ್ನಡಕವನ್ನುಈಗಿಂದಲೇ ತೆಗೆದಿಡೋಣಮಗುವಿನಲ್ಲಿ ಮೊದಲು ಮಗು ಕಾಣಬಹುದು!ಮನುಷ್ಯನಲ್ಲಿ ಮೊದಲು ಮನುಷ್ಯತ್ವ ಕಾಣಬಹುದು!ಹಸಿವಿನಲ್ಲಿ ಮೊದಲು ಅನ್ನದ ಅಗತ್ಯ ಕಾಣಬಹುದು!ಕಣ್ಣೀರಿನಲ್ಲಿ ಮೊದಲು ನೋವು ಕಾಣಬಹುದು!ಮಾತಿನಲ್ಲಿ ಮೊದಲು ಅರ್ಥ ಕಾಣಬಹುದು!ಭಾಷೆಯಲ್ಲಿ ಮೊದಲು ಭಾವನೆ ಕಾಣಬಹುದು!ಕೆಲಸದಲ್ಲಿ ಮೊದಲು ಶ್ರಮ ಕಾಣಬಹುದು!ಪ್ರಕೃತಿಯಲ್ಲಿ ಮೊದಲು ಬದುಕು ಕಾಣಬಹುದು! ಧರ್ಮಕ್ಕೆ ಯಾವ ಸಂಕಟವಿಲ್ಲ!ಸಂಕಟದಲ್ಲಿರುವುದುಧರ್ಮದ ಹೆಸರಿನಲ್ಲಿ ಮನುಷ್ಯನನ್ನು ಮನುಷ್ಯನಿಂದಬೇರ್ಪಡಿಸುವ ನಮ್ಮ ದೃಷ್ಟಿಯಲ್ಲಿ! ಜಾತಿಗೆ ಯಾವ ಸಂಕಟವಿಲ್ಲ!ಸಂಕಟದಲ್ಲಿರುವುದುಜಾತಿಯ ಕನ್ನಡಕದೊಳಗೆ ಸಿಕ್ಕಿಹಾಕಿಕೊಂಡಿರುವನಮ್ಮ ಮೈಮನಸುಗಳಲ್ಲಿ! ಲೋಕಕ್ಕೆ ಯಾವ ಸಂಕಟವಿಲ್ಲ!ಸಂಕಟದಲ್ಲಿರುವುದುಮೇಲು ಕೀಳುಗಳಾಗಿ ಲೋಕವನ್ನು ನೋಡುವನಮ್ಮ ಕಣ್ಣುಳಲ್ಲಿ! ಮನುಷ್ಯನಿಗಿಂತ ಹಿರಿದಾದಯಾವ ಗುರುತು ಇಲ್ಲ!ಮನುಷ್ಯತ್ವಕ್ಕಿಂತ ಘನವಾದಯಾವ ಧರ್ಮವು ಇಲ್ಲ! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ “ಲೋಕಕ್ಕೆ ಯಾವ ಸಂಕಟವಿಲ್ಲ” Read Post »

ಕಾವ್ಯಯಾನ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಒಡೆದ ಕನ್ನಡಿಯ ಚೂರುಗಳು”

ಕಾವ್ಯ ಸಂಗಾತಿ ಡಾ. ಸುಮಂಗಲಾ ಅತ್ತಿಗೇರಿ “ಒಡೆದ ಕನ್ನಡಿಯ ಚೂರುಗಳು” ಒಡೆದ ಕನ್ನಡಿಯೊಳಗಿನ ಬಿಂಬಒಂದಲ್ಲ! ಎರಡಲ್ಲ !ಹತ್ತಾರು ಬಿಂಬಗಳ ಬಿತ್ತರಿಸುತ್ತವೆ! ಒಂದೊಂದು ಬಿಂಬದಲ್ಲಿಒಂದೊಂದು ಮುಖಅದೆಷ್ಟು ಮುಖಗಳು!ಅಲ್ಲ ಅಲ್ಲ ಮುಖವಾಡಗಳು!ಸಹಜವಲ್ಲದ ಅಸಹಜ ಮುಖಗಳು!ಆ ಎಲ್ಲ ಬಿಂಬಗಳಲ್ಲಿಮನದ ಬಿರುಕಿನ ಅನಾವರಣ! ಹೋದರೆ ಹೋಗಲೆಂದುಹೊಸದು ಕನ್ನಡಿ ಕೊಟ್ಟರೆಬೇಕೆಂದೆ ಮತ್ತೆ ಮತ್ತೆ ಒಡೆಯಲೆತ್ನಿಸಿದರೆಮತ್ತೆ ಒಂದಾಗಿಸುವುದಾದರೂ ಹೇಗೆ? ಸೋಜಿಗವೆಂದರೆ;ಅವರ ಮನದ ಕನ್ನಡಿಒಡೆದು ಹೋಳಾಗಿವೆ ಆಗಲೆಅಲ್ಲಿ ಯಾವ ಬಿಂಬ ಪ್ರತಿಬಿಂಬಗಳುಇಡಿಯಾಗಿ ಕಾಣುವುದೇ ಇಲ್ಲ! ಒಡೆದ ಕನ್ನಡಿ ಒಳಗಿನ ಚಿತ್ರಗಳುಚಿತ್ರ ವಿಚಿತ್ರ! ಒಮ್ಮೆ ಹೋಳಾದ ಮೇಲೆಮತ್ತೆ ಬೆಸೆಯಲಾದೀತೆಮನದ ಕನ್ನಡಿಯನ್ನ? ಎಷ್ಟು ತೇಪೆ ಹಾಕಿದರೂ ಅಷ್ಟೆನೈಜತೆಯ ಬಿಡದುಆ ಒಡೆದ ಚೂರುಗಳ ಸ್ಪರ್ಶಇರಿದು ನೋಯಿಸುವುದೇ! ಎಲ್ಲಿ ಎಸೆದರೂ ಅಷ್ಟೆಅಪಾಯ ಕಟ್ಟಿಟ್ಟ ಬುತ್ತಿತಿಪ್ಪೆಗೆ ಎಸೆಯಲೂ ಭಯವೆ!ಗೊಬ್ಬರ ಹೇರುವವರಿಗೆ,ಹೊಲ ಊಳುವವರಿಗೆ,ನಟ್ಟರೆ? ಇರಿದರೆ? ಚುಚ್ಚಿದರೆ?ಗಾಯಗೊಳಿಸಿದರೆ? ರಕ್ತ ಹರಿಸಿದರೆ? ಒಡೆದ ಕನ್ನಡಿಯ ಚೂರುಗಳುಎಲ್ಲಿದ್ದರೂ, ಎಂದಿದ್ದರೂಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ!  ಡಾ. ಸುಮಂಗಲಾ ಅತ್ತಿಗೇರಿ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಒಡೆದ ಕನ್ನಡಿಯ ಚೂರುಗಳು” Read Post »

ಕಾವ್ಯಯಾನ, ಗಝಲ್

ಡಾ.ಅನ್ನಪೂರ್ಣ ಹಿರೇಮಠ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ಅನ್ನಪೂರ್ಣ ಹಿರೇಮಠ್‌ ಗಜಲ್ ಜಗದ ಎಲ್ಲ ಸುಖವು ಸಿಗುವುದೆಂದು ಬೆರಗಾಗಿದ್ದೆಬಯಸಿದ ಒಲವು ದೊರಕುವುದೆಂದು ಬೆರಗಾಗಿದ್ದೆ ಏನಿಲ್ಲ ಏನುಂಟೆಂಬ ಕುತೂಹಲ ಬಿಡದೆ ಕಾಡಿತ್ತುಅಪ್ರತಿಮ ಗೆಳೆಯನೇ ದಕ್ಕುವನೆಂದು ಬೆರಗಾಗಿದ್ದೆ ಹಾತೊರೆವ ಭಾವ ಬಿತ್ತಿಯ ತುಂಬೆಲ್ಲ ಕನಸುಗಳುಸ್ವರ್ಗ ಸಿರಿಯ ಪಲ್ಲಕ್ಕಿ ಏರುವೆನೆಂದು ಬೆರಗಾಗಿದ್ದೆ ಅರಿಯದಾಸೆಗಳು ಉಬ್ಬಿ ಉಬ್ಬಿ ತಾರಕಕೇರಿದ್ದವುಗರಿಗೆದರಿದಂಬಲ ಹಸಿರಾಗುವುದೆಂದು ಬೆರಗಾಗಿದ್ದೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಪ್ರೇಮ ಪರವಶದಲ್ಲಿತ್ತುಅನುಳಿಗೆ ಪ್ರೀತಿಯ ಧಾರೆ ಎರೆವನೆಂದು ಬೆರಗಾಗಿದ್ದೆಡಾ ಅನ್ನಪೂರ್ಣ ಹಿರೇಮಠ

ಡಾ.ಅನ್ನಪೂರ್ಣ ಹಿರೇಮಠ್‌ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿ ಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿ ಮಠ ಗಜಲ್ ನಿನ್ನನು ಈ ಕಂಗಳು ಮರೆಯುವ ಮುನ್ನ  ಬಂದು ಬಿಡುಕನಸುಗಳು ರೆಪ್ಪೆಯನು ತೊರೆಯುವ ಮುನ್ನ  ಬಂದು ಬಿಡು ಅದೆಷ್ಟೋ ದಿನಗಳಿಂದ ,ನಿನ್ನ ನೆನಪುಗಳನೇ ಉಸಿರಾಡುತಿರುವೆಎದೆಬಡಿತ ಈ ಎದೆಯನೇ ಕೊರೆಯುವ ಮುನ್ನ ಬಂದು ಬಿಡು ಹಗಲು ಹಗುರಾಗುತ್ತಿಲ್ಲ, ಇರುಳು ಮಗ್ಗಲು ಬದಲಿಸುತಿಲ್ಲಹಗಲಿರುಳುಗಳ ನೋವು  ಪೊರೆಯುವ ಮುನ್ನ ಬಂದು ಬಿಡು ನೀ ಬಿಟ್ಟು ಹೋದಲ್ಲಿಯೇ ನಿಂತಿರುವೆ ಇಂದಿಗೂ ನಲ್ಲಆ ಜಾಗವೂ ನಿನ್ನ ಸ್ಪರ್ಶಕಾಗಿ ಮೊರೆಯುವ ಮುನ್ನ ಬಂದು ಬಿಡು ಕನವರಿಸುತ ಕಾಯುತಿಹಳು ‘ವಾಣಿ ‘  ಕಣ್ತುಂಬಿಕೊಂಡು ದಿನವೂಬಿಸಿ ಹನಿಗಳ ಕಡಲು ಬದುಕು ಹೊರೆಯುವ ಮುನ್ನ ಬಂದು ಬಿಡು ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿ ಮಠ ಅವರ ಗಜಲ್ Read Post »

ಕಾವ್ಯಯಾನ

ಕಾವೇರಿ ಪಾಟೀಲ ಶಹಾಪುರ “ಮತ್ತೆ ಭಾವ ಚಿಗುರಿತು”

ಕಾವ್ಯ ಸಂಗಾತಿ ಕಾವೇರಿ ಪಾಟೀಲ ಶಹಾಪುರ “ಮತ್ತೆ ಭಾವ ಚಿಗುರಿತು” ಬರಿದಾಗಿದ್ದ ಎದೆಯಬರಡು ಮರದಲ್ಲಿ,ಮೌನ ಆವರಿಸಿದರೆಂಬೆ ಕೊಂಬೆಯಲ್ಲಿ,ಹಳೆಯ ನೆನಪಿನಎಲೆಯು ಉದುರಿ,ಹೊಸದೊಂದು ಆಸೆಮೂಡಿತು ಚೈತ್ರ ಚೆಲುವು. ಬಾಗಿದ ಬಾಡಿದ ಹೂವಿನಒಣಗಿದ ಗಿಡಕೆ,ಒಲವಿನ ಹನಿಗಳುತಗುಲಿದ ತಕ್ಷಣ,ನಿದ್ದೆಗೆ ಜಾರಿದಕನಸುಗಳೆಲ್ಲ,ಕಣ್ಣಿನ ಅಂಚಲಿನರ್ತಿಸದ ಕ್ಷಣ. ಕೇಳದೆ ಬಂದಆ ಭಾವ ಕನ್ನಿಕೆ,ಹೇಳದೆ ಮೂಡಿಸಿದಪ್ರೀತಿಯ ಭಾವ,ಅಲೆಯಿಲ್ಲದ ಪ್ರಶಾಂತತುಂಬಿದ ಕಡಲಲಿ,ಎದ್ದಿದೆ ಈಗ ಹೊಸದೊಂದುತೀವ್ರ ಚಲನೆ. ತುಟಿಗಳ ಮೇಲೆಮೂಡಿದೆ ನಗುವು,ಮನಸಿನ ತುಂಬೆಲ್ಲಾಹಸಿರ ಸಿರಿಯು,ಕಾಲದ ಮರೆಯಲ್ಲಿಅಡಗಿದ್ದ ಒಲವು,ಮತ್ತೆ ಚಿಗುರಿ ಅರಳಿತು ಇಂದು!ಬರುವ ನಾಳೆ ನನ್ನದು ಕಾವೇರಿ ಪಾಟೀಲ ಶಹಾಪುರ

ಕಾವೇರಿ ಪಾಟೀಲ ಶಹಾಪುರ “ಮತ್ತೆ ಭಾವ ಚಿಗುರಿತು” Read Post »

ಕಾವ್ಯಯಾನ

ಪರಿಮಳ ಐವರ್ನಾಡು ಸುಳ್ಯ “ಕಾಡುತಿದೆ ಪ್ರಶ್ನೆಯೊಂದು”

ಕಾವ್ಯ ಸಂಗಾತಿ ಪರಿಮಳ ಐವರ್ನಾಡು ಸುಳ್ಯ “ಕಾಡುತಿದೆ ಪ್ರಶ್ನೆಯೊಂದು” ಕಾಡುತಿದೆ ಪ್ರಶ್ನೆಯೊಂದುಉಸಿರೇ ನಿನ್ನಲಿಪ್ರೀತಿ ಉಕ್ಕಿದರೂಉಸಿರೆತ್ತಲಿಲ್ಲವೇಕೆ ನನ್ನಲಿ ನೋಡುತ್ತಲೇ ಇದ್ದೆ ನಿನ್ನನುನಗುವಿನ ತೀರದಲಿಮುಳುಗಿತ್ತು ಪುಟ್ಟ ಹೃದಯನಿನ್ನ ಪ್ರೀತಿಯ ಆಳದಲಿ ಹೇಳದೆ ಉಳಿದ ಮಾತುಗಳುತುಟಿಯಂಚಲೇ ನಿಂತಿತ್ತುನೀ ಕೇಳುವೆಯಾ ಎಂದುಕನಸುಗಳು ಕಾದಿತ್ತು ಉಸಿರೇ ನನ್ನುಸಿರೇಬದುಕಿಗೆ ಅರ್ಥವಾಗಿದ್ದೆನಿನ್ನೊಂದು ನೋಟಕ್ಕಾಗಿನಾನೇ ಕವಿತೆಯಾದೆ ಹೃದಯ ತುಂಬಿದ ಪ್ರೀತಿಯನುಹುದುಗಿಸಿಟ್ಟೆಯಾ ನಿನ್ನೆದೆಯಲಿಹೇಳಬಾರದಿತ್ತೇ ಒಮ್ಮೆ ನನ್ನಲಿನಾನು ನಿನ್ನವನೇ ಎನ್ನುತಲಿ ಬಚ್ಚಿಟ್ಟ ಪ್ರೇಮಕೀಗ ಬೆಳ್ಳಿಹಬ್ಬವರುಷಗಳೇ ಸಂದರೂ ನೆನಪುಗಳ ಹಬ್ಬಭಿನ್ನ ಹಾದಿಯಲಿ ಜೀವನ ಯಾನಮರೆಯಲಾಗದ ಮೌನ ಗಾನ ಕಾಡುತಿದೆ ಪ್ರಶ್ನೆಯೊಂದುಉಸಿರೇ ನಿನ್ನಲಿಪ್ರೀತಿ ಉಕ್ಕಿದರೂಉಸಿರೆತ್ತಲಿಲ್ಲವೇಕೆ ನನ್ನಲಿ ಪರಿಮಳ ಐವರ್ನಾಡು ಸುಳ್ಯ

ಪರಿಮಳ ಐವರ್ನಾಡು ಸುಳ್ಯ “ಕಾಡುತಿದೆ ಪ್ರಶ್ನೆಯೊಂದು” Read Post »

You cannot copy content of this page

Scroll to Top